ಜಾನುವಾರುಗಳನ್ನೊಳಗೊಂಡ ಸುಸ್ಥಿರ ಕೃಷಿ ಪರಿಸರ ಮತ್ತು ಆರ್ಥಿಕತೆ


ಬಹುತೇಕ ಸಹಜ ಪರಿಸರ ಕ್ರಿಯೆಗಳು ಸುಸ್ಥಿರ ಫಲಿತಾಂಶವನ್ನೇ ನೀಡುತ್ತವೆ. ಸಹಳ ಚಟುವಟಿಕೆಗಳಾದ ಜಾನುವಾರು ಮತ್ತು ಕೃಷಿಯನ್ನು ಒಂದುಗೂಡಿಸುವುದರಿAದ ಎರಡಕ್ಕೂ ಲಾಭದಾಯಕ. ಉತ್ಪಾದನೆಯ ಹೆಚ್ಚಳ, ಕಡಿಮೆ ವೆಚ್ಚ, ಕುಟುಂಬ ಪೌಷ್ಟಿಕತೆ ಹಾಗೂ ಉತ್ತಮ ಕೃಷಿ ಪರಿಸರದಂತಹ ಲಾಭಗಳು ಹೆಚ್ಚುತ್ತವೆ.


ಅಭಿವೃದ್ಧಿಯ ಅನುಭವಗಳು ದುರ್ಬಲ ಸನ್ನಿವೇಶಗಳಲ್ಲಿ ಅಭಿವೃದ್ಧಿಯ ಹಾದಿಯು ಎಂದೂ ನೇರವಾಗಿರುವುದಿಲ್ಲ ಅವು ಬಡತನದೊಳಗಿಂದಲೇ ಹಲವು ಸಾಧ್ಯತೆಗಳ ಸುರುಳಿಯಂತೆ ಸುತ್ತಿಕೊಂಡಿರುತ್ತವೆ. ಸಣ್ಣಹಿಡುವಳಿದಾರರ ವ್ಯವಸ್ಥೆಯಲ್ಲಿ ಅವರು ಸೇವಿಸುವ ಆಹಾರ ಹಾಗೂ ಉತ್ಪಾದಿಸುವ ಗೊಬ್ಬರ ಅವರ ಪೌಷ್ಟಿಕತೆಯನ್ನು ಹೆಚ್ಚಿಸುವುದರೊಂದಿಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ವೇಗವರ್ಧಕಗಳಂತೆ ಕೆಲಸಮಾಡುತ್ತವೆ. ಬಡವರ ಮನೆಗಳಲ್ಲಿ ಜಾನುವಾರುಗಳೆಂದರೆ ಓಡಾಡುವ ಬ್ಯಾಂಕುಗಳ ಉಳಿತಾಯ ಖಾತೆಗಳಂತೆ ಇರುತ್ತವೆ. ಕಡಿಮೆ ನೀರಿರುವ ಹಾಗೂ ಬಂಜರು ಭೂಮಿಗಳಲ್ಲಿ ಜಾನುವಾರುಗಳ ಉತ್ಪಾದನೆಯು ನಿರ್ವಹಣೆ ಮತ್ತು ಬಳಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಪಶುಸಂಗೋಪನೆ ಎನ್ನುವ ಸಾಂಪ್ರದಾಯಿಕ ವಿಧಾನವು ಜನರ ಬದುಕಿಗೆ ಮುಖ್ಯ ಆಧಾರವಾಗುತ್ತದೆ. ಕೃಷಿ ಅದಕ್ಕೆ ಪೂರಕ ಪಾತ್ರವನ್ನು ನಿರ್ವಹಿಸುತ್ತದೆ.

ಜಾನುವಾರುಗಳಿಂದ ನಾನಾವಿಧದ ಪ್ರಯೋಜನಗಳಿದ್ದರೂ ಕೂಡ ಅದಕ್ಕೆ ಪ್ರಾಶಸ್ತö್ಯವನ್ನು ನೀಡಿರುವುದು ಕಡಿಮೆ. ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ಕೂಡ ಜಾನುವಾರು ಸಂಬAಧಿ ಚಟುವಟಿಕೆಗಳನ್ನು ಆದಾಯ ಉತ್ಪನ್ನ ಚಟುವಟಿಕೆಗಳು ಎಂದಷ್ಟೇ ಸೀಮಿತಗೊಳಿಸಲಾಗುತ್ತದೆ. ಈ ಕೆಳಗೆ ನೀಡಲಾಗಿರುವ ವಿಷಯವು ಜಾನುವಾರುಗಳ ಕುರಿತು ವ್ಯವಸ್ಥಿತ ಯೋಜನೆ ಹಾಗೂ ಸಮಗ್ರ ದೃಷ್ಟಿಕೋನದ ಅಗತ್ಯವನ್ನು ಎತ್ತಿತೋರುತ್ತದೆ. ಜಾನುವಾರು ಕೇಂದ್ರಿತ ಬೆಳೆ ಉತ್ಪಾದನೆ ಹಾಗೂ ಕೃಷಿ ಪರಿಸರ ಅಭಿವೃದ್ಧಿಗಳು ಜಾನವಾರುಗಳನ್ನು ಸಲಹಲು ಅಗತ್ಯ ಎನ್ನುವುದನ್ನು ತಿಳಿಸುತ್ತದೆ.

ಮೊದಲ ಹೆಜ್ಜೆಗಳು
ಸಿಂಗೊAಡೈ ಎನ್ನುವುದು ತರಂಗAಪ್ಪಾಡಿ ತಾಲ್ಲೂಕಿನ ತಿರುಕ್ಕಡೈಯೂರು ಭಾಗದ ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಸುಮಾರು ೬೦ ರೈತಾಪಿ ಕುಟುಂಬಗಳಿವೆ. ೨೦೦೪ರಲ್ಲಿ ಅಪ್ಪಳಿಸಿದ ಸುನಾಮಿಗೆ ಆ ಹಳ್ಳಿಯು ಸಿಕ್ಕಿ ತತ್ತರಿಸಿತ್ತು. ಕೃಷಿ ಭೂಮಿಗೆ ಉಪ್ಪುನೀರು ನುಗ್ಗಿದ ಪರಿಣಾಮವಾಗಿ ಮಣ್ಣಿನಲ್ಲಿ ಲವಣಾಂಶವು ಹೆಚ್ಚಿತು. ಆ ಸಮಯದಲ್ಲಿ ಕುಟುಂಬA ಎನ್ನುವ ಸ್ವಯಂಸೇವಾಸAಸ್ಥೆಯು ಬಡರೈತರೊಂದಿಗೆ ಸುಸ್ಥಿರವಾದ ಕೃಷಿಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿತ್ತು. ಆ ಸಂಸ್ಥೆಯು ರೈತರ ತೋಟದ ಶಾಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಯವ ಕೃಷಿಯ ಬಗ್ಗೆ ತಿಳಿಸಿಕೊಟ್ಟಿತು. ಈ ತರಬೇತಿಯಲ್ಲಿ ಭಾಗವಹಿಸುವುದರ ಮೂಲಕ ಕಲಿತದ್ದು ಮತ್ತು ಪದ್ಧತಿಗಳನ್ನು ಹಂಚಿಕೊAಡದ್ದು ಅವರು ಸಾವಯವ ಕೃಷಿ ಪದ್ಧತಿಗಳನ್ನು ಅಭ್ಯಾಸ ಮಾಡುವಂತೆ ಮಾಡಿತು. ರೈತರ ಗುಂಪೊAದು ಒಟ್ಟಾಗಿ ಸಾವಯವ ತರಕಾರಿ ಕೃಷಿಕರ ಗುಂಪನ್ನು ಮಾಡಿಕೊಂಡರು. ಸುಸ್ಥಿರವಾಗಿ ಸಾವಯವ ಕೃಷಿ ಪದ್ಧತಿಗಳನ್ನು ಉಳಿಸಲು ರೈತರಿಗೆ ಜಾನುವಾರುಗಳನ್ನು ಕೊಳ್ಳಲು ಸಾಲಸೌಲಭ್ಯ ಒದಗಿಸಲಾಯಿತು. ಇದರ ಮೂಲ ಉದ್ದೇಶ ಗೋಮೂತ್ರ ಹಾಗೂ ಸಗಣಿಯನ್ನು ಬಳಸಿ ಸಾವಯವ ಗೊಬ್ಬರ ತಯಾರಿಕೆ ಮತ್ತು ಹಾಲಿನ ಮಾರಾಟದಿಂದ ಪೂರಕ ಆದಾಯ ಗಳಿಕೆ.

ಜಾನುವಾರುಗಳಿಗೆ ಹೊಂದುವoತೆ ಪರಿಸರ ನಿರ್ವಹಣೆ

ಭಾಸ್ಕರನ್ ಸಿಂಗೊAಡೈನ ಯುವ ಉತ್ಸಾಹಿ ರೈತ. ಆತನ ಬಳಿ ಎರಡು ಎಕರೆ ಭೂಮಿಯಿದೆ. ಆತ ಒಂದೂವರೆ ಎಕರೆಯಲ್ಲಿ ಕಡಲೆಕಾಯಿಯನ್ನು ಬೆಳೆಯುತ್ತಾನೆ. ಉಳಿದ ಅರ್ಧ ಎಕರೆ ಮರಳುಮರಳಾಗಿದ್ದು ತರಕಾರಿ ಬೆಳೆಗೆ ಸೂಕ್ತವಾಗಿದೆ. ಅಲ್ಲಿ ಆತ ವಿವಿಧ ಬಗೆಯ ಕಾಯಿಪಲ್ಲೆಗಳನ್ನು ಬೆಳೆಯುತ್ತಾನೆ. ಆತ ಗುಂಪಿನಲ್ಲಿ ಜಾನುವಾರನ್ನೊಳಗೊಂಡAತೆ ಮಾಡುವ ಸಾವಯವ ತರಕಾರಿಕೃಷಿಯಲ್ಲಿ ಮುಂಚೂಣಿಯಲ್ಲಿದ್ದಾನೆ. ಯೋಜನೆಯ ನೆರವಿನಿಂದ ಆತ ೨೦೦೯ರಲ್ಲಿ ಅಂಬ್ಲಚರಿ ಎನ್ನುವ ಸ್ಥಳಿಯ ಹಸುವೊಂದನ್ನು ಕೊಂಡುತAದ. ಆತ ಸ್ಥಳಿಯ ತಳಿಯನ್ನೇ ಕೊಳ್ಳಲು ಬಯಸಿದ್ದ. ಅದಕ್ಕೆ ಮುಖ್ಯ ಕಾರಣವೆಂದರೆ ಇತರ ಮಿಶ್ರತಳಿಯ ಜಾನುವಾರುಗಳಿಗೆ ಹೋಲಿಸಿದಲ್ಲಿ ಸ್ಥಳೀಯ ತಳಿಯ ಜಾನುವಾರಗಳಿಗೆ ಸೋಂಕು ರೋಗಗಳು ಕಾಡುವುದಿಲ್ಲ. ಪ್ರಸ್ತುತ ಆತನ ಬಳಿ ಸ್ಥಳೀಯ ತಳಿಯ ಎರಡು ಹಸುಗಳು ಒಂದು ಕರು ಇದೆ.

ಭಾಸ್ಕರನ್ ಮತ್ತವನ ಕುಟುಂಬದ ಸದಸ್ಯರು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಅವರು ಅವುಗಳ ಆಹಾರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವುಗಳನ್ನು ಎಲ್ಲೆಂದರಲ್ಲಿ ಅಡ್ಡಾಡಲು ಬಿಡುವುದಿಲ್ಲ. ಭಾಸ್ಕರನ್ ಮತ್ತವನ ತಾಯಿ ಪ್ರತಿದಿನ ಪ್ರತಿಹಸುವಿಗೆ ಸುಮಾರು ೨೦ಕೆಜಿಯಷ್ಟು ಹಸಿರುಹುಲ್ಲನ್ನು ಸಂಗ್ರಹಿಸಿ ತರುತ್ತಾರೆ. ಇದರಲ್ಲಿ ಶೇ.೫೦%ರಷ್ಟು ಹುಲ್ಲನ್ನು ತಮ್ಮದೇ ಭೂಮಿಯಲ್ಲಿ ಸಂಗ್ರಹಿಸಿದರೆ ಉಳಿದವನ್ನು ಹುಲ್ಲುಗಾವಲಿಂದ ತರುತ್ತಾರೆ. ಹುಲ್ಲಿನ ಹೊರತಾಗಿ ಪ್ರತಿ ಪ್ರಾಣಿಗೆ ೨ಕೆಜಿ ಗೋಧಿ ಬೂಸಾ, ೧ ಕೆಜಿ ಕಡಲೆಕಾಯಿ ಹಿಂಡಿಯನ್ನು ಅಜೋಲ ಮತ್ತು ೧ ಕೆಜಿ ಅಕ್ಕಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ನೀಡುತ್ತಾರೆ. ಇದರೊಂದಿಗೆ ಕಡಲೆಕಾಯಿ ಕಟಾವಿನ ನಂತರ ಒಣಗಿದ ಕಡಲೆಕಾಯಿ ಗಿಡಗಳನ್ನು ತಮ್ಮ ಭೂಮಿಯಿಂದ ತೆಗೆದು ರಾಸುಗಳಿಗೆ ನೀಡುತ್ತಾರೆ. ಗೋಧಿ ಬೂಸಾ ಮತ್ತು ಅಕ್ಕಿ ಹಿಟ್ಟನ್ನು ಮಾತ್ರ ಹೊರಗಿನಿಂದ ಕೊಂಡುತರುತ್ತಾರೆ. ಉಳಿದೆಲ್ಲವನ್ನೂ ಇವರದೇ ಭೂಮಿಯಿಂದ ಪಡೆಯುತ್ತಾರೆ.

ಮಣ್ಣನ್ನು ಪವಿತ್ರ ಎನ್ನುತ್ತಾರೆ. ಜಾನುವಾರುಗಳು ಕೃಷಿಗೆ ನೆರವು ನೀಡುವ ಪ್ರಮುಖ ಘಟಕವೆಂದು ಪರಿಗಣಿಸಲಾಗುತ್ತದೆ.

ಅಂಬ್ಲಚರಿ ತಳಿ (ಬೊಸ್ ಇಂಡಿಕಸ್)
ತಮಿಳುನಾಡಿನ ಅಂಬ್ಲಾಚರಿ ತಳಿಯು ತನ್ನ ಸಾಮರ್ಥ್ಯ ಹಾಗೂ ದೃಢತೆಗಾಗಿ ಹೆಸರಾಇದು ದ ತಳಿ. ಕರಾವಳಿ ಜಿಲ್ಲೆಗಳಾದ ತಿರುವಾಯೂರು, ನಾಗಪಟ್ಟಣಂನ ಸ್ಥಳೀಯ ತಳಿ. ಸಣ್ಣ ನಿಲುವಿನ ಈ ತಳಿಯನ್ನು ಭತ್ತದ ಗದ್ದೆಗಳಲ್ಲಿ ಕೆಲಸಕ್ಕಾಗಿ ಬಳಸಲಾಗುತ್ತದೆ. ಈ ತಳಿಯ ಹೆಸರಿನ ಮೂಲ ಈ ತಳಿಯ ಮೂಲಸ್ಥಾನವಾದ ಅಂಬ್ಲಾಚರಿ ಹಳ್ಳಿ. ಈ ಹಳ್ಳಿ ತಮಿಳುನಾಡಿನ ನಾಗಪಟ್ಟಣಂನಲ್ಲಿದೆ.

ಸುಡುವ ಬಿಸಿಲಿನಲ್ಲೂ ಈ ಎತ್ತುಗಳು ೬ ರಿಂದ ೭ ಗಂಟೆಗಳ ಕಾಲ ಕೆಲಸಮಾಡಬಲ್ಲವು. ಈ ತಳಿಯ ಹಸುಗಳು ತಮ್ಮ ಜೀವಮಾನದಲ್ಲಿ ೧೦ ಬಾರಿ ವರ್ಷಕ್ಕೊಂದರAತೆ ಕರು ಹಾಕಬಲ್ಲವು. ಈ ತಳಿಯ ಹಾಲಿನಲ್ಲಿನ ಕೊಬ್ಬಿನಂಶದ ಪ್ರಮಾಣ ೪.೫% ಇಂದ ೫.೫%. ಬೇರೆ ಮಿಶ್ರತಳಿಯ ಹಸುಗಳ ಹಾಲಿಗೆ ಹೋಲಿಸಿದಲ್ಲಿ ಇದರ ಹಾಲು ಬಹಳ ರುಚಿಯಾಗಿರುತ್ತದೆ. ಅಂಬ್ಲಾಚರಿ ಹಸುಗಳಿಗೆ ಸೋಂಕುರೋಗನಿರೋಧಕ ಶಕ್ತಿ ಹೆಚ್ಚು. ಚರ್ಮವನ್ನು ಎಳೆದೆಳೆದು ಬಿಡುವುದರಿಂದ ಕೀಟಗಳು ನೊಣಗಳು ಮೈ ಮೇಲೆ ಕೂರದಂತೆ ತಡೆಯುತ್ತದೆ. ಇದು ಈ ತಳಿಗೆ ವಿಶಿಷ್ಟವಾದ ಗುಣ.

ತಮಿಳುನಾಡು ಸರ್ಕಾರವು ೧೯೫೪ರಲ್ಲಿ ಒರತನಾಡು, ತಂಜಾವೂರು ಜಿಲ್ಲೆಯಲ್ಲಿ ಈ ತಳಿಯನ್ನು ಅಭಿವೃದ್ಧಿ ಪಡಿಸಲೆಂದೇ ಫಾರ್ಮ್ ಸ್ಥಾಪಿಸಿದೆ. ನಂತರ ಈ ತಳಿಯ ತವರು ಪ್ರದೇಶ ಅಂಬ್ಲಾಚರಿ ಹಳ್ಳಿಗೆ ಹತ್ತಿರದಲ್ಲೇ  ಹೊಸ ಫಾರ್ಮ್ ಅಭಿವೃದ್ಧಿಪಡಿಸಿತು. ೨೦೦೪ರಲ್ಲಿ ತಮಿಳುನಾಡು ಜಾನುವಾರು ಅಭಿವೃದ್ಧಿ ಸಂಸ್ಥೆಯು ಈ ತಳಿಯನ್ನು ರಕ್ಷಿಸುವ ಸಲುವಾಗಿ ಅಂಬ್ಲಾಚರಿ ಗೋಸಾಕಣೆದಾರ ಸಂಘದ ಸದಸ್ಯರಿಗೆ ೪೦ ಗೋವುಗಳನ್ನು ಉಚಿತವಾಗಿ ಹಂಚಿತು.

ಜಾನುವಾರುಗಳ ಆರೋಗ್ಯವನ್ನು ಸಾಂಪ್ರದಾಯಿಕ ಜ್ಞಾನ ಬಳಸಿ ಕಾಪಾಡಿಕೊಳ್ಳಲಾಗುತ್ತದೆ. ಭಾಸ್ಕರನ್‌ಗೆ ತನ್ನ ತಾಯಿಯಿಂದ ಲಭಿಸಿರುವ ಈ ಪಾರಂಪರಿಕ ಜ್ಞಾನವು ಜಾನುವಾರುಗಳ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಪಾದಗಳು ಮತ್ತು ಬಾಯಿರೋಗವನ್ನು ತಡೆಗಟ್ಟಲು ಭಾಸ್ಕರನ್ ಬೇವಿನ ಎಣ್ಣೆಯನ್ನು ಜಾನುವಾರಗಳ ಕಾಲಿಗೆ ಮುನ್ನಚ್ಚರಿಕಾ ಕ್ರಮವಾಗಿ ಹಚ್ಚುತ್ತಾರೆ. ಒಣಗಿದ ಸಗಣಿಪುಡಿ ಮತ್ತು ಬೇವಿನ ಎಲೆಗಳನ್ನು ಧೂಪ ಹಾಕಲು ಬಳಸುತ್ತಾರೆ.

ಬೆಳೆ – ಜಾನುವಾರು ಒಗ್ಗೂಡಿಸಿದ ಕೃಷಿಯ ಲಾಭಗಳು
ಜಾನುವಾರು ಮತ್ತು ಬೆಳೆಗಳನ್ನು ಒಗ್ಗೂಡಿಸಿಕೊಂಡ ಕೃಷಿಯು ಆತನಿಗೆ ಹಲವು ಲಾಭಗಳನ್ನು ತಂದುಕೊಟ್ಟಿದೆ. ಸುಮಾರು ೧೫ ಗಾಡಿ ಕೊಟ್ಟಿಗೆ ಗೊಬ್ಬರವು ಸಗಣಿ ಮತ್ತಿತರ ತ್ಯಾಜ್ಯದಿಂದ ತಯಾರಾಗುತ್ತದೆ. ಇದನ್ನು ಆತನ ಹೊಲಕ್ಕೆ ಬಳಸಲಾಗುತ್ತದೆ. ಇದರಿಂದಾಗಿ ಮಣ್ಣಿನ ಆರೋಗ್ಯ ಪರಿಣಾಮಕಾರಿಯಾಗಿ ಉತ್ತಮಗೊಂಡಿದೆ. ಇದರೊಂದಿಗೆ ಜೈವಿಕ ಗೊಬ್ಬರವನ್ನು ನಿರಂತರವಾಗಿ ಭೂಮಿಗೆ ಉಣಿಸಿದ್ದರಿಂದ ಮಣ್ಣಿನ ತೇವಾಂಶ ಹಿಡಿದಿಡುವ ಸಾಮರ್ಥ್ಯ ಕೂಡ ಹೆಚ್ಚಿದೆ. ನೀವು ಎಲ್ಲೇ ಒಂದು ಹಿಡಿ ಮಣ್ಣನ್ನು ಎತ್ತಿದರೂ ಎರೆಹುಳುಗಳನ್ನು ಕಾಣಬಹುದು. ಇದಕ್ಕೆ ನನ್ನ ಜಾನುವಾರುಗಳ ಕೊಟ್ಟಿಗೆ ಗೊಬ್ಬರದ ಕಾರಣ ಎಂದು ಶ್ರೀ ಭಾಸ್ಕರನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತರಕಾರಿಗಳ ಉತ್ತಮ ಇಳುವರಿಯು ಎಲ್ಲರ ಕಣ್ಣಿಗೆ ಕಾಣುವಂತಿದೆ. ಉದಾ: ಪಡವಲಕಾಯಿಯ ಉದ್ದ ಮತ್ತು ಅದರ ರುಚಿ.

ಕೊಟ್ಟಿಗೆ ಗೊಬ್ಬರದ ಬಳಕೆಯು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ತಗ್ಗಿಸಿದೆ. ಹಾಗಾಗಿ ಆತನ ಉತ್ಪಾದನಾ ವೆಚ್ಚವು ಕಡಿಮೆಯಾಗಿದೆ. ಆತ ತನ್ನದೇ ಕೊಟ್ಟಿಗೆಯಲ್ಲಿ ಉತ್ಪತ್ತಿಯಾದ ಗೊಬ್ಬರವನ್ನು ಮುಖ್ಯಗೊಬ್ಬರವಾಗಿ ಬಳಸುತ್ತಿರುವುದರಿಂದ ಇದರಿಂದ ಪ್ರತಿ ಎಕರೆಗೆ ಐದುಸಾವಿರ ರೂಗಳನ್ನು ಉಳಿಸಬಹುದಾಗಿದೆ. ಜೈವಿಕ ಕೀಟ ನಾಶಕಗಳನ್ನು ಬಳಸುತ್ತಿರುವುದರಿಂದ ಪ್ರತಿ ಎಕರೆಗೆ ಮೂರು ಸಾವಿರ ರೂಗಳನ್ನು ತಗ್ಗಿಸಿಕೊಂಡಿದ್ದಾನೆ.

ಎರಡು ಹಸುಗಳು ದಿನಕ್ಕೆ ೮ ಲೀಟರ್ ಹಾಲು ನೀಡುತ್ತದೆ. ಇದು ಈ ತಳಿ ಸಾಮಾನ್ಯವಾಗಿ ನೀಡುವ ಹಾಲಿಗಿಂತ ಎರಡುಪಟ್ಟು ಹೆಚ್ಚು. ೮ ಲೀಟರ್ ಹಾಲಿನಲ್ಲಿ ೧ ಲೀಟರ್ ಹಾಲನ್ನು ಮನೆಬಳಕೆಗೆ ಬಳಸಿಕೊಂಡು ಉಳಿದ ೭ ಲೀಟರ್ ಹಾಲನ್ನು ಹತ್ತಿರದಲ್ಲಿರುವ ಹಾಲಿನ ಸಂಘಕ್ಕೆ ಪ್ರತಿ ಲೀಟರ್‌ಗೆ ರೂ.೨೮ರಂತೆ ಮಾರಾಟಮಾಡುತ್ತಾರೆ. ಇದರಿಂದ ಎರಡು ಹಸುಗಳಿಂದ ಪ್ರತಿ ತಿಂಗಳು ಆತ ರೂ.೬೦೦೦ ಗಳಿಸುತ್ತಾನೆ.

ಉಪಸಂಹಾರ
ಭಾಸ್ಕರನ್‌ನ ತೋಟ ಪರಿಸರ ಸ್ನೇಹಿ ಕೃಷಿಗೆ ಯಶಸ್ವಿ ಉದಾಹರಣೆ. ವಿವಿಧ ಘಟಕಗಳನ್ನು ಸೇರಿಸಿ ಸಹಜವಾದ ಪರಿಸರವ್ಯವಸ್ಥೆ ಹಾಗೂ ಸಂಸ್ಕರಣವನ್ನು ರೂಪಿಸಲಾಗಿದೆ. ಮಣ್ಣನ್ನು ಪವಿತ್ರವೆಂದು ತಿಳಿಯಲಾಗಿದೆ. ಜಾನುವಾರುಗಳು ಕೃಷಿಗೆ ಮುಖ್ಯವಾದ ಘಟಕವೆಂದು ಅರಿಂiÀiಲಾಗಿದೆ. ಲಾಭವನ್ನೇ ಮುಖ್ಯವಾಗಿಸಿಕೊಳ್ಳದೆ ಮಣ್ಣು ಮತ್ತು ಪ್ರಾಣಿಗಳನ್ನು ಸಲಹುವ ಗುಣ ಇದರಲ್ಲಿದೆ. ಜಾನುವಾರು ಮತ್ತು ಕೃಷಿಯನ್ನು ಒಂದಾಗಿಸಿರುವುದರಿAದ ಹಲವಾರು ಲಾಭಗಳಿವೆ. ಕುಟುಂಬಕ್ಕೆ ಸುರಕ್ಷಿತ, ಪೌಷ್ಟಿಕ ಆಹಾರ ಸಿಗುತ್ತದೆ. ಇಡೀ ಕುಟುಂಬವು ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕೃಷಿ ಪರಿಸರವು ಉತ್ತಮಗೊಂಡಿದೆ. ತೋಟವು ಆರ್ಥಿಕವಾಗಿ ಕೂಡ ಲಾಭದಾಯಕವಾಗಿದೆ.

ಭಾಸ್ಕರನ್ ಸಾವಯವ ಕೃಷಿಗೆ ಮಾದರಿಯಾಗಿದ್ದಾರೆ. ಆತನಿಂದ ಉತ್ತೇಜಿತರಾಗಿ ಆತನ ಹಳ್ಳಿಯ ೧೫ ರೈತರು ತಮ್ಮ ಪುಟ್ಟ ಭೂಮಿಯಲ್ಲೇ ಸಾವಯವ ಕೃಷಿಯನ್ನು ಕೈಗೊಂಡಿದ್ದಾರೆ.


K Suresh Kanna
Kudumbam,
No. 113/118, Sundaraj Nagar, Subramaniyapuram,
Trichy – 620 020, Tamil Nadu, India.
E-mail: sureshkanna_kudumbam@yahoo.in


 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp