ಹಸುಕರುಗಳಿಗೆ ಮೇವು ಹಾಕುವ ಕ್ರಮಗಳು ಯಾವಾಗಲೂ ಜಾನುವಾರುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಎಂದು ಹೇಳಲಾಗುವುದಿಲ್ಲ. ಈ ಕ್ರಮಗಳು ಅಧಿಕ ವೆಚ್ಚ, ಹಾನಿಕಾರಕ ಮತ್ತು ಅಸ್ಥಿರವಾದದ್ದು. ಹಸುವಿನ ದೇಹರಚನೆ/ಜೀರ್ಣಾಂಗ ವ್ಯವಸ್ಥೆಯನ್ನು ಅರಿತುಕೊಂಡು ಅವುಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವಂತಹ ಮೇವನ್ನು ನೀಡುವುದು ಹೆಚ್ಚು ಸೂಕ್ತ ಹಾಗೂ ಸುಸ್ಥಿರ ವಿಧಾನ.
ಭಾರತದಲ್ಲಿನ ಪಶುವೈದ್ಯರಿಗೆ ಸಂಕ್ರಾAತಿಯAತಹ ಹಬ್ಬಗಳ ಮರುದಿನ ಹಸುಗಳು, ಎಮ್ಮೆಗಳು ಹೊಟ್ಟೆಯುಬ್ಬರ/ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದು ತುರ್ತಾಗಿ ಚಿಕಿತ್ಸೆ ಬೇಕಾಗಿದೆ ಎನ್ನುವ ಕರೆಗಳು ಸರ್ವೇಸಾಮಾನ್ಯ. ಇದಕ್ಕೆ ಕಾರಣ ಅತಿಯಾಗಿ ಅಕ್ಕಿ ಬೆಲ್ಲವನ್ನು ಹಬ್ಬಗಳಂದು ಅವುಗಳಿಗೆ ತಿನ್ನಿಸುವುದು. ನಾಲ್ಕು ಕೋಣೆಗಳಿರುವ (ರುಮೆನ್, ರೆಟಿಕುಲಮ್, ಒಮೇಸಮ್, ಎಬೋಮೇಸಮ್) ಹೊಟ್ಟೆಯನ್ನು ಹೊಂದಿರುವ ಹಸುಗಳು ಹಾಗೂ ಎಮ್ಮೆಗಳ ಅಂಗರಚನೆ ಕಾಳುಗಳು ಹಾಗೂ ಎಣ್ಣೆಕಾಳುಗಳ ಉಂಡೆಯನ್ನು ಜೀರ್ಣಿಸಿಕೊಳ್ಳುವಂತದ್ದಲ್ಲ ಹಾಗಾಗಿ ಅವುಗಳಿಗೆ ಅಜೀರ್ಣವಾಗಿ (ಕೆಟೊಸಿಸ್) ಹೊಟ್ಟೆಉಬ್ಬರಿಸಿಕೊಳ್ಳುತ್ತದೆ.
ಹಸುಗಳು ಮತ್ತು ಎಮ್ಮೆಗಳು ಬೋವಿನಿ ಕುಟುಂಬಕ್ಕೆ ಸೇರಿದ ಪ್ರಾಣಿಗಳು. ಒವಿನಿ ಕುಟುಂಬಕ್ಕೆ ಸೇರಿದ ಕುರಿ ಮತ್ತು ಮೇಕೆಗಳ ರೀತಿಯಲ್ಲೇ ಇವುಗಳು ಕೂಡ ಆಹಾರವನ್ನು ಮೆಲುಕು ಹಾಕುತ್ತವೆ. ಆದ್ದರಿಂದ ಇವುಗಳನ್ನು ರೋಮಂಥಗಳೆAದು (ಡಿumiಟಿಚಿಟಿಣs) ಕರೆಯುತ್ತಾರೆ. ಬೇಕಾದಾಗ ಆಹಾರವನ್ನು ಬಾಯಿಗೆ ತಂದುಕೊAಡು ಮೆಲುಕು ಹಾಕುವ ಪ್ರಕ್ರಿಯೆಗೆ ರೆಟಿಕುಲಮ್ (ಎರಡನೇ ಜಠರ/ ಮೆಲುಕು ಚೀಲ) ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯ ಉದ್ದೇಶವೆಂದರೆ ಆಹಾರವನ್ನು ಸಣ್ಣಸಣ್ಣ ಕಣಗಳಾಗಿ ಕತ್ತರಿಸಿ ಗಿಡಗಳಲ್ಲಿನ ಸೆಲ್ಯುಲಸ್ ಅಂಶವನ್ನು ಜೊಲ್ಲಿನಲ್ಲಿರುವ ಎಂಜೈಮುಗಳು ಜೀರ್ಣವಾಗುವಂತೆ ಸಿದ್ಧಗೊಳಿಸುತ್ತದೆ. ಇದನ್ನು ರುಮೇನ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಜೀರ್ಣಗೊಳ್ಳುವಂತೆ ಮಾಡುತ್ತವೆ. ಜೀರ್ಣಗೊಂಡ ಆಹಾರದಿಂದ ಅಬೊಸೆಮ್‌ನಲ್ಲಿನ ಲೈಸೊಜೈಮ್ ಎನ್ನುವ ಎಂಜೈಮಿನೊAದಿಗೆ ಸೇರಿ ಈ ಬ್ಯಾಕ್ಟಿರಿಯಾ ಪ್ರಾಣಿಗಳಿಗೆ ಅಗತ್ಯವಾದ ಆಹಾರದಂಶವನ್ನು ನೀಡುತ್ತದೆ. ರೋಮಂಥ ಪ್ರಾಣಿಗಳಲ್ಲಿ ಹೊಟ್ಟೆ ಎನ್ನುವುದು ಬ್ಯಾಕ್ಟಿರಿಯಾಗಳ ಹುಟ್ಟುತಾಣ/ತಂಗುತಾಣ. ಇದಕ್ಕೆ ದೇಹದಲ್ಲಿ ಸ್ಥಿರವಾಗಿರುವಂತಹ ನಿರ್ದಿಷ್ಟ ತಾಪಮಾನ ಹಾಗೂ ಪಿಎಚ್(ಜಠರದ ರಸಸಾರ) ಅತ್ಯಂತ ಮುಖ್ಯವಾದುದು.
ಯಾವುದಾದರೂ ಕಾರಣದಿಂದ ಈ ಪಚನ ಕ್ರಿಯೆ, ಮೆಲುಕು ಕ್ರಿಯೆ ಕ್ಷೀಣಿಸಿದಲ್ಲಿ ಹೊಟ್ಟೆಯ ತಾಪಮಾನ ಅಥವ ಪಿಎಚ್ (ಜಠರದಲ್ಲಿನ ರಸಸಾರ) ಬದಲಾಗುತ್ತದೆ. ಇದು ಪ್ರಾಣಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಹಾರವನ್ನು ಜಗಿದು ಮಿಲಾಯಿಸುವಾಗ ಹಸು ಅಥವ ಎಮ್ಮೆ ಸುಮಾರು ೧೦೦ ರಿಂದ ೧೫೦ ಲೀಟರ್ ಜೊಲ್ಲು ಉತ್ಪಾದಿಸುತ್ತದೆ. ಈ ಜೊಲ್ಲು ಹೊಟ್ಟೆ ಹಾಗೂ ರಕ್ತದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಲು ಅಗತ್ಯ. ಅತಿಹೆಚ್ಚು ಸಾಂದ್ರಿತ ಆಹಾರವನ್ನು ಪ್ರಾಣಿಗಳಿಗೆ ನೀಡುವುದರಿಂದ ಅಜೀರ್ಣದಿಂದ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಉಂಟಾಗುವುದಲ್ಲದೆ ಅವುಗಳ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಸಂಶೋಧನೆಗಳ ಪ್ರಕಾರ ಹೆಚ್ಚಿನ ನಾರಿನಂಶವುಳ್ಳ ಆಹಾರವನ್ನು ನೀಡುವುದರಿಂದ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಕರ್ನಾಟಕದ ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಇದೇ ಫಲಿತಾಂಶಗಳು ಕಂಡುಬAದಿವೆ.
ರುಮೇAಥ ಕುಟುಂಬದ ಪ್ರಾಣಿಗಳು ಹಾಗೂ ಒಂದೇ ಹೊಟ್ಟೆಯನ್ನು ಹೊಂದಿರುವ ಪ್ರಾಣಿಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಮಾಂಸ ಅಥವ ಮೊಟ್ಟೆಗಾಗಿ ಫಾರಂ ವ್ಯವಸ್ಥೆಯಲ್ಲಿ ಸಾಕುವ ಕೋಳಿಯೊಂದಿಗೆ ಹೋಲಿಸಿ ನೋಡಬಹುದು. ಹಕ್ಕಿಗಳು ದೇಹವು ಕಾಳುಗಳನ್ನು ತಿನ್ನಲು ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವಂತೆ ರೂಪುಗೊಂಡಿದೆ. ಹಕ್ಕಿಗಳಿಗೆ ಹಲ್ಲುಗಳಿರುವುದಿಲ್ಲ ಬದಲಿಗೆ ಅವುಗಳ ಹೊಟ್ಟೆಯೇ ಕಾಳುಗಳನ್ನು ಪುಡಿಮಾಡಿ ಜೀರ್ಣಗೊಳಿಸುವಂತೆ ರೂಪುಗೊಂಡಿದೆ. ಆದ್ದರಿಂದಲೇ ಅವುಗಳಿಗೆ ಕಾಳುಗಳನ್ನು ನೀಡುವುದು ಸಹಜ ಪ್ರಕ್ರಿಯೆ. ರೈತರಿಗೆ ಅವುಗಳಿಗೆ ಸಮತೋಲನ ಆಹಾರದ ರೂಪದಲ್ಲಿ ಕಾಳುಗಳನ್ನು ನೀಡುವಂತೆ ಸಲಹೆ ನೀಡಲಾಗುತ್ತದೆ.
ಡೈರಿ ಫಾರಂಗಳವರು ಹಸುಗಳಿಗೆ ಎಮ್ಮೆಗಳಿಗೆ ಬೂಸ, ಹಿಂಡಿ, ಸಾಂದ್ರಿತ ಆಹಾರ, ೧ ಇಂಚಿಗಿAತಲೂ ಸಣ್ಣದಾಗಿ ಕತ್ತರಿಸಿದ ಹುಲ್ಲನ್ನು ರೈತರು ನೀಡುತ್ತಿದ್ದಾರೆ. ಇದು ಸಂಶೋಧನೆಯ ಫಲಿತಾಂಶಕ್ಕೆ ವಿರುದ್ಧವಾದದ್ದು. ತಮ್ಮ ಪ್ರಾಣಿಗಳ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಅವರಿಗೆ ಸಲಹೆ ನೀಡಲಾಗಿದೆ. ಈ ಕ್ರಮವನ್ನು ಅನುಸರಿಸುವುದರಿಂದ ಹಾಲಿನ ಉತ್ಪಾದನೆ ಸ್ವಲ್ಪ ಸಮಯದವರೆಗೂ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೆಂದರೆ ಭಾರತದಲ್ಲಿನ ಬಹುತೇಕ ಹಸುಗಳು, ಎಮ್ಮೆಗಳು ಆರೈಕೆ ಹಾಗೂ ಪ್ರೊಟೀನ್ ಕೊರತೆಯಿಂದ ಬಳಲುತ್ತಿವೆ. ಹಾಗಾಗಿ ಈ ಆಹಾರವು ಅವುಗಳ ಆರೋಗ್ಯವನ್ನು ಉತ್ತಮಗೊಳಿಸುವುದರಿಂದ ಹಾಲಿನ ಉತ್ಪಾದನೆಯು ಹೆಚ್ಚುತ್ತದೆ. ಈ ಆಹಾರವನ್ನು ಮಿತವಾದ ನೀರಿನೊಂದಿಗೆ ಪ್ರಾಣಿಗಳಿಗೆ ನೀಡುವುದರಿಂದ ಅವುಗಳ ಹೊಟ್ಟೆ ತುಂಬುವುದಿಲ್ಲ. ಈ ಆಹಾರ ಹೆಚ್ಚು ದುಬಾರಿಯಾಗಿದ್ದು ಹೊರಗಿನಿಂದ ಕೊಂಡು ತರಬೇಕಾಗುತ್ತದೆ. ಹಾಗಾಗಿ ಇದನ್ನು ಪ್ರಾಣಿಗಳಿಗೆ ಮಿತವಾಗಿ ನೀಡುತ್ತಾರೆ.
ಅತಿಹೆಚ್ಚು ಸಾಂದ್ರಿತ ಆಹಾರವನ್ನು ಪ್ರಾಣಿಗಳಿಗೆ ನೀಡುವುದರಿಂದ ಅಜೀರ್ಣದಿಂದ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಉಂಟಾಗುವುದಲ್ಲದೆ ಅವುಗಳ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ.
ಫೋಟೊ: ಒಣಹುಲ್ಲನ್ನು ದನಗಳಿಗೆ ನೀಡುವುದರಿಂದ ಅವುಗಳಿಗೆ ಮೆಲುಕು ಹಾಕಲು ಹೆಚ್ಚು ಸಮಯ ಸಿಗುತ್ತದೆ. ಇದು ದನಗಳಿಗೆ ಮೇವು ನೀಡುವ ಸುಸ್ಥಿರ ವಿಧಾನ.
ಇದೇ ಕಾರಣದಿಂದ ನ್ಯೂಜಿಲೆಂಡ್ ಮತ್ತು ಆಸ್ಟೆçÃಲಿಯಾ ದೇಶದಲ್ಲಿ ಹಸುಗಳಿಗೆ ಸಾಂದ್ರಿತ ಆಹಾರವನ್ನಾಗಲಿ ಅಥವ ಕತ್ತರಿಸಿದ ಹುಲ್ಲನ್ನಾಗಲಿ ನೀಡದೆ ಸಾಕುತ್ತಾರೆ. ಇದರಿಂದ ಆ ಪ್ರಾಣಿಗಳಿಗೆ ಹುಲ್ಲನ್ನು ಚೆನ್ನಾಗಿ ಜಗಿದು ಅದರಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್ ಅಂಶಗಳನ್ನು ವಿರಾಮದಲ್ಲಿ ಮೆಲುಕು ಹಾಕುತ್ತಾ ಅರಗಿಸಿಕೊಳ್ಳಲು ಸಮಯ ಸಿಗುತ್ತದೆ. ಅವರು ಅನುಸರಿಸುತ್ತಿರುವ ಈ ವಿಧಾನದಿಂದಾಗಿಯೇ ಹಾಲಿನ ಉತ್ಪಾದನೆಯಲ್ಲಿ ಈ ಎರಡೂ ದೇಶಗಳು ಮುಂಚೂಣಿಯಲ್ಲಿವೆ.
ರೊಮಂಥ ವರ್ಗದ ಪ್ರಾಣಿಗಳಿಗೆ ಕಾಳುಗಳನ್ನು ತಿನ್ನಿಸುವುದರಿಂದ ಅವುಗಳು ಮನಷ್ಯನ ಪ್ರತಿಸ್ಫರ್ದಿಯಾಗುತ್ತವೆ. ಕಾಳುಗಳಿಗೆ ಬೇಡಿಕೆ ಹೆಚ್ಚಿ ಅವುಗಳ ಬೆಲೆಯೂ ಹೆಚ್ಚಾಗುತ್ತದೆ. ಪಶುಸಂಗೋಪನ ವಲಯವು ಈಗಾಗಲೇ ಕಾಳುಗಳ ಮಾರುಕಟ್ಟೆಗೆ ಅತಿದೊಡ್ಡ ಗ್ರಾಹಕ. ಮನುಷ್ಯವಲಯದೊಂದಿಗೆ ಸ್ಪರ್ಧೆ ತೀವ್ರಗೊಂಡಲ್ಲಿ ಅದರಿಂದ ಮಾರುಕಟ್ಟೆಯಲ್ಲಿ ಕಾಳುಗಳ ಕೊರತೆಯುಂಟಾಗುತ್ತದೆ.
ಆದ್ದರಿAದಲೇ ಕಾಳುಗಳು, ಹಿಂಡಿ, ಬೂಸಾದೊಂದಿಗೆ ಸಾಂದ್ರಿತ ಆಹಾರವನ್ನು ನೀಡುವುದು, ಹಸಿರು ಹುಲ್ಲು ಒಣಹುಲ್ಲನ್ನು ಕತ್ತರಿಸಿ ಪ್ರಾಣಿಗಳಿಗೆ ಮೇವು ನೀಡುವುದು ದುಬಾರಿ ವೆಚ್ಚಕ್ಕೆ ಕಾರಣವಾಗುವುದಲ್ಲದೆ ಅವುಗಳ ಆರೋಗ್ಯಕ್ಕೆ ಹಾನಿಕಾರಕ. ಹುಲ್ಲು ಹಾಗೂ ದ್ವಿದಳ ಧಾನ್ಯದ ಸಸ್ಯಗಳನ್ನು ೩:೧ ಅನುಪಾತದಲ್ಲಿ ೬ – ೮”ನಷ್ಟು ಉದ್ದವಾಗಿ ಅವು ಎಷ್ಟು ತಿನ್ನುತ್ತವೋ ಅಷ್ಟನ್ನು ನಿಗದಿತ ಸಮಯದ ಅಂತರದಲ್ಲಿ ನೀಡಬೇಕು. ಇದರಿಂದ ಅವುಗಳಿಗೆ ಮೆಲುಕು ಹಾಕಲು ಸಮಯನೀಡಿದಂತಾಗುತ್ತದೆ. ಹಾಲು ನೀಡುವ ಪ್ರಾಣಿಗಳನ್ನು ಸಾಕಲು ಇದು ಹೆಚ್ಚು ಪರಿಣಾಮಕಾರಿ ಹಾಗೂ ಸುಸ್ಥಿರ ವಿಧಾನ.
ಆಕರಗಳು
http://www.vivo.colostate.edu/hbooks/pathphys/digestion/ herbivores/rumination.html
Andersson, L., Subclinical ketosis in dairy cows, 1988, Veterinary Clinics: Food Animal Practice 4
Duffield, T., Sub-clinical Ketosis in lactating dairy animals, 2000, Veterinary Clinics of North America: Food
Animal Practice 16(2): 22.
Leslie, K., T. Duffield and S. Le Blanc., Monitoring and managing energy balance in transition dairy cows, 2003,
Journal of Dairy Science 86: 101-107.
Netsanet, B., V. Kapoor and B. Tewatia., Effect of roughage to concentrate ratio in the diet on milk production and
fatty acid profile of milk in crossbred cows, 2015, Indian Journal of Animal Nutrition 32(4): 373-378.
Harisha, K., K. Satyanarayan, V. Jegadeeswary, L. Achoth, B. Rajeshwari and C. S. Nagaraj., Milk production trends
in Kolar and Chikbalapur districts of Karnataka, 2015, Asian Journal Dairy and Food Research 34(2): 3.
S Rajeshwaran
Visiting professor and senior research consultant,
IRMA, Anand – 388001
E-mail: sraj@irma.ac.in
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೩ , ಸೆಪ್ಟಂಬರ್ ೨೦೧೭



