ಜೀವವೈವಿಧ್ಯದಿಂದ ಚೇತರಿಕೆ

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಅನಿರ್ಧಿಷ್ಟ ಮಳೆ, ಏಕಬೆಳೆ ವ್ಯವಸ್ಥೆ ಕೃಷಿಯನ್ನು ಅಸ್ಥಿರ ಹಾಗೂ ಹೆಚ್ಚು ನಷ್ಟದ ವ್ಯವಹಾರವಾಗಿಸಿದೆ. ಸರಳವಾದ ಜಲಸಂರಕ್ಷಣಾ ವಿಧಾನಗಳು ಬಹುದೊಡ್ಡ ವ್ಯತ್ಯಾಸವನ್ನುಂಟುಮಾಡಬಲ್ಲವು. ಈ ವಿಧಾನಗಳು ರೈತರನ್ನು ಈ ರೀತಿಯ ಹವಾಮಾನ ವೈಪರಿತ್ಯಗಳಿಂದ ಕಾಪಾಡಬಲ್ಲುದು. ಕೃಷಿಭೂಮಿಲ್ಲಿ ಜೈವಿಕವೈವಿಧ್ಯವನ್ನು ಹೆಚ್ಚಿಸುವುದರಿಂದ ಬದುಕಿನಮಟ್ಟ, ಪರಿಸರಗಳನ್ನು ಸುಧಾರಿಸುವುದರೊಂದಿಗೆ ನಷ್ಟವನ್ನು ಕಡಿಮೆಮಾಡುತ್ತದೆ.

ತಮಿಳು ನಾಡಿನ ಮಧುರೈ ಜಿಲ್ಲೆಯಲ್ಲಿ ಬಹುತೇಕ ಜನರ ಪ್ರಮುಖ ಜೀವನಾಧಾರ ಕೃಷಿ.
ಮಧುರೈನ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ೯೦% ಬೆಳೆಯು ನೀರಿನ ಅಭಾವದಿಂದಾಗಿಯೇ ಹಾಳಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನಿರ್ಧಿಷ್ಟ ಮಳೆ, ಹೆಚ್ಚುತ್ತಿರುವ ತಾಪಮಾನಗಳಿಂದಾಗಿ ಕುಡಿಯಲು ಹಾಗೂ ಕೃಷಿಗೆ ನೀರಿನ ಕೊರತೆಯುಂಟಾಗಿದೆ. ಜೊತೆಗೆ ಅಶುದ್ಧ ನೀರಿನಿಂದುAಟಾಗುವ ಕಾಯಿಲೆಗಳು ಹೆಚ್ಚಾಗಿವೆ. ನೀರಿನ ಕೊರತೆಯಿಂದಾಗಿ ಬೆಳೆ ನಷ್ಟ ಹಾಗೂ ಮೇವಿನ ಕೊರತೆಗಳಿಂದ ಜನ ತಮ್ಮ ಜಾನುವಾರುಗಳನ್ನು ಮಾರಿ ಕೃಷಿ ಬಿಟ್ಟು ಹತ್ತಿರದ ಪಟ್ಟಣಗಳ ಕಡೆ ವಲಸೆ ಹೋಗುತ್ತಿದ್ದಾರೆ.

ಬದಲಾಗುವ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸಮುದಾಯಗಳಲ್ಲಿ ಹಾಗೂ ರೈತರಲ್ಲಿ ಹೆಚ್ಚಿಸಲು ಧನ್ ಫೌಂಡೇಶನ್‌ನವರು ಹವಾಮಾನ ಬದಲಾವಣೆಗೆ ಅನುಗುಣವಾಗಿ ಹೊಂದಿಕೊಳ್ಳುವುದನ್ನು ಕಲಿಸುವ ಯೋಜನೆಯೊಂದನ್ನು ರೂಪಿಸಿದರು. ಈ ಯೋಜನೆಯನ್ನು ಮಧುರೈ ಜಿಲ್ಲೆಯ ಟಿ.ಕಲ್ಲುಪಟ್ಟಿಯ ನಾಲ್ಕು ಪಂಚಾಯತ್ ಗ್ರಾಮಗಳಲ್ಲಿ ಡಿಸಂಬರ್ ೨೦೧೧ರಿಂದ ಆರಂಭಿಸಲಾಯಿತು. ಈ ಯೋಜನೆಯು ಮೊದಲಿಗೆ ಮಳೆನೀರು ಸಂರಕ್ಷಿಸಿ ಕೃಷಿ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹ ನೀಡಲಾಯಿತು ಹಾಗೂ ಸಮಾಜದ ಆರ್ಥಿಕತೆಯನ್ನು ಬಲಗೊಳಿಸಲು ಗಮನನೀಡಲಾಯಿತು. ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮರಗಳನ್ನು ಹಾಗೂ ಬೆಳೆಗಳನ್ನ ಅಂದರೆ ಸಿರಿಧಾನ್ಯಗಳು ಹಾಗೂ ಹಣ್ಣು, ತರಕಾರಿ, ಹೂವಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಲು ಕಲಿಸಲಾಯಿತು. ಈ ವಿಧಾನದ ತಂತ್ರವಾಗಿ ರೈತರು ಹಾಗೂ ಜಾನುವಾರುಗಳಿಗೆ ವಿಮೆಯನ್ನು ಮಾಡಿಸಲಾಯಿತು. ಒಟ್ಟಾರೆಯಾಗಿ ಹವಾಮಾನ ವೈಪರಿತ್ಯಗಳ ಸಮಸ್ಯೆಯನ್ನು ಎದುರಿಸಲು ಸಮಗ್ರವಾದ ರೂಪುರೇಷೆಗಳನ್ನು ರೂಪಿಸಲಾಯಿತು.

ಈ ಕತೆ ಈ ಯೋಜನೆಯೊಂದಿಗೆ ಕೆಲಸ ಮಾಡಿ ತನ್ನ ಕೃಷಿ ಬದುಕಲ್ಲಿ ಬಹುದೊಡ್ಡ ಬದಲಾವಣೆ ತಂದುಕೊAಡ ರೈತನದು.

ಬದಲಾಗಲು ಕಲಿಯುವುದು
ಇಳಂಗೊವನ್ ಮಧುರೈ ಜಿಲ್ಲೆಯ ಟಿ.ಕಲ್ಲುಪಟ್ಟಿ ಭಾಗದಲ್ಲಿರುವ ಕಿಳನ್‌ಕುಳಂ ಎನ್ನುವ ಹಳ್ಳಿಯ ರೈತ. ಅವನ ಕುಟುಂಬದವರ ಬಳಿ ಆತನ ತಂದೆ ಉಳುಮೆ ಮಾಡುತ್ತಿದ್ದ ಎರಡು ಎಕರೆ ನೀರಾವರಿ ಭೂಮಿಯಿದೆ. ಕಳೆದ ಮೂರು ವರ್ಷಗಳಿಂದ ಅನಿರ್ಧಿಷ್ಟ ಮಳೆಯ ದೆಸೆಯಿಂದಾಗಿ ಅವರು ಉಳುಮೆ ಮಾಡಲಾಗಲಿಲ್ಲ. ಅವರು ಹಾಲಿನ ಉತ್ಪನ್ನಗಳ ಆದಾಯದ ಮೇಲೆ ಅವಲಂಭಿತರು. ಆದರೆ ಆ ಆದಾಯ ಅವರ ಕುಟುಂಬದ ವೆಚ್ಚಕ್ಕೆ ಸಾಕಾಗುತ್ತಿಲ್ಲ.

ಇಳಂಗೊವನ್ ಮತ್ತೊಬ್ಬ ರೈತನಿಂದ ಐದು ಎಕರೆ ಜಮೀನನ್ನು ಗುತ್ತಿಗೆ ಪಡೆದಿದ್ದಾನೆ. ಮುಳ್ಳಿಗಿಡಕಂಟಿಗಳನ್ನು ಸ್ವಚ್ಛ ಮಾಡಿ ಊದಲು (bಚಿಡಿಟಿಥಿಚಿಡಿಜ miಟಟeಣ) ಮತ್ತು ಹತ್ತಿಯನ್ನು ಬೆಳೆಯಲು ಆರಂಭಿಸಿದ. ಇದನ್ನು ಆತ ಸತತ ಮೂರು ವರ್ಷಗಳ ಕಾಲ ಬೆಳೆದ ಆದರೆ ಒಳ್ಳೆಯ ಬೆಳೆಯನ್ನು ಪಡೆಯಲಾಗಲಿಲ್ಲ. ಆತ ನಷ್ಟವನ್ನು ಅನುಭವಿಸಬೇಕಾಯಿತು.

ಈ ಯೋಜನೆಯನ್ನು ರೈತ ಸಮುದಾಯಕ್ಕೆ ಪರಿಚಯಿಸುವ ಕಾರ್ಯಕ್ರಮವನ್ನು ಹಳ್ಳಿಯಲ್ಲಿ ಆಯೋಜಿಸಲಾಯಿತು. ಈ ಯೋಜನೆಯು ಇಳಂಗೋವನ್‌ನಿಗೆ ಅನಿರ್ದಿಷ್ಟ ಮಳೆಯಂತಹ ಹವಾಮಾನ ವೈಪರಿತ್ಯಗಳ ಸಮಸ್ಯೆ, ಬೆಳೆ ವೈಫಲ್ಯದಂತಹ ಸಮಸ್ಯೆಯನ್ನು ಎದುರಿಸಲು ಸೂಕ್ತವಾಗಿತ್ತು. ಇಳಂಗೋವನ್‌ಗೆ ಕೃಷಿ ಹೊಂಡ ಅದರ ಪ್ರಯೋಜನಗಳ ಪರಿಚಯವಾಯಿತು. ಸಣ್ಣ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಮಾಡಲು ಕೃಷಿ ಹೊಂಡವನ್ನು ನಿರ್ಮಿಸಲಾಗುತ್ತದೆ. ಕೃಷಿ ಭೂಮಿಯಲ್ಲಿ ಹೊಂಡವನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಭೂಮಿಯ ಮೇಲೆ ಹರಿದುಹೋಗುವ ಹಾಗೂ ಹೊಂಡದ ತಳದಲ್ಲಿನ ನೀರು ಈ ಹೊಂಡದಲ್ಲಿ ಶೇಖರಣೆಯಾಗುತ್ತದೆ. ನೀರಿನ ಕೊರತೆಯುಂಟಾದ ಸಂದರ್ಭಗಳಲ್ಲಿ ಈ ಹೊಂಡದಲ್ಲಿ ಶೇಖರಿಸಿಟ್ಟುಕೊಂಡ ನೀರನ್ನು ಬೆಳೆಗಳಿಗೆ ನೀರುಣಿಸಲು ಬಳಸಲಾಗುತ್ತದೆ.

ರಾಮನಾಥಪುರ ಜಿಲ್ಲೆಯ ಮುದುಕುಳತ್ತೂರು ಭಾಗದ ಸವೇರಿಪಟ್ಟಣಂನಲ್ಲಿ ಈ ಕೃಷಿಹೊಂಡಗಳ ನಿರ್ಮಾಣವಾಗಿದ್ದು ಅವುಗಳ ಬಳಕೆಯನ್ನು ಆ ಭಾಗದಲ್ಲಿ ಹೇಗೆ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಅಲ್ಲಿಗೆ ರೈತರನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿನ ರೈತರೊಂದಿಗೆ ಮಾತಾಡಿದ ಬಳಿಕ ಕೃಷಿಹೊಂಡಗಳ ಅನುಕೂಲವನ್ನು ತಿಳಿದುಕೊಂಡ ಇಳಂಗೋವನ್ ತನ್ನ ತೋಟದಲ್ಲಿಯೂ ಕೃಷಿಹೊಂಡವನ್ನು ನಿರ್ಮಿಸಲು ನಿರ್ಧರಿಸಿದ. ಇಳಂಗೋವನ್ ತನ್ನ ನಾಲ್ಕು ಸೆಂಟು ಭೂಮಿಯಲ್ಲಿ ೩೩ಮೀ x ೧೫ಮೀ x ೧.೬ಮೀ ಅಳತೆಯ ಕೃಷಿಹೊಂಡವನ್ನು ನಿರ್ಮಿಸಿದ. ದುರದೃಷ್ಟವಶಾತ್ ಮಳೆ ಬೀಳದೇ ಹೋದದ್ದರಿಂದ ಹೊಂಡಕ್ಕೆ ನೀರು ತುಂಬಲಿಲ್ಲ.

ಜೈವಿಕ/ಜೀವ ವೈವಿಧ್ಯವನ್ನು ಅಳವಡಿಸಿಕೊಂಡಿದ್ದರಿAದ ಕೃಷಿಯಲ್ಲಿನ ಅಪಾಯಗಳು ಬಹುಮಟ್ಟಿಗೆ ಕಡಿಮೆಯಾದವು. ಬಹುಬೆಳೆಯ ಕೃಷಿ, ಜಾನುವಾರು ಮತ್ತು ಮೀನುಸಾಕಾಣಿಕೆ ಆದಾಯದ ಮೂಲಗಳಾದವು.

ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವುದು
೨೦೧೩ರಲ್ಲಿ ಒಂದು ಬಾರಿ ಸುರಿದ ಮಳೆಗೆ ಕೃಷಿಹೊಂಡ ತುಂಬಿತು. ಕೃಷಿಹೊಂಡ ತುಂಬಿದ್ದರಿAದ ಇಳಂಗೋವನ್ ತನ್ನ ಜಮೀನಿನಲ್ಲಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸಲು ಬಹುಬೆಳೆಯನ್ನು ಬೆಳೆಯಲು ನಿರ್ಧರಿಸಿದ.

ಪಲ್ಲಪಟ್ಟಿಯ ಶ್ರೀ ಅಳಗಾರಸ್ವಾಮಿಯವರ ತೋಟಕ್ಕೆ ಭೇಟಿ ನೀಡಿದ ಫಲವಾಗಿ ಅವರಿಂದ ಸ್ಫೂರ್ತಿಗೊಂಡು ಇಳಂಗೋವನ್ ೫೦ ನುಗ್ಗೆಗಿಡಗಳನ್ನು ತನ್ನ ಜಮೀನಿನಲ್ಲಿ ಬೆಳೆಸಿದರು. ಕೃಷಿಹೊಂಡದ ನೀರನ್ನೇ ಈ ಗಿಡಗಳಿಗೆ ಉಣಿಸಲಾಯಿತು. ಗಿಡಗಳು ಏಪ್ರಿಲ್ ಹೊತ್ತಿಗೆ ಹಣ್ಣುಗಳನ್ನು ಬಿಡಲಾರಂಭಿಸಿದವು. ಮೊದಲಬಾರಿಗೆ ೪೦ ಹಣ್ಣುಗಳನ್ನು ಆತ ಕೊಯ್ಲುಮಾಡಿದ. ಈ ಹಣ್ಣುಗಳನ್ನು ಮನೆಬಳಕೆಗೆ ಇಟ್ಟುಕೊಂಡರು.

ಅನುಭವವಿಲ್ಲದಿದ್ದರೂ ಆತ ನವಂಬರ್ ತಿಂಗಳಲ್ಲಿ ಚೆಂಡುಹೂ ಗಿಡಗಳನ್ನು ಹಾಕಿದ. ಫೆಬ್ರವರಿಯಲ್ಲಿ ಹೂಗಳನ್ನು ಕೊಯ್ಲು ಮಾಡಿ ತನ್ನ ಜಮೀನಿನಿಂದ ಮೂರು ಕಿಮೀ ದೂರದಲ್ಲಿನ ಟಿ. ಕಲ್ಲುಪಟ್ಟಿ ಭಾಗದ ಮಾರುಕಟ್ಟೆಯಲ್ಲಿ ಮಾರಿದರು. ಹೂ ಮಾರಾಟದಿಂದ ಆತ ೫೮೦೦ರೂಗಳನ್ನು ಗಳಿಸಿದ. ಚೆಂಡುಹೂ ಬೆಳೆಯಿಂದ ಆತನಿಗೊಂದು ನಿರಂತರ ಆದಾಯ ಬರತೊಡಗಿತು. ಗಿಡಗಳ ಎಲೆಗಳು ೧೨ ಮೇಕೆಗಳ ಮೇವಿಗೆ ಬಳಕೆಯಾಯಿತು (೨ ಇಳಂಗೋವನ್‌ಗೆ ಸೇರಿದ ಮೇಕೆಗಳು, ೧೦ ಮೇಕೆಗಳು ಅಕ್ಕಪಕ್ಕದವರಿಗೆ ಸೇರಿದವು). ಗಿಡದ ಕಾಂಡಗಳನ್ನು ಹಾಗೆ ಸಾವಯವ ಗೊಬ್ಬರದಂತೆ ಉಳಿಸಿಕೊಂಡು ಭೂಮಿಯನ್ನು ಉಳುಮೆ ಮಾಡಲಾಯಿತು.

ಕೃಷಿಹೊಂಡದ ಪಶ್ಚಿಮ ಭಾಗದ ೩ ಸೆಂಟು ಭೂಮಿಯಲ್ಲಿ ಆತ ಬದನೆಕಾಯನ್ನು ಬೆಳೆಸಿದ. ಮಳೆ ಕೈಕೊಟ್ಟು ರೋಗಬಾಧೆ ಪೀಡಿಸಿದ್ದರಿಂದ ಬೆಳೆಯ ಇಳುವರಿ ಕಡಿಮೆಯಾಯಿತು. ಕೇವಲ ೨೫ಕೆಜಿ ಬದನೆಕಾಯಿ ಕೊಯ್ಲು ಮಾಡಲಾಯಿತು. ಇದರಲ್ಲಿ ೫ಕೆಜಿ ಮನೆಗೆ ಬಳಸಿದರು. ಉಳಿದದ್ದನ್ನು ಮಾರಾಟ ಮಾಡಿದಾಗ ಆತನಿಗೆ ಸಿಕ್ಕಿದ್ದು ರೂ.೭೫೦.

ಅದೇ ಸಮಯದಲ್ಲಿ ಅರ್ಧ ಎಕರೆಯಲ್ಲಿ ಆತ ಮೆಣಸಿನಕಾಯಿ ಬೆಳೆದ. ಸಾವೆರಿಯಪಟ್ಟಣಂಗೆ ಹೋಗಿದ್ದಾಗ ಅಲ್ಲಿನ ರೈತರು ಅಂತರ್ಜಲದಿAದ ತೆಗೆದ ನೀರನ್ನು (ಲವಣಯುಕ್ತ ನೀರು) ಕೃಷಿಹೊಂಡದ ನೀರಿಗೆ ಬೆರೆಸಿ ಗಿಡಗಳಿಗೆ ಹಾಯಿಸುತ್ತಿದ್ದನ್ನು ಗಮನಿದ್ದ. ಆತ ಕೂಡ ತನ್ನ ಜಮೀನಿನ ಬೆಳೆಗಳಿಗೆ ಇದೇ ರೀತಿ ನೀರನ್ನು ಹಾಯಿಸಿದರು. ನೀರುಹಾಯಿಸುತ್ತಿದ್ದ ಬದುಗಳ ಮೇಲೆ ೧೦ ಅಗಸೆಗಿಡಗಳನ್ನು ನೆಟ್ಟರು. ಇವುಗಳ ನಡುವೆ ಮುಳ್ಳರಿವೆ ಸೊಪ್ಪನ್ನು ಅಂತರಬೆಳೆಯಾಗಿ ನೆಟ್ಟರು. ಅದೇ ರೀತಿ ೨ಕೆಜಿಯಷ್ಟು ಸಣ್ಣ ಈರುಳ್ಳಿಯನ್ನು ಬದುಗಳ ಮೇಲೆ ನೆಟ್ಟರು.

ಮೆಣಸಿನಕಾಯಿ ಗಿಡದ ಪಕ್ಕದಲ್ಲಿ ೫೦ ಸೆಂಟುಗಳಲ್ಲಿ ಹತ್ತಿಯನ್ನು ಬೆಳೆಸಿದರು. ಇಲ್ಲಿಯವರೆಗೆ ಆತ ಹತ್ತಿಯನ್ನು ೧೪ ಬಾರಿ ಕೊಯ್ಲು ಮಾಡಿ ೨,೫೦೦ರೂಪಾಯಿಗಳನ್ನು ಗಳಿಸಿದರು.

ಎಲ್ಲ ಬೆಳೆಗಳನ್ನು ಕೊಯ್ಲು ಮಾಡಿದ ನಂತರ ಮೇವಿನ ಹುಲ್ಲನ್ನು ಬೆಳೆದರು. ಕಳೆಗಿಡಗಳನ್ನು ತಡೆಗಟ್ಟಲು ಆತ ಅಂತರಬೆಳೆಗಳನ್ನು ಬೆಳೆದರು. ಇದರಿಂದ ನೀರು ಹಾಗೂ ಮಣ್ಣಿನ ಫಲವತ್ತತೆಯು ಹೆಚ್ಚಾಯಿತು.

ಇದರೊಂದಿಗೆ ಆತ ಕೃಷಿಹೊಂಡದಲ್ಲಿ ಮೀನುಸಾಕಾಣಿಕೆ ಮಾಡಿದ. ಧನ್ ಫೌಂಡೇಷನ್‌ನವರು ಆಯೋಜಿಸಿದ್ದ ಮೀನುಸಾಕಾಣಿಕೆ ತರಬೇತಿ ಕಾರ್ಯಕ್ರಮದಿಂದ ಇಳಂಗೋವನ್ ತರಬೇತಿ ಪಡೆದರು. ಆತ ವಿವಿಧ ಜಾತಿಯ ಅಂದರೆ ರೊಗೂ, ಮಿರ್ಗಲ್ ಮತ್ತು ಕಟ್ಲಾ ಜಾತಿಯ ೭೫೦ ಮರಿಗಳನ್ನು ತಂದರು. ೭.೫ ಕೆಜಿ ಮೀನುಗಳನ್ನು ಪಡೆದರು. ಇದರಲ್ಲಿ ೫.೫ ಕೆಜಿ ಮೀನುಗಳನ್ನು ಹಳ್ಳಿಯಲ್ಲೇ ಮಾರಿದರು. ಉಳಿದ ೨ ಕೆಜಿಯಷ್ಟು ಮೀನುಗಳನ್ನು ಮನೆಯ ಬಳಕೆಗೆ ಬಳಸಿಕೊಂಡರು.

ಫೋಟೊ : ಧನ್ ಫೌಂಡೇಶನ್ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರನ್ನು ನೀರಿನ ಅಭಾವ ತಲೆದೋರಿದಾಗ ನೀರಾವರಿಗೆ ಬಳಸಲಾಗುವುದು

ಜಲ ಸಂರಕ್ಷಣೆ ಮತ್ತು ಅದರ ಪ್ರಯೋಜನಗಳು

“ಸಾಮಾನ್ಯವಾಗಿ ಮುಂಗಾರು ಮಳೆ ಕೈಕೊಡುತ್ತದೆ. ಬಾವಿ ಅಥವ ಬೋರ್‌ವೆಲ್ ಇರುವವರ ಬಳಿಯಿಂದ ನೀರು ಕೊಂಡುಕೊಳ್ಳುವುದು ಬಹಳ ದುಬಾರಿ. ನಾನು ಪ್ರಯತ್ನಿಸಿದರೂ ಕೂಡ ಕರೆಂಟ್ ಆಗಾಗ ಹೋಗುತ್ತಲೆ ಇರುತ್ತದಾದ್ದರಿಂದ ಯಾರೂ ನೀರು ಕೊಡಲು ಇಷ್ಟಪಡುವುದಿಲ್ಲ. ನೀರಿಲ್ಲದೆ ಬೆಳೆ ಸಾಯುತ್ತಿರುವುದನ್ನು ನೋಡಿ ದುಃಖವಾಗುತ್ತದೆ. ನಾವು ಬೆಳೆಯಷ್ಟೇ ಬೆಳೆಯಬಹುದು ನೀರನ್ನಲ್ಲ! ಸದ್ಯ, ಕೃಷಿಹೊಂಡ ಕಟ್ಟಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ದಾರಿ ಕಂಡುಕೊAಡೆ. ನಾನು ಬೇರೆಯವರ ಹತ್ತಿರ ನೀರಿಗಾಗಿ ಬೇಡಿಕೊಳ್ಳಬೇಕಲ್ಲ” ಎಂದು ಇಳಂಗೋವನ್ ಕೃಷಿಹೊಂಡದ ಬಗ್ಗೆ ಹೇಳುತ್ತಾರೆ.

ಇಳಂಗೋವನ್ ಕೃಷಿಹೊಂಡಗಳ ಮೂಲಕ ಮಳೆನೀರಿನ ಕೊಯ್ಲು ಮಾಡುವುದರಿಂದಾಗುವ ಹಲವು ಉಪಯೋಗಗಳನ್ನು ಅರಿತುಕೊಂಡಿದ್ದಾರೆ. ಕೃಷಿಹೊಂಡದಲ್ಲಿ ಶೇಖರಿಸಿದ ನೀರಿನಿಂದಲೇ ೯೮ ಸೆಂಟು ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಯಿತು (ಒಂದು ಎಕರೆ). ಒಟ್ಟು ಕೃಷಿ ಮಾಡಿದ ಪ್ರದೇಶ ೧೯೧ ಸೆಂಟುಗಳಿಗಿAತಲೂ ಅಧಿಕ. ಆತ ಅಂತರಬೆಳೆ ಹಾಗೂ ಅನುಕ್ರಮವಾಗಿ ಬೆಳೆ ಬೆಳೆಯುವುದನ್ನು ಅಭ್ಯಾಸ ಮಾಡಿಕೊಂಡರು. ನುಗ್ಗೆಗಿಡದ ನಡುವೆ ಅಂತರಬೆಳೆಯಾಗಿ ಚೆಂಡು ಹೂವನ್ನು ಮೆಣಸಿನ ಕಾಯಿಗಳ ನಡುವೆ ಈರುಳ್ಳಿ ಹಾಗೂ ಅಗಸೆ ಸೊಪ್ಪನ್ನು ಬೆಳೆದರು. ಚೆಂಡುಹೂ ಬೆಳೆದ ಪ್ರದೇಶದಲ್ಲೇ ೨೩ ಸೆಂಟುಗಳಲ್ಲಿ ಮೇವಿನ ಹುಲ್ಲನ್ನು ಬೆಳೆದರು. ಈ ರೀತಿ ಮಾಡಿದ್ದರಿಂದ ಹಿಂದೆAದಿಗಿAತಲೂ ಹೆಚ್ಚಿನ ಬೆಳೆ ಬೆಳೆದರು.

ಬೆಳೆಯ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದರಿಂದ ಆತನ ವೆಚ್ಚ ಬಹುಮಟ್ಟಿಗೆ ಕಡಿಮೆಯಾಯಿತು. ಉದಾಹರಣೆಗೆ ಚೆಂಡು ಹೂ ಮತ್ತು ಬದನೆಕಾಯಿ ಗಿಡದ ಎಲೆಗಳನ್ನು ಮೇಕೆಯ ಮೇವಿಗೆ ಬಳಸಲಾಯಿತು. ಜೊತೆಗೆ ಅವರ ಜಮೀನಿನಲ್ಲಿ ಬೆಳೆದ ಅಗಸೆ ಸೊಪ್ಪನ್ನು ಮೇವಿಗೆ ಬಳಸಿದ್ದರಿಂದ ಹಾಲಿನ ಉತ್ಪಾದನೆಯು ಹೆಚ್ಚಾಯಿತು.

ಕೃಷಿಹೊಂಡದಿAದಾಗಿ ಅಂತರ್ಜಲ ಮಟ್ಟವು ಕೂಡ ಹೆಚ್ಚಿತು. ಕೃಷಿಹೊಂಡ ನಿರ್ಮಿಸುವುದಕ್ಕೆ ಮುಂಚೆ ಬೋರ್‌ವೆಲ್‌ನಿಂದ ೨೦-೨೫ ನಿಮಿಷ ಮಾತ್ರ ನೀರು ಎತ್ತಬಹುದಾಗಿತ್ತು ಆದರೆ ಈಗ ೪೦ -೪೫ ನಿಮಿಷ ನೀರನ್ನು ಪಂಪ್ ಮಾಡಬಹುದಾಗಿದೆ.

ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸಿದ್ದರಿಂದ ಕೃಷಿಯ ಬಿಕ್ಕಟ್ಟುಗಳು ಬಹುಮಟ್ಟಿಗೆ ಕಡಿಮೆಯಾದವು. ಈಗ ಆತ ಕೃಷಿಯಿಂದ ಮಾತ್ರವಲ್ಲದೆ, ಜಾನುವಾರು ಹಾಗೂ ಮೀನುಸಾಕಾಣಿಕೆಯಿಂದ ಕೂಡ ಆದಾಯ ಗಳಿಸುತ್ತಿದ್ದಾರೆ (ಕೋಷ್ಟಕ ೧). ಮನೆಯವರಿಗೆ ವೈವಿಧ್ಯಮಯ ಆಹಾರದ ಆಯ್ಕೆ ಹೆಚ್ಚಿದ್ದು ಇದರಿಂದ ಕುಟುಂಬಕ್ಕೆ ಪೌಷ್ಟಿಕಾಂಶಗಳು ಕೂಡ ಹೆಚ್ಚಾಗಿ ದೊರಕುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಅನಿರ್ದಿಷ್ಟ ಮಳೆಯ ನೀರನ್ನು ಕೃಷಿಯಹೊಂಡದಲ್ಲಿ ಶೇಖರಿಸಿಟ್ಟುಕೊಂಡು ಅಗತ್ಯಬಿದ್ದಾಗ ಬಳಸಬಹುದಾಗಿದೆ. ಇಳಂಗೋವನ್ ಮಾರಿಯಮ್ಮನ್ ಸ್ವ ಸಹಾಯ ಸಂಘ ಹಾಗೂ ಹಳ್ಳಿ ಮಟ್ಟದ ಹವಾಮಾನ ಬದಲಾವಣೆ ಅಳವಡಿಕೆ ಅಸೋಸಿಯೇಷನ್‌ನ ಸದಸ್ಯನಾಗಿದ್ದು ಈ ಗುಂಪುಗಳನ್ನು ತನ್ನ ಐಡಿಯಾಗಳನ್ನು ಹಂಚಿಕೊಳ್ಳಲು, ಸಲಹೆಗಳನ್ನು ಪಡೆಯಲು ಹಾಗೂ ಇತರರಿಗೆ ಸ್ಪೂರ್ತಿತುಂಬಲು ವೇದಿಕೆಯಾಗಿ ಬಳಸುತ್ತಿದ್ದಾನೆ.

Adhinarayanan R

Program Leader,

Climate Change Adaptation Programme

DHAN Foundation

1 A, Vaidhyanathapuram East

Kennet Cross Road

Madurai 625016.

Tamil Nadu, India

E-mail: aadhi@dhan.org

ಆಂಗ್ಲ ಮೂಲ :
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೨ , ಜೂನ್ ೨೦೧೭

Recent Posts

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಉತ್ತೇಜಿಸುವುದು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನಡೆಸುತ್ತಿರುವ ವ್ಯವಹಾರಗಳು ಮುಂದುವರೆಯುವಂತೆ ನೋಡಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿನ ಬಳಕೆಯಾಗದೆ ಉಳಿದ ಸಾಮರ್ಥ್ಯವು ಬಳಕೆಯಾಗುತ್ತದೆ. ಬಡತನವನ್ನು ಕಡಿಮೆ ಮಾಡುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಿಂಗ ಸಮಾನತೆಯಿರುವ ಸಮಾಜವನ್ನು ನಿರ್ಮಿಸುತ್ತದೆ.

ಪ್ರಯೋಜನಕಾರಿ ಕೀಟಗಳ ಬಗ್ಗೆ ಪ್ರಚಾರ- ಪರಾಗಸ್ಪರ್ಶಕಗಳ ಸಂರಕ್ಷಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು

ಪ್ರಯೋಜನಕಾರಿ ಕೀಟಗಳ ಬಗ್ಗೆ ಪ್ರಚಾರ- ಪರಾಗಸ್ಪರ್ಶಕಗಳ ಸಂರಕ್ಷಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು

ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕ ಕೀಟಗಳ ಜನಸಂಖ್ಯೆಯನ್ನು ಹೆಚ್ಚಿಸಲು BAIF ನ ಆರಂಭಿಕ ಉಪಕ್ರಮಗಳು ಪರಾಗಸ್ಪರ್ಶ ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಕೃಷಿ ಪರಿಸರ ಸಂರಕ್ಷಣೆಯ ಭವಿಷ್ಯದ ಸಂರಕ್ಷಕರಾಗಲು ಯುವಕರನ್ನು ಸಬಲೀಕರಣಗೊಳಿಸಿವೆ.

ಉಪಗ್ರಹ ಆಧಾರಿತ ನಿಖರ ಕೃಷಿ ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಸೇತುವೆ

ಉಪಗ್ರಹ ಆಧಾರಿತ ನಿಖರ ಕೃಷಿ ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಸೇತುವೆ

ಫಾರ್ಮೋನಾಟ್‌ನ ಉಪಗ್ರಹ ಆಧಾರಿತ ನಿಖರ ಕೃಷಿ ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ – ಇದು ರೂಪಾಂತರದ ಬಗ್ಗೆ. ಅತ್ಯಾಧುನಿಕ ಪರಿಕರಗಳನ್ನು ರೈತರ ಕಾಲಾತೀತ ಸ್ಥಿತಿಸ್ಥಾಪಕತ್ವದೊಂದಿಗೆ ಸಂಯೋಜಿಸುವ ಮೂಲಕ, ಈ ವಿಧಾನವು ಕೃಷಿಯು ಹೆಚ್ಚು ಸುಸ್ಥಿರ, ಉತ್ಪಾದಕ ಮತ್ತು ಲಾಭದಾಯಕವಾಗಿರುವ ಭವಿಷ್ಯವನ್ನು ಸೃಷ್ಟಿಸುತ್ತಿದೆ.

YouTube
Instagram
WhatsApp