ಕಿರುಧಾನ್ಯಗಳ ಪುನಶ್ಚೇತನ – ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ಖಾತ್ರಿ


ಕಿರುಧಾನ್ಯ ಆಧಾರಿತ ಬೆಳೆಪದ್ಧತಿಯು ಸ್ಥಳೀಯ ಕೃಷಿಪರಿಸರಕ್ಕೆ ಸೂಕ್ತವಾಗಿದ್ದು ಕಾಲದ ಪರೀಕ್ಷೆಯಲ್ಲಿ ಹಾಗೂ ಅತಿರೇಕ ಹವಾಮಾನ ಪರಿಸ್ಥತಿಗಳಲ್ಲಿ ಗೆದ್ದಿದೆ. ಬುಡಕಟ್ಟು ಸಮುದಾಯಗಳಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಎದರಿಸಲು ಇಂತಹ ಕೃಷಿ ವ್ಯವಸ್ಥೆಗಳನ್ನು ಪೋಷಿಸುವುದು ನಿರ್ಣಾಯಕವಾಗಿದೆ.


ಕಿರುಧಾನ್ಯಗಳು ಒರಿಸ್ಸಾದ ಸ್ಥಳೀಯ ಸಮುದಾಯಗಳ ದಿನನಿತ್ಯದ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಇವು ಹವಾಮಾನ ಸ್ಥಿತಿಸ್ಥಾಪಕ ಗುಣವನ್ನು ಹೊಂದಿದ್ದು, ಕಡಿಮೆ ನೀರಿನಲ್ಲೇ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಅವು ಸಣ್ಣ ಹಾಗೂ ಮಧ್ಯಮ ಗಾತ್ರದ ರೈತರಿಗೆ ಆಹಾರ ಭದ್ರತೆ ಹಾಗೂ ಪೌಷ್ಟಿಕಾಂಶದ ಮೂಲವಾಗಿದೆ.

ಸ್ಥಳೀಯ ಸಮುದಾಯಗಳು ಬೆಟ್ಟದ ಇಳಿಜಾರುಗಳ ಉದ್ದಕ್ಕೂ ಮತ್ತು ಎತ್ತರದ ಪ್ರದೇಶಗಳಲ್ಲಿ ಕೃಷಿ ಪದ್ಧತಿಯ ಬದಲಾವಣೆ ಮಾಡುತ್ತವೆ. ಅಲ್ಲಿ ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬೆಳೆಯನ್ನು ಬೆಳೆಯಲಾಗುತ್ತದೆ. ಬಹುಪಾಲು ರೈತರು ಮನೆಯ ಮಟ್ಟಿಗಿನ  ಬಳಕೆಗಾಗಿ ಬೆಳೆ ಬೆಳೆಯಲು ಕೃಷಿಯನ್ನು ಅಭ್ಯಾಸ ಮಾಡುತ್ತಾರೆ. ಕೇವಲ 10- 20% ಕೃಷಿ ಉತ್ಪನ್ನವನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಅವರು ಮಿಶ್ರ ಬೇಸಾಯ ಮತ್ತು ಸರದಿಯಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇದು ಸ್ಥಳೀಯ ಕೃಷಿ ಪರಿಸರಕ್ಕೆ ಸೂಕ್ತವಾಗಿರುತ್ತದೆ. ಈ ಬೆಳೆ ಪದ್ಧತಿಗಳು ಸಮಯ ಮತ್ತು ಹವಾಮಾನ ವೈಪರೀತ್ಯಗಳ ಪರೀಕ್ಷೆಯನ್ನು ಎದುರಿಸಿ ಗೆದ್ದಿವೆ. ಕಳೆದ ಎರಡು ದಶಕಗಳಿಂದ ದೈನಂದಿನ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಲಾಗಿದೆ. ಹೆಚ್ಚಿನ ಗ್ರಾಮೀಣ ಕುಟುಂಬಗಳು ಅಕ್ಕಿಗೆ ಆದ್ಯತೆ ನೀಡುತ್ತವೆ, ಇದು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸುಲಭವಾಗಿ ಲಭ್ಯವಿದೆ. ಜೀವನಾಧಾರ ಕೃಷಿಯ ಜೊತೆಗೆ, ಸ್ಥಳೀಯ ಸಮುದಾಯಗಳು ಮರವನ್ನು ಹೊರತುಪಡಿಸಿದ ಉತ್ಪನ್ನಗಳಿ ಗಾಗಿ (NTFP) ಅರಣ್ಯವನ್ನು ಅವಲಂಬಿಸಿವೆ. ಕಂಧಮಾಲ್‌ನ ಹೆಚ್ಚಿನ ಬಡ ಕುಟುಂಬಗಳಿಗೆ ಸಂಕಷ್ಟದ ವಲಸೆಯು ವಾಸ್ತವವಾಗಿದೆ.

ಕೈಗೊಳ್ಳಲಾದ ಉಪಕ್ರಮ

2012 ರಲ್ಲಿ, NIRMAN ಮಿಶ್ರ, ಜೀವವೈವಿಧ್ಯ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಪರಿಸರ ಕೃಷಿಯನ್ನು ಉತ್ತೇಜಿಸಲು ಸ್ಥಳೀಯ ಸಮುದಾಯಗಳೊಂದಿಗೆ ತನ್ನ ಕೆಲಸವನ್ನು ಪ್ರಾರಂಭಿಸಿತು. ಮೊದಲ ಹಂತವಾಗಿ, ಮೂಲ ಮಾಹಿತಿ ಸಂಗ್ರಹಿಸಲು ಎಲ್ಲಾ ಗ್ರಾಮಗಳಲ್ಲಿ ಭಾಗವಹಿಸುವ ಗ್ರಾಮೀಣ ಮೌಲ್ಯಮಾಪನ (PRA) ನಡೆಸಲಾಯಿತು. ಮನೆಯ ಆದಾಯ, ಅನುಸರಿಸಿದ ಸ್ಥಳೀಯ ಕೃಷಿ ಪದ್ಧತಿಗಳ ಸ್ವರೂಪ, ಬೀಜ ವೈವಿಧ್ಯತೆಯ ಪ್ರಮಾಣ ಮುಂತಾದ ವಿವಿಧ ಅಂಶಗಳ ಮಾಹಿತಿ. ಸಮುದಾಯಗಳನ್ನು ತಮ್ಮ ಸ್ಥಳೀಯ ಕೃಷಿ ಪದ್ಧತಿಗಳು ಮತ್ತು ಸುಸ್ಥಿರ ಕೃಷಿಯನ್ನು ಪುನರುಜ್ಜೀವನಗೊಳಿಸಲು ಪ್ರೇರೇಪಿಸಲು, ಸ್ಥಳೀಯ ಬೆಳೆ ವೈವಿಧ್ಯತೆಯ ಕುಸಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಗ್ರಾಮ ಮಟ್ಟದ ಸಭೆಯನ್ನು ಆಯೋಜಿಸಲಾಗಿದೆ.

ನಯಾಗಢ್ ಮತ್ತು ಕಂಧಮಾಲ್ ಜಿಲ್ಲೆಗಳ ಕೆಲವು ಮಹಿಳೆಯರು ಈ ಪ್ರದೇಶದಲ್ಲಿನ ಕಿರುಧಾನ್ಯಗಳ ಕೃಷಿಯಲ್ಲಿನ ವಿವಿಧ ಸವಾಲುಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಇವುಗಳನ್ನು ಬೆಳೆಯುವ ಪ್ರದೇಶದಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು ಬೆಳೆಗಳ ಇಳುವರಿಯಲ್ಲಿ ಇಳಿಕೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ಕೃಷಿ ಪ್ರದೇಶವು ಶೇ 25-30% ರಷ್ಟು ಮತ್ತು ಬೆಳೆಯ ಇಳುವರಿ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ದೇಸಿ ತಳಿಗಳ ಬೀಜಗಳು ಸಿಗದಿರುವುದು, ಅರಣ್ಯ ಇಲಾಖೆಯಿಂದ ಬೆಟ್ಟದ ಇಳಿಜಾರಿನಲ್ಲಿ “ಪೋಡು ಚಾಸ್” ಕೈಗೊಳ್ಳಲು ನಿರ್ಬಂಧಗಳು, ದೊಡ್ಡ ಪ್ರಮಾಣದ ಅರಣ್ಯನಾಶ ಮತ್ತು ವೇಗವಾಗಿ ಆಗುತ್ತಿರುವ ಮಣ್ಣಿನ ಸವಕಳಿ.

ಯೋಜನೆಯ ಮಧ್ಯಸ್ಥಿಕೆಯ ಮೊದಲ ವರ್ಷದಲ್ಲಿ ರಾಗಿ ಆಧಾರಿತ ಮಿಶ್ರ ಬೇಸಾಯದ ತರಬೇತಿಗಳನ್ನು ನಡೆಸಲಾಯಿತು. ಎರಡನೇ ವರ್ಷದಲ್ಲಿ, ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಗ್ರಾಮ ಮಟ್ಟದ ತರಬೇತಿಗಳನ್ನು ನೀಡಲಾಯಿತು. ಸ್ಥಳೀಯ ಮಿಶ್ರ ಮತ್ತು ಜೀವವೈವಿಧ್ಯ ಕೃಷಿ ಪದ್ಧತಿ ಮತ್ತು ಬೀಜ ವೈವಿಧ್ಯತೆಯನ್ನು ಮರುಸ್ಥಾಪಿಸುವ ಅಗತ್ಯದ ಬಗ್ಗೆ ಗಮನ ಕೇಂದ್ರೀಕರಿಸಲಾಯಿತು. ಈ ಮಧ್ಯಸ್ಥಿಕೆಯ ಪ್ರಮುಖ ಕಾರ್ಯತಂತ್ರವೆಂದರೆ ಮಹಿಳಾ ನೇತೃತ್ವದ ವಿಧಾನಗಳನ್ನು ಉತ್ತೇಜಿಸುವುದು, ಆಹಾರ ಉತ್ಪಾದನಾ ವ್ಯವಸ್ಥೆಯ ಮೇಲೆ ಅವರ ನಿಯಂತ್ರಣವನ್ನು ಪ್ರತಿಪಾದಿಸುವುದು. ಕೃಷಿ-ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು.

ಮಹಿಳೆಯರೊಂದಿಗೆ ಗ್ರಾಮ ಸಭೆ ನಡೆಸಲಾಯಿತು. ಗ್ರಾಮ ಮಟ್ಟದ ಸಂಸ್ಥೆಗಳಿಗೆ (VLIs) ಬಡ್ತಿ ನೀಡಲಾಯಿತು. ಸುಮಾರು 21 ವಿಎಲ್‌ಐಗಳನ್ನು ರಚಿಸಲಾಯಿತು. ಸದಸ್ಯರಿಗೆ ಕಿರುಧಾನ್ಯ ಆಧಾರಿತ ಸಮುದಾಯ ಬೀಜ ಬ್ಯಾಂಕ್‌ಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಯಿತು. ಪ್ರಸ್ತುತ ಸುಮಾರು 27 ಸಮುದಾಯ ಆಧಾರಿತ ಬೀಜ ಬ್ಯಾಂಕ್‌ಗಳನ್ನು ರಚಿಸಲಾಗಿದ್ದು, 27 ಗ್ರಾಮಗಳಲ್ಲಿ ಸುಮಾರು 600 ರೈತರಿಗೆ ಬೆಂಬಲ ನೀಡಲಾಗುತ್ತಿದೆ. ಸ್ಥಳೀಯವಾಗಿ ಆಯ್ಕೆ ಮಾಡಲಾದ 12 ದೇಸಿ ಬೆಳೆಗಳ ಬೀಜಗಳನ್ನು ಅಲ್ಲಿನ ಸಮುದಾಯಗಳಿಗೆ ಒಂದು ಬಾರಿ ಬೀಜ-ಬಂಡವಾಳವಾಗಿ, ಸಂರಕ್ಷಣೆಗಾಗಿ  ಸರಬರಾಜು ಮಾಡಲಾಯಿತು. ಈ 12 ಬೆಳೆ ಪ್ರಭೇದಗಳನ್ನು ಒಂದು ಬೆಳೆ ಋತುವಿನಲ್ಲಿ ಪುನರುಜ್ಜೀವನಗೊಳಿಸಲಾಯಿತು.

ಸ್ಥಳೀಯ ಮಿಶ್ರ ಬೇಸಾಯ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗವಾಗಿ ಮಹಿಳೆಯರಿಗೆ ಈ ಪದ್ಧತಿಯನ್ನು ಅಭ್ಯಾಸ ಮಾಡಲು ಪ್ರೋತ್ಸಾಹಿಸಲಾಯಿತು. ಬೀಜ ವೈವಿಧ್ಯತೆಯನ್ನು ಮರುಸ್ಥಾಪಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಯಿತು. ಮಹಿಳಾ ನೇತೃತ್ವದ ವಿಧಾನಗಳನ್ನು ಉತ್ತೇಜಿಸುವುದು ಇದರ ಪ್ರಮುಖ ತಂತ್ರವಾಗಿತ್ತು.

ಸಮುದಾಯಗಳನ್ನು ಮೇಲಿನ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿ ಕಿರುಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಯಿತು. ಮಿಲೆಟ್‌ ಮಿಷನ್‌ ಪ್ರಾಜೆಕ್ಟ್‌ ಅಡಿಯಲ್ಲಿ ಈ ಪ್ರದೇಶದಲ್ಲಿ ಮುಖ್ಯ ಕಿರುಧಾನ್ಯಗಳಿಗೆ ಪ್ರೋತ್ಸಾಹ ದೊರಕಿದೆ. ಎತ್ತರದ ಪ್ರದೇಶಗಳಲ್ಲಿನ ಬಹುತೇಕ ಸಣ್ಣ ಹಾಗೂ ಅತಿಸಣ್ಣ ರೈತರು ಆಹಾರ ಭದ್ರತೆಗಾಗಿ ಭತ್ತದ ಕೃಷಿಗೆ ಒತ್ತು ನೀಡುತ್ತಾರೆ. ಭತ್ತದೊಂದಿಗೆ ಇನ್ನೊಂದು ಬೆಳೆಯನ್ನು ಬೆಳೆಯುವುದು ಬೆಳೆ ವೈವಿಧ್ಯತೆಗೆ ಹೆಚ್ಚು ಸೂಕ್ತ ಎಂದು ಪರಿಗಣಿಸಲಾಯಿತು. ವಿವಿಧ ಸಂಯೋಜನೆಯ ಮಿಶ್ರ ಬೆಳೆಗಳನ್ನು ಜನಪ್ರಿಯಗೊಳಿಸಲಾಗುತ್ತಿದೆ.

ಮಿಲ್ಲೆಟ್ ಮಿಷನ್ ಅಡಿಯಲ್ಲಿ ನಗದು ವರ್ಗಾವಣೆಯ ಸಬ್ಸಿಡಿಯನ್ನು ಪಡೆಯುವ ಸಿಸ್ಟಂ ಆಫ್ ಮಿಲೆಟ್ ಇಂಟೆನ್ಸಿಫಿಕೇಶನ್ (SMI) ಅಳವಡಿಸಿಕೊಳ್ಳಲು ನಿರ್ಮಾಣ್ ಸಮುದಾಯಗಳನ್ನು ಪ್ರೇರೇಪಿಸಿತು. ಇದು ಮಿಲೆಟ್ಸ್ ಮಿಷನ್ ಯೋಜನೆಯಡಿಯಲ್ಲಿನ ಬಹುತೇಕ ಗ್ರಾಮಗಳಲ್ಲಿ ರಾಗಿ ಬೆಳೆಯುವ ಪ್ರದೇಶ ಮತ್ತು ಇಳುವರಿಯ ಹೆಚ್ಚಳಕ್ಕೆ ಕಾರಣವಾಗಿದೆ.

ದೂರದಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಕಿರುಧಾನ್ಯಗಳ ಸಂಸ್ಕರಣೆಗೆ ಸೌರಶಕ್ತಿ ಆಧಾರಿತ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ ರೈತಗುಂಪುಗಳಿಗೆ ಬೆಂಬಲ ನೀಡಿತು. ಮಹಿಳಾ ಗುಂಪುಗಳು ಉತ್ತಮ ಆದಾಯ ಗಳಿಸುವ ಸಲುವಾಗಿ ಧಾನ್ಯಗಳ ಒಗ್ಗೂಡಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತು ಮಾರ್ಕೆಟಿಂಗ್‌ನಲ್ಲಿ ತೊಡಗಿಸಿಕೊಂಡರು.

ಕೊಯ್ಲಿನ ನಂತರದ ಕೆಲಸಗಳಿಗೆ ಅಗತ್ಯವಾದ ಯಂತ್ರಗಳನ್ನು ಬಾಡಿಗೆಗೆ ನೀಡುವ ಕೇಂದ್ರಗಳನ್ನು ಕ್ಲಸ್ಟರ್‌ ಮಟ್ಟದಲ್ಲಿ ಸ್ಥಾಪಿಸಲಾಯಿತು.

ಒಡಿಶಾ ಮಿಲ್ಲೆಟ್ ಮಿಷನ್ ಅಡಿಯಲ್ಲಿ ಸರ್ಕಾರವು ಈಗ ರಾಗಿಯನ್ನು ಖರೀದಿಸುತ್ತಿದೆ. ರಾಗಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದರೂ, ಇನ್ನಿತರ ಕಿರುಧಾನ್ಯಗಳಿಗೆ ಸರ್ಕಾರದಿಂದ ಇನ್ನೂ ಬೆಂಬಲಬೆಲೆ ಘೋಷಿಸಿಲ್ಲ. ಕಿರುಧಾನ್ಯಗಳು ಈಗ ಪೈಲಟ್ ಆಧಾರದ ಮೇಲೆ ರಾಜ್ಯದಲ್ಲಿ PDS ಮತ್ತು MDM ಯೋಜನೆಗಳ ಭಾಗವಾಗಿದೆ. ವಿವಿಧ ಪಟ್ಟಣಗಳು ​​ಮತ್ತು ನಗರಗಳಲ್ಲಿನ ಸರ್ಕಾರಿ ಮಳಿಗೆಗಳಲ್ಲಿ ಕಿರುಧಾನ್ಯಗಳನ್ನು ಮಾರಾಟ ಮಾಡಲಾಗುತ್ತದೆ. ಮಿಷನ್ ಶಕ್ತಿ/OLM ನಂತಹ ಕೆಲವು ಸರ್ಕಾರಿ ಮಾರ್ಕೆಟಿಂಗ್ ಏಜೆನ್ಸಿಗಳು ಮತ್ತು ORMAS ಮತ್ತು TRIFED ನಂತಹ ಕೆಲವೇ ಕೆಲವು ಖಾಸಗಿ ಕಂಪನಿಗಳಿವೆ. ಕಿರುಧಾನ್ಯಗಳ ಅಂತರಾಷ್ಟ್ರೀಯ ಮಾರುಕಟ್ಟೆ ಈಗಷ್ಟೇ ಅಭಿವೃದ್ಧಿ ಹೊಂದುತ್ತಿದೆ. ಕೆಲವರು ಇತ್ತೀಚೆಗೆ ಡಿಜಿಟಲ್‌ ಮಾರ್ಕೆಟಿಂಗ್‌ ಚಾನಲ್‌ಗಳನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ, ಮುಖ್ಯವಾಗಿ ಜರ್ಮನಿಯಂತಹ ದೇಶಗಳೊಂದಿಗೆ ಸಂಪರ್ಕ ಸಾಧಿಸಲು ಆರಂಭಿಸಿದ್ದಾರೆ.

ಫಲಿತಾಂಶಗಳು ಮತ್ತು ಪರಿಣಾಮ

ಸ್ಥಳೀಯ ಬೆಳೆಗಳ ಪುನರುಜ್ಜೀವನ, ಸಮುದಾಯ ಆಧಾರಿತ ಬೀಜ ಬ್ಯಾಂಕ್‌ಗಳ ನಿರ್ವಹಣೆ ಮತ್ತು ಸ್ಥಳೀಯ ಕೃಷಿ-ಜೀವವೈವಿಧ್ಯದ ಸಂರಕ್ಷಣೆಯಲ್ಲಿ ಮಹಿಳಾ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕಂಧಮಾಲ್ ಮತ್ತು ನಯಾಗರ್ ಜಿಲ್ಲೆಗಳಲ್ಲಿ ಜಂಟಿಯಾಗಿ ಬೀಜ ಉತ್ಸವಗಳನ್ನು ಆಯೋಜಿಸಲಾಗಿದ್ದು, ಪರಸ್ಪರ ರೈತರ ನಡುವೆ ಸಂವಹನ, ಜ್ಞಾನ ವರ್ಗಾವಣೆ ಮತ್ತು ಸಾಂಪ್ರದಾಯಿಕ ಉತ್ತಮ ತಳಿಗಳ ವಿನಿಮಯಕ್ಕೆ ಅನುಕೂಲವಾಗುತ್ತದೆ. ಪರಿಸರ ಕೃಷಿ ಪದ್ಧತಿಗಳು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ಸಾವಯವ ಕೃಷಿಯ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಲು ರೈತರಲ್ಲಿ ಜಾಗೃತಿ ಮತ್ತು ಆಸಕ್ತಿ ಹೆಚ್ಚುತ್ತಿದೆ.

ಕೋಷ್ಟಕ : ಕಿರುಧಾನ್ಯಗಳ ಕೃಷಿ ದತ್ತಾಂಶ 2021-22, ನಿರ್ಮಾಣ್‌, ಒರಿಸ್ಸಾ

ಕ್ರಮ ಸಂಖ್ಯೆ ಬ್ಲಾಕ್ ಒಳಗೊಂಡ ಹಳ್ಳಿಗಳ ಸಂಖ್ಯೆ ಒಳಗೊಂಡ ರೈತರ ಸಂಖ್ಯೆ ಒಳಗೊಂಡ ಒಟ್ಟು ಪ್ರದೇಶ ಹೆಕ್ಟೇರ್ನಲ್ಲಿ

 

ಒಟ್ಟು ಸಂಗ್ರಹಿಸಲಾದ ಹೆಚ್ಚುವರಿ ರಾಗಿ (TDCC ಮೂಲಕ) ಕ್ವಿಂಟಾಲ್ಗಳಲ್ಲಿ ಸಂಗ್ರಹಣೆಯ ಮೂಲಕ ಪಡೆದ ಒಟ್ಟು ಹಣ (ರೂಗಳಲ್ಲಿ)

 

ರೈತರ ಖಾತೆಗೆ ವರ್ಗಾಯಿಸಲಾದ ಒಟ್ಟು ಪ್ರೋತ್ಸಾಹಧನ (ರೂಗಳಲ್ಲಿ)
1 ತುಮುಡಿಬಂಧ 212 2255 1081.4 3850.69 12965755.1 1659800
2 ಕೋಟಗಡ 75 1096 700.2 3762. 74 4798142.9 1602000
3 ದಾಸಪಲ್ಲ (1ನೇ ವರ್ಷ) 22 496 190.95 0 0 1699659
4 ಕೆ.ಸಿಂಗ್‌ಪುರ 57 1675 1075 2500 8442500 1069000
ಒಟ್ಟು 366 5522 3047.55 10113.43 26206398 6030459

ಪ್ರಸ್ತುತ, ಸಮುದಾಯ ಆಧಾರಿತ ಬೀಜ ಬ್ಯಾಂಕ್‌ಗಳು ರಾಗಿ, ಜೋಳ, ದ್ವಿದಳ ಧಾನ್ಯಗಳು, ತರಕಾರಿಗಳು ಮತ್ತು ತಿನ್ನಬಹುದಾದ ಗೆಡ್ಡೆಗಳನ್ನು ಒಳಗೊಂಡಿರುವ 55 ಸ್ಥಳೀಯ ಬೆಳೆಗಳ ಸಾಂಪ್ರದಾಯಿಕ ಬೀಜಗಳನ್ನು ನಿರ್ವಹಿಸುತ್ತಿವೆ. ಸಮುದಾಯಗಳು ಈ 7 ಬಗೆಯ ದೇಸಿ ಭತ್ತ, 6 ಬಗೆಯ ದೇಸಿ ಮೆಕ್ಕೆಜೋಳ, 3 ಬಗೆಯ ರಾಗಿ, 3 ಬಗೆಯ ಸಾಮೆ, 2 ಬಗೆಯ ಜೋಳ, 4 ಬಗೆಯ ತೊಗರಿ, 2 ಬಗೆಯ ಅಲಸಂದೆ, 3 ಬಗೆಯ ರೈಸ್‌ ಬೀನ್‌, 4 ಬಗೆಯ ಅವರೆ, 2 ಬಗೆಯ ಉದ್ದಿನ ಬೇಳೆ, ಹುರಳಿ ಮತ್ತು 17 ವಿಧದ ತಿನ್ನಬಹುದಾದ ಗಡ್ಡೆಗಳನ್ನು ಕಿರುಧಾನ್ಯ ಆಧಾರಿತ ಮಿಶ್ರಕೃಷಿ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ.

ಉಪಸಂಹಾರ

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಮತ್ತು ದೀರ್ಘಕಾಲದ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಬುಡಕಟ್ಟು ಪ್ರದೇಶಗಳಲ್ಲಿ ಕಿರುಧಾನ್ಯಗಳು ಮತ್ತು ಮಹಿಳೆಯರ ನಡುವಿನ ಬಂಧವು ಅತ್ಯಗತ್ಯವಾದದ್ದು. ಕಿರುಧಾನ್ಯಗಳ ಪುನಶ್ಚೇತನವು ಬಡವರ ಅಪೌಷ್ಟಿಕತೆಯನ್ನು ತಗ್ಗಿಸುವ ವರವಾಗಿದೆ.

ಉತ್ತಮ ಮಾರುಕಟ್ಟೆ ತಂತ್ರಗಳೊಂದಿಗೆ ಕಿರುಧಾನ್ಯಗಳ ದೇಸಿ ತಳಿಗಳ ಕೃಷಿ, ನಿರ್ವಹಣೆ ಮತ್ತು ಪ್ರಸರಣವನ್ನು ಉತ್ತೇಜಿಸಲು ತಂತ್ರಗಳನ್ನು ವಿನ್ಯಾಸಗೊಳಿಸುವುದು ಮುಖ್ಯ. ಹೀಗೆ ಮಾಡುವುದರಿಂದ ಅವುಗಳ ಕೃಷಿಯನ್ನು ನಗದು ಬೆಳೆಗಳಿಗೆ ಹೋಲಿಸಬಹುದು. ಈ ಆಯ್ಕೆಗಳು ಹವಾಮಾನ ಬದಲಾವಣೆಯ ದೃಷ್ಟಿಯಿಂದ ಸಾಕಷ್ಟು ಪ್ರದೇಶಗಳಲ್ಲಿ ಇನ್ಸಿತು ವಿಕಸನ ನಿರ್ವಹಣೆಗೆ ಸಹಾಯ ಮಾಡಬಹುದು.

ಕಿರುಧಾನ್ಯಗಳ ಬೇಸಾಯವು ಅದರ ಹಲವಾರು ಪ್ರಯೋಜನಗಳಿಂದಾಗಿ, ಮಿಲ್ಲೆಟ್ ಮಿಷನ್, ಸ್ಥಳೀಯ ಎನ್‌ಜಿಒಗಳು ಮತ್ತು ಒಡಿಶಾದ ರೈತ ಸಂಘಟನೆಗಳಿಂದ ಪೂರ್ವಭಾವಿಯಾಗಿ ಉತ್ತೇಜಿಸಲ್ಪಟ್ಟಿದೆ. ಆದರೂ, ಇದರ ಸಂಪೂರ್ಣ ವಾಣಿಜ್ಯ ವಿಧಾನವು ಏಕಬೆಳೆಗೆ ಕಾರಣವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇದರಿಂದ ಬೆಳೆ ವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿದೆ.


Ravi Shankar Behera
Consultant, NIRMAN
2D-1, Metro Mansion Apartments,
Rabi Talkies Chak, Old Town,
Bhubaneswar-751014
Odisha
E-mail: rsbehera@rediffmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್‌ ೨೦‌೨‌೩

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp