ತರಕಾರಿ ಕೃಷಿಯಲ್ಲಿನ ವಿನೂತನ ತಂತ್ರಜ್ಞಾನ ಹೊದಿಕೆ ವಿಧಾನ


ರೈತರು ತಮ್ಮ ಮಣ್ಣು, ಬೆಳೆಗಳನ್ನು ಸಂರಕ್ಷಿಸುವ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುವ ಸಂದರ್ಭದಲ್ಲಿ ನೀರು ನಿಲ್ಲುವ ಪರಿಸ್ಥಿತಿಗಳು, ಬರಗಾಲದ ಪರಿಸ್ಥಿತಿಗಳನ್ನು ಎದುರಿಸಲು ರೈತರಿಗೆ ನವೀನ ತಂತ್ರಜ್ಞಾನವು ಹೇಗೆ ಸಹಾಯ ಮಾಡಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.


ಸಂದರ್ಭ ಮತ್ತು ಅಗತ್ಯ

ಪೂರ್ವ ಉತ್ತರ ಪ್ರದೇಶ ಮತ್ತು ಉತ್ತರ ಬಿಹಾರ ಪ್ರದೇಶಗಳಲ್ಲಿ ಪ್ರತಿ ವರ್ಷ ಎರಡರಿಂದ ಮೂರು ತಿಂಗಳು ಪ್ರವಾಹ ಮತ್ತು ನೀರು ನಿಲ್ಲುವ ಪರಿಸ್ಥಿತಿಗಳು ಮತ್ತೆ ಮತ್ತೆ ಎದುರಾಗುತ್ತದೆ. ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಮುಂಬರವ ದಿನಗಳಲ್ಲಿ ಈ ಪ್ರದೇಶದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಊಹಿಸಲಾಗಿದೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಳೆದ 8 ರಿಂದ 10 ವರ್ಷಗಳಲ್ಲಿ, ಗಂಗಾ ಬಯಲು ಪ್ರದೇಶದಲ್ಲಿ, ಒಂದು ಮಳೆ ಮತ್ತು ಇನ್ನೊಂದು ಮಳೆಯ ನಡುವೆ 15-20 ದಿನಗಳ ದೀರ್ಘವಾದ ಶುಷ್ಕ ವಾತಾವರಣವು ಸಾಮಾನ್ಯ ಘಟನೆಯಾಗಿದೆ.

ದತ್ತಾಂಶ ವಿಶ್ಲೇಷಣೆಯು ಗರಿಷ್ಠ ಮಳೆಯು (24 ಗಂಟೆಗಳಲ್ಲಿ 64.5 ಮಿಮೀಗಿಂತ ಹೆಚ್ಚು) ಸುಮಾರು 10 ರಿಂದ 20 ಪ್ರತಿಶತದಷ್ಟು ಹೆಚ್ಚಿರುತ್ತದೆ ಎಂದು ಸೂಚಿಸಿದೆ. 24 ಗಂಟೆಗಳಲ್ಲಿ 100 ಮಿಮೀ ಮಳೆಯ ನಂತರ ಗೋರಖ್‌ಪುರ ಮತ್ತು ಪಶ್ಚಿಮ ಚಂಪಾರಣ್‌ನ ತಗ್ಗು ಪ್ರದೇಶಗಳಲ್ಲಿ ಪ್ರವಾಹವು ಹೆಚ್ಚಾಗಿ ಸಂಭವಿಸುತ್ತದೆ ಎಂದು ಇನ್‌ ಸಿತು ಅವಲೋಕನಗಳು ಸೂಚಿಸುತ್ತವೆ. ಕೆಟ್ಟ ಒಳಚರಂಡಿ ವ್ಯವಸ್ಥೆಗಳಿಂದಾಗಿ ಇಳಿಜಾರಿನಲ್ಲಿರುವ ಫಲವತ್ತಾದ ಕೃಷಿ ಭೂಮಿಯಲ್ಲಿ ನೀರು ನಿಲ್ಲುವ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ.

ಇದರ ಪರಿಣಾಮವಾಗಿ, ವಿಶೇಷವಾಗಿ, ಸಣ್ಣ ಮತ್ತು ಕನಿಷ್ಠ ತರಕಾರಿ ಬೆಳೆಗಾರರು ನಷ್ಟವನ್ನು ಅನುಭವಿಸುತ್ತಾರೆ. ಹೆಚ್ಚಿದ ಮುಳುಗಡೆಯು ಬೇಸಿಗೆ ಬೆಳೆಗಳು (ಖಾರಿಫ್) ಮತ್ತು ಚಳಿಗಾಲದ ಬೆಳೆಗಳ (ರಬಿ) ಬಿತ್ತನೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಸಣ್ಣ ಮತ್ತು ಅತಿ ಸಣ್ಣ ರೈತರ ಆಹಾರ ಮತ್ತು ಆದಾಯದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಅವರಲ್ಲಿ 75 ಪ್ರತಿಶತದಷ್ಟು ತರಕಾರಿ ಬೆಳೆಗಾರರು, ಚಳಿಗಾಲದಲ್ಲಿ ನಾಟಿ ಮಾಡಲು ಬೇಸಿಗೆಯಲ್ಲಿ ನರ್ಸರಿಗಳಲ್ಲಿ ಬೆಳೆಗಳನ್ನು ಬೆಳೆಸುವುದು ವ್ಯಾಪಕವಾಗಿ ನೀರು ನಿಲ್ಲುತ್ತಿರುವುದರಿಂದ ಕಷ್ಟವಾಗಿದೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಬಲಿತ ಕಾರ್ಯಕ್ರಮವಾದ GEAG ರೈತರಿಗೆ ಹೊದಿಕೆ ವಿಧಾನವನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಿತು. ಈ ತಂತ್ರಜ್ಞಾನವನ್ನು ಅಳವಡಿಸಬೇಕೆಂದುಕೊಂಡ ಪ್ರದೇಶಗಳಲ್ಲಿ ತಂತ್ರಜ್ಞಾನವನ್ನು ಪರಿಚಯಿಸುವ ಕಾರ್ಯಸಾಧ್ಯತೆಯ ಅಧ್ಯಯನವು ಬೇಸಿಗೆಯಲ್ಲಿ ಒಟ್ಟು ಪ್ರದೇಶದ ಸರಿಸುಮಾರು 18 ಪ್ರತಿಶತವು ಪ್ರವಾಹಕ್ಕೆ ಒಳಗಾಗುತ್ತದೆ, ಹೆಚ್ಚಿನ ಪ್ರದೇಶಗಳಲ್ಲಿ ಪ್ರತಿ ವರ್ಷ ಎರಡರಿಂದ ಮೂರು ತಿಂಗಳ ಕಾಲ ತೀವ್ರವಾಗಿ ನೀರು ನಿಲ್ಲುತ್ತವೆ ಎಂದು ಹೇಳಿದೆ. ಇದಲ್ಲದೆ, ಲಭ್ಯವಿರುವ ನರ್ಸರಿಗಳು ಉತ್ತಮ ಗುಣಮಟ್ಟದ್ದಾಗಿಲ್ಲ. ರೈತರ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿಲ್ಲ.

ಪೈಲಟ್‌ ಯೋಜನೆಯ ಮಧ್ಯಸ್ಥಿಕೆಯಾಗಿ, GEAG ರೈತರಿಗೆ ಸಾಲು ಹೊದಿಕೆ ವಿಧಾನದಲ್ಲಿ ಹೊದಿಕೆಗಾಗಿ ಪಾಲಿಥಾನ್‌ ಶೀಟ್‌ಗಳನ್ನು ಬಳಸಿ ಸಸಿಗಳನ್ನು ಬೆಳೆಯುವ ತಂತ್ರಜ್ಞಾನವನ್ನು ಬಳಸುವಲ್ಲಿ ಮಾರ್ಗದರ್ಶನ ನೀಡಿತು.

ತಂತ್ರಜ್ಞಾನ ವಿವರಣೆ ಮತ್ತು ಪರಿಕ್ಷಾರ್ಥ ಮಧ್ಯಸ್ಥಿಕೆ

ಸಾಲು ಹೊದಿಕೆ ವಿಧಾನವು ಸಣ್ಣ ಸುರಂಗ ಮಾದರಿಯಲ್ಲಿದ್ದು, ಗ್ರೀನ್‌ಹೌಸ್‌ಗಳಂತಹದ್ದೇ ಪರಿಣಾಮವನ್ನು ಬೀರುತ್ತವೆ. ಈ ಸುರಂಗಗಳನ್ನು ವೈರ್‌ ಬಳಸಿ ಮಾಡಲಾಗುತ್ತದೆ. ಪ್ಲಾಸಿಕ್‌ ಶೀಟ್‌ಗಳನ್ನು ಕಡಿಮೆ ಎತ್ತರವಿರುವಂತೆ ಹೊದಿಕೆಯಾಗಿ ಅರ್ಧಚಂದ್ರಾಕೃತಿಯಲ್ಲಿ ಹೊದಿಸಲಾಗುತ್ತದೆ. ಇವು ಇಂಗಾಲದ ಸುಗಮ ಚಲನೆಗೆ ಅನುಕೂಲಕರವಾಗಿದ್ದು ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಹೆಚ್ಚಿಸಿ ಅವು ಆರೋಗ್ಯವಾಗಿ ಬೆಳೆಯುವಂತೆ ಮಾಡುತ್ತದೆ. ಹೆಚ್ಚುವರಿ ಪೋಷಕಾಂಶಗಳೊಂದಿಗೆ ಸೂಕ್ತ ತಾಪಮಾನವನ್ನು ಕಾಪಾಡಲಾಗುತ್ತದೆ. ಇವುಗಳ ನಿರ್ಮಾಣಕ್ಕೆ ಕಡಿಮೆ ವೆಚ್ಚ ತಗಲುತ್ತದೆ. ಮುಂದಿನ ವರ್ಷಕ್ಕೆ ಹೊಸದಾಗಿ ನಿರ್ಮಿಸುವ ಮುನ್ನ ಹಳೆಯದನ್ನು ಕೆಡವಲು ಸುಲಭವಾಗಿರುವ ರಚನೆಗಳಾಗಿರುತ್ತವೆ.

ತಾಂತ್ರಿಕ ವಿಶೇಷಣಗಳು ಹೀಗಿವೆ:

  • ಈ ಸುರಂಗ ಪಾಲಿ ಹೌಸ್‌ ಅನ್ನು 1-1.5 ಅಡಿ ಎತ್ತರಿಸಿದ ದಿಬ್ಬದ ಮೇಲೆ ನಿರ್ಮಿಸಲಾಗುತ್ತದೆ. ಇದರಿಂದ ನೀರು ಅಲ್ಲಿ ನಿಂತರೂ ಅದರಿಂದ ಗಿಡಗಳಿಗೆ ಹಾನಿಯಾಗುವುದಿಲ್ಲ.
  • ಬೀಜದ ಸುತ್ತಲೂ ಕಟ್ಟೆ ಕಟ್ಟಿ, ಸುತ್ತ ಇಳಿಜಾರಿನಂತೆ ಮಾಡಲಾಗುತ್ತದೆ. ಇದರಿಂದಾಗಿ ಮಳೆಯ ನೀರು ಹರಿದುಹೋಗುವುದರಿಂದ ಬೀಜಕ್ಕೆ ಹಾನಿ ಮಾಡುವುದಿಲ್ಲ.
  • ಪಾಲಿ ಹೌಸ್‌ ಸುತ್ತಲೂ ನೀರು ಹರಿದುಹೋಗಲು ಜಾಗ ಮಾಡಿರುವುದರಿಂದ ಹೆಚ್ಚುವರಿ ನೀರು ಹರಿದುಹೋಗುತ್ತದೆ.

ಸೂಕ್ತವಾದ ನೀರಿನ ನಿರ್ವಹಣೆಯ ಮೂಲಕ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ತಂತ್ರಜ್ಞಾನವನ್ನು ಬಳಸಬಹುದು. ಸೋರೆಕಾಯಿ, ಹಾಗಲಕಾಯಿ, ಬದನೆಕಾಯಿ, ಹೂಕೋಸು, ಟೊಮೆಟೊ ಮತ್ತು ಸೌತೆಕಾಯಿಯಂತಹ ಹೆಚ್ಚಿನ ಬೇಡಿಕೆಯ ತರಕಾರಿಗಳನ್ನು ಬೆಳೆಯಲು ಇವುಗಳನ್ನು ಬಳಸಲಾಗುತ್ತಿದೆ.

ಇಳುವರಿ ಹೆಚ್ಚಳ, ತರಕಾರಿಗಳ ಆರಂಭಿಕ ಕೊಯ್ಲು, ನೀರಿನ ನಿರ್ವಹಣೆಯ ಮೂಲಕ ಮಣ್ಣಿನ ತಾಪಮಾನವನ್ನು ಸಂರಕ್ಷಿಸುವುದು, ಹಕ್ಕಿ ಮತ್ತು ಕೀಟಗಳ ದಾಳಿಯಿಂದ, ಗಾಳಿ, ಮಳೆ, ಹಿಮ, ಶೀತ ಮತ್ತು ಬಿಸಿ ಅಲೆಗಳಿಂದ ಬೆಳೆಗಳನ್ನು ರಕ್ಷಿಸುವುದು ಹಾಗೂ ಅಂತಿಮವಾಗಿ, ರೈತರಿಗೆ ನಿವ್ವಳ ಆದಾಯವನ್ನು ಹೆಚ್ಚಿಸಲು ತಂತ್ರಜ್ಞಾನವು ಸಹಾಯ ಮಾಡಿತು.

ಕೋರ್ ಸಪೋರ್ಟ್ ಕಾರ್ಯಕ್ರಮದಡಿಯಲ್ಲಿ, ಕ್ಯಾಂಪಿಯರ್‌ಗಂಜ್, ಜಂಗಲ್ ಕೌಡಿಯಾ ಮತ್ತು ನೌತಾನ್‌ನಲ್ಲಿ ಎತ್ತರದ ದಿಬ್ಬದ ಮೇಲೆ (ಸುರಂಗ ಪಾಲಿ ಹೌಸ್) ತಂತ್ರಜ್ಞಾನದ ನಾಲ್ಕು ಮಾದರಿ ಘಟಕಗಳನ್ನು 2019 ರಲ್ಲಿ ನಿರ್ಮಿಸಲಾಯಿತು. ಅಲ್ಲಿ ಈ ಕೆಳಗಿನ ನಿಯತಾಂಕಗಳನ್ನು ಗಮನಿಸಲಾಗಿದೆ.

ಹಾಗಲಕಾಯಿ, ಸೋರೆಕಾಯಿ, ಬದನೆಕಾಯಿ, ಹೂ ಕೋಸುಗಳ ಮೇಲೆ ಪ್ರಯೋಗಳನ್ನು ನಡೆಸಲಾಯಿತು. 35 ದಿನಗಳವರೆಗೆ (ಜುಲೈನಿಂದ ಆಗಸ್ಟ್ 2019 ರ ಅವಧಿಯಲ್ಲಿ) ಡೇಟಾವನ್ನು ಸಂಗ್ರಹಿಸಲಾಗಿದೆ.

ಕೆಳಗಿನ ಕೋಷ್ಟಕದಲ್ಲಿ, ವಿವಿಧ ನಿಯತಾಂಕಗಳಲ್ಲಿನ ಡೇಟಾ ಹೋಲಿಕೆಯನ್ನು (ಪಾಲಿ ಹೌಸ್‌ಗಳ ಒಳಗೆ ಮತ್ತು ಹೊರಗೆ) ಉಲ್ಲೇಖಿಸಲಾಗಿದೆ.

ದತ್ತಾಂಶ ಹಾಗೂ ಅವಲೋಕನಗಳು ಎತ್ತರಿಸಿದ ಬದುಗಳ ಸಾಲು ಹೊದಿಕೆ ತಂತ್ರಜ್ಞಾನವು ಸಸ್ಯಗಳು ಉತ್ತಮವಾಗಿ ಮೊಳೆಕೆಯೊಡಲು, ರೋಗಭಾದೆಯಿಂದ ರಕ್ಷಣೆ ಮತ್ತು ನೀರು ನಿಲ್ಲುವಿಕೆಯಿಂದ ಆಗುವ ಮೊಳಕೆಗಳ ನಷ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಪಾಲಿಹೌಸಿಗಿಂತ ಉತ್ತಮ ಎಂದು ಸೂಚಿಸುತ್ತವೆ. ಉದಾಹರಣೆಗೆ, ಹಾಗಲಕಾಯಿ, ಸೋರೆಕಾಯಿ, ಬದನೆಕಾಯಿ ಮತ್ತು ಹೂಕೋಸುಗಳ ಮೇಲಿನ ಪರೀಕ್ಷೆಯು ಕ್ರಮವಾಗಿ ಹೆಚ್ಚು ಸಸಿಗಳು (7%, 18%, 10%, ಮತ್ತು 16%) ಬೆಳೆದಿವೆ ಹಾಗೂ ಕೀಟ ಮತ್ತು ರೋಗಭಾದೆ ಮತ್ತು ನೀರು ನಿಲ್ಲುವಿಕೆಯಿಂದ ಉಂಟಾಗುವ ನಷ್ಟಗಳು ಕಡಿಮೆ ಎಂದು ಸೂಚಿಸಿದೆ. ಆದ್ದರಿಂದ, ನೀರು ನಿಲ್ಲುವಿಕೆ ಮತ್ತು ಮರಳಿ ಮರಳಿ ಬರಗಾಲಕ್ಕೆ ತೀವ್ರವಾಗಿ ಒಳಗಾಗುವ ಪ್ರದೇಶದಲ್ಲಿ, ಈ ತಂತ್ರಜ್ಞಾನವು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಯಿತು.

ಲಾಭದಾಯಕ ಫಲಿತಾಂಶಗಳು

ಸುತ್ತಮುತ್ತಲಿನ ಸ್ಥಳೀಯ ಮಾರುಕಟ್ಟೆ ಪ್ರದೇಶಗಳಲ್ಲಿ ತಾಜಾ ತರಕಾರಿಗಳಿಗೆ ವರ್ಷಪೂರ್ತಿ ಹೆಚ್ಚಿನ ಬೇಡಿಕೆಯಿದೆ. ಹತ್ತಿರದಲ್ಲಿರುವ ನಗರ ಪ್ರದೇಶಗಳು, ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ, ಹೆಚ್ಚುತ್ತಿರುವ ಜನಶಂಖ್ಯೆ, ಮಧ್ಯಮ ವರ್ಗದವರ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಇದಕ್ಕೆ ಕಾರಣವಾಗಿದೆ. ಸುಧಾರಿತ ಸಾರಿಗೆ ವ್ಯವಸ್ಥೆಗಳಿಂದಾಗಿ ಆಯಾ ತರಕಾರಿಗಳ ಋತುವಿನಲ್ಲಿ ಹಾಗೂ ಹಾಗಿಲ್ಲದ ಸಮಯದಲ್ಲೂ ತರಕಾರಿಗಳು ಪ್ರವಾಹದ ಮಾದರಿಯಲ್ಲಿ ದೂರದ ಪ್ರದೇಶಗಳಿಂದ ಬರುತ್ತವೆ. ಹತ್ತಿರದ ಸಣ್ಣ ಮತ್ತು ಅತಿಸಣ್ಣ ತರಕಾರಿ ಬೆಳೆಗಾರರು ಹೊರಗಿನ ಮಾರಾಟಗಾರರೊಂದಿಗೆ ಪೈಪೋಟಿ ಎದುರಿಸಬೇಕಾಗಿದೆ.

ಕೋಷ್ಟಕ 1: ಕ್ಷೇತ್ರ ಪ್ರಯೋಗಗಳ ಅವಲೋಕನಗಳು

ಪ್ರಾಯೋಗಿಕ ಉಪಕ್ರಮ ಪ್ರಯೋಗ ಬೆಳೆ ಮೊಳಕೆಯೊಡಲು ತೆಗೆದುಕೊಂಡ ಒಟ್ಟು ದಿನಗಳು (ದಿನಗಳಲ್ಲಿ) ಮೊಳಕೆಯೊಡೆದ ಸಸಿಗಳ ಸಂಖ್ಯೆ (%ನಲ್ಲಿ) ಕೀಟ ಮತ್ತು ರೋಗ ಬಾಧಿತ (%ನಲ್ಲಿ) ನೀರು ನಿಲ್ಲುವಿಕೆಯಿಂದಾದ ಗಿಡಗಳ ನಷ್ಟ (%ನಲ್ಲಿ) ಬೀಜ ಮೊಳೆಕೆಯೊಡದದ್ದು (ದಿನಗಳಲ್ಲಿ)
ಕ್ಯಾಂಪೀರ್ಗಂಜ್ ತೆರೆದ ಭೂಮಿ ಹಾಗಲಕಾಯಿ 6 75 9 25 32
ಪಾಲಿಹೌಸಿನಲ್ಲಿ ಹಾಗಲಕಾಯಿ 4 82 1 2 28
ಜಂಗಲ್ ಕೌಡಿಯಾ ತೆರೆದ ಭೂಮಿ ಹಾಗಲಕಾಯಿ 7 60 12 32 31
ಪಾಲಿಹೌಸಿನಲ್ಲಿ ಹಾಗಲಕಾಯಿ 6 78 2 5 29
ಜಂಗಲ್ ಕೌಡಿಯಾ ತೆರೆದ ಭೂಮಿ ಬದನೆ ಕಾಯಿ 11 75 15 50 35
ಪಾಲಿಹೌಸಿನಲ್ಲಿ ಬದನೆ ಕಾಯಿ 11 86 4 6 28
ನೌತನ್ (ಪಶ್ಚಿಮ ಚಂಪಾರಣ್) ತೆರೆದ ಭೂಮಿ ಹೂಕೋಸು 12 62 7 24 30
ಪಾಲಿಹೌಸಿನಲ್ಲಿ  

ಬದನೆ ಕಾಯಿ

9 78 3 3 27

ಎರಡೂ ಪ್ರದೇಶಗಳಲ್ಲಿ, ಈಗ ಪ್ರಾಯೋಗಿಕ ಪರೀಕ್ಷೆಯ ನಂತರ, 30 ಕ್ಕೂ ಹೆಚ್ಚು ರೈತರು ನರ್ಸರಿಗಳಲ್ಲಿ ಟೊಮೆಟೊ, ಹೂಕೋಸು, ಎಲೆಕೋಸು, ಮೆಣಸಿನಕಾಯಿ, ಬದನೆ ಮತ್ತು ಸೋರೆಕಾಯಿ, ಸೌತೆಕಾಯಿ, ಹಾಗಲಕಾಯಿ, ಕುಂಬಳಕಾಯಿ ಮುಂತಾದ ಬಳ್ಳಿ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಅವರು ವಾಸ್ತವವಾಗಿ 20- 30 ದಿನಗಳ ಕಾಯುವಿಕೆಯ ಸಮಯವನ್ನು ಉಳಿಸುತ್ತಿದ್ದು, ಉತ್ತಮ ಗುಣಮಟ್ಟದ ಸಸಿಗಳನ್ನು ಬೇಗ ಪಡೆಯುತ್ತಿದ್ದಾರೆ. ಇದರಿಂದ ಬೇಗ ಬೆಳೆ ಕೈಗೆ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯು ಸಿಗುತ್ತಿದೆ. ರೈತರು ಸಸಿಗಳನ್ನು ಇತರ ಸ್ಥಳೀಯ ರೈತರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಮಾರಾಟ ಮಾಡುತ್ತಿದ್ದಾರೆ.

ಜಂಗಲ್ ಕೌರಿಯಾ, ಕ್ಯಾಂಪಿಯರ್ಗಂಜ್‌ ಮತ್ತು ನೌತಾನ್ ಬ್ಲಾಕ್‌ನ ತರಕಾರಿ ಬೆಳೆಗಾರರು ವರ್ಷಪೂರ್ತಿ ತರಕಾರಿಗಳನ್ನು ನರ್ಸರಿಯಲ್ಲಿ ಬೆಳೆಸುವ ಮತ್ತು ಉತ್ತಮ ಗುಣಮಟ್ಟದ ತರಕಾರಿಗಳನ್ನು ಕೊಯ್ಲು ಮಾಡುವ ಈ ತಂತ್ರದಿಂದ ಸಾಕಷ್ಟು ತೃಪ್ತರಾಗಿದ್ದಾರೆ. ಹೆಚ್ಚಿದ ಇಳುವರಿ, ಬೇಗ ತರಕಾರಿಗಳ ಕೊಯ್ಲು ಸಾಧ್ಯವಾಗಿದ್ದು, ನೀರಿನ ನಿರ್ವಹಣೆಯ ಮೂಲಕ ಮಣ್ಣಿನ ಉಷ್ಣತೆಯನ್ನು ಸಂರಕ್ಷಣೆ, ಗಾಳಿ ಮತ್ತು ಹಿಮದಿಂದ ಗಿಡವನ್ನು ರಕ್ಷಣೆ ಮತ್ತು ಅಂತಿಮವಾಗಿ ರೈತರಿಗೆ ನಿವ್ವಳ ಆದಾಯವನ್ನು ನೀಡುವ ಮೂಲಕ ಲಾಭದಾಯಕವಾಗಿರುವುದನ್ನು ಅವರು ಗುರುತಿಸುತ್ತಾರೆ.


Archana Srivastava
Project Coordinator
E-mail: archanasri844@gmail.com

Ajay Kumar Singh
Project Coordinator
E-mail: mahewa@geagindia.org
Gorakhpur Environmental Action Group
HIG 1st Phase 1/4
Siddharthpur, Taramanda Road
Gorakhpur - 273 017

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೨ ; ಜೂನ್‌ ೨೦‌೨‌೩

 

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp