ಈಶಾನ್ಯ ರಾಜ್ಯಗಳಲ್ಲಿ ಕಿರುಧಾನ್ಯಗಳ ಪುನಶ್ಚೇತನ


ಈಶಾನ್ಯ ಭಾರತದ ಸಣ್ಣ ಹಿಡುವಳಿದಾರರು ತಮ್ಮ ಬೆಳೆ ಪದ್ಧತಿಯಲ್ಲಿ ಹಾಗೂ ಆಹಾರ ಪದ್ಧತಿಯಲ್ಲಿ ಕಿರುಧಾನ್ಯಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ತಾಂತ್ರಿಕ ಮಾರ್ಗದರ್ಶನ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಸಂಪರ್ಕಗಳನ್ನು ನಿರ್ಮಿಸುವಲ್ಲಿ ದೊರೆತ ಅಲ್ಪ ಬೆಂಬಲವು ಈಶಾನ್ಯ ಭಾರತದ ಆಹಾರ ಮತ್ತು ಕೃಷಿ ವ್ಯವಸ್ಥೆಗಳಲ್ಲಿ ಕಿರುಧಾನ್ಯಗಳನ್ನು ಮರಳಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಭಾರತದ ಈಶಾನ್ಯ ಭಾಗದಲ್ಲಿ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿರುವ ಸಣ್ಣ ಹಿಡುವಳಿದಾರರು ಹೆಚ್ಚಿದ್ದಾರೆ. ಭಾಗದಲ್ಲಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ಕೃಷಿ ಮಾಡುವ ಹಳೆಯ ಪದ್ಧತಿ ಈಗಲೂ ಇದೆ. ಪ್ರದೇಶದಲ್ಲಿ ಅಕ್ಕಿ, ಜೋಳ, ಕಿರುಧಾನ್ಯ, ದ್ವಿದಳ ಧಾನ್ಯಗಳು, ಚಹಾ, ಮಸಾಲೆಗಳು ಮತ್ತು ಹಣ್ಣುಗಳ ಉತ್ಪಾದನೆಯಾಗುತ್ತದೆ. ಬಹಳ ಜೀವವೈವಿಧ್ಯತೆಯಿಂದ ಕೂಡಿರುವ ಪ್ರದೇಶವು ಅನೇಕ ದೇಸಿ ಬೆಳೆ ಪ್ರಭೇದಗಳು ಮತ್ತು ಜಾನುವಾರು ತಳಿಗಳಿಗೆ ನೆಲೆಯಾಗಿದೆ. ಪ್ರದೇಶವು ಪ್ರವಾಹ, ಭೂಕುಸಿತ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಅಪಾಯವನ್ನು ಎದುರಿಸುತ್ತಿದ್ದು, ಇದು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಭೂ ಕುಸಿತ, ಮಣ್ಣಿನ ಸವಕಳಿ, ಕಡಿಮೆ ಉತ್ಪಾದಕತೆ, ಕಳಪೆ ಮಾರುಕಟ್ಟೆ ಸಂಪರ್ಕಗಳು ಮತ್ತು ಹವಾಮಾನ ಬದಲಾವಣೆಯು ಪ್ರದೇಶದ ರೈತರು ಎದುರಿಸುತ್ತಿರುವ ಇನ್ನಷ್ಟು ಸವಾಲುಗಳಾಗಿವೆ.

ಈಶಾನ್ಯ ಭಾರತದಲ್ಲಿ ಕಿರುಧಾನ್ಯಗಳು ಕೃಷಿ ಭೂಮಿಯ ಮತ್ತು ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ರಾಗಿ, ನವಣೆ, ಕಾಡುಗೋಧಿ, ಸಜ್ಜೆ ಮತ್ತು ವೈಜಯಂತಿ (ಜಾಬ್ಸ್ ಟಿಯರ್ಸ್) ಈಶಾನ್ಯ ರಾಜ್ಯಗಳಲ್ಲಿ ಕಂಡುಬರುವ ಕೆಲವು ಕಿರುಧಾನ್ಯಗಳ ಪ್ರಭೇದಗಳಾಗಿವೆ. ಅಸ್ಸಾಂ (18.82 ಕೆಜಿ/ಎಚ್ಎಸ್ಎಚ್/ಮೀ) ಮತ್ತು ಬಿಹಾರ (18.69 ಕೆಜಿ/ಎಚ್ಎಸ್ಎಚ್/ಮೀ) ರಾಜ್ಯಗಳಲ್ಲಿ ಕಿರುಧಾನ್ಯಗಳ ಬಳಕೆ ಹೆಚ್ಚು ಎಂದು ದಾಖಲಾಗಿದೆ. ಸಣ್ಣಬೀಜವಿರುವ ಹುಲ್ಲಿನ ತಳಿಗಳನ್ನು ಶತಮಾನಗಳಿಂದ ಪ್ರದೇಶದ ಸ್ಥಳೀಯ ಸಮುದಾಯಗಳು ಬೆಳೆಸಿ ಸೇವಿಸುತ್ತಿವೆ. ಏಕೆಂದರೆ ಅವು ಗುಡ್ಡಗಾಡು ಪ್ರದೇಶಗಳಲ್ಲಿ, ತೀವ್ರ ಹವಾಮಾನ ವೈಪರಿತ್ಯ ಪರಿಸ್ಥಿತಿಗಳಂತಹ ಸವಾಲುಗಳ ನಡುವೆಯೂ ಬೆಳೆಯುವ  ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿವೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಮಾಲಯದುದ್ದಕ್ಕೂ ಸಾಂಪ್ರದಾಯಿಕ ಹುದುಗಿಸಿದ ಆಹಾರಗಳು ಮತ್ತು ಪಾನೀಯಗಳು ಅವುಗಳ ಪೌಷ್ಟಿಕಾಂಶ ಮೌಲ್ಯ, ರುಚಿ, ಆರೋಗ್ಯ ಅಂಶಗಳು, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ವಿಶೇಷ ಸ್ಥಾನವನ್ನು ಪಡೆದಿವೆ. ರಾಗಿ ಪೂರ್ವ ಹಿಮಾಲಯ ಪ್ರದೇಶದಲ್ಲಿ ಪ್ರಧಾನವಾಗಿ ಬೆಳೆಯುವ ಕಿರುಧಾನ್ಯ ಬೆಳೆಯಾಗಿದೆ. ನವಣೆ ಮತ್ತು ರಾಗಿ ಹೆಚ್ಚಿನ ರಾಜ್ಯಗಳಲ್ಲಿ ಕಂಡುಬರುತ್ತವೆ.

ಸಣ್ಣ ರೈತರೇ ಹೆಚ್ಚಿರುವ ಈಶಾನ್ಯ ಪ್ರದೇಶದಲ್ಲಿ ಕಿರುಧಾನ್ಯಗಳು ಕೃಷಿಯ ಅವಿಭಾಜ್ಯ ಅಂಗವಾಗಿದೆ. ಮೂಲತಃ ಇದನ್ನು ಆಹಾರ ಹಾಗೂ ಪಾನೀಯಗಳಿಗೆ ಬಳಸಲಾಗುತ್ತದೆ. ಜೊತೆಗೆ, ಜಾನುವಾರು ಹಾಗೂ ಹಕ್ಕಿಗಳಿಗೆ ಮೇವಾಗಿಯೂ ಇವುಗಳನ್ನು ಬಳಸಲಾಗುತ್ತದೆ. ಈಶಾನ್ಯ ರಾಜ್ಯಗಳಾದ್ಯಂತ ಕಿರುಧಾನ್ಯಗಳ ಬಳಕೆಯ ರೀತಿಯಲ್ಲಿ ವ್ಯತ್ಯಾಸವಿದೆ. ಕಾಲಾಂತರದಲ್ಲಿ ಅವುಗಳ ಬಳಕೆ ಹೆಚ್ಚು ಇಲ್ಲವೇ ಕಡಿಮೆಯಾಗಿದೆ. ರಾಜ್ಯಗಳಲ್ಲಿ ಕಿರುಧಾನ್ಯಗಳ ಕೃಷಿಯನ್ನು ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿದೆ.

ಹೆಚ್ಚಿನ ಆಹಾರ ಸಾರ್ವಭೌಮತ್ವವನ್ನು ಗಳಿಸಲು ಸ್ಥಳೀಯ ಜ್ಞಾನ ಮತ್ತು ಸಾಂಪ್ರದಾಯಿಕ ಆಹಾರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕ್ಯಾರಿಟಾಸ್ ಇಂಡಿಯಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. 2013 ರಿಂದ, ಕ್ಯಾರಿಟಾಸ್ ಇಂಡಿಯಾ ಈಶಾನ್ಯ ರಾಜ್ಯ(NE) ಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಫೆಸಿಲಿಟೇಟಿಂಗ್ಅಗ್ರಿಕಲ್ಚರಲ್ರಿಜನರೇಶನ್ಮೆಶ಼ರ್ಸ್ (FARM) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. FARM NE ಎಂಬುದು ಕ್ಯಾರಿಟಾಸ್ ಇಂಡಿಯಾದ ಅತಿದೊಡ್ಡ ಕ್ಲಸ್ಟರ್ ಕಾರ್ಯಕ್ರಮವಾಗಿದ್ದು, ಪ್ರದೇಶದ ಸಣ್ಣ ಹಿಡುವಳಿದಾರರನ್ನು ತಲುಪಿದೆ. ಹವಾಮಾನಹೊಂದಾಣಿಕೆಯ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳು ಮತ್ತು ಸಾಂಪ್ರದಾಯಿಕ ಆಹಾರ ವ್ಯವಸ್ಥೆಗಳ ಮೂಲಕ ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ. ಕಾರ್ಯಕ್ರಮವನ್ನು ಸಮುದಾಯ ನೇತೃತ್ವದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಣ್ಣ ಹಿಡುವಳಿದಾರರು ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕ್ಯಾರಿಟಾಸ್ ಇಂಡಿಯಾ NER ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಿರುಧಾನ್ಯಗಳು ಸೇರಿದಂತೆ ಸುಸ್ಥಿರ ಕೃಷಿಯ ಉತ್ತೇಜನಕ್ಕಾಗಿ ಏಳು ರಾಜ್ಯಗಳಲ್ಲಿ ವಿವಿಧ ಜನಾಂಗೀಯ ಗುಂಪುಗಳೊಂದಿಗೆ ತೊಡಗಿಸಿಕೊಂಡಿದೆ. ಭಾರತದಲ್ಲಿ ಕಿರುಧಾನ್ಯಗಳ ಬೆಳವಣಿಗೆ ಮತ್ತು ಬಳಕೆಯನ್ನು ಹೆಚ್ಚಿಸಲು, ಕ್ಯಾರಿಟಾಸ್ ಇಂಡಿಯಾ  ಎಲ್ಲರಿಗೂ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸುವತ್ತ ಒತ್ತು ನೀಡುತ್ತಿದೆ. ಕಿರುಧಾನ್ಯ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸುವ ಮೂಲಕ, ಕ್ಯಾರಿಟಾಸ್ ಇಂಡಿಯಾ ಸಾಂಪ್ರದಾಯಿಕ ಆಹಾರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದೆ. ಇದು ಪೌಷ್ಟಿಕ, ಸುಸ್ಥಿರ ಮತ್ತು ದೃಢವಾಗಿದೆ.

ಈಶಾನ್ಯ ಪ್ರದೇಶದಲ್ಲಿ ಕಿರುಧಾನ್ಯಗಳು ಸಾಂಪ್ರದಾಯಿಕ ಕೃಷಿಯ ಭಾಗವಾಗಿದೆ. ಆದರೆ ಪ್ರಧಾನ ಆಹಾರವಾಗಿ ಅವುಗಳ ಬಳಕೆ ಸೀಮಿತವಾಗಿದೆ. ಏಕೆಂದರೆ ಜನಸಂಖ್ಯೆಯ ಬಹುಭಾಗ ಅನ್ನವನ್ನು ಪ್ರಾಥಮಿಕ ಆಹಾರವಾಗಿ ಬಳಸುತ್ತಾರೆ. 2016-17 ಬೆಳೆ ಋತುವಿನಲ್ಲಿ, ಮೇಘಾಲಯದ ರಿ ಭೋಯ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಗಿಯನ್ನು ಪ್ರಚಾರ ಮಾಡಲಾಯಿತು. ಅದನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಲು, ಕ್ಯಾರಿಟಾಸ್ ಇಂಡಿಯಾ ಕಿರುಧಾನ್ಯಗಳ ಬಳಕೆಯ ಬಗ್ಗೆ ಒತ್ತು ನೀಡಿತು. ಕಿರುಧಾನ್ಯದ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಿ ಅದನ್ನು ಹೆಚ್ಚಾಗಿ ಬಳಸಲು ಸಲಹೆ ನೀಡಿತು.

ಪಿಎಲ್ಡಿ ವಿಧಾನ

ಕಾರ್ಯಕ್ರಮವು ಅಭಿವೃದ್ಧಿ ಉಪಕ್ರಮಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಸ್ಥಳೀಯ ಸಮುದಾಯಗಳು ಮತ್ತು ವ್ಯಕ್ತಿಗಳ ಭಾಗವಹಿಸುವಿಕೆಗೆ ಆದ್ಯತೆ ನೀಡುವ ಜನ ನೇತೃತ್ವದ ಅಭಿವೃದ್ಧಿ ವಿಧಾನದ ಮೂಲ ತತ್ವವನ್ನು ಆಧರಿಸಿದೆ. ತಮ್ಮದೇ ಅಭಿವೃದ್ಧಿಯಲ್ಲಿ ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜನರನ್ನು ಸಬಲರನ್ನಾಗಿಸುತ್ತದೆ. ಅವರ ಅಗತ್ಯಗಳು ಹಾಗೂ ಸನ್ನಿವೇಶಗಳ ಬಗ್ಗೆ ಮಾಹಿತಿ ಹೊಂದಿರುವ ಅತ್ಯುತ್ತಮ ಸಂಪನ್ಮೂಲ ಜನರೇ ಎಂದು ಭಾವಿಸುತ್ತದೆ. ವಿಧಾನದಿಂದ ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಮುದಾಯಕ್ಕೆ ವರ್ಗಾಯಿಸುವುದು ಮತ್ತು ಸಮುದಾಯಗಳು, ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರಿ ಘಟಕಗಳ ನಡುವೆ ಪಾಲುದಾರಿಕೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಜನರ ಭಾಗವಹಿಸುವಿಕೆ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆಯ ಮೂಲಕ ಸಾರ್ವಭೌಮತ್ವ ಸಾಧಿಸಲು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಆಹಾರ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು FARM ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ರೈತರ ಜೀವನ, ಜೀವನೋಪಾಯ, ಆದಾಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸಲು ಅವರನ್ನು ಸಾಮೂಹಿಕವಾಗಿ ಸಮುದಾಯ ಮತ್ತು ರೈತರ ಗುಂಪುಗಳಲ್ಲಿ ಒಟ್ಟುಗೂಡಿಸಲಾಯಿತು. ಕೃಷಿ ಇಲಾಖೆಯು ಕಾರ್ಯಕ್ರಮವು ಗ್ರಾಮಗಳಲ್ಲಿ ಸಮುದಾಯ ಸಜ್ಜುಗೊಳಿಸಿತು. ಆರೋಗ್ಯ, ಆರ್ಥಿಕತೆ ಮತ್ತು ಪರಿಸರದ ದೃಷ್ಟಿಯಿಂದ ಕಿರುಧಾನ್ಯಗಳಿಂದಾಗುವ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಇದು ಅವರಲ್ಲಿ ಸಾಮೂಹಿಕ ನಿರ್ಧಾರಗಳ ಬಗ್ಗೆ ಅರಿವು ಮೂಡಿಸಿದೆ.

ಕಿರುಧಾನ್ಯ ಕೃಷಿಯಲ್ಲಿ ರೈತರ ಸಾಮರ್ಥ್ಯ ವೃದ್ಧಿಯಲ್ಲಿ ಕಾರ್ಯಕ್ರಮವು ದ್ವಿಮುಖ ವಿಧಾನವನ್ನು ಅಳವಡಿಸಿಕೊಂಡಿದೆ. FARM ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಉನ್ನತೀಕರಿಸುವ ಕೆಲಸ ಮಾಡಿತು. ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳಿಂದ (ಕೆವಿಕೆ) ತರಬೇತಿಗಳನ್ನು ಸುಗಮಗೊಳಿಸಲು ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಒಗ್ಗೂಡಿಸಿ ಅಳವಡಿಸಿಕೊಳ್ಳಲಾಯಿತು. ಒಂದೆಡೆ ಮುಖ್ಯ ಯಶಸ್ವಿ ರೈತರ ಮೂಲಕ ಅವರ ಪೂರ್ವಜರಿಂದ ಪಡೆದ ತಿಳಿವಳಿಕೆ ಮತ್ತು ಅಭ್ಯಾಸಗಳ ಆಧಾರದ ಮೇಲೆ ಪ್ರಾಯೋಗಿಕ ತರಬೇತಿಯನ್ನು ಆಯೋಜಿಸಲಾಯಿತು. ಒಟ್ಟಾರೆಯಾಗಿ, ಇದು ವಿಜ್ಞಾನ ಮತ್ತು ಸಂಪ್ರದಾಯದ ಮಿಶ್ರಣವಾಗಿತ್ತು. ತರಬೇತಿ ಪಡೆದ ರೈತರಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ, ಅವರ ಸಮುದಾಯಗಳಿಗೆ ಕಿರುಧಾನ್ಯ ಕೃಷಿಯಲ್ಲಿ ಸಹಾಯ ಮಾಡಲು ಮತ್ತು ತರಬೇತಿ ನೀಡಲು ಅನುವು ಮಾಡಿಕೊಡಲಾಯಿತು.

ಕಾರ್ಯಕ್ರಮವು ಮೊದಲು ಕುಟುಂಬದ ಪೋಷಣೆ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸಲು ಆದ್ಯತೆ ನೀಡಿತು. ಹೆಚ್ಚುವರಿ ಉತ್ಪನ್ನಗಳನ್ನು ಸಾಮಾನ್ಯವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸಮುದಾಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆಯಲು ಸಹಾಯವಾಗುವಂತೆ ಅವು ತಮ್ಮ ಉತ್ಪನ್ನಗಳನ್ನು ಒಟ್ಟುಗೂಡಿಸಿ ಮಾರಾಟ ಮಾಡುವಂತೆ ತಿಳಿಸಿ ಹೇಳಲಾಯಿತು. ಜನರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವಂತೆ ಹಲವಾರು ಸಣ್ಣ ಅಂಗಡಿಗಳನ್ನು ಸಭೆ ಸಮಾರಂಭಗಳು ನಡೆವ ಕಡೆಯಲ್ಲಿ ಆಯೋಜಿಸಲಾಯಿತು.

ಇದರೊಂದಿಗೆ, ರುಬ್ಬುವ ಹಾಗೂ ಪ್ಯಾಕೇಜಿಂಗ್ಮಾಡುವ ಯಂತ್ರಗಳನ್ನು ಸಂಸ್ಕರಣೆಯಲ್ಲಿ ರೈತರಿಗೆ ಹೆಚ್ಚುವರಿ ಬೆಂಬಲ ಒದಗಿಸುವ ಸಲುವಾಗಿ ಒದಗಿಸಲಾಯಿತು.

ಫಲಿತಾಂಶಗಳು

ರೈತರು ಯಶಸ್ವಿ ಕಿರುಧಾನ್ಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರು. ಬೀಜ ವಿನಿಮಯವು ವ್ಯಾಪಕ ಅಳವಡಿಕೆ ಹಾಗೂ ಗುಣಮಟ್ಟ ಏರಿಕೆಗೆ ಸಹಾಯ ಮಾಡಿತು. ಸಮುದಾಯವು ಕೈಜೋಡಿಸಿದ್ದರಿಂದ ಸ್ಥಳೀಯ ಖರೀದಿದಾರರನ್ನು ಒಳಗೊಳ್ಳುವ ಮೂಲಕ ಮಾರುಕಟ್ಟೆ ಸಂಪರ್ಕವನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಸಂಸ್ಕರಣ ಯಂತ್ರಗಳ ಲಭ್ಯತೆಯಿಂದಾಗಿ ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದ್ದರಿಂದ ಹೆಚ್ಚುವರಿ ಮಾರುಕಟ್ಟೆ ಅವಕಾಶಗಳು ಒದಗಿತುಮೌಲ್ಯವರ್ಧಿತ ಉತ್ಪನ್ನಗಳಾದ ಕಿರುಧಾನ್ಯಗಳಿಂದ ತಯಾರಿಸಲಾದ ಕೇಕುಗಳು ಮತ್ತು ಪುಡಿಗಳು ಜನಪ್ರಿಯವಾದವು.

FARM  ಕಾರ್ಯಕ್ರಮವು 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈಶಾನ್ಯ ಪ್ರದೇಶದ ಐದು ರಾಜ್ಯಗಳ 15 ಜಿಲ್ಲೆಗಳಲ್ಲಿ ಕಿರುಧಾನ್ಯಗಳನ್ನು ಯಶಸ್ವಿಯಾಗಿ ಉತ್ತೇಜಿಸಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ಗಳಲ್ಲಿ ಸುಮಾರು 1,500 ಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರು ಈಗ ಪ್ರತಿ ಮನೆಯ 3-5 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ಕಿರುಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ಜಾಗೃತಿ ಮತ್ತು ಸಂವೇದನಾಶೀಲ ಅಧಿವೇಶನಗಳು ರೈತ ಸಮುದಾಯದಲ್ಲಿ ಕಿರುಧಾನ್ಯಗಳನ್ನು ಜನಪ್ರಿಯಗೊಳಿಸುತ್ತಿವೆ. ಸಾಂಪ್ರದಾಯಿಕ ಬೀಜ ಬ್ಯಾಂಕುಗಳು ಕಿರುಧಾನ್ಯ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿವೆ. ಕ್ಷೇತ್ರದಲ್ಲಿನ ಯಶಸ್ಸು ಅಳವಡಿಕೆಯನ್ನು ದ್ವಿಗುಣಗೊಳಿಸಿದೆ. ಸ್ಥಳೀಯ ಮತ್ತು ರಾಜ್ಯ ಮಟ್ಟದಲ್ಲಿ FARM ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾದ ಕಿರುಧಾನ್ಯ ಬೀಜ ವಿನಿಮಯ ಕಾರ್ಯಕ್ರಮಗಳು ಭೌಗೋಳಿಕವಾಗಿ ಒಂದೇ ರೀತಿ ಇರುವ ಪ್ರದೇಶಗಳಲ್ಲಿ ಕಿರುಧಾನ್ಯಗಳ ಅಳವಡಿಕೆಯನ್ನು ಹೆಚ್ಚಿಸಿವೆ.

ಸ್ಪೂರ್ತಿದಾಯಕ ಪ್ರಕರಣ

ಮೇಘಾಲಯ ರಾಜ್ಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಸಮನೋಂಗ್ ಗ್ರಾಮದ 68 ವರ್ಷದ ರೈತ ಶ್ರೀ ಲ್ಯಾಂಗ್ ಪಿರ್ತುಹ್, ಕಿರುಧಾನ್ಯ ಕೃಷಿಯ ಪ್ರಬಲ ಪ್ರತಿಪಾದಕರು. ಕಳೆದ 27 ವರ್ಷಗಳಿಂದ ಕಿರುಧಾನ್ಯ ಕೃಷಿಯಲ್ಲಿ ಆಗಿರುವ ಕುಸಿತದ ಬಗ್ಗೆ ಲ್ಯಾಂಗ್ ವಿಷಾದ ವ್ಯಕ್ತಪಡಿಸುತ್ತಾರೆ. ಕಿರುಧಾನ್ಯದ ಬದಲಿಗೆ ಅಕ್ಕಿಯನ್ನು ಪ್ರಧಾನ ಧಾನ್ಯವಾಗಿಸಲಾಗಿದೆ. ಕಿರುಧಾನ್ಯಗಳಿಗಿಂತ ಹೆಚ್ಚಿನ ಲಾಭವನ್ನು ನೀಡುವ ಎಳ್ಳು ಮತ್ತು ಪೊರಕೆಯಂತಹ ವಾಣಿಜ್ಯ ಬೆಳೆಗಳನ್ನು ಪರಿಚಯಿಸಿದ್ದು ಕುಸಿತಕ್ಕೆ ಕಾರಣವಾಗಿದೆ ಎಂದು ಲ್ಯಾಂಗ್ ಹೇಳುತ್ತಾರೆ. ಹೆಚ್ಚುವರಿಯಾಗಿ, ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ಮಾತ್ರ ಒಳಗೊಂಡಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪೂರೈಕೆಯು ಆಹಾರ ಪದ್ಧತಿಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಜನರು ಬಾಹ್ಯ ಆಹಾರ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

ಸವಾಲಿಗೆ ಪ್ರತಿಕ್ರಿಯೆಯಾಗಿ, ಜೈನ್ತಿಯಾ ಹಿಲ್ಸ್ ಡೆವಲಪ್ಮೆಂಟ್ ಸೊಸೈಟಿ (JHDS), FARM NE ಅಡಿಯಲ್ಲಿ ಕ್ಯಾರಿಟಾಸ್ ಇಂಡಿಯಾದ ಬೆಂಬಲದೊಂದಿಗೆ, ಕಿರುಧಾನ್ಯ ಕೃಷಿಯಲ್ಲಿನ ಕುಸಿತವನ್ನು ಪರಿಹರಿಸಲು ಉಪಕ್ರಮವನ್ನು ಕೈಗೊಂಡಿತು. ಕಿರುಧಾನ್ಯ ಕೃಷಿಯ ಮಹತ್ವ ಮತ್ತು ಅದರ ಪ್ರಸ್ತುತತೆಯ ಬಗ್ಗೆ ಚರ್ಚಿಸಲು ರೈತರೊಂದಿಗೆ ಸಭೆಗಳನ್ನು ಆಯೋಜಿಸಲಾಯಿತು. ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಕಿರುಧಾನ್ಯ ಕೃಷಿ ಸಂಸ್ಕರಣೆಯಲ್ಲಿ ಉದ್ಯಮಿಗಳಿಗೆ ತರಬೇತಿ ನೀಡಲು ಬೆಂಬಲವನ್ನು ನೀಡುತ್ತಿದೆ.

ಮಧ್ಯಸ್ಥಿಕೆಯಿಂದಾಗಿ ಈಗಾಗಲೇ ಸಕಾರಾತ್ಮಕ ಫಲಿತಾಂಶಗಳು ದೊರಕಿವೆ. 2019 ರಲ್ಲಿ 10 ಕುಟುಂಬಗಳು ಕಿರುಧಾನ್ಯಗಳನ್ನು ಬೆಳೆಯುವ ಪ್ರಯತ್ನಕ್ಕೆ ಕೈಜೋಡಿಸಿವೆ. ಭವಿಷ್ಯದಲ್ಲಿ ಹೆಚ್ಚಿನ ಕುಟುಂಬಗಳು ಸೇರುವ ನಿರೀಕ್ಷೆಯಿದೆ. ಇದು ನೆರೆಯ ಹಳ್ಳಿಗಳು ಮತ್ತು ಇಡೀ ಜಿಲ್ಲೆಯನ್ನು ಕಿರುಧಾನ್ಯಗಳನ್ನು ಬೆಳೆಯುವ ಅಡಿಯಲ್ಲಿ ತರಲು ರೈತರಿಂದ ರೈತರವರೆಗೆ ಮತ್ತು ಸಮುದಾಯದಿಂದ ಸಮುದಾಯಕ್ಕೆ ವಿನಿಮಯವನ್ನು ಉತ್ತೇಜಿಸುತ್ತದೆ.

ಕ್ಯಾರಿಟಾಸ್ ಇಂಡಿಯಾ ತನ್ನ ಪಾಲುದಾರ ಸಂಸ್ಥೆಯಾದ ಜೆಎಚ್ಡಿಎಸ್ಗೆ ಬೆಂಬಲ ನೀಡುತ್ತಿರುವುದರಿಂದ, ಸಮನೋಂಗ್ ಗ್ರಾಮದಲ್ಲಿ ಕಿರುಧಾನ್ಯಗಳನ್ನು ಬೆಳೆಯುವ ಕುಟುಂಬಗಳ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಎರಡು ವಿಧದ ರಾಗಿಯನ್ನು ಬೆಳೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಕ್ರೆ ಲೀಹ್ (ಬಿಳಿ ಧಾನ್ಯ) ಮತ್ತು ಕ್ರೆ ಐಯಾಂಗ್ (ಕಪ್ಪು ಧಾನ್ಯ) ಎಂದು ಕರೆಯಲಾಗುತ್ತದೆ. ಕಿರುಧಾನ್ಯ ಕೃಷಿಯ ದೀರ್ಘಕಾಲೀನ ಸುಸ್ಥಿರತೆ ಮತ್ತು ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಎನ್ನುವುದು ಸಮುದಾಯಕ್ಕೆ ಮನವರಿಕೆ ಆಗಿದೆ.

ಸಮುದಾಯದಲ್ಲಿ ಕಿರುಧಾನ್ಯ ಕೃಷಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಆಹಾರ ಸಾರ್ವಭೌಮತ್ವದ ಕಲ್ಪನೆಯನ್ನು ಉತ್ತೇಜಿಸುವಲ್ಲಿ FARM ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಿದೆ. ಇದು ಪ್ರದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಮೇಘಾಲಯ, ಅಸ್ಸಾಂ ಮತ್ತು ಮಣಿಪುರ ಮತ್ತು ನಾಗಾಲ್ಯಾಂಡ್ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

 

ಉಪಸಂಹಾರ

NER ನಲ್ಲಿ ಕಿರುಧಾನ್ಯಗಳನ್ನು ಪುನರುಜ್ಜೀವನಗೊಳಿಸುವ FARM ಕಾರ್ಯಕ್ರಮದ ಜನರ ನೇತೃತ್ವದ ವಿಧಾನವು ಭರವಸೆಯ ಫಲಿತಾಂಶಗಳನ್ನು ತೋರುತ್ತಿದೆ. ರೈತರನ್ನು ಬೆಂಬಲಿಸುವ ಮೂಲಕ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ, ಉಪಕ್ರಮವು ಪೌಷ್ಟಿಕ ಆಹಾರ ಮೂಲವಾಗಿ ಕಿರುಧಾನ್ಯಗಳ ಜನಪ್ರಿಯತೆಯನ್ನು ಹೆಚ್ಚಿಸುವುದರೊಂದಿಗೆ, ಸಣ್ಣ ಹಿಡುವಳಿದಾರ ರೈತರ ಜೀವನೋಪಾಯವನ್ನು ಹೆಚ್ಚಿಸಿತು ಮತ್ತು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಸಂರಕ್ಷಿಸಿತು. ಜನನೇತೃತ್ವದ ಅಭಿವೃದ್ಧಿ ವಿಧಾನವು ಸಮುದಾಯಗಳು ತಮಗೆ ಯಾವುದು ಉತ್ತಮ ಎನ್ನುವುದನ್ನು ಆಧರಿಸಿ ತಮ್ಮ ಆಹಾರ ಭದ್ರತೆಯ ಬಗ್ಗೆ ವಿವೇಚನಾಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಉಪಕ್ರಮವು ಆರೋಗ್ಯಕರ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುವುದರೊಂದಿಗೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ. ಕಿರುಧಾನ್ಯಗಳ ಪುನರುಜ್ಜೀವನವು ಜನಾಂಗೀಯ ಸಮುದಾಯಗಳಲ್ಲಿ ಸಾಂಸ್ಕೃತಿಕ ಆಹಾರ ಪದ್ಧತಿಗಳನ್ನು ಮರಳಿ ತಂದಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವಲ್ಲಿ ಜನರ ನೇತೃತ್ವದ ಮಧ್ಯಸ್ಥಿಕೆಗಳ ಶಕ್ತಿಯನ್ನು ಎತ್ತಿತೋರಿದೆ.

ಪರಾಮರ್ಶನಗಳು

https://apeda.gov.in/milletportal/Production.

html#:~:text=The%20major%20millets%20

producing%20states,in%20Millets%20production%20

in%20India

https://apeda.gov.in/milletportal/about_us.html

https://www.medicalnewstoday.com/articles/what-ismillet#

summary

E-catalogue for export of millets and value-added

products-North Eastern states (https://apeda.gov.in/

milletportal/files/NER_Millet_Value_Added_Products_

Catalogue.pdf)

Millets in the Indian Himalaya (https://www.millets.

res.in/pub/2019/Millets_Indian_Himalaya.pdf)

https://apeda.gov.in/milletportal/Production.

html#:~:text=India%20is%20the%20largest%20

producer,41%20per%20cent%20in%202020

 


Prabal sen

Program Associate

Caritas India

CBCI Centre, Ashok Place,

Opposite Gole Dak Khana,

New Delhi – 110 001, India

E-mail: prabal@caritasindia.org


 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್‌ ೨೦‌೨‌೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp