ಕೃಷಿ ಯಾಂತ್ರೀಕರಣವನ್ನು ಮುನ್ನಡೆಸುತ್ತಿರುವ ಮಹಿಳಾ ರೈತರು


ಸೂಕ್ತ ಬೆಂಬಲ ವ್ಯವಸ್ಥೆಯನ್ನು ಒದಗಿಸಿದರೆ ಮಹಿಳೆಯರು ಕೃಷಿ ಕಾರ್ಯಾಚರಣೆಗಳನ್ನು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಆತ್ಮವಿಶ್ವಾಸದೊಂದಿಗೆ ಹೆಮ್ಮೆಯಿಂದ ನಿರ್ವಹಿಸಲು ಸಬಲರಾಗಬಹುದು. BAIF ನಿಂದ ದೊರೆತ ಸಣ್ಣ ಬೆಂಬಲದೊಂದಿಗೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಚಾಂಪಿಯನ್‌ ಕೃಷಿ ಮಹಿಳೆಯರು ಕೃಷಿ ಉಪಕರಣಗಳನ್ನು ನಿರ್ವಹಣೆಯೊಂದಿಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಇತರ ಮಹಿಳೆಯರನ್ನು ಸಹ ಸಬಲೀಕರಣಗೊಳಿಸಬಹುದು ಎಂದು ತೋರಿಸಿದ್ದಾರೆ.


ಸುಸ್ಥಿರ ಕೃಷಿಯು ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದನ್ನು ಬೇಡುತ್ತದೆ. 2009 ರ ವಿಶ್ವಬ್ಯಾಂಕ್ ಮತ್ತು FAO ದತ್ತಾಂಶದ ಪ್ರಕಾರ, ಸಣ್ಣ ಭೂಮಿ ಹೊಂದಿರುವ ಕುಟುಂಬಗಳಲ್ಲಿನ ಹೆಚ್ಚಿನ ಗಂಡಸರು ವಲಸೆ ಹೋಗಿರುವುದರಿಂದ 80% ಗ್ರಾಮೀಣ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಇವರಲ್ಲಿ ಬಹುತೇಕ ಮಹಿಳೆಯರು ಮೊದಲಿನಿಂದಲೂ ಕೃಷಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು.

ಕೃಷಿ ಚಟುವಟಿಕೆಗಳು ಹೆಚ್ಚಿರುವ ಸಮಯದಲ್ಲಿ ಕೂಲಿಯಾಳುಗಳು ಸಿಗುವುದು ಕಷ್ಟವಾದ್ದರಿಂದ, ಕೃಷಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗುತ್ತದೆ. ಹೀಗಾಗಿ, ಕೃಷಿ ಕಾರ್ಯಾಚರಣೆಗಳ ಯಾಂತ್ರೀಕರಣವು ಜನಪ್ರಿಯವಾಗತೊಡಗಿತು. ಯಂತ್ರೋಪಕರಣಗಳು ದುಬಾರಿಯಾದ್ದರಿಂದ ಮತ್ತು ಅದರ ಬಳಕೆಯು ಸೀಮಿತ ಅವಧಿಗೆ ಮಾತ್ರವಾದ್ದರಿಂದ, ರೈತರು ವೈಯಕ್ತಿಕವಾಗಿ ಅದನ್ನು ಖರೀದಿಸುವುದು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿಯಲ್ಲ.

BAIF ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು ತನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳಾ ಸಬಲೀಕರಣವನ್ನು ಬೆಂಬಲಿಸುತ್ತಾ, ಕಸ್ಟಮ್ ಹೈರಿಂಗ್‌ ಸೆಂಟರ್‌ಗಳನ್ನು (CHCs) ಉತ್ತೇಜಿಸಿತು. ಸಿಎಚ್‌ಸಿಗಳನ್ನು ಪ್ರಾಜೆಕ್ಟ್ ಪ್ರೇರಣಾ ಮೂಲಕ ಉತ್ತೇಜಿಸಲಾಯಿತು – ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ಮಹಿಳಾ ರೈತರನ್ನು ತೊಡಗಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದ ಸಬಲೀಕರಣ ಮಾದರಿಯಾಗಿದೆ. ಈ ಯೋಜನೆಯ ಮೂಲಕ, ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಆರು ಸ್ವಸಹಾಯ ಗುಂಪುಗಳು (SHGs) ಕಸ್ಟಮ್ ಹೈರಿಂಗ್‌ ಸೆಂಟರ್‌ಗಳನ್ನು ಸ್ಥಾಪಿಸಿದವು.

ಯೋಜನಾ ತಂಡವು ಪರಿಣತರೊಂದಿಗಿನ ಸಭೆಗಳೊಂದಿಗೆ ಹೊಸ ರೈತರಿಗೆ ತರಬೇತಿ ಮತ್ತು ಕ್ಷೇತ್ರ ಭೇಟಿಗಳನ್ನು ಆಯೋಜಿಸುವ ಮೂಲಕ ಸ್ವಸಹಾಯ ಸಂಘದ ಸದಸ್ಯರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಭೇಟಿಗಳು ಅವರಿಗೆ ದಿನನಿತ್ಯದ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದ್ಯಮವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಹೆಚ್ಚಿನ ಆತ್ಮವಿಶ್ವಾಸ ಮತ್ತು ಸಾಮರ್ಥ್ಯದೊಂದಿಗೆ, ಅವರು ಕುಟುಂಬಗಳಲ್ಲಿನ ಗಂಡಸರ ಸಹಾಯ ಮತ್ತು ಮಾರ್ಗದರ್ಶನವಿಲ್ಲದೆ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಿದರು.

ಕೃಷಿ ಯಂತ್ರೋಪಕರಣಗಳು ಮತ್ತು ಅವುಗಳ ಬಳಕೆ

ಕೃಷಿ ಯಂತ್ರೋಪಕರಣಗಳ ಲಭ್ಯತೆಯಿಂದಾಗಿ ಸಕಾಲಿಕ ಕೃಷಿ ಕಾರ್ಯಾಚರಣೆಗಳ ನಿರ್ವಹಣೆ ಮತ್ತು ಒಳಹರಿಯುವಿಕೆಗಳ ಪರಿಣಾಮಕಾರಿ ಬಳಕೆ ಸಕ್ರಿಯಗೊಂಡಿತು; ರೈತರು ಹವಾಮಾನ ಸ್ಥಿತಿಸ್ಥಾಪಕ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು; ಶ್ರಮವು ತಗ್ಗಿತು ; ಇಳುವರಿ ಉತ್ತಮಗೊಂಡಿತು; ಬೆಳೆ ಉಳಿಕೆಗಳ ಮರುಬಳಕೆ ಮತ್ತು ಕೃಷಿ ಬೆಳೆ ಉಳಿಕೆಗಳನ್ನು ಸುಡುವುದನ್ನು ತಡೆಗಟ್ಟಿತು; ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಮತ್ತು ಕುಶಲ ಕೆಲಸಗಾರರು ಮತ್ತು ಸಣ್ಣ ಕುಶಲ ಕೆಲಸಗಾರರಿಗೆ ಕೆಲಸದ ಅವಕಾಶಗಳನ್ನು ಸೃಷ್ಟಿಸಿತು.

ಈ ಕಸ್ಟಮ್ ಹೈರಿಂಗ್‌ ಸೆಂಟರ್‌ಗಳಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳಲ್ಲಿ ಸೀಡ್‌ ಡ್ರಿಲ್‌ಗಳು, ಪವರ್ ವೀಡರ್‌ಗಳು, ಸ್ಪ್ರೇಯರ್‌ಗಳು, ರೋಟವೇಟರ್‌ಗಳು, ಈರುಳ್ಳಿ ಬಿತ್ತನೆ ಯಂತ್ರ, ಕಳೆ ತೆಗೆಯುವ ಯಂತ್ರಗಳು, ರಾಗಿ ಕೊಯ್ಲು ಮಾಡುವ ಯಂತ್ರಗಳು ಮತ್ತಿತರ ಕೃಷಿ ಆಧಾರಿತ ಉಪಕರಣಗಳು ಸೇರಿವೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಇದ್ದಲ್ಲಿ, ಅದೇ ಪ್ರಮಾಣದ ನೀರಿನಿಂದ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎನ್ನುವುದನ್ನು ಮಹಿಳೆಯರು ಗಮನಿಸಿದರು.  ಬೀಜ-ಗೊಬ್ಬರ ಡ್ರಿಲ್‌ಗಳು ಅಂತರಬೆಳೆ ಪ್ರದೇಶಗಳಲ್ಲಿ ಅಥವಾ ಅದನ್ನು ವಿಸ್ತರಿಸುವಲ್ಲಿ ಸಹಾಯ ಮಾಡಿದವು. ದುಬಾರಿ ರಾಸಾಯನಿಕ ಗೊಬ್ಬರಗಳನ್ನು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿದವು. ಆ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದರೊಂದಿಗೆ ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದವು. ಕೇಂದ್ರಗಳಲ್ಲಿ ಲಭ್ಯವಿರುವ ಉಪಕರಣಗಳು ಹಗುರವಾಗಿದ್ದು, ಕಾರ್ಯನಿರ್ವಹಿಸಲು ಸುಲಭ ಮತ್ತು ಪರಿಣಾಮಕಾರಿಯಾಗಿದ್ದವು. ಪವರ್ ಸ್ಪ್ರೇಯರ್ ಕೈಯಿಂದ ಸಿಂಪಡಿಸುವ ಶ್ರಮವನ್ನು ಕಡಿಮೆ ಮಾಡಿತು. ಪವರ್ ವೀಡರ್ ಮತ್ತು ಕೈ ಗುದ್ದಲಿ ಮಹಿಳೆಯರ ಶ್ರಮವನ್ನು ಕಡಿಮೆ ಮಾಡಿತು. ಕೇಂದ್ರಗಳಲ್ಲಿ ಲಭ್ಯವಿರುವ ವಿವಿಧ ರೀತಿಯ ಬೆಳೆ ಒಕ್ಕಣೆ/ಕೊಯ್ಲು ಯಂತ್ರಗಳು ರೈತರಿಗೆ ಕಡಿಮೆ ವೆಚ್ಚದಲ್ಲಿ ಸಕಾಲಿದಲ್ಲಿ ಬೆಳೆಕೊಯ್ಲು ಮಾಡಲು ಅನುವು ಮಾಡಿಕೊಟ್ಟವು. ಇದು ಚಂಡಮಾರುತ, ಹಿಮ ಮುಂತಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದು ಸಮಯ, ನೀರು, ಇಂಧನ ಉಳಿತಾಯ ಹಾಗೂ ಶಾಖದ ಒತ್ತಡದಿಂದ ಪಾರಾಗಲು ಸಹಾಯಮಾಡಿತು. ಇದರೊಂದಿಗೆ ರೈತರು ರಾಬಿ ಬೆಳೆಯನ್ನು ಮುಂಚಿತವಾಗಿ ಕೊಯ್ಲು ಮಾಡಲು ಅನುಕೂಲವಾಯಿತು. ಗೋಧಿ, ಸೋಯಾಬಿನ್‌, ಜೋಳಕ್ಕೆ ಬಳಸಲಾದ ಫರೋ ತಂತ್ರಜ್ಞಾನದಿಂದಾಗಿ ನೀರು ನಿಲ್ಲುವಿಕೆ ಮತ್ತು ನೀರಿನ ಸರಾಗ ಹರಿದುಹೋಗುವಿಕೆಯಿಂದ ಮಣ್ಣಿನ ತೇವಾಂಶವು ಬೆಳೆಗಳಿಗೆ ಹಾನಿಯುಂಟು ಮಾಡುವುದು ತಪ್ಪಿತು. 766 ಮಹಿಳಾ ರೈತರು ಈ ಕೃಷಿ ಉಪಕರಣಗಳನ್ನು 187 ದಿನಗಳವರೆಗೆ ಬಳಸಿದರು ಮತ್ತು ರೂ. 74,730 ವಹಿವಾಟು ನಡೆಸಿದರು.

ಚಾಂಪಿಯನ್ ಮಹಿಳಾ ರೈತರಿಗೆ ಉತ್ತೇಜನ

ಕೃಷಿ ಪರಿಣತಿ ಮತ್ತು ನಾವೀನ್ಯತೆ ಹೊಂದಿರುವ ಚಾಂಪಿಯನ್ ಮಹಿಳಾ ರೈತರು ಸಭೆಗಳು ಮತ್ತು ಪ್ರಾಯೋಗಿಕ ತರಬೇತಿಗಳ ಮೂಲಕ ಇತರ ಮಹಿಳೆಯರೊಂದಿಗೆ ತಮ್ಮ ಪರಿಣತಿಯನ್ನು ಹಂಚಿಕೊಂಡರು. ಪ್ರತಿಯೊಬ್ಬ ಚಾಂಪಿಯನ್ ರೈತರು ಕೃಷಿ ಅಭಿವೃದ್ಧಿಯ ಬಗ್ಗೆ ಇತರ 10 ಮಹಿಳೆಯರಿಗೆ ಮಾರ್ಗದರ್ಶನ ನೀಡಿದ ಪರಿಣಾಮವಾಗಿ ಸ್ವತಂತ್ರ ಮಹಿಳಾ ರೈತರು ಸೃಷ್ಟಿಯಾದರು.

ಮಹಿಳೆಯರಿಗೆ ಭಾರೀ ಯಂತ್ರೋಪಕರಣಗಳನ್ನು ಬಳಸುವ ಬಗ್ಗೆಯೂ ತರಬೇತಿ ನೀಡಲಾಯಿತು. 395 ಮಹಿಳೆಯರಲ್ಲಿ 55 ತರಬೇತಿ ಪಡೆದ ಮಹಿಳಾ ರೈತರು ಟ್ರ್ಯಾಕ್ಟರ್‌ಗಳನ್ನು ಚಲಾಯಿಸುತ್ತಿದ್ದಾರೆ.

 ಈ ಉಪಕ್ರಮಗಳ ಮೂಲಕ, BAIF ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಜನಪ್ರಿಯಗೊಳಿಸಿದೆ. ಅಭಿವೃದ್ಧಿಯ ನೇತಾರರಾಗಿ ಹೊರಹೊಮ್ಮುವಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಅವರ ಪ್ರದೇಶಗಳಲ್ಲಿ ಕೃಷಿಯ ಸ್ವರೂಪವನ್ನು ಪರಿವರ್ತಿಸಿದೆ. ರೈತ ಗುಂಪುಗಳು ನಿರ್ವಹಿಸುತ್ತಿರುವ ಕಸ್ಟಮ್ ಹೈರಿಂಗ್‌ ಸೆಂಟರ್‌ ಸೂಕ್ತ ದರದಲ್ಲಿ ಅಗತ್ಯವಿರುವ ಉಪಕರಣಗಳ ಲಭ್ಯತೆಯನ್ನು ಖಚಿತಪಡಿಸಿದೆ. ಈ ದಿಟ್ಟ ಮಹಿಳೆಯರು ಆತ್ಮವಿಶ್ವಾಸದಿಂದ ಮತ್ತು ಉತ್ತಮ ಭವಿಷ್ಯದ ಆಶಯದೊಂದಿಗೆ ಮುನ್ನಡೆಯುತ್ತಿದ್ದಾರೆ.

 


Sujata Kangude

Thematic Programme Executive – Women &

Development, BAIF Development Research

Foundation, BAIF Bhavan, Dr. Manibhai Desai Nagar

Warje, Pune-411058

E-mail: sujata@baif.org.in


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್‌ ೨೦‌೨‌೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp