ಗ್ರಾಮೀಣ ಯುವಜನತೆ – ಭವಿಷ್ಯದ ರೈತರು


ಭಾರತದಲ್ಲಿ ಹೆಚ್ಚುತ್ತಿರುವ ಯುವ ಜನಸಂಖ್ಯೆಯು ದೇಶದ ನಿರ್ಮಾಣದಲ್ಲಿ ಬಳಸಬೇಕಾದ ಆಸ್ತಿಯಾಗಿದೆ. ಗ್ರಾಮೀಣ ಯುವಕರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಮೀಣ ಯುವಜನರ ಆಕಾಂಕ್ಷೆಗಳು ಮತ್ತು ಕೃಷಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಹಾರಾಷ್ಟ್ರದಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದ ಸಂಶೋಧನೆಗಳು ಮತ್ತು ಒಳನೋಟಗಳು ಕೃಷಿಯಲ್ಲಿ ಗ್ರಾಮೀಣ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸೂಕ್ತ ತಂತ್ರಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.


ಭಾರತದಲ್ಲಿ ಯುವಜನತೆಯು ಸಂಖ್ಯಾತ್ಮಕವಾಗಿ ನೋಡಿದಾಗ ಪ್ರಬಲ ಸಾಮರ್ಥ್ಯ ಹೊಂದಿರುವ ಸಂಪನ್ಮೂಲವಾಗಿ ಸಾಹಸೀ ಸಮುದಾಯದ ಭಾಗವಾಗಿದ್ದಾರೆ. ಭಾರತದ ಪ್ರಸ್ತುತ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಶೇಕಡಾ 65 ಕ್ಕಿಂತ ಹೆಚ್ಚು ಜನರು 35 ವರ್ಷ ವಯಸ್ಸಿನವರು. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ೨೦೧೧ ರ ಭಾರತೀಯ ಜನಗಣತಿಯ ಪ್ರಕಾರ, ೨೦೨೨ ರ ವೇಳೆಗೆ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಯುವಜನತೆ ಇರುವ  ದೇಶವಾಗಲಿದೆ. ಅದರ ಜನಸಂಖ್ಯೆಯ ಶೇಕಡ ೬೪ ರಷ್ಟು ಜನರು ದುಡಿಯುವ ವಯಸ್ಸಿನವರಾಗಿದ್ದಾರೆ. ಈ ಜನಸಂಖ್ಯೆಯ ಲಾಭವನ್ನು ಬಳಸಿಕೊಳ್ಳುವುದು ಮತ್ತು ಗ್ರಾಮೀಣ ಯುವಕರು ಮತ್ತು ಅವರ ಸೃಜನಶೀಲ ಶಕ್ತಿಯನ್ನು ದೇಶದ ನಿರ್ಮಾಣದತ್ತ ತಿರುಗಿಸುವುದು ಬಹಳ ಮುಖ್ಯ.

ಭಾರತವು ಈ ಯುವ ಸಮೂಹವನ್ನು ಬಂಡವಾಳ ಮಾಡಿಕೊಳ್ಳಬೇಕಾದರೂ, ಕೃಷಿಯತ್ತ ಯುವಜನರ ಆಸಕ್ತಿ ಕಡಿಮೆ. ಯುವಜನತೆಯನ್ನೇ ಕೇಂದ್ರೀಕರಿಸಿದ ಕೆಲವು ಕಾರ್ಯಕ್ರಮಗಳು ಇವೆ. ಅವುಗಳ ಪ್ರಭಾವ ಕಾಣುವುದು ಕಡಿಮೆ. ಹೀಗಿದ್ದೂ, ಅನೇಕ ದೇಶಗಳಲ್ಲಿ ಐಸಿಎಆರ್ ಮತ್ತು ಕೃಷಿ ಇಲಾಖೆಗಳು ನವೀನ ಮತ್ತು ವೈವಿಧ್ಯಮಯ ಕೃಷಿ ಉದ್ಯಮಗಳನ್ನು ಅಳವಡಿಸಿಕೊಳ್ಳುವಲ್ಲಿನ ಯುವ ರೈತರ ಸಾಮರ್ಥ್ಯವನ್ನು ಗುರುತಿಸುತ್ತಿವೆ. ಅನೇಕ ಯುವ ರೈತರು ಸಂರಕ್ಷಿತ ಕೃಷಿ, ನಿಖರ ಕೃಷಿ, ಸಾವಯವ ಕೃಷಿ, ಹೂ ಕೃಷಿ, ಔಷಧೀಯ ಮತ್ತು ಸುಗಂಧ ದ್ರವ್ಯದ ಸಸ್ಯ ಕೃಷಿ ಮುಂತಾದ ನಷ್ಟದ ಅಪಾಯವಿದ್ದರೂ ಹೆಚ್ಚು ಆದಾಯ ಕೊಡುವಂತಹದ್ದನ್ನು ಕೈಗೊಳ್ಳುತ್ತಿದ್ದಾರೆ, ಇಂತಹದ್ದನ್ನು ಕೈಗೊಳ್ಳಲು ಹಿರಿಯ ರೈತರು ಹಿಂಜರಿಯುತ್ತಾರೆ. ಈ ಹೊಸ ಕೃಷಿ ಉದ್ಯಮಗಳಿಗೆ ಸರ್ಕಾರಿ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳು ಕೌಶಲ್ಯ ತರಬೇತಿ, ಹಣಕಾಸು ಮತ್ತು ಮಾರುಕಟ್ಟೆ ಬೆಂಬಲದೊಂದಿಗೆ ಸಕ್ರಿಯವಾಗಿ ಬೆಂಬಲ ನೀಡಬೇಕಾಗಿದೆ. ಆಗ ಯುವಕರು ಲಾಭದಾಯಕ ಕೃಷಿಯನ್ನು ಮುಂದುವರಿಸಬಹುದು.

ಯುವ ರೈತರು ಮತ್ತು ಉತ್ಪಾದಕರು ವಯಸ್ಸಾದವರಿಗಿಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿಯತ್ತ ಯುವಕರನ್ನು ಆಕರ್ಷಿಸಲು ಮತ್ತು ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಅವರ ಅನುಕೂಲಕ್ಕಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ. ಗ್ರಾಮೀಣ ಯುವಕರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕೃಷಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಅಧ್ಯಯನವನ್ನು ಕೈಗೊಳ್ಳಲಾಯಿತು. ಈ ಅಧ್ಯಯನದ ಸಂಶೋಧನೆಗಳು ಸಮುದಾಯಗಳು ಯುವಕರನ್ನು ಕೃಷಿಯಲ್ಲಿ ಉಳಿಸಿಕೊಳ್ಳಲು ಮತ್ತು ಅದರತ್ತ ಆಕರ್ಷಿಸಲು ಸಹಾಯ ಮಾಡಲು ಕಾರ್ಯಗತಗೊಳಿಸಬಹುದಾದ ಸಂಭಾವ್ಯ ತಂತ್ರಗಳು/ಉಪಕ್ರಮಗಳ ಬಗ್ಗೆ ಆಡಳಿತಗಾರರು ಮತ್ತು ನೀತಿ ನಿರೂಪಕರ ತಿಳಿವಳಿಕೆಯನ್ನು ಹೆಚ್ಚಿಸುವುದರೊಂದಿಗೆ ಆ ಕುರಿತು ಒಳನೋಟವನ್ನು ನೀಡುತ್ತದೆ ಎಂದುಕೊಂಡು ಕೈಗೊಳ್ಳಲಾಗಿದೆ.

ವಿಧಾನಶಾಸ್ತ್ರ

 ಪರಿಶೋಧನಾತ್ಮಕ ಸಂಶೋಧನಾ ವಿನ್ಯಾಸವನ್ನು ಇಲ್ಲಿ ಬಳಸಲಾಯಿತು. ಪ್ರಸ್ತುತ ಅಧ್ಯಯನವನ್ನು ಮಹಾರಾಷ್ಟ್ರದ ವಿದರ್ಭ ಪ್ರದೇಶದ ಯವತ್ಮಾಲ್ (ಅಮರಾವತಿ ಕಂದಾಯ ವಿಭಾಗದಿಂದ) ಮತ್ತು ನಾಗ್ಪುರ (ನಾಗ್ಪುರ ಕಂದಾಯ ವಿಭಾಗದಿಂದ) ಎರಡು ಜಿಲ್ಲೆಗಳಲ್ಲಿ ನಡೆಸಲಾಯಿತು. ಪ್ರತಿ ಜಿಲ್ಲೆಯಿಂದ ಮೂರು ತಾಲ್ಲೂಕುಗಳು ಮತ್ತು ಪ್ರತಿ ತಾಲ್ಲೂಕಿನಿಂದ ಐದು ಗ್ರಾಮಗಳನ್ನು ಅತಿ ಹೆಚ್ಚು ಯುವ ಜನಸಂಖ್ಯೆಯಿರುವ ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಯಾದೃಚ್ಛಿಕ ಮಾದರಿ ವಿಧಾನವನ್ನು ಬಳಸಿಕೊಂಡು 30 ಹಳ್ಳಿಗಳಿಂದ 300 ಮಂದಿ ಯುವಜನತೆಯ ಮಾದರಿ ಗಾತ್ರವನ್ನು ಈ ಹಳ್ಳಿಗಳಿಂದ ಪ್ರತಿಕ್ರಿಯೆ ನೀಡಲು ಆಯ್ಕೆ ಮಾಡಲಾಯಿತು. ಪ್ರತಿಕ್ರಿಯೆ ನೀಡಿದವರು 16-30 ವರ್ಷ ವಯಸ್ಸಿನವರಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

 ಅಧ್ಯಯನದಿಂದ ತಿಳಿದುಬಂದ ಸಂಗತಿಗಳು

ಹದಿನೈದು ಸ್ವತಂತ್ರವಾದ ಬದಲಾಯಿಸಬಹುದಾದ ಸಂಗತಿಗಳಲ್ಲಿ ಐದು ಮಾತ್ರ ಗ್ರಾಮೀಣ ಯುವಜನತೆಯನ್ನು ಕೃಷಿಯತ್ತ ಸೆಳೆಯುವಲ್ಲಿ ಪ್ರಭಾವ ಬೀರುತ್ತಿವೆ ಎಂದು ಅಧ್ಯಯನ ತೋರುತ್ತಿದೆ. ಅವುಗಳಲ್ಲಿ ಶಿಕ್ಷಣ, ಕೃಷಿ ಅನುಭವ, ವಾರ್ಷಿಕ ಆದಾಯ, ಮಾಹಿತಿಯ ಮೂಲಗಳು ಮತ್ತು ಸಾಮಾಜಿಕ ಭಾಗವಹಿಸುವಿಕೆ ಸೇರಿವೆ. ಶಿಕ್ಷಣ (42.60%), ವಾರ್ಷಿಕ ಆದಾಯ (17.50%), ಸಾಮಾಜಿಕ ಭಾಗವಹಿಸುವಿಕೆ (01.80%), ಮಾಹಿತಿಯ ಮೂಲಗಳು (00.90%) ಮತ್ತು ಕೃಷಿ ಅನುಭವ (00.80%) – ಗ್ರಾಮೀಣ ಆಕಾಂಕ್ಷೆಗಳಿಗೆ ಈ 5 ಬದಲಾಗುವ ಸಂಗತಿಗಳ ಕೊಡುಗೆಯಿದೆ. ಈ ಐದು ಗ್ರಾಮೀಣ ಯುವಕರ ಕೃಷಿಯ ಕಡೆಗಿನ ಮಹತ್ವಾಕಾಂಕ್ಷೆಯನ್ನು ನಿರ್ಧರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಈ ಫಲಿತಾಂಶಗಳು ಕೃಷಿಯ ಕಡೆಗೆ ಹೆಚ್ಚಿನ ಮಹತ್ವಾಕಾಂಕ್ಷೆ ಹೊಂದುವಲ್ಲಿ ಇವು ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಪುರಾವೆಗಳನ್ನು ಒದಗಿಸುತ್ತವೆ.

ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿರುವ ಹದಿನೈದು ಸ್ವತಂತ್ರ ಬದಲಾಗಬಹುದಾದ ಸಂಗತಿಗಳಲ್ಲಿ, ಆರು ಮಾತ್ರ ಗ್ರಾಮೀಣ ಯುವಜನತೆಯು ಕೃಷಿಯಲ್ಲಿ ಉಳಿಯಲು ಪ್ರಭಾವ ಬೀರಿದೆ. ಇದು ಶಿಕ್ಷಣ, ಕೃಷಿ ಅನುಭವ, ಕೌಟುಂಬಿಕ ಉದ್ಯೋಗ, ವಾರ್ಷಿಕ ಆದಾಯ, ಆರ್ಥಿಕ ಪ್ರೇರಣೆ, ಪಡೆದ ತರಬೇತಿಯನ್ನು ಒಳಗೊಂಡಿದೆ. ಕೃಷಿಯಲ್ಲಿ ಯುವಕರನ್ನು ಉಳಿಸಿಕೊಳ್ಳುವಲ್ಲಿ ಆರು ಅಂಶಗಳ ಕೊಡುಗೆಯ ವ್ಯಾಪ್ತಿ ಹೀಗಿದೆ – ಶಿಕ್ಷಣ (43.75%), ವಾರ್ಷಿಕ ಆದಾಯ (07.66%), ಕೃಷಿ ಅನುಭವ (01.54%), ಆರ್ಥಿಕ ಪ್ರೇರಣೆ (01.16%),

ಕುಟುಂಬದ ಉದ್ಯೋಗ (01.01%), ಮತ್ತು ಪಡೆದ ತರಬೇತಿ (00.66%). ಈ ಫಲಿತಾಂಶಗಳು ಕೃಷಿಯನ್ನು ಬಿಡದೆ ಅಲ್ಲಿಯೇ ಉಳಿದುಕೊಳ್ಳುವಲ್ಲಿ ಇವು ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಪುರಾವೆಗಳನ್ನು ಒದಗಿಸುತ್ತವೆ.

 ಉಪಸಂಹಾರ ಮತ್ತು ಮುಂದಿನ ಹಾದಿ

ಕೃಷಿಯ ಕಡೆಗಿನ ಗ್ರಾಮೀಣ ಯುವಜನತೆಯ ಮಹತ್ವಾಕಾಂಕ್ಷೆಗಳು ಮತ್ತು ಅದನ್ನು ಉಳಿಸುವಲ್ಲಿ ಶಿಕ್ಷಣವು ಪ್ರಮುಖ ಕೊಡುಗೆ ನೀಡುತ್ತದೆ ಎನ್ನುವುದನ್ನು ಗಮನಿಸಲಾಗಿದೆ. ಕೃಷಿಯಲ್ಲೇ ಯುವಜನತೆ ಉಳಿಯಬೇಕೆಂದಲ್ಲಿ ಆದಾಯವು ನಿರ್ಣಾಯಕ ಅಂಶವಾಗಿದೆ. ಯುವಜನತೆಯ ವೈಯಕ್ತಿಕ, ಸಾಮಾಜಿಕ-ಆರ್ಥಿಕ, ಮಾನಸಿಕ ಮತ್ತು ಸಂವಹನ ಗುಣಲಕ್ಷಣಗಳು ಅವರು ಕೃಷಿಯ ಬಗ್ಗೆ ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಮತ್ತು ಅದನ್ನು ಆಯ್ಕೆ ಮಾಡಿಕೊಂಡು ಉಳಿಯುವಲ್ಲಿ ನಿರ್ಣಾಯಕ ಅಂಶಗಳಾಗಿವೆ.

ಗ್ರಾಮೀಣ ಯುವಜನತೆಯಲ್ಲಿ ಹೆಚ್ಚಿನವರು ವಾರ್ಷಿಕ ಆದಾಯ ಕಡಿಮೆಯಿರುವ ಮಧ್ಯಮ ವರ್ಗಕ್ಕೆ ಸೇರಿದವರು ಎಂದು ಅಧ್ಯಯನವು ತೋರಿಸಿದೆ. ಅಂತಹವರನ್ನು ಉಳಿಸಿಕೊಳ್ಳಲು, ಅವರಿಗೆ ಕೃಷಿ ಆದಾಯದ ಜೊತೆಗೆ ಪೂರಕ ಆದಾಯವನ್ನು ಒದಗಿಸುವ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ, ಹೈನುಗಾರಿಕೆ, ಮೇಕೆ ಸಾಕಣೆ, ಕೋಳಿ ಸಾಕಣೆ, ಮೀನುಗಾರಿಕೆ, ಜೇನು ಸಾಕಣೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಂತಹ ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಬೆಂಬಲವನ್ನು ಒದಗಿಸಬೇಕಾಗಿದೆ. ಅದೇ ರೀತಿ, ಸರ್ಕಾರಿ ಸಂಸ್ಥೆಗಳು ಸಾಲ ಮತ್ತು ಮಾರುಕಟ್ಟೆ ಸೌಲಭ್ಯಗಳೊಂದಿಗೆ ಬೆಂಬಲ ನೀಡುವುದರ ಜೊತೆಗೆ ಉತ್ತಮ ಜ್ಞಾನ ಮತ್ತು ತರಬೇತಿಯನ್ನು ಒದಗಿಸಲು ಪ್ರಯತ್ನಿಸಬೇಕು.

ಪಡೆದ ತರಬೇತಿಯು ಗ್ರಾಮೀಣ ಯುವಕರನ್ನು ಕೃಷಿಯಲ್ಲಿ ಉಳಿಸಿಕೊಳ್ಳುವಲ್ಲಿ ಗಮನಾರ್ಹ ಕೊಡುಗೆ ನೀಡಿತು. ಆದ್ದರಿಂದ, ಗ್ರಾಮೀಣ ಯುವಜನತೆಯನ್ನು ವಿಭಿನ್ನ ತರಬೇತಿ ವಿಧಾನಗಳು ಮತ್ತು ಮುಂದುವರಿದ ಕೃಷಿ ಆಧಾರಿತ ತಂತ್ರಜ್ಞಾನಗಳ ಮೂಲಕ ವೈಜ್ಞಾನಿಕ ಜ್ಞಾನ ಮತ್ತು ಕೌಶಲ್ಯಗಳಿಗೆ ಒಡ್ಡಿಕೊಳ್ಳುವಂತೆ ಮಾಡಬೇಕೆಂದು ಸೂಚಿಸಲಾಗಿದೆ. ಗ್ರಾಮೀಣ ಯುವಜನತೆಯು ಆದಾಯ ತರುವ ಉದ್ಯಮಗಳನ್ನು ಪ್ರಾರಂಭಿಸಲು ರಾಜ್ಯ ಕೃಷಿ ಇಲಾಖೆಗಳು ಮತ್ತು ಇತರ ಅಭಿವೃದ್ಧಿ ಇಲಾಖೆಗಳು ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ತರಬೇತಿ ನೀಡಬಹುದು.

ಸಾಮಾಜಿಕ ಭಾಗವಹಿಸುವಿಕೆಯೂ ಗ್ರಾಮೀಣ ಯುವಜನತೆಯ ಮಹತ್ವಾಕಾಂಕ್ಷೆಗೆ ಕೊಡುಗೆ ನೀಡುತ್ತದೆ ಎಂದು ಕಂಡುಬಂದಿದೆ. ಆದ್ದರಿಂದ, ಕ್ಷೇತ್ರ ಮಟ್ಟದ ವಿಸ್ತರಣಾ ಕಾರ್ಯಕರ್ತರ ಮೂಲಕ ಅವರಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ಮೂಲಕ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಲಾಗಿದೆ. ಕೃಷಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಸ್ತರಣಾ ಕಾರ್ಯವಿಧಾನವನ್ನು ನವೀಕರಿಸಬೇಕಾಗಿದೆ. ಅಲ್ಲದೆ, ಗ್ರಾಮೀಣ ಯುವಜನತೆಯು ಕೃಷಿ ಮತ್ತು ಸಂಬಂಧಿತ ಮಾಹಿತಿಗಾಗಿ ಸಮೂಹ ಮಾಧ್ಯಮ/ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲು ಪ್ರೋತ್ಸಾಹಿಸಬೇಕು.

ಗ್ರಾಮೀಣ ಯುವಜನತೆಯನ್ನು ಕೃಷಿಯಲ್ಲಿ ಉಳಿಸಿಕೊಳ್ಳುವಲ್ಲಿ ಆರ್ಥಿಕ ಪ್ರೇರಣೆ ಪ್ರಮುಖ ಅಂಶವಾಗಿದೆ ಎಂದು ಕಂಡುಬಂದಿರುವುದರಿಂದ ಸಹಾಯಧನಗಳನ್ನು ಒದಗಿಸಲು ಪ್ರಯತ್ನಿಸಬೇಕು. ವಿಸ್ತರಣಾ ಸಂಸ್ಥೆಗಳು ಗ್ರಾಮೀಣ ಯುವಜನತೆ ವಾಣಿಜ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಗುಂಪು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಹೆಚ್ಚಿಸಲು ಪ್ರೇರೇಪಿಸಬೇಕು. ಯುವ ಪೀಳಿಗೆಯಲ್ಲಿ ಕೃಷಿಯ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಸೃಷ್ಟಿಸಲು ಸಾಮಾಜಿಕ ಪ್ರಕ್ರಿಯೆಗಳು ಕಾರಣವಾಗಿವೆ. ಇದು ಕೃಷಿ ಕ್ಷೇತ್ರದಲ್ಲಿ ವಿಶೇಷವಾಗಿ ಕೃಷಿಕರನ್ನು ತೊಡಗಿಸಿಕೊಳ್ಳುವ ಗ್ರಾಮೀಣ ಯುವ ಕಾರ್ಯಕರ್ತರ ಗುಂಪುಗಳು ಅಥವಾ ಸಮುದಾಯಗಳನ್ನು ಬಲಪಡಿಸುತ್ತದೆ.


A.S. Gomase
Senior Research Assistant, Associate Dean (Instruction)
Dr. PDKV
Akola-444104, Maharashtra, India
E-mail: anilgomase2002@yahoo.co.in
 
S. Tekale
Associate Dean,
College of Agriculture, Mul, Chandrapur
Dr. PDKV
Akola-444104, Maharashtra, India

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್ ೨೦‌೨೪ 

Recent Posts

ಪ್ರಯೋಜನಕಾರಿ ಕೀಟಗಳ ಬಗ್ಗೆ ಪ್ರಚಾರ- ಪರಾಗಸ್ಪರ್ಶಕಗಳ ಸಂರಕ್ಷಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು

ಪ್ರಯೋಜನಕಾರಿ ಕೀಟಗಳ ಬಗ್ಗೆ ಪ್ರಚಾರ- ಪರಾಗಸ್ಪರ್ಶಕಗಳ ಸಂರಕ್ಷಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು

ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕ ಕೀಟಗಳ ಜನಸಂಖ್ಯೆಯನ್ನು ಹೆಚ್ಚಿಸಲು BAIF ನ ಆರಂಭಿಕ ಉಪಕ್ರಮಗಳು ಪರಾಗಸ್ಪರ್ಶ ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಕೃಷಿ ಪರಿಸರ ಸಂರಕ್ಷಣೆಯ ಭವಿಷ್ಯದ ಸಂರಕ್ಷಕರಾಗಲು ಯುವಕರನ್ನು ಸಬಲೀಕರಣಗೊಳಿಸಿವೆ.

ಉಪಗ್ರಹ ಆಧಾರಿತ ನಿಖರ ಕೃಷಿ ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಸೇತುವೆ

ಉಪಗ್ರಹ ಆಧಾರಿತ ನಿಖರ ಕೃಷಿ ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಸೇತುವೆ

ಫಾರ್ಮೋನಾಟ್‌ನ ಉಪಗ್ರಹ ಆಧಾರಿತ ನಿಖರ ಕೃಷಿ ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ – ಇದು ರೂಪಾಂತರದ ಬಗ್ಗೆ. ಅತ್ಯಾಧುನಿಕ ಪರಿಕರಗಳನ್ನು ರೈತರ ಕಾಲಾತೀತ ಸ್ಥಿತಿಸ್ಥಾಪಕತ್ವದೊಂದಿಗೆ ಸಂಯೋಜಿಸುವ ಮೂಲಕ, ಈ ವಿಧಾನವು ಕೃಷಿಯು ಹೆಚ್ಚು ಸುಸ್ಥಿರ, ಉತ್ಪಾದಕ ಮತ್ತು ಲಾಭದಾಯಕವಾಗಿರುವ ಭವಿಷ್ಯವನ್ನು ಸೃಷ್ಟಿಸುತ್ತಿದೆ.

ಪೌಷ್ಟಿಕಾಂಶ ತೋಟಗಳು ಆರೋಗ್ಯ ಹಾಗೂ ಸಂಪತ್ತಿನ ಲಾಭಕ್ಕೆ ರಹದಾರಿ

ಪೌಷ್ಟಿಕಾಂಶ ತೋಟಗಳು ಆರೋಗ್ಯ ಹಾಗೂ ಸಂಪತ್ತಿನ ಲಾಭಕ್ಕೆ ರಹದಾರಿ

ಆಂಧ್ರಪ್ರದೇಶದ ವೀರಭದ್ರಪುರಂ ಗ್ರಾಮದ ಜಾನಕಿ ಬೊಬ್ಬಿಲಿ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕಾಲಕ್ಕೆ ತಕ್ಕಂತೆ ವೈವಿಧ್ಯಮಯ, ಪೌಷ್ಟಿಕ ಆಹಾರವನ್ನು ಉತ್ತಮವಾಗಿ ಪಡೆಯುವ ಮೂಲಕ ಗ್ರಾಮೀಣ ಕುಟುಂಬಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನ್ಯೂಟ್ರಿ-ಗಾರ್ಡನ್ ಉಪಕ್ರಮದ ಪ್ರತಿಪಾದಕರಲ್ಲಿ ಒಬ್ಬರು. ಈ ಉಪಕ್ರಮವು ಗ್ರಾಮೀಣ ಭಾರತದಾದ್ಯಂತ ಬದಲಾವಣೆಯ ಪ್ರಬಲ ಅಲೆಯನ್ನು ಸೃಷ್ಟಿಸುತ್ತಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ

YouTube
Instagram
WhatsApp