ಜಲಚರ ಸಾಕಾಣಿಕೆಗೆ ಡಿಜಿಟಲ್ ಪರಿಹಾರಗಳು


FarmMOJO ಎನ್ನುವುದು ಜಲಚರ ಸಾಕಾಣಿಕೆಯ ಸಮಸ್ಯೆಗಳ ಡಿಜಿಟಲ್ಪರಿಹಾರ. ಅದೊಂದು ಸರಳವಾದ ಮೊಬೈಲ್ಅಪ್ಲಿಕೇಶನ್‌. ಲಭ್ಯವಿರುವ ತೋಟದ ವಿವರಗಳನ್ನಾಧರಿಸಿ ನೀರಿನ ಗುಣಮಟ್ಟ, ಉಣಿಸಬೇಕಾದ ಆಹಾರ, ಒಟ್ಟಾರೆ ಹೊಂಡದ ಆರೋಗ್ಯ ಸೂಚ್ಯಂಕಗಳ ಕುರಿತು ಸಲಹೆಯನ್ನು ನೀಡುತ್ತದೆ.


ಜಲಚರ ಸಾಕಾಣಿಕೆಯು ಕಳೆದ ಕೆಲವು ದಶಕಗಳಲ್ಲಿ ಸಾಕಷ್ಟು ಬೆಳೆದಿದೆ. ೨೦೨೫ರ ವೇಳೆಗೆ US$208.9 ಬಿಲಿಯನ್‌ ಹಣ ಹರಿದು ಬರಲಿದ್ದು ಜಾಗತಿಕ ಬೆಳವಣಿಗೆಗೆ ಕೊಡುಗೆಯಾಗಲಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ೨೦೩೦ರ ವೇಳೆಗೆ ಜಾಗತಿಕವಾಗಿ ಮೀನನ್ನು ಆಹಾರವಾಗಿ ಬಳಸುತ್ತಿರುವ ಪ್ರಮಾಣಕ್ಕೆ ಮೂರನೇ ಎರಡರಷ್ಟನ್ನು ಕೊಡುಗೆ ನೀಡಲಿದೆ.

ಜಲಚರ ಸಾಕಣೆಯಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಡಿಜಿಟಲ್‌ ಪರಿವರ್ತನೆಯು ಅನಿವಾರ್ಯವಾಗಿದೆ. ಈ ಬದಲಾವಣೆಯು ಸರ್ಕಾರಿ ಸಂಸ್ಥೆಗಳು, ಏಜನ್ಸಿಗಳು, ಸಂಶೋಧಕರು, ಪೂರೈಕೆದಾರರ ಒಗ್ಗೂಡಿದ ಪ್ರಯತ್ನವನ್ನು ಬೇಡುತ್ತದೆ. ಇವರೆಲ್ಲರ ಸಾಂಘಿಕ ಪ್ರಯತ್ನದಿಂದ ಸರಿಯಾದ ತಂತ್ರಜ್ಞಾನವನ್ನು ರೈತರಿಗಾಗಿ ಅಭಿವೃದ್ಧಿ ಪಡಿಸಬಹುದಾಗಿದೆ. ಡಿಜಿಟಲ್‌ ಪರಿವರ್ತನೆ ಎನ್ನುವುದು ಕೇವಲ ತಂತ್ರಜ್ಞಾನ ಬಳಕೆಯ ಪರಿವರ್ತನೆಯಲ್ಲ. ಅದು ವ್ಯಾಪಾರ ಸಂಸ್ಕೃತಿಯಲ್ಲಿ ತರುವ ಬದಲಾವಣೆಯನ್ನೂ ಒಳಗೊಂಡಿದೆ. ಉದಾಹರಣೆಗೆ eFishery ಇದು ಅಂತರ್ಜಾಲ ಆಧಾರಿತವಾಗಿದ್ದು ಹೊಂಡದಲ್ಲಿನ ಮೀನುಗಳ ಮೇಲೆ ನಿಗಾವಹಿಸುವ ಮೂಲಕ ಅವುಗಳಿಗೆ ಹಾಕುವ ಆಹಾರ ಪ್ರಮಾಣವನ್ನು ಕೂಡ ನಿಯಂತ್ರಿಸುತ್ತದೆ.

ಮೀನು ಸಾಕಾಣಿಕೆ ಹೊಂಡದ ರಿಮೊಟ್‌ನಿಂದ ನಿಯಂತ್ರಿಸಲಾಗುವ ವ್ಯವಸ್ಥೆ

ಡಿಜಿಟಲ್ಪರಿಹಾರಗಳ ಶಕ್ತಿ

ಜಲಚರ ಸಾಕಣೆಯ ಉದ್ಯಮದಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಸಂವಹನ ನಡೆಸುವುದು, ಸೆಂಟ್ರಲ್‌ ಕಮಾಂಡ್‌ ಸ್ಟೇಷನ್ನಿಗೆ ಅಗತ್ಯವಾದ ಮಾಹಿತಿಯನ್ನು ಕಳಿಸುವುದು, ಅಪ್‌ಲೋಡ್‌ ಮಾಡುವ ಮೂಲಕ ನಿರ್ವಾಹಕರಿಗೆ ಇರುವ ಸೌಲಭ್ಯದ ಚಿತ್ರಣ ನೀಡುವುದು ಇಂದು ಅತ್ಯಗತ್ಯವಾಗಿದೆ. IoT ವೇದಿಕೆಯು ಸ್ಮಾರ್ಟ್‌ ಪಾಂಡ್‌ ಮ್ಯಾನೇಜ್‌ಮೆಂಟ್‌ ವ್ಯವಸ್ಥೆಯನ್ನು ರೂಪಿಸಿದೆ. IoTಯ ಇಂಟೆಲಿಜೆಂಟ್‌ ವ್ಯವಸ್ಥೆಯು ನೀರಿನ ತಾಪಮಾನ, ಪಿಎಚ್‌, ಆಮ್ಲಜನಕ, ನೀರಿನ ಮಟ್ಟ ಇತ್ಯಾದಿಗಳನ್ನು ತಿಳಿಯಲು ಸೆನ್ಸಾರ್‌ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಸೋಲಾರ್‌ ಮತ್ತು ಸೋಲಾರ್‌ ಅಲ್ಲದ ಸೆನ್ಸಾರ್‌ಗಳು ಲಭ್ಯವಿದೆ. ಇದು ಶ್ರಮವಿಲ್ಲದೆ ಮೀನು ಮತ್ತು ಸೀಗಡಿ ಸಾಕಣೆ ಮಾಡಲು ೨೪ ಗಂಟೆ ಅವುಗಳ ಮೇಲ್ವಿಚಾರಣೆ ಮಾಡಲು ನೆರವು ನೀಡುತ್ತದೆ. ಹೊಂಡ ಕೃಷಿಯ ಮೇಲ್ವಿಚಾರಣೆಯನ್ನು ಮೊಬೈಲ್‌ ಇಲ್ಲವೇ ಕಂಪ್ಯೂಟರ್‌ ಮೂಲಕ ಮಾಡಬಹುದು. ಇದರಿಂದ ರೈತರಿಗೆ ವಿರಾಮ ಸಿಗುವುದಲ್ಲದೆ ಕೂಲಿಯ ವೆಚ್ಚವೂ ತಗ್ಗುತ್ತದೆ. ಇದರೊಂದಿಗೆ ಹ್ಯೂಮನ್‌ – ಮೆಷಿನ್‌ ಇಂಟರ್ಫೇಸ್‌ ಡಿಸ್ಪ್ಲೆ, ರಿಮೋಟ್‌ ಕಂಟ್ರೋಲ್‌, ಕ್ಲೌಡ್‌ ಮತ್ತಿತರ ದತ್ತಾಂಶ ಸಂಗ್ರಹ ಸೌಲಭ್ಯವನ್ನು ಒಳಗೊಂಡಿದೆ. ದಿನನಿತ್ಯದ ರೆಕಾರ್ಡಿಂಗ್‌ ಮತ್ತು ನಿರ್ವಹಣೆಯನ್ನು ಗ್ರಾಫಿಕ್‌ಗಳಾಗಿ ಪರಿವರ್ತಿಸಬಹುದು. ಇದರಿಂದ ರೈತರು ದಿನದ ಬದಲಾವಣೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಇಂಟೆಲಿಜೆಂಟ್‌ ಕಂಟ್ರೋಲ್‌ ಸಿಸ್ಟಂ ಇದನ್ನು ವಾಯುಪೂರಕ, ಆಹಾರಪೂರಕ, ನೀರಿನ ಉಷ್ಣಾಂಶ ಮಾಪಕ, ಲವಣಾಂಶ ಮಾಪಕ, ಪಿಎಚ್‌ ಮಾಪಕ, ಆಮ್ಲಜನಕ ಮಾಪಕ, ನೀರಿನ ಮಟ್ಟ ಮಾಪಕ, ಇಸಿ ಮಾಪಕ, NH4-N ಮಾಪಕ, ನೈಟ್ರೇಟ್‌ ಮಾಪಕ, ನೀರಿನ ಪಂಪ್‌, ಜನರೇಟರ್‌ ಸಂಪರ್ಕ ಇತ್ಯಾದಿಗಳನ್ನು ನಿಯಂತ್ರಿಸಲು ಬಳಸಬಹುದು. ಜಲಚರ ಸಾಕಣೆಯ ಹೊಂಡದಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ಸಿಗ್ನಲ್‌ ನೀಡುತ್ತದೆ. ವಾಯುಪೂರಕವು ತಕ್ಷಣವೇ ಆಮ್ಲಜನಕ ಮಟ್ಟದ ಆಧಾರದ ಮೇಲೆ ಪವರ್‌ ಆನ್‌ ಅಥವ ಆಫ್‌ ಮಾಡುತ್ತದೆ.

ಮೀನು ಮತ್ತು ಸೀಗಡಿಯ ಆಹಾರಪೂರಕಗಳ ಆಹಾರ ಪೂರೈಕೆಯ ಸಮಯ ಮತ್ತು ಬಳಕೆಗೆ ತಕ್ಕಂತೆ ಬದಲಿಸಬಹುದು. ಸ್ಥಳೀಯ ನೆಟ್‌ವರ್ಕ್‌ ವ್ಯವಸ್ಥೆಯು ರೂಟರ್‌, ಮೋಡಂ, 12 V ಬ್ಯಾಟರಿಯನ್ನು ಒಳಗೊಂಡಿರುತ್ತದೆ.  ಇದು ಸೆನ್ಸಾರ್‌ ಮೂಲಕ ಕ್ಲೌಡ್‌ ಸರ್ವರ್‌ಗೆ ಇಲ್ಲವೇ ಸರ್ವರ್‌ನಿಂದ ವಾಯುಪೂರಕಕ್ಕೆ  ಮಾಹಿತಿಯನ್ನು ಕಳಿಸಬಹುದು, ಪಡೆಯಬಹುದು. ಇದಕ್ಕೆ MQTT (Message Queuing Telemetry Transport) ರೀತಿಯನ್ನು ಬಳಸುತ್ತಾರೆ.

ಕಂಪ್ಯೂಟರ್‌ ವ್ಯವಸ್ಥೆ ಸಂಪನ್ಮೂಲಗಳಲ್ಲಿ ದತ್ತಾಂಶ ಸಂಗ್ರಹಣೆಗೆ ಹಾಗೂ ದತ್ತಾಂಶ ಪಡೆಯಲು ಕ್ಲೌಡ್‌ ಕಂಪ್ಯೂಟಿಂಗ್‌ಗೆ ಹೆಚ್ಚಿನ ಬೇಡಿಕೆಯಿದೆ. ಅದು ಹಾರ್ಡ್‌ ಡ್ರೈವ್‌ ಇಲ್ಲವೆ ಲೋಕಲ್‌ ನೆಟ್‌ವರ್ಕ್‌ ಸ್ಟೋರೇಜಿನಂತಲ್ಲ. ಆಂಧ್ರ ಪ್ರದೇಶದ ವಿಜಯವಾಡದ ಎರುವಾಕ ಟೆಕ್ನಾಲಜಿಸ್‌ ಪ್ರೈ. ಲಿ, ಕ್ಲೌಡ್‌ ಆಧಾರಿತ ಜಲಚರ ಸಾಕಾಣಿಕೆಯ ಹೊಂಡ ನಿರ್ವಹಣೆಯಲ್ಲಿ ರಿಯಲ್‌ ಟೈಂ ಮಾನಿಟರಿಂಗ್‌ ಮಾಡಲು ಇಂಟೆಲಿಜೆಂಟ್‌ ಕಂಟ್ರೋಲ್‌ ವ್ಯವಸ್ಥೆ ಬಳಸಬಹುದು. ಇದರಲ್ಲಿ ವಾಯ್ಸ್‌ ಅಲರ್ಟ್‌ ವ್ಯವಸ್ಥೆಯಿದೆ.

ಹೊಸ ಉದ್ಯಮಿಗಳ ಪ್ರಕಾರ ಭವಿಷ್ಯದಲ್ಲಿ ಹಡೂಪ್‌ ಪ್ಲಾಟ್‌ಫಾರಂ ಉದ್ಯಮ ಬೆಳವಣಿಗೆಯಲ್ಲಿ ಇಳುವರಿ ಉತ್ಪಾದನೆಯಲ್ಲೂ ಪ್ರಭಾವ ಬೀರಲಿದೆ. ಬಿಗ್‌ಡೇಟಾವು ಬೃಹತ್‌ ದತ್ತಾಂಶಗಳನ್ನು ನಿರ್ವಹಿಸಬಲ್ಲುದು. ಮನುಷ್ಯರು ನಿರ್ವಹಿಸಲು ಕಷ್ಟವಾಗುಂತಹದ್ದನ್ನು ಆಟೋಮೇಟೆಡ್‌ ಸಿಸ್ಟಂ ಮೂಲಕ ಮಾಡಬಹುದಾಗಿದೆ. ಈ ಮಾಹಿತಿಗಳು ಗ್ರಾಹಕರ ವ್ಯವಹಾರ ದಾಖಲೆಗಳು, ಉತ್ಪಾದನೆಯ ವಿವರ, ವೆಬ್‌ ಟ್ರಾಫಿಕ್‌ ಲಾಗ್‌ಗಳು, ಆಟೊಮೇಶನ್‌, ಉಪಗ್ರಹಗಳು, ಸೆನ್ಸಾರ್‌ಗಳು ಮತ್ತು IoT ಆಗಿರಬಹುದು.

FarmMOJO ನೀರಿನ ಗುಣಮಟ್ಟ, ಆಹಾರ, ರೋಗದ ಸೂಚ್ಯಂಕಗಳು, ಬಯೋಮಾಸ್‌ ಪರಿವರ್ತನೆಯು ಸಾಕಣೆಯ ಆಹಾರ ವಿಧಾನದ ದಕ್ಷತೆಯನ್ನು ನಿರಂತರವಾಗಿ ನಿಗಾವಹಿಸುವಿಕೆಯ ಮೂಲಕ ಖಾತ್ರಿಗೊಳಿಸುತ್ತದೆ.

iQuatic ಎನ್ನುವ ಡಿಜಿಟಲ್‌ ವೇದಿಕೆಯು ಸೀಗಡಿಯ ಗಾತ್ರ, ನೀರಿನ ಗುಣಮಟ್ಟ, ಆಹಾರ ಕ್ರಮ, ಆರೋಗ್ಯ ಮತ್ತು ನೀರಿನ ಪರಿಸ್ಥಿತಿಯನ್ನು ವಿಶ್ಲೇಷಿಸಿ ರೈತರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ತಮ್ಮ ಪದ್ಧತಿಗಳನ್ನು ಸುಧಾರಿಸಿಕೊಳ್ಳಲು ನೆರವು ನೀಡುತ್ತದೆ. Aquanetix, AquaManager, Aquatracker, Smart Water Planet ವೇದಿಕೆಗಳು ಜಲಚರ ಸಾಕಣೆ ನಿರ್ವಹಣೆಗೆ ಪರಿಹಾರಗಳನ್ನು ನೀಡುತ್ತದೆ. ಇವು ಸ್ಮಾರ್ಟ್‌ ಐಟಿ ಮತ್ತು ನವೀನ ಮೀನು ಕೃಷಿ ವಿಧಾನಗಳನ್ನು ಒಳಗೊಂಡಿರುತ್ತದೆ. Cageeye ಮೀನಿನ ವರ್ತನೆ ಮತ್ತು ಆಹಾರ ಚಕ್ರಗಳ ಮೇಲೆ ನಿಗಾವಹಿಸುತ್ತದೆ. Aquavista ಎನ್ನುವ IoT ವೇದಿಕೆಯು ಕಂಪನಿಯ ಜಲಚರ ಸಾಕಣೆ ಉತ್ಪಾದನಾ ವಿಧಾನಗಳ ಕುರಿತು ಸಮಗ್ರ ನೋಟವನ್ನು ಒದಗಿಸುತ್ತದೆ.

FarmMOJO ಕೃತಕಬುದ್ಧಿಮತ್ತೆಯನ್ನು ಒಳಗೊಂಡ ವೇದಿಕೆ

FarmMOJO ಮಾರ್ಚ್‌ ೨೦೧೮ರಲ್ಲಿ ಭಾರತೀಯ ಸೀಗಡಿ ಮತ್ತು ಮೀನು ಕೃಷಿಕರ ಸಮಸ್ಯೆಗಳಿಗೆ ಡಿಜಿಟಲ್‌ ಪರಿಹಾರಗಳನ್ನು ಒದಗಿಸಲು ಹುಟ್ಟಿತು. ಮೊಬೈಲ್‌ ಆಪ್‌ ಇಂಟರ್ಫೇಸ್‌ ರೈತರಿಗೆ ಹೊಂಡದ ನೀರಿನ ಗುಣಮಟ್ಟ, ಆಹಾರ ಬಳಕೆ, ಸಮಗ್ರ ಆರೋಗ್ಯ ಸೂಚ್ಯಂಕದ ಕುರಿತು ಸಲಹೆ ನೀಡುತ್ತದೆ. ಇದೊಂದು ಸರಳವಾದ ಮೊಬೈಲ್‌ ಅಪ್ಲಿಕೇಶನ್‌. ರೈತರು ತಮ್ಮ ಹೊಂಡದ ಕುರಿತು ಆಪ್‌ಗೆ ನೀಡುವ ಮಾಹಿತಿಯ ಆಧಾರದ ಮೇಲೆ ಸಲಹೆಗಳನ್ನು ಒದಗಿಸುತ್ತದೆ.

FarmMOJO ಬಿಗ್‌ ಡೇಟಾ ಮತ್ತು ಕೃತಕ ಬುದ್ಧಿಮತ್ತೆಯನ್ನು ಕೃಷಿ ಸಲಹಾ ಸಲಕರಣೆಯಾಗಿ ಬಳಸುತ್ತದೆ. ಮೊಬೈಲ್‌ ಅಪ್ಲಿಕೇಶನ್‌ ಇಂಟರ್ಫೇಸ್‌ ಮೂಲಕ ಹೊಂಡದಿಂದ  ನೈಜ ಸಮಯದಲ್ಲಿ ಸಂಗ್ರಹಿಸಲಾದ ಉತ್ಪಾದನೆಯ ದತ್ತಾಂಶದ ಮೇಲೆ ನಿಗಾವಹಿಸುತ್ತದೆ. ಈ ತಂತ್ರಾಂಶವು IoT ಅಥವ ಸ್ಮಾರ್ಟ್‌ ಫಾರಂ ಮ್ಯಾನೇಜ್‌ಮೆಂಟ್‌ ಸಲಕರಣೆಯು ಸಂಗ್ರಹಿಸಿದ ಮಾಹಿತಿಯನ್ನು ಬಳಸುತ್ತದೆ. ಹೊಂಡದ ಉತ್ಪಾದನಾ ಮಾಹಿತಿಯನ್ನು ಆಧರಿಸಿ ಮುನ್ಸೂಚನಾ ಮಾದರಿಯು ಅಲ್ಗಾರಿದಮ್‌ ಬಳಸುತ್ತದೆ. ಇದನ್ನು ನೀರಿನ ಗುಣಮಟ್ಟ ಹೆಚ್ಚಿಸಲು ಸಲಹೆಗಳು, ಮುನ್ನಚ್ಚರಿಕೆ ನೀಡುವಾಗ, ಆಹಾರ ಬಳಕೆ ವಿನ್ಯಾಸ ಮತ್ತು ಆರೋಗ್ಯ ನಿರ್ವಹಣೆಗಾಗಿ ಬಳಸಲಾಗುತ್ತದೆ. SIPಯು ಇಂಡೋನೆಷ್ಯಾ ಮತ್ತು ಆಗ್ನೇಯ ಏಷ್ಯಾದ ಸೀಗಡಿ ಉತ್ಪಾದನಾ ದೇಶಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.

ತಂತ್ರಾಶವು ಮೀನಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅದರ ಆಹಾರ ಮತ್ತು ಬೆಳವಣಿಗೆಯ ಕ್ರಮವನ್ನು ವಿಶ್ಲೇಷಿಸಲು ತಂತ್ರಜ್ಞಾನವನ್ನು ಬಳಸುತ್ತದೆ. ನಿಯತಾಂಕಗಳು ಇರಬೇಕಾದ ಮಟ್ಟದಲ್ಲಿ ಇಲ್ಲದಿದ್ದಲ್ಲಿ ರೈತರಿಗೆ ಆ ಕುರಿತು ಮುನ್ಸೂಚನೆ ನೀಡುತ್ತದೆ. ನಿರಂತರವಾಗಿ ನೀರಿನ ಗುಣಮಟ್ಟ, ಆಹಾರ, ರೋಗ ಸಾಧ್ಯತೆಗಳು, ಬಯೋಮಾಸ್‌ ಪರಿವರ್ತನೆ ಇವುಗಳ ಮೇಲೆ ನಿಗಾವಹಿಸುವುದರಿಂದ ಆಹಾರ ನೀಡುವ ವಿಧಾನ ಪರಿಣಾಮಕಾರಿಯಾಗಿದೆಯೇ ಇಲ್ಲವೇ ತಿಳಿಯುತ್ತದೆ. FarmMOJO ಆಹಾರ ಪೂರೈಕೆ ಸರಿಯಾಗಿದೆಯೇ ಎನ್ನುವುದನ್ನು ಗಮನಿಸಿ ಕೊರತೆ ಕಂಡುಬಂದಲ್ಲಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು ಮತ್ತು ಹೊಂಡದ ವಾತಾವರಣವನ್ನು ಕಾಯ್ದುಕೊಳ್ಳಲು ಅಗತ್ಯವಾದ ವಸ್ತುಗಳನ್ನು ರೈತರಿಗೆ ತಿಳಿಸುತ್ತದೆ. ಇದು ಸೀಗಡಿ ಕೃಷಿಕರಿಗೆ ರೋಗಗಳ ಕುರಿತು ಮುನ್ಸೂಚನೆ ನೀಡಿ ತಗ್ಗಿಸಲು, ಸೀಗಡಿಯ ಉತ್ಪಾದನೆ ಹೆಚ್ಚಿಸಲು, ಹೆಚ್ಚಿನ ಲಾಭ ಪಡೆಯಲು, ದಿನನಿತ್ಯದ ಕೆಲಸಗಳಿಗೆ ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಭಿತವಾಗುವುದನ್ನು ತಪ್ಪಿಸುತ್ತದೆ ಎಂದು ಕಂಪನಿ ಹೇಳುತ್ತದೆ. ಇದು ದೈನಂದಿನ ಕೆಲಸಗಳಿಗೆ ತಂತ್ರಜ್ಞರ ಅವಲಂಬನೆ ಹಾಗೂ ಇನ್ನಿತರ ವೆಚ್ಚಗಳನ್ನು ತಗ್ಗಿಸುತ್ತದೆ.

ಫೋಟೊಜಲಚರ ಸಾಕಣೆಯ ನೀರಿನ ಗುಣಮಟ್ಟದ ನಿಗಾವಹಿಸಲು IoT ಅನುಷ್ಠಾನ

ತಂತ್ರಾಂಶವನ್ನು ಚಂದಾದಾರರಾಗುವ ಮೂಲಕ ರೈತರು ಬಳಸಬಹುದು. ಇದಕ್ಕೆ ಮಾಸಿಕ ಚಂದ ಕೊಡಬೇಕಾಗುತ್ತದೆ. ಪ್ರತಿ ಹೊಂಡಕ್ಕೆ ರೂ.೫೦೦ ಕಟ್ಟಬೇಕಾಗುತ್ತದೆ. ರೈತರಿಗೆ ಸೀಗಡಿ ಕೃಷಿಗೆ ಸಹಾಯ ಮಾಡುವುದರ ಜೊತೆಗೆ ಹ್ಯಾಚರಿಗಳು, ಆಹಾರ ಸಂಸ್ಕರಣ ಮಾಡುವವರು, ಆಹಾರ ಪೂರೈಕಾ ಕಂಪನಿಗಳು, ಆರೋಗ್ಯ ಸಂಬಂಧಿ ವಸ್ತುಗಳ ಉತ್ಪಾದಕರೊಂದಿಗೂ ಕಂಪನಿ ಕೆಲಸ ಮಾಡುತ್ತದೆ. ಭವಿಷ್ಯದಲ್ಲಿ ಜಲಕೃಸಾಲ ಹಾಗೂ ವಿಮೆಯನ್ನು ಕೊಡುವ ಉದ್ದೇಶವನ್ನು ಹೊಂದಿದೆ.

FarmMOJO ಕಂಪನಿಯು ಹೊಸ ತಲೆಮಾರಿನ ರೈತರಿಗೆ ತಂತ್ರಜ್ಞಾನ ಅಳವಡಿಕೆಯ ಲಾಭಗಳನ್ನು ತಿಳಿಸಿಕೊಡುವ ಸಲುವಾಗಿ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತದೆ. ಈ ಕಂಪನಿಯ ಸ್ಥಾಪಕರಾದ ರಾಜಮನೋಹರ ಸೋಮಸುಂದರಂ ಅವರು “ಇಂದು ೧೩೫೦ಕ್ಕೂ ಹೆಚ್ಚು ಹೊಂಡಗಳಲ್ಲಿ FarmMOJO ಅಳವಡಿಸುವ ಮೂಲಕ ಅವುಗಳನ್ನು ಸ್ಮಾರ್ಟ್‌ ಫಾರಂಗಳನ್ನಾಗಿ ಮಾಡಲಾಗಿದೆ”. ರೈತರಿಂದ ಬಂದಿರುವ ಪ್ರತಿಕ್ರಿಯೆಗಳ ಪ್ರಕಾರ ಅವರ ಉತ್ಪಾದನೆಯು ಹೆಚ್ಚಿದ್ದು, ಆಹಾರ ವ್ಯರ್ಥವಾಗುವುದು ಕಡಿಮೆಯಾಗಿದೆ.

ಡಿಜಿಟಲ್‌ ಪರಿಹಾರಗಳಲ್ಲೂ ಕೆಲವು ಮಿತಿಗಳಿವೆ. ಅನಕ್ಷರತೆ ಮತ್ತು ಅರಿವಿನ ಕೊರತೆ ಇದರಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾರಣ. ತಂತ್ರಜ್ಞಾನದ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಬಹುದೊಡ್ಡ ಸವಾಲಿನ ಕೆಲಸ. ಬಹುತೇಕರು ತಮ್ಮ ಹಿರಿಯರು ಅನುಸರಿಸುತ್ತಿದ್ದ ಮಾರ್ಗದಲ್ಲೇ ಕೃಷಿ ಮಾಡಬಯಸುತ್ತಾರೆ. ಸ್ಮಾರ್ಟ್‌ ಫೋನುಗಳಿಗೆ ದುಡ್ಡು ಹಾಕುವುದು ದಂಡ ಎನ್ನುವುದು ಹಲವು ರೈತರ ಅನಿಸಿಕೆ. ಸಾಂಸ್ಕೃತಿಕ ಹಾಗೂ ಭಾಷಿಕ ಅಡೆತಡೆಗಳನ್ನು ದಾಟುವುದು ಮತ್ತೊಂದು ದೊಡ್ಡ ಸವಾಲು.

ಉಲ್ಲೇಖಗಳು:

1.Report, GlobalAquacultureIndustry, https://www.reportlinker.com/p05443599/?utm_source=GNW

2.FAO, Fish farms to produce nearly two thirds ofglobal food fish supply by 2030, 5 February 2014,http://www.fao.org/news/story/en/item/213522/icode/

3.Daigavane, Vaishnavi V, Water Quality MonitoringSystem Based on IOT, Advances in Wireless and Mobile Communications, Nov. 2017.

4.Roy, Ajit Kumar, Big data Analytics to Fight Challenges of Fisheries and Aquaculture Sector,JIFSI 51 (1): 30-36, 2019

5.Inbakandan,D. et al., Aquaculture Informatics:Integration of Information technology & aquaculture in India, International Journal of Applied Bioengineering,Vol.3.no.1.35-42.January, 2009.

6.Roy, A.K. D.P Rath and P K Satapalhy, Bioinformatics and Statistics in Aquaculture Research. Proc National Workshop cum Training Programme on Bioinformatics and Statistics In Aquaculture Research held at CIFA, Kausalyaganga during 8-11, Feb., 2000. Pp ,200.

ಪಾರ್ಥ ಪಿ ಬಿಸ್ವಾಸ್


Partha P Biswas

Incharge-Fisheries Training & Culture Unit

Simurali Krishi Kendra

Simurali, Dist.-Nadia, West Bengal

E-mail: parthapbis2006@yahoo.co.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್‌ ೨೦‌೨೦

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp