ಪೌಷ್ಟಿಕಾಂಶ ತೋಟಗಳು ಕೋವಿಡ್ ನಂತರದ ದಿನಗಳಲ್ಲಿ ಕಂಡುಬಂದ ಆಶಾಕಿರಣ

ಕೊರೊನ ವೈರಸ್‌ ದಾಳಿಗೆ ತುತ್ತಾಗಿ ತಲ್ಲಣಿಸುತ್ತಿರುವ ವಿಶ್ವವು ಈಗ ಈ ರೋಗದ ಪರಿಣಾಮಗಳನ್ನು ಎದುರಿಸುವ ಕುರಿತು ಹಲವು ಪ್ರಶ್ನೆಗಳನ್ನು ಎದುರಿಸುತ್ತದೆ. ನಾವಿಂದು ದೊಡ್ಡ ಮಟ್ಟದಲ್ಲಿ ಬದುಕಿನ ನಾಶ, ನಿರುದ್ಯೋಗ, ಹಸಿವು ಮತ್ತು ಒಟ್ಟಾರೆ ಜನರ ಆರೋಗ್ಯದಲ್ಲಿ ಇಳಿಮುಖವನ್ನು ಕಾಣುತ್ತಿದ್ದೇವೆ.

ಸರ್ಕಾರವು ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕೆಲವು ಕ್ರಮಗಳನ್ನು ಘೋಷಿಸಿದ್ದರೂ ಲಾಕ್‌ಡೌನ್‌ ಕೃಷಿ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದಲ್ಲಿ ಆಹಾರ ಪೂರೈಕೆಯ ಸರಪಳಿಯಲ್ಲಿ ಉಂಟಾದ ವ್ಯತ್ಯಯವು ಸಣ್ಣ ಮತ್ತು ಮಧ್ಯಮ ರೈತರಿಗೆ ಆಘಾತವುಂಟುಮಾಡಿದೆ. ಕೆಲಸಗಾರರ ಕೊರತೆ, ಸಾರಿಗೆ ಮತ್ತು ಸೀಮಿತ ಮಾರುಕಟ್ಟೆ ಇವುಗಳಿಂದಾಗಿ ರೈತರು ಕೊಯ್ಲು ಮತ್ತು ವ್ಯಾಪಾರದ ವಿಷಯದಲ್ಲಿ ಕಷ್ಟಪಡುತ್ತಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ವಿಪತ್ತಿನ ನಡುವೆ ನಾವು ಮರೆತುಹೋಗಿರುವ ಇತರ ಸವಾಲುಗಳೆಂದರೆ ಹವಾಮಾನ ವೈಪರಿತ್ಯಗಳು, ನೀರಿನ ಸಮಸ್ಯೆ, ಹಾಳಾಗುತ್ತಿರುವ ಮಣ್ಣು. ಇವೆಲ್ಲವೂ ಭವಿಷ್ಯದಲ್ಲಿ ಆಹಾರದ ಪೂರೈಕೆಯ ಮೇಲೆ ತೀವ್ರ ಪ್ರಭಾವ ಬೀರಲಿದೆ. ವೈವಿಧ್ಯಮಯ ಕೃಷಿ ಉತ್ಪಾದನೆಯು ಈ ಪರಿಸರ ಸಂಬಂಧಿ ಸವಾಲುಗಳನ್ನು ಎದುರಿಸಿಲು ಮತ್ತು ʼಹೆಚ್ಚು ಕ್ಯಾಲೊರಿʼಗಳಿಂದ ʼಹೆಚ್ಚು ಪೌಷ್ಟಿಕಾಂಶಯುಕ್ತʼ ಆಹಾರ ವ್ಯವಸ್ಥೆಗೆ ಬದಲಾಗಲು ನೆರವಾಗಲಿದೆ. ಸುಸ್ಥಿರ ಆಹಾರ ಮೌಲ್ಯ ಸರಪಳಿಯನ್ನು ಅಭಿವೃದ್ಧಿಗೊಳಿಸುವುದರಿಂದ ಆಹಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು.

ಲಾಕ್‌ಡೌನ್‌ ಸಮಯದಲ್ಲಿ ನಾವು ಸ್ವಚ್ಛವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯುವುದು ಹೇಗೆ ಎನ್ನುವುದರ ಕುರಿತು ಯೋಚಿಸಿದೆವು. ಸಂಪೂರ್ಣ ಆಹಾರದಿಂದ ಕೊಬ್ಬು ಹೆಚ್ಚಿರುವ ಬರ್ಗರ್‌, ಪಾಸ್ತಾಗಳಿಗೆ ನಾವಿಂದು ಬದಲಾಗಿಬಿಟ್ಟಿದ್ದೇವೆ. ನಮ್ಮ ಮನೆಗಳ ಹಿತ್ತಲಲ್ಲೇ ಬೆಳೆದ ಆಹಾರವನ್ನು ತಿನ್ನುತ್ತಿದ್ದ ಕಾಲವೊಂದಿತ್ತು. ಇಂದಿಗೂ ಕೇರಳದಲ್ಲಿ ಹಲವಾರು ಹಿತ್ತಿಲು ತೋಟಗಳಿವೆ. ದೇಸಿ ಎನ್ನುವ ಪರಿಕಲ್ಪನೆ ಇಂದಿಗೂ ಹೊಚ್ಚಹೊಸದಾಗಿದೆ. ಅದಕ್ಕಿಂದು ಆಧುನಿಕತೆಯ ಮುದ್ರೆ ಬಿದ್ದಿದ್ದು ಅವು ಸೂಪರ್‌ಮಾರ್ಕೆಟುಗಳಲ್ಲಿ ಸಿಗುತ್ತಿವೆ.

ದೇಶದಾದ್ಯಂತ ಪೌಷ್ಟಿಕಾಂಶ ಕೈತೋಟಗಳನ್ನು ಪ್ರೋತ್ಸಾಹವು ಚಳುವಳಿಯಂತೆ ನಡೆಯುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ತರಕಾರಿಗಳನ್ನು ಇದರಲ್ಲಿ ಸೇರಿಸಿಕೊಳ್ಳಬೇಕು. ಇವು ನಿಸ್ಸಂಶಯವಾಗಿ ಪೌಷ್ಟಿಕಾಂಶ, ಆರೋಗ್ಯ, ಸಮುದಾಯ, ಸಂಸ್ಕೃತಿ ಮತ್ತು ಪರಿಸರದ ಸುಧಾರಣೆ ಮಾಡುತ್ತದೆ.

ಉದಾಹರಣೆಗೆ ಛತ್ತೀಸಗಢದ ಸರ್ಕಾರವು ಬಾಡಿ(ಮನೆತೋಟ) ಅಭಿವೃದ್ಧಿಗೆ ನೀಡಿದ ಪ್ರಾಮುಖ್ಯತೆಯನ್ನು ಗಮನಿಸಬಹುದು. ಅವರ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ  NGGB (ನರ್ವಾ, ಗರ್ವಾ, ಘುರ್ವಾ ಬಾರಿ)ಯು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ದು ಬಾಡಿ(ಮನೆತೋಟ)ಗಳನ್ನು ಅಭಿವೃದ್ಧಿಗೊಳಿಸುವುದು ಹೇಗೆ ಎನ್ನುವ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಸರ್ಕಾರವು ಹಿತ್ತಲ ಕೈತೋಟಗಳನ್ನು ಅಭಿವೃದ್ಧಿಗೊಳಿಸಲು ಪ್ರೋತ್ಸಾಹ ನೀಡಬೇಕು. ಇದು ಹವಾಮಾನ ಸವಾಲುಗಳು ಹಾಗೂ ಸಾಂಕ್ರಾಮಿಕದ ದಾಳಿಯ ಸಂದರ್ಭದಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಪಡೆಯಲು ನೆರವಾಗುತ್ತದೆ.

ಪ್ರಧಾನ್‌ ವರದಿಯ ಪ್ರಕಾರ (ಅರ್ಪಣ್‌ ಭಟ್ಟಾಚಾರ್ಜಿ ಮತ್ತು ಅಜಯ್‌ ಗುಪ್ತ, ಕೃಷಿ ಪ್ರಪಂಚ, ಜೂನ್‌ ೨೦೨೦) ಛತ್ತೀಸಗಡದ ಬಸ್ತಾರ್‌ನ ರೈತ ಸೊಮಿ ಬಾಗೇಲ್‌ನದು ಸ್ಪೂರ್ತಿ ನೀಡುವಂತಹ ಕತೆ. ಅವನು ತನ್ನ ಬಾಡಿ(ತೋಟ)ಯನ್ನು ಅಭಿವೃದ್ಧಿಗೊಳಿಸಲು ನಬಾರ್ಡ್‌ನ ವಿವಿಧ ಕಾರ್ಯಕ್ರಮಗಳಡಿಯಲ್ಲಿ ನೆರವು ಪಡೆದ. ಜಿಲ್ಲಾ ತೋಟಗಾರಿಕೆ ಇಲಾಖೆ, MGNREGA ಮತ್ತು ಪ್ರಧಾನ್‌ನವರು ಆತನ ತೋಟವನ್ನು ಅಭಿವೃದ್ಧಿಗೊಳಿಸಲು ಮತ್ತು ಹೊಸ ಕೃಷಿ ತಂತ್ರಗಳನ್ನು ಕಲಿತು ಹೆಚ್ಚು ಆದಾಯ ಗಳಿಸಲು ನೆರವು ನೀಡಿತು.

ಇದು ಅವರಿಗೆ ತಮ್ಮ ಬಾಡಿ (ಮನೆತೋಟ)ಗಳಲ್ಲಿ ಪೌಷ್ಟಿಕಾಂಶಯುಕ್ತ ಕೈತೋಟಗಳನ್ನು ಬೆಳೆಸಲು ವೇದಿಕೆ ಒದಗಿಸಿತು. ಎಲ್ಲ ಬುಡಕಟ್ಟು ಮನೆಗಳಲ್ಲೂ ಬಾಡಿ (ತೋಟ)ಗಳನ್ನು ನೋಡಬಹುದು. ಅಲ್ಲಿ ಜೋಳ, ಸಿರಿಧಾನ್ಯಗಳು ಮತ್ತು ಸ್ಥಳೀಯ ಪೌಷ್ಟಿಕಾಂಶಯುಕ್ತ ತರಕಾರಿಗಳಾದ ಪರಂಗಿ, ನುಗ್ಗೆ, ತೊಂಡೆ ಕಾಯಿ, ಬೂದುಗುಂಬಳ ಮತ್ತು ಎಲ್ಲ ರೀತಿಯ ಸೊಪ್ಪನ್ನು ಬೆಳೆಯುತ್ತಾರೆ. ಇವು ಅವರಿಗೆ ಅವಶ್ಯಕವಾದ ಆಹಾರದ ವಸ್ತುಗಳನ್ನು ಮತ್ತು ಹಣವನ್ನು ಪೂರೈಸುತ್ತದೆ. ಬಾಡಿ (ಮನೆತೋಟ)ಗಳು ಬುಡಕಟ್ಟು ರೈತರಿಗೆ ಅದರಲ್ಲೂ ಮಹಿಳೆಯರಿಗೆ ಅತ್ಯಮೂಲ್ಯ ಸಂಪನ್ಮೂಲ. ಮನೆತೋಟ/ಕೈತೋಟಗಳ ಕುರಿತು ನಡೆದಿರುವ ಹಲವು ಅಧ್ಯಯನುಗಳು ಇವುಗಳು ಗ್ರಾಮೀಣ ಕುಟುಂಬಗಳಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತದೆ ಎನ್ನುವ ವಾದಕ್ಕೆ ಪುಷ್ಟಿನೀಡಿವೆ. ಕೋವಿಡ್‌ ನಂತರದ ಸನ್ನಿವೇಶದಲ್ಲಿ ಮಹಿಳೆಯರು ಆಹಾರ ಭದ್ರತೆಗೆ ಪೂರಕವಾಗಿ ತಮ್ಮ ಬಾಡಿ(ಮನೆ ತೋಟ)ಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳಿಗೆ ನೋದಂಣಿ ಮಾಡಿಕೊಳ್ಳುತ್ತಿದ್ದಾರೆ.

ಲೋಕಲಿಶಿಯಸ್‌ ಎನ್ನುವುದು ಸ್ಥಳೀಯ ಆಹಾರದ ಪ್ರಚಾರಕ್ಕಾಗಿ ಪಾಂಡಿಚೆರಿಯ ಔರೊವಿಲ್ಲೆಯ ಸಾಲಿಟ್ಯೂಡ್‌ ಕೆಫೆಯ ಕೃಷ್ಣ ಮೆಕೆಂಜಿಯವರು ಹುಟ್ಟುಹಾಕಿದ ಜನರ ಚಳುವಳಿ. ಸ್ಥಳೀಯ ಆಹಾರವು ಸುಲಭವಾಗಿ ಸಿಗುವುದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಸುಲಭ. ಅತ್ಯಲ್ಪ ಆರೈಕೆಯೊಂದಿಗೆ ನೀರೊಂದಿದ್ದರೆ ಇವುಗಳನ್ನು ಬೆಳೆಯಬಹುದು. ಇದನ್ನು ಸುಲಭವಾಗಿ ಬೆಳೆಯಬಹುದು. ಪೌಷ್ಟಿಕಾಂಶಯುಕ್ತವಾದ ಈ ಆಹಾರವು ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ವೈವಿಧ್ಯಮಯ ಪೌಷ್ಟಿಕಾಂಶಗಳನ್ನು ಹೊಂದಿರುವ ಸೊಪ್ಪುಗಳು, ಸುವರ್ಣಗಡ್ಡೆ ಅಥವ ಹಸಿರು ಪರಂಗಿಯನ್ನು ಸಮುದಾಯದ ಮಂದಿ ವಾರದಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲವು ಬಾರಿಯಾದರೂ ತಿನ್ನುವುದೊಳಿತು. ಭೂಮಿ ಮತ್ತು ನಮ್ಮ ಪೌಷ್ಟಿಕಾಂಶ ಅಗತ್ಯಗಳ ನಡುವಿನ ಸಂಬಂಧವನ್ನು ಅರಿತರೆ ನಮ್ಮ ಅರಿವಿನಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಕೋವಿಡ್‌ ನಂತರದ ಸನ್ನಿವೇಶದಲ್ಲಿ ಹಲವಾರು ಮಂದಿ ವೆಜಿಟೆಬಲ್‌ ಬ್ಯಾಸ್ಕೆಟ್‌ಗಳ ಮೊರೆಹೊಕ್ಕರು.

ಗುಜರಾತಿನ ಉತ್ತನ್‌ ಎನ್ನುವ ಸಂಸ್ಥೆಯು ತಾನು ಕೆಲಸ ಮಾಡುತ್ತಿದ್ದ ಸಮುದಾಯಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಕೊವಿಡ್‌ ಸಂದರ್ಭದಲ್ಲಿ ಹಲವಾರು ಹಳ್ಳಿಗಳಿಗೆ ತರಕಾರಿಗಳು ಅಥವಾ ಉತ್ತಮ ಗುಣಮಟ್ಟದ ವೈವಿಧ್ಯಮಯ ಬೀಜಗಳು ಸಿಗುವುದು ಸುಲಭವಾಗಿರಲಿಲ್ಲ. ಸಂಪಾದನೆಯಿಲ್ಲದೆ ಹಲವು ಕುಟುಂಬಗಳು ತರಕಾರಿ ತೆಗೆದುಕೊಳ್ಳುವುದು ಮುಖ್ಯ ಎಂದುಕೊಳ್ಳಲಿಲ್ಲ. ಪಿತೃಪ್ರಧಾನ ಪದ್ಧತಿಯ ಕುಟುಂಬಗಳಲ್ಲಿ ಆದ್ಯತೆ ಸಿಗುವುದು ಬೇರೆಯವರಾದ್ದರಿಂದ ಇದರ ಪರಿಣಾಮ ಮಹಿಳೆಯರು ಮತ್ತು ಮಕ್ಕಳ ಮೇಲಾಯಿತು. ಭೂಮಿಯಿಲ್ಲದ ಕುಟುಂಬಗಳಿಗೆ ತರಕಾರಿ ಬೆಳೆಯುವ ಆಯ್ಕೆ ಕೂಡ ಇರಲಿಲ್ಲ.

ಕೈತೋಟಗಳ ಕಿಟ್‌ಗಳನ್ನು ೫೩ ಹಳ್ಳಿಗಳಲ್ಲಿನ ೨೫೧೪ ಕುಟುಂಬಗಳಿಗೆ ನೀಡಲಾಯಿತು. ಆರು ರೀತಿಯ ಬೀಜಗಳನ್ನು ಕರಾವಳಿ ತೀರದ ೮೬೪ ಕುಟುಂಬಗಳಿಗೆ ಮತ್ತು ಬುಡಕಟ್ಟು ಪ್ರದೇಶಗಳಿಗೆ ೧೬೫೦ ಕುಟುಂಬಗಳಿಗೆ ನೀಡಲಾಯಿತು. ಜೈವಿಕ ಗೊಬ್ಬರಗಳ ಅಗತ್ಯವನ್ನು ಮಹಿಳಾ ಗುಂಪುಗಳು ಮತ್ತು ಸುಸ್ಥಿರ ಕೃಷಿ ಮಹಿಳಾ ತರಬೇತುದಾರರು ಪೂರೈಸಿದರು. ಈ ಕಿಟ್‌ ಸುಮಾರು ೧೦೦೦-೧೫೦೦ ಚ.ಕೀ ಭೂಮಿಗೆ ಸಾಕಾಗುತ್ತಿತ್ತು ಇಲ್ಲವೇ ಜನರ ಮನೆಯ ಸುತ್ತಲಿರುವ ಭೂಮಿಗೆ ಸಾಕಾಗುತ್ತಿತ್ತು. ಸ್ಥಳೀಯವಾಗಿ ಸಂಶೋಧನೆ ಮಾಡಿ ಮತ್ತು ಬೆಂಡೆ, ತೊಗರಿ ಕಾಯಿ, ಅಲಸಂದಿ, ಸೋರೆ ಕಾಯಿ, ಹಾಗಲ ಕಾಯಿ, ಹೀರೆಕಾಯಿಯ ಬೀಜಗಳ ವಿವಿಧ ತಳಿಗಳನ್ನು ನೀಡಲಾಯಿತು. ಇವುಗಳನ್ನು ಉತ್ತನ್‌ನ ಸುರಕ್ಷತ ಮಾರ್ಗದರ್ಶಿ ಸೂತ್ರಗಳಿಗನುಸಾರವಾಗಿ ಮಾಸ್ಕ್‌, ಗ್ಲೌವ್ಸ್‌ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಂಡ ಹಾಗೂ ಹಳ್ಳಿಯ ಸ್ವಯಂಸೇವಕರು ವಿತರಿಸಿದರು. ಪಂಚಾಯತ್‌ಗಳು ಮತ್ತು ಹಳ್ಳಿಯ ನಾಯಕರು ಒಳ್ಳೆಯ ಫಲಿತಾಂಶವನ್ನು ಪಡೆದವು. ಇದರೊಂದಿಗೆ ಒಳ್ಳೆಯ ಪದ್ಧತಿಗಳ ಜಾಗೃತಿಯನ್ನು ಕರಪತ್ರಗಳು, ವಿಡಿಯೋಗಳ ಮೂಲಕ ಮೂಡಿಸಲಾಯಿತು. ಜೈವಿಕ ಕೀಟನಾಶಕಗಳ ಉತ್ಪಾದನೆಯನ್ನು ʼಸುಸ್ಥಿರ ಕೃಷಿ ಪದ್ಧತಿʼಗಳ ಮೂಲಕ ಮಾಡಲಾಯಿತು.

ಈ ತೊಡಕಿನ ಸನ್ನಿವೇಶದಲ್ಲಿ ಈ ಜಾಗೃತಿ ಮೂಡಿಸುವ ಪ್ರಯತ್ನಗಳು ಅತ್ಯಗತ್ಯವಾಗಿತ್ತು. ಇದರಿಂದ ೨೫೧೪ ಕುಟುಂಬಗಳು ೭೫೦೦ ಕುಟುಂಬಗಳಿಗೆ ನೆರವು ನೀಡಲು ಸಾಧ್ಯವಾಯಿತು. ಅದರಲ್ಲೂ ಭೂಮಿಯಿಲ್ಲದವರು ಮತ್ತು ಭೂಮಿ ಇಲ್ಲವೇ ನೀರಿನ ಅಭಾವದಿಂದ ತರಕಾರಿ ಬೆಳೆಯಲು ಸಾಧ್ಯವಿಲ್ಲದವರಿಗೆ ನೆರವು ನೀಡುವಂತಾಯಿತು. ಹೀಗೆ ದಿನವೊಂದಕ್ಕೆ ೭೦೦ ಗ್ರಾಂ ತರಕಾರಿಯನ್ನು ೭೫೦೦ ಕುಟುಂಬಗಳಿಗೆ ೨೦ರ ಜುಲೈ ನಡುವಿನಿಂದ ಸೆಪ್ಟಂಬರ್‌ವರೆಗೆ ಪೂರೈಸಲಾಯಿತು. ಇದು ಆರು ಮಂದಿಯಿರುವ ಕುಟುಂಬಕ್ಕೆ ಸಾಕಾಗುತ್ತಿತ್ತು.

ಈ ರೀತಿಯ ಹೆಚ್ಚಿನ ಚಳುವಳಿಗಳು ಇರಬೇಕು. ಇದರಿಂದ ನಮಗೆ ವೈವಿಧ್ಯಮಯ ಪೌಷ್ಟಿಕಾಂಶ ಒದಗಿಸುವ ತೋಟಗಳನ್ನು ಬೆಳೆಸಲು ನೀಡಬೇಕಾದ ಪ್ರಾಮುಖ್ಯತೆಯ ಅರಿವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಕಡೆ ಗಮನನೀಡಬೇಕಾದ ಅಗತ್ಯವಿರುತ್ತದೆ. ಸ್ಥಳೀಯ ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ನೀಡಬಹುದಲ್ಲದೆ ಆಮದು ಮಾಡಿಕೊಂಡ ಹಣ್ಣು ಮತ್ತು ತರಕಾರಿಗಳಲ್ಲ. ಇದಕ್ಕೆ ತಮ್ಮ ಕೃಷಿ ಪರಂಪರೆಯ ಅರಿವಿರುವ ಅದರ ಮಹತ್ವವನ್ನು ಅರಿತಿರುವ ರೈತರ ಅವಶ್ಯಕತೆಯಿದೆ. ಅವರು ಹೊಸತನ್ನು ಅನ್ವೇಷಿಸುವುದರೊಂದಿಗೆ ಸಮುದಾಯವನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಅವರಿಗೆ ಆರ್ಥಿಕವಾಗಿ ಕೂಡ ಲಾಭವಾಗುತ್ತದೆ.

ಲಕ್ಷ್ಮೀ ಉನ್ನಿತನ್


Lakshmi Unnithan Editor – Agriculture World Head PR & Communication KRISHI JAGRAN, DSR AGRI MEDIA PVT LTD 60/9, 3rd Floor, Yusuf Sarai Market Near Green Park Metro Station, New Delhi-110016 E-mail: dr.lakshmi@krishijagran.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೪ ; ಡಿಸಂಬರ್‌ ೨೦‌೨೦

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp