ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ


ಕೃಷಿಯಲ್ಲಿ ಡಿಜಿಟಲೀಕರಣ ಎನ್ನುವುದು ಭವಿಷ್ಯದ ಸ್ಥಿತಿಯಲ್ಲ ಪ್ರಸ್ತುತ ಜಾಗತಿಕ ಕೃಷಿಯ ವಾಸ್ತವವಾಗಿದೆ. ಡಿಜಿಟಲ್ತಂತ್ರಜ್ಞಾನಗಳು ಜಾಗತಿಕ ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕ್ರಾಪ್ಇನ್ಸ್ಡಿಜಿಟಲ್ಸೊಲ್ಯೂಷನ್ಸ್ನವರು ಕೃಷಿಕರಿಗೆ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತಿದೆ.


ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ರೈತರು ತಮ್ಮ ಬದುಕನ್ನುಉತ್ತಮಗೊಳಿಸಿಕೊಳ್ಳುವಂತೆ ಮಾಡುತ್ತಿದೆ. ಇದು ಗ್ರಾಮೀಣ ಸಮುದಾಯಕ್ಕೆ ತಂತ್ರಜ್ಞಾನ, ನೈಸರ್ಗಿಕ ಸಂಪನ್ಮೂಲಗಳು, ಸುಧಾರಿತ ಕೃಷಿ ತಂತ್ರಜ್ಞಾನಗಳು, ಪರಿಣಾಮಕಾರಿ ಉತ್ಪಾದನಾ ತಂತ್ರಗಳು, ಮಾರಕಟ್ಟೆಯ ಲಭ್ಯತೆ ಹೀಗೆ ಇನ್ನೂ ಹೆಚ್ಚಿನದನ್ನು ಆಧುನಿಕ ತಂತ್ರಜ್ಞಾನವು ನೀಡುತ್ತಿದೆ.

ಫೋಟೊ : ಕ್ರಾಪ್‌ಇನ್‌  ಸ್ಮಾರ್ಟ್‌ಫಾರಂನವರು ರೈತರಿಗೆ ಉತ್ತಮ ಪದ್ಧತಿಗಳ ಕುರಿತು ಸಲಹೆಗಳನ್ನು ಕಳಿಸುವುದರ ಮೂಲಕ ಅವರನ್ನು ಸದಾ ಸಕ್ರಿಯವಾಗಿರಿಸುತ್ತದೆ

೨೦೧೦ರಲ್ಲಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕೃಷಿ ಬಿಕ್ಕಟ್ಟು ಎದುರಾಯಿತು. ಆಗ ಸ್ಥಳೀಯ ರೈತರಿಗೆ ಆರ್ಥಿಕ ಸಹಾಯವಿಲ್ಲದೆ, ಹವಾಮಾನ ವೈಪರಿತ್ಯಗಳು, ಮಣ್ಣಿನ ಗುಣಮಟ್ಟ ಹಾಳಾದದ್ದು, ಕೀಟ, ರೋಗ ಭಾದೆಗಳು, ಇಳುವರಿಯನ್ನು ನಿಖರವಾಗಿ ಊಹಿಸಲಾಗದೆ ಹೋದದ್ದು ಎಲ್ಲವೂ ತೊಡಕುಗಳಾಗಿದ್ದವು. ಶ್ರೀ ಕೃಷ್ಣ ಕುಮಾರ್‌ ಅವರು ರೈತರ ಆತ್ಮಹತ್ಯೆಗಳನ್ನು ತಡೆದು ಈ ಬಿಕ್ಕಟ್ಟನ್ನು ಪರಿಹರಿಸಲು ತಮ್ಮಿಂದಾದಷ್ಟು ಪ್ರಯತ್ನಿಸಲು ಮುಂದಾದರು. ಅವರು ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ಕ್ರಾಪ್‌ಇನ್‌ ಟೆಕ್ನಾಲಜಿ ಸೊಲ್ಯೂಷನ್ಸ್‌ ಎನ್ನುವ ಕೃಷಿ ತಂತ್ರಜ್ಞಾನದ ಉದ್ಯಮವನ್ನು ಆರಂಭಿಸಿದರು. ದೇಶದ ಮಿಲಿಯನ್‌ಗಟ್ಟಲೇ ರೈತರ ನೋವಿಗೆ ಸ್ಪಂದಿಸಲು ಈ ಉದ್ಯಮವು ಮುಂದಾಯಿತು.

ಪ್ರತಿ ಎಕರೆಯ ಮೌಲ್ಯವರ್ಧನೆಯನ್ನು ತಂತ್ರಜ್ಞಾನದ ಮೂಲಕ ಮಾಡುವ ಉದ್ದೇಶದೊಂದಿಗೆ ಕ್ರಾಪ್‌ಇನ್‌ ಆರಂಭವಾಯಿತು. ಡಿಜಿಟಲ್‌ ತಂತ್ರಜ್ಞಾನ ಮತ್ತು ಡೇಟಾ ವಿಶ್ಲೇಷಣೆಯ ಮೂಲಕ ರೈತರ ಬದುಕನ್ನು ಉತ್ತಮಗೊಳಿಸಲು ಮತ್ತು ಕೃಷಿ ಸೇವೆಯಲ್ಲಿರುವವರಿಗೆ ನೆರವು ನೀಡಲು ಮುಂದಾಯಿತು. ಕ್ರಾಪ್‌ಇನ್‌ ಕೇವಲ ಒಂದಕ್ಕೆ ಸೀಮಿತವಾಗಿಲ್ಲ. ಅದು ಹಲವು ವಿಭಾಗಗಳನ್ನು ಒಳಗೊಂಡಿದೆ. ಆಯಾ ಪ್ರದೇಶ ಮತ್ತು ಅಗತ್ಯತೆಗೆ ತಕ್ಕಂತೆ ಪ್ರತಿ ವಿಭಾಗದ ಉತ್ಪನ್ನವು ಭಿನ್ನವಾಗಿರುತ್ತದೆ. ಕ್ರಾಪ್‌ಇನ್‌ನ ತಂತ್ರಜ್ಞಾನವು ಮಾಹಿತಿ ಆಧಾರಿತವಾಗಿದ್ದು ಕೃಷಿ ಪರಿಸರವ್ಯವಸ್ಥೆಯಲ್ಲಿರುವವ ಎಲ್ಲ ಭಾಗೀದಾರರನ್ನು ಒಂದೆಡೆ ಬೆಸೆಯುತ್ತದೆ. ಕ್ರಾಪ್‌ಇನ್‌ ಕೃಷಿವ್ಯವಹಾರಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಬದ್ಧವಾದ ವಿಶಿಷ್ಟ ವಿನೂತನ ಉತ್ಪನ್ನಗಳನ್ನು ರೂಪಿಸುತ್ತಿರುವ ಸಂಸ್ಥೆ. ಇದು ಕೃಷಿವ್ಯವಹಾರದ ವಿವಿಧ ಹಂತಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಕೃಷಿ, ಪ್ರೊಸೆಸಿಂಗ್‌ ಕಂಪನಿಗಳು, ಅಗ್ರಿಗೇಟರ್ಸ್‌, ರಫ್ತುದಾರರು, ಫುಡ್‌ ರಿಟೈಲರ್‌ಗಳು, ಟ್ರೇಡರ್‌ಗಳು, ಅಗ್ರಿ ಇನ್‌ಪುಟ್‌ ಕಂಪನಿಗಳು ಅಂದರೆ ಕೃಷಿ ಯಂತ್ರಗಳು, ಬೀಜಗಳು, ರಸಗೊಬ್ಬರಗಳು, ಪೌಷ್ಟಿಕಾಂಶಗಳು, ಕೀಟನಾಶಕಗಳು ಇತ್ಯಾದಿಗಳನ್ನು ನಿರ್ವಹಿಸುವ ವಿಭಾಗಗಳನ್ನು ಒಳಗೊಂಡಿದೆ. ಬ್ಯಾಂಕಿಂಗ್‌ ಮತ್ತು ಆರ್ಥಿಕ ಸಂಸ್ಥೆಳು, ಬೆಳೆ ವಿಮಾ ಕಂಪನಿಗಳು, ಡೆವಲಪ್‌ಮೆಂಟ್‌ ಏಜೆನ್ಸಿಗಳು, ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳು; ರೈತರು – ಇವರೆಲ್ಲರನ್ನೂ ಅಗ್ರಿಬಿಜಿನೆಸ್‌ ಒಳಗೊಂಡಿರುತ್ತದೆ.

ನಿಯಮಿತವಾಗಿ ಎದುರಿಸುವ ಹವಾಮಾನ ವೈಪರಿತ್ಯದ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ತಾಳಿಕೆಯನ್ನು ಬೆಳೆಸಿಕೊಳ್ಳುವುದು ಇಂದು ಭಾರತದ ರೈತರು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲೊಂದು.

ಕ್ರಾಪ್‌ಇನ್‌ ಟೆಕ್ನಾಲಜಿಸ್‌ನವರು ಅಭಿವೃದ್ಧಿಪಡಿಸಿದ ಮಾಹಿತಿ ತಂತ್ರಜ್ಞಾನವು ಕಳೆದ ದಶಕದಲ್ಲಿ ಕೃಷಿವಲಯದಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ. ಅದು ಜಾಗತಿಕವಾಗಿ ರೈತರಲ್ಲಿ ತರಲು ಉದ್ದೇಶಿಸಿದ್ದ ಅಭಿವೃದ್ಧಿಯನ್ನು ಫಲಿತಾಂಶಗಳಲ್ಲಿ ಕಾಣಬಹುದಾಗಿದೆ.

ಯಶೋಗಾಥೆಗಳು

ಕ್ರಾಪ್‌ಇನ್‌ ಕೃಷಿವಲಯದಲ್ಲಿ ಇಂದು ಮೊದಲಿಗನಾಗಿದೆ. ತಂತ್ರಜ್ಞಾನ ವಿಷಯದಲ್ಲಿ ಮಾತ್ರವಲ್ಲದೆ ಅಭಿವೃದ್ಧಿ ಏಜೆನ್ಸಿಗಳು ಮತ್ತು ಸಂಸ್ಥೆಗಳೊಡನೆಯ ಸಹಯೋಗದಿಂದ ಅದು ಸಮಾಜೋಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.

) ಟಾಟ ಸಿನಿ ಪ್ರಾಜೆಕ್ಟ್

ಕ್ರಾಪ್‌ಇನ್‌ ಟಾಟಾ ಟ್ರಸ್ಟ್‌ನವರು ಸ್ಥಾಪಿಸಿರುವ ಕಲೆಕ್ಟೀವ್ಸ್‌ ಫಾರ್‌ ಇಂಟಿಗ್ರೇಟೆಡ್‌ ಲೈವ್ಲಿಹುಡ್‌ ಇನ್ಶಿಯೇಟೀವ್ಸ್‌ (ಸಿನಿ) ಎನ್ನುವ ಜನಸೇವಾ ಸಂಸ್ಥೆಯೊಂದಿಗೆ  ಪಾಲುದಾರಿಕೆ ಮಾಡಿಕೊಂಡಿದೆ. ಈ ಸಂಸ್ಥೆಯು ಮಧ್ಯ ಭಾರತದ ಬುಡಕಟ್ಟು ಸಮುದಾಯದ ಬದುಕನ್ನು ಉತ್ತಮಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಏಪ್ರಿಲ್‌ ೨೦೧೫ರಂದು ಸಿನಿ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ʼಮಿಷನ್‌ ೨೦೨೦ : ಲಕ್ಪತಿ ಕಿಸಾನ್‌ – ಸ್ಮಾರ್ಟ್‌ ವಿಲೇಜಸ್‌ʼ ಆರಂಭಿಸಿತು. ೧೦೧,೦೦೦ ಕುಟುಂಬಗಳನ್ನು ಬಡತನದಿಂದ ಮುಕ್ತಗೊಳಿಸಿ ಅವರ ಜೀವನಮಟ್ಟದ ಸುಧಾರಣೆ ಇದರ ಉದ್ದೇಶವಾಗಿತ್ತು. ಜೊತೆಗೆ ಮಹಾರಾಷ್ಟ್ರ, ಗುಜರಾತ್‌, ಜಾರ್ಖಂಡ್‌, ಒರಿಸ್ಸಾ ಹೀಗೆ ೧೭ ವಿಭಾಗಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಯಿತು.

೧೦೧,೦೦೦ ಕುಟುಂಬಗಳಲ್ಲಿ ಪ್ರತಿಕುಟುಂಬವು ಮೊದಲು ವಾರ್ಷಿಕ $೫೩೦ ಗಳಿಸುತ್ತಿತ್ತು. ಈಗ ಪ್ರತಿವರ್ಷ $೧೫೯೦ ಅಥವ ಅದಕ್ಕಿಂತ ಹೆಚ್ಚಿನದನ್ನು ಗಳಿಸಲಾರಂಭಿಸಿತು. ಪ್ರಸ್ತುತ ಈ ಯೋಜನೆಯಿಂದ ಸುಮಾರು ೭೦,೦೦೦ ಕುಟುಂಬಗಳ ಮೇಲೆ ಇತ್ಯಾತ್ಮಕ ಪರಿಣಾಮ ಬೀರಿದೆ.

ರೈತರ ಸಾಮರ್ಥ್ಯವರ್ಧನೆಯನ್ನು ಗುರಿಯಾಗಿಸಿಕೊಂಡಿರುವ ಸಿನಿ ಅದನ್ನು ಕ್ರಾಪ್‌ಇನ್‌ನವರ ಸ್ಮಾರ್ಟ್‌ಫಾರಂ ಸೊಲ್ಯೂಶನ್‌ ನೆರವಿನಿಂದ ಸಾಧಿಸಿದೆ. ಕ್ಷೇತ್ರಾಧಿಕಾರಿಗಳು ರೈತರೊಂದಿಗೆ ದಿನವೂ ಸಂಪರ್ಕದಲ್ಲಿದ್ದು ಸ್ಮಾರ್ಟ್‌ಫಾರಂನ ಮಾಡ್ಯೂಲ್‌ಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಯನ್ನು ಕೇಂದ್ರೀಕೃತ ಕ್ಲೌಡ್‌ ವೇದಿಕೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಲ್ಲಿ ಸಂಗ್ರಹಿತವಾದ ಮಾಹಿತಿಯಿಂದ ಭಾಗಿಧಾರರಿಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಕ್ರಾಪ್‌ಇನ್‌ನ ಸಹಯೋಗದಿಂದಾಗಿ ಸಿನಿಯು ಸ್ಮಾರ್ಟ್‌ಫಾರಂನ ನೆರವಿನಿಂದ ಬೆಳೆಯ ಪ್ರತಿ ಹಂತದ ಮೇಲೂ ನಿಗಾವಹಿಸುತ್ತಿದೆ. ಜಾರ್ಖಂಡನ ಗೊಡಬಂದ, ಧಲ್ಬೂಮಗಢ್‌ ಪ್ರದೇಶಗಳ ಸುಮಾರು ೪,೩೦೦ ರೈತರ ಬದುಕಿನಮಟ್ಟವನ್ನು ಸುಧಾರಿಸಿದರು. ಕ್ರಾಪ್‌ಇನ್‌ ಮತ್ತು ಸಿನಿಯವರು ಸೇರಿ ೩,೪೦೦+ ಭೂಮಿಯ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿದರು. ರೈತರು ಮತ್ತು ಜಮೀನಿನ ನಿಖರ ಮಾಹಿತಿಯನ್ನು ದಾಖಲಿಸಿದರು.

ಸ್ಮಾರ್ಟ್‌ಫಾರಂನವರು ನಂತರ ರೈತರಿಗೆ ಉತ್ತಮ ಪದ್ಧತಿಗಳ ಕುರಿತು ಸಲಹೆಗಳನ್ನು ನೀಡುತ್ತಾರೆ. ಉದಾಹರಣೆಗೆ ರಾಸಾಯನಿಕ ಒಳಸುರಿಯುವಿಕೆಗಳ ಸೂಕ್ತ ಬಳಕೆಯ ಮೂಲಕ ಇಳುವರಿಯನ್ನು ಉತ್ತಮಗೊಳಿಸುವುದು. ಸ್ಮಾರ್ಟ್‌ಫಾರಂನ ಮಾಡ್ಯೂಲ್‌ಗಳು ಬಳಸಲು ಸುಲಭವಾಗಿದ್ದು ಕ್ಷೇತ್ರಸಿಬ್ಬಂದಿ ವರ್ಗದವರು ದಿನವೂ ರೈತರೊಂದಿಗೆ ಸಂವಾದಿಸುವ ಮೂಲಕ ಜಮೀನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಇದನ್ನು ಕ್ರಾಪ್‌ಇನ್‌ ಕೇಂದ್ರೀಕೃತ ಕ್ಲೌಡ್‌ ವೇದಿಕೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದನ್ನು ಭಾಗಿದಾರರು ಬಳಸಿಕೊಂಡು ನಿರ್ಣಯ ಕೈಗೊಳ್ಳಬಹುದು. ಸ್ಮಾರ್ಟ್‌ಫಾರಂ ಇಳುವರಿಯನ್ನು ವಿಶ್ಲೇಷಿಸಲು, ಇಳುವರಿಯ ಪ್ರಮಾಣ ತಿಳಿಯಲು ನೆರವು ನೀಡುತ್ತದೆ. ಇದರಿಂದ ಸಿನಿಯವರು ತಮ್ಮ ಪ್ರಯತ್ನ ಎಷ್ಟರಮಟ್ಟಿಗೆ ಯಶಕಂಡಿದೆ ಎಂದು ತಿಳಿಯಬಹುದು.

ಕ್ರಾಪ್‌ಇನ್‌ ತಂತ್ರಜ್ಞಾನದೊಂದಿಗೆ ಬೆಸೆದ ಮಾಹಿತಿಯು ಕೃಷಿಸಮುದಾಯಗಳ ತಾಳಿಕೆಯನ್ನು ಅಭಿವೃದ್ಧಿಪಡಿಸಲು

ಕ್ರಾಪ್‌ಇನ್‌ ತಂತ್ರಜ್ಞಾನ ಮತ್ತು ಮಾಹಿತಿಯು ಕೃಷಿಸಮುದಾಯಗಳ ಪೌಷ್ಟಿಕಾಂಶ ಸುಧಾರಣೆ, ಆರ್ಥಿಕ ಬೆಳವಣಿಗೆ, ಸುಸ್ಥಿರತೆ ಮತ್ತು ಉತ್ಪಾದಕತೆಯ ಸುಧಾರಣೆ ಮಾಡುತ್ತದೆ ಎಂದು ನಂಬುತ್ತದೆ. ಈ ಗುರಿಯನ್ನು ತಲುಪಲು ಒಳ್ಳೆಯ ಕೃಷಿ ಪದ್ಧತಿಗಳು ಅಗತ್ಯ. ಕ್ರಾಪ್‌ಇನ್‌ ರೈತರು ಈ ಪದ್ಧತಿಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ನೆರವು ನೀಡಿತು. ಜೀವಿಕ ಯೋಜನೆಯಡಿ ಭವಿಷ್ಯದ ಹವಾಮಾನ ವೈಪರಿತ್ಯವನ್ನು ಎದುರಿಸಲು ಸಿದ್ಧಗೊಳಿಸಿದೆ.

) ಜೀವಿಕ ಎಸ್ಎಲ್ಎಸಿಸಿ ಯೋಜನೆ

ಭಾರತದ ಸುಸ್ಥಿರ ಬದುಕು ಮತ್ತು ಹವಾಮಾನ ಬದಲಾವಣೆಯ ಅಳವಡಿಕೆ (ಎಸ್‌ಎಲ್‌ಎಸಿಸಿ) ಯೋಜನೆಯನ್ನು ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಬದುಕಿನ ಯೋಜನೆಯ ಸಹಯೋಗದೊಂದಿಗೆ ವಿಶ್ವಬ್ಯಾಂಕಿನ ನೆರವಿನೊಂದಿಗೆ ನಡೆಸುತ್ತಿದೆ. ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಈ ಯೋಜನೆಯು ಕ್ರಾಪ್‌ಇನ್‌ ಅನ್ನು ತಮ್ಮ ಪಾಲುದಾರನನ್ನಾಗಿಸಿಕೊಂಡಿತು. ಆ ಮೂಲಕ ತಂತ್ರಜ್ಞಾನವನ್ನು ಭಾರತೀಯ ರೈತರ ಮನೆಬಾಗಿಲಿಗೆ ತಲುಪಿಸಿತು. ಈ ಯೋಜನೆಯು ರೈತರು ಹವಾಮಾನ ತಾಳಿಕೆಯ ಪದ್ಧತಿಗಳು, ಹವಾಮಾನ ಬದಲಾವಣೆ ಅಥವ ಅನಿರಿಕ್ಷತತೆಯನ್ನು ಎದುರಿಸಲು ಸನ್ನದ್ಧರನ್ನಾಗಿಸುವ ಗುರಿಯನ್ನು ಹೊಂದಿದೆ.

ನಿಯಮಿತವಾಗಿ ಎದುರಿಸುವ ಹವಾಮಾನ ವೈಪರಿತ್ಯದ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ತಾಳಿಕೆಯನ್ನು ಬೆಳೆಸಿಕೊಳ್ಳುವುದು ಇಂದು ಭಾರತದ ರೈತರು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲೊಂದು. ಬಿಹಾರ್‌ ಮತ್ತು ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಹವಾಮಾನ ತಾಳಿಕೆಯ ಪರಿಹಾರಗಳನ್ನು ಡಿಜಿಟಲ್‌ ತಂತ್ರಾಂಶದ ಮೂಲಕ ಕೃಷಿಯ ಅಗತ್ಯತತೆಗಳನ್ನು ಪೂರೈಸಲು ಬಳಸಲಾಯಿತು. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಿಹಾರ ಮತ್ತು ಮಧ್ಯಪ್ರದೇಶಗಳ ರಾಜ್ಯ ಗ್ರಾಮೀಣ ಬದುಕಿನ ಮಿಷನ್‌ ಸಹಯೋಗದೊಂದಿಗೆ ಕ್ರಾಪ್‌ಇನ್‌ ಟೆಕ್ನಾಲಜಿ ಕೈಗೊಂಡಿತು. ಕ್ರಾಪ್‌ಇನ್‌ನವರು ಡಿಜಿಟಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು ಅದರ ಮೂಲಕ ರೈತರಿಗೆ ಕೊಯ್ಲು, ಹವಾಮಾನ, ಮಣ್ಣು ಮತ್ತಿತರ ಸೂಚ್ಯಂಕಗಳನ್ನು ತಿಳಿಸುತ್ತದೆ.

ರೈತರ ಪ್ರಗತಿಯನ್ನು ಪರಿಣಾಮಕಾರಿಯಾಗಿ ದಾಖಲಿಸಿ ನಿರ್ವಹಿಸಲು ಸೂಕ್ತ ತಂತ್ರಾಂಶದ ಅಗತ್ಯವಿದೆ. ಇದರಿಂದ ಭಾಗಿದಾರರಿಗೆ ಎಲ್ಲ ಮಾಹಿತಿಗಳು ಸಿಗುತ್ತವೆ. ಕ್ರಾಪ್‌ಇನ್‌ನವರ ಸ್ಮಾರ್ಟ್‌ ಫಾರಂ ಕೃಷಿ ನಿರ್ವಹಣೆಗೆ ಪರಿಹಾರವನ್ನು ಒದಗಿಸುತ್ತದೆ. ಇದು ರೈತರು ಉತ್ಪಾದನೆಯ ಎಲ್ಲ ಹಂತಗಳಲ್ಲಿ ಜೊತೆಯಾಗಿದ್ದು ಹಂತಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ.

ಕ್ರಾಪ್‌ಇನ್‌ ತಂತ್ರಜ್ಞಾನವು ಋತುಮಾನಕ್ಕೆ ಅನುಗುಣವಾಗಿ ಬೆಳೆಯಲಾಗುವ ಮುಖ್ಯ ಬೆಳೆಗಳ ಕುರಿತು ಹವಾಮಾನವನ್ನು ಆಧರಿಸಿ ರೈತರಿಗೆ ಸ್ಥಳೀಯ ಹಿಂದಿ ಭಾಷೆಯಲ್ಲಿಯೇ ಸುಸ್ಥಿರ ಕೃಷಿ ಪದ್ಧತಿಯಂತೆ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡುತ್ತದೆ. ರೈತರ ಚಟುವಟಿಕೆಗಳನ್ನು ದಾಖಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸುಲಭ ಮೊಬೈಲ್‌ ಅಪ್ಲಿಕೇಶನ್‌ನಿಂದ ಕ್ಷೇತ್ರದ ಕೆಲಸಗಾರರು ಉತ್ತಮ ಕ್ಷಮತೆ, ಪಾರದರ್ಶಕತೆಯೊಂದಿಗೆ ಈ ಮಾಹಿತಿಯನ್ನು ದಾಖಲಿಸಿದರು. ಇದರಿಂದ ಭಾಗಿದಾರರಿಗೆ ಕೀಟ ಇಲ್ಲವೆ ರೋಗಭಾದೆಯ ಕುರಿತು ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡಬಹುದು.

ವೆಬ್‌ ಮತ್ತು ಮೊಬೈಲ್‌ ಆಧಾರಿತ ಸಲಹಾ ಡ್ಯಾಶ್‌ಬೋರ್ಡ್‌ನ್ನು ಅಭಿವೃದ್ಧಿಪಡಿಸಲಾಯಿತು. ಇದು ಹಳ್ಳಿಯ ಸಂಪನ್ಮೂಲ ವೃತ್ತಿಪರರಿಗೆ ಬಿತ್ತನೆ, ಮಣ್ಣಿನ ಆರೋಗ್ಯ, ಬೀಜೋಪಚಾರ, ಗೊಬ್ಬರ ಮತ್ತು ಏಳು ದಿನಗಳ ಹವಾಮಾನ ವರದಿಯನ್ನು ಒದಗಿಸುತ್ತದೆ. ಹವಾಮಾನ ಕುರಿತು ಇರುವ ಅತ್ಯುತ್ತಮ ಮಾದರಿಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಮಾಹಿತಿಗಳು ಭಾಗಿಧಾರ ರೈತರಿಗೆ ತಮ್ಮ ಬೆಳೆಯ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಮಾಡುತ್ತದೆ. ಈ ಮಾಡ್ಯೂಲ್‌ ರಾಜ್ಯದ ಸಂಶೋಧನ ಸಂಸ್ಥೆಗಳಲ್ಲಿನ ಕೃಷಿ ಪರಿಣತರ ತಾಂತ್ರಿಕ ಸಲಹೆ ಸೂಚನೆಗಳನ್ನು ಹಾಗೂ ಹಳ್ಳಿಯ ಸಂಪನ್ಮೂಲ ವೃತ್ತಿಪರರಿಂದ ಮಾಹಿತಿಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡು ಪ್ರಾಯೋಗಿಕವಾಗಿ ಕೃಷಿ ಸಲಹೆಗಳನ್ನು ಅಭಿವೃದ್ಧಿ ಪಡಿಸುತ್ತದೆ.

ಕ್ರಾಪ್‌ಇನ್‌ನವರ ತಂತ್ರಜ್ಞಾನದಿಂದ ಹಳ್ಳಿಯ ಸಂಪನ್ಮೂಲ ವೃತ್ತಿಪರ ಬಿಹಾರದಿಂದ ಬಿತ್ತನೆ, ಮಣ್ಣಿನ ಆರೋಗ್ಯ, ಬೀಜೋಪಚಾರ, ಹವಾಮಾನ ಮುನ್ಸೂಚನೆಯ ಕುರಿತ ರೈತರಿಗೆ ಅನುಕೂಲವಾಗುವ ಮಾಹಿತಿಗಳನ್ನು ಪಡೆಯಲು ಸಾಧ್ಯವಾಯಿತು. ಇವುಗಳನ್ನು ಬಳಸಿ ರೈತರಿಗೆ ತಮ್ಮ ಹೊಲದಲ್ಲಿ ಬಳಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಕ್ರಾಪ್‌ಇನ್‌ ವೃತ್ತಿಪರರೊಂದಿಗೆ ಸಂವಾದ ಮಾಡಲು ಶುರುಮಾಡಿದರು. ಇದರಿಂದ ಅವರು ಅತ್ಯುತ್ತಮ ತರಬೇತುದಾರರಾದರು.

ಸವಾಲುಗಳು

ಡಿಜಿಟಲ್‌ ಸೊಲ್ಯೂಶನ್ಸ್‌ಗಳನ್ನು ಪ್ರಚುರಪಡಿಸಲು ಹಲವಾರು ಸವಾಲುಗಳಿವೆ. ಮೊದಲನೆಯದು ಇದರ ಅಳವಡಿಕೆ. ಅದರಲ್ಲೂ ಭಾರತದಲ್ಲಿ ಬಹುತೇಕ ಕೃಷಿ ಉದ್ಯಮಿಗಳು ಸಾಂಪ್ರದಾಯಿಕ ಪದ್ಧತಿಗಳಿಗನುಸಾರವಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ಡಿಜಿಟಲೀಕರಣವನ್ನು ಅನುಮಾನದಿಂದಲೇ ನೋಡುತ್ತಾರೆ. ಅಪ್ಲಿಕೇಶನ್‌ನ ಮೂಲಕ ಕೇವಲ ಅವರನ್ನು ಹಾಗೂ ಅವರ ಕೆಲಸವನ್ನು ಗುರುತಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಇದು ಅವರಿಗೆ ಇನ್ನಷ್ಟು ಸವಾಲುಗಳನ್ನು ಒಡ್ಡುವ ಮೂಲಕ ಅವರ ಗಮನ ಬೇರೆಡೆಗೆ ಹೋಗುವಂತೆ ಮಾಡುತ್ತದೆ ಎನ್ನುವ ತಪ್ಪುತಿಳುವಳಿಕೆ ಇದೆ.

ಚೌಕ : ಕ್ರಾಪ್ಇನ್ಡಿಜಿಟಲ್ಸೊಲ್ಯೂಶನ್ಸ್ಸ್ಮಾರ್ಟ್ಫಾರಂ : ಕೃಷಿ ನಿರ್ವಹಣೆಯಲ್ಲಿ ಇದಕ್ಕೆ ಬಹುಮಾನ ಸಂದಿದೆ. ಇದು ಕೃಷಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ಮಾಹಿತಿಯನ್ನಾಧರಿಸಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯನ್ನು ಬಲಪಡಿಸಿದೆ. ಪ್ರಕ್ರಿಯೆ, ಜನ ಹಾಗೂ ಕ್ಷೇತ್ರ ಪ್ರದರ್ಶನ ಕುರಿತು ಮಾಹಿತಿ ಒದಗಿಸುತ್ತದೆ. ಮಾಹಿತಿಯನ್ನು ಅನುಸರಿಸುವ ಜೊತೆಗೆ ಅದರ ಫಲಿತಾಂಶವನ್ನು ಊಹಿಸುತ್ತದೆ. ಪದ್ಧತಿಗಳು, ಸಮಸ್ಯೆಗಳು, ಪ್ರಮಾಣೀಕರಣ, ಕೀಟ ಮತ್ತು ಬೆಳೆ ಆರೋಗ್ಯ ನಿರ್ವಹಣೆ ಇವೆಲ್ಲವನ್ನೂ ಇದು ಒಳಗೊಂಡಿದೆ.ಸ್ಮಾರ್ಟ್ರಿಸ್ಕ್‌: ಇದೊಂದು ಕೃಷಿ ವ್ಯವಹಾರಕ್ಕೆ ಸಂಬಂಧಿಸಿದ ಇಂಟೆಲಿಜೆನ್ಸ್‌ ಸೊಲ್ಯೂಶನ್‌. ಆಪತ್ತಿನ ಮುನ್ಸೂಚನೆ ಹಾಗೂ ಅದರ ನಿರ್ವಹಣೆಯ ಕುರಿತು ಮಾಹಿತಿ ನೀಡುತ್ತದೆ. ಇದರಿಂದ ಸಾಲ ಪಾವತಿ ಹಾಗೂ ಸಾಲ ನಿರ್ವಹಣೆಯ ಕುರಿತು ಸಹಾಯ ಪಡೆಯಬಹುದು. ಉಪಗ್ರಹದ ಮಾಹಿತಿಯನ್ನಾಧರಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಇವುಗಳನ್ನು ಸ್ಥಳೀಯ ಮಟ್ಟದ ಹವಾಮಾನ ಮಾಹಿತಿ ನೀಡಲು ಬಳಸಲಾಗುತ್ತದೆ.ಎಂವೇರ್ಹೌಸ್‌: ಪ್ಯಾಕಿಂಗ್‌, ಸಂಸ್ಕರಣೆ ಮತ್ತು ರಫ್ತು ಕಂಪನಿಗಳಿಗೆ ನೆರವಾಗುತ್ತದೆ. ತೋಟದಿಂದ ತಟ್ಟೆಗೆ ಆಹಾರವನ್ನು ತಲುಪಿಸಲು, ಗುಣಮಟ್ಟ ನಿಯಂತ್ರಣ ಮತ್ತು ನಿರ್ವಹಣೆಗೆ ನೆರವಾಗುತ್ತದೆ.ಸ್ಮಾರ್ಟ್ಸೇಲ್ಸ್‌: ಮಾರಾಟದ ಸಾಧ್ಯತೆಗಳನ್ನು ಊಹಿಸಿ ಮಾರಾಟವನ್ನು ಉತ್ತಮಗೊಳಿಸಲು, ಮಾರಾಟ ತಂಡದ ನಿರ್ವಹಣೆ ಮಾಡಲು ಇದು ನೆರವು ನೀಡುತ್ತದೆ.ಎಕರ್ಸ್ಕ್ವೇರ್‌ : ಇದೊಂದು ವಿಶಿಷ್ಟ ರೈತರ ಅಪ್ಲಿಕೇಶನ್‌. ಇದರ ನೆರವಿನಿಂದ ಕಂಪನಿಗಳವರು ನೇರವಾಗಿ ರೈತರೊಂದಿಗೆ ಸಂವಾದ ನಡೆಸಿ, ವಿಷಯವನ್ನು ಹಂಚಿಕೊಳ್ಳಬಹುದು, ಅವರಿಗೆ ಶಿಕ್ಷಣ ನೀಡಬಹುದು ಮತ್ತು ಸಮಾಲೋಚನೆ ಕೂಡ ನಡೆಸಬಹುದು. ಇದರಿಂದಾಗಿ ಕಂಪನಿಗಳವರು ತಂತ್ರಜ್ಞಾನದ ನೆರವನ್ನು ರೈತರೊಂದಿಗೆ ಹಂಚಿಕೊಳ್ಳುವುದರ ಮೂಲಕ ಅವರ ವಿಶ್ವಾಸಾರ್ಹತೆ ಗಳಿಸಿಕೊಳ್ಳಬಹುದು.

 

ಎರಡನೆಯದು ಚಲನಶೀಲತೆ ಮತ್ತು ಸಾಕ್ಷರತೆ. ಮೊಬೈಲ್‌ ಸಂವಹನ ಮತ್ತು ಬ್ರಾಡ್‌ಬ್ಯಾಂಡ್‌ ಸಂಪರ್ಕ ಚೆನ್ನಾಗಿದ್ದರೂ ಕೂಡ ಗ್ರಾಮೀಣ ಭಾಗಗಳಲ್ಲಿ ಇದು ಅಷ್ಟು ಪರಿಣಾಮಕಾರಿಯಾಗಿಲ್ಲ. ಈ ವಿಷಯವಾಗಿ ಗ್ರಾಮೀಣ ಭಾಗದಲ್ಲಿ ಸಾಕ್ಷರತೆಯ ಅವಶ್ಯಕತೆಯಿದೆ. ತಂತ್ರಜ್ಞಾನವು ಬದಲಾಗುತ್ತಲೇ ಇರುತ್ತದೆ. ಕಂಪನಿಗಳು ಈ ಕುರಿತು ಸದಾ ಸನ್ನದ್ಧರಾಗಿರಬೇಕು. ಹೊಸ ತಂತ್ರಜ್ಞಾನದ ಅಳವಡಿಕೆಗೆ ಸನ್ನದ್ಧವಾಗಿರುವುದು ಸಮಯ ಮತ್ತು ವೆಚ್ಚ ಎರಡನ್ನೂ ಬೇಡುತ್ತದೆ.

ಈ ಸವಾಲುಗಳು ಅಗ್ರಿಟೆಕ್‌ ಕಂಪನಿಗಳು ರೈತರೊಂದಿಗೆ ನೇರವಾಗಿ ಕೆಲಸ ಮಾಡಲು ಅಡ್ಡಿಮಾಡುತ್ತವೆ. ಕ್ರಾಪ್‌ಇನ್‌ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದೆ. ಇದು ಪರಿಸ್ಥಿತಿಯನ್ನು ಹಿಂದೆಗಿಂತಲೂ ಸುಧಾರಿಸಿದೆ.

ಪರಿಣಾಮಗಳು

ರೈತರೀಗ ಹೆಚ್ಚು ತಂತ್ರಜ್ಞಾನ ಸ್ನೇಹಿಗಳಾಗಿದ್ದು ಕೃಷಿಯ ಡಿಜಿಟಲೀಕರಣದಿಂದ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಂಡಿದ್ದಾರೆ. ಇಳುವರಿಯ ಹೆಚ್ಚಳ, ಕೃಷಿಯಲ್ಲಿ ಹೆಚ್ಚಿದ ಕ್ಷಮತೆಯನ್ನುನೋಡಿ ಅವರಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅನುಕೂಲದ ಅರಿವಾಗಿದೆ. ಕ್ರಾಪ್‌ಇನ್‌ ೨.೧ ಮಿಲಿಯನ್‌ ರೈತರ ಬದುಕನ್ನು ಪ್ರಭಾವಿಸಿದೆ. ೫೨ ದೇಶಗಳ ಸುಮಾರು ೬.೧ ಮಿಲಿಯನ್‌ ಎಕರೆ ಭೂಮಿಯ ವಿವರಗಳನ್ನು ಡಿಜಿಟಲೈಸ್‌ ಮಾಡಲಾಗಿದೆ. ಕ್ರಾಪ್‌ಇನ್‌ ಸೊಲ್ಯೂಶನ್‌ನವರು ೯,೪೦೦+ ಬೆಳೆಗಳನ್ನು ಗುರುತಿಸಿದೆ. ಜೊತೆಗೆ ೩೮೮ಕ್ಕೂ ಹೆಚ್ಚು ಬೆಳೆಗಳ ಮೇಲೆ ಇನ್ನೂ ಕೆಲಸ ನಡೆಯುತ್ತದೆ.

ಕ್ರಾಪ್‌ಇನ್‌ ಸೊಲ್ಯೂಶನ್ಸ್‌ ರೈತರಿಗೆ ಜ್ಞಾನಭಂಡಾರವಿದ್ದಂತೆ ತಮ್ಮ ಕೃಷಿಭೂಮಿಯ ಕುರಿತ ವಿವರಗಳು, ಹವಾಮಾನ ಮುನ್ಸೂಚನೆಗಳು ಮತ್ತು ಕೀಟಹಾವಳಿಯ ಕುರಿತು ಅವರಿಗೆ ಒಳನೋಟಗಳನ್ನು ಒದಗಿಸುತ್ತದೆ. ಇದು ರೈತರ ಕೌಶಲ್ಯಾಭಿವೃದ್ಧಿಗೆ ನೆರವಾಗಿ ಅವರ ಭವಿಷ್ಯನ್ನು ರೂಪಿಸಿಕೊಳ್ಳಲು ಸಹಾಯಮಾಡುತ್ತದೆ. ಕ್ಷೇತ್ರದ ಏಜೆಂಟ್‌ಗಳು ರೈತರಿಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂದು ತರಬೇತಿ ನೀಡುತ್ತಾರೆ.

ಕೃಷಿಯ ಡಿಜಿಟಲೀಕರಣವು ಭವಿಷ್ಯ ಮಾತ್ರವಲ್ಲ ಅದು ಇಂದಿನ ಜಾಗತಿಕ ಕೃಷಿಯ ವಾಸ್ತವವಾಗಿದೆ. ಡಿಜಿಟಲ್‌ ತಂತ್ರಜ್ಞಾನಗಳು ಜಾಗತಿಕ ಕೃಷಿಯ ಸಾಮರ್ಥ್ಯವೃದ್ಧಿಗೆ ಪ್ರಮುಖ ಪೂರಕಾಂಶವಾಗಿದೆ. ಡಿಜಿಟಲೀಕರಣವು ಕೃಷಿಯಲ್ಲಿ ಅದ್ಭುತಗಳನ್ನು ಮಾಡಿದೆ. ಆಹಾರ ಉತ್ಪಾದನೆ ಹಾಗೂ ರೈತರ ಬದುಕಿನ ಮೇಲೆ ಇತ್ಯಾತ್ಮಕ ಪರಿಣಾಮ ಬೀರಿದೆ.  ಡಿಜಿಟಲ್‌ ಕೃಷಿಯೆಂದರೆ ಮಾಹಿತಿ ಆಧರಿಸಿ ನಿರ್ಣಯ ಕೈಗೊಳ್ಳುವಿಕೆ, ಇಳುವರಿ ಹೆಚ್ಚಳ, ಉತ್ತಮ ಗುಣಮಟ್ಟದ ಉತ್ಪಾದನೆ. ನಂಬಿಕಾರ್ಹವಾದ, ನಿಖರವಾದ ಮತ್ತು ಸುಸ್ಥಿರ ವ್ಯವಸ್ಥೆಯನ್ನು ಒದಗಿಸುವ ಮೂಲಕ ಇದನ್ನು ಸಾಧ್ಯವಾಗಿಸುವುದು ಆಧುನಿಕ ತಂತ್ರಜ್ಞಾನ.  ಇದು ಬರಲಿರುವ ನಾಳೆಯನ್ನು ಉತ್ತಮಗೊಳಿಸುತ್ತದೆ.

ಕೃಷ್ಣ ಕುಮಾರ್


Krishna Kumar

CEO and Founder, CropIn.

3rd Floor, 1021, 16th Main Rd,

Tavarekere, Aicobo Nagar, 1st Stage,

BTM Layout 1, Bengaluru,

Karnataka 560029

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್ ೨೦೨೦

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp