ಸೂಕ್ಷ್ಮಜೀವಿಗಳು ಸಂಪನ್ಮೂಲ ಮರುಬಳಕೆಗೆ ಸಹಕಾರಿ


ಜಮೀನಿನಲ್ಲಿನ ಸಂಪನ್ಮೂಲಗಳ ಮರುಬಳಕೆ ಮತ್ತು ಎಲ್ಲವನ್ನೂ ಒಳಗೊಂಡ ನಿರ್ವಹಣೆಯಂತಹ ಜೈವಿಕ ಆಯ್ಕೆಗಳು ಪ್ರತಿಕೂಲ ಹವಾಮಾನವು ಬೆಳೆಯ ಮೇಲೆ ಬೀರುವ ಪರಿಣಾಮಗಳು ಮತ್ತು ರಾಸಾಯನಿಕರಗಳ ಅತಿಬಳಕೆಯಿಂದಾಗುವ ನಷ್ಟ ಹಾಗೂ ಇದರಿಂದ ಹಾಳಾಗುವ ಮಣ್ಣು ಇವೆಲ್ಲವನ್ನೂ ತಡೆಯುವಲ್ಲಿ ವಿಶ್ವಾಸನಿಯವಾಗಿವೆ.


ಇಂದು ಕೃಷಿಪರಿಸರವು ಹಾಳಾಗಿರುವುದಕ್ಕೆ ಕಾರಣವೆಂದರೆ ಮರುಬಳಕೆ ಸಾಧ್ಯವಿಲ್ಲದಂತಹ ರಾಸಾಯನಿಕ ಒಳಸುರಿಯುವಿಕೆಗಳನ್ನು ಬಳಸಿ ಹೆಚ್ಚು ಬೆಳೆ ತೆಗೆಯುವ ವಿಧಾನಗಳು. ಈ ಬಗೆಯ ಪದ್ಧತಿಗಳು ಮಣ್ಣನ್ನು ಕೇವಲ ಭೌತಿಕ ವಸ್ತು ಎಂದು ನೋಡುತ್ತದೆ. ಅದರಲ್ಲಿರುವ ವಿಸ್ತಾರವಾದ, ಅದ್ಭುತವಾದ ಜೈವಿಕ ಅಂಶಗಳನ್ನು ಕಡೆಗಣಿಸುತ್ತವೆ. ಈ ಜೈವಿಕ ಅಂಶಗಳೇ ನಮ್ಮನ್ನಿಂದು ಕಾಡುತ್ತಿರುವ ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು. ಆದ್ದರಿಂದಲೇ ನಾವು ಮೇಲ್ಪದರದ ಹಾಗೂ ಒಳಪದರದ ಮಣ್ಣಿನ ಜೈವಿಕ ಮತ್ತು ರಾಸಾಯನಿಕ ಅಂಶಗಳ ಕಡೆ ಗಮನಹರಿಸಬೇಕು. ಈ ಅಂಶಗಳು ಕೃಷಿ ಪರಿಸರ ವ್ಯವಸ್ಥೆಯಲ್ಲಿ ಗಿಡದ ಬೆಳವಣಿಗೆಯನ್ನು ನಿರ್ಧರಿಸುತ್ತವೆ. ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಮಣ್ಣಿನ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗಿರುವುದರಿಂದ ರೈತರಿಂದು ಮಣ್ಣನ್ನು ಪುನಶ್ಚೇತನಗೊಳಿಸಬಲ್ಲ ಬದಲಿ ಪದ್ಧತಿಗಳನ್ನು ಹುಡುಕುತ್ತಿದ್ದಾರೆ. ಸೂಕ್ಷ್ಮಜೀವಿಗಳನ್ನಾಧರಿಸಿದ ಕೃಷಿ ಪರಿಸರ ಪದ್ಧತಿಗಳು ಉತ್ತಮ ಫಲಿತಾಂಶವನ್ನು ತಂದುಕೊಡಬಲ್ಲುದು. ಇವು ಜಮೀನಿನ ಉತ್ಪಾದಕತೆಯನ್ನು ಅಲ್ಲಿನ ಜೈವಿಕವೈವಿಧ್ಯತೆಯನ್ನು ಹೆಚ್ಚಿಸುವ ಮೂಲಕ ಉತ್ತಮಗೊಳಿಸುತ್ತದೆ.

ಸೂಕ್ಷ್ಮಜೀವಿಗಳು ಮತ್ತು ಅದರಿಂದಾಗುವ ಲಾಭಗಳು

ಸೂಕ್ಷ್ಮಜೀವಿಗಳು ತಮ್ಮದೇ ಆದ ವಿಶಿಷ್ಟ ಅಂತರ್ಗತ ಸಾಮರ್ಥ್ಯದೊಂದಿಗೆ ವಿಕಸನಗೊಂಡಿವೆ. ಅವುಗಳಲ್ಲಿ ಪುನರ್ಬಳಕೆಗೊಳ್ಳುವ, ಹೊಸತನ್ನು ಒಳಗೊಂಡು ತಮ್ಮ ನೆಲೆಯನ್ನು ಕಟ್ಟಿಕೊಳ್ಳುವ ಸಾಮರ್ಥ್ಯವಿದೆ. ಆ ಮೂಲಕ ಅವು ಮಣ್ಣನ್ನು ಪುನಶ್ಚೇತನಗೊಳಿಸುವುದರೊಂದಿಗೆ ಗಿಡಗಳ ಆರೋಗ್ಯವನ್ನು ಕಾಪಾಡಿ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇಂತಹ ಸೂಕ್ಷ್ಮಜೀವಿಗಳನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಜೈವಿಕ ಉತ್ತೇಜಕಗಳಾಗಿ ಅಭಿವೃದ್ಧಿಗೊಳಿಸಬಹುದು.  ಇದು ಮಣ್ಣಿನ ಪರಿಸರವನ್ನು ಉತ್ತಮಗೊಳಿಸಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಬೆಳೆಯನ್ನು ಕಾಪಾಡುತ್ತದೆ. ಆದ್ದರಿಂದ ವೈವಿಧ್ಯಮಯವಾದ ಈ ಸೂಕ್ಷ್ಮಜೀವಿಗಳನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ರೈತರ ಮತ್ತು ಕೃಷಿಯು ಉತ್ತಮವಾಗಿರಬಲ್ಲುದು.

ಫೋಟೊ :   ಜೈವಿಕಗೊಬ್ಬರ ತಯಾರಿಕಾ ವಿಧಾನದ ಪ್ರಾತ್ಯಕ್ಷಿಕೆ

ಸೂಕ್ಷ್ಮಜೀವಾಣುಗಳು ಮಣ್ಣಿನಲ್ಲಿರುವ ಸಾರಜನಕ, ರಂಜಕ, ಸತು ಮತ್ತು ಕಬ್ಬಿಣದಂಶವನ್ನು ಸ್ಥಿರಗೊಳಿಸುತ್ತದೆ. ಇದರಿಂದ ಮಣ್ಣಿನಲ್ಲಿ ಪೌಷ್ಟಿಕಾಂಶಗಳು ಹೆಚ್ಚುತ್ತದೆ. ಕೃಷಿತ್ಯಾಜ್ಯದ ಕೊಳೆಯುವಿಕೆಯ ಪ್ರಕ್ರಿಯೆಯು ಉತ್ತಮಗೊಂಡು ಮಣ್ಣಿನ ಫಲವಂತಿಕೆಯು ಹೆಚ್ಚುತ್ತದೆ. ಸೂಕ್ಷ್ಮಾಣು ಜೀವಿಗಳು ಗಿಡದ ಬೇರುಗಳಿಗೆ ಪೌಷ್ಟಿಕಾಂಶಗಳನ್ನು ಒದಗಿಸಿ ಅದರ ರೋಗಪ್ರತಿರೋಧಕ ಶಕ್ತಿ ಮತ್ತು ತಾಳಿಕೆಯ ಶಕ್ತಿಯನ್ನು ಹೆಚ್ಚಿಸುತ್ತವೆ. ಸೂಕ್ಷ್ಮಾಣುಜೀವಿಗಳ ಶಕ್ತಿ ಮತ್ತು ಉಪಯೋಗಗಳ ಕುರಿತು ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟಲ್ಲಿ ಅವರು ಒಳಸುರಿಯುವಿಕೆಗಳನ್ನು ಅವಲಂಭಿಸಿದ ಪದ್ಧತಿಯ ಬದಲಿಗೆ ಪೂರಕಾಂಶಗಳನ್ನೊದಗಿಸುವ ಈ ಬದಲಿ ಪದ್ಧತಿಯನ್ನು ಅನುಸರಿಸುತ್ತಾರೆ.

ಸೂಕ್ಷ್ಮಾಣುಜೀವಿ ಪ್ರಚೋದಕಗಳು ಬೆಳೆಗಳ ತಾಳಿಕೆಯ ಶಕ್ತಿಯನ್ನು ಹೆಚ್ಚಿಸುತ್ತವೆ. ಮಣ್ಣು ಮತ್ತು ಗಿಡಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ರೈತರಿಗೆ ಈ ಸೂಕ್ಷ್ಮಜೀವಿಗಳು ಗಿಡ ಮತ್ತು ಮಣ್ಣಿನ ಮೇಲೆ ಬೀರುವ ಪರಿಣಾಮದ ಮಹತ್ವ ಕುರಿತು ಅರಿವು ಮೂಡಿಸಿದಲ್ಲಿ ಅವರು ಈ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ರೈತರಿಗೆ  ಈ ಜೀವಿಗಳ ಕ್ರಿಯೆ ಪ್ರತಿಕ್ರಿಯೆಗಳ ಬಗ್ಗೆ ಆಸಕ್ತಿ ಇಲ್ಲದಿರಬಹುದು ಆದರೆ ಅಂತಿಮವಾಗಿ ಅವು ಬೆಳೆಯ ಉತ್ಪಾದನೆಯ ಮೇಲೆ ಬೀರುವ ಪರಿಣಾಮ ಕುರಿತು ತಿಳಿದುಕೊಳ್ಳಲು ಅವರು ಉತ್ಸುಕರಾಗಿರುತ್ತಾರೆ. ಆದ್ದರಿಂದ ರೈತರಿಗೆ ಅವರ ಸುತ್ತಲಿರುವ ಜೈವಿಕ ಆಯ್ಕೆಗಳ ಕುರಿತು, ಅವುಗಳ ಬಳಕೆಯ ವಿಧಾನಗಳು, ಗುಣಮಟ್ಟದ ಅಂಶಗಳು, ಸಾಧ್ಯತೆಗಳು, ಮುನ್ನಚ್ಚರಿಕಾ ಕ್ರಮಗಳು ಮತ್ತು ತಾಂತ್ರಿಕವಾಗಿ ಅದರ ಸಾಧ್ಯತೆಗಳನ್ನು ತಿಳಿಸಿಕೊಟ್ಟಲ್ಲಿ ಅವು ಸಮುದಾಯದ ನಡುವೆ ತಾನಾಗಿ ಹರಡುತ್ತದೆ.

ನಾವು ೧೨೦೦ ರೈತರಿಗೆ ಈ ಸೂಕ್ಷ್ಮಾಣು ಜೀವಿ ಪದ್ಧತಿಯ ಪ್ರಾತ್ಯಕ್ಷಿಕೆ ನೀಡಿದ್ದೇವೆ. ಬೀಜೋಪಚಾರ,  ಸಸಿಗಳ ಆರೈಕೆ, ಬಿತ್ತನೆಗೆ ಮುನ್ನ ಮತ್ತು ಬಿತ್ತನೆಯ ನಂತರ ಮಣ್ಣಿಗೆ ನೀಡಬೇಕಾದ ಪೋಷಕಾಂಶಗಳ ಕುರಿತು ಅವರಿಗೆ ತರಬೇತಿಯನ್ನು ನೀಡಲಾಯಿತು (ಗಿಡಗಳನ್ನು ನೆಡುವ ಮೊದಲು, ಗಿಡ ಸ್ವಲ್ಪ ಬೆಳೆದ ನಂತರ ಮತ್ತು ಹೂ ಬಿಡಲು ೧೦ ದಿನಗಳ ಮೊದಲು).

ಫಲಿತಾಂಶಗಳು

ಭತ್ತ, ಗೋಧಿ ಮತ್ತು ತರಕಾರಿಗಳ ಮೇಲೆ ಇವುಗಳನ್ನು ಬಳಸಿದಾಗ ಗುಣಮಟ್ಟ ಮತ್ತು ಇಳುವರಿ ಎರಡೂ ರೀತಿಯಲ್ಲಿ ಫಲಕಾರಿಯಾದದ್ದು ಕಂಡುಬಂದಿದೆ. ಹೆಚ್ಚಿನ ರೈತರು ಈಗ ಈ ಸಾರಜನಕ, ರಂಜಕ, ಪೊಟ್ಯಾಶಿಯಂ ಜೈವಿಕ ಗೊಬ್ಬರಗಳನ್ನು ಭತ್ತ, ಗೋಧಿ ಮತ್ತು ತರಕಾರಿ ಬೆಳೆಸಲು ಬಳಸುತ್ತಿದ್ದಾರೆ. ಜೀವಾಣು ಗೊಬ್ಬರಗಳು ಭತ್ತ ಮತ್ತು ಗೋಧಿ ಬೆಳೆಗಳಿಗೆ ಹಾಕಲಾಗುತ್ತಿದ್ದ ಎನ್‌ಪಿಕೆ ರಾಸಾಯನಿಕಗಳನ್ನು ೩೦%ನಷ್ಟು ತಗ್ಗಿಸಿದೆ. ಅದೇ ರೀತಿ ಟ್ರೈಕೊಡೊರ್ಮಾ ಮತ್ತು ಸುಡೊಮೊನಸ್ಜೈವಿಕ ಕೀಟನಾಶಕಗಳನ್ನು ಬೀಜೋಪಚಾರ ಮತ್ತು ಸಸಿಗಳಿಗೆ  ಬಳಸಿದ್ದರಿಂದ ರೋಗಭಾದೆಯು ತಗ್ಗಿದೆ. ಜೊತೆಗೆ ಕಡಲೆ ಮತ್ತಿತರ ತರಕಾರಿಗಳಿಗೆ ಮಣ್ಣಿನ ಕಾರಣದಿಂದ ಬರುತ್ತಿದ್ದ ರೋಗಗಳು ಕೂಡ ಇಲ್ಲವಾಗಿವೆ. ಇವುಗಳ ಬಳಕೆಯಿಂದ ಆರೋಗ್ಯವಂತ ಸಸಿಗಳ ಪ್ರಮಾಣ ೪೦% ಹೆಚ್ಚಾಗಿದೆ. ತರಕಾರಿಗಳಿಗೆ ಕಾಡುತ್ತಿದ್ದ ರೋಗಭಾದೆ ತಪ್ಪಿ ೭-೧೦% ಇಳುವರಿ ಹೆಚ್ಚಾಗಿದೆ.

ಆಶ್ಚರ್ಯವೆಂದರೆ ಒಮ್ಮೆ ಈ ಜೈವಿಕ ಉತ್ಪನ್ನಗಳನ್ನು ಬಳಸಿದ ರೈತರು ನಮ್ಮ ಬಳಿ ಹಿಂತುರಿಗಿ ಬಂದು ಇವು ಮಣ್ಣಿನ ಮೇಲೆ ಬೀರುವ ಪರಿಣಾಮದ ಹಿನ್ನಲೆಯಲ್ಲಿರುವ ವೈಜ್ಞಾನಿಕ ಕಾರಣಗಳನ್ನು ತಿಳಿಯಲು ಆಸಕ್ತಿ ತೋರಿದರು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಟೆಕ್ನಿಕಲ್‌ ಕಿಟ್‌ಗಳನ್ನು ವಿತರಿಸಿತು. ಇದರಲ್ಲಿ ಚಿಕ್ಕ ಮಾಹಿತಿ ಪುಸ್ತಕಗಳು, ಪತ್ರಿಕೆಗಳು ಮತ್ತು ಜೈವಿಕ ಗೊಬ್ಬರಗಳನ್ನು (ದ್ರವ ರೂಪ ಮತ್ತು ಪುಡಿ ರೂಪದಲ್ಲಿ) ಇವುಗಳ ಅಳವಡಿಕೆಯನ್ನು ಪ್ರೋತ್ಸಾಹಿಸಲು ನೀಡಲಾಯಿತು. ನಂತರ ರೈತರೇ ತಾವೇ ಈ ಜೈವಿಕ ವಸ್ತುಗಳನ್ನು ರಾಜ್ಯದ ಕೃಷಿ ಕೇಂದ್ರಗಳು ಇಲ್ಲವೇ ತಮಗೆ ಹತ್ತಿರದಲ್ಲಿರುವ ಮಾರಾಟ ಮಳಿಗೆಗಳಿಂದ ತೆಗೆದುಕೊಳ್ಳಲಾರಂಭಿಸಿದರು.

 ರೈತರ ಈ ಆಸಕ್ತಿಯನ್ನು ನೋಡಿ ಬೆಳೆಗಳ ಮೇಲೆ ಈ ಸೂಕ್ಷ್ಮಜೀವಿಗಳು ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿವರಿಸಲು ತೊಡಗಿದೆವು. ಸೂಕ್ಷ್ಮಜೀವಿಗಳನ್ನೊಳಗೊಂಡ ಈ ಪದ್ಧತಿಗಳು ಬೆಳೆಗೆ ಮತ್ತು ಮಣ್ಣಿಗೆ ಹೇಗೆ ಉತ್ತಮವಾದವು ಎನ್ನುವುದನ್ನು ಅವುಗಳ ಸುಸ್ಥಿರತೆಯ ಅಂಶ, ಸಾಧ್ಯತೆಗಳು, ತಂತ್ರಗಳು, ಅವುಗಳಿಗೆ ತಗಲುವ ವೆಚ್ಚ ಮತ್ತು ಪರಿಸರಾತ್ಮಕ ಪರಿಣಾಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು. ಕಾಳುಗಳು, ಧಾನ್ಯಗಳು, ಕಬ್ಬು ಮತ್ತು ತರಕಾರಿ ಬೆಳೆಗಳ ಮೇಲೆ ಇವುಗಳನ್ನು ಗರಿಷ್ಠ ಮಟ್ಟದಲ್ಲಿ ಪ್ರಯೋಗಿಸುವ ಪ್ರಯತ್ನಗಳನ್ನು ಮಾಡಲಾಯಿತು.

ಜೈವಿಕ ಗೊಬ್ಬರ

ಅಧಿಕ ಬೆಳೆ ಉತ್ಪಾದನಾ ವ್ಯವಸ್ಥೆಯಿಂದ ಮಣ್ಣಿನ ಸಾವಯವ ಅಂಶವು ಕಡಿಮೆಯಾಗುತ್ತದೆ. ಅದರ ಫಲವಂತಿಕೆಯನ್ನು ಮರಳಿಸಬೇಕೆಂದರೆ ಅದು ಕಳೆದುಕೊಂಡಿರುವ ಅಂಶಗಳನ್ನು ಅದಕ್ಕೆ ನೀಡಬೇಕಾಗುತ್ತದೆ. ಮಣ್ಣಿನಲ್ಲಿರುವ ಸಾವಯವ ಅಂಶಗಳು ನಾಶವಾದಲ್ಲಿ ಅಲ್ಲಿ ಸೂಕ್ಷ್ಮಜೀವಿಗಳು ಬದುಕುವುದು ಸಾಧ್ಯವಿಲ್ಲ. ಇದರಿಂದ ಕೃಷಿಗೆ ತಕ್ಕುದಾದದ ಪರಿಸರವು ನಷ್ಟವಾಗುತ್ತದೆ. ಆದ್ದರಿಂದ ಮಣ್ಣಿನ ಫಲವಂತಿಕೆಯ ಪುನಶ್ಚೇತನಕ್ಕೆ ಅದಕ್ಕೆ ಅಗತ್ಯವಾದ ಪೂರಕಾಂಶಗಳನ್ನು ಒದಗಿಸಬೇಕಾಗುತ್ತದೆ. ಹೊಲಗೊಬ್ಬರ ಇಲ್ಲವೇ ಗೊಬ್ಬರದ ಬೆಳೆಗಳಾದ ಸೆಸಬಾನಿಯ ಮತ್ತು ಕ್ರೊಟಲಾರಿಯಗಳನ್ನು ಬೆಳೆದರೆ ಅವು ಮಣ್ಣಿಗೆ ಜೈವಿಕ ಅಂಶವನ್ನು ಮರಳಿ ತರುವಲ್ಲಿ ಸಹಾಯಕವಾಗುತ್ತದೆ. ಅದಾಗ್ಯೂ ರಾಸಾಯನಿಕ ಒಳಸುರಿಯುವಿಕೆಗಳನ್ನು ಆಧರಿಸಿದ ಬೆಳೆ ಪದ್ಧತಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆಯಿರುವ ಭೂಮಿಯಲ್ಲಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ.

ದೇಶದಾದ್ಯಂತ ರಾಸಾಯನಿಕ ಒಳಸುರಿಯುವಿಕೆಗಳನ್ನು ಆಧರಿಸಿದ ಬೆಳೆ ಪದ್ಧತಿಯು ಎಲ್ಲ ಕಾಲದಲ್ಲಿಯೂ ಹೆಚ್ಚಿನ ಕೃಷಿ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಈ ತ್ಯಾಜ್ಯವು ವ್ಯರ್ಥವಾಗಿ ಹೋಗುತ್ತದೆ. ಇದರ ಬದಲಿಗೆ ಜೀವಾಣು ಪ್ರಕ್ರಿಯೆಯ ಮೂಲಕ ಮರುಬಳಕೆಗೆ ಯೋಗ್ಯವಾಗಿಸಿಕೊಂಡಲ್ಲಿ ಜೈವಿಕ ಇಂಗಾಲವನ್ನು ಮರಳಿ ಮಣ್ಣಿಗೆ ಸೇರುವಂತೆ ಮಾಡಬಹುದು. ಆದ್ದರಿಂದ ಈ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವುದು ಉತ್ತಮ. ಅಲ್ಲದೆ ಈ ಗೊಬ್ಬರಗಳನ್ನು ಸಾರಜನಕ, ರಂಜಕ, ಫಾಸ್ಫೇಟ್‌, ಪೊಟ್ಯಾಶಿಯಂ , ಸತು ಮತ್ತು ಕಬ್ಬಿಣದಾಂಶಗಳನ್ನು ಸ್ಥೀರಿಕರಿಸಲು, ಫೈಟೊಹಾರ್ಮೋನುಗಳನ್ನು ಉತ್ಪಾದಿಸಲು ಬಳಸಬಹುದು. ಭೂಮಿಯಲ್ಲಿ ಕೇವಲ ೧೫-೨೦ ದಿನಗಳ ಅವಧಿಯಲ್ಲಿ ಇವುಗಳ ಬಳಕೆಯಿಂದ ಇದನ್ನು ಸಾಧಿಸಬಹುದು. ಈ ಜೈವಿಕ ಗೊಬ್ಬರಗಳು ಅಗತ್ಯವಿರುವ ಅಂಶಗಳನ್ನಷ್ಟೇ ಉಣಬಡಿಸಲು ಸಾಧ್ಯವಾಗುವಂತೆ ಲಭ್ಯವಿದೆ.

ಈ ಜೈವಿಕ ಗೊಬ್ಬರ ತಯಾರಿಕಾ ವಿಧಾನವನ್ನು ಉತ್ತರಪ್ರದೇಶದ ಮಾವು, ಅಜಮಗ್ರಹ್‌, ಗಾಜಿ಼ಪುರ್‌ ಮತ್ತು ಬಲ್ಲಿಯಾದ  ೩೫೦೦ ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಾಯಿತು. ಸಾರಜನಕ ಮತ್ತು ಸತು ಸ್ಥಿರಿಕರಿಸುವ ಗೊಬ್ಬರವನ್ನು ಭತ್ತದ ಬೆಳೆಗೆ ನೀಡಲಾಗುತ್ತದೆ. ಇದನ್ನು ತರಕಾರಿಗಳು, ಹೂಗಳು ಮತ್ತು ಹಣ್ಣಿನ ಗಿಡಗಳಿಗೂ ಬಳಸಬಹುದು. ಈ ಗೊಬ್ಬರವನ್ನು ರೋಗನಿಯಂತ್ರಕಗಳಾಗಿ ಅಂದರೆ ಟ್ರೈಕೊಡರ್ಮಾ, ಸ್ಯೂಡೋಮೊನಾಸ್ ಮತ್ತು ಬ್ಯಾಸಿಲಸ್ ಗಳಿಗೆ ಬಳಸಬಹುದು. ಆದ್ದರಿಂದ ಈಗ ಉತ್ಪಾದಿಸಲಾಗುವ ಜೈವಿಕ ಗೊಬ್ಬರವನ್ನು ಬೀಜ ಮತ್ತು ಮಣ್ಣಿನ ಕಾರಣದಿಂದುಂಟಾಗುವ ರೋಗಗಳಿಂದ ಮುಕ್ತವಾದ ವಾಣಿಜ್ಯ ತರಕಾರಿಗಳು ಮತ್ತಿತರ ಗಿಡಗಳನ್ನು ಬೆಳೆಸಬಹುದೆಂದು ಪ್ರಚುರಗೊಳಿಸಲಾಗುತ್ತಿದೆ.  ಜೊತೆಗೆ ಈ ಗೊಬ್ಬರ ತಯಾರಿಕೆಯನ್ನು ಸ್ವಸಹಾಯ ಸಂಘಗಳನ್ನು ಕೈಗೊಂಡಲ್ಲಿ ಇದು ರೈತರಿಗೆ ಮತ್ತೊಂದು ಆದಾಯವನ್ನು ತಂದುಕೊಡಬಲ್ಲ ಉದ್ದಿಮೆಯಾಗಬಲ್ಲುದು.

ಉಪಸಂಹಾರ

ಸಮರ್ಥವಾದಂತಹ ಪರಿಸರ ಸ್ನೇಹಿ ಕೃಷಿ ಕೇಂದ್ರಿತವಾದ ಈ ಸೂಕ್ಷ್ಮಾಣುಜೀವಿ ಆಧಾರಿತ ವಿಧಾನಗಳು ರೈತರು ರಾಸಾಯನಿಕಗಳ ಮೇಲೆ ಅವಲಂಭಿತರಾಗುವುದನ್ನು ಕಡಿಮೆ ಮಾಡುತ್ತದೆ. ಹೊರಗಿನ ಒಳಸುರಿಯುವಿಕೆಗಳ ವೆಚ್ಚ ತಗ್ಗಿಸುತ್ತದೆ. ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುತ್ತದೆ. ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸಲು ನೆರವು ನೀಡುತ್ತದೆ. ಒಮ್ಮೆ ಇವುಗಳ ಬಳಕೆಯನ್ನು ಆರಂಭಿಸಿದರೆ ಇವು ಆ ಭೂಮಿಯಲ್ಲಿ ಲಭ್ಯವಿರುವ ಸಾವಯವ ಅಂಶ, ಖನಿಜಗಳು, ತೇವಾಂಶ ಮತ್ತು ಪೂರಕ ವಾತಾವರಣವನ್ನಾಧರಿಸಿ ದೀರ್ಘಕಾಲದವರೆಗೆ ಉಳಿಯಬಲ್ಲವು. ಪೂರಕ ವಾತಾವರಣ ದೊರಕಿದಲ್ಲಿ ಇವು ತಮ್ಮ ಪುನರ್‌ಬಳಕೆಯ ಸಾಮರ್ಥ್ಯವನ್ನು ಮಣ್ಣು ಮತ್ತು ಗಿಡದ ಆರೋಗ್ಯಕ್ಕೆ ಪೂರಕವಾಗುವಂತೆ ಮತ್ತು ಕೃಷಿ ಪರಿಸರ ವ್ಯವಸ್ಥೆಗೆ ನೆರವಾಗುವಂತೆ ತೋರಬಲ್ಲವು.

ಕೃತಜ್ಞತೆಗಳು : ಲೇಖಕರು ರಾಷ್ಟ್ರೀಯ ಕೃಷಿ ವಿಕಾಸ ಯೋಜನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯವರು ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯ ನೀಡಿದ್ದಕ್ಕೆ ಅಭಾರಿಯಾಗಿದ್ದಾರೆ.

ಧನಂಜಯ್ಪಿ ಸಿಂಗ್ಮತ್ತು ರೇಣು


Dhananjaya P Singh

Principal Scientist (Biotechnology)

E-mail: Dhananjaya.Singh@icar.gov.in;

psfarm@rediffmail.com

Renu

Principal Scientist (Agricultural Biotechnology)

ICAR-National Bureau of Agriculturally Important

Microorganisms,

(Indian Council of Agricultural Research, Ministry of

Agriculture, Government of India)

Mau, 275101 Uttar Pradesh, India

E-mail: Renu1@icar.gov.in; renuiari@rediffmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ‌೨ ; ಜೂನ್‌ ೨೦೧೯

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp