ಅಪ್ರಾಪ್ರಿಯೇಟ್ ರೂರಲ್ ಟೆಕ್ನಾಲಜಿ ಇನ್ಸ್‌ಟ್ಯೂಟ್ (ಎಆರ್‌ಟಿಐ) ತಮ್ಮ ಪ್ರಯೋಗಗಳ ಮೂಲಕ ಬಯೋಗ್ಯಾಸ್ ಉತ್ಪಾದನಾ ತಂತ್ರಜ್ಞಾನಕ್ಕೆ ಹೊಸ ಒಳನೋಟಗಳನ್ನು ನೀಡಿದ್ದಾರೆ. ಸಗಣಿಯಿಂದ ಮಾತ್ರ ಬಯೋಗ್ಯಾಸ್ ಉತ್ಪಾದನೆ ಸಾಧ್ಯ ಎನ್ನುವ ಮಿಥ್ ಒಡೆದಿದ್ದಾರೆ. ಈ ಸಂಸ್ಥೆಯು ನಡೆಸಿದ ಪ್ರಯೋಗಗಳಿಂದ ತಿಳಿದುಬಂದದ್ದೇನೆಂದರೆ ಸಾರಜನಕವಿಲ್ಲದೇ ಇರುವ ಕಾರ್ಬೋಹೈಡ್ರೇಟ್‌ಗಳಿಂದ ಬಯೋಗ್ಯಾಸ್ ಉತ್ಪಾದನೆ ಮಾಡಬಹುದು. ಸೆಲ್ಯುಲಸ್, ಹೆಮಿಸೆಲ್ಯುಲಸ್ ಮತ್ತು ಲಿಗಿನಿನ್ ಹೊಂದಿರುವ ಕೃಷಿತ್ಯಾಜ್ಯವನ್ನು ಬಯೋಗ್ಯಾಸ್ ಉತ್ಪಾದನೆಗೆ ಬದಲಿ ಸಂಪನ್ಮೂಲವಾಗಿ ಬಳಸಬಹುದಾಗಿದೆ.
೨೦೧೮-೧೯ರ ಆರ್ಥಿಕ ವರ್ಷದಲ್ಲಿ ನಾವು ಆಮದು ಮಾಡಿಕೊಳ್ಳಲಿರುವ ಪೆಟ್ರೊಲಿಯಂ ಅಂದಾಜು ೧೧೩ ಟನ್‌ಗಳು. ಇದರ ಅಂದಾಜು ವೆಚ್ಚ $೧೨೫ ಬಿಲಿಯನ್. ಇದು ಭಾರತಕ್ಕೆ ಆಮದಾಗುತ್ತಿರುವ ಒಂದು ಉತ್ಪನ್ನದ ಪ್ರಮಾಣವನ್ನು ತೋರಿಸುವುದರೊಂದಿಗೆ ಇಲ್ಲಿಂದ ವಾರ್ಷಿಕ ಅದಕ್ಕಾಗಿ ಖರ್ಚು ಮಾಡುತ್ತಿರುವ ಹಣದ ಪ್ರಮಾಣವನ್ನು ತೋರಿಸುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳಾದ ಎಲ್.ಪಿ.ಜಿ, ಪೆಟ್ರೋಲ್, ಸೀಮೆಎಣ್ಣೆ ಮತ್ತು ಡೀಸೆಲ್‌ನಲ್ಲಿ ಹೆಚ್ಚಿನ ಕ್ಯಾಲೊರಿಫಿಕ್ ಮೌಲ್ಯವಿರುತ್ತದೆ. ಅವು ಗಾಡಿಗಳಿಗೆ ಇಂಧನವಾಗಿ ಬಳಕೆಯಾದಾಗ ಯಾವುದೇ ಘನ ತ್ಯಾಜ್ಯವನ್ನು ಉಳಿಸುವುದಿಲ್ಲ. ಲಭ್ಯತೆಯ ಪ್ರಮಾಣ, ಕ್ಯಾಲೊರಿಫಿಕ್ ಮೌಲ್ಯ ಮತ್ತು ಉರಿಯುವ ಗುಣಗಳನ್ನು ಗಮನಿಸಿದಾಗ ಪೆಟ್ರೋಲಿಯಂ ಇಂಧನಕ್ಕೆ ಸಮನಾದ ಮತ್ತೊಂದು ಇಂಧನ ಭಾರತದಲ್ಲಿ ಪ್ರಸ್ತುತ ಉತ್ಪಾದನೆಯಾಗುತ್ತಿಲ್ಲ.

ಫೋಟೊ : ಬಯೋಗ್ಯಾಸ್ ಉತ್ಪಾದನೆಗೆ ಕೃಷಿ ತ್ಯಾಜ್ಯ ಬದಲಿ ಸಂಪನ್ಮೂಲ
ಎಥನಾಲ್ ಮತ್ತು ಜೈವಿಕ ಇಂಧನಗಳು ಪ್ರಸ್ತುತದಲ್ಲಿರುವ ವಾಹನದ ಇಂಧನಗಳಿಗೆ ಬದಲಿಯಾಗಿ ಬಳಸಬಹುದು. ಆದರೆ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಹೋದರೆ ಕೃಷಿಗೆ ಭೂಮಿ ಮತ್ತು ನೀರಿನ ಕೊರತೆ ಎದುರಾಗುತ್ತದೆ. ಅದೇ ಕೃಷಿಯು ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದು ಕೃಷಿ ಉಪ ಉತ್ಪನ್ನ. ಬೆಳೆಯಿಂದ ಸಿಗುವ ಉತ್ಪನ್ನದಲ್ಲಿ ಸರಿಸುಮಾರು ೬೦% ಕೃಷಿ ತ್ಯಾಜ್ಯವಾಗಿರುತ್ತದೆ. ಭಾರತದಲ್ಲಿ ಉತ್ಪಾದಿತವಾಗುವ ವಿವಿಧ ಕೃಷಿ ಉತ್ಪನ್ನಗಳನ್ನು ನೋಡಿದಾಗ ವಾರ್ಷಿಕ ೮೦೦ ಮಿಲಿಯನ್ ಕೃಷಿ ತ್ಯಾಜ್ಯ ಉತ್ಪದನೆಯಾಗುತ್ತದೆ ಎಂದು ತಿಳಿದುಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾದರೂ ಕೂಡ ಕೃಷಿ ತ್ಯಾಜ್ಯಗಳು ಘನರೂಪದಲ್ಲಿದ್ದು ಅವು ಕುರುಹು ಉಳಿಸದೆ ಉರಿದುಹೋಗುವ ಗುಣವನ್ನು ಹೊಂದಿಲ್ಲ. ಹಾಗಾಗಿ ಇಂಜಿನ್‌ಗಳಿಗೆ ಇಂಧನವಾಗಿ ಬಳಸಲು ಸಾಧ್ಯವಿಲ್ಲ. ಆದರೆ ಇದನ್ನು ವಾಹನಗಳ ಇಂಧನವಾಗಿ ಬಳಸಬಹುದಾದ ಮಿಥೇನ್ ಆಗಿ ಪರಿವರ್ತಿಸಬಹುದು. ಈ ಶತಮಾನದ ಆರಂಭದಲ್ಲಿ ಇದನ್ನು ಅಪ್ರಾಪ್ರಿಯೇಟ್ ರೂರಲ್ ಟೆಕ್ನಾಲಜಿ ಇನ್ಸ್‌ಟ್ಯೂಟ್ (ಎಆರ್‌ಟಿಐ).
ಬಯೋಗ್ಯಾಸ್‌ನಲ್ಲಿ ಸುಮಾರು ೬೦% ಮಿಥೇನ್ (CH4) ಮತ್ತು ಸುಮಾರು ೪೦% ಇಂಗಾಲದ ಡೈ ಆಕ್ಸೈಡ್ (CO2) ಹೊಂದಿರುತ್ತದೆ. ತೂಕದ ಪ್ರಮಾಣದಲ್ಲಿ ನೋಡಿದಾಗ ಮಿಥೇನ್ ೩೫% ಮತ್ತು ಇಂಗಾಲದ ಡೈ ಆಕ್ಸೈಡ್ ೬೫%. ಈಗಿನವರೆಗೂ ARTI ಈ ಪ್ರಕ್ರಿಯೆಯ ಬಗ್ಗೆ ಕೆಲಸ ಮಾಡುತ್ತಿದೆ (ನೋಡಿ ಚೌಕ ೧). ಭಾರತದಲ್ಲಿ ಬಯೋಗ್ಯಾಸ್‌ನ್ನು ಮುಖ್ಯವಾಗಿ ಸಗಣಿಯಿಂದ ತಯಾರಿಸಲಾಗುತ್ತದೆ. ಸ್ವಲ್ಪಮಟ್ಟಿಗೆ ಕಬ್ಬಿನ ತ್ಯಾಜ್ಯದಿಂದಲೂ ತಯಾರಿಸಲಾಗುತ್ತದೆ. ಈ ರೀತಿಯ ತ್ಯಾಜ್ಯಗಳು ಆಮ್ಲಜನಕರಹಿತವಾಗಿರುತ್ತವೆ. ಹಾಗಾಗಿ ಇದರಿಂದ ಉತ್ಪಾದನೆಯಾಗುವ ಮಿಥೇನ್ ಪ್ರಮಾಣ ಬಹಳ ಕಡಿಮೆ.
ಚೌಕ ೧
ಬಯೋಗ್ಯಾಸ್ ಉತ್ಪಾದನೆಯನ್ನು ತಾಂತ್ರಿಕವಾಗಿ ಆಮ್ಲಜನಕರಹಿತ ಹುದುಗಿಸುವಿಕೆ ಎಂದು ಕರೆಯುತ್ತಾರೆ. ಹುದುಗಿಸುವಿಕೆಯ ಪಾತ್ರೆಯನ್ನು “ಡೈಜೆಸ್ಟರ್” ಎಂದು ಕರೆಯುತ್ತಾರೆ. ಈ ಬಯೋಗ್ಯಾಸ್ ಉತ್ಪಾದನೆಯಲ್ಲಿ ಭಾಗಿಯಾಗುವ ಜೀವಿಗಳಿಗೆ ಉಳಿದ ಜೀವಿಗಳಂತೆ ಆಮ್ಲಜನಕದ ಅಗತ್ಯವಿರುತ್ತದೆ. ಆದರೆ ಈ ಆಮ್ಲಜನಕರಹಿತ ವಾತಾವರಣದಲ್ಲಿ ಆಮ್ಲಜನಕ ಇರುವುದಿಲ್ಲ. ಅವು ಅಲ್ಲಿರುವ ತಲಾಧಾರದ ಅಣುಗಳಿಂದಲೇ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಈ ಅಣುಗಳು ಪರಿವರ್ತನೆಯಾಗುತ್ತದೆ. ಹಾಗಾಗಿ ಬಯೋಗ್ಯಾಸ್ ಡೈಜೆಸ್ಟರ್‌ನಲ್ಲಿ ಪರಮಾಣುಗಳು ವಿಘಟಿತವಾಗಿ ಮಿಥೇನ್ ಆಗಿ ಪರಿವರ್ತಿತವಾಗುತ್ತದೆ. ಇದೇ ಹೈಡ್ರೋಕಾರ್ಬನ್.
ಮಿಥೇನ್‌ನಲ್ಲಿ ಸಾಂಪ್ರದಾಯಿಕ ವಾಹನದ ಇಂಧನಗಳಲ್ಲಿರುವಷ್ಟೇ ಕ್ಯಾಲೊರಿಫಿಕ್ ಪ್ರಮಾಣವಿರುತ್ತದೆ. ಯಾವುದೇ ರೀತಿಯ ಘನತ್ಯಾಜ್ಯವನ್ನು ಉಳಿಸದೆ ಉರಿದುಹೋಗುತ್ತದೆ. ಈ ಪ್ರಕ್ರಿಯೆಯು ಇಂಗಾಲವನ್ನು ಉತ್ಪಾದಿಸುತ್ತದೆ. ಆದರೆ ಬಯೋಗ್ಯಾಸ್ ಮೂಲಕ ಮಿಥೇನ್ ಅನ್ನು ಬೇರ್ಪಡಿಸಲು ಅದನ್ನು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮೂಲಕ ಹಾಯಿಸಲಾಗುತ್ತದೆ. ಆಗ ಅದು ಇಂಗಾಲವನ್ನು ಹೀರಿಕೊಳ್ಳುತ್ತದೆ. ಇದು ಅರಿವಾದ ನಂತರ ARTI ವಿಜ್ಞಾನಿಗಳು ಸಗಣಿ ಮತ್ತು ಆಲ್ಕೋಹಾಲ್ ಹುದುಗಿಸುವಿಕೆಯ ತ್ಯಾಜ್ಯದಿಂದ ಮಿಥೇನ್ ಪಡೆಯುವ ಪ್ರಕ್ರಿಯೆಯನ್ನು ಕೈಬಿಟ್ಟರು.
ARTI ವಿಜ್ಞಾನಿಗಳು ಆಮ್ಲಜನಕ ಹೆಚ್ಚಿರುವ ಸಾವಯವ ಪದಾರ್ಥಗಳಾದ ಕಾರ್ಬೋಹೈಡ್ರೆಟ್‌ಗಳ ಕುರಿತು ಪ್ರಯೋಗ ನಡೆಸಿದರು. ಕಾರ್ಬೋಹೈಡ್ರೇಟ್‌ಗಳನ್ನು ಬಯೋಗ್ಯಾಸ್ ಆಗಿ ಮಾರ್ಪಡಿಸಬಹುದೆಂದು ಈ ಪ್ರಯೋಗಗಳಿಂದ ತಿಳಿದುಬಂದಿತು. ನಂತರ ಪ್ರಾಣಿಗಳು ತಿಂದಂತಹ ಯಾವುದೇ ಪದಾರ್ಥವಾದರೂ ಬಯೋಗ್ಯಾಸ್ ಘಟಕಕ್ಕೆ ಬಳಸಬಹುದು ಎಂದು ತಿಳಿದುಬಂದಿತು.
ಕೃಷಿ ತ್ಯಾಜ್ಯವು ಮುಖ್ಯವಾಗಿ ಸೆಲ್ಯುಲಸ್, ಹೆಮಿಸೆಲ್ಯುಲಸ್ ಮತ್ತು ಲಿಗಿನಿನ್ ಒಳಗೊಂಡಿರುತ್ತದೆ. ಇವುಗಳನ್ನು ಮನುಷ್ಯರು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸೆಲ್ಯುಲಸ್ ಮತ್ತು ಹೆಮಿಸೆಲ್ಯುಲಸ್‌ಗಳನ್ನು ಪ್ರಾಣಿಗಳು ಜೀರ್ಣಿಸಿಕೊಳ್ಳಬಲ್ಲವು ಹಾಗಾಗಿ ಇದನ್ನು ಬಯೋಗ್ಯಾಸ್ ಆಗಿ ಪರಿವರ್ತಿಸಬಹುದು. ಮೇಲೆ ತಿಳಿಸಿದಂತೆ ಬಯೋಗ್ಯಾಸ್ ಉತ್ಪಾದನೆಯು ಅದಕ್ಕಾಗಿ ಬಳಸಿದ ವಸ್ತು ಎಷ್ಟರಮಟ್ಟಿಗೆ ಜೀರ್ಣವಾಗಿದೆ ಎನ್ನುವುದನ್ನು ಆಧರಿಸಿರುತ್ತದೆ. ಒಂದು ವೇಳೆ ಕೃಷಿ ತ್ಯಾಜ್ಯದಲ್ಲಿ ಜೀರ್ಣವಾಗಬಲ್ಲ ಸೆಲ್ಯುಲಸ್ ಮತ್ತು ಹೆಮಿಸೆಲ್ಯುಲಸ್ ಸುಮಾರು ಶೇ.೫೦ರಷ್ಟಿದ್ದರೆ ಆಗ ೪೦೦ ಮಿಲಿಯನ್ ಟನ್ ಬಯೋಗ್ಯಾಸ್ ಅಥವಸುಮಾರು ೧೪೦ ಮಿಲಿಯನ್ ಟನ್ ಮಿಥೇನ್ ಉತ್ಪಾದಿಸಬಹುದು. ಇದನ್ನು ಭಾರತದಲ್ಲಿ ಬದಲಿ ವಾಹನ ಇಂಧನವಾಗಿ ಬಳಸಲಾಗುತ್ತಿದೆ.
ಬಯೋಗ್ಯಾಸ್‌ಗೆ ಈ ಕೃಷಿತ್ಯಾಜ್ಯವನ್ನು ಬಳಸಲು ಇರುವ ದೊಡ್ಡ ಮಿತಿಯೆಂದರೆ ಇದಕ್ಕಾಗಿ ಬಳಸುವ ವಸ್ತುಗಳು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಡೆ ಹರಡಿ ಹಂಚಿಹೋಗಿರುತ್ತವೆ.
ಆಮ್ಲಜನಕರಹಿತ ಪರಿಸ್ಥಿತಿಯಲ್ಲಿ ಯಾವುದೇ ಜೀವಿಯು ಲಿಗಿನಿನ್ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದು ಬಯೋಗ್ಯಾಸ್ ಘಟಕದಿಂದ ತ್ಯಾಜ್ಯವಾಗಿ ಹೊರಬರುತ್ತದೆ. ಅಂದಮಾತ್ರಕ್ಕೆ ಇದು ನಿರುಪಯುಕ್ತ ವಸ್ತುವಲ್ಲ. ಲಿಗಿನಿನ್ ಪ್ಲಾಸ್ಟಿಕ್ ರೀತಿಯ ವಸ್ತು. ಇದು ೨೦೦Cನಲ್ಲಿ ಮೃದುವಾಗುತ್ತದೆ. ಆ ಮಟ್ಟದ ತಾಪಮಾನದಲ್ಲಿ ಅದನ್ನು ಮೃದುಗೊಳಿಸಿ ಪ್ಲೇವುಡ್ ಮಾದರಿ ಶೀಟುಗಳಾಗಿ ಮಾಡಬಹುದು. ಇಲ್ಲವೇ ಪರಿಸರಸ್ನೇಹಿಯಾದ ತಿನ್ನಲು ಬಳಸಬಹುದಾದ ಕಪ್‌ಗಳು, ಬಟ್ಟಲುಗಳು, ತಟ್ಟೆಗಳು ಮತ್ತು ಚಮಚಗಳಾಗಿ ಪರಿವರ್ತಿಸಬಹುದು. ಲಿಗಿನಿನ್ ಅನ್ನು ಇಂಧನದಂತೆ ಬಳಸಲು ಬ್ರಿಕ್ವೆಟ್‌ಗಳಾಗಿ ಮಾಡಬಹುದು. ಕಲ್ಲಿದ್ದಲಾಗಿ ಪರಿವರ್ತಿಸಬಹುದು ಅಥವ ಇದನ್ನು ಜೈವಿಕ ಗೊಬ್ಬರವಾಗಿ ಕೃಷಿಯಲ್ಲಿ ಬಳಸಬಹುದು.
ARTI ಯವರು ರೂಪಿಸಿದ ಪ್ರಕ್ರಿಯೆಯನ್ನು ಪ್ರಯೋಗಾತ್ಮಕವಾಗಿ ಪುಣೆಯ ಹತ್ತಿರದ ಪಿರಾಂಗುಟ್‌ನ ಸಂತೋಷ್ ಗೊಂಡೇಲ್ಕರ್ ಅವರ ತೋಟದಲ್ಲಿ ಕೈಗೊಳ್ಳಲಾಯಿತು. ಸಂತೋಷ್ ಅವರು ಭತ್ತದ ಕಡ್ಡಿಗಳಿಂದ ಮಿಥೇನ್ ಉತ್ಪಾದಿಸಿ ಅದನ್ನು ಮಾರಾಟ ಮಾಡುತ್ತಾರೆ. ಈ ರೀತಿಯ ಪ್ರಯೋಗತ್ಮಾಕ ಅನ್ವೇಷಣೆಯಿಂದ ಪಡೆದ ಇಂಧನವನ್ನು ವಾಣಿಜ್ಯ ಬಳಕೆಗೆ ಮಾರಾಟ ಮಾಡಲು ಸರ್ಕಾರ ವಿವಿಧ ಇಲಾಖೆಗಳಿಂದ ಅನುಮತಿ ಪತ್ರವನ್ನು ಪಡೆಯಬೇಕಾಗುತ್ತದೆ. ಸಂತೋಷ್ ಅವರು ಈ ಮಾದರಿಯ ಇಂಧನ ತಯಾರಿಕೆ ಮತ್ತು ಮಾರಾಟವನ್ನು ಕೈಗೊಂಡವರಲ್ಲಿ ಮೊದಲಿಗರಾದ್ದರಿಂದ ಅನುಮತಿಯನ್ನು ಪಡೆಯಲು ಸಾಕಷ್ಟು ಕಷ್ಟಪಡಬೇಕಾಯಿತು. ಅವರು ಇದನ್ನು ವ್ಯಾಪಾರವಾಗಿ ಬೆಳೆಸುವ ಹಾದಿಯಲ್ಲಿದ್ದಾರೆ.
ತಂತ್ರಜ್ಞಾನ ಅಭಿವೃದ್ಧಿ, ಮಿತಿಗಳು ಮತ್ತು ಭವಿಷ್ಯ
ARTIಯವರು ಬಯೋಗ್ಯಾಸ್ ಕುರಿತು ನಡೆಸಿದ ಪ್ರಯೋಗಗಳು ಈ ತಂತ್ರಜ್ಞಾನದ ಕುರಿತು ಹೊಸ ಒಳನೋಟಗಳನ್ನು ನೀಡಿದೆ. ಮೊದಲು ಬಯೋಗ್ಯಾಸ್ ಉತ್ಪಾದನೆಗೆ ಸಗಣಿ ಅತ್ಯಗತ್ಯ ಎಂದು ತಿಳಿಯಲಾಗಿತ್ತು. ಆದರೆ ARTI ವಿಜ್ಞಾನಿಗಳು ಒಮ್ಮೆ ಡೈಜೆಸ್ಟರ್‌ನಲ್ಲಿ ಬ್ಯಾಕ್ಟಿರೀಯಾಗಳು ಸ್ಥಾಪಿತವಾದರೆ ಮತ್ತೆ ಸಗಣಿಯನ್ನು ಡೈಜೆಸ್ಟರ್‌ಗೆ ಹಾಕುವ ವಸ್ತುಗಳೊಂದಿಗೆ ಹಾಕಬೇಕಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಮೊದಲು ಇಂಗಾಲ ಮತ್ತು ಸಾರಜನಕದ ಅನುಪಾತ ಕೂಡ ಮುಖ್ಯವೆಂದು ತಿಳಿಯಲಾಗಿತ್ತು. ಇದು ಕೂಡ ತಪ್ಪೆಂದು ತಿಳಿದುಬಂತು. ಕಾರ್ಬೋಹೈಡ್ರೇಟ್‌ಗಳು ಬಯೋಗ್ಯಾಸನ್ನು ಉತ್ಪಾದಿಸಬಲ್ಲವು ಎನ್ನುವುದನ್ನು ಸಾಬೀತು ಪಡಿಸಿದರು. ARTIಯವರ ಮತ್ತೊಂದು ಮುಖ್ಯ ಅನ್ವೇಷಣೆ ಆಮ್ಲಜನಕರಹಿತ ಸ್ಥಿತಿಯಲ್ಲಿ ಕೃಷಿತ್ಯಾಜ್ಯವನ್ನು ಕರಗಿಸುವುದು. ಇದನ್ನು ಕೆಲವು ಸಾವಯವ ಆಮ್ಲಗಳ ಮೂಲಕ ಮಾಡಲಾಯಿತು. ಇದಕ್ಕಾಗಿ ದ್ರವವನ್ನು ಪ್ರೀಡೈಜೆಸ್ಟರ್‌ನಿಂದ ಮುಖ್ಯ ಡೈಜೆಸ್ಟರ್‌ಗೆ ಹಾಯಿಸಲಾಗುವುದು. ಇದರಿಂದ ಕರಗಲಾಗದ ವಸ್ತುಗಳು ಪ್ರೀಡೈಜೆಸ್ಟರ್‌ನಲ್ಲಿಯೇ ಉಳಿದುಕೊಳ್ಳುತ್ತವೆ. ಅಲ್ಲಿಂದ ಅವುಗಳನ್ನು ಸುಲಭವಾಗಿ ಹೊರತೆಗೆಯಬಹುದು.
ಫೋಟೊ : ಯಾವುದೇ ರೂಪದಲ್ಲಿರುವ ಕಾರ್ಬೋಹೈಡ್ರೇಟ್ಗಳನ್ನು ಬಯೋಗ್ಯಾಸ್ ಆಗಿ ಪರಿವರ್ತಿಸಬಹುದೆಂದು ARTI ಸಂಶೋಧನೆಗಳು ಸಾಬೀತು ಪಡಿಸಿದವು
ಬಯೋಗ್ಯಾಸ್‌ಗೆ ಈ ಕೃಷಿತ್ಯಾಜ್ಯವನ್ನು ಬಳಸಲು ಇರುವ ದೊಡ್ಡ ಮಿತಿಯೆಂದರೆ ಇದಕ್ಕಾಗಿ ಬಳಸುವ ವಸ್ತುಗಳು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಡೆ ಹರಡಿ ಹಂಚಿಹೋಗಿರುತ್ತವೆ. ಅವುಗಳನ್ನೆಲ್ಲ ಸಂಗ್ರಹಿಸಿ ಒಂದೆಡೆ ಸಾಗಿಸುವುದು ಕಷ್ಟ. ವಾಣಿಜ್ಯ ವ್ಯವಹಾರಕ್ಕಾಗಿ ಇದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದರೆ ಈ ಎಲ್ಲ ಸವಾಲುಗಳನ್ನು ಎದುರಿಸಲು ಸೂಕ್ತ ತಂತ್ರಗಳನ್ನು ರೂಪಿಸಿಕೊಳ್ಳಬೇಕು. ARTIಯವರು ಕಂಡುಕೊಂಡಿರುವ ಒಂದು ವಿಧಾನ ಪರಿವರ್ತಿಸಬಲ್ಲ ಈ ಕೃಷಿತ್ಯಾಜ್ಯವನ್ನು ಆಮ್ಲಗಳಾಗಿ ಪರಿವರ್ತಿಸಿಕೊಳ್ಳುವುದು. ಈ ಪರಿವರ್ತನೆಯನ್ನು ಸ್ಥಳೀಯ ಕೇಂದ್ರಗಳಲ್ಲಿ ಮಾಡಿದರೆ ಅದನ್ನು ಮುಖ್ಯ ಬಯೋಡೈಜೆಸ್ಟರ್ ಘಟಕಗಳಿಗೆ ಪೈಪ್‌ಲೈನ್‌ಗಳ ಮೂಲಕ ರವಾನೆ ಮಾಡುವುದು ಕಷ್ಟವಾಗಲಾರದು.
ಆನಂದ ಕರ್ವೆ
Anand Karve
Appropriate Rural Technology Institute,
Near Ganeshnagar, Algudewadi,
Phaltan-Baramati Road,
Phaltan 415 523, Dist. Satara, Maharashtra
E-mail: adkarve@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೨ ; ಜೂನ್ ೨೦೧೯



