ಸಂಪನ್ಮೂಲಗಳ ಪರಿಣಾಮಕಾರಿ ಮರುಬಳಕೆ – ಅಭಿವೃದ್ಧಿಯ ಉತ್ತಮ ಮಾದರಿ


ಸಾವಯವ ಕೃಷಿ ತ್ಯಾಜ್ಯಗಳ ವ್ಯವಸ್ಥಿತ ಮರುಬಳಕೆ ಮತ್ತು ಮೌಲ್ಯವರ್ಧನೆಯು ತೋಟದ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ಸಂಪನ್ಮೂಲಗಳ ಮರುಬಳಕೆ ಮಾಡುವ ಮೂಲಕ ರೈತರು ಪರಿಸರ ಸೇವೆಯನ್ನು ಮಾಡಿದಂತಾಗುತ್ತದೆ. ಸಂಪನ್ಮೂಲಗಳ ಮರುಬಳಕೆಯು ಹವಾಮಾನ ತಾಳಿಕೆಯಲ್ಲಿ ಮಹತ್ವವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇದು ವರದಾನವಾಗಿದೆ.


 

ಫೋಟೊ : ಬಯೋಗ್ಯಾಸ್‌ ಉತ್ಪಾದನೆ ಮತ್ತು ಸಗಣಿ ನೀರಿನ ಮರುಬಳಕೆ

ಸಾಂಪ್ರದಾಯಿಕವಾಗಿ ರೈತರು ಸಂಪನ್ಮೂಲಗಳ ಮರುಬಳಕೆಯನ್ನು ಮಾಡುತ್ತಲಿದ್ದಾರೆ. ಅದರಲ್ಲೂ ಮಹಿಳಾ ಕೃಷಿಕರು ಕೃಷಿ ಸಂಪನ್ಮೂಲಗಳ ಮರುಬಳಕೆಯನ್ನು ಹೆಚ್ಚು ಸಮರ್ಪಕವಾಗಿ ಮತ್ತು ಸೃಜನಾತ್ಮಕವಾಗಿ ಮಾಡುತ್ತಾರೆ. ಅವರು ಕೃಷಿತ್ಯಾಜ್ಯವನ್ನು ಉರುವಲಾಗಿ ಬಳಸುತ್ತಾರೆ. ಸಗಣಿಯನ್ನು ಉರುವಲಾಗಿ ಇಲ್ಲವೇ ತೋಟಕ್ಕೆ ಪೌಷ್ಟಿಕಾಂಶ ನೀಡಿಕೆಗಾಗಿ ಬಳಸುತ್ತಾರೆ. ತಿನ್ನಬಹುದಾದ ಅಡುಗೆ ತ್ಯಾಜ್ಯವನ್ನು ನಾಯಿಗಳಿಗೆ, ದನಗಳಿಗೆ ನೀಡುತ್ತಾರೆ. ಇನ್ನುಳಿದ ಅಡುಗೆತ್ಯಾಜ್ಯವನ್ನು ಗೊಬ್ಬರದ ಗುಂಡಿಗೆ ಇಲ್ಲವೆ ತೆಂಗಿನ ಮರದ ಗುಣಿಗೆ ಹಾಕುತ್ತಾರೆ. ಕುಟುಂಬದವರು ಸಂಪೂರ್ಣವಾಗಿ ಆಹಾರ ಮತ್ತಿತರ ಅವಶ್ಯಕತೆಗಾಗಿ ತಮ್ಮ ತೋಟವನ್ನೇ ಅವಲಂಭಿಸಿದಾಗ ಅಂತಹ ಕಡೆ ತ್ಯಾಜ್ಯ ಉತ್ಪಾದನೆ ಶೂನ್ಯವಾಗಿ ಇರುವುದೆಲ್ಲವೂ ಮರುಬಳಕೆಯಾಗುತ್ತದೆ. ಈ ರೀತಿಯ ತೋಟದ ವ್ಯವಸ್ಥೆಯು ತಲೆತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ.

ಸಣ್ಣ ಕುಟುಂಬಗಳ ತೋಟಗಳು ಸಂಪನ್ಮೂಲಗಳ ಮರುಬಳಕೆಯನ್ನು ಗರಿಷ್ಠ ಮಟ್ಟದಲ್ಲಿ ಮಾಡಿಕೊಳ್ಳುವಂತೆ ಸಾಧ್ಯವಾಗುವಂತೆ ರೂಪುಗೊಂಡಿರುತ್ತವೆ. ತೋಟದ ವಿವಿಧ ಘಟಕಗಳು ಪರಸ್ಪರ ಒಗ್ಗೂಡಿ ಕುಟುಂಬದ ವಿವಿಧ ಅವಶ್ಯಕತೆಗಳು ಮತ್ತು ಆದಾಯದ ಅಗತ್ಯವನ್ನು ಪೂರೈಸುತ್ತದೆ. ಈ ರೀತಿಯ ತೋಟಗಳು ಪರಿಸರ ಸ್ನೇಹಿತ ತೋಟಗಳಾಗಿರುತ್ತವೆ. ಅವು ಬಹುಪಯೋಗಿ ಲಾಭಗಳನ್ನು ಗಳಿಸುತ್ತವೆ. ತೋಟದ ಸಂಪನ್ಮೂಲಗಳ ಮರುಬಳಕೆಯು ಒಳಸುರಿಯುವಿಕೆಗಳ ವೆಚ್ಚವನ್ನು ತಗ್ಗಿಸುತ್ತದೆ, ಹೊರಸುರಿಯುವಿಕೆಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ, ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿಯೂ ತೋಟದ ಸುಸ್ಥಿರತೆಯನ್ನು ಕಾಪಾಡುತ್ತದೆ.

ಆರಂಭ

ಸಣ್ಣ ಮತ್ತು ಅತಿಸಣ್ಣ ರೈತರು  ಕೃಷಿಯನ್ನೇ ಆಧರಿಸಿ ಬದುಕುತ್ತಿದ್ದರೆ ಆಗ ಜಾನುವಾರು/ಕೋಳಿ ಸಾಕಾಣಿಕೆಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ICAR-CPCRIನವರು ರೈತನೇ ಮೊದಲು FIRST (FIRST (Farm, Innovation,

Resources, Science and Technology) ಎನ್ನುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದಾರೆ. ಇದನ್ನು ಕೇರಳ ರಾಜ್ಯದ ಅಲಪ್ಪುಜ ಜಿಲ್ಲೆಯ ಪತಿಯೂರ್‌ ಪಂಚಾಯ್ತಿಯಲ್ಲಿ ಸುಮಾರು ೧೦೦೦ ರೈತ ಕುಟುಂಬಗಳು ಅಳವಡಿಸಿಕೊಂಡವು. ಇವರುಗಳು ಹೊಂದಿದ್ದ ಭೂಮಿ ೦.೩೨ ಹೆಕ್ಟೇರ್‌. ಬಂಡವಾಳ ಹೂಡಿಕೆ ಮತ್ತು ನಿರ್ವಹಣೆಯ ಸಾಮರ್ಥವನ್ನಾಧರಿಸಿ ಒಂದರಿಂದ ಸುಮಾರು ೩೦ ಜಾನುವಾರುಗಳನ್ನು ಹೊಂದಿದ್ದರು.

ಗ್ರಾಮೀಣರ ಭಾಗವಹಿಸುವಿಕೆಯ ಮೂಲಕ  ವಿವರ ಸಂಗ್ರಹಣೆ ಅಂದರೆ  Participatory Rural Appraisal (PRA)ಅನ್ನು ನಡೆಸಲಾಯಿತು. ಇದರ ಮೂಲಕ ಸಮಾಜದ ಆಸ್ತಿ, ಸಮಯ ಬಳಕೆ, ಸಮಸ್ಯೆಗಳು ಮತ್ತು ಕಾರಣಗಳು, ಕೃಷಿಪದ್ಧತಿಗಳು, ಆಸ್ತಿ ಇತ್ಯಾದಿಗಳನ್ನು ತಿಳಿಯಲಾಯಿತು. ಜಾನುವಾರು ಸಾಕಣೆ ಮಾಡುತ್ತಿದ್ದ ರೈತರು ಮುಖ್ಯವಾಗಿ ಎದುರಿಸುತ್ತಿದ್ದ ಸಮಸ್ಯೆಯೆಂದರೆ  ಪ್ರಾಣಿಗಳ ತ್ಯಾಜ್ಯ ನಿರ್ವಹಣೆ. ಶ್ರೀ ಗೋಪಾಲಕೃಷ್ಣ ಪಿಳ್ಳೈ, ಕೊಟ್ಟಿನಾಟ್ಟು ಬುಂಗಲಾವು ಹೇಳುತ್ತಾರೆ ೩೦ ಹಸುಗಳ ಸಗಣಿ, ಗಂಜಲವನ್ನು ಸ್ವಚ್ಛಗೊಳಿಸಿ ಪ್ರಾಣಿಗಳ ಮತ್ತು ಮನೆಯವರ ಆರೋಗ್ಯದ ದೃಷ್ಟಿಯಿಂದ  ಕೊಟ್ಟಿಗೆಯನ್ನು ಶುಚಿಯಾಗಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿತ್ತು. ೨೦೦ ಲೀಟರ್ಹಾಲನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಪ್ರಾಣಿಗಳ ತ್ಯಾಜ್ಯದ ದುರ್ಗಂಧವು ಹಾಲಿನ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿ ಗ್ರಾಹಕರು ಕೊಳ್ಳಲು ಹಿಂದುಮುಂದೆ ನೋಡುತ್ತಿದ್ದರು “. ಅಲ್ಲದೆ ನೆರೆಹೊರೆಯವರು ದೂರುತ್ತಿದ್ದರು. ಜೊತೆಗೆ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಈ ಘಟಕಗಳ ಮಾಲಿನ್ಯ ನಿಯಂತ್ರಣಕ್ಕೆ ಒತ್ತಡ ಹೇರಿದವು.

ಅಕ್ಕಿಯ ಗಂಜಿಯನ್ನು ಬಾಳೆ ಗಿಡ ಮತ್ತಿತರ ತರಕಾರಿ ಗಿಡಗಳಿಗೆ ಕೀಟನಿಯಂತ್ರಣಕ್ಕಾಗಿ ಸಿಂಪಡಿಸಲಾಗುತ್ತದೆ.

ಈ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ICAR-CPCRIನವರು ರೈತನೇ ಮೊದಲು FIRST ಎನ್ನುವ ಕಾರ್ಯಕ್ರಮವನ್ನು ರೂಪಿಸಿದರು. ಇದರಲ್ಲಿ ಪ್ರಾಣಿಗಳ ತ್ಯಾಜ್ಯ ನಿರ್ವಹಣೆಗೆ ಹಲವು ದಾರಿಗಳನ್ನು ಸೂಚಿಸಲಾಯಿತು.

೧. ಸಗಣಿಯ ಸ್ವರೂಪದ ವಿಶ್ಲೇಷಣೆ (ಗಟ್ಟಿಯಾದದ್ದೋ ಅಥವಾ ತೆಳ್ಳಗಿದೆಯೋ), ದಿನವೊಂದಕ್ಕೆ ಸಂಗ್ರಹವಾಗುವ ಗಂಜಲದ ಪ್ರಮಾಣ ಮತ್ತು ಎಷ್ಟುಬಾರಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವರು.

೨. ರೈತರೇ ಭಾಗಿಯಾಗುವ ಮೂಲಕ ಕೆಲವು ಪ್ರಯೋಗಗಳನ್ನು ನಡೆಸಲಾಯಿತು. ಸಗಣಿ ನೀರು ಮತ್ತು ಗಂಜಲವನ್ನುತೆಂಗು ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯವನ್ನು ಬಳಸುವ  ಎರೆಹುಳುಗೊಬ್ಬರದ ಘಟಕಗಳಲ್ಲಿ ಬಳಕೆ ಮಾಡಲಾಯಿತು.

೩. ಸಗಣಿಯನ್ನು ನೆರಳಿನಲ್ಲಿ ಒಣಗಿಸುವ ಮೂಲಕ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನವಾಗಿ ಮಾರಾಟ ಮಾಡಬಹುದು.

೪. ಗಂಜಲ ಮತ್ತು ಕೊಟ್ಟಿಗೆ ತೊಳೆದ ನೀರನ್ನು ಮೇವು ಮತ್ತು ತರಕಾರಿ ಬೆಳೆಗೆ ಬಳಸಬಹುದು.

೫. ಅಡುಗೆಗೆ ಬೇಕಾದ ಅನಿಲ ಉತ್ಪಾದನೆಗೆ ಬಯೋಗ್ಯಾಸ್‌ ಘಟಕವನ್ನು ಸ್ಥಾಪಿಸಿಕೊಳ್ಳಬಹುದು.

ಮರುಬಳಕೆಯ ದಾರಿಗಳು

ಶ್ರೀ ಗೋಪಾಲಕೃಷ್ಣ ಅವರಿಗೆ ಒಂದು ಎಕರೆ ತೋಟವಿದೆ. ತೋಟದಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಇವರ ಫಾರಂನಲ್ಲಿ ೩೦ ಹಸುಗಳು ಮತ್ತು ಕರುಗಳಿವೆ. ತರಕಾರಿಗಳನ್ನು ಸಾವಯವ ವಿಧಾನದಲ್ಲಿ ೨೦೦ ಚೀಲಗಳಲ್ಲಿ ಬೆಳೆಯುತ್ತಾರೆ. ಮೇವಿಗಾಗಿ ಹುಲ್ಲನ್ನು ಬೆಳೆಯುತ್ತಾರೆ. ಹಚ್ಚಹಸಿರಿಸಿನಿಂದ ಕೂಡಿದ ಈ ತೋಟದಲ್ಲಿ ವಾರ್ಷಿಕವಾಗಿ ೫ -೬ ಟನ್‌ ಗೊಬ್ಬರ ಉತ್ಪಾದನಾ ಸಾಮರ್ಥ್ಯದ ಸಾವಯವ ಗೊಬ್ಬರ ಮತ್ತು ಎರೆಹುಳು ಗೊಬ್ಬರ ಘಟಕಗಳಿವೆ. ಕೃಷಿಹೊಂಡವನ್ನು ಮೀನುಕೃಷಿಗೆ ಬಳಸುತ್ತಿದ್ದಾರೆ. ಬಯೋಗ್ಯಾಸ್‌ ಘಟಕ, ಹೈಡ್ರೋಫೋನಿಕ್ಸ್‌ ಮೇವು ಘಟಕ, ತೆಂಗು ಮತ್ತು ಅಂತರಬೆಳೆಗಳಾಗಿ ಗೆಡ್ಡೆಗಳು ಮತ್ತು ಮಸಾಲೆ ಇತ್ಯಾದಿಗಳ ಬೆಳೆಸಲಾಗಿದೆ.

ತೆಂಗು ಆಧಾರಿತ ಕೃಷಿ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಬಲಿತ ತೆಂಗಿನಗರಿಗಳು ಮತ್ತು ಅವುಗಳೊಂದಿಗೆ ಬೆಳೆಯಲಾಗುವ ಬೆಳೆಗಳೆಲ್ಲ ಸೇರಿ  ೮೦- ೧೦೦ ಕೆಜಿಯಷ್ಟು ಸಾವಯವ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ತೆಂಗಿನ ತ್ಯಾಜ್ಯದಿಂದ ಎರೆಹುಳುಗೊಬ್ಬರ ತಯಾರಿಕೆಗೆ  ICAR-CPCRI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು. ತೆಂಗಿನ ತ್ಯಾಜ್ಯಗಳಾದ ಗರಿಗಳು, ಇತರೆ ತೆಂಗಿನ ಭಾಗಗಳು, ತೆಂಗಿನೊಂದಿಗೆ ಬೆಳೆದ ಮೇವು, ಇತರ ಗಿಡಗಳು, ಬಾಳೆ, ತರಕಾರಿ ಇವುಗಳ ತ್ಯಾಜ್ಯವನ್ನು ಕೂಡ ಸೇರಿಸಲಾಯಿತು.

ಅವರ ಹೆಂಡತಿ ಶ್ರೀಮತಿ ಉಷಾ ಅವರು ಸಗಣಿ ನೀರನ್ನು ಎರೆಹುಳುಗೊಬ್ಬರ ಘಟಕಕ್ಕೆ ಸಿಂಪಡಿಸುತ್ತಾರೆ. ಕೊಟ್ಟಿಗೆಯಲ್ಲಿ ಉಳಿದ ಆಹಾರ, ತೋಟದಲ್ಲಿ ಉದರಿರುವ ಮಾವು, ಹಲಸು ಇತ್ಯಾದಿಗಳ ಎಲೆಗಳನ್ನೆಲ್ಲ ಸಂಗ್ರಹಿಸುತ್ತಾರೆ. ತರಕಾರಿ ಕೃಷಿಗೆ ನೆರವು ನೀಡುವ ಸಗಣಿ ನೀರಿನ ತಯಾರಿಕೆಗೂ ನೆರವು ನೀಡುತ್ತಾರೆ. ಆಕೆ ಹೇಳುತ್ತಾರೆ ಎರೆಹುಳುಗೊಬ್ಬರದ ಘಟಕದಿಂದಾಗಿ ೬೦೭೦% ತ್ಯಾಜ್ಯದ ಪ್ರಮಾಣವು ಕಡಿಮೆಯಾಗಿದೆ. ತೋಟದ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ತೋಟದಲ್ಲಿರುವ ಕುಟುಂಬ ಮತ್ತು ತೋಟ ಇಬ್ಬರ ಹಿತದೃಷ್ಟಿಯಿಂದಲೂ ಮರುಬಳಕೆ ಅತ್ಯಗತ್ಯ.”

ಅಡುಗೆಮನೆಯ ಬೂದಿ ಮತ್ತು ಮೀನಿನ ತ್ಯಾಜ್ಯವನ್ನು ನೇರವಾಗಿ ತೆಂಗಿನ ಮಡಿಗಳಿಗೆ ಹಾಕಲಾಗುತ್ತದೆ. ವಾರಕ್ಕೊಮ್ಮೆ ಸರಾಸರಿ ೧೦-೧೨ ಕೆಜಿಗಳಷ್ಟು ಬೂದಿ ಸಿಗುತ್ತದೆ. ತೆಂಗಿನ ಸಸಿಗಳಿಗೆ ವಾರಕ್ಕೊಮ್ಮೆ ರೋಗ ಮತ್ತು ಕೀಟ ಭಾದೆ ತಡೆಯಲು ಬೂದಿಯನ್ನು ಸಿಂಪಡಿಸಲಾಗುತ್ತದೆ.

ಅದೇ ರೀತಿ ಅಕ್ಕಿ ಗಂಜಿಯನ್ನು ಬಾಳೆ ಮತ್ತಿತರ ತರಕಾರಿ ಗಿಡಗಳಿಗೆ ಕೀಟನಿಯಂತ್ರಣಕ್ಕಾಗಿ ಸಿಂಪಡಿಸಲಾಗುತ್ತದೆ. ಕಳೆಯನ್ನು ಮರುಬಳಕೆ ಮಾಡುವಲ್ಲಿ ಮಹಿಳೆಯರು ಮುಖ್ಯಪಾತ್ರ ವಹಿಸುತ್ತಾರೆ. ಬಾಳೆ/ಹಲಸಿನ ತಾಜಾ ಇಲ್ಲವೇ ಹಣ್ಣಾದ ಎಲೆಗಳನ್ನು ದಿನವೂ ಹಸುಗಳಿಗೆ, ಮೇಕೆಗಳಿಗೆ ಮತ್ತು ಕೋಳಿಗಳಿಗೆ ಮೇವಾಗಿ ನೀಡಲಾಗುತ್ತದೆ. ಹಿತ್ತಲಿನ ಕೋಳಿ ಸಾಕಾಣಿಕೆಯು ಮನೆಯ ಊಟದ ತ್ಯಾಜ್ಯ, ಮೀನಿನ ತ್ಯಾಜ್ಯ ಮತ್ತು ಭತ್ತದ ತ್ಯಾಜ್ಯದ ಮರುಬಳಕೆ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಕೃಷಿ ತ್ಯಾಜ್ಯದ ಮರುಬಳಕೆಯಿಂದಾಗಿ ಮನೆಗೆ ತಾಜಾ ತರಕಾರಿಗಳು ಇಲ್ಲವೆ ಮೊಟ್ಟೆಗಳು ಸಿಗುತ್ತದೆ.

ಶ್ರೀ ಗೋಪಾಲಕೃಷ್ಣ ಪಿಳೈ ಅವರು ಹೇಳುತ್ತಾರೆ ತಾಜಾ ಸಗಣಿಯ ಸಾಗಾಣಿಕೆ ಕಷ್ಟ. ಇದಕ್ಕೆ ತಗಲುವ ಕೂಲಿ ವೆಚ್ಚವೂ ಹೆಚ್ಚಾಗಿರುವುದರಿಂದ ಹೆಚ್ಚಿನ ಬೇಡಿಕೆಯಿಲ್ಲ. ಜೊತೆಗೆ ಮಳೆಗಾಲದಲ್ಲಿ ಇದನ್ನು ಸಂಗ್ರಹಿಸುವುದು ದೊಡ್ಡ ತಲೆನೋವಿನ ಸಂಗತಿ. ಎರೆಹುಳು ಗೊಬ್ಬರದ ಮೂಲಕ ಸಗಣಿಯ ಮೌಲ್ಯವರ್ಧನೆ ಮಾಡಬಹುದು. ತೋಟಕ್ಕೆ ಬೇಕಾಗುವಷ್ಟು ಎರೆಹುಳುಗೊಬ್ಬರವನ್ನು ಉತ್ಪಾದಿಸುತ್ತಿದ್ದೇನೆ. ಬಳಕೆಯ ನಂತರ ಉಳಿದ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದೇನೆ”. ನೆರಳಿನಲ್ಲಿ ಒಣಗಿಸಲಾದ ಹಸುವಿನ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದೆ. ಅರೆಕಾಲಿಕ ಕೃಷಿ ಮಾಡುವ ನಗರಗಳ ಜನ ಇದನ್ನು ಕೊಳ್ಳುತ್ತಾರೆ. ಕೆಜಿಗೆ ರೂ.೧೨ರಷ್ಟು ಲಾಭವನ್ನು ರೈತ ಪಡೆಯುತ್ತಾನೆ. ಶ್ರೀ ಗೋಪಾಲಕೃಷ್ಣ ಪಿಳೈ ಅವರು ವರ್ಷಕ್ಕೆ ೫ – ೬ ಟನ್‌ ಎರೆಹುಳಗೊಬ್ಬರ ವ್ಯಾಪಾರ ಮಾಡುವ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ.

ಗೋಪಾಲಕೃಷ್ಣ ಪಿಳೈ ಅವರು ಪ್ರತಿ ದಿನ ೨೦೦-೩೦೦ ಲೀಟರ್‌ ಹಾಲನ್ನು ಮಾರಾಟಮಾಡುತ್ತಾರೆ. ಇದರೊಂದಿಗೆ ಗಂಜಲ, ಸಗಣಿ ಮತ್ತು ಬಯೋಗ್ಯಾಸ್‌ ತ್ಯಾಜ್ಯದ ಮರುಬಳಕೆಯಿಂದ ರುಚಿಕರವಾದ ತಾಜಾ ತರಕಾರಿಯನ್ನು ಬೆಳೆಯುತ್ತಿದ್ದಾರೆ.

ಬ್ಯಾಂಕರ್‌ ಆಗಿದ್ದ ಗೋಪಾಲಕೃಷ್ಣ ಪಿಳೈ ಅವರು ಮಾದರಿ ಕೃಷಿಕರಾಗಿದ್ದಾರೆ. ಪ್ರತಿದಿನ ಇವರ ತೋಟಕ್ಕೆ ೧೦೦ ಮಂದಿ ಸಂದರ್ಶಕರು ಭೇಟಿ ನೀಡುತ್ತಾರೆ. ಹಲವು ಮಾದರಿಗಳನ್ನು ಒಗ್ಗೂಡಿಸಿ ಮಾಡುತ್ತಿರುವ ಕೃಷಿ ವಿಧಾನ, ಕೃಷಿ ತ್ಯಾಜ್ಯಗಳ ಮರುಬಳಸಿ ಉತ್ಪಾದಿಸುತ್ತಿರುವ ಗೊಬ್ಬರ, ಹಸಿರು ಮೇವು, ಮೀನಿನ ಹೊಂಡ, ತರಕಾರಿಗಳು ಮತ್ತು ಹಣ್ಣುಗಳು ಇವೆಲ್ಲವನ್ನೂ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಸಿಗುವ ತಾಜಾ ತರಕಾರಿಗಳ ಬಗ್ಗೆ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಾರೆ. ಈ ರೀತಿಯ ವಿಧಾನದಲ್ಲಿ ಬೆಳೆಯಲಾದ ತರಕಾರಿಗಳು ಬೇಗ ಹಾಳಾಗುವುದಿಲ್ಲ. ಯಾವುದೇ ಮನೆಯವರು ತಮ್ಮ ಮನೆಯ ಸಾವಯವ ತ್ಯಾಜ್ಯವನ್ನು ದ್ರವ ಗೊಬ್ಬರ, ಘನ ಗೊಬ್ಬರ, ಎರೆಹುಳುಗೊಬ್ಬರ ಇತ್ಯಾದಿಯಾಗಿ ಮರುಬಳಕೆ ಮಾಡುವ ಮೂಲಕ ರುಚಿಕರವಾದ ತರಕಾರಿಯಾಗಿ ಪರಿವರ್ತಿಸಬಹುದು.

ಗೋಪಾಲಕೃಷ್ಣ ಪಿಳೈ ಅವರು ಸಾವಯವ ಕೃಷಿ ಪದ್ದತಿಗಳನ್ನು ಅನುಸರಿಸುತ್ತಿರುವುದನ್ನು ನೋಡಿ ಪಂಚಾಯತ್‌ನವರು ಅವರಿಗೆ ಉತ್ತಮ ಕೃಷಿಕ ಪ್ರಶಸ್ತಿ ನೀಡಿದ್ದಾರೆ. ಅವರ ತೋಟವು ಸಂಪನ್ಮೂಲ ಮರುಬಳಕೆ ಮತ್ತು ಸ್ವಾವಲಂಬಿ ಕೃಷಿಯ ಅತ್ಯುತ್ತಮ ಮಾದರಿಯಾಗಿದೆ.

ಸಾಮಾಜಿಕವಾಗಿ ಮನ್ನಣೆ ಪಡೆಯುತ್ತಿರುವ ಮಾದರಿ

ಸಂಪನ್ಮೂಲ ಮರುಬಳಕೆಯ ಮಾದರಿಯನ್ನು ೧೫ ಕುಟುಂಬಗಳು ಅಳವಡಿಸಿಕೊಂಡಿವೆ. ಕೃಷಿ ತ್ಯಾಜ್ಯ ಮರುಬಳಕೆ ಹಾಗೂ ಮೌಲ್ಯವರ್ಧನೆ ಘಟಕೆಗಳನ್ನು ಅಳವಡಿಸಲಾಗಿದ್ದು ರೈತರು ಒಗ್ಗೂಡಿಸಿದ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪತಿಯೂರ್‌ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ವಿ. ಪ್ರಭಾಕರನ್‌ ಅವರು ಈ ಹದಿನೈದು ಮಂದಿ ಯುವ ಕೃಷಿಕರು ಈ ಕಾರ್ಯದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇವರಲ್ಲಿ ಏಳು ಮಂದಿ ಮಹಿಳೆಯರು ಸೇರಿದ್ದಾರೆ. ಸಂಪನ್ಮೂಲಗಳ ಮರುಬಳಕೆಯಿಂದ ಅವರು ಸ್ವಲ್ಪ ಮಟ್ಟಿಗಿನ ಆದಾಯವನ್ನು ಕೂಡ ಗಳಿಸಬಹುದಾಗಿದೆ. ಪಂಚಾಯ್ತಿಗಳ ಮಟ್ಟದಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯಡಿಯಲ್ಲಿ ಕೃಷಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸುರಕ್ಷಿತವಾದ, ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಉತ್ಪಾದಿಸಲು ಉತ್ತೇಜನ ನೀಡಬಹುದಾಗಿದು. ಸ್ಥಳೀಯ ಸಂಪನ್ಮೂಲಗಳ ಮರುಬಳಕೆ ಮಾಡುವಲ್ಲಿ ಮಹಿಳಾ ಕೃಷಿಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆಕಳೆಗಳನ್ನು ಮತ್ತು ಜಾನುವಾರು, ಮೀನು, ಕೋಳಿ ಸಾಕಣೆ ಮತ್ತಿತರ ಚಟುವಟಿಕಗಳಲ್ಲಿ ಉತ್ಪಾದಿತವಾಗುವ ತ್ಯಾಜ್ಯವನ್ನು ಸುಡುವ ಇಲ್ಲವೆ ಬಿಸಾಡುವ ಬದಲು ಮಣ್ಣಿಗೆ ಸೇರಿಸಿ ಎಂದು ಅವರಿಗೆ ಸಲಹೆ ನೀಡುತ್ತಿದ್ದೇವೆಎಂದು ಹೇಳುತ್ತಾರೆ.  

ಸಾವಯವ ಕೃಷಿ ತ್ಯಾಜ್ಯಗಳ ವ್ಯವಸ್ಥಿತ ಮರುಬಳಕೆ ಮತ್ತು ಮೌಲ್ಯವರ್ಧನೆಯು ತೋಟದ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ಮಣ್ಣಿಗೆ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಹೆಚ್ಚು ಸ್ವಾವಲಂಬಿಯಾಗಿಸುತ್ತದೆ. ಎರೆಹುಳುಗೊಬ್ಬರ ಮಣ್ಣಿನಲ್ಲಿನ ಜೀವಾಣು ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಹಾಕಾರಿಯಾಗಿದೆ. ಇದರೊಂದಿಗೆ ಬೆಳೆಗಳಿಗೆ ಸಹಜವಾದ ರುಚಿ ಮತ್ತು ಗಂಧವನ್ನು ತಂದುಕೊಡುತ್ತದೆ. ಬಯೋಗ್ಯಾಸ್‌ ಉತ್ಪಾದನೆ ಮಾಡಿ ಬಯೋಅನಿಲವಾಗಿ ಬಳಸುವುದರಿಂದ ತೋಟದಲ್ಲಿ ನೇರವಾಗಿ ಅನಿಲ ಪ್ರಸರಣವಾಗುವುದು ತಪ್ಪುತ್ತದೆ. ಹಲವು ವಿಧಗಳಲ್ಲಿ ಸಂಪನ್ಮೂಲಗಳ ಮರುಬಳಕೆಯ ಮೂಲಕ ಪರಿಸರಕ್ಕೆ ಕೊಡುಗೆ ನೀಡುವುದರೊಂದಿಗೆ ಆದಾಯವನ್ನು ಕೂಡ ಗಳಿಸಬಹುದಾಗಿದೆ. ಒಟ್ಟಾರೆಯಾಗಿ ಸಂಪನ್ಮೂಲ ಮರುಬಳಕೆ ಎನ್ನುವುದು ಹವಾಮಾನ ಬದಲಾವಣೆಯನ್ನು ತಾಳಿಕೊಳ್ಳುವಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ನೆರವನ್ನು ನೀಡುತ್ತದೆ.

ಅನಿತ ಕುಮಾರಿ ಪಿ ಮತ್ತು ಇಂದುಜಾ ಎಸ್


Anithakumari P

Principal Scientist (Agrl. Extension*)

E-mail: anithacpcri@gmail.com

Induja S

Scientist (Microbiology)

ICAR Central Plantation Crops Research Institute

Krishnapuram P.O., Kayamkulam, Kerala

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ‌೨; ಜೂನ್ ೨೦೧೯

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp