ಸುಸ್ಥಿರ ಕೃಷಿಪರಿಸರ ಪದ್ದತಿಗಳಿಗೆ ಬೇಕಿದೆ ನೆರವು

ರೈತರೀಗ ಹಳೆಯ ಪರಿಸರ ಸ್ನೇಹಿತ ಪದ್ಧತಿಗಳಿಗೆ ಹಿಂತಿರುಗಲು ಉತ್ಸಾಹ ತೋರುತ್ತಿದ್ದಾರೆ. ಇದು ಸುಸ್ಥಿರ ಉತ್ಪಾದನೆಯನ್ನು ನೀಡುತ್ತದೆ. ಈ ಕೃಷಿಪರಿಸರ ಸ್ನೇಹಿತ ಪದ್ಧತಿಗಳ ತಿಳಿವಳಿಕೆಯನ್ನು ರೈತರಿಗೆ ನೀಡುವ ತುರ್ತು ಈಗ ಹೆಚ್ಚಿದೆ. ಜೊತೆಗೆ ಅವರಿಗೆ ಅಗತ್ಯವಾದ ನೆರವನ್ನು ಕೂಡ ನೀಡಬೇಕಿದೆ.

ಫೋಟೊ : ತೆಂಗಿನ ಗರಿಗಳನ್ನು ತರಿದು ತೋಟಕ್ಕೆ ಹಾಕುತ್ತಿರುವುದು

ಹಳೆಯ ಪದ್ಧತಿಗಳು ಇಂದಿಗೂ ಪ್ರಸ್ತುತವಾಗಿವೆ. ಅವು ಸಣ್ಣ ಮತ್ತು ಮಧ್ಯಮ ರೈತರ ಬೆನ್ನೆಲುಬಾಗಿದೆ. ಆಧುನಿಕ ಪದ್ಧತಿಗಳನ್ನುಅಳವಡಿಸಿಕೊಂಡ ರೈತರು ಈ ಹಳೆಯ ಪದ್ಧತಿಗಳನ್ನು ಕೈಬಿಟ್ಟರು. ಮರಳಿ ಹಳೆದ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕೆಲವು ರೈತರು ಮುಂದಾಗಿದ್ದಾರೆ. ಸಾವಯವ ಕೃಷಿ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಸಮರ್ಥವಾಗಿ ಮಾಡಬಲ್ಲ ಹಳೆಯ ಪದ್ಧತಿಗಳು ಮರಳಿ ಚಾಲ್ತಿಗೆ ಬರುವುದರ ಕುರಿತು ಆಶಾವಾದವನ್ನು ಇರಿಸಿಕೊಳ್ಳಬಹುದು.

ಹೊಲ ಗೊಬ್ಬರವನ್ನು ಬಳಸುವುದು ಹಳೆಯ ಪದ್ಧತಿ. ಮೌಲ್ಯ ವರ್ಧನೆಗೆ ಇದು ನೆರವಾಗುತ್ತದೆಯೆಂದು ಇದನ್ನು ಬಳಸಲಾಗುತ್ತಿದೆ. ಹೊಲಗೊಬ್ಬರವನ್ನು ರಂಜಕ ಬಳಸಿ ಸಂಸ್ಕರಿಸಿ ಬಳಸಲಾಗುತ್ತದೆ. ಮೊದಲು ಉತ್ತರ ಕರ್ನಾಟಕದಲ್ಲಿ ಗಂಜಲವನ್ನು ಸಂಗ್ರಹಿಸಿಟ್ಟು ಗೊಬ್ಬರದ ಗುಂಡಿಗೆ ಹಾಕಿ ಗೊಬ್ಬರವನ್ನು ಹೆಚ್ಚು ಸಾರಯುಕ್ತವಾಗಿ ಮಾಡಲಾಗುತ್ತಿತ್ತು. ಇಂದು ಆ ಪದ್ಧತಿಯು ಮರೆಯಾಗುತ್ತಿದೆ.

ಕೆಲವು ಮುಖ್ಯವಾಹಿನಿಗೆ ಸೇರಿದ ಸಂಸ್ಥೆಗಳು ಹಳೆಯ ಸಾವಯವ ಪದ್ಧತಿಗಳನ್ನು ಪುನಶ್ಚೇತನಗೊಳಿಸಿ ಪ್ರಚುರಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಉದಾಹರಣೆಗೆ ಕರ್ನಾಟಕ ಸರ್ಕಾರವು ಸಾವಯವ ಕೃಷಿ ಯೋಜನೆಯಡಿ ಸಾರಯುಕ್ತ ಗೊಬ್ಬರ ತಯಾರಿಕೆಗೆ ನೆರವು ನೀಡುತ್ತಿದೆ. ಮಣ್ಣು ಮತ್ತು ಗಂಜಲವನ್ನು ಬೆರೆಸಿ ಸಾವಯವ ಯೂರಿಯ ಉತ್ಪಾದನೆ ಮಾಡುವುದನ್ನು ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೊರಗೆರೆ ಹಳ್ಳಿಯ ರೈತ ಕೆ.ಆರ್‌. ರಾಜಶೇಖರಯ್ಯ ವಿನೂತನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅವರು ಗಂಜಲ ಮತ್ತು ಬೂದಿಯನ್ನು ಬೆರೆಸಿ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇದು ಉತ್ತಮ ಫಲಿತಾಂಶ ನೀಡುವುದನ್ನು ಆತ ಗಮನಿಸಿದ್ದಾರೆ.

ಪ್ರಯೋಜನಕಾರಿಯಾಗಿದ್ದರೂ ಇದೇ ರೀತಿ ಬಳಸದೆ ಬಿಟ್ಟ ಹಲವು ಉಪಯೋಗಿ ಪದ್ಧತಿಗಳಿವೆ. ಉದಾಹರಣೆಗೆ ಕೆರೆಗಳ ಹೂಳನ್ನು ಬಳಸುವುದರಿಂದ ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯ ಹೆಚ್ಚುತ್ತದೆ, ಚಳಿಗಾಲದಲ್ಲಿ ಭೂಮಿಯನ್ನು ಉತ್ತಾಗ ಕಳೆಗಳು ಮತ್ತು ಬೆಳೆ ತ್ಯಾಜ್ಯಗಳು ಮಣ್ಣಿನೊಳಗೆ ಸೇರುತ್ತವೆ,  ಹೊಲದಲ್ಲಿ ಕುರಿ ಮಂದೆ ಮೇಯಿಸುವುದು ಇತ್ಯಾದಿ. ಕುರಿಗಳನ್ನು ಸಾಕುವ ಪ್ರದೇಶಗಳಲ್ಲಿ ಕುರಿಗಳನ್ನು  ಹೊಲಗಳಿಗೆ ಕರೆದುಕೊಂಡು ಹೋಗಿ ಮೇಯಿಸಿಕೊಂಡು ಬರುವುದು ಇಂದಿಗೂ ಇದೆ. ಈ ರೀತಿ ಕುರಿಯ ಹಿಕ್ಕೆ ಹೊಲಕ್ಕೆ ಗೊಬ್ಬರವಾಗುತ್ತದೆ. ಅದೇ ರೀತಿ ದನಗಳನ್ನು ಹೊಲಕ್ಕೆ ಬಿಡುವುದು (ರಾಯಚೂರು ಜಿಲ್ಲೆ), ಕತ್ತೆಗಳನ್ನು ಹೊಲದಲ್ಲಿ ಮೇಯಲು ಬಿಡುವುದು (ತುಮಕೂರು ಮತ್ತು ಅರಸಿಕೆರೆ)ಗಳಲ್ಲಿ ಕಾಣಬಹುದು. ಹೀಗೆ ಮಾಡುವುದರಿಂದ ವ್ಯರ್ಥವಾಗಿ ಹೋಗಬಹುದಾಗಿದ್ದ ಸಗಣಿ ಮತ್ತು ಮೂತ್ರವು ಮಣ್ಣಿಗೆ ಗೊಬ್ಬರವಾಗಿ ಸೇರುತ್ತದೆ.

ರೈತರಲ್ಲಿ ಜಾಗೃತಿ ಉಂಟಾಗುತ್ತಿದ್ದಂತೆ ಅವರುಗಳು ಈಗ ತೆಂಗಿನ ಗರಿಗಳನ್ನು ಸೀಳಿ ಮಣ್ಣಿಗೆ ಹಾಕುತ್ತಿದ್ದಾರೆ.

ಸಂಪನ್ಮೂಲ ಪುನರ್ಬಳಕೆ

ಹವಾಮಾನ ಬದಲಾವಣೆ, ಒಳಸುರಿಯುವಿಕೆಗಳ ದುಬಾರಿ ಬೆಲೆ ಇವುಗಳ ಹಿನ್ನೆಲೆಯಲ್ಲಿ ಸಂಪನ್ಮೂಲಗಳ ಪುನರ್ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಬೆಳೆ ತ್ಯಾಜ್ಯ, ಗೊಬ್ಬರ, ಗಂಜಲ ಇತ್ಯಾದಿಗಳ ಬಳಕೆಯ ಕುರಿತು ರೈತರಲ್ಲಿ ಜಾಗೃತಿ ಮೂಡುತ್ತಿದೆ. ದಶಕದ ಹಿಂದೆ ರೈತರು ಬೆಳೆತ್ಯಾಜ್ಯವನ್ನು ಹೊಲಗಳಲ್ಲಿ ಸುಟ್ಟುಹಾಕುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಕಬ್ಬು ಬೆಳೆಯುವ ಬೆಳಗಾವಿ, ಬಾಗಲಕೋಟೆ, ಮೈಸೂರು ಮೊದಲಾದ ಕಡೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿತ್ತು. ಈಗ ರೈತರು ಬೆಳೆ ತ್ಯಾಜ್ಯದಲ್ಲಿನ ಪೌಷ್ಟಿಕಾಂಶದ ಮಹತ್ವವನ್ನು ಅರಿತಿದ್ದಾರೆ. ಅದನ್ನು ಗೊಬ್ಬರವಾಗಿ ಬಳಸುವುದರಿಂದ ಈ ಪೌಷ್ಟಿಕಾಂಶಗಳನ್ನು ಮರಳಿ ಮಣ್ಣಿಗೆ ನೀಡಬಹುದು ಎನ್ನುವುದು ಅವರಿಗೆ ಅರಿವಾಗಿದೆ.

ಫೋಟೊ : ರವಿಕುಮಾರ್ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಉಣಿಸಲು ಮೇವು ಬೆಳೆಗಳನ್ನು ಬೆಳೆಯುತ್ತಿದ್ದಾರೆ

ಬೆಳೆ ತ್ಯಾಜ್ಯಗಳು ಒಮ್ಮೆ ಹೊಲದಿಂದ ಹೊರಹೋದರೆ ಇಲ್ಲವೇ ಸುಟ್ಟುಹಾಕಿದರೆ ಅದರಲ್ಲಿ ಪೌಷ್ಟಿಕಾಂಶಗಳು ನಷ್ಟವಾಗಿ ಬಿಡುತ್ತದೆ. ಮೊದಲು ತೆಂಗು ಬೆಳೆಯುತ್ತಿದ್ದ ಪ್ರದೇಶಗಳಾದ ತುಮಕೂರು, ಹಾಸನ, ಮಂಡ್ಯ, ಚಿಕ್ಕಮಂಗಳೂರು ಇತ್ಯಾದಿ ಪ್ರದೇಶಗಳಲ್ಲಿ ತೆಂಗಿನ ಗರಿಗಳನ್ನು ಅತಿಕಡಿಮೆ ಬೆಲೆಗೆ ಮಾರಲಾಗುತ್ತಿತ್ತು. ಇದರಿಂದ ಪೌಷ್ಟಿಕಾಂಶಗಳು ಹೊಲಕ್ಕೆ ಸಿಗದೆ ನಷ್ಟವಾಗುತ್ತದೆ. ರೈತರಲ್ಲಿ ಈ ಕುರಿತು ಜಾಗೃತಿ ಮೂಡಿ ಗರಿಗಳನ್ನು ಚಿಕ್ಕದಾಗಿ ಕತ್ತರಿಸಿ ಮಣ್ಣಿಗೆ ಹಾಕಲಾರಂಭಿಸಿದರು. ಪ್ರೊ. ನಂಜುಂಡಪ್ಪ (ತಿಪಟೂರು, ತುಮಕೂರು ಜಿಲ್ಲೆ) ಶಿಕ್ಷಣ ತಜ್ಞರಾಗಿದ್ದವರು ಇಂದು ಸಾವಯವ ಕೃಷಿಕರಾಗಿದ್ದಾರೆ. ಅವರು ತೆಂಗಿನ ಗರಿಗಳನ್ನು ಸಣ್ಣದಾಗಿ ಕತ್ತರಿಸಿ ತಮ್ಮ ತೋಟಕ್ಕೆ ಹಾಕುತ್ತಾರೆ. ಕಳೆದ ಹತ್ತು ವರ್ಷಗಳಿಂದ ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ಸಂಪನ್ಮೂಲಗಳ ಮರುಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಅದೇ ರೀತಿ ಧಾರವಾಡ ಜಿಲ್ಲೆಯ ಕಂಪ್ಲಿಕೊಪ್ಪದ ಶ್ರೀ ಮಲ್ಲೇಶಪ್ಪ ಹಕ್ಕಲದ ಎನ್ನುವ ಸಣ್ಣ ರೈತನ ಕೃಷಿ ಭೂಮಿಯಲ್ಲಿ ಕೂಡ ಯಾವುದೂ ವ್ಯರ್ಥವಾಗವುದಿಲ್ಲ. ಅವರು ಮರ ಆಧಾರಿತ ಕೃಷಿಯನ್ನು ಮಾಡುತ್ತಿದ್ದು ಬದುಗಳಲ್ಲಿ ಮೇವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಬೆಳೆ ತ್ಯಾಜ್ಯವನ್ನು ಗೊಬ್ಬರವಾಗಿಸಿ ತೋಟಕ್ಕೆ ಹಾಕುತ್ತಾರೆ. ಹಣ್ಣಿನ ಮರಗಳ ಉದುರಿದೆಲೆಗಳನ್ನು ಮರದ ಪಾತಿಗಳಿಗೆ ಹಾಕುತ್ತಾರೆ. ಅವರ ಹತ್ತಿರ ನಾಲ್ಕು ಹಾಲು ನೀಡುವ ಜಾನುವಾರುಗಳಿವೆ. ಸ್ಥಳೀಯ ಗ್ರಾಮಪಂಚಾಯ್ತಿ ನೆರವಿನಿಂದ ಬಯೋಗ್ಯಾಸ್‌ ಘಟಕವನ್ನು ಅಳವಡಿಸಿಕೊಂಡಿದ್ದಾರೆ. ಮೇವಿನ ಗಿಡಗಳು ಜಾನುವಾರುಗಳಿಗೆ ಆಹಾರವನ್ನು ಒದಗಿಸುತ್ತದೆ. ಪ್ರತಿಯಾಗಿ ಜಾನುವಾರುಗಳ ಸಗಣಿ ಜೈವಿಕ ಘಟಕಕ್ಕೆ ಉರುವಲನ್ನು ಒದಗಿಸುತ್ತದೆ. ಬಯೋಘಟಕದ ತ್ಯಾಜ್ಯವು ಹೊಲಗೊಬ್ಬರದ ಗುಂಡಿ ಸೇರಿ ಗೊಬ್ಬರವಾಗಿ ಮರಳಿ ಭೂಮಿಯನ್ನು ಸೇರುತ್ತದೆ. ಕೇವಲ ಧಾನ್ಯಗಳು, ಹಾಲು ಮತ್ತು ಮೇವಿನ ಗಿಡಗಳ ಬೇರುಗಳು ಮಾತ್ರ ನನ್ನ ತೋಟದಿಂದ ಹೊರಹೋಗುತ್ತದೆಎಂದು ಮಲ್ಲೇಶಪ್ಪ ಹೇಳುತ್ತಾರೆ.

ಆಂಧ್ರ ಪ್ರದೇಶದ ವೈಜಾಕ್‌ ಜಿಲ್ಲೆಯ ಮುದುಗೋಳ ಮಂಡಲದ ಸಂಗ್ರಾಮ ಹಳ್ಳಿಯ ಸಣ್ಣ ರೈತರಾದ ಶ್ರೀ ರವಿಕುಮಾರ್‌ ರವರು ಹೇಳುತ್ತಾರೆ ಹೊರಗಿನ ಸಂಪನ್ಮೂಲಗಳನ್ನು ನಾವು ಅವಲಂಭಿಸಿರುವುದು ಬಹಳ ಕಡಿಮೆ. ಮೇವನ್ನು ಸಮರ್ಪಕವಾಗಿ ಬಳಸುತ್ತೇವೆ. ತ್ಯಾಜ್ಯವನ್ನು ಗೊಬ್ಬರದ ಗುಂಡಿಗೆ ಹಾಕುತ್ತೇವೆ”. ಅವರ ಹತ್ತಿರ ಏಳು ಹಸುಗಳು ಮತ್ತು ಎರಡು ಎಮ್ಮೆಗಳಿವೆ. ಅವರು ಒಂದು ಎಕರೆಯಲ್ಲಿ ಮೇವನ್ನು ಬೆಳೆಸುತ್ತಿದ್ದಾರೆ. ಅವರ ತೋಟದಲ್ಲಿ ಎಂಟು ಟನ್‌ಗಳಷ್ಟು ಹೊಲಗೊಬ್ಬರ ತಯಾರಾಗುತ್ತದೆ. ಇದನ್ನು ಗಿಡಗಳಿಗೆ ಹಾಕುತ್ತಾರೆ. ಅಜೋಲವನ್ನು ಬೆಳೆಯುತ್ತಿದ್ದು ತ್ಯಾಜ್ಯ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ರವಿಕುಮಾರ್‌ ಅವರು ತಮ್ಮ ಏಳು ಎಕರೆ ತೋಟದಲ್ಲಿ ಸೀಬೆ, ತೆಂಗು, ಬಾಳೆ, ಭತ್ತ ಮತ್ತು ಮೇವು ಹೀಗೆ ಬಹುಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಮುಂದಿನ ಹೆಜ್ಜೆ

ಪರಿಸರ ಕೃಷಿ ಎನ್ನುವುದು ಇನ್ನೂ ಪ್ರವರ್ಧಮಾನಕ್ಕೆ ಬರಬೇಕಿದೆ. ಪರಿಣಾಮಕಾರಿ ಮರುಬಳಕೆಗೆ ಒಂದಾದರೂ ಹಾಲು ನೀಡುವ ಪ್ರಾಣಿ, ಮೇಕೆ/ಕುರಿಯಂತಹ ಕೆಲವು ಪ್ರಾಣಿಗಳು, ಬದುವಿನಲ್ಲಿ ಮೇವಿನ ಗಿಡಗಳು, ಬೆಳೆ ತ್ಯಾಜ್ಯವನ್ನು ಗೊಬ್ಬರವಾಗಿಸಲು ಸೌಲಭ್ಯ ಇವೆಲ್ಲವೂ ಇರಬೇಕು. ಹಲವು ಸಂಸ್ಥೆಗಳು ಬದಲಿ ವಿಧಾನಗಳನ್ನು ಪ್ರೋತ್ಸಾಹಿಸುತ್ತವೆ. ಆದರೆ ಅವೆಲ್ಲವೂ ಸೀಮಿತ ಅವಧಿಯ ಯೋಜನೆಗಷ್ಟೇ ಸೀಮಿತವಾಗಿರುತ್ತದೆ. ಉದಾಹರಣೆಗೆ ನಬಾರ್ಡ್‌ನ ಯೋಜನೆ. ನೀರಿನ ಸಂಪನ್ಮೂಲಗಳ ರಕ್ಷಣೆಯು ಹಸಿರುಗೊಬ್ಬರ ಬಳಕೆ, ತ್ಯಾಜ್ಯ ಬಳಕೆ, ಆಳ ಉಳುಮೆ ಮತ್ತು ಎರೆಹುಳ ಗೊಬ್ಬರ ಬಳಕೆಯಂತಹ ಪರಿಣಾಮಕಾರಿ ಸಂಪನ್ಮೂಲಗಳ ಮರುಬಳಕೆಯನ್ನು ಒಳಗೊಂಡಿದೆ. ಕೃಷಿ ಇಲಾಖೆ ಮತ್ತು ಕೆವಿಕೆಯವರು ಹೊಲಗೊಬ್ಬರದ ಮೌಲ್ಯವರ್ಧನೆಗೆ ಗೊಬ್ಬರ ಸಂಸ್ಕರಣಕ್ಕೆ ಅಗತ್ಯವಾದುದನ್ನು ಒದಗಿಸುತ್ತಿದ್ದಾರೆ. ಆದ್ದರಿಂದ ಈ ಕುರಿತ ತಿಳುವಳಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಚುರಪಡಿಸಬೇಕಾದ ತುರ್ತಿದೆ. ರೈತರು ಪರಿಸರ ಕೃಷಿಯನ್ನು ಅಳವಡಿಸಿಕೊಳ್ಳಲು ಬಯಸಿದಲ್ಲಿ ಅವರಿಗೆ ಅಗತ್ಯವಾದ ನೆರವನ್ನು ಕೂಡ ಒದಗಿಸಲಾಗುವುದು.

ಎಂ ಎನ್ಕುಲಕರ್ಣಿ

M N Kulkarni

Addl Chief Programme Executive

BAIF Institute for Sustainable Livelihoods and

Development

C/O: TRICOR, Koneru Lakshmaiah Street

Mogalarajpuram, Vijayawada, Andhra Pradesh

E-mail: mnkulkarni65@gmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೧; ಸೆಪ್ಟಂಬರ್‌ ೨೦೧೯

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp