ಕೃಷಿಯ ಹೊಸರೂಪ ಹವಾಮಾನ ವೈಪರಿತ್ಯಗಳಿಗೊಂದು ಪ್ರತಿಕ್ರಿಯೆ

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಹೊಸದಾರಿಗಳನ್ನು ಹುಡುಕುತ್ತಿರುವ ರೈತರು ಕೃಷಿ ವ್ಯವಸ್ಥೆಯನ್ನು ಬದಲಾಯಿಸಿ, ಹೊಸದಿಕ್ಕಿನತ್ತ ತಿರುಗಿಸುವ ಮೂಲಕ ಕೃಷಿಗೆ ಚೇತರಿಕೆಯನ್ನು ಒದಗಿಸುವುದರೊಂದಿಗೆ ಆಹಾರ ಭದ್ರತೆಯನ್ನು ಕಂಡುಕೊಂಡಿದ್ದಾರೆ. ಇಂತಹ ತಳಮಟ್ಟದ ಅನ್ವೇಷಣಗಳನ್ನು ಗುರುತಿಸಿ ಸೂಕ್ತ ಸಾಂಸ್ಥಿಕ ಮತ್ತು ನೀತಿಯ ಬೆಂಬಲವನ್ನು ನೀಡಬೇಕು.

ತಮಿಳುನಾಡಿನ ಕುಂಭಕೋಣAನ ತೇನಂಪಡುಗೈ ಹಳ್ಳಿಯ ಭಾಸ್ಕರನ್ ಸಾವಯವ ಕೃಷಿಕರಲ್ಲಿ ಪ್ರಮುಖರು. ತಮಿಳುನಾಡಿನ ಸಾವಯವ ಕೃಷಿ ಪದ್ಧತಿಯ ಹರಿಕಾರರಾದ ಡಾ.ನಮ್ಮಲ್ವರ್ ಅವರಿಂದ ಪ್ರಭಾವಿತರಾಗಿ ಭಾಸ್ಕರನ್ ೧೫ ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ೨೦೦೬ರಲ್ಲಿ ಆದಿರಂಗನಲ್ಲಿ ನೆಲ್ ತಿರುವಿಜಾ಼ (ಭತ್ತದ ಉತ್ಸವ) ಆರಂಭವಾದಾಗಿನಿAದ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಸಾವಯವ ಕೃಷಿ ಮಾಡುವುದು ಮತ್ತು ಸಾಂಪ್ರದಾಯಿಕ ಭತ್ತದ ವಿವಿಧ ತಳಿಗಳನ್ನು ಬೆಳೆಯುವುದರೊಂದಿಗೆ ತಮ್ಮ ಜಮೀನಿನಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ನಿರಂತರವಾಗಿ ಕೃಷಿಯಲ್ಲಿ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಾ ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ನಡೆಸಿರುವ ಸಂಶೋಧನೆಗಳಿAದಾಗಿ ಇತರ ರೈತರಿಗೆ ಹವಾಮಾನ ವೈಪರಿತ್ಯಗಳನ್ನು ಹೇಗೆ ಎದುರಿಸಬೇಕೆನ್ನುವುದಕ್ಕೆ ಪ್ರತ್ಯಕ್ಷ ಪರಿಹಾರಗಳು ದಕ್ಕಿವೆ. ಈ ಪರಿಹಾರಗಳನ್ನು ತೀರಪ್ರದೇಶಗಳು ಹಾಗೂ ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಅನಿರೀಕ್ಷಿತ ಹವಾಮಾನ ವೈಪರಿತ್ಯ
೨೦ ವರ್ಷಗಳ ಹಿಂದೆ ಮಳೆ ಚೆನ್ನಾಗಿ ಬೀಳುತ್ತಿತ್ತು. ವರ್ಷದ ೧೦ ತಿಂಗಳು ಕೆರೆ, ಕೊಳಗಳಲ್ಲಿ ನೀರು ಸಿಗುತ್ತಿತ್ತು. ಇದರಿಂದ ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದಿತ್ತು. ವರ್ಷದಲ್ಲಿ ೩ ತಿಂಗಳು ಮಳೆಗಾಲದ ದಿನಗಳು ಇರುತ್ತಿದ್ದವು. ಆದರೆ ಈಗ ನದಿಗಳಲ್ಲಿ ನೀರು ಒಂದು ತಿಂಗಳು ಕೂಡ ಇರುವುದಿಲ್ಲ. ನೀರಿನ ಎಲ್ಲ ಸಂಪನ್ಮೂಲಗಳು ಒಣಗಿಹೋಗಿವೆ. ಯಾರ ತೋಟದಲ್ಲಿ ಕೊಳವೆಬಾವಿ ಇದ್ದು ನೀರೆತ್ತಲು ವಿದ್ಯುತ್ ಇದೆಯೋ ಅವರು ಮಾತ್ರ ಕೃಷಿ ಮಾಡಬಹುದಾಗಿದೆ. ಬಹುತೇಕ ಕೃಷಿಭೂಮಿ ಪಾಳುಬಿದ್ದಿದೆ.

ಮಳೆ ಬಿದ್ದ ರೀತಿಯನ್ನು ವಿಶ್ಲೇಷಿಸಿರುವ ಭಾಸ್ಕರನ್ ಕಂಡುಕೊAಡದ್ದು ೧೯೯೧-೯೫ರವರೆಗೆ ನಿಯಮಿತವಾಗಿ ಮಳೆ ಬೀಳುತ್ತಿತ್ತು. ಆದ್ದರಿಂದ ರೈತರು ಎರಡು ಬೆಳೆ ಬೆಳೆಯಬಹುದಿತ್ತು. ೨೦೦೦ದಲ್ಲಿ ಮಳೆಯ ಪ್ರಮಾಣ ನಿಧಾನವಾಗಿ ಕಡಿಮೆಯಾಗಿ ರೈತರು ಅನಿವಾರ್ಯವಾಗಿ ಒಂದು ಬೆಳೆಯನ್ನು ಮಾತ್ರ ಬೆಳೆಯುವಂತಾಯಿತು. ೨೦೦೦-೨೦೦೪ರವರೆಗೆ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಉಂಟಾಯಿತು. ಆದರೆ ೨೦೦೫ರಲ್ಲಿ ಮಳೆ ಹೆಚ್ಚಾಗಿ ಬಿದ್ದು ಪ್ರವಾಹ ಪರಿಸ್ಥಿತಿ ಉಂಟಾಯಿತು. ಅದಾದ ನಂತರ ಮಳೆ ಬೀಳುವ ರೀತಿಯಲ್ಲಿ ಸಾಕಷ್ಟು ಏರುಪೇರುಗಳಾದವು. ೨೦೧೦ರವರೆಗೂ ಇದೇ ರೀತಿಯ ಪರಿಸ್ಥಿತಿ ಅಂದರೆ ಒಮ್ಮೆ ಹೆಚ್ಚು ಮಳೆಯಾದರೆ ಒಮ್ಮೆ ಮಳೆಯ ಅಭಾವ ಕಾಡತೊಡಗಿತು. ಆಮೇಲೆ ೨೦೧೨ ಮತ್ತು ೨೦೧೩ನೇ ವರ್ಷಗಳಂತೂ ತೀವ್ರ ಬರಗಾಲವನ್ನು ಎದುರಿಸಿದ ವರ್ಷಗಳು.

ಅವರ ವಿಶ್ಲೇಷಣೆಯ ಪ್ರಕಾರ ಬರಗಾಲವು ಪ್ರತಿ ಐದು ವರ್ಷಕ್ಕೊಮ್ಮೆ ಬರುತ್ತದೆ. ಅದರ ಹಿಂದೆಯೇ ಭಾರಿಮಳೆ ಬೀಳುವ ವರ್ಷವೂ ಬರುತ್ತದೆ. ಇದರೊಂದಿಗೆ ಮತ್ತೆ ತೀವ್ರಬರಗಾಲದ ವರ್ಷದೊಂದಿಗೆ ೧೦ ದಿನಕ್ಕೂ ಕಡಿಮೆ ಮಳೆಬೀಳುವ ವರ್ಷವಿರುತ್ತದೆ. ಈ ರೀತಿಯ ಅನಿಶ್ಚಿತ ಮಳೆ ಮತ್ತು ಹವಾಮಾನ ವೈಪರಿತ್ಯಗಳಿಂದಾಗಿ ರೈತರು ಯಾವುದೇ ಒಂದು ರೀತಿಯ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ವರ್ಷ ಮಳೆ ಹೇಗೆ ಬೀಳುತ್ತದೆ ಎನ್ನುವುದರ ಕುರಿತು ರೈತರಿಗೆ ಖಾತ್ರಿ ಇರುವುದಿಲ್ಲವಾದ್ದರಿಂದ ಅದಕ್ಕೆ ತಕ್ಕ ಹಾಗೆ ಯಾವ ಬೆಳೆಯನ್ನು ಬೆಳೆಯಬೇಕು ಎಂದು ಅವರು ಮುಂಚಿತವಾಗಿ ಯೋಜಿಸಲು ಸಾಧ್ಯವಾಗುತ್ತಿಲ್ಲ. ಹವಾಮಾನ ವರದಿಗಳು ಕೂಡ ಸುಳ್ಳಾಗುತ್ತಿವೆ. ಆದ್ದರಿಂದ ರೈತರು ಮಳೆಯ ವೈಪರಿತ್ಯಗಳನ್ನು ಸಹಿಸಿಕೊಳ್ಳುತ್ತಲೇ ತಮ್ಮ ಕೃಷಿ ಅನುಭವದ ಹಿನ್ನಲೆಯಲ್ಲಿಯೇ ಅದಕ್ಕೆ ತಕ್ಕಂತೆ ಕೃಷಿ ತಂತ್ರಗಳನ್ನು ಯೋಜಿಸಿಕೊಳ್ಳಬೇಕು.

ಫೋಟೊ : ಭಾಸ್ಕರನ್ ತಂಡಾಲ್ ತಂಡಕ್ಕೆ ಹವಾಮಾನ ವೈಪರಿತ್ಯ ಪ್ರತಿರೋಧ ವಿಧಾನಗಳನ್ನು ವಿವರಿಸುತ್ತಿರುವುದು

ಹವಾಮಾನ ವೈಪರಿತ್ಯ ಪ್ರತಿರೋಧ ವಿಧಾನಗಳು
ಭಾಸ್ಕರನ್ ತಮ್ಮ ಭತ್ತದ ಕೃಷಿಯ ಅನುಭವದ ಹಿನ್ನಲೆ ಮತ್ತು ಹವಾಮಾನ ಬದಲಾವಣೆಯನ್ನು ಸೂಕ್ಷö್ಮವಾಗಿ ಗಮನಿಸುವ ಮೂಲಕ ತಮ್ಮದೇ ಆದ ಹವಾಮಾನ ವೈಪರಿತ್ಯ ಪ್ರತಿರೋಧ ವಿಧಾನಗಳನ್ನು ಕಂಡುಕೊAಡಿದ್ದಾರೆ. ೨೦೧೨ರಲ್ಲಿ ರೈತರು ತೀವ್ರ ಬರಗಾಲವನ್ನು ಎದುರಿಸುತ್ತಿರುವಾಗ ಏನುಮಾಡುವುದೆಂದು ತಿಳಿಯದೆ ಕಂಗಾಲಾಗಿದ್ದರು. ಆಗ ಭಾಸ್ಕರನ್ ವೆಲ್ಲಾಪೂನಿ ಎನ್ನುವ ೧೪೦ ದಿನಗಳ ಭತ್ತದ ತಳಿಯನ್ನು ನೇರವಾಗಿ ಭೂಮಿಗೆ ಬಿತ್ತಲು ನಿರ್ಧರಿಸಿದರು. ಸೆಪ್ಟಂಬರ್‌ನಲ್ಲಿ ಬಿದ್ದ ಮಳೆ ಭೂಮಿಯನ್ನು ಉತ್ತು ಬೀಜವನ್ನು ಬಿತ್ತುವಷ್ಟು ತೇವಾಂಶ ನೀಡಿತು. ಇದೇ ತೇವಾಂಶದಿAದ ಬೀಜಗಳು ಮೊಳಕೆಯೊಡೆದವು. ಅಕ್ಟೋಬರ್‌ನಲ್ಲಿ ದೀಪಾವಳಿಯ ನಂತರ ಬಿದ್ದ ಮಳೆಯಿಂದಾಗಿ ಭತ್ತವು ಒಂದು ಮಟ್ಟಕ್ಕೆ ಬೆಳೆಯಿತು. ಭಾಸ್ಕರನ್ ಅವರಿಗೆ ಅಕ್ಟೋಬರ್, ನವಂಬರ್, ಡಿಸಂಬರ್‌ನಲ್ಲಿ ೧೦ ದಿನಗಳ ಕಾಲ ನದಿಯ ನೀರು ಸಿಕ್ಕಿತು. ಜವರಿಯ ವೇಳೆಗೆ ಭತ್ತ ಕಟಾವಿಗೆ ಸಿದ್ಧವಾಗಿತ್ತು. ಭಾಸ್ಕರನ್ ಮಣ್ಣಿನಲ್ಲಿ ತೇವಾಂಶವಿರುವAತೆ ನೋಡಿಕೊಳ್ಳುತ್ತಾ ಆಗಾಗ್ಗೆ ನೀರು ಕೊಡುವುದನ್ನು ನಿಲ್ಲಿಸಿ ಮಣ್ಣನ್ನು ಒಣಗಿಸುವ ತತ್ವ ಚೆನ್ನಾಗಿ ಫಲ ನೀಡುವುದನ್ನು ಕಂಡುಕೊAಡರು. ಹೀಗಾಗಿ ೧೪೦ ದಿನಗಳ ಬೆಳೆಯು ಚೆನ್ನಾಗಿ ಬೆಳೆಯಿತು. ಇದಕ್ಕೆ ಅವರು ಅನುಸರಿಸಿದ ಕ್ರಮವೆಂದರೆ ೧೦ ದಿನಗಳ ನೀರುಣಿಸಿ ಮತ್ತೆ ೨೦ ದಿನಗಳ ಕಾಲ ನೀರು ನೀಡುವುದನ್ನು ನಿಲ್ಲಿಸಿ ಮಣ್ಣನ್ನು ಒಣಗಿಸುವುದು. ಈ ವಿಧಾನವು ಬೆಳೆ ಚೆನ್ನಾಗಿ ಬೆಳೆಯಲು ಸಹಕಾರಿಯಾಯಿತು. ಜನವರಿಯ ವೇಳೆಗೆ ಒಳ್ಳೆಯ ಫಸಲು ಸಿಕ್ಕಿತು. ನೇರವಾಗಿ ಬಿತ್ತುವ ವಿಧಾನವನ್ನು ಅನುಸರಿಸಿದ್ದರು ಕೂಡ ತೆನೆಗಳು ಗಟ್ಟಿಯಾಗಿದ್ದು ಗಟ್ಟಿಕಾಳುಗಳೇ ಹೆಚ್ಚಿದ್ದು ಜೊಳ್ಳುಕಾಳುಗಳು ಕಡಿಮೆಯಿದ್ದವು. ಇದರಿಂದ ಭತ್ತವನ್ನು ಕಡಿಮೆ ನೀರಿನಲ್ಲಿ ಕೂಡ ಬೆಳೆಯಬಹುದೆಂಬುದು ಸಾಬೀತಾಯಿತು.

೨೦೧೬ರಲ್ಲಿ ಭತ್ತದ ಕೃಷಿಗೆ ಅನುಕೂಲವಾಗಿರದ ಸಂಧರ್ಭದಲ್ಲಿ ಭಾಸ್ಕರನ್ ಎರಡು ಸಾಂಪ್ರದಾಯಿಕ ಭತ್ತದ ತಳಿಗಳಾದ ಕರುಂಕೂರ್ವೈ (ಏಚಿಡಿuಟಿಞuಡಿvಚಿi) ಮತ್ತು ಸೊರ್ನಮಜೂರಿ (Soಡಿಟಿಚಿmಚಿzuಡಿi) ಗಳೊಂದಿಗೆ ಪ್ರಯೋಗ ನಡೆಸಿದರು. ಇವುಗಳನ್ನು ಜೂನ್ ತಿಂಗಳಲ್ಲಿ ಮಳೆ ಬೀಳುವುದು ಎನ್ನುವ ನಿರೀಕ್ಷೆಯಲ್ಲಿ ನೇರವಾಗಿ ಬಿತ್ತುವ ವಿಧಾನವನ್ನು ಅನುಸರಿಸಿ ಬಿತ್ತಲಾಯಿತು. ಆದರೆ ಮಳೆ ಬೀಳಲಿಲ್ಲ. ಸೊರ್ನಮಜೂರಿ (Soಡಿಟಿಚಿmಚಿzuಡಿi) ಆರಂಭದಲ್ಲಿ ಚಿಗುರಿದರೂ ಮಳೆಬೀಳದ ಕಾರಣ ಒಣಗಿತು. ಆದರೆ ಕರುಂಕೂರ್ವೈ (ಏಚಿಡಿuಟಿಞuಡಿvಚಿi) ಚೆನ್ನಾಗಿ ಚಿಗುರಿದ್ದಲ್ಲದೆ ತಾಳಿಕೊಂಡು ಬೆಳೆಯಿತು. ಕೂರುವೈ ಋತುವಿಗೆ ಈ ತಳಿ ಮಿತ ನೀರಾವರಿ ಸಂಪನ್ಮೂಲನಗಳೊAದಿಗೆ ಬೆಳೆಯಲು ಸೂಕ್ತ ಎನ್ನುವುದು ಸಾಬೀತಾಯಿತು.

ಎರಡನೆಯ ಋತುವಿನಲ್ಲಿ ಅಂದರೆ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ನದಿಯಲ್ಲಿ ಸ್ವಲ್ಪ ಮಟ್ಟಿಗಿನ ನೀರಿರುತ್ತದೆ. ಮಳೆಯ ನಿರೀಕ್ಷೆಯಲ್ಲಿ ಕೆಲವು ರೈತರು ಭತ್ತವನ್ನು ನಾಟಿ ವಿಧಾನ ಹಾಗೂ ನೇರವಾಗಿ ಬಿತ್ತನೆ ಮಾಡುವ ಮೂಲಕ ಕೃಷಿ ಮಾಡಿದರು. ಆದರೆ ಡಿಸಂಬರ್ ಮಧ್ಯದವರೆಗೂ ಮಳೆ ಬಾರದ ಕಾರಣದಿಂದ ಭತ್ತ ಬದುಕಲಿಲ್ಲ. ಕೆಲವು ರೈತರು ಆಳವಾದ ಬೋರ್‌ವೆಲ್‌ಗಳ ನೆರವಿನಿಂದ ಸ್ವಲ್ಪ ಮಟ್ಟಿಗೆ ಬೇಸಾಯ ಮಾಡಲು ಸಾಧ್ಯವಾಯಿತು. ಉಳಿದ ರೈತರು ಭಾರಿ ನಷ್ಟ ಅನುಭವಿಸಿದರು ಅಥವ ವರ್ಷದ ಆದಾಯವನ್ನು ಕಳೆದುಕೊಂಡರು.

ಈ ಕಾರಣದಿಂದ ಭಾಸ್ಕರನ್ ಕಡಿಮೆ ನೀರಿನಲ್ಲಿ ತೇವಾಂಶವನ್ನೇ ಆಧರಿಸಿ ಡಿಸಂಬರ್ ಮತ್ತು ಜನವರಿಯಲ್ಲಿ ಬೆಳೆಯಬಲ್ಲ ಬೆಳೆಯನ್ನೇ ಬೆಳೆಯಲು ನಿರ್ಧರಿಸಿದರು. ಅವರು ಆಯ್ಕೆ ಮಾಡಿಕೊಂಡ ಬೆಳೆಗಳು ಉದ್ದು (ಎಡಿಟಿ -೩), ಹೆಸರು ಕಾಳು (ದೇಸಿ ತಳಿ) ಮತ್ತು ಎಳ್ಳು (ಟಿಎಂವಿ -೩). ಡಿಸಂಬರ್ ೨೭ -೨೮ ಮತ್ತು ಜನವರಿ ೨೦ -೨೧ರಂದು ಬೀಜಗಳನ್ನು ಜಮೀನಿನಲ್ಲಿ ಚೆಲ್ಲಿದರು. ಬೆಳೆಗಳು ನೀರಾವರಿಯ ಸೌಲಭ್ಯವಿಲ್ಲದೆ ಸ್ವಲ್ಪಮಟ್ಟಿಗಿನ ಗೊಬ್ಬರ ಮತ್ತು ಕೀಟನಾಶಕಗಳ ಸಹಾಯದಿಂದ ಚೆನ್ನಾಗಿ ಬೆಳೆದವು. ಈ ಬೆಳೆಗಳನ್ನು ಮಾರ್ಚ್ ೨೫, ೨೦೧೭ರಂದು ಕಟಾವು ಮಾಡಲಾಯಿತು. ಅವರು ಎರಡು ಎಕರೆಯಲ್ಲಿ ೨೫೦ಕೆಜಿ ಎಳ್ಳು, ಎರಡೂವರೆ ಎಕರೆಯಲ್ಲಿ ೧೧೦೦ಕೆಜಿ ಉದ್ದು ಮತ್ತು ಒಂದು ಎಕರೆಯಲ್ಲಿ ೩೫೦ಕೆಜಿ ಹೆಸರು ಕಾಳಿನ ಇಳುವರಿ ಪಡೆದರು.

ಬದಲಾಗುತ್ತಿದ್ದ ಹವಾಮಾನ ಪರಿಸ್ಥಿತಿಯಲ್ಲಿ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಉಳಿದ ರೈತರು ಹೈಬ್ರೀಡ್ ಭತ್ತವನ್ನು ಬೆಳೆದು ನಷ್ಟ ಮಾಡಿಕೊಂಡರು. ಅದೇ ಸಂದರ್ಭದಲ್ಲಿ ಭಾಸ್ಕರನ್ ವಿವಿಧ ಬೆಳೆಗಳನ್ನು ಬೆಳೆದು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಂಡರು.

ಕಲಿಯಬೇಕಾದ ಪಾಠಗಳು

ಪ್ರತಿಯೊಂದು ಹವಾಮಾನ ಪರಿಸ್ಥಿತಿಗೂ ನಿರ್ದಿಷ್ಟ ಸಾಂಪ್ರದಾಯಿಕ ತಳಿಗಳಿವೆ. ಸಾಂಪ್ರದಾಯಿಕ ತಳಿಗಳು ಸ್ಥಳಜನ್ಯವಾಗಿದ್ದು ಚೆನ್ನಾಗಿ ಬೆಳೆಯುತ್ತವೆ. ಇವು ರೈತರಿಗೆ ಹವಾಮಾನ ವೈಪರಿತ್ಯದಂತಹ ಒತ್ತಡ ಸನ್ನಿವೇಶಗಳನ್ನು ಎದುರಿಸಲು ನೆರವಾಗುತ್ತವೆ. ರೈತರಿಗೆ ಋತುಮಾನಕ್ಕೆ ಹೊಂದುವ ತಳಿಗಳ ಕುರಿತು ಅರಿವಿದ್ದರೆ ಅದಕ್ಕೆ ತಕ್ಕ ಹಾಗೆ ಅವುಗಳನ್ನು ಬೆಳೆಯಬಹುದು.

ರೈತರು ನಿರಂತರವಾಗಿ ೨-೩ ಋತುಗಳವರೆಗೆ ಭತ್ತವನ್ನೇ ಬೆಳೆಯುವುದನ್ನು ತಪ್ಪಿಸಬೇಕು. ಭತ್ತವನ್ನು ಸಾಂಬ ಋತುವಿನಲ್ಲಿ ಬೆಳೆಯಬೇಕು. ಉಳಿದಂತೆ ತೇವಾಂಶವಿರುವ ಸಮಯವು ದ್ವಿದಳ ಧಾನ್ಯಗಳನ್ನು ಬೆಳೆಯುವುದಕ್ಕೆ ಸೂಕ್ತವಾಗಿರುತ್ತದೆ. ಆದ್ದರಿಂದ ಜನವರಿಯ ಮಧ್ಯಭಾಗದ ನಂತರ ದ್ವಿದಳ ಧಾನ್ಯಗಳನ್ನೇ ಬೆಳೆಯಬೇಕು. ಬೇಸಿಗೆಯ ತಿಂಗಳುಗಳಾದ ಏಪ್ರಿಲ್ – ಮೇ ಸಮಯದಲ್ಲಿ ಮಣ್ಣು ಒಣಗಿರುತ್ತದೆ. ಆ ಸಮಯದಲ್ಲಿ ಸಿರಿಧಾನ್ಯಗಳಾದ ರಾಗಿ, ಸಜ್ಜೆ ಇತ್ಯಾದಿಗಳನ್ನು ಬೆಳೆಯಬೇಕು. ಈ ರೀತಿ ಹವಾಮಾನ ಪರಿಸ್ಥಿತಿಗೆ ತಕ್ಕಹಾಗೆ ರೈತರು ತಮ್ಮ ಬೆಳೆ ಪದ್ಧತಿಯನ್ನು ಯೋಜಿಸಿಕೊಳ್ಳಬೇಕು. ಭಾಸ್ಕರನ್ ಅವರ ಅನುಭವ ಇದಕ್ಕೊಂದು ಉತ್ತಮ ಉದಾಹರಣೆ.

ಶ್ರೀ ಭಾಸ್ಕರನ್ ಅವರ ವಿಳಾಸ : ತೇನಾಂಪಡುಗೈ, ಪಟ್ಟೇಶ್ವರಂ, ಕುಂಭಕೋಣA, ತಮಿಳುನಾಡು -೬೧೨೭೦೩. ದೂರವಾಣಿ ಸಂಖ್ಯೆ : ೯೪೪೨೮-೭೧೦೪೯. ಇಲ್ಲಿ ಅವರನ್ನು ಸಂಪರ್ಕಿಸಬಹುದು.

Suresh Kanna K

Kudumbam,

No. 113/118, Sundaraj Nagar,

Subramaniyapuram,

Trichy – 620 020, Tamil Nadu, India

E-mail: sureshkanna_kudumbam@yahoo.in

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೨ , ಜೂನ್ ೨೦೧೭

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp