ಆಹಾರ ಸಾರ್ವಭೌಮತ್ವ ಎನ್ನುವುದು ತುಳಿತ ಅಸಮಾನತೆಗಳಿಲ್ಲದ ಸಮಾಜವಿರುವ ಜಗತ್ತಿನ ನಿರ್ಮಾಣ. ನಮ್ಮ ಸ್ವಾಯತ್ತ ಆಹಾರ ಹಾಗೂ ಕೃಷಿ ವ್ಯವಸ್ಥೆಯನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಆಹಾರದ ಹಕ್ಕನ್ನು ರಕ್ಷಿಸಿಕೊಳ್ಳಲು ಇದೊಂದೇ ಮಾರ್ಗ. ಆ ಮೂಲಕ ಕಾರ್ಪೋರೇಟ್ ಹಾಗೂ ವ್ಯಾಪಾರಿ ಸಂಸ್ಥೆಗಳನ್ನು ನಿಗ್ರಹಿಸಬಹುದು. ಭಾರತದ ಆಹಾರ ಸಾರ್ವಭೌಮತ್ವ ಒಕ್ಕೂಟವು ಈ ರೀತಿಯಲ್ಲಿ ಪ್ರತಿರೋಧ ಹಾಗೂ ನಮ್ಮತನದ ಪ್ರತಿಪಾದನೆ ಮಾಡುತ್ತಿರುವ ಹಲವು ಸಂಸ್ಥೆಗಳಲ್ಲೊoದು.
ಆಹಾರ ಎನ್ನುವುದು ಹಲವರಿಗೆ ಹಲವು ರೀತಿ. ನಾವಿಂದು ನಮ್ಮ ಆಹಾರ, ಆಹಾರ ವ್ಯವಸ್ಥೆ ಹಾಗೂ ಆಹಾರ ಸಂಸ್ಕೃತಿಯ ಮೇಲಿನ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಏನು ತಿನ್ನುತ್ತೇವೆ, ಅದನ್ನು ಹೇಗೆ ಬೆಳೆಯುತ್ತಾರೆ, ಹೇಗೆ ಹಂಚುತ್ತಾರೆ, ಹೇಗೆ ಪ್ಯಾಕ್ ಮಾಡುತ್ತಾರೆ, ಅವುಗಳನ್ನು ಹೇಗೆ ಪ್ರಚಾರ ಮಾಡುತ್ತಾರೆ, ಹೇಗೆ ತಲುಪಿಸುತ್ತಾರೆ ಎನ್ನುವ ಆಹಾರದ ಬಗೆಗಿನ ನಮ್ಮ ನಿರ್ಧಾರಗಳೆಲ್ಲವೂ ಸರ್ಕಾರದ ನೆರವನ್ನು ಪಡೆದುಕೊಂಡಿರುವ ಕೆಲವೇ ಕೆಲವು ಕಾರ್ಪೋರೇಷನ್‌ಗಳ ಹಿಡಿತದಲ್ಲಿವೆ. ೧೯೯೦ರ ದಶಕದಲ್ಲಿ ನಡೆದ ಆರ್ಥಿಕ ಉದಾರೀಕರಣ, ಹಸಿರು ಹಾಗೂ ಬಿಳಿ ಕ್ರಾಂತಿಗಳು ನಮ್ಮ ಆಹಾರ ವ್ಯವಸ್ಥೆಯನ್ನು ಕೈಗಾರೀಕರಣಗೊಳಿಸುವತ್ತ ಮೊದಲ ಹೆಜ್ಜೆ ಇಡುವಂತೆ ಮಾಡಿದವು. ಇವೆಲ್ಲವೂ ಒಟ್ಟಾಗಿ ಆಹಾರದ ಕೈಗಾರಿಕಾ ಬಂಡವಾಳಷಾಹಿ ವ್ಯವಸ್ಥೆಯು ವಿಸ್ತೃತಗೊಳ್ಳಲು ಕಾರಣವಾಯಿತು. ಕೃಷಿವ್ಯಾಪಾರ ಮತ್ತು ಆಹಾರದ ಸಾಮ್ರಾಜ್ಯವು ಶರವೇಗದಲ್ಲಿ ನಮ್ಮ ಆಹಾರ ಉತ್ಪಾದನೆ, ಬಳಕೆ, ವಿತರಣೆಯ ಮೇಲೆ ಹಿಡಿತ ಸಾಧಿಸುತ್ತಾ ನಮ್ಮ ಪ್ರಾಪಂಚಿಕ ದೃಷ್ಟಿಕೋನ ಹಾಗೂ ಬದುಕನ್ನು ಪ್ರಭಾವಿಸುತ್ತಿವೆ. ಒಂದು ಕಾಲದಲ್ಲಿ ಸ್ವಾವಲಂಬಿಗಳಾಗಿದ್ದ ಸಮುದಾಯಗಳು, ಸ್ವತಂತ್ರವಾಗಿ ಬದುಕುತ್ತಿದ್ದ ಸಣ್ಣ ರೈತರು ಕೂಡ ಅವರ ಉತ್ಪನ್ನಗಳಾದ ಗೊಬ್ಬರಗಳು, ಕೀಟನಾಶಕಗಳು, ಬೀಜಗಳು, ಹೊಸ ತಳಿಗಳು ಹಾಗೂ ಯಂತ್ರತAತ್ರಜ್ಞಾನವನ್ನು ಅವಲಂಭಿಸತೊಡಗಿದ್ದಾರೆ. ಈ ಕಂಪನಿಗಳಿಗೆ ಅಡಿಯಾಳಾಗಿಸಿಕೊಂಡು ಅವರಿಗೆ ಅಗತ್ಯವಾದ ಆಹಾರವನ್ನೇ ಇವರು ಉತ್ಪಾದಿಸುವಂತೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ. ಹಾಗಾಗಿ ಮೊದಲು ವೈವಿಧ್ಯಮಯ ಪರಿಸರಸ್ನೇಹಿ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿದ್ದ ಭೂಮಿಯಲ್ಲಿ ಈಗ ಸರಕು/ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಭತ್ತ, ಪಶುಸಂಗೋಪನೆಗೆ ಅಗತ್ಯವಾದ ಆಹಾರ, ಕಾಫಿ, ಗೋಡಂಬಿ, ರಬ್ಬರ್, ಈರುಳ್ಳಿ, ಟೊಮೊಟೊ, ಮೆಣಸಿನ ಕಾಯಿ, ಕಬ್ಬು, ಒಂದೇ ಬಗೆಯ ತರಕಾರಿಗಳು, ಹಣ್ಣುಗಳನ್ನು ಬೆಳೆಯಲಾರಂಭಿಸಿದ್ದಾರೆ. ಆಹಾರ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊAಡಿರುವ ಕಾರ್ಪೋರೇಷನ್‌ಗಳು ಮಾತ್ರ ಇವನ್ನು ಖರೀದಿಸುತ್ತವೆ. ಈ ವ್ಯವಸ್ಥೆಯು ಮೊದಲೇ ಸಮಾಜದಲ್ಲಿದ್ದ ಅಸಮಾನತೆಯನ್ನು ಹೆಚ್ಚಿಸಿದ್ದು ಭೂಮಿಯಲ್ಲಿನ ಪ್ರಾಕೃತಿಕ ವ್ಯವಸ್ಥೆ ಹಾಗೂ ಪ್ರಕ್ರಿಯೆಯಲ್ಲಿ ತಲ್ಲಣಗಳನ್ನು ಹುಟ್ಟುಹಾಕಿದೆ. ಪ್ರಕೃತಿಯೊಂದಿಗಿನ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಬAಧದ ತುರ್ತು ಹೆಚ್ಚಿದೆ. ಬೀಜಗಳು, ತಳಿಗಳು, ಭೂಮಿ, ನೀರು, ಗಾಳಿ, ಜ್ಞಾನ, ಆರೋಗ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನ ರೀತಿಯನ್ನು ನಾವೇ ನಿರ್ಧರಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತಿದ್ದೇವೆ.
ಈ ವಿನಾಶದ ನಡುವೆಯು ತಾಳಿಕೆಯ ಗುಣವುಳ್ಳ ಬೀಜಗಳಿವೆ. ಆದಿವಾಸಿಗಳು, ದಲಿತರು, ಹಳ್ಳಿಯವರು, ರೈತರು, ಮೀನುಗಾರರು, ಸಹ- ಉತ್ಪಾದಕರು ತಮ್ಮ ಸಂಪನ್ಮೂಲಗಳು, ಆಹಾರ ಹಾಗೂ ಬದುಕಿನ ಕ್ರಮವನ್ನು ಕಾಪಾಡಿಕೊಳ್ಳಲು ಪ್ರತಿರೋಧವನ್ನು ಒಡ್ಡುತ್ತಿದ್ದಾರೆ. ಈ ರೀತಿ ಪ್ರತಿರೋಧ ಹಾಗೂ ತಮ್ಮತನದ ಪ್ರತಿಪಾದನೆ ಮಾಡುತ್ತಿರುವ ಹಲವು ಸಂಸ್ಥೆಗಳಲ್ಲಿ ಭಾರತದ ಆಹಾರ ಸಾರ್ವಭೌಮತ್ವ ಒಕ್ಕೂಟ (ಖಿhe ಈooಜ Soveಡಿeigಟಿಣಥಿ ಂಟಟiಚಿಟಿಛಿe, Iಟಿಜiಚಿ (ಈSಂ) ಕೂಡ ಒಂದು. ಈ ಒಕ್ಕೂಟವು ೨೦೧೩ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆಹಾರ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಆಹಾರದ ಹಕ್ಕು, ಭೂಮಿಯ ಹಕ್ಕನ್ನು ಉಳಿಸಿಕೊಳ್ಳಲು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇದೇ ಮನೋಭಾವದವರೆಲ್ಲ ಒಟ್ಟಾಗಿ ಈ ಒಕ್ಕೂಟವನ್ನು ಸ್ಥಾಪಿಸಿದರು. ದೌರ್ಜನ್ಯ ಹಾಗೂ ಅಸಮಾನತೆ ರಹಿತ ಸಮಾಜದ ನಿರ್ಮಾಣ ಇದರ ಉದ್ದೇಶ. ನಮ್ಮ ಮನೆಗಳಲ್ಲಿ ಸಮುದಾಯಗಳಲ್ಲಿ ನಮ್ಮದೇ ಆದ ಸ್ವಾಯತ್ತವಾದ ಕೃಷಿ ಪದ್ಧತಿ ಹಾಗೂ ಆಹಾರದ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ಇದೊಂದೇ ಮಾರ್ಗ. ಹೀಗೆ ಮಾಡುವ ಮೂಲಕ ಕಾರ್ಪೊರೇಟ್ ಆಹಾರ ಮತ್ತು ವ್ಯಾಪಾರ ವ್ಯವಸ್ಥೆಗಳನ್ನು ಪ್ರತಿರೋಧಿಸಬಹುದು.
ಆಹಾರ ಸಾರ್ವಭೌಮತ್ವಕ್ಕೆ ನಮ್ಮ ಪದ್ಧತಿ
ಸಮುದಾಯದ ಕ್ರಿಯೆ – ಪ್ರತಿಕ್ರಿಯೆಗಳ ನಿರಂತರ ಪ್ರಕ್ರಿಯೆಯ ಮೂಲಕ ಆಹಾರ ಸಾರ್ವಭೌಮತ್ವವನ್ನು ಸಾಧಿಸಲು ಅಡ್ಡಿಪಡಿಸುತ್ತಿರುವ ಶಕ್ತಿಗಳನ್ನು ಗುರುತಿಸಿ ಪರಾಮರ್ಶಿಸುವುದು ಹಾಗೂ ಆಹಾರ ಸಾರ್ವಭೌಮತ್ವವನ್ನು ಸಾಧಿಸಲು ಸಾಮೂಹಿಕ ಪರಿವರ್ತನಾ ಕ್ರಿಯೆಗಳನ್ನು ರೂಪಿಸುವುದು ನಮ್ಮ ಒಟ್ಟು ಚಳುವಳಿಯ ಉದ್ದೇಶ. ಸಮುದಾಯದ ಆಹಾರ ಸಾರ್ವಭೌಮತ್ವದ ಯೋಜನೆಗಳು ರಾಜಕೀಯ ಕ್ರಿಯೆಯ ವಿಮರ್ಶಾತ್ಮಕ ಅಭಿವ್ಯಕ್ತಿಯಾಗಿ ಹುಟ್ಟಿಕೊಂಡಿತು. ಆದಿವಾಸಿ ಸಮುದಾಯಗಳು, ಸಣ್ಣ ರೈತರು ಮತ್ತು ಪಶುಸಂಗೋಪಕರ ಸಮುದಾಯಗಳ ಕೃಷಿ ಪದ್ಧತಿಗಳು ಹಾಗೂ ಪಾರಂಪರಿಕ ಜ್ಞಾನ ಈ ಯೋಜನೆಗಳ ರೂಪುರೇಷೆ ತಯಾರಿಸುವಲ್ಲಿ ನೆರವಾಗಿವೆ. ಈ ಯೋಜನೆಗಳು ಭೂಮಿ, ನೀರು, ಅರಣ್ಯಗಳು, ಗಡಿಪ್ರದೇಶಗಳು, ಜೀವವೈವಿಧ್ಯ, ಬೀಜಗಳು, ತಳಿಗಳು ಹಾಗೂ ಜ್ಞಾನದ ಪ್ರಜಾಪ್ರಭುತ್ವ ಮಾದರಿಯ ಆಡಳಿತವನ್ನು ಒಳಗೊಂಡಿದೆ. ನಮ್ಮ ಮಣ್ಣಿನಲ್ಲಿ ಬದುಕನ್ನು ಬಿತ್ತಿ ಬೆಳೆಯುವುದು, ಇಲ್ಲಿಗೆ ಹೊಂದುವAತಹ ಕೃಷಿ ಪರಿಸರ ಸ್ನೇಹಿಯಾದ ಆಹಾರವನ್ನು ಬೆಳೆದು ಅವುಗಳನ್ನೇ ಹಂಚಿಕೊAಡು ಬಳಸುವಂತೆ ಮಾಡುವುದು. ಸ್ಥಳೀಯ ಬೀಜಗಳು ಹಾಗೂ ತಳಿಗಳನ್ನು ರೈತರು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ಉಳಿಸಿಕೊಂಡು ಬೀಜ ಹಾಗೂ ಜಾನುವಾರಗಳ ತಳಿಯಲ್ಲೂ ಸಾರ್ವಭೌಮತೆಯನ್ನು ಸಾಧಿಸುವುದು. ಪರಸ್ಪರ ನೆರವು ನೀಡುವ ವ್ಯವಸ್ಥೆಯ ಮೂಲಕ ಶ್ರಮದಾನ, ಜ್ಞಾನ ಹಾಗೂ ಉತ್ಪನ್ನಗಳನ್ನು ಹಂಚಿಕೊಳ್ಳುವುದು. ಉತ್ಪಾದಕರು ಮತ್ತು ಗ್ರಾಹಕರನ್ನು ಬೆಸೆಯುವ ಸ್ಥಳೀಯ ಆಹಾರ ಮಾರುಕಟ್ಟೆಗಳನ್ನು ಬಲಪಡಿಸುವುದರಿಂದ ವೈವಿಧ್ಯಮಯ ಆಹಾರ ಬೆಳೆಗಳ ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ಒಕ್ಕೂಟವು ಸದಸ್ಯರು ಸುತ್ತಲ ಪ್ರದೇಶಗಳಲ್ಲಿ ಬೀಜಗಳನ್ನು ಹಂಚಿಕೊಳ್ಳಲು ಹಾಗೂ ವಿನಿಮಯಮಾಡಿಕೊಳ್ಳಲು ನೆರವಾಗುತ್ತದೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಕಣ್ಮರೆಯಾಗಿರುವ ಅವರು ಉಳಿಸಿಕೊಳ್ಳಲು ಬಯಸುವ ಬೀಜಗಳನ್ನು ಉಳಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಆಹಾರ ಸಾರ್ವಭೌಮತ್ವದ ಮೂಲ ಉದ್ದೇಶವೇ ಸಾಮಾಜಿಕ ಸಮಾನತೆಯನ್ನು ಸಾಧಿಸುವುದು. ಜಾತಿ, ವರ್ಗ ಹಾಗೂ ಒಡೆತನಗಳನ್ನು ಒಡೆದುಹಾಕುವುದೇ ಈ ಚಳುವಳಿಯ ಮೂಲ ಅಂಶಗಳು.
ಸಮುದಾಯದ ಹಿರಿಯ ಹಾಗೂ ಕಿರಿಯ ತಲೆಮಾರುಗಳ ನಡುವೆ ಕಲಿಕೆ ಮತ್ತು ಜ್ಞಾನದ ಹಂಚಿಕೊಳ್ಳುವಿಕೆ ಅತ್ಯಗತ್ಯ. ಯುವಕರು ಸಮುದಾಯದ ಹಿರಿಯರು ಅದರಲ್ಲೂ ಮಹಿಳೆಯರಿಂದ ಕಲಿಯುತ್ತಾರೆ. ಅವರು ವೈವಿಧ್ಯಮಯವಾದ ಗಿಡಮೂಲಿಕೆಗಳನ್ನು, ಹಣ್ಣುಗಳನ್ನು, ಬೀಜಗಳನ್ನು ಸಂಗ್ರಹಿಸುವಾಗ ಅವರ ಜೊತೆಯಲ್ಲಿರುವುದರಿಂದ ಅವುಗಳ ಬಗ್ಗೆ ತಿಳಿದುಕೊಳ್ಳಬಹುದು. ಸಂಗ್ರಹಿಸಿದ ಬೀಜಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವುದು, ಸಂಸ್ಕರಿಸುವುದು, ಕೂಡಿಟ್ಟುಕೊಳ್ಳುವ ವಿಧಾನಗಳು, ಸಮುದಾಯದ ಬೀಜಸಂಗ್ರಹಣ ಬ್ಯಾಂಕ್‌ಗಳ ಸ್ಥಾಪನೆ, ಸ್ಥಳೀಯ ಕೃಷಿ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿಯುವರು. ಸ್ಥಳೀಯ ಹಬ್ಬಗಳು, ಹಾಡು, ಕುಣಿತ, ನಾಟಕ, ಸಮುದಾಯದ ವಿಶೇಷ ಅಡುಗೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ, ಬದುಕಿನ ಕ್ರಮ ಮತ್ತು ಋತುಮಾನಕ್ಕನುಗುಣವಾದ ಕೃಷಿ ಪದ್ಧತಿಗಳನುಸಾರವಾಗಿ ವೈವಿಧ್ಯಮಯ ಆಹಾರವನ್ನು ಪರಿಚಯಿಸಿ ಸಂಭ್ರಮಿಸುವುದರ ಮೂಲಕ ನಮ್ಮ ಪದ್ಧತಿಗಳನ್ನು ಬಲಪಡಿಸಬಹುದು. ಶಿಬಿರಗಳು, ಜಾತ್ರೆಗಳು ಮತ್ತು ಆಹಾರ ಸಾರ್ವಭೌಮತ್ವ ಕುರಿತ ಸಭೆಗಳು, ನಿರ್ದಿಷ್ಟ ಪ್ರಶ್ನೆಗಳನ್ನು ಕುರಿತಾದ ಸಮುದಾಯಗಳ ಕ್ರಿಯಾತ್ಮಕ ಸಂಶೋಧನೆ, ಅನುಭವಗಳನ್ನು ಮತ್ತು ಕಾಳಜಿಯನ್ನು ಮುಖ್ಯವಾಹಿನಿ ಮಾಧ್ಯಮಗಳು, ಜನಪ್ರಿಯ ಹಾಗೂ ಶೈಕ್ಷಣಿಕ ಪತ್ರಿಕೆಗಳಲ್ಲಿ ಹಂಚಿಕೊಳ್ಳುವಿಕೆ – ಇವೆಲ್ಲವೂ ಆಹಾರ ಸಾರ್ವಭೌಮತ್ವದ ಬಗ್ಗೆ ನಮ್ಮ ಒಗ್ಗಟ್ಟು ಹಾಗೂ ಸಾಮೂಹಿಕ ಕ್ರಿಯೆಗಳನ್ನು ಪ್ರೇರೇಪಿಸುವ ಮುಖ್ಯ ತಂತ್ರಗಳು.
ಒಕ್ಕೂಟದ ಸದಸ್ಯರು ಒಟ್ಟಾಗಿ ಆಹಾರ ಸಾರ್ವಭೌಮತ್ವದ ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಳ್ಳಲು ಹಲವು ತಂತ್ರಗಳನ್ನು ಕಂಡುಕೊAಡಿದ್ದಾರೆ.
ಆAಧ್ರಪ್ರದೇಶ ಮತ್ತು ತೆಲಂಗಾಣದ ಆದಿವಾಸಿ ಪ್ರದೇಶಗಳಲ್ಲಿನ ಆದಿವಾಸಿ ಸಮುದಾಯಗಳು ೧೯೯೬ರ PಇSಂ ಸಮುದಾಯ ಹಾಗೂ ಸ್ಥಳೀಯವಾಸಿಗಳ ಹಕ್ಕುಗಳು ಮತ್ತು ೨೦೦೬ರ ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಸ್ಥಳೀಯ ಗ್ರಾಮ ಮಂಡಳಿಗಳ ಮೂಲಕ ಆದಿವಾಸಿ ಐಕ್ಯ ವೇದಿಕೆಯ ಮೂಲಕ ತಮ್ಮ ಭೂಮಿ ಹಾಗೂ ಗಡಿಗಳ ಹಕ್ಕುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಆದಿವಾಸಿ ಪ್ರದೇಶಗಳಲ್ಲಿ ಕಾರ್ಖಾನೆಯ ಆಹಾರ ಉತ್ಪಾದನೆ ಹಲವು ಪರಿಣಾಮಗಳನ್ನು ಉಂಟುಮಾಡಿದೆ. ಮಹಬೂಬನಗರವನ್ನು ಉದಾಹರಣೆಗೆ ನೋಡಬಹುದು. ಇಲ್ಲಿನ ರೈತರು ಸರ್ಕಾರಿ ಸಬ್ಸಿಡಿಗಳಿಗೆ ಮರುಳಾಗಿ ಬಿಟಿ ಹತ್ತಿಯನ್ನು ಬೆಳೆಯಲು ಆರಂಭಿಸಿದ್ದಾರೆ. ಆಹಾರ ಬೆಳೆಗಳು ಕಡಿಮೆಯಾಗಿ, ಭೂಮಿಯ ಫಲವತ್ತತೆ ನಾಶವಾಗಿದೆ. ಪವಿತ್ರವೆಂದು ಪರಿಗಣಿಸಲಾಗುತ್ತಿದ್ದ ಜೇನ್ನೊಣಗಳು ಕೀಟನಾಶಕಗಳಿಂದಾಗಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ವಿಮರ್ಶಾತ್ಮಕ ಪರಿವೀಕ್ಷಣೆ ಹಾಗೂ ಚರ್ಚೆಗಳ ಮೂಲಕ ಸಮುದಾಯವು ತಮ್ಮ ಋತುಮಾನದ ಆಹಾರ ಚಕ್ರ, ಸಸ್ಯ ಜೀವವೈವಿಧ್ಯ ಹಾಗೂ ಆಹಾರಕ್ಕೆ ಸಂಬAಧಿಸಿದ ಹಬ್ಬಗಳನ್ನು ಪಟ್ಟಿ ಮಾಡಿದ್ದಾರೆ. ಈ ವಿಧಾನವು ಅವರಿಗೆ ಅರಣ್ಯದೊಂದಿಗಿನ ತಮ್ಮ ಸಂಬAಧದ ಸ್ವರೂಪವನ್ನು ಅರಿತುಕೊಳ್ಳಲು, ಹವಾಮಾನ ಬದಲಾವಣೆಗಳ ಪರಿಣಾಮಗಳನ್ನು ತಿಳಿಯಲು, ಅದಕ್ಕೆ ತಾವು ಹೇಗೆ ಪ್ರತಿಕ್ರಿಯಿಸಬೇಕು ಎನ್ನುವ ತಂತ್ರಗಳನ್ನು ರೂಪಿಸಿಕೊಳ್ಳುವಲ್ಲಿ ಹೆಚ್ಚು ಪ್ರಯೋಜನಕಾರಿಯಾಯಿತು. ಹತ್ತಿಯನ್ನು ಬೆಳೆಯುತ್ತಿದ್ದವರು ಮರಳಿ ಕೃಷಿಪರಿಸರ ಕಾಪಾಡುವಂತಹ ಆಹಾರ ಬೆಳೆಗಳನ್ನು ಬೆಳೆಯಲು ಈ ಪ್ರಕ್ರಿಯೆಗಳು ಸ್ಪೂರ್ತಿ ನೀಡಿದವು. ಇದರಿಂದ ಪರಾಗಸ್ಪರ್ಶ ಕ್ರಿಯೆ ಮತ್ತೆ ಸಹಜವಾಗಿ ಆರಂಭವಾಗಿ ಜೆನ್ನೋಣಗಳ ಸಂತತಿ ಹೆಚ್ಚಿತು.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ದಲಿತ ಮಹಿಳಾ ಸಂಘವು ತಮ್ಮ ಸಮುದಾಯಗಳ ಭೂಮಿಗಾಗಿನ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದೆ. ಅವರ ಹೋರಾಟದ ಉದ್ದೇಶ ಒಮ್ಮೆ ಭೂಮಿಯ ಮೇಲಿನ ಹಕ್ಕನ್ನು ಪಡೆದಲ್ಲಿ ತಮ್ಮ ಪಾರಂಪರಿಕ ಜ್ಞಾನ, ವಿಧಾನಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಕೃಷಿ ಪರಿಸರ ಭೂಮಿಯನ್ನಾಗಿ ಮಾಡಿ ಮತ್ತೆ ಆಹಾರ ವೈವಿಧ್ಯವನ್ನು ಮರಳಿ ತರುವುದು. ಈ ಪ್ರಕ್ರಿಯೆಯು ಮಹಿಳೆಯರು ಒಟ್ಟಾಗಿ ಪಿತೃಪ್ರಧಾನ ವ್ಯವಸ್ಥೆ, ಹಿಂಸೆ ಮತ್ತು ತಾರತಮ್ಯದ ವಿರುದ್ಧ ಗಟ್ಟಿಯಾಗಿ ದನಿ ಎತ್ತುವಂತೆ ಮಾಡಿದೆ. ಇಂದು ಈ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಮಾರಲು ತಮ್ಮದೇ ಮಾರುಕಟ್ಟೆಯನ್ನು ಸ್ಥಾಪಿಸಿಕೊಂಡಿದ್ದಾರೆ.
ತೆಲAಗಾಣದಲ್ಲಿನ ವಿಶಿಷ್ಟ ಕಪ್ಪು ಉಣ್ಣೆ ನೀಡುವ ದೆಕ್ಕಾನಿ ಕುರಿ ತಳಿ ಸಂಕಷ್ಟದಲ್ಲಿದ್ದು ಅಲ್ಲಿನ ಕುರುಬರ ಜೀವನ ಕೂಡ ಸಂಕಷ್ಟದಲ್ಲಿದೆ. ದೆಕ್ಕಾನಿ ಗರ‍್ರೆಲ ಮೇಕಲ ಪೆಂಪಕಾದುರುಲ ಸಂಘA ಈ ತಳಿಯನ್ನು ಸಂರಕ್ಷಿಸಲು ಆ ಮೂಲಕ ಕುರುಬರ ಜೀವನಕ್ಕೆ ಭದ್ರತೆ ಒದಗಿಸುವ ಕೆಲಸ ಮಾಡುತ್ತಿದೆ. ಈ ಕುರಿಯಿಂದ ಮಾಂಸ, ಉಣ್ಣೆ ಮತ್ತು ಗೊಬ್ಬರವನ್ನು ಪಡೆಯಲಾಗುತ್ತದೆ. ಇದರ ಉಣ್ಣೆಯಿಂದ ಗೋನಗಾದಿ ಎನ್ನುವ ಸಾಂಪ್ರದಾಯಿಕ ಕಂಬಳಿಯನ್ನು ನೇಯಲಾಗುತ್ತದೆ. ೯೦ರ ಮಧ್ಯಭಾಗದಲ್ಲಿ ಸರ್ಕಾರಿ ಯೋಜನೆಗಳು ಹೆಚ್ಚು ತೂಕದ ವೇಗವಾಗಿ ಬೆಳೆಯುವ ಉಣ್ಣೆಯಿಲ್ಲದ ನೆಲ್ಲೂರು (ಆಂಧ್ರ ಪ್ರದೇಶದ ಕರಾವಳಿ ಭಾಗದ ತಳಿ) ತಳಿಯನ್ನು ದೆಕ್ಕಾನಿ ಕುರಿಗಳ ನಡುವೆ ಪರಿಚಯಿಸಿತು. ಇದರ ಪರಿಣಾಮವಾಗಿ ಮಿಶ್ರತಳಿಯಲ್ಲಿ ಉಣ್ಣೆಯೇ ಇರಲಿಲ್ಲ. ಸಂಘವು ದೆಕ್ಕಾನಿ ತಳಿಯನ್ನು ಪುನಶ್ಚೇತನಗೊಳಿಸುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ದೆಕ್ಕಾನಿ ಕುರಿಯನ್ನು ಸಾಕುತ್ತಿರುವವರು, ಇತರ ಮಿಶ್ರತಳಿಗಳನ್ನು ಸಾಕುತ್ತಿರುವವರು ನೆಲ್ಲೂರು ತಳಿಯನ್ನು ಬಿಟ್ಟು ದೆಕ್ಕಾನಿ ತಳಿಯನ್ನೇ ಸಾಕುವಂತೆ ಉತ್ತೇಜಿಸುತ್ತಿದೆ.
ಕಾಡಿನಲ್ಲಿ ಕುರಿಗಳನ್ನು ಮೇಯಿಸುವ ಹಕ್ಕುಗಳು, ಅಕೇಶಿಯ (ಜಾಲಿ ಮರಗಳು) ಮರಗಳನ್ನು ರಕ್ಷಿಸುವುದು, ಮೇವಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವುದು, ಪ್ರಾಣಿಗಳ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು – ಇವೆಲ್ಲವೂ ಕೂಡ ಆಹಾರ ಸಾರ್ವಭೌಮತ್ವವನ್ನು ಸಾಧಿಸಲು ಅತ್ಯಗತ್ಯ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ. ಶುದ್ಧ ದೆಕ್ಕಾನಿ ಕುರಿ ತಳಿ ಮರಳಿದ್ದರಿಂದ ಸಾಂಪ್ರದಾಯಿಕ ಗೊಂಗಾಡಿಯು ಪುನಶ್ಚೇತನಗೊಂಡಿದೆ. ಇವುಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ, ವಸ್ತುಪ್ರದರ್ಶನಗಳಲ್ಲಿ ಮಾರಾಟಮಾಡಲಾಗುತ್ತಿದೆ. ಹೆಚ್ಚಿನ ಬೆಲೆಯೊಂದಿಗೆ ಇವುಗಳನ್ನು ಮಾರಾಟಮಾಡಲಾಗುತ್ತದೆ. ಇದರಿಂದ ಅವರ ಉತ್ಪಾದನ ವೆಚ್ಚವನ್ನು ಸರಿದೂಗಿಸಿಕೊಳ್ಳುತ್ತಾರೆ.
೨೦೧೧ರಲ್ಲಿ ಆಂಧ್ರಪ್ರದೇಶದ ಶ್ರೀ ಗೋಪಿ ರೈತ ಸಂಘA ಕಾರ್ಪೋರೇಟ್ ಡೈರಿ ಸಂಸ್ಕರಣಕಾರರ ಪ್ರಾಬಲ್ಯವನ್ನು ತಡೆಯಲು ನಿರ್ಧರಿಸಿ ತಮ್ಮದೇ ಹಾಲಿನ ಮಾರುಕಟ್ಟೆಯನ್ನು ಸ್ಥಾಪಿಸಿದರು. ೬ ಲೀಟರ್‌ಗಳಿಂದ ಆರಂಭವಾದ ಮಾರುಕಟ್ಟೆ ಇಂದು ದಿನವೊಂದಕ್ಕೆ ೬೦೦ ಲೀ ಹಾಲನ್ನು ಸುತ್ತಲಿನ ೫ ಹಳ್ಳಿಗಳ ೮೦ ರೈತರಿಂದ ಸಂಗ್ರಹಿಸುತ್ತದೆ. ಸ್ಥಳಿಯ ಶಾಲೆ ಮತ್ತು ಹತ್ತಿರದ ಮದನಪಲ್ಲಿ ಎನ್ನುವ ಪಟ್ಟಣದಲ್ಲಿ ೧೫೦ ಮಂದಿ ಗ್ರಾಹಕರನ್ನು ಹೊಂದಿದೆ. ಸಂಘದ ಸದಸ್ಯರು ಮತ್ತು ಗ್ರಾಹಕರು ಸೇರಿ ಹಾಲಿನ ದರವನ್ನು ನಿರ್ಧರಿಸುತ್ತಾರೆ. ರೈತರು ವೈವಿಧ್ಯಮಯ ಬೆಳೆಯನ್ನು ಬೆಳೆಯುತ್ತಾರೆ : ಧಾನ್ಯಗಳು, ದ್ವಿದಳಧಾನ್ಯಗಳು, ಎಣ್ಣೆಕಾಳುಗಳು ಮತ್ತು ತರಕಾರಿಗಳು. ತಮ್ಮ ಮನೆಯ ಬಳಕೆಗೆ ಬಳಸಿಕೊಂಡ ನಂತರ ಉಳಿದ ಧಾನ್ಯಗಳನ್ನು ಸಂಸ್ಕರಿಸಿ ಹಳ್ಳಿಯ ಆಸ್ಪತ್ರೆಯ ಬಳಿಯ ಅಂಗಡಿಗೆ ಮಾರಾಟಮಾಡುತ್ತಾರೆ. ಇತ್ತೀಚೆಗೆ ರೈತರು ತಮ್ಮ ಸಿರಿಧಾನ್ಯಗಳನ್ನು ಸ್ಥಳೀಯ ಅಡುಗೆ ಮಾಡುವಾತನಿಗೆ ಮಾರುತ್ತಿದ್ದಾರೆ. ಸಂಘವು ವರ್ಷಾನುಗಟ್ಟಲೆ ಅವರೊಡನೆ ಮಾತಾಡಿ ಒಪ್ಪಿಸಿದ ಮೇಲೆ ಅವರು ತಮ್ಮ ಅಡುಗೆ ಪಟ್ಟಿಯಲ್ಲಿ ಸಿರಿಧಾನ್ಯಗಳ ಬೆಳಗಿನ ಉಪಹಾರವನ್ನು ಸೇರಿಸಿಕೊಂಡಿದ್ದಾರೆ. ಇದು ಸುತ್ತಲ ಹಳ್ಳಿಗಳ ಸ್ಥಳೀಯ ಜನರಿಗೆ ಇದರಿಂದ ಆರೋಗ್ಯಕರ ಆಹಾರ ಸೇವಿಸಲು ಹಾಗೂ ಸ್ಥಳೀಯ ಉತ್ಪಾದನೆಗೆ ನೆರವಾಗಲು ಅವಕಾಶ ದೊರೆತಿದೆ.
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯು ವಿವರಿಸುವ ಒಂದೇ ವಸ್ತುವಿನ ಮಾರುಕಟ್ಟೆಗಳ ಐಡಿಯಾವನ್ನು ಎಫ್‌ಎಸ್‌ಎ ತಿರಸ್ಕರಿಸುತ್ತದೆ. ಸ್ಥಳೀಯ ಮಾರುಕಟ್ಟೆಗಳು ಮುಂದುವರೆದ ಮಾರುಕಟ್ಟೆಗಳು. ಉತ್ಪಾದನೆ, ವಸ್ತುಗಳ ಬೆಲೆ ಜನರ ನಿಯಂತ್ರಣದಲ್ಲಿರುತ್ತದೆ. ಇದು ಜಾಗತಿಕ ವ್ಯಾಪಾರದ ಪ್ರಾಬಲ್ಯಕ್ಕೆ ತಡೆಯೊಡ್ಡಿ ಪ್ರಬಲವಾದ ಸವಾಲು ಒಡ್ಡಲು ಹಾಗೂ ಜನರ ಬದುಕನ್ನು ಕಾಪಾಡಿಕೊಳ್ಳಲು ಸುಭದ್ರವಾದ ದಾರಿ. ಈ ಹಾದಿಯ ಮಾರ್ಗದರ್ಶಕ ತತ್ವವೆಂದರೆ ನಾವು ಬೆಳೆಯುವುದನ್ನೇ ನಾವು ತಿನ್ನಬೇಕು, ಹೆಚ್ಚಾದುದನ್ನು ಮಾರುವುದು ಹಾಗೂ ಬರಗಾಲಕ್ಕೆ ಆಹಾರ ದಾಸ್ತಾನು ಮಾಡಿಡಲು ಸಾಧ್ಯವಾಗುವಂತೆ ದಾಸ್ತಾನು ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸಿಕೊಳ್ಳುವುದು. ಮುಖ್ಯವಾಗಿ ಸ್ಥಳೀಯ ಮಾರುಕಟ್ಟೆಗಳು ಬದುಕನ್ನು ಕಟ್ಟಿಕೊಳ್ಳಲು ನಡೆಸುತ್ತಿರುವ ಹೋರಾಟದಲ್ಲಿ ಗ್ರಾಹಕರನ್ನು ಒಳಗೊಂಡAತೆ ಸಂವಾದ ಸಾಧ್ಯವಾಗುವಂತಹ ಅವಕಾಶವನ್ನು ಒದಗಿಸುತ್ತದೆ.
ಸಮುದಾಯದ ಸಕ್ರಿಯ ಸಂಶೋಧನೆಯು ವ್ಯರ್ಥವಾಗದಂತೆ ಹಿಡಿದಿಡುವುದು ನಮ್ಮ ಮುಂದಿನ ಕ್ಲಿಷ್ಟಕರ ಸಂಗತಿ. ಇದಕ್ಕಾಗಿ ಒಕ್ಕೂಟಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ತಂಡಗಳನ್ನು ರಚಿಸಿದ್ದು ಅತ್ಯಗತ್ಯವಾಗಿ ಗಮನನೀಡಬೇಕಾದ ವಿಷಯಗಳನ್ನು ಗುರುತಿಸಿ ಅವುಗಳನ್ನು ಅರ್ಥಮಾಡಿಕೊಂಡು ಸಮುದಾಯದೊಂದಿಗೆ ಸಂವಾದಿಸುತ್ತಲೇ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ.
ಚಳುವಳಿಯ ನಿರ್ಮಾಣ
ಆಹಾರ ಸಾರ್ವಭೌಮತ್ವ ಕುರಿತಾದ ಈ ಚರ್ಚೆ ಹಾಗೂ ಚಳುವಳಿಯು ಭವಿಷ್ಯದಲ್ಲೂ ಉಳಿಯಬೇಕಾದಲ್ಲಿ ಇದು ಹಳ್ಳಿ ನಗರಗಳ ಶಾಲೆಗಳಲ್ಲಿನ ಮಕ್ಕಳು, ವಿಶ್ವವಿದ್ಯಾಲಯಗಳಲ್ಲಿನ ಹರೆಯದವರನ್ನು ತಲುಪಬೇಕಾದದ್ದು ಅತ್ಯಗತ್ಯ. ಸಂವಾದ ಕಾರ್ಯಕ್ರಮಗಳನ್ನು ಹಳ್ಳಿಗಳ ಮತ್ತು ನಗರಗಳ ಶಾಲೆ/ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುತ್ತದೆ. ಇದರೊಂದಿಗೆ ತೆಲಂಗಾಣದಲ್ಲಿನ ಕೂಡಲಿಯಲ್ಲಿನ ಕಲಿಕಾ ಕೇಂದ್ರದಲ್ಲಿ (ತಿತಿತಿ.ಞuಜಚಿಟi.oಡಿg) ಕೂಡ ಆಯೋಜಿಸಲಾಗುತ್ತದೆ. ನಮ್ಮ ಭವಿಷ್ಯದ ಕುರಿತು ಅವರುಗಳು ಪ್ರಶ್ನಿಸುವಂತೆ ವಿಮರ್ಶಾತ್ಮಕವಾಗಿ ಆಲೋಚಿಸುವಂತೆ ವಿವಿಧ ರೀತಿಯಲ್ಲಿ ಯತ್ನಿಸಲಾಗುತ್ತದೆ : ಕೃಷಿ ಪರಿಸರ ಸ್ನೇಹಿ ರೈತರ ಭೇಟಿ, ಅವರ ಭೂಮಿಗೆ ಭೇಟಿ ನೀಡುವುದು, ಅವರು ಬೆಳೆದ ಆಹಾರವನ್ನು ತಿನ್ನುವುದು, ಆ ಪ್ರದೇಶದ ಜೀವವೈವಿಧ್ಯವನ್ನು ಗುರುತಿಸುವುದು, ಜನರ ನಡುವಿನ ಸಂಬAಧವನ್ನು ಗುರುತಿಸುವುದು, ಪರಿಸರ, ಸಂಸ್ಕೃತಿ, ಆಹಾರಗಳನ್ನು ತಿಳಿಯುವುದು, ಆಹಾರ ಸಾರ್ವಭೌಮತ್ವಕ್ಕೆ ಅಡ್ಡಿಯಾಗಿರುವ ಶಕ್ತಿಗಳು, ವ್ಯವಸ್ಥೆಗಳನ್ನು ಗುರುತಿಸಿ ಪ್ರಶ್ನಿಸುವುದು, ಮಣ್ಣು, ಸಗಣಿ, ಬೀಜಗಳೊಂದಿಗೆ ಕೆಲಸ ಮಾಡುವುದನ್ನು ಕಲಿಯುವುದು, ತಮ್ಮ ದೃಷ್ಟಿಕೋನಗಳನ್ನು ಕಲೆ, ಹಾಡು, ನಾಟಕ ಮೊದಲಾದ ಸೃಜನಾತ್ಮಕ ಮಾಧ್ಯಮದ ಮೂಲಕ ಅಭಿವ್ಯಕ್ತಿಸುವುದು. ಇಲ್ಲಿ ಪಡೆದ ಅನುಭವವನ್ನು ತಮ್ಮ ಶಾಲೆಗಳಲ್ಲಿ ಸಮುದಾಯಗಳಲ್ಲಿ ಹಂಚಿಕೊಳ್ಳುವುದು (ಉದಾ: ಕೃಷಿ ಪರಿಸರ ಸಂಬAಧಿ ತರಕಾರಿಗಳನ್ನು ತಮ್ಮ ಶಾಲೆ ಹಾಗೂ ಮನೆಗಳಲ್ಲಿ ಬೆಳೆಯುವುದು). ಇದು ಮಕ್ಕಳಿಗೆ ಹಾಗೂ ದೊಡ್ಡವರಿಗೆ ಇಬ್ಬರಿಗೂ ಪರಿಣಾಮಕಾರಿ ಪರಿವರ್ತನಾ ಪ್ರಕ್ರಿಯೆಯಾಗಬಲ್ಲುದು. ನಮ್ಮ ಆಹಾರ ವ್ಯವಸ್ಥೆ ಹಾಗೂ ಬಳಕೆಯನ್ನು ನಿಯಂತ್ರಿಸಲು ಬಹುಮುಖ್ಯ ಕ್ರಿಯೆಯಾಗಬಲ್ಲುದು.
ವಲಸೆಯನ್ನು ತಡೆದು ವಿಮೋಚನೆಯತ್ತ ಸಾಗುವ ಪೀಳಿಗೆಗಳ ನಡುವಿನ ಸಂವಾದ, ಅಂತರ್‌ಸAಸ್ಕೃತಿಯ ಜನಪ್ರಿಯ ಶಿಕ್ಷಣದ ಪ್ರಕ್ರಿಯೆಗಳು ಆಹಾರ ಸಾರ್ವಭೌಮತ್ವನ್ನು ಕಟ್ಟಿಕೊಡುವ ಇಟ್ಟಿಗೆಗಳಾಗಿವೆ. ಇವು ಆಹಾರ ಮತ್ತು ಕೃಷಿ ಸಾರ್ವಭೌಮತ್ವದ ಸಂಕೋಲೆಗಳಿAದ ಮುಕ್ತಗೊಳಿಸುವಲ್ಲಿ ಭರವಸೆಯ ಸಮರ್ಥನೆಗಳಾಗಿವೆ. ಇದರಿಂದ ನಾವು ಸ್ವಾಯತ್ತತೆಯನ್ನು ಸಾಧಿಸಿ ನಮ್ಮ ವೈವಿಧ್ಯಮಯ ಆಹಾರ ಸಂಸ್ಕೃತಿಯ ಹಕ್ಕುಗಳನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬದುಕುವಂತಾಗುತ್ತದೆ.
The Food Sovereignty Alliance
A-21 Sainikpuri
Secunderabad-500094
Telangana, India
www.foodsovereigntyalliance.wordpress.com



