ಹೆಚ್ಚಿನ ಉತ್ಪಾದಕತೆ ಮತ್ತು ಕ್ಷಮತೆ” ಇಂದ “ಒಳಗೊಳ್ಳುವಿಕೆ ಮತ್ತು ಸಮಾನ ಹಕ್ಕು” ಕಡೆಗೆ ಮಾದರಿಗಳು ಬದಲಾಗಿವೆ. ಇದು ಜಾನುವಾರು ವಲಯದಲ್ಲಿನ ದೃಷ್ಟಿಕೋನದಲ್ಲಿ ಬದಲಾವಣೆ ತಂದಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಬಡತನವನ್ನು ಕಡಿಮೆಮಾಡಿ ಅಭಿವೃದ್ಧಿಯನ್ನು ಹೆಚ್ಚಿಸಬಲ್ಲುದು.
ಜಾನುವಾರುಗಳು ರಾಷ್ಟದ ಆದಾಯಕ್ಕೆ ಕೊಡುಗೆ ನೀಡುವುದರೊಂದಿಗೆ ವಿದೇಶಿ ವಿನಿಮಯ ಆದಾಯವನ್ನು ಉತ್ಪಾದಿಸುವ ಮೂಲಕ ರಾಷ್ಟಿçÃಯ ಆರ್ಥಿಕತೆಯಲ್ಲಿ ಬಹುಮುಖ್ಯಪಾತ್ರವನ್ನು ವಹಿಸುತ್ತವೆ. ಒಟ್ಟಾರೆ ೫೧೨ ಮಿಲಿಯನ್ ಜಾನುವಾರು ಸಂಖ್ಯೆಯನ್ನು ಹೊಂದಿರುವ ಈ ವಲಯವು ದೇಶದ ಜಿಡಿಪಿಯಲ್ಲಿ ೪.೧೧%ರಷ್ಟು ಪಾಲನ್ನು ಪಡೆಯುತ್ತದೆ. ಇದರೊಂದಿಗೆ ಕೃಷಿ, ಮೀನುಗಾರಿಕೆ, ಅರಣ್ಯ ವಲಯದ ಪಾಲು ೨೩%. ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ ಮತ್ತು ಮೊಟ್ಟೆಗಳ ಬೇಡಿಕೆಯು ೨೦೨೦ರ ವೇಳೆಗೆ ಮೂರುಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಈ ವಲಯದಲ್ಲಿನ ಬೆಳವಣಿಗೆ ಮತ್ತು ವಿಸ್ತರಣೆಗೆ ಅವಕಾಶಗಳನ್ನು ಒದಗಿಸುತ್ತದೆ.
ಮಹಿಳೆಯರ ಬದುಕಿಗೆ ಜಾನುವಾರುಗಳು ಭೂಮಿಯ ಅವಶ್ಯಕತೆಯಿಲ್ಲದೆ ಉತ್ಪಾದನೆ ನೀಡಬಲ್ಲ ಕುಟುಂಬದ ಆಹಾರ ಭದ್ರತೆಗೆ ನೆರವು ನೀಡುವ ಬಹುಮುಖ್ಯ ಆಸ್ತಿ. ಗ್ರಾಮೀಣ ಭಾಗಗಳಲ್ಲಿ ೭೦%ಕ್ಕೂ ಹೆಚ್ಚು ಜಾನುವಾರುಗಳನ್ನು ಸಣ್ಣ ರೈತರು ಮತ್ತು ಭೂಮಿಯಿಲ್ಲದ ಕೆಲಸದಾಳುಗಳೇ ಸಾಕುತ್ತಿರುವುದು.
ಓSSಔ (೨೦೧೪) ರ ಮಾಹಿತಿಯ ಪ್ರಕಾರ ಗ್ರಾಮೀಣ ಭಾಗಗಳಲ್ಲಿನ ಕೃಷಿ ಕಾರ್ಮಿಕರಲ್ಲಿ ೩.೫%ರಷ್ಟು ಮಂದಿ ಜಾನುವಾರು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಸಂಬAಧಿ ಚಟುವಟಿಕೆಗಳಲ್ಲಿ ಜಾನುವಾರು ಉತ್ಪಾದನೆಯು ಹೆಚ್ಚುಮಂದಿ ಮಹಿಳಾ ಕೆಲಸಗಾರರನ್ನೇ ಹೊಂದಿದೆ. ಗ್ರಾಮೀಣ ಕೆಲಸಗಾರರಲ್ಲಿ ೮.೧% ಮಹಿಳೆಯರು ಮತ್ತು ೧.೮% ಮಂದಿ ಪುರುಷರು ಜಾನುವಾರು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಜಾನುವಾರು ಉತ್ಪಾದನೆಯಲ್ಲಿ ತೊಡಗಿಸಿಕೊಂಡ ಪುರಷರಿಗಿಂತ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಗ್ರಾಮೀಣ ಮಹಿಳೆಯರಲ್ಲಿ ಜಾನುವಾರು ಉತ್ಪಾದನೆಯಲ್ಲಿ ೧೪.೭% ಮಂದಿ ಸ್ವಾವಲಂಬಿಗಳಾಗಿದ್ದರೆ ಪುರಷರು ಸಂಖ್ಯೆ ೨.೯%ರಷ್ಟು. ಇದು ಗ್ರಾಮೀಣ ಮಹಿಳೆಯರಿಗೆ ಕೃಷಿಯೊಂದಿಗೆ ಬಹುಮುಖ್ಯ ಗೃಹೋದ್ಯಮ ಎನ್ನುವುದನ್ನು ತೋರಿಸುತ್ತದೆ. ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಪುರುಷರು ಕೃಷಿಯೇತರ ಉದ್ಯೋಗಗಳನ್ನು ಅರಸಿ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಅಂತಿಮವಾಗಿ ಕೃಷಿ ಮತ್ತು ಜಾನುವಾರುಗಳ ನಿರ್ವಹಣೆಯ ಹೊಣೆ ಮಹಿಳೆಯರ ಹೆಗಲೇರಿದೆ.
ಜಾನುವಾರು ಉತ್ಪಾದನಾ ವಲಯದಲ್ಲಿ ನಿರ್ವಹಣೆ, ಕೂಲಿ, ತಿಳಿವಳಿಕೆ, ಒಡೆತನ ಇತ್ಯಾದಿಗಳಲ್ಲಿ ಪುರುಷರು ಮತ್ತು ಮಹಿಳಾ ಕೃಷಿಕರ ಪಾತ್ರಗಳ ನಿರ್ವಹಣೆ ಭಿನ್ನವಾದದ್ದು. ಆದ್ದರಿಂದ ಪುರುಷರು ಮತ್ತು ಮಹಿಳೆಯರು ವಿಭಿನ್ನ ತಿಳಿವಳಿಕೆ ಹೊಂದಿರುತ್ತಾರೆ. ನಿರ್ಧಿಷ್ಟ ಪಾತ್ರಗಳು, ವಿವಿಧ ಬಗೆಯ ಜಾನುವಾರುಗಳ ಒಡೆತನ, ವಿಭಿನ್ನ ಹಕ್ಕುಗಳು ಮತ್ತು ಉತ್ಪನ್ನಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಮೇಕೆ, ಕೋಳಿ ಮತ್ತು ಹಂದಿ ಸಾಕಣೆ ಮಾಡುತ್ತಾರೆ. ಇದರಲ್ಲಿ ಅವರೇ ಮಾರುವ ಹಾಗೂ ಮಾರಾಟದ ಲಾಭವನ್ನು ಬಳಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮಹಿಳೆಯರು ನಿರ್ವಹಣೆ ಮತ್ತು ಉತ್ಪಾದನೆಯಲ್ಲಿ ಪ್ರಮುಖಪಾತ್ರವನ್ನು ವಹಿಸಿದರೂ ಕೂಡ ಅವರ ಕೊಡುಗೆಯನ್ನು ಮಹತ್ವದ್ದಾಗಿ ಪರಿಗಣಿಸುವುದಿಲ್ಲ. ರಾಷ್ಟಿçÃಯ ನೀತಿಗಳನ್ನು ಯೋಜನೆಗಳನ್ನು ರೂಪಿಸುವಾಗ ಕೂಡ ಅವರುಗಳನ್ನು ಪರಿಗಣಿಸುವುದಿಲ್ಲ. ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಭಾಗವಹಿಸುವಿಕೆಯನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಗುರುತಿಸಿ ಯೋಜನೆಗಳನ್ನು ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಿರುವಂತೆ ಜಾನುವಾರು ಉತ್ಪಾದನಾ ವಲಯದಲ್ಲಿ ಈ ಕುರಿತು ನಡೆದಿರುವ ಸಂಶೋಧನೆ ಸೀಮಿತವಾದದ್ದು. ಈಂಔನ ವರದಿಯು ಕೃಷಿಯಲ್ಲಿ ಮಹಿಳೆಯರಿಗೆ ಪುರಷರಿಗಿರುವಷ್ಟೇ ಸಂಪನ್ಮೂಲಗಳನ್ನು ಒದಗಿಸಿದಲ್ಲಿ ಉತ್ಪಾದನೆ ಮತ್ತು ಫಲಿತಾಂಶವು ೧೦ – ೩೦% ಮತ್ತು ೪% ಹೆಚ್ಚುತ್ತದೆ ಎಂದು ವಾದಿಸುತ್ತದೆ. ಲಿಂಗಸAಬAಧಿ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವುದು ಸಂಶೋಧನೆಗೆ ಒಳನೋಟಗಳನ್ನು ಒದಗಿಸಲು, ಅಭಿವೃದ್ಧಿ ಸಾಧಿಸಲು ಮತ್ತು ನೀತಿಗಳನ್ನು ರೂಪಿಸಲು ಅತ್ಯಗತ್ಯ.
ಜಾನುವಾರು ಉತ್ಪಾದನಾ ವಲಯದಲ್ಲಿ ಮುಖ್ಯವಾಗಿ ಗಮನಹರಿಸಬೇಕಾದ ಲಿಂಗಸAಬAಧಿ ವಿಷಯಗಳಿವೆ. ಅವುಗಳೆಂದರೆ ಉತ್ಪಾದನೆಯ ಮೇಲೆ ನಿಯಂತ್ರಣ, ಉತ್ಪಾದನೆಯ ಸಂಪನ್ಮೂಲಗಳಾದ ಭೂಮಿ ಮತ್ತು ನೀರಿನ ಮೇಲಿನ ನಿಯಂತ್ರಣ, ಸೇವೆಗಳಾದ ನಗದು, ವಿಮೆ, ಮಾಹಿತಿ ಮಾರುಕಟ್ಟೆ ಇತ್ಯಾದಿ. ಡೈರಿ ಸಂಘಗಳಲ್ಲಿನ ಸದಸ್ಯತ್ವದ ನೀತಿಯನ್ನು ಗಮನಿಸಿದಾಗ ಲಿಂಗ ಸಂಬAಧಿ ಕುರುಡು ಕಣ್ಣಿಗೆ ರಾಚುವಂತೆ ಪ್ರತಿಫಲಿಸುವುದು. ಜಾನುವಾರು ಉತ್ಪಾದನೆಯಲ್ಲಿ ಶೇ.೯೦%ರಷ್ಟು ಕಾರ್ಮಿಕರು ಮಹಿಳೆಯರೇ ಆಗಿದ್ದರೂ ಕೂಡ ಡೈರಿ ಸಂಘಗಳಲ್ಲಿ ಅವರ ಸದಸ್ಯತ್ವ ಶೇ೨೫%ಗಿಂತ ಕಡಿಮೆ.
ಮಹಿಳೆಯರೇ ನಿರ್ವಹಣೆ ಮತ್ತು ಉತ್ಪಾದನೆಯಲ್ಲಿ ಪ್ರಮುಖರಾಗಿದ್ದರೂ ಕೂಡ ಅವರ ಕೊಡುಗೆಯನ್ನು ಕಡೆಗಣಿಸಲಾಗುತ್ತದೆ. ರಾಷ್ಟಿçÃಯ ನೀತಿಗಳನ್ನು ಯೋಜನೆಗಳನ್ನು ರೂಪಿಸುವಾಗ ಅವರುಗಳನ್ನು ಗುರುತಿಸುವುದಿಲ್ಲ.
ಲಿಂಗ ಮತ್ತು ಭಾರತದಲ್ಲಿನ ಪಶುಧನ ನೀತಿಗಳು
ಪಶುಧನ ನೀತಿಗಳನ್ನು ವಿಶ್ಲೇಷಿಸಿದಾಗ ನೀತಿಗಳಿಗೂ ವಾಸ್ತವಕ್ಕೂ ನಡುವೆ ಸಂಬAಧವಿಲ್ಲದಿರುವುದು ಕಂಡುಬರುತ್ತದೆ. ಅದರಲ್ಲೂ ಜಾನುವಾರು ಉತ್ಪಾದನೆಯಲ್ಲಿ ಮಹಿಳೆಯರು ಮತ್ತು ಪುರುಷರ ಕೊಡುಗೆಯನ್ನು ಗಮನಿಸಿದಾಗ ಇದು ಕಾಣುತ್ತದೆ. ಭಾರತದಲ್ಲಿ ೧೯೯೦ಕ್ಕೂ ಮುನ್ನ ಜಾನುವಾರು ಉತ್ಪಾದನಾ ವಲಯದಲ್ಲಿನ ನೀತಿ ಮತ್ತು ಕಾರ್ಯಕ್ರಮಗಳು “ಉತ್ಪಾದನಾ ಹೆಚ್ಚಳ”ದ ಮಾದರಿಯನ್ನು ಅನುಸರಿಸುತ್ತಿದ್ದವು. ೧೯೯೦ರ ನಂತರ ಪರಿಣಾಮಕಾರಿ ವಿಧಾನವನ್ನು ಆಧರಿಸಿ ರಚನಾತ್ಮಕ ಹೊಂದಾಣಿಕೆಯ ಮಾದರಿಯನ್ನು ಅನುಸರಿಸಲಾಯಿತು. ಅದೇನೇ ಆದರೂ ಎರಡೂ ಮಾರ್ಗಗಳೂ ಸಣ್ಣ ಉತ್ಪಾದಕರಿಗಾಗಲಿ ಅಥವಾ ಮಹಿಳೆಯರಿಗಾಗಲಿ ನೆರವು ನೀಡಲಿಲ್ಲ. ಈ ಅಂತರವನ್ನು ಪರಿಗಣಿಸಿ ಭಾರತ ಸರ್ಕಾರವು ಘಿIನೇ ಪಂಚವಾರ್ಷಿಕ ಯೋಜನೆ ೨೦೦೭-೨೦೧೨ರಲ್ಲಿ ‘ಒಗ್ಗೂಡುವಿಕೆ’ ‘ಸಮಾನ ಹಕ್ಕು’ ಇದನ್ನೊಳಗೊಂಡ ‘ಅಂತರ್ಗತ ಬೆಳವಣಿಗೆ’ ಎಂದು ಹೆಸರಿಸಲಾಯಿತು. ಇತ್ತೀಚಿನ ೨೦೧೩ರ ರಾಷ್ಟಿçÃಯ ಪಶುಧನ ನೀತಿಯಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ, ರೈತರ ಬದುಕಿಗೂ ನೆರವಾಗುವಂತೆ ಉತ್ಪಾದನೆಯನ್ನು ಸುಸ್ಥಿರವಾಗಿ ಹೆಚ್ಚಿಸುವುದು ಎಂದು ಉಲ್ಲೇಖಿಸಲಾಗಿದೆ. ಉತ್ಪಾದನೆಯಲ್ಲಿ ಸುಧಾರಣೆ ಅದರಲ್ಲೂ ಮಹಿಳೆಯರು ಮತ್ತು ಸಣ್ಣ ರೈತರಲ್ಲಿ ಎನ್ನುವುದು ಅದರ ಉದ್ದೇಶಗಳಲ್ಲೊಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ನೀತಿಯು ಮತ್ತಷ್ಟು ಮುಂದುವರೆದು ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಜಂಟಿ ಬಾಧ್ಯತಾ ಗುಂಪುಗಳು/ಸ್ವಸಹಾಯ ಗುಂಪುಗಳಿಗೆ ಸಾಂಸ್ಥಿಕ ಸ್ಥಾನಮಾನ ನೀಡಿ ಪ್ರಚುರಪಡಿಸಬೇಕು. ಹಿಂದುಳಿದವರು ಹಾಗೂ ಮುಂದುವರೆದವರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಇದು ಅಗತ್ಯ ಎನ್ನುತ್ತದೆ. “ಉತ್ಪಾದನೆಯ ಹೆಚ್ಚಳ ಮತ್ತು ಕ್ಷಮತೆ”ಯ ಮಾದರಿಯಿಂದ “ಅಂತರ್ಗತಗೊಳ್ಳುವಿಕೆ ಮತ್ತು ಸಮಾನಹಕ್ಕು”ವಿನೆಡೆಗೆ ಬದಲಾದದ್ದು ಜಾನುವಾರು ಉತ್ಪಾದನಾ ವಲಯದಲ್ಲಿನ ದೃಷ್ಟಿಕೋನ ಬದಲಾವಣೆಗೂ ಕಾರಣವಾಯಿತು. ಈ ವಲಯವನ್ನು ಬಡತನ ಕಡಿಮೆಗೊಳಿಸುವ ಹಾಗೂ ಅಭಿವೃದ್ಧಿಯನ್ನು ಪ್ರಚುರಪಡಿಸುವ ದಾರಿಯಾಗಿ ನೋಡುವಂತಾಯಿತು. ನೀತಿಗಳನ್ನು ಜಾರಿಗೆ ತರಬೇಕಿದ್ದ ಸಂಸ್ಥೆಗಳು ಹಾಗೂ ವಿತರಣಾ ವ್ಯವಸ್ಥೆಗಳು ಜಾನುವಾರು ಉತ್ಪಾದನಾ ವಲಯದಲ್ಲಿನ ನೀತಿಗಳಿಗೆ ತಕ್ಕಂತೆ ಅಂತರ್ಗತ ಬೆಳವಣಿಗೆಯ ಕುರಿತ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲಿಲ್ಲ. ಈ ಬದಲಾವಣೆಗಳನ್ನು ತರಲು ದೊಡ್ಡ ಮತ್ತು ಸಣ್ಣ ಮಟ್ಟದ ಸಂಸ್ಥೆಗಳಲ್ಲಿ ಅಂತರ್ಗತ ನೀತಿಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಆಗ ಅಂತರ್ಗತ ವಿಧಾನವೊಂದೇ ಪ್ರಸ್ತುತದಲ್ಲಿನ ಜಾನುವಾರು ಉತ್ಪಾದನಾ ವಲಯದಲ್ಲಿನ ಲಿಂಗ ಸಂಬAಧಿ ಸಮಸ್ಯೆಗಳನ್ನು ಪರಿಹರಿಸಬಲ್ಲುದೆ ಎನ್ನುವ ಪ್ರಶ್ನೆ ಏಳುತ್ತದೆ. ಪಶುಸಂಗೋಪನ ವಲಯಕ್ಕೆ ಸಂಬAಧಿಸಿದAತೆ ಭಾರತ ಸರ್ಕಾರದ ಹೊಸ ಕ್ರಮ ೨೦೧೪-೧೫ನೇ ಸಾಲಿನ ೧೨ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ರಾಷ್ಟಿçÃಯ ಪಶುಸಂಗೋಪನ ಅಭಿಯಾನವನ್ನು (ಓಚಿಣioಟಿಚಿಟ ಐivesಣoಛಿಞ ಒissioಟಿ – ಓಐಒ) ಆರಂಭಿಸಿದೆ. ೭ ಕೇಂದ್ರಸರ್ಕಾರ ಪ್ರಾಯೋಜಿತ ಹಾಗೂ ೭ ಕೇಂದ್ರ ವಲಯಗಳ ಯೋಜನೆಯನ್ನು ಸ್ವಲ್ಪ ಬದಲಾಯಿಸಿ ಓಐಒ ಅನ್ನು ರಚಿಸಲಾಗಿದೆ. ಇದು ಜಾನುವಾರು ಉತ್ಪದನಾ ವಲಯದಲ್ಲಿ ಮಹಿಳಾ ಕೃಷಿಕರ ಭಾಗವಹಿಸುವಿಕೆ ಕುರಿತಂತೆ ಹೊಸದೊಂದು ಷರತ್ತು ವಿಧಿಸಿದೆ. ಯೋಜನೆಯ ಕಾರ್ಯರೂಪಿ ಮಾರ್ಗದರ್ಶಕಸೂತ್ರಗಳಲ್ಲಿ ಹೇಳಿರುವಂತೆ ‘ರಾಜ್ಯಗಳು ಎಲ್ಲೆಲ್ಲೆ ಸಾಧ್ಯವೋ ಅಲ್ಲಲ್ಲಿ ೩೦% ಮಹಿಳೆಯರು ಅಭಿಯಾನದ ಯೋಜನೆಯಲ್ಲಿ ಫಲಾನುಭವಿಗಳಾಗುವಂತೆ ಮಾಡಬೇಕು.’
ಈ ಸಂದರ್ಭದಲ್ಲಿ ಹಲವು ದ್ವಿಪಕ್ಷೀಯ ದೇಣಿಗೆ ಸಂಸ್ಥೆಗಳ, ನಾಗರಿಕ ಸಮಾಜ ಸಂಸ್ಥೆಗಳ ಹಾಗೂ ಖಾಸಗಿ ಸಂಸ್ಥೆಗಳ ಯಶಸ್ವಿ ಪ್ರಯೋಗಗಳು ಅಥವ ಮಾದರಿಗಳನ್ನು ಒಳಗೊಳ್ಳಬೇಕು. ಇವು ಲಿಂಗಸAಬAಧಿ ದೃಷ್ಟಿಕೋನದಲ್ಲಿ ಅದರಲ್ಲೂ ಮಹಿಳೆಯರು ಮತ್ತು ಬಡವರನ್ನು ಜಾನುವಾರು ಉತ್ಪಾದನಾ ವಲಯದಲ್ಲಿ ಸೇರ್ಪಡೆಮಾಡಿಕೊಳ್ಳಲು ಅಗತ್ಯ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಈ ಕ್ರಮಗಳಿಂದಾಗಿ ಹೆಚ್ಚಿನ ಉತ್ಪಾದನೆಗೆ ತಂತ್ರಜ್ಞಾನದ ಬಳಕೆಯಲ್ಲಿ ಸುಧಾರಣೆ, ಆರ್ಥಿಕ, ಆರೋಗ್ಯ ಸೇವೆಗಳು, ವಿವಿಧ ಹಂತಗಳಲ್ಲಿ ಸಕ್ರಿಯ ಭಾಗವಹಿಸುವಿಕೆ, ಉತ್ಪಾದನಾ ಆರ್ಥಿಕತೆಯನ್ನು ಸಾಧಿಸಲು ಸಾಮೂಹಿಕ ಭಾಗವಹಿಸುವಿಕೆ ಮತ್ತು ಸಾಂಸ್ಥಿಕ ಗುಂಪುಗಳ ಮೂಲಕ ಮಾರಾಟ ಇತ್ಯಾದಿ ನೇತ್ಯಾತ್ಮಕ ಬದಲಾವಣೆಗಳು ಲಿಂಗಾಧಾರಿತ ಪಾತ್ರಗಳಲ್ಲಿ ಹಾಗೂ ವ್ಯಕ್ತಿ, ಮನೆ, ಸಮಾಜ ಮಟ್ಟದಲ್ಲಿ ಕಂಡುಬರುತ್ತವೆ. ಜಾನುವಾರು ಸಂಶೋಧನೆಯು ಲಿಂಗಸAಬAಧಿ ಸಮಸ್ಯೆಗಳನ್ನು ನಿವಾರಿಸಲು ಮತ್ತು ಜಾನುವಾರು ಉತ್ಪಾದನೆಯಲ್ಲಿ ಮಹಿಳೆಯರು ಮತ್ತು ಬಡವರ ಶ್ರಮವನ್ನು ಗುರುತಿಸಲು ಸಹಾಯಮಾಡುತ್ತದೆ. ಸಂಶೋಧನ ಸಂಸ್ಥೆಗಳಿAದ ಈ ರೀತಿಯ ವಿಮರ್ಶಾತ್ಮಕ ಒಳನೋಟಗಳು ಸಮಾನ ಅಭಿವೃದ್ಧಿ ಸಾಧಿಸುವಂತಹ ನೀತಿ ಸುಧಾರಣೆ ಮಾಡಲು ಅಗತ್ಯ.
ಆಕರ ಗ್ರಂಥಗಳು
Birthal, P.S, and Taneja V.K., Livestock Sector in India: Opportunities and Challenges for Small holders, 2016,
Paper presented at the International Workshop on ‘Smallholder Livestock Production in India: Opportunities and Challenges’; Indian Council for Agriculture Research and International Livestock Research Institute.
Kristjanson, P., Waters-Bayer, A., Johnson, N., Tipilda, A., Njuki, J., Baltenweck, I., Grace, D. and MacMillan, S.,
Livestock and women’s livelihoods: A review of the recent evidence, 2010, Discussion paper No. 20, ILRI.
Misra, S and Pica-Ciamarra, U., Policies and Narratives in Indian Livestock: Good Practices for Pro-poor
Change, 2010, PPLPI Working Paper No.50, FAO, Rome.
M Manjula
Principal Scientist
R Rengalakshmi
Director
K Thachinamurthy
Site Coordinator
Ecotechnology Programme Area
M.S.Swaminathan Resarch Foundation
3rd Cross Road, Taramani Institutional Area, Taramani,
Chennai – 600 113. Phone: 044-22541229/698
Web: www.mssrf.org



