ಮರೆತ ಧಾನ್ಯ ಮರಳಿ ಬಂತು – ಕೊರಲೆ

ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದ್ದ ಸಿರಿಧಾನ್ಯಗಳು ಮರಳಿ ಬಳಕೆಗೆ ಬರುತ್ತಿವೆ. ರೈತರು ಕೊರಲೆ ಕೃಷಿಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಈ ಪುಟ್ಟ ಧಾನ್ಯವನ್ನು ಹೆಚ್ಚು ಫಲವತ್ತಾಗಿರದ ಭೂಮಿಯಲ್ಲಿ ಕೂಡ ಅತಿ ಕಡಿಮೆ ನೀರನ್ನು ಬಳಸಿ ಬೆಳೆಯಬಹುದು. ಹವಾಮಾನ ವೈಪರಿತ್ಯದ ಸಂಕಷ್ಟಗಳಿಗೆ ಈ ಧಾನ್ಯವು ಅತ್ಯುತ್ತಮ ಪರಿಹಾರವಾಗಿದೆ. ಕೊರಲೆಯು ಹೆಚ್ಚು ಪೌಷ್ಟಿಕ ಆಹಾರವಾಗಿದ್ದು ಗ್ರಾಮೀಣ ಭಾಗದ ಬಡವರಲ್ಲಿನ ಅಪೌಷ್ಟಿಕತೆಯ ಸಮಸ್ಯೆಗೆ ಹಾಗೂ ಭಾರತದ ನಗರ ಮತ್ತು ಅರೆನಗರ ಪ್ರದೇಶಗಳಲ್ಲಿನ ಜನರ ಜೀವನಶೈಲಿಯಿಂದ ಹುಟ್ಟಿಕೊಂಡಿರುವ ಕಾಯಿಲೆಗಳಿಗೆ ಉತ್ತಮ ಪರಿಹಾರವಾಗಿದೆ.

ಕೊರಲೆ  ಎಂದು ಕರೆಯಲಾಗುವ ಈ ಧಾನ್ಯವು ಸಿರಿಧಾನ್ಯಗಳಲ್ಲೇ ಅಪರೂಪವಾದುದು. ಮೂಲತಃ ಇದು ಭಾರತದ ಬೆಳೆ. ಒಣಭೂಮಿಯಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಕರ್ನಾಟಕ – ಆಂಧ್ರದ ಗಡಿಪ್ರದೇಶಗಳಲ್ಲಿ, ಕರ್ನಾಟಕದ ತುಮಕೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಇದು ಬೆಳೆಯುತ್ತದೆ.

ಕನ್ನಡದಲ್ಲಿ ಕೊರಲೆ ಮತ್ತು ತೆಲುಗಿನಲ್ಲಿ ಅಂದಕರ‍್ರ ಎಂದು ಕರೆಯುವರು. ಈ ಧಾನ್ಯವನ್ನು ಉತ್ತರ ಭಾರತದ ಬುಂದೇಲಖAಡದಲ್ಲಿ ಸ್ವಲ್ಪ ಮಟ್ಟಿಗೆ ಬಳಸುವರು ಹಾಗೂ ಬೆಳೆಯುವರು.

ಕೊರಲೆಯು ಬರ ಹಾಗೂ ಉಷ್ಣಾಂಶವನ್ನು ಸಹಿಸುವ ಶಕ್ತಿ ಹೊಂದಿದೆ. ಆದರೆ ಇದನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲೂ ಬೆಳೆಯಬಹುದು. ಕೊರಲೆಯಲ್ಲಿನ ತಾಳಿಕೆಯ ಗುಣವೇ ಅದನ್ನು ಇತರ ಧಾನ್ಯಗಳಿಗಿಂತ ಭಿನ್ನವಾಗಿಸಿದೆ. ನೆರಳನ್ನು ಬಯಸುವಂತಹ ಬೆಳೆ ಹುಣಸೇಮರದಡಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹಾಗಾಗಿಯೇ ಕೊರಲೆಯನ್ನು ಹುಣಸೇ ಮರದಡಿಯಲ್ಲಿ ಬೆಳೆಸುವ ಪರಿಪಾಠವನ್ನು ಕರ್ನಾಟಕದ ಪಾವಗಡ, ಮಧುಗಿರಿ ಮತ್ತು ಶಿರಾ ಭಾಗದ ಜನರಲ್ಲಿ ಕಾಣಬಹುದು. ಈ ಪ್ರದೇಶಗಳಲ್ಲಿ ಸಿರಿಧಾನ್ಯಗಳು ಇಲ್ಲಿನ ಜನರ ಪ್ರಧಾನ ಆಹಾರ. ಈ ಬೆಳೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಬೆಳೆಯಬಲ್ಲುದು. ಯಾವುದೇ ಹವಾಮಾ£ದಲ್ಲೂ ಬದುಕಿ ಬೆಳೆಯುವ ಗುಣ ಹೊಂದಿದೆ. ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಮೌಲ್ಯ ಇರುವುದರಿಂದ ಹಾಗೂ ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಸಾಮರ್ಥ್ಯವಿರುವುದರಿಂದ ವಿಸ್ತಾರವಾಗಿ ಹರಡಿ ಬೆಳೆಯುತ್ತದೆ.

ಬಹುತೇಕ ಪ್ರದೇಶಗಳಲ್ಲಿ ಇದನ್ನು ಏಪ್ರಿಲ್ ಮಧ್ಯಭಾಗದಿಂದ ಆಗಸ್ಟ್ ಮಧ್ಯಭಾಗದವರೆಗೆ ಬಿತ್ತನೆ ಮಾಡಲಾಗುತ್ತದೆ. ಈ ಅವಧಿಯ ನಂತರದಲ್ಲಿ ಬಿತ್ತಿದರೆ ಫಸಲು ಕಡಿಮೆಯಾಗುತ್ತದೆ. ಇದನ್ನು ಏಕಬೆಳೆಯಾಗಿ ಬಿತ್ತಬಹುದು ಇಲ್ಲವೇ ಇತರೇ ಆ ಕಾಲದಲ್ಲಿ ಬೆಳೆಯುವ ಇತರೆ ಬೆಳೆಗಳ ಜೊತೆಯಲ್ಲಿ ಬಿತ್ತಬಹುದು. ಇತರ ಸಿರಿಧಾನ್ಯಗಳ ಜೊತೆಯಲ್ಲಿ ಬೆಳೆಯುವುದು ಉತ್ತಮ ಆಯ್ಕೆ. ತೊಗರಿಯನ್ನು ಮಿಶ್ರಬೆಳೆಯಾಗಿಯೇ ಬೆಳೆಯಲಾಗುತ್ತದೆ. ಕೊರಲೆಯ ಪ್ರತಿ ೧೨ ಸಾಲುಗಳ ನಡುವೆ ಇದನ್ನು ಬಿತ್ತುವರು.

ಕೊರಲೆಯು ಬಹುಬೇಗ ಬೆಳೆದು ಫಸಲು ನೀಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಈ ಬೆಳೆಯನ್ನು ೭೦ – ೮೦ ದಿನಗಳಲ್ಲೇ ಕಟಾವು ಮಾಡಬಹುದು. ಕೆಲವು ರೈತರು ಮೇವಿಗಾಗಿ ಮಾತ್ರ ಇದನ್ನು ಬೆಳೆಯುತ್ತಾರೆ. ಹಾಗಾಗಿ ೫೦ ದಿನಗಳಿಗೆ ಕಟಾವು ಮಾಡುತ್ತಾರೆ. ಇಷ್ಟು ಕಡಿಮೆ ಅವಧಿಯಲ್ಲೇ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುವುದರಿAದ ತಡವಾಗಿ ಅಂದರೆ ಆಗಸ್ಟ್ ತಿಂಗಳಲ್ಲಿ ಬಿತ್ತಿದರೂ ಕೈತುಂಬ ಫಸಲನ್ನು ನೀಡುತ್ತದೆ. ಮಳೆ ತಡವಾದರೂ ತಾಳಿಕೊಳ್ಳುವ ಶಕ್ತಿ ಇದಕ್ಕಿದೆ. ಬಿತ್ತನೆ ಸಮಯದಲ್ಲಿ ಸ್ವಲ್ಪ ತೇವಾಂಶ ನಂತರದಲ್ಲಿ ಒಂದೋ ಎರಡೋ ಮಳೆಯಾದರೂ ಸಾಕು ಬೆಳೆದು ಫಸಲನ್ನು ನೀಡುತ್ತದೆ. ಕೊರಲೆಯನ್ನು ಕೂರಗೆಯ ಮೂಲಕ ಬಿತ್ತನೆ ಮಾಡಬಹುದು ಇಲ್ಲವೇ ಸುಮ್ಮನೆ ಚೆಲ್ಲಿದರೂ ಸಾಕು ಬೆಳೆದುಬಿಡುತ್ತದೆ. ಪ್ರತಿ ಎಕರೆಗೆ ೭ ರಿಂದ ೮ ಕ್ವಿಂಟಾಲ್ ಕಾಳುಗಳು ಸಿಗುತ್ತದೆ. ಅಲ್ಲದೆ ಜಾನುವಾರುಗಳಿಗೆ ಪ್ರತಿ ಎಕರೆಗೆ ನಾಲ್ಕು ಟ್ರಾö್ಯಕ್ಟರ್‌ಗಳಷ್ಟು ಮೇವು ಒದಗಿಸುತ್ತದೆ.

ಕೊರಲೆ ಪೌಷ್ಟಿಕವಾದ ಆಹಾರ ಮಾತ್ರವಲ್ಲ ಬಹಳ ರುಚಿಕರವಾದ ಆಹಾರ ಕೂಡ. ಕೊರಲೆಯಲ್ಲ್ಲಿ ಅಗತ್ಯವಾದ ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಗ್ಲೂಟೆನ್ ಅಂಶ ಇರುವುದಿಲ್ಲ. ಇತರೆ ಕಾಳುಗಳಿಗೆ ಹೋಲಿಸಿದಾಗ ಇದರಲ್ಲಿ ನಾರಿನಂಶ ಹೆಚ್ಚಾಗಿದೆ. ಕೊರಲೆಯಲ್ಲಿ ೧೨.೫% ನಾರಿನಾಂಶವಿರುವುದರಿAದ ಜೀವನಶೈಲಿಯ ವಿಧಾನಗಳಿಂದುAಟಾಗುವ ಖಾಯಿಲೆಗಳಿಗೆ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಸಿರಿಧಾನ್ಯಗಳನ್ನು ನಿತ್ಯ ಬಳಸುವವರಲ್ಲಿ ಹೃದಯಸಂಬAಧಿ ಸಮಸ್ಯೆಗಳು, ಅಲ್ಸರ್ ಹಾಗೂ ಡಯಾಬಿಟೀಸ್ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ ಎಂಬುದು ತಿಳಿದುಬಂದಿದೆ.

ಕೊರಲೆ ಅತಿ ವೇಗವಾಗಿ ಬೆಳೆದು ಫಲ ನೀಡುವುದಕ್ಕೆ ಹೆಸರುವಾಸಿ. ಇದನ್ನು ಇನ್ನೂ ಹಲವಾರು ಅಗತ್ಯಗಳಿಗಾಗಿ ಬೆಳೆಯಲಾಗುತ್ತದೆ. ತೆಂಗಿನ ತೋಟ ಮತ್ತಿತರ ತೋಟಗಳಲ್ಲಿ ಮಣ್ಣಿನ ಸವಕಳಿಯನ್ನು ನಿಯಂತ್ರಿಸಿ ಇಳುವರಿ ಹೆಚ್ಚಿಸಲು ಬೆಳೆಯಲಾಗುತ್ತದೆ. ಮಣ್ಣಿನಲ್ಲಿರುವ ಹುಳಭಾದೆಯನ್ನು ಕಡಿಮೆಗೊಳಿಸುತ್ತದೆ. ಇದರ ಎಲೆಗಳು ಚೂಪಾಗಿರುವುದರಿಂದ ತೋಟ/ಜಮೀನನಲ್ಲಿ ಇಲಿಗಳು ನುಗ್ಗುವುದು ಕಡಿಮೆಯಾಗುತ್ತದೆ. ಆದ್ದರಿಂದಲೇ ರೈತರು ತೆಂಗು ಹಾಗೂ ಇನ್ನಿತರ ಮರಗಳಿಗೆ ಕೀಟಭಾದೆಯನ್ನು ತಡೆಯಲೆಂದೇ ಇದನ್ನು ಬೆಳೆಯುತ್ತಾರೆ.

ಸಿರಿಧಾನ್ಯಗಳು ಮರಳಿಬಂದಿವೆ

ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸತತ ಮೂರು ವರ್ಷಗಳ ಕಾಲ ಬರವು ಪೀಡಿಸಿದ್ದರಿಂದ ಈ ಭಾಗಗಳಲ್ಲಿ ಮತ್ತೆ ಸಿರಿಧಾನ್ಯಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಮಂಡ್ಯ ರೈತರು ತಮ್ಮ ಬೆಳೆಗಳಿಗೆ ಯಾವಾಗಲೂ ಕೆಆರ್‌ಎಸ್‌ನ ನೀರನ್ನು ಆಶ್ರಯಿಸಿದ್ದರು. ಆದರೆ ಕಳೆದ ವರ್ಷಗಳಲ್ಲಿ ನೀರಿನ ಶೇಖರಣೆಯಲ್ಲಿ ಅಭಾವವುಂಟಾದ್ದರಿAದ ಅವರು ಅನಿವಾರ್ಯವಾಗಿ ನೀರಾವರಿ ಬೆಳೆಗೆ ಬದಲಾಗಿ ಇತರೆ ಬೆಳೆಗಳ ಕಡೆ ಕಣ್ಣುಹಾಯಿಸುವಂತಾಯಿತು. ೨೦೧೫ರಲ್ಲಿ ಸಹಜ ಸಮೃದ್ಧದವರು ಕಾರ್ಯಾಗಾರ ಹಾಗೂ ಸಿರಿಧಾನ್ಯ ಮೇಳವನ್ನು ಆಯೋಜಿಸಿದ್ದರು. ಇದರಿಂದಾಗಿ ರೈತರು ನೀರಾವರಿ ಬೆಳೆಗಳಾದ ಕಬ್ಬು ಮತ್ತು ಭತ್ತಕ್ಕೆ ಬದಲಾಗಿ ಬೆಳೆಯಬಹುದಾದ ಇತರ ಬೆಳೆಗಳ ಬಗ್ಗೆ ಯೋಚಿಸುವಂತಾಯಿತು. ಕಾರ್ಯಾಗಾರದಲ್ಲಿ ರೈತರಿಗೆ ಸಿರಿಧಾನ್ಯಗಳು ಬೇಸಿಗೆಯಲ್ಲಿ/ಒಣಹವೆಯಲ್ಲಿ ಬೆಳೆಯಬಹುದಾದ ಬದಲಿಬೆಳೆ ಎಂದು ಪರಿಚಯಿಸಲಾಯಿತು. ಸಿರಿಧಾನ್ಯಗಳಲ್ಲಿ ಹಲವು ಬಗೆಗಳಿವೆ ಅದರಲ್ಲಿ ಮುಖ್ಯವಾಗಿ ಕೊರಲೆ ಬರವನ್ನು ತಾಳಿಕೊಳ್ಳುವ ಗುಣ ಹೊಂದಿದೆ. ರೈತರು ಸಿರಿಧಾನ್ಯಗಳಲ್ಲಿ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿ ದಾಖಲೆ ಪ್ರಮಾಣದ ಇಳುವರಿಯನ್ನು ಪಡೆದಿದ್ದಾರೆ.

ಕರ್ನಾಟಕದಲ್ಲಿ ೨೦೦೦ಕ್ಕೂ ಹೆಚ್ಚು ರೈತರು ಕೊರಲೆಯ ಹಲವು ವೈಶಿಷ್ಟö್ಯಗಳನ್ನು ತಿಳಿದು ಅದನ್ನು ಬೆಳೆಯುತ್ತಿದ್ದಾರೆ.

Phoಣo : ಕೊರಲೆಯು ನೈಸರ್ಗಿಕವಾಗಿ ಹೆಚ್ಚಿನ ನಾರಿನಂಶ ಹೊಂದಿದ್ದು ಪೌಷ್ಟಿಕ ಆಹಾರವಾಗಿದೆ.
“ಸಿರಿಧಾನ್ಯಗಳಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಭತ್ತಕ್ಕೆ ಹೋಲಿಸಿದಾಗ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ನಾನು ಕೊರಲೆಯನ್ನು ಬಿತ್ತಿದೆ. ಬೇಸಿಗೆ ಹೆಚ್ಚಿತ್ತು ಮತ್ತು ಮಣ್ಣಿನಲ್ಲಿ ಹೆಚ್ಚಿನ ತೇವಾಂಶವಿರಲಿಲ್ಲ. ಹಾಗಾಗಿ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಿರಲಿಲ್ಲ. ಆದರೆ ನನಗೆ ಆಶ್ಚರ್ಯವಾದದ್ದು ಈ ಬೆಳೆ ಬರವನ್ನು ತಾಳಿಕೊಂಡಿತಲ್ಲದೆ ಒಳ್ಳೆಯ ಇಳುವರಿಯನ್ನು ಕೊಟ್ಟಿತು. ಅಲ್ಲದೇ ಈ ಬೆಳೆಗಳಿಗೆ ಯಾವುದೇ ಕೀಟ ಇಲ್ಲವೇ ರೋಗಭಾದೆ ತಟ್ಟಲಿಲ್ಲ.” ಎಂದು ಹಳೇಬೂದನೂರಿನ ರೈತ ಪುಟ್ಟಸ್ವಾಮಿಯವರು ಹೇಳಿದರು. ಮಂಡ್ಯ ಭಾಗದಲ್ಲಿ ಹಿಂದೆ ಸಿರಿಧಾನ್ಯಗಳು ಪ್ರಧಾನ ಆಹಾರವಾಗಿತ್ತು. ಕಳೆದ ಮೂರು ನಾಲ್ಕು ದಶಕಗಳಿಂದ ಅವುಗಳ ಜಾಗದಲ್ಲಿ ಅಕ್ಕಿ ಹಾಗೂ ಗೋಧಿಯನ್ನು ಬಳಸಲಾಗುತ್ತಿದೆ. ಭತ್ತದ ಕಟಾವಿನ ನಂತರ ಮಣ್ಣಿನಲ್ಲಿ ಉಳಿಯುವ ತೇವಾಂಶದಲ್ಲೇ ಈ ಬೆಳೆಗಳನ್ನು ಬೆಳೆಯಬಹುದು ಎಂದು ರೈತರು ಕಂಡುಕೊAಡಿದ್ದಾರೆ.

ಮAಡ್ಯ ಜಿಲ್ಲೆಯ ಗೂಳೂರುದೊಡ್ಡಿಯ ಸಿ.ಪಿ. ಕೃಷ್ಣ ಅವರಿಗೂ ಸಹ ಇದೇ ಅನುಭವವಾಗಿದೆ. “ ಇದನ್ನು ಬೆಳೆಯಲು ಬೀಜ ಕೊಳ್ಳಲು ಹಣ ಖರ್ಚಾದದ್ದು ಬಿಟ್ಟರೆ ಯಾವುದೇ ಗೊಬ್ಬರವಾಗಲಿ ಕೀಟನಾಶಕವಾಗಲಿ ಬಳಸಲಿಲ್ಲ. ಭೂಮಿಯಲ್ಲಿನ ತೇವಾಂಶವನ್ನು ಹೀರಿಕೊಂಡೇ ಇದು ಚೆನ್ನಾಗಿ ಬೆಳೆದು ಒಳ್ಳೆಯ ಇಳುವರಿಯನ್ನು ಕೊಟ್ಟಿದೆ. ನಮಗೀಗ ಇದನ್ನು ಬೆಳೆಯುವುದರಿಂದ ಲಾಭವಿದೆ ಎನ್ನುವುದು ಅರ್ಥವಾಗಿದೆ. ನಮ್ಮ ರೈತರು ನೀರಿನ ಅಭಾವದ ಸಮಯದಲ್ಲಿ ಈ ಒಣಭೂಮಿಯ ಬೆಳೆಗಳನ್ನು ಬೆಳೆಯುವುದು ಸೂಕ್ತ” ಎಂದು ಹೇಳಿದರು.

ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಹೆಣ್ದೊರೆ ಗ್ರಾಮದ ರಘು ಅವರು ಕೊರಲೆಯನ್ನು ಜನಪ್ರಿಯಗೊಳಿಸಲು ಶ್ರಮವಹಿಸುತ್ತಿದ್ದಾರೆ. ಅವರನ್ನು ‘ಕೊರಲೆ ರಘು’ ಎಂದೇ ಕರೆಯುವರು. ಕೊರಲೆಯನ್ನು ಬೆಳೆಯುವುದರೊಂದಿಗೆ ರಘು ಬೀಜಗಳ ಪೂರೈಕೆ, ಮೌಲ್ಯವೃದ್ಧಿ, ಮಾರಾಟಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. “ಕೊರಲೆ ಬೆಳೆಯಲು ತಗಲುವ ವೆಚ್ಚ ಅತ್ಯಲ್ಪ. ಕಡಿಮೆ ಬಂಡವಾಳ ಹಾಕಿ ರೈತರು ಅತಿಹೆಚ್ಚು ಲಾಭಗಳಿಸಬಹುದು” ಎಂದು ಅವರು ಹೇಳುತ್ತಾರೆ.

ಕೊರಲೆಯು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕೂಡ ಪ್ರಸಿದ್ಧವಾಗುತ್ತಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹನುಮನಹಳ್ಳಿ ಮತ್ತು ಮತ್ತಿಘಟ್ಟ ಹಳ್ಳಿಯ ರೈತರು ಕೊರಲೆ ಬೆಳೆಯಲು ಆರಂಭಿಸಿದ್ದಾರೆ. ನೆರಳಲ್ಲಿ ಕೂಡ ಬೆಳೆಯುವ ಗುಣ ಹೊಂದಿರುವುದರಿAದ ಕೊಪ್ಪಳ ಭಾಗದ ರೈತರು ಕೂಡ ಕಳೆದ ಮೂರು ವರ್ಷಗಳಿಂದ ಇದನ್ನು ಬೆಳೆಯಲು ಆರಂಭಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ೨೦೦೦ಕ್ಕಿಂತ ಹೆಚ್ಚು ರೈತರು ಕೊರಲೆಯನ್ನು ಬೆಳೆಯಲಾರಂಭಿಸಿದ್ದಾರೆ.

ತoತ್ರಜ್ಞಾನ ಸುಧಾರಣೆಯಲ್ಲಿರುವ ಸವಾಲುಗಳು

ಹವಾಮಾನದಲ್ಲಿನ ಬದಲಾವಣೆಯಿಂದಾಗಿ ರೈತರು ಕೊರಲೆಯನ್ನು ಬದಲಿಬೆಳೆಯಾಗಿ ಬೆಳೆಯಬಹುದು. ಕೊರಲೆಯನ್ನು ಬೆಳೆಯುವುದು ಸುಲಭ ಆದರೆ ಅದರ ಹೊಟ್ಟು/ಹೊರಕವಚ ಹೆಚ್ಚು ಗಟ್ಟಿಯಾದ್ದರಿಂದ ಅದರ ಸಂಸ್ಕರಣೆ ಕಷ್ಟ. ಹಾಗಾಗಿ ರೈತರು ಒಂದು ಕ್ವಿಂಟಾಲ್ ಕೊರಲೆ ಬೀಜದಿಂದ ೪೦ ರಿಂದ ೫೦ ಕೆಜಿಯಷ್ಟು ಬೀಜಗಳನ್ನು ಮಾತ್ರ ಪಡೆಯುವರು. ಮೊದಲು ಕೊರಲೆಯ ಹೊಟ್ಟನ್ನು ಬೀಸುವಕಲ್ಲಿನ ಸಹಾಯದಿಂದ ಬೇರ್ಪಡಿಸುತ್ತಿದ್ದರು. ಆದರೆ ಇಂದು ಬೀಸುವಕಲ್ಲುಗಳು ಬಳಕೆಯಲ್ಲಿ ಇಲ್ಲವಾದ್ದರಿಂದ ರಾಗಿ ಗಿರಣಿಗಳಲ್ಲೇ ಸಂಸ್ಕರಿಸಲಾಗುತ್ತಿದೆ. ಈ ಕಾಳುಗಳು ಅತಿಸಣ್ಣ ಗಾತ್ರದ್ದಾಗಿರುವುದರಿಂದ ಇವುಗಳನ್ನು ಈಗಿರುವ ಗಿರಣಿಗಳಲ್ಲಿ ಸಂಸ್ಕರಿಸುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಸ್ಕರಣೆಯ ನಂತರವೂ ಅಕ್ಕಿಯ ಮೇಲೆ ಸ್ವಲ್ಪ ಹೊಟ್ಟು ಉಳಿದುಬಿಡುತ್ತದೆ. ಇಂತಹವನ್ನು ಗಾಳಿಯಂತ್ರಗಳನ್ನು ಬಳಸಿ ಬೇರ್ಪಡಿಸಲಾಗುತ್ತದೆ. ಕೊರಲೆಯನ್ನು ಬೆಳೆಯುವ ರೈತರಿಗೆ ಸಂಸ್ಕರಣೆ ಎನ್ನುವುದು ದೊಡ್ಡ ಸಮಸ್ಯೆಯಾಗಿರುವುದರಿಂದ ಕೊರಲೆಯ ಸಂಸ್ಕರಣೆಗೆ ಸೂಕ್ತವಾದ ಯಂತ್ರಗಳನ್ನು ರೂಪಿಸಬೇಕು. ಮೂವತ್ತು ವರ್ಷಗಳ ಹಿಂದೆ ನೆಲೆಗಡಲೆ ಕೊರಲೆಯ ಬದಲಿಗೆ ಬಳಕೆಗೆ ಬಂದಾಗ ಅzರ ಸಂಸ್ಕರಣೆಗೆ ಹೊಂದುವAತಹ ಯಂತ್ರಗಳು ಬಹುಬೇಗ ಸಿದ್ಧಗೊಂಡಿದ್ದರಿAದ ಕೊರಲೆ ಬೆಳೆದವರಿಗಿಂತ ನೆಲಗಡಲೆ ಬೆಳೆದವರು ಹೆಚ್ಚು ಆದಾಯವನ್ನು ಗಳಿಸುವಂತಾಯಿತು.

ಕರ್ನಾಟಕದಲ್ಲಿನ ೨೦೦೦ಕ್ಕೂ ಹೆಚ್ಚು ರೈತರು ಕೊರಲೆಯ ಬಹುಪಯೋಗಿ ಕಾರಣಗಳಿಂದಾಗಿ ಇದನ್ನು ಬೆಳೆಯುತ್ತಿದ್ದಾರೆ.

ತನ್ನಲ್ಲಿನ ಹಲವು ಲಾಭಗಳು ಹಾಗೂ ಅದರಿಂದ ಗಳಿಸಿದ ಪ್ರಸಿದ್ಧಿಯ ಹೊರತಾಗಿಯೂ ಕೊರಲೆಯನ್ನು ಕೆಲವು ಭಾಗಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಇದನ್ನು ಬೆಳೆಯುವವರ ಸಂಖ್ಯೆ ಕಡಿಮೆಯಿದ್ದು ಈ ಬೆಳೆ ಅಳಿವಿನಂಚಿನಲ್ಲಿದೆ. ಸಂರಕ್ಷಣೆ, ಪ್ರಚಾರ ಹಾಗೂ ಸಂಸ್ಕರಣೆ ಸುಲಭವಾಗಿಸುವ ಯಂತ್ರದ ಆವಿಷ್ಕಾರಗಳು ಕೊರಲೆಯನ್ನು ಉಳಿಸಿಕೊಳ್ಳಲು ನೆರವಾಗುವುದು. ಇದರಿಂದ ಆಹಾರಭದ್ರತೆ, ಅಪೌಷ್ಟಕತೆ, ಪ್ರತಿಕೂಲಹವಾಮಾನ ಬದಲಾವಣೆ ಈ ಸಮಸ್ಯೆಗಳನ್ನು ಪರಿಹರಿಸಿ ರೈತರ ಬದುಕನ್ನು ಸುಭದ್ರಗೊಳಿಸಬಲ್ಲದು.

Krishna Prasad G
Sahaja Samrudha
No 7, 2nd Cross, 7th Main, Sulthanpalya,
Bengaluru-560032
E-mail: sahajaindia@gmail.com

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp