ರೈತರ ಆವಿಷ್ಕಾರಗಳು ಹವಾಮಾನ ಬದಲಾವಣೆ/ವೈಪರಿತ್ಯಗಳ ವಿರುದ್ಧ ಹೋರಾಡಲು ಸುಸ್ಥಿರ ಪರಿಹಾರಗಳು

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿರುವ ರೈತರು ಹವಾಮಾನ ಬದಲಾವಣೆಗಳಿಂದುAಟಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹೊಸ ವಿಧಾನಗಳನ್ನು ಆವಿಷ್ಕರಿಸಿಕೊಳ್ಳುತ್ತಿದ್ದಾರೆ ಹಾಗೂ ಅಳವಡಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಹೊಸತನ್ನು ಆವಿಷ್ಕರಿಸುವ ರೈತರು ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ.

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಅರ್ಧದಷ್ಟು ಭಾಗ ಸರ್ಕಾರದ ಸಂರಕ್ಷಿತ ಅರಣ್ಯ. ಈ ಭಾಗಗಳಲ್ಲಿನ ಬಹುತೇಕ ಹಳ್ಳಿಗಳು ತಲುಪಲು ಅಸಾಧ್ಯವಾದಷ್ಟು ಒಳಭಾಗಗಳಲಿದ್ದು ಅಲ್ಲಿ ಮೂಲಭೂತ ಸೌಕರ್ಯಗಳು ಕೂಡ ಇಲ್ಲ. ಅಲ್ಲಿನ ಸ್ಥಳೀಯ ಅವಶ್ಯಕತೆಗಳು ಕೂಡ ಎಲ್ಲ ವಲಯಗಳಿಂದ ನಿರ್ಲಕ್ಷö್ಯಕ್ಕೊಳಗಾಗಿವೆ. ಇಲ್ಲಿನ ಮಾರುಕಟ್ಟೆ ಸೀಮಿತವಾಗಿರುವುದರಿಂದ ಖಾಸಗಿ ವಲಯಗಳು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವುದರಲ್ಲಾಗಲಿ, ಮಾರುಕಟ್ಟೆಯ ತಂತ್ರಜ್ಞಾನವನ್ನಾಗಲಿ ಉತ್ಪನ್ನಗಳನ್ನಾಗಲಿ ಇಲ್ಲಿಗೆ ಒದಗಿಸುವಲ್ಲಿ ಆಸಕ್ತವಾಗಿಲ್ಲ. ಹಾಗಾಗಿ ಇಲ್ಲಿನ ರೈತರಿಗೆ ಬದುಕುಳಿಯಲು ಇರುವ ಒಂದೇ ಮಾರ್ಗ ತಾವೇ ಸ್ವತಃ ಪರಿಹಾರಗಳನ್ನು ಕಂಡುಕೊಳ್ಳುವುದು ಹೊಸ ಆವಿಷ್ಕಾರಗಳನ್ನು ಮಾಡುವುದು ಹಾಗೂ ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಹೆಚ್ಚಿಸಿಕೊಳ್ಳುವುದು.

ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ  ಕೇರಳದ ಪ್ರಸಿದ್ಧವಾದ ಸ್ವಯಂಸೇವಾ ಸಂಸ್ಥೆ. ಇದು ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿನ ಬುಡಕಟ್ಟು ಪಂಗಡಗಳು, ನಿರ್ಲಕ್ಷಿತ ರೈತರು ಹಾಗೂ ವಲಸಿತ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿವೆ. ಕಳೆದ ೧೮ ವರ್ಷಗಳಿಂದ ಈ ಸಂಸ್ಥೆಯು ರೈತರಿಗೆ ಸಂಬAಧಿಸಿದ ಆವಿಷ್ಕಾರಗಳ ಕ್ಷೇತ್ರಗದಲ್ಲಿ ಕೆಲಸ ಮಾಡುತ್ತಿದೆ. ಇದು ಕೇರಳದಲ್ಲಿನ ಹಲವು ಪ್ರದೇಶಗಳ ೧೦೦೦ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಗುರುತಿಸಿ ದಾಖಲಿಸಿದೆ. ಸಸ್ಯ ವೈವಿಧ್ಯಗಳು, ಬಿತ್ತನೆಯ ವಿಧಾನಗಳು, ಕೃಷಿಆರ್ಥಿಕ ಕ್ರಮಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಕೀಟ ಹಾಗೂ ರೋಗ ನಿರ್ವಹಣೆ, ಕಟಾವು, ಕಟಾವಿನ ನಂತರದ ಸಂಸ್ಕರಣ ವಿಧಾನಗಳು ಇತ್ಯಾದಿಗಳನ್ನು ಇದು ಒಳಗೊಂಡಿದೆ.

ಈ ದಾಖಲೀಕರಣವು ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮವನ್ನು ತಗ್ಗಿಸುವಂತಹ ರೈತರ ಹಾಗೂ ಸ್ಥಳೀಯ ಸಮುದಾಯಗಳ ನಿರ್ದಿಷ್ಟ ಆವಿಷ್ಕಾರಗಳನ್ನು ಒಳಗೊಂಡಿದೆ. ಸ್ಥಳೀಯ ನಿರ್ಧಿಷ್ಟ ತಳಿಗಳನ್ನು ಗುರುತಿಸಿ ಆಯ್ಕೆ ಮಾಡುವುದು, ಬರವನ್ನು ತಾಳಿಕೊಳ್ಳುವು ಗುಣ ಹೊಂದಿರುವ ಆದರೆ ಕಡಿಮೆ ಬಳಕೆಯಲ್ಲಿರುವ ಬೆಳೆಗಳು, ವೈವಿಧ್ಯಮಯ ಬೆಳೆಗಳು ಹಾಗೂ ವಿವಿಧ ಬೆಳೆಗಳನ್ನು ಒಟ್ಟಿಗೆ ಬೆಳೆವುದು ಇವು ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುವ ರೈತರು ಅನುಸರಿಸುವ ಕೆಲವು ಕ್ರಮಗಳು.

ಸ್ಥಳೀಯ ನಿಧಿಷ್ಟ ಬೆಳೆಗಾರರ ಆಯ್ಕೆ ಮತ್ತು ಪ್ರಚಾರ

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಅದರಲ್ಲೂ ಇಡುಕ್ಕಿ ಜಿಲ್ಲೆಯಲ್ಲಿನ ರೈತರು ಮೆಣಸು, ಏಲಕ್ಕಿ, ಕಾಫಿ, ರಬ್ಬರ್, ಟೀ, ಮರಗೆಣಸು ಮತ್ತು ಭತ್ತವನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಇಡುಕ್ಕಿಯ ಗುಡ್ಡಗಾಡು ಪ್ರದೇಶಗಳು ಸಮುದ್ರ ಮಟ್ಟದಿಂದ ೮೦೦ ಇಂದ ೨೪೦೦ ಅಡಿಗಳಷ್ಟು ಎತ್ತರದಲ್ಲಿದೆ. ಇದೇ ಬೆಳೆಗಳನ್ನು ವಿವಿಧ ಎತ್ತರ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಎಂದು ದಾಖಲಿಸಲಾಗಿದೆ.

ಏಲಕ್ಕಿ ಹವಾಮಾನ ಬದಲಾವಣೆಯನ್ನು ತಾಳಲಾರದ ಅತಿಸೂಕ್ಷö್ಮ ಬೆಳೆ ಎನ್ನಲಾಗುತ್ತದೆ. ಸಣ್ಣ ಬದಲಾವಣೆಗಳು, ತಾಪಮಾನದಲ್ಲಿನ ವೈಪರಿತ್ಯಗಳು, ಮಳೆ ಹಾಗೂ ತೇವಾಂಶ ಇವೆಲ್ಲವೂ ಏಲಕ್ಕಿ ಬೆಳೆವಣಿಗೆ ಹಾಗೂ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.

ನಿರ್ದಿಷ್ಟ ಎತ್ತರದ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದಾದ ಏಲಕ್ಕಿ ಬೆಳೆಯನ್ನು ರೈತರು ಗುರುತಿಸಿ, ಆಯ್ಕೆ ಮಾಡಿ ಪ್ರಚುರಪಡಿಸುತ್ತಿರುವ ತಳಿಯನ್ನು ನಾವು ದಾಖಲಿಸಿದ್ದೇವೆ (ನೋಡಿ ಕೋಷ್ಟಕ ೧). ಈ ವಿಧಗಳನ್ನು ನಿರ್ಧಿಷ್ಟ ಹವಾಮಾನ ಪರಿಸ್ಥಿತಿಗಳಲ್ಲೂ ಅಳವಡಿಸಿಕೊಳ್ಳಬಹುದು. ಅಂದರೆ ತೇವಾಂಶ, ಒಣಹವೆ, ಮಳೆ, ಎತ್ತರದ ಪ್ರದೇಶ ಹಾಗೂ ತಾಪಮಾನಗಳಲ್ಲೂ ಬೆಳೆಯಬಹುದು. ಸೂಕ್ಷö್ಮವಾಗಿ ಗಮನಿಸುವ ಮೂಲಕ ಸಹಜವಾಗಿ ನಿರ್ಧಿಷ್ಟ ಪ್ರದೇಶಗಳ ಪರಿಸ್ಥಿತಿಗಳಿಗೆ ಹೊಂದುವ ತಳಿಯನ್ನು ಗುರುತಿಸಬಹುದು. ಈ ವಿಧಾನವನ್ನೇ ಬಹುತೇಕ ಏಲಕ್ಕಿ ಬೆಳೆಗಾರರು ಸ್ಥಳೀಯ ಪ್ರದೇಶಗಳಿಗೆ ಸೂಕ್ತವಾದ ತಳಿಯನ್ನು ಗುರುತಿಸಲು ಬಳಸುತ್ತಾರೆ. ಇರುವ ಪರಿಸ್ಥಿತಿಯಲ್ಲೇ ಇಳುವರಿ ಪಡೆಯಲು ಸಾಧ್ಯವಿರುವಂತಹ, ಮಾರುಕಟ್ಟೆಗೆ ಸೂಕ್ತವಾಗಿರುವಂತಹ, ರೋಗ ಹಾಗೂ ಬರ ತಾಳಿಕೆಯ ಗುಣ ಹೊಂದಿರುವ, ಬೆಳೆಗೆ ಅಗತ್ಯವಾದ ನೀರಿನ ಪ್ರಮಾಣ ಈ ಮಾನದಂಡಗಳನ್ನು ಆಧರಿಸಿ ರೈತರು ನೈಸರ್ಗಿಕ ವಿಧಾನದ ಮೂಲಕ ಆಯ್ಕೆ ಮಾಡುತ್ತಾರೆ.

ಪಶ್ಚಿಮ ಘಟ್ಟಗಳು ಮೆಣಸಿಗೆ (ಪೈಪರ್ ನಿಗ್ರುಮ್)ಗೆ ತವರುನೆಲ. ಈ ಭಾಗಗಳಲ್ಲಿ ಹಲವು ಬಗೆಯ ಮೆಣಸಿನ ತಳಿಗಳಿರುವುದು ಕಂಡುಬAದಿವೆ. ಹವಾಮಾನದಲ್ಲಿನ ಸಣ್ಣ ಬದಲಾವಣೆಯನ್ನು ತಡೆಯಲಾಗದ ಸೂಕ್ಷö್ಮ ಸಸ್ಯಗಳಲ್ಲಿ ಮೆಣಸು ಕೂಡ ಒಂದು. ನಿರ್ಧಿಷ್ಟ ವಾತಾವರಣ ಮತ್ತು ಮಣ್ಣಿನ ಗುಣಕ್ಕೆ ಹೊಂದುವAತಹ ೫ಕ್ಕಿಂತ ಹೆಚ್ಚು ಮೆಣಸಿನ ತಳಿಗಳನ್ನು ಇಲ್ಲಿನ ರೈತರು ಅಭಿವೃದ್ಧಿ ಪಡಿಸಿ ಪ್ರಚುರಗೊಳಿಸಿದ್ದಾರೆ. ಈ ತಳಿಗಳನ್ನು ನಾವು ಗುರುತಿಸಲು ಸಾಧ್ಯವಾಯಿತು. ಹೊಸತನ್ನು ಕಂಡುಕೊಳ್ಳುವ ರೈತ ಕೆ.ಟಿ. ವರ್ಗೀಸ್‌ರವರು ೯೦ರ ಕೊನೆಯಲ್ಲಿ ಹೈಬ್ರೀಡ್ ಮೆಣಸಿನ ತಳಿಗಳನ್ನು ಅಭಿವೃದ್ಧಿಪಡಿಸಿದರು. ಆ ತಳಿಗಳು ಬರ ಮತ್ತು ಶಿಲೀಂಧ್ರ ರೋಗಭಾದೆಯಿಂದ ನಾಶವಾದದ್ದನ್ನು ಗಮನಿಸಿದರು. ಒಂದು ಗಿಡಕ್ಕೆ ಮಾತ್ರ ಈ ರೋಗ ಬಾಧಿಸಲಿಲ್ಲ. ಆ ಗಿಡಕ್ಕೆ ರೋಗನಿರೋಧಕ ಶಕ್ತಿ ಹಾಗೂ ಬರವನ್ನು ತಾಳಿಕೊಳ್ಳುವ ಗುಣವಿರುವುದನ್ನು ಅವರು ಗಮನಿಸಿ ಅದನ್ನು ಪ್ರಚುರಪಡಿಸಿದರು. ತಳಿ ಮಂಡಳಿ ಮತ್ತು ರಾಷ್ಟಿಯ ಆವಿಷ್ಕಾರ ಫೌಂಡೇಷನ್ ಈ ತಳಿಯ ರೋಗನಿರೋಧಕ ಶಕ್ತಿ ಮತ್ತು ಬರವನ್ನು ತಾಳಿಕೊಳ್ಳುವ ಗುಣವನ್ನು ನೋಡಿ ಈ ತಳಿಯನ್ನು ಮಂಜೂರು ಮಾಡಿತು.

ಸಾoಪ್ರದಾಯಿಕ ಮತ್ತು ಸ್ಥಳೀಯ ಬೆಳೆಗಳ ಪುನಶ್ಚೇತನ

ಸರ್ಕಾರಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಉರಲಿ ಬುಡಕಟ್ಟು ಸಮುದಾಯಗಳು ಬರ ಹಾಗೂ ರೋಗನಿರೋಧಕ ಗುಣವುಳ್ಳ ಅಲಸಂದೆ ತಳಿಗಳನ್ನು ಪುನಶ್ಚೇತನಗೊಳಿಸಿ ಪ್ರಚುರಪಡಿಸುತ್ತಿದ್ದಾರೆ. ಇದು ಕೂಡ ರೈತರ ಯಶಸ್ವಿ ಸಂಶೋಧನಾಗಾಥೆಗಳಲ್ಲೊAದು. ಉರಲಿಯ ಬುಡಕಟ್ಟು ಸಮುದಾಯಗಳು ಬೆಳೆಯುವ ಸ್ಥಳೀಯ ಅಲಸಂದೆಯ ವಿಧಗಳು ಅವುಗಳಲ್ಲಿನ ಪೌಷ್ಟಿಕಾಂಶ ಗುಣಗಳು, ಅತ್ಯಲ್ಪ ನಿರ್ವಹಣೆ, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವ ಗುಣಕ್ಕೆ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಇನ್ನಿತರ ಸಾಮಾನ್ಯ ವಿಧಗಳ ಅಲಸಂದೆ ಹೆಚ್ಚಿರುವುದರಿಂದ ಸಮುದಾಯದವರು ಈ ಅಲಸಂದೆಯನ್ನು ನಿರ್ಲಕ್ಷಿಸಿದ್ದಾರೆ. ಉರಲಿ ಬುಡಕಟ್ಟು ಸಮುದಾಯದ ಕೆಲ ಮಹಿಳಾಕೃಷಿಕರು ಈ ತಳಿಗಳನ್ನು ಸಂರಕ್ಷಿಸಿದ್ದಾರೆ. ಹೈಬ್ರಿಡ್ ಅಲಸಂದೆಯ ತಳಿಗಳ ಸೋಲಿನಿಂದಾಗಿ ಉರಲಿ ಸಮುದಾಯ ಮತ್ತು ಸುತ್ತಮುತ್ತಲ ಹಳ್ಳಿಗಳ ಮಹಿಳೆಯರು ಹೆಚ್ಚೆಚ್ಚು ಈ ಸ್ಥಳೀಯ ತಳಿಯನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ಅಲಸಂದೆಯ ವಿವಿಧ ತಳಿಗಳನ್ನು ಸಂರಕ್ಷಿಸಿಡುವ ಸಾಂಪ್ರದಾಯಿಕ ವಿಧಾನಗಳು ಕೂಡ ಆಸಕ್ತಿಕರವಾಗಿದೆ.

ಮೊದಲು ಹೈಬ್ರೀಡ್ ಮರಗೆಣಸನ್ನು ವಾಣಿಜ್ಯ ಬೆಳೆಯ ಕಾರಣಕ್ಕಾಗಿ ಬೆಳೆಯುತ್ತಿದ್ದ ರೈತರು ಕೂಡ ಈಗ ತಮ್ಮ ಕೃಷಿಭೂಮಿಯಲ್ಲಿ ಮರಗೆಣಸಿನ ವಿವಿಧ ತಳಿಗಳನ್ನು ಬೆಳೆಯುತ್ತಿರುವುದನ್ನು ಗಮನಿಸಿದೆವು. ಸಾಮಾನ್ಯವಾಗಿ ಹೈಬ್ರಿಡ್ ತಳಿಗಳು ೬ ತಿಂಗಳಲ್ಲಿ ೪ ರಿಂದ ೫ ಕೆಜಿಯಷ್ಟು ಇಳುವರಿ ನೀಡುತ್ತವೆ. ಅದೇ ಸ್ಥಳೀಯ ತಳಿಗಳು ೧೦ ರಿಂದ ೧೨ ತಿಂಗಳು ಇಳುವರಿ ನೀಡುತ್ತವೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಹೈಬ್ರಿಡ್ ಮರಗೆಣಸಿನ ಇಳುವರಿಯು ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಯಿತು. ಈ ರೈತರು ಸಾಂಪ್ರದಾಯಿಕ ಮರಗೆಣಸಿನ ತಳಿಗಳನ್ನು ಸಂಗ್ರಹಿಸಿ ಬೆಳೆಯಲಾರಂಭಿಸಿದರು. ಈ ತಳಿಗಳು ಅತ್ಯಲ್ಪ ಪ್ರಮಾಣದ ನೀರಿನಲ್ಲಿ ಬೆಳೆಯುತ್ತವೆ ಹಾಗೂ ಹೆಚ್ಚಿನ ಇಳುವರಿಯನ್ನು ನೀಡುತ್ತವೆ. ಅಂಬಕ್ಕದನ್ ಎನ್ನುವ ಮರಗೆಣಸಿನ ತಳಿಯನ್ನು ರೈತರು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೈತರು ಈ ತಳಿಯನ್ನು ಬೆಳೆಯಲು ಹೆಚ್ಚು ಇಷ್ಟಪಡುತ್ತಿದ್ದಾರೆ.

ವೈವಿಧ್ಯಮಯ ಬೆಳೆ

ಹವಾಮಾನ ಬದಲಾವಣೆಯನ್ನೆದುರಿಸಲು ರೈತರು ವೈವಿಧ್ಯಮಯ ಬೆಳೆಯ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇಡುಕ್ಕಿ ಜಿಲ್ಲೆಯ ಕುಂಬುಮೇಟು ಎನ್ನುವ ಒಳನಾಡಿನ ಹಳ್ಳಿಯಲ್ಲಿ ಕಾಫಿ ಮತ್ತು ಭತ್ತ ಪ್ರಮುಖ ಬೆಳೆಗಳು. ಇಲ್ಲೊಂದು ಕುತೂಹಲಕರ ಸಂಗತಿಯಿದೆ. ಇಡುಕ್ಕಿ ಜಿಲ್ಲೆಯಲ್ಲಿ ಸರಾಸರಿ ಮಳೆಯ ಪ್ರಮಾಣ ೩೨೬೫ ಮಿಮೀ ಆದರೂ ಕೂಡ ಈ ನಿರ್ದಿಷ್ಟ ಪ್ರದೇಶ ೧೯೯೫ರಿಂದ ೨೦೦೩ರವರೆಗೆ ತೀವ್ರ ಬರವನ್ನು ಎದುರಿಸಿತು. ನಿರಂತರವಾಗಿ ಮಳೆ ಕೈಕೊಟ್ಟಿದ್ದರಿಂದ ರೈತರು ಹೊಸ ಬೆಳೆಗಳ ಪ್ರಯೋಗ ಮಾಡುವುದು ಅನಿವಾರ್ಯವಾಯಿತು. ಅವರು ಗೋಧಿ, ರಾಗಿ (ಸಿರಿಧಾನ್ಯಗಳು), ಸುವರ್ಣಗಡ್ಡೆ ಮತ್ತು ತರಕಾರಿಗಳನ್ನು ಬೆಳೆಯಲಾರಂಭಿಸಿದರು. ೨೦೦೫ರ ವೇಳೆಗೆ ಒಳ್ಳೆಯ ಮಳೆ ಬಂದಿತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಳೆಯಾಗಿತ್ತು. ಈ ಬದಲಾವಣೆಯಿಂದ ಸ್ಫೂರ್ತಿಗೊಂಡು ರೈತರು ಇತರ ಬೆಳೆಗಳಾದ ಏಲಕ್ಕಿ ಮತ್ತು ಮೆಣಸನ್ನು ಬೆಳೆದರು. ಪ್ರಸ್ತುತ ಅವರು ಏಲಕ್ಕಿ, ಮೆಣಸಿನೊಂದಿಗೆ ತರಕಾರಿಗಳಾದ ಹೂಕೋಸು, ಕ್ಯಾರೆಟ್, ಸುವರ್ಣಗಡ್ಡೆಯನ್ನು ಬೆಳೆಯುತ್ತಿದ್ದಾರೆ. ಈ ರೀತಿಯಲ್ಲಿ ಹೊಸ ವಿಧಾನಗಳನ್ನು ಹುಡುಕಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆಯನ್ನು ಬದಲಾಗುವ ಹವಾಮಾನ ಪರಿಸ್ಥಿತಿಯಲ್ಲೂ ರೈತರು ಕಂಡುಕೊಳ್ಳುತ್ತಿರುವುದು ಅವರ ಸಾಮರ್ಥ್ಯವನ್ನು ತೋರುತ್ತಿದೆ.

ಮಿಶ್ರಬೆಳೆ

ರಬ್ಬರ್ ಇಳುವರಿ ಕಡಿಮೆಯಾಗಲು ಹೆಚ್ಚುತ್ತಿರುವ ಉಷ್ಣಾಂಶವು ಒಂದು ಕಾರಣವಾಗಿದೆ. ಕಡಿಮೆಯಾಗುತ್ತಿರುವ ಇಳುವರಿಯನ್ನು ಸರಿದೂಗಿಸಲು ರೈತರು ರಬ್ಬರ್ ನಡುವೆ ವಿವಿಧ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಕೂವೆ (ಂಡಿಡಿoತಿಡಿooಣ (ಒಚಿಡಿಚಿಟಿಣಚಿ ಚಿಡಿuಟಿಜiಟಿಚಿಛಿeಚಿ) ರಬ್ಬರ್ ತೋಟದಲ್ಲಿ ರಬ್ಬರ್ ನಡುವೆ ಬೆಳೆಯಲು ಸೂಕ್ತವಾದ ಬೆಳೆ. ಸಂಸ್ಕರಿಸಿದ ಕೂವೆ ಪುಡಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದೆ. ಕೂವೆ ಪುಡಿಗೆ ಹೆಚ್ಚಿನ ಬೇಡಿಕೆಯಿದ್ದರೂ ಕೂಡ ಅದರ ಸಂಸ್ಕರಣ ಕಷ್ಟವಾದ್ದರಿಂದ ರೈತರು ಅದನ್ನು ಹೆಚ್ಚಾಗಿ ಬೆಳೆಯುವುದಿಲ್ಲ. ಕೂವೆಯನ್ನು ಸಂಸ್ಕರಿಸಿ ಕೈಯಿಂದಲೇ ಪುಡಿಮಾಡುವುದು ಹೆಚ್ಚಿನ ಶ್ರಮ ಹಾಗೂ ಸಮಯ ಬೇಡುವಂತದ್ದು. ಪುಡಿ ಮಾಡುವ ಯಂತ್ರವನ್ನು ರೈತರಿಗೆ ಒದಗಿಸಿ ಕೂವೆಯನ್ನು ವಾಣಿಜ್ಯವಾಗಿ ಹೆಚ್ಚೆಚ್ಚು ಬೆಳೆಯಲು ಪ್ರೋತ್ಸಾಹಿಸಲಾಗಿದೆ.

ಉರಲಿ ಬುಡಕಟ್ಟು ಸಮುದಾಯದವರು ಹಲವು ಅಲಸಂದಿ ವಿಧಗಳನ್ನು ಸಂರಕ್ಷಿಸಿದ್ದಾರೆ

ರಬ್ಬರ್ ತೋಟಗಳಲ್ಲಿ ಬೆಳೆಯಬಹುದಾದ ಕಾಫಿಯ ತಳಿಯನ್ನು ಗುರುತಿಸಿರುವುದು ದಾಖಲಾದ ರೈತರ ಮತ್ತೊಂದು ಆವಿಷ್ಕಾರ. ಕೇರಳದ ಎತ್ತರದ ಪ್ರದೇಶಗಳಲ್ಲಿನ ರೈತರು ಮೆಣಸು ಮತ್ತು ಏಲಕ್ಕಿಯನ್ನು ರಬ್ಬರ್ ಜೊತೆಗೆ ಮಿಶ್ರಬೆಳೆಯಾಗಿ ಬೆಳೆಯಲು ಯತ್ನಿಸಿದ್ದಾರೆ.

ಒಳನೋಟಗಳು ಮತ್ತು ಸಲಹೆಗಳು

ರೈತರ ಆವಿಷ್ಕಾರಗಳನ್ನು ದಾಖಲಿಸುವಾಗ ನಮಗೆ ಕೆಲವು ಒಳನೋಟಗಳು ಸಿಕ್ಕವು. ಹಾಗೆಯೇ ಹವಾಮಾನ ಬದಲಾವಣೆಯನ್ನು ಎದುರಿಸಲು ರೈತರ ಆವಿಷ್ಕಾರಗಳನ್ನು ಪ್ರಚುರಪಡಿಸಲು ಕೆಲವು ಸಲಹೆಗಳು ಕೂಡ ಕಂಡವು. ಅವು ಹೀಗಿವೆ:
ಅ) ರೈತರ ಆವಿಷ್ಕಾರಗಳನ್ನು, ವಿಧಾನಗಳನ್ನು ಮತ್ತು ಉಳಿವಿಗಾಗಿ ಮಾಡುವ ತಂತ್ರಗಳನ್ನು ದಾಖಲಿಸಬೇಕು, ಅಧ್ಯಯನ ಮಾಡಬೇಕು, ಪೂರಕವಾದದ್ದನ್ನು ನೀಡಬೇಕು, ಪಸರಿಸಬೇಕು ಹಾಗೂ ಗುರುತಿಸಬೇಕು.
ಆ) ಸ್ಥಳೀಯ ಮತ್ತು ರೈತರು ಅಭಿವೃದ್ಧಿ ಪಡಿಸಿದ ತಳಿಗಳು ಹವಾಮಾನ ಬದಲಾವಣೆಯ ಸಂದರ್ಭಗಳಲ್ಲಿ ವಿಶೇಷ ಮಹತ್ವವನ್ನು ಪಡೆದಿವೆ. ಸಮುದಾಯದ ಮುಖ್ಯವಾಹಿನಿಗಳಲ್ಲಿ ಈ ಬೆಳೆಯನ್ನು ಸ್ವೀಕರಿಸುವಂತೆ ಮಾಡುವುದು, ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಹೆಚ್ಚುವಂತೆ ಮಾಡುವುದು, ರೈತರು ಅಭಿವೃದ್ಧಿಪಡಿಸಿದಕ್ಕೆ ಉತ್ತಮ ಮೌಲ್ಯ ಒದಗಿಸುವುದು, ಕಡಿಮೆ ಬಳಕೆಯ ಬೆಳೆಗಳನ್ನು ಪ್ರಚುರಪಡಿಸುವುದು. ವಾಣಿಜ್ಯ ಮೌಲ್ಯ ಹೊಂದಿರುವAತಹ ಬೆಳೆಗಳಲ್ಲೇ ರೈತರು ಆವಿಷ್ಕಾರಗಳನ್ನು ಮಾಡಿರುವುದನ್ನು ಗಮನಿಸಬಹುದು. ರೈತರ ಸಂಶೋಧನೆಗಳಿಗೆ ಸಹಾಯಧನಗಳನ್ನು ಒದಗಿಸಿ ಇವಕ್ಕೆ ಸೂಕ್ತ ಬೆಲೆ, ಬ್ರಾö್ಯಂಡ್ ಹಾಗೂ ಮಾರುಕಟ್ಟೆಯನ್ನು ಒದಗಿಸಬೇಕು.

ಇ) ಮಿಶ್ರತಳಿ ವಿಧಾನದ ಮೂಲಕ ರೈತರು ಅಭಿವೃದ್ಧಿ ಪಡಿಸಿದ/ ಸ್ಥಳೀಯ ತಳಿಗಳ ಸುಧಾರಣೆ. ಆ ಮೂಲಕ ಬರ ಹಾಗೂ ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳಿವೆ.

ಈ) ನೂತನ ಆವಿಷ್ಕಾರಗಳನ್ನು ಸಂಶೋಧನೆಗಳನ್ನು ಮಾಡುವ ರೈತರಿಗೆ ತಾವು ಕಂಡುಕೊAಡದ್ದನ್ನು ಮತ್ತಷ್ಟು ಸುಧಾರಿಸಲು ತಾಂತ್ರಿಕ ಹಾಗೂ ಮಾರ್ಗದರ್ಶನ ನೆರವಿನ ಅಗತ್ಯವಿದೆ.

ಉ) ಸಂಸ್ಕರಣ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಹೆಚ್ಚು ಬಳಕೆಯಲ್ಲಿ ಇಲ್ಲದ ಉತ್ಪನ್ನಗಳಿಗೆ ಮತ್ತು ಸ್ಥಳೀಯ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡುವುದು ಅಗತ್ಯ. ರೈತರು ಸಾಂಪ್ರದಾಯಿಕ ಮತ್ತು ಕಡಿಮೆ ಬಳಸುವ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಸೂಕ್ತ ಸಂಸ್ಕರಣ ತಂತ್ರಜ್ಞಾನಗಳು ಲಭ್ಯವಿಲ್ಲದಿರುವುದು ಅವರಿಗಿರುವ ಮುಖ್ಯ ತಡೆ.

ಉಪಸಂಹಾರ
ಗ್ರಾಮೀಣ ಭಾಗಗಳಲ್ಲಿನ ಅಗತ್ಯಗಳು ಹಾಗೂ ಬೇಡಿಕೆಗಳು ಸ್ಥಳೀಯತೆಯನ್ನು ಆಧರಿಸಿರುತ್ತದೆ. ಹೀಗಿರುವಾಗ ಒಂದೇ ಬಗೆಯ ಪರಿಹಾರಗಳು ಈ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸುವುದಿಲ್ಲ. ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಹೊಸತನ್ನು ಅನ್ವೇಷಿಸುವ ರೈತರ ಭಾಗವಹಿಸುವಿಕೆ ಅತ್ಯಗತ್ಯ. ಜಾಗತಿಕ ಸಮಸ್ಯೆಯಾದ ಹವಾಮಾನ ಬದಲಾವಣೆಯ ವಿರುದ್ಧ ಸ್ಥಳೀಯ ಪರಿಹಾರಗಳನ್ನು ಪ್ರಚುರಪಡಿಸಲು ಯಶಸ್ವಿಯಾದ ರೈತರ ಆವಿಷ್ಕಾರಗಳನ್ನು ದಾಖಲಿಸುವುದು ಅಗತ್ಯ.

ಆಕರಗಳು

Kandiannan, K.S. Krishnamurthy, S. J. Anke Gowda and Anandaraj, Climate change and black pepper production., Indian Journal of Arecanut, Spices and Medicinal plants, Vol 16 (4), p. 32-35.

Murugan, P. K. Shetty, A. Anandhi and R. Ravi, Present and Future Climate Change in Indian Cardamom Hills: Implications for Cardamom Production and Sustainability, 2012, British Journal of Environment & Climate Change, 2(4), p. 368-390.

T J James

Advisor

Peermade development society

Peermade P.O., Idukki Kerala – 685531

www.pdspeermade.com

E-mail: james.tj6@gmail.com

Stebin K

Coordinator

Peermade development society

Peermade P.O.,

Idukki, Kerala – 685531

www.pdspeermade.com

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp