ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ. ಹಸಿವು ಹಾಗೂ ಅಪೌಷ್ಟಿಕತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಇವು ಸೂಕ್ತವಾದ ಪರಿಹಾರ. ಪೌಷ್ಟಿಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿನ ಸರ್ಕಾರದ ಕಾರ್ಯಕ್ರಮಗಳು ಪರೋಕ್ಷವಾಗಿ ಏಕಸಂಸ್ಕೃತಿಯನ್ನು ಪ್ರಚುರಪಡಿಸಬಹುದು. ಇದರಿಂದ ಜೀವವೈವಿಧ್ಯತೆ ನಷ್ಟವಾಗಿ ವಿವಿಧ ರೀತಿಯ ಅಪೌಷ್ಟಿಕತೆಗೆ ಇದು ಕಾರಣವಾಗಬಹುದು. ಆದ್ದರಿಂದ ಸಿರಿಧಾನ್ಯಗಳ ಕೃಷಿಯನ್ನು ದೇಸಿ ಕೃಷಿಪದ್ಧತಿಗನುಸಾರವಾಗಿ ಮಾಡುವಂತೆ ಪ್ರೋತ್ಸಾಹಿಸಲು ತಕ್ಕ ತಂತ್ರಗಳನ್ನು ರೂಪಿಸಬೇಕು.
ಪೌಷ್ಟಿಕಾಂಶಗಳ ಮೂಲವಾಗಿ ಹಾಗೂ ಹಸಿವನ್ನು ನೀಗಿಸುವ ಸಲಕರಣೆಯಾಗಿ ಸಿರಿಧಾನ್ಯಗಳ ಸಾಮರ್ಥ್ಯವು ನಿರೂಪಿತವಾಗಿದೆ. ಸಿರಿಧಾನ್ಯಗಳು ಪುರಾತನ ಆಹಾರದ ಮೂಲಗಳಲ್ಲೊಂದಾಗಿ ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಹಾಗೂ ಪ್ರಪಂಚದ ಅತಿಹೆಚ್ಚು ಅಭಿವೃದ್ಧಿ ಹೊಂದದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸಿರಿಧಾನ್ಯಗಳನ್ನು ಸಾಮಾನ್ಯವಾಗಿ ಬಡವರ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅದನ್ನು ಕಡೆಗಣಿಸಲ್ಪಟ್ಟು ಅದರ ಉತ್ಪಾದನೆ ಇಳಿಮುಖಗೊಂಡಿದೆ.
ಬಹಳ ಹಿಂದೆಯೇನಲ್ಲ ಕೇವಲ ೨೦ -೨೫ ವರ್ಷಗಳಿಗೆ ಮುಂಚೆ ಸಿರಿಧಾನ್ಯಗಳನ್ನು ಭಾರತದ ಹಲವು ಭಾಗಗಳಲ್ಲಿ ಬೆಳೆಯಲಾಗುತ್ತಿತ್ತು. ಪಶ್ಚಿಮ ಘಟ್ಟಗಳು ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಕೊರಪುಟ್ ಜಿಲ್ಲೆಗಳಲ್ಲಿ ಇವುಗಳನ್ನು ಬೆಳೆಯಲಾಗುತ್ತಿತ್ತು. ಇದು ಜೋಳ (Soಡಿghum vuಟgಚಿಡಿe), ಸಜ್ಜೆ (Peಟಿಟಿiseಣum ಣಥಿಠಿhoiಜes), ಬರಗು(Pಚಿಟಿiಛಿum miಟiಚಿಡಿe) , ಊದಲು(ಇiಛಿhiಟಿoಛಿhಟoಚಿ sಠಿ.) , ನವಣೆ(Seಣಚಿಡಿiಚಿ iಣಚಿಟiಛಿಚಿ) , ಆರ್ಕ(Pಚಿsಠಿಚಿಟum sಛಿಡಿobiಛಿuಟಚಿಣum) ಮತ್ತು ರಾಗಿಯನ್ನು (ಇಟuisiಟಿe ಛಿoಡಿಚಿಛಿಚಿಟಿಚಿ) ಬೆಳೆಯಲಾಗುತ್ತಿತ್ತು. ಇವುಗಳಲ್ಲಿ ಅತಿಹೆಚ್ಚು ಬೆಳೆಯುವುದು ರಾಗಿ. ಸಿರಿಧಾನ್ಯಗಳನ್ನು ಫಲವಂತಿಕೆ ಕಡಿಮೆಯಿರುವ ಬರಡು ನೆಲ, ಕಡಿಮೆ ನೀರಿರುವ ಪ್ರದೇಶಗಳಲ್ಲಿ ಮಳೆಯನ್ನಾಧಾರಿಸಿದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬುಡಕಟ್ಟು ಮಂದಿ ಇದನ್ನು ಬೆಟ್ಟಗಳ ಇಳಿಜಾರಿನಲ್ಲಿ ಜೂನ್ ಇಂದ ಸೆಪ್ಟಂಬರ್‌ವರೆಗೆ ಬೆಳೆಯುತ್ತಾರೆ. ಈ ಸಮುದಾಯದವರಿಗೆ ಸಿರಿಧಾನ್ಯಗಳೇ ಪೌಷ್ಟಿಕತೆಯ ಮೂಲ. ಹೈದರಾಬಾದಿನ ರಾಷ್ಟಿçÃಯ ಪೌಷ್ಟಿಕಾಂಶ ಸಂಸ್ಥೆಯವರ ಪ್ರಕಾರ ಈ ಬೆಳೆಗಳಲ್ಲಿ ಅಕ್ಕಿಗಿಂತ ಹೆಚ್ಚಿನ ಖನಿಜಾಂಶಗಳು, ಪ್ರೊಟೀನ್ ಮತ್ತು ಕೊಬ್ಬಿನಾಂಶವಿದೆ. ಇದರೊಟ್ಟಿಗೆ ಈ ಪ್ರದೇಶದಲ್ಲಿನ ಅಪೌಷ್ಟಿಕತೆ ಹಾಗೂ ರಕ್ತಹೀನತೆಯ ವಿರುದ್ಧ ಹೋರಾಡಲು ಈ ಧಾನ್ಯಗಳಲ್ಲಿನ ಕಬ್ಬಿಣದಂಶಾ ಹೆಚ್ಚು ಪರಿಣಾಮಕಾರಿಯಾಗಿದೆ.
ವಿಶ್ವದಾದ್ಯಂತದ ಹವಾಮಾನ ವೈಪರಿತ್ಯಗಳು ಮತ್ತು ಕೃಷಿ ಅರಣ್ಯ ಪದ್ಧತಿಯ ಪರಿಣಾಮಗಳು ಮತ್ತೆ ಸಿರಿಧಾನ್ಯಗಳನ್ನು ಮುನ್ನೆಲೆಗೆ ತಂದಿವೆ. ಈ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಕಿರುಧಾನ್ಯಗಳನ್ನು ಬೆಳೆಯುತ್ತಿದ್ದ ಒಡಿಸ್ಸಾದ ದಕ್ಷಿಣ ಭಾಗದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸರ್ವೇಯೊಂದನ್ನು ನಡೆಸಲಾಯಿತು.
ಸಿರಿಧಾನ್ಯಗಳು ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿವೆ – ಕೆಲವು ಅಂಶಗಳು
ವಾಣಿಜ್ಯ ಕೃಷಿ ಬೆಳೆಗಳಾದ ನೀಲಗಿರಿ, ತಾಳೆ (ಎಣ್ಣೆ) ಮತ್ತು ಹತ್ತಿ ಮುಂತಾದುವನ್ನು ಬೆಳೆಯುವ ಸಲುವಾಗಿ ಕಿರುಧಾನ್ಯಗಳನ್ನು ಬೆಳೆಯುವ ಭೂಮಿ ಕಡಿಮೆಯಾಗಿ ಆಹಾರೇತರ ಬೆಳೆಗಳಿಗಾಗಿ ಈ ಭೂಮಿಯನ್ನು ಬಳಸಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಕಡಿಮೆ ಆದಾಯದ ಸಮುದಾಯಗಳು ಆಹಾರ ಮತ್ತು ಪೌಷ್ಟಿಕತೆಗೆ ಅವಲಂಭಿಸಿರುವುದು ಇದೇ ಆಹಾರ ಮೂಲವನ್ನು ಆದರೆ ಈಗ ಈ ಮೂಲಕ್ಕೆ ಅಪಾಯವೊದಗಿದೆ. ಬಡತನ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಬೆಳೆ ವೈವಿಧ್ಯ ಮತ್ತು ಸಾಂಪ್ರದಾಯಿಕ ವಿಧಗಳು ಪರಿಣಾಮಕಾರಿ ಎಂದು ಪ್ರಚುರಪಡಿಸುತ್ತಿರುವ ಸಮಯದಲ್ಲೇ ಈ ಪ್ರದೇಶಗಳಲ್ಲಿ ಆಧುನೀಕರಣ ಹಾಗೂ ಏಕಬೆಳೆ ಪದ್ಧತಿಯನ್ನು ಪ್ರಚುರಪಡಿಸಲಾಗಿರುವುದು ಈ ಯುಗದ ವ್ಯಂಗ್ಯಗಳಲ್ಲೊAದು. ಈ ಅಲಕ್ಷö್ಯತನವು ರೈತರನ್ನು ಪ್ಲಾಂಟೇಶನ್ ಬೆಳೆಗಳು ಹಾಗೂ ಆಹಾರ ಪದ್ಧತಿಗಳ ಬದಲಾವಣೆಯತ್ತ ದೂಡಿವೆ. ಈ ಪ್ರದೇಶದ ಜನರ ಆರೋಗ್ಯದ ಮೇಲೆ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.
ಅನುದಾನಿತ ಅಕ್ಕಿ ಸಿಗುತ್ತಿರುವುದರಿಂದ ಸಿರಿಧಾನ್ಯಗಳ ಬಳಕೆ ಕಡಿಮೆಯಾಗಿರುವುದಲ್ಲದೆ ಪೌಷ್ಟಿಕಾಂಶದ ಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
ಬಾಕ್ಸ್ ೧
ಕಾಶಿಪುರ ವಿಭಾಗದ ಸಿರಿಗುಡ್ಡ ಹಳ್ಳಿಯ ಬಲರಾಂ ಬಿದ್ಯಾನಿಗೆ ತನ್ನ ನಾಲ್ಕು ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿಯಿದ್ದು ಮದುವೆ ಮಾಡಲು ಹಣಬೇಕು. ರಾಗಿ ಬೆಳೆಯಿಂದ ಸಿಗುವ ಆದಾಯ ಅತ್ಯಲ್ಪ. ಹಾಗಾಗಿ ಆತ ತನ್ನ ೩೦ ಎಕರೆ ಭೂಮಿಯಲ್ಲಿ ೨೦ ಎಕರೆ ಭೂಮಿಯಲ್ಲಿ ನೀಲಗಿರಿ ಬೆಳೆಯಲಾರಂಭಿಸಿದ. ಇದರಿಂದ ಆತನಿಗೆ ಮೂರು ವರ್ಷದಲ್ಲಿ ರೂ.೭೦೦೦೦ ಸಿಗುತ್ತದೆ. ಇದರಿಂದ ಆತನಿಗೆ ಬಹಳ ಸಹಾಯವಾಗುತ್ತದೆ. ರಾಗಿಯನ್ನು ಬೆಳೆದದ್ದರಿಂದ ಆತನಿಗೆ ಕೆಜಿಗೆ ೨೧ ರೂಪಾಯಿ ಸಿಗುತ್ತದೆ. ಆತನಿಗೆ ಸಿಕ್ಕ ಇಳುವರಿ ೧೦೦ ಕೆಜಿ ಮಾತ್ರ. ಹಾಗಾಗಿ ಆತನಿಗೆ ಈ ಬದಲಾವಣೆ ಹೆಚ್ಚು ತರ್ಕಬದ್ಧವಾದದ್ದು ಹಾಗೂ ಲಾಭದಾಯಕ ಎನ್ನಿಸುತ್ತದೆ. ಹಿಂದಿನ ವರ್ಷಗಳಲ್ಲಿ ಆತ ಹಲವು ವಿಧಗಳ ರಾಗಿಯನ್ನು ಬೆಳೆದಿದ್ದ ಆದರೀಗ ಮಡಾಯಿ ಮುಸ್ಕಿಲಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದಾನೆ. ಇದು ಆತನ ಮನೆಯ ಬಳಕೆಗೆ ಹಾಗೂ ಉಳಿದದ್ದನ್ನು ಮಾರುಕಟ್ಟೆಗೆ ಹಾಕಲು ಸಾಕಾಗುತ್ತದೆ.
ಈ ಭೂಮಿ ಬೆಳೆ ಬೆಳೆಯಲು ಸೂಕ್ತವಾಗಿಲ್ಲ ಆದ್ದರಿಂದ ಇವುಗಳಲ್ಲಿ ನೀಲಗಿರಿಯಂತಹ ಮರಗಳನ್ನು ಬೆಳೆಯಬೇಕು ಎಂದು ಆ ಭೂಮಿಯನ್ನು ಬದಲಾಯಿಸುತ್ತಿರುವುದು ಈ ಪ್ರದೇಶದಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ನೀಗಿಸುವ ಸಾಧ್ಯತೆಗಳನ್ನು ಕುಂಠಿತಗೊಳಿಸಿದೆ. ಹಿಂದೆ ಈ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ವಿವಿಧ ಬಗೆಯ ಸಿರಿಧಾನ್ಯಗಳನ್ನು ಈಗ ಬೆಳೆಯುತ್ತಿಲ್ಲ. ಕೋಷ್ಟಕ ೧ ಸಿರಿಧಾನ್ಯಗಳಿಂದ ಪ್ಲಾಂಟೇಷನ್ ಬೆಳೆಗಳಿಗೆ ಆಗಿರುವ ಸ್ಥಿತ್ಯಂತರವು ಹವಾಮಾನ ಬದಲಾವಣೆ/ವೈಪರಿತ್ಯದ ಸಂದರ್ಭಗಳಲ್ಲಿ ಸಮುದಾಯದ ಮೇಲೆ ಭವಿಷ್ಯದಲ್ಲಿ ಉಂಟುಮಾಡುವ ಪರಿಣಾಮಗಳನ್ನು ಪಟ್ಟಿಮಾಡುತ್ತದೆ.
ಸಿರಿಧಾನ್ಯಗಳು ಮತ್ತು ರಾಗಿಯ ಆರೋಗ್ಯಕರ ಲಾಭಗಳು ಪ್ರಮಾಣೀಕರಿಸಲ್ಪಟ್ಟಿವೆ. ಕೊಲೆಸ್ಟಾçಲ್ ತಗ್ಗಿಸುವಲ್ಲಿ, ಹಾಲೂಡಿಕೆ, ಖನಿಜಾಂಶಗಳಾದ ಕ್ಯಾಲ್ಸಿಯಂ, ನಾರಿನಾಂಶ ಇತ್ಯಾದಿಗಳನ್ನು ಒದಗಿಸುವಲ್ಲಿ ಇವು ಪರಿಣಾಮಕಾರಿಯಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅನುದಾನಿತ ಅಕ್ಕಿ ದೊರಕುವಂತಾದದ್ದು ಸಿರಿಧಾನ್ಯಗಳ ಬಳಕೆಯನ್ನು ತಗ್ಗಿಸಿದೆ. ಅನುದಾನಿತ ಅಕ್ಕಿ ಸಿರಿಧಾನ್ಯಗಳ ಬಳಕೆಯನ್ನು ತಗ್ಗಿಸುವುದರೊಂದಿಗೆ ಪೌಷ್ಟಿಕಾಂಶದ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದು ಉಳುವ ಭೂಮಿಯನ್ನು ಕಡಿಮೆಗೊಳಿಸುವುದರೊಂದಿಗೆ ಬೆಳೆಯನ್ನು ಬೆಳೆಯುವುದರಲ್ಲೂ ಆಸಕ್ತಿ ಕುಂಠಿತಗೊAಡಿದ್ದು ಸಾಂಪ್ರದಾಯಿಕ ವಿಧಗಳು ನಷ್ಟಗೊಂಡಿವೆ.
ಜೀವನಶೈಲಿಯಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಮೇಲ್ವರ್ಗದವರು ಮತ್ತು ಮಧ್ಯಮವರ್ಗದವರು ಸಿರಿಧಾನ್ಯಗಳನ್ನು ಬಳಸುವುದು ಕಡಿಮೆಯಾಗಿ ಅವುಗಳಿಗಿರುವ ಬೇಡಿಕೆ ತಗ್ಗಿದೆ. ಇದರಿಂದಾಗಿ ಸಣ್ಣ ಹಾಗೂ ಅತಿಸಣ್ಣ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಉತ್ಸುಕರಾಗಿಲ್ಲ. ಇಂದು ಭವಿಷ್ಯದಲ್ಲಿ ಸುಸ್ಥಿರ ಕೃಷಿಯನ್ನು ಉಳಿಸಬಲ್ಲಂತಹ ವೈವಿಧ್ಯಮಯ ಬೆಳೆಗಳಿಗೆ ಕೊಡುಗೆ ನೀಡಬಲ್ಲಂತಹ ವೈವಿಧ್ಯಮಯ ಸಿರಿಧಾನ್ಯಗಳು ಹಾಗೂ ಅವುಗಳನ್ನು ಬೆಳೆಯುತ್ತಿದ್ದ ಭೂಪ್ರದೇಶಗಳು ಅಳಿವಿನ ಅಂಚಿನಲ್ಲಿವೆ. ಸಾಂಪ್ರದಾಯಿಕವಾಗಿ ಈ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ವಿವಿಧ ಬಗೆಯ ರಾಗಿಗಳನ್ನು ಇಂದು ಬೆಳೆಯುತ್ತಿಲ್ಲ. ರಾಗಿಯ ಈ ವಿಧಗಳನ್ನ ಕೋಷ್ಟಕ ೨ರಲ್ಲಿ ಪಟ್ಟಿಮಾಡಲಾಗಿದೆ.
ಕಾಶಿಪುರದ ಸಿರಿಗುಡ ಹಳ್ಳಿಯ ಬಲರಾಂ ಬಿದ್ಯಾನ ಪ್ರಕಾರ ಕೃಷಿಭೂಮಿ/ಹುಲ್ಲುಗಾವಲುಗಳು ಬದಲಾಗಿರುವುದಕ್ಕೆ ಸಾಮಾಜಿಕ ಜವಾಬ್ದಾರಿಗಳು ಕೂಡ ಕಾರಣವಾಗಿದೆ. ಆತ ತನ್ನ ನಾಲ್ಕು ಹೆಣ್ಣುಮಕ್ಕಳ ಮದುವೆಗಾಗಿ ಹೇಗೆ ತನ್ನ ಮುಕ್ಕಾಲು ಪಾಲು ಜಮೀನಿನಲ್ಲಿ ಬೆಳೆಯುತ್ತಿದ್ದ ರಾಗಿಯ ಬದಲಿಗೆ ನೀಲಗಿರಿಯನ್ನು ಬೆಳೆಯಬೇಕಾಯಿತು ಎಂದು ವಿವರಿಸುತ್ತಾನೆ (ಕೋಷ್ಟಕ ೧). ಈತನ ಕತೆ ವೈಯುಕ್ತಿಕ ನಿರ್ಧಾರಗಳು ಹೇಗೆ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ ಎನ್ನುವುದಕ್ಕೆ ಮಾದರಿ. ಇಂತಹ ಕಾರಣಗಳಿಂದ ವಾರದ ಸಂತೆಯಲ್ಲಿ ಇವನಂತಹ ರೈತರಿಂದ ರಾಗಿ ಕೊಳ್ಳುವ ಬಡಮಂದಿಗೆ ಪೌಷ್ಟಿಕಾಂಶದ ಮೂಲ ತಪ್ಪಿಹೋಗುತ್ತದೆ.
ಶ್ರೀಮತಿ. ಸುಮನ್ ಜ್ಹೊದಿಯ ಪ್ರಕಾರ ಈ ಸೂಕ್ಷö್ಮಪರಿಸರ ವಲಯದಲ್ಲಿ ಈ ರೀತಿಯ ಭೂ ಬದಲಾವಣೆಗಳು ಹೆಚ್ಚಾಗಿವೆ. ಸುಮಾರು ೫೦ಕ್ಕೂ ಹೆಚ್ಚು ಬೆಳೆಗಾರರು ತಮ್ಮ ಭೂಮಿಯಲ್ಲಿ ನೀಲಗಿರಿಯನ್ನು ಬೆಳೆಯಲಾರಂಭಿಸಿರುವುದನ್ನು ಆಕೆ ಪ್ರಸ್ತಾಪಿಸುತ್ತಾರೆ. ಸರ್ಕಾರವು ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ನೀಡುತ್ತಿದೆ. ಹೀಗಾಗಿ ಜನಕ್ಕೆ ಆಹಾರಕ್ಕಾಗಿ ರಾಗಿಯನ್ನು ಬೆಳೆಯಬೇಕಾದ ಅವಶ್ಯಕತೆ ಇಲ್ಲವಾದ್ದರಿಂದ ಅವರು ಈ ಬೆಳೆಯ ಕುರಿತು ನಿರಾಸಕ್ತರಾಗಿದ್ದಾರೆ. ಸಾಂಪ್ರದಾಯಿಕವಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಭೂಮಿಯನ್ನು ಈಗ ವಾಣಿಜ್ಯ ಸಂಸ್ಥೆಗಳ ಅಗತ್ಯ ಪೂರೈಕೆಗೆ ತಕ್ಕ ಹಾಗೆ ಮಾರ್ಪಾಡುಮಾಡಿಕೊಂಡಿರುವುದನ್ನು ತೋರಿಸುತ್ತಾ ಕಮಲಿನಿ ಜ್ಹೋದಿಯ, ಕುಂಜಪತಿ ಜ್ಹೊದಿಯ ಹಾಗೂ ಸೊಬ್ನಿ ಜ್ಹೊದಿಯಾ ಈ ವಾದವನ್ನು ಪುಷ್ಟೀಕರಿಸುತ್ತಾರೆ.
ಸಿರಿಧಾನ್ಯಗಳ ಪ್ರಚಾರ – ಎದುರಿಸ ಬೇಕಾದ ತೊಂದರೆಗಳೇನು?
ಸಿರಿಧಾನ್ಯಗಳನ್ನು ಪ್ರಚುರ ಪಡಿಸಲು ವಿವಿಧ ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅದರ ಮಹತ್ವವು ಪ್ರತಿಧ್ವನಿಗೊಂಡಿತು. ಆದರೆ ಇದನ್ನು ರಕ್ಷಿಸಲು ಸರ್ಕಾರವಾಗಲಿ, ಖಾಸಗಿಯವರಾಗಿ ಅಥವಾ ಸಾರ್ವಜನಿಕರಾಗಲಿ ತೋರಿರುವ ಆಸಕ್ತಿ ಅತ್ಯಲ್ಪ. ಸರ್ಕಾರವು ಕಳೆದ ವರ್ಷ ಸಿರಿಧಾನ್ಯಗಳನ್ನು ಬೆಳೆಯುವವರಿಗೆ ನೀರಾವರಿ ಸೌಲಭ್ಯ ಹಾಗೂ ಬೀಜಗಳ ಪೂರೈಕೆ ಮಾಡುವ ಮೂಲಕ ನೆರವನ್ನು ನೀಡಿತು. ಸಾಮಾನ್ಯವಾಗಿ ಸಿರಿಧಾನ್ಯಗಳಿಗೆ ರಾಸಾಯನಿಕಗಳ ಬಳಕೆ ಕಡಿಮೆ. ಅವುಗಳಿಗೆ ಕೀಟಬಾಧೆ ಹಾಗೂ ರೋಗಗಳನ್ನು ತಾಳಿಕೊಳ್ಳುವ ಗುಣ ಹೆಚ್ಚು.
ಹೀಗೆ ಕಡಿಮೆ ಕೀಟನಾಶಕಗಳನ್ನು ಬಳಸಿ ಹೆಚ್ಚು ಭೂಮಿಯಲ್ಲಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವುದು ಉತ್ತಮ ಕಾರ್ಯತಂತ್ರ. ಈ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಅತಿಹೆಚ್ಚು ಬಂಡವಾಳ ಬೇಡುವ ದುಬಾರಿ ಬೆಳೆಯಾಗಿಸಿ ಅದನ್ನೊಂದು ವಾಣಿಜ್ಯ ಉತ್ಪನ್ನವಾಗಿಸುವುದನ್ನು ತಪ್ಪಿಸಬಹುದು. ಸಿರಿಧಾನ್ಯಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳ ಬಳಕೆ ಕಡಿಮೆ ಎಂದಾದಾಗ ಅವುಗಳನ್ನು ಮಾರಾಟ ಮಾಡುವ ಕಂಪನಿಗಳು ಈ ಬೆಳೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಇಂತಹ ವಾಣಿಜ್ಯ ಸಂಸ್ಥೆಗಳು ಇವುಗಳನ್ನು ಪ್ರೋತ್ಸಾಹಿಸುವುದಿಲ್ಲವಾದ್ದರಿಂದ ಈ ಬೆಳೆಗಳ ಕೃಷಿ ದುರ್ಬಲಗೊಂಡಿದೆ.
ಸಾAಪ್ರದಾಯಿಕವಾಗಿ ಸಿರಿಧಾನ್ಯಗಳಾದ ರಾಗಿಯಂತಹ ಬೆಳೆಯನ್ನು ರೈತರು ಸಾವಯವ ಕೃಷಿ ವಿಧಾನದಲ್ಲೇ ಬೆಳೆಯುತ್ತಾರೆ. ಇಂದು ನಗರ ಪ್ರದೇಶಗಳಲ್ಲಿ ಈ ಬೆಳೆ ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾಗಿರುವುದರಿಂದ ಜನಪ್ರಿಯವಾಗಿದೆ. ಹಿಂದೆ ಇದನ್ನು ಬಳಸುವವರೆಂದರೆ ಅವರು ಬಡವರು ಹಾಗೂ ಹಿಂದುಳಿದವರು ಎಂದಿತ್ತು ಆದರೀಗ ಅದು ಬದಲಾಗಿ ಕ್ರಮೇಣ ರಾಗಿ ಪ್ರಧಾನ ಆಹಾರವಾಗಿ ಸ್ಥಾನಮಾನವನ್ನು ಗಳಿಸತೊಡಗಿದೆ. ಇದು ಸಂಪೂರ್ಣ ವಾಣಿಜ್ಯ ಬೆಳೆಯಾಗಿಬಿಟ್ಟರೆ ಉಳಿದ ಧಾನ್ಯಗಳಾದ ಅಕ್ಕಿ, ಗೋಧಿ, ಜೋಳಗಳಂತೆ ಈ ಬೆಳೆ ಕೂಡ ಏಕಬೆಳೆ ಸಂಸ್ಕೃತಿಯ ಅಪಾಯಕ್ಕೆ ಒಳಗಾಗಬಹುದು. ಇದರಿಂದ ಬೆಳೆಯ ವೈವಿಧ್ಯತೆ ನಷ್ಟವಾಗಬಹುದು ಮತ್ತು ಹವಾಮಾನ ಬದಲಾವಣೆಯೊಂದಿಗೆ ಆ ಬೆಳೆಯ ತಾಳುವಿಕೆಯ ಗುಣ ನಷ್ಟವಾಗಿ ನೈಸರ್ಗಿಕ ವಿಕೋಪ, ರೋಗ ಅಥವ ಕೀಟ ಬಾಧೆಗಳಿಂದ ತೊಂದರೆಗೊಳಗಾಗಬಹುದು. ಆದ್ದರಿಂದ ಭೂಮಿಯ ಸತ್ವ ಹಾಗೂ ಬೆಳೆಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವ ತಂತ್ರಗಳನ್ನು ಇದರೊಂದಿಗೆ ಮಾಡಬೇಕಿದೆ.
ಪ್ರಾಧಾನ್ಯತೆ ಬದಲಾಗಬೇಕಾದ ಅಗತ್ಯತೆಯಿದೆ
ಸರ್ಕಾರದ ನೀತಿಗಳು ಈ ಪ್ರದೇಶಕ್ಕೆ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಹಸಿವನ್ನು ನಿವಾರಿಸಬಹುದು ಆದರೆ ಈ ಕಿರುಧಾನ್ಯಗಳು ಕಣ್ಮರೆಯಾಗಿ ಅಲ್ಲಿ ಮತ್ತೊಂದು ಬಗೆಯ ಅಪೌಷ್ಟಿಕತೆಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ ದೇಸಿ ಸಿರಿಧಾನ್ಯಗಳ ಕೃಷಿಗೆ ಉತ್ತೇಜನ ನೀಡಿ ಅವುಗಳ ಮಾರುಕಟ್ಟೆಯನ್ನು ವಿಸ್ತರಿಸಲು ತಂತ್ರಗಳನ್ನು ರೂಪಿಸಬೇಕು ಆಗ ಅವುಗಳ ಕೃಷಿಯನ್ನು ವಾಣಿಜ್ಯಬೆಳೆಗಳೊಂದಿಗೆ ಹೋಲಿಸಲು ಸಾಧ್ಯವಾಗುತ್ತದೆ. ಇಲ್ಲಿ ಮರಗಳನ್ನು ಬೆಳೆಯುವ ವ್ಯವಸ್ಥೆಯಾದದ್ದರಿಂದ ರೈತರಿಗೆ ತಮ್ಮ ಬಡತನದಿಂದ ಹೊರಬರಲು ನೆರವಾಗಿದೆ. ಆದರೀಗ ಹವಾಮಾನ ವೈಪರಿತ್ಯ/ಬದಲಾವಣೆಯ ಸಂದರ್ಭದಲ್ಲಿ ಈ ಕಿರುಧಾನ್ಯಗಳ ಕೃಷಿಯನ್ನು ಮುಂದುವರೆಸುವ ಮಹತ್ವದ ಕುರಿತು ಅವರಿಗೆ ಶಿಕ್ಷಣ ಒದಗಿಸಬೇಕಾಗಿದೆ. ಬುಡಕಟ್ಟು ರೈತರು ಸಾಂಪ್ರದಾಯಿಕವಾಗಿ ಮಿಶ್ರಬೆಳೆ ಹಾಗೂ ಬೆಳೆಪುನರಾವರ್ತನೆ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಪದ್ಧತಿ ದೇಸಿ ಕೃಷಿಪರಿಸರಕ್ಕೆ ಸೂಕ್ತವಾದದ್ದು. ಈ ರೀತಿಯ ಬೆಳೆಪದ್ಧತಿಗಳು ಕಾಲ ಹಾಗೂ ಹವಾಮಾನ ವೈಪರಿತ್ಯಗಳನ್ನು ಎದುರಿಸಿ ಗೆದ್ದಿವೆ. ಇಂತಹ ಸಾಂಪ್ರದಾಯಿಕ ಬೆಳೆಪದ್ಧತಿಗಳಿಗೆ ನೆರವು ನೀಡಿ ಅವುಗಳನ್ನು ಪ್ರಚುರಪಡಿಸಬೇಕು. ಇಂತಹ ಸುಸ್ಥಿರ ಕೃಷಿ ಪದ್ಧತಿಗಳೇ ಸ್ಥಳೀಯ ಹವಾಮಾನ ಬದಲಾವಣೆ/ವೈಪರಿತ್ಯಗಳನ್ನೆದುರಿಸಲು ಸೂಕ್ತ ವಿಧಾನವಾಗಿರುತ್ತದೆ.
ಮರದ ಬೆಳೆಗಳು ರೈತರಿಗೆ ಉತ್ತಮ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಅವು ಹವಾಮಾನ ವೈಪರಿತ್ಯಗಳಿಗೆ ಮತ್ತು ಕೀಟಬಾಧೆಗಳಿಗೆ ಹೆಚ್ಚು ಸೂಕ್ಷö್ಮವಾಗಿರುತ್ತವೆ. ಆದ್ದರಿಂದ ಸೂಕ್ತ ನಿರ್ವಹಣಾ ಪದ್ಧತಿ ಮತ್ತು ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ಹಾಗೆ ಮಾಡಿದಲ್ಲಿ ಮರಗಳನ್ನು ಮತ್ತು ಸಿರಿಧಾನ್ಯಗಳನ್ನು ಬೆಳೆಯಬಹುದು. ಇಲ್ಲದೇ ಹೋದಲ್ಲಿ ಅಲ್ಪಾವಧಿಯ ಆರ್ಥಿಕ ಗಳಿಕೆಯ ಮೇಲೆ ಭವಿಷ್ಯದಲ್ಲಿ ಹವಾಮಾನ ಬದಲಾವಣೆ/ವೈಪರಿತ್ಯದಿಂದಾಗಿ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು. ಜೊತೆಗೆ ಹವಾಮಾನ ಬದಲಾವಣೆ/ವೈಪರಿತ್ಯದಿಂದಾಗಿ ಮರದ ಬೆಳೆ ಮತ್ತು ವೈವಿಧ್ಯಮಯ ಸಿರಿಧಾನ್ಯಗಳು ಹಾಳಾದಲ್ಲಿ ಅವು ರೈತರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು.
ಹವಾಮಾನ ಬದಲಾವಣೆ ಹಾಗೂ ಅಪೌಷ್ಟಿಕತೆ ಮತ್ತು ಹಸಿವಿನ ವಿರುದ್ಧ ಹೋರಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಬುಡಕಟ್ಟು ಸಮುದಾಯಗಳಲ್ಲಿ ಸಿರಿಧಾನ್ಯಗಳ ಮತ್ತು ಮಹಿಳೆಯರ ನಡುವೆ ಅವಿನಾಭಾವ ಸಂಬoಧವಿದ್ದು ಈ ಸಂಬAಧವನ್ನು ಮುರಿಯಲಾಗದು. ಸಂಪತ್ತಿಗೆ ಬದಲಾಗಿ ಆರೋಗ್ಯದ ಕಡೆ ಗಮನನೀಡಬೇಕಾದ ಅಗತ್ಯವನ್ನು ವಿವರಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಈ ಪ್ರದೇಶ ಮುಂದೆ ಆರೋಗ್ಯಸಂಬAಧಿ ಸಮಸ್ಯೆಗಳಿಗೆ ಸಿಲುಕದಂತಿರಲು ಆರೋಗ್ಯ ಮತ್ತು ಸಂಪತ್ತಿನ ನಡುವಿನ ತೆಳುಗೆರೆಯ ಕುರಿತು ಅರಿವು ಮೂಡಿಸಬೇಕು.
ಕ್ರಮಿಸಬೇಕಾದ ಹಾದಿ
ಒರಿಸ್ಸಾದಲ್ಲಿನ ೩೦ ಜಿಲ್ಲೆಗಳು ಪರ್ವತಗಳಿಂದ ಮತ್ತು ಬೆಟ್ಟಪ್ರದೇಶಗಳಿಂದ ಕೂಡಿದ್ದು ರಾಗಿ ಮತ್ತಿತರ ಸಿರಿಧಾನ್ಯಗಳನ್ನು ಬೆಳೆಯಲು ಸೂಕ್ತ ಪ್ರದೇಶವಾಗಿದೆ. ಈ ಪ್ರದೇಶಗಳು ಪೌಷ್ಟಿಕಾಂಶದ ಅಗತ್ಯವಿರುವ ಬುಡಕಟ್ಟುಗಳ ತವರುಭೂಮಿ. ಆದ್ದರಿಂದ ಈ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿ ಪ್ರಚುರ ಪಡಿಸುವುದರಿಂದ ಸ್ಥಳೀಯ ಸಮುದಾಯಗಳಿಗೆ ಹೆಚ್ಚು ಲಾಭದಾಯಕವಾಗುತ್ತದೆ.
ಪ್ರಸ್ತುತದಲ್ಲಿರುವ ನೀತಿಗಳು ಹಾಗೂ ಅವುಗಳ ಅನುಷ್ಟಾನ ಅಳಿಯುತ್ತಿರುವ ಈ ಸಿರಿಧಾನ್ಯಗಳ ಕೃಷಿಗೆ ನೆಪಮಾತ್ರವಾಗಿದೆ. ಈ ಬೆಳೆಗಳನ್ನು ಬೆಳೆವ ಪ್ರದೇಶವನ್ನು ಹೆಚ್ಚಿಸಲು ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಅಥವಾ ಅಳಿದು ಹೋಗುತ್ತಿರುವ ವೈವಿಧ್ಯಮಯ ಧಾನ್ಯಗಳನ್ನು ಪುನಶ್ಚೇತನಗೊಳಿಸಲು ಕ್ರಮಕೈಗೊಳ್ಳದಿದ್ದಲ್ಲಿ ಹವಾಮಾನ ಬದಲಾವಣೆಗಳಿಂದುAಟಾಗುವ ಆಹಾರ ಕೊರತೆಯ ಸಮಸ್ಯೆಯ ವಿರುದ್ಧ ಹೋರಾಡುವ ಮೂಲಗಳನ್ನು ಕಳೆದುಕೊಂಡುಬಿಡುತ್ತೇವೆ. ಪ್ರಸ್ತುತ ಸನ್ನಿವೇಶದ ಆಧಾರದ ಮೇಲೆ ಸಾಂಪ್ರದಾಯಿಕವಾಗಿ ಸಿರಿಧಾನ್ಯಗಳನ್ನು ಬೆಳೆಯುವುದನ್ನು ಈ ಪ್ರದೇಶದಲ್ಲಿ ಮುಂದುವರೆಸಲು ನೆರವಾಗುವಂತೆ ನಾವು ನೀತಿಗಳಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸುತ್ತಿದ್ದೇವೆ.
ಈ ಬದಲಾವಣೆಗಳು ಹವಾಮಾನ ಬದಲಾವಣೆಯಲ್ಲೂ ಭೂಮಿಯ ಸತುವನ್ನು ಉಳಿಸಲು ನೆರವು ನೀಡಬಹುದು. ಇದು ಈ ಪ್ರದೇಶದಲ್ಲಿನ ಬಡವರಿಗೆ ಪೌಷ್ಟಿಕಾಂಶಗಳ ಮೂಲವಾದ ಸಿರಿಧಾನ್ಯಗಳನ್ನು ಒದಗಿಸುವುದರ ಮೂಲಕ ಅಪೌಷ್ಟಿಕತೆಯ ಸಮಸ್ಯೆಯನ್ನು ತಗ್ಗಿಸಬಹುದು. ಆರೋಗ್ಯಕರ ಸಮುದಾಯಗಳಲ್ಲಿ ಹಸಿವನ್ನು ನಿವಾರಿಸುವುದೊಂದೇ ಅಂತಿಮ ಗುರಿಯಲ್ಲ. ಈ ಪ್ರದೇಶದಲ್ಲಿ ಅಪೌಷ್ಟಿಕತೆಯ ಸಮಸ್ಯೆಗೂ ಸಮಾನ ಒತ್ತನ್ನು ನೀಡಬೇಕು. ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಕೃಷಿಗೆ ಸಂಬAಧಿಸಿದAತೆ ಸರ್ಕಾರವು ನೀತಿ ಬದಲಾವಣೆಗಳನ್ನು ಮಾಡಬೇಕು.
Ranjit K Sahu is a freelance writer currently located in Virginia, USA
E-mail: sahurk9@gmail.com
Ravi Shankar Behera
Independent Freelance Development Consultant
based in New Delhi
E-mail: rsbehera@rediffmail.com
Srinibash Das
District Coordinator,
Agragamee,
Rayagada – 765001
Odisha
E-mail: dassrinivash@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೧ , ಮಾರ್ಚ್ ೨೦೧೭



