ವ್ಯತಿರಿಕ್ತ ಹವಾಮಾನದಲ್ಲೂ ಬದುಕುಳಿಯುವ ಸಾಮರ್ಥ್ಯ, ಪೌಷ್ಟಿಕಾಂಶಗಳು ಮತ್ತು ಉತ್ತಮ ಆರೋಗ್ಯಕ್ಕೆ ನೆರವು ನೀಡುವಂತಹ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಲು ದೇಶದಲ್ಲಿ ಆಸಕ್ತಿ ಹೆಚ್ಚುತ್ತಿದೆ. ವಿವಿಧ ಸಂಸ್ಥೆಗಳು ಸಿರಿಧಾನ್ಯಗಳ ಕೃಷಿ ಮತ್ತು ಮಾರಾಟಕ್ಕೆ ಹಲವು ಕ್ರಮಗಳನ್ನು ಕೈಗೊಂಡಿವೆ. ಈ ಪ್ರಯತ್ನಗಳು ಹೆಚ್ಚು ಪರಿಣಾಮಕಾರಿಯಾಗಬೇಕೆಂದರೆ ಈ ವಲಯದ ಎಲ್ಲ ಪ್ರಮುಖರು ಒಟ್ಟಾಗಿ ಸಂಪರ್ಕಜಾಲವನ್ನು ವಿಸ್ತರಿಸಿಕೊಳ್ಳಬೇಕು.
ಪ್ರಪಂಚದ ಅರ್ಧದಷ್ಟು ಪ್ರದೇಶಗಳಲ್ಲಿ ಕಿರುಧಾನ್ಯಗಳು ಅಂದರೆ ಸಣ್ಣ ಕಾಳಿನ ಹುಲ್ಲಿನ ಧಾನ್ಯಗಳು ಆಹಾರ ಹಾಗೂ ಮೇವಿಗೆ ಪ್ರಮುಖವಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಕಿರುಧಾನ್ಯಗಳನ್ನು ಸಾಂಪ್ರದಾಯಿಕವಾಗಿ ಒಣಭೂಮಿಯಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಹೆಚ್ಚಾಗಿ ಬಡವರು, ಸಣ್ಣ ರೈತರು ಮತ್ತು ಬುಡಕಟ್ಟು ಸಮುದಾಯಗಳವರು ಬೆಳೆಯುತ್ತಾರೆ. ಆದರೆ ಇದನ್ನು ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ದೇಶದಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಕಾರಣವೆಂದರೆ ಅದರಲ್ಲಿನ ಪೌಷ್ಟಿಕತೆಯ ಅಂಶಗಳು, ಆರೋಗ್ಯಕ್ಕೆ ಉತ್ತಮವಾದದ್ದು ಮತ್ತು ಎಂತಹ ಪರಿಸ್ಥಿತಿಯನ್ನಾದರೂ ತಾಳಿಕೊಂಡು ಬೆಳೆಯಬಲ್ಲುದು ಎನ್ನುವುದು. ಈ ಧಾನ್ಯಗಳು ಒಣಭೂಮಿಯಲ್ಲಿ ಅತಿಹೆಚ್ಚಿನ ತಾಪಮಾನದಲ್ಲೂ ಬೆಳೆಯಬಲ್ಲುದು. ಸತ್ವರಹಿತ ಮಣ್ಣು, ಕಡಿಮೆ ತೇವಾಂಶಗಳೊAದಿಗೆ ಹೋರಾಡುತ್ತಾ ಹೆಚ್ಚಿನ ಆರೈಕೆ ಮಾಡಲಾಗದ ಮಿಲಿಯನ್‌ಗಟ್ಟಲೆ ಬಡವರು, ಸಣ್ಣ ರೈತರಿಗೆ ಈ ಧಾನ್ಯಗಳು ನೆರವು ನೀಡುತ್ತಿವೆ. ಅವುಗಳ ತಾಳಿಕೆಯ ಗುಣ ಹಾಗೂ ಪೌಷ್ಟಿಕಾಂಶಗುಣಗಳು ಹವಾಮಾನ ಬದಲಾವಣೆಯ ಸಂದರ್ಭಕ್ಕೆ ಅಳವಡಿಸಿಕೊಳ್ಳಲು ಸೂಕ್ತವಾದ ಬೆಳೆಯಾಗಿಸಿದೆ.
ಕಿರುಧಾನ್ಯಗಳ ಬಳಕೆ ಹೆಚ್ಚುವಂತೆ ಮಾಡಲು ಅದು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ, ಅದನ್ನು ಜನಪ್ರಿಯಗೊಳಿಸುವಲ್ಲಿ ಇರುವ ತೊಂದರೆಗಳನ್ನು ಅಭ್ಯಸಿಸಲು ೨೦೧೬ ಮತ್ತು ೨೦೧೭ರಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶಗಳಲ್ಲಿ ಕೈಗೊಳಲಾಯಿತು. ಈ ಅಧ್ಯಯನವನ್ನು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಆಕ್ಷನ್ ಫಾರ್ ಸೋಷಿಯಲ್ ಅಡ್ವಾನ್ಸ್ಮೆಂಟ್ ಅಂಡ್ ಬಯೋಡೈವರ್ಸಿಟಿ ಇಂಟರ್‌ನ್ಯಾಷನಲ್‌ನವರು ಕೈಗೊಂಡಿದ್ದರು. ಸಂಶೋಧನೆ ಮತ್ತು ಈ ಬೆಳೆಗಳ ಅಭಿವೃದ್ಧಿಯಲ್ಲಿ ಮುಖ್ಯಭಾಗೀದಾರರನ್ನು ಒಳಗೊಳ್ಳಲಾಯಿತು. ಇವರುಗಳನ್ನು ಸಂದರ್ಶಿಸುವ ಮೂಲಕ, ಅಂತರ್ಜಾಲ ಸಂಶೋಧನೆಯ ಮೂಲಕ, ಆಯ್ದ ಜನರ ವಿಧಾನಗಳ ಅಭ್ಯಸಿಸುವ ಮೂಲಕ ಈ ಅಧ್ಯಯನವನ್ನು ಕೈಗೊಳ್ಳಲಾಯಿತು.
ಸಿರಿಧಾನ್ಯಗಳ ಕೃಷಿಯೇಕೆ ಜನಪ್ರಿಯಗೊಳ್ಳುತ್ತಿಲ್ಲ?
ಸಿರಿಧಾನ್ಯಗಳ ಕೃಷಿ ಕಡಿಮೆಯಾಗಿರುವುದರ ಹಿಂದೆ ಹಲವು ಪ್ರಮುಖ ಕಾರಣಗಳಿವೆ. ಉತ್ಪನ್ನ ಕಡಿಮೆಯಾಗಿರುವುದು, ಹೆಚ್ಚಿನ ಕೂಲಿಯಾಳುಗಳ ಅವಶ್ಯಕತೆ, ಕೊಯ್ಲಿನ ನಂತರದ ಕೆಲಸಗಳ ಕ್ಲಿಷ್ಟತೆ ಮತ್ತು ಉತ್ಪನ್ನಗಳಿಗೆ ಸಿಗುವ ಕಡಿಮೆ ಬೆಲೆ ಇವು ಮುಖ್ಯ ಅಂಶಗಳು. ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಗೋಧಿ ಮತ್ತು ಅಕ್ಕಿ ಸುಲಭವಾಗಿ ಸಿಗುವಂತಾದ್ದರಿAದ ಆಹಾರಕ್ರಮದಲ್ಲಿ ಬದಲಾವಣೆಯಾಯಿತು. ಕಿರುಧಾನ್ಯಗಳ ಸಿಪ್ಪೆಸುಲಿದು ಕಾಳನ್ನು ಬೇರ್ಪಡಿಸುವುದು ಉತ್ಪಾದಕರಿಗೆ/ರೈತರಿಗೆ ತಲೆನೋವಿನ ಕೆಲಸ. ರಾಗಿ ಮಾತ್ರ ಈ ವಿಷಯದಲ್ಲಿ ವಿನಾಯ್ತಿ ಪಡೆದಿದೆ. ರಾಗಿಕಾಳನ್ನು ಬೇರ್ಪಡಿಸುವ ತಂತ್ರಜ್ಞಾನವು ರೂಪುಗೊಂಡಿದೆ. ಉತ್ಪನ್ನದ ಅಭಿವೃದ್ಧಿಗೆ ಹಾಗೂ ಮಾರಾಟ ವ್ಯವಸ್ಥೆಗೆ ಸಾಕಷ್ಟು ಬಂಡವಾಳ ಹೂಡಲು ಸಾಧ್ಯವಾಗದಿರುವುದು, ಇದನ್ನು ಬಳಸುವವರು ಸಾಮಾಜಿಕವಾಗಿ ಕೆಳಸ್ತರದಲ್ಲಿರುವವರು ಎನ್ನುವ ನಂಬಿಕೆ ಇವೆಲ್ಲವೂ ಕಿರುಧಾನ್ಯಗಳ ಕೃಷಿ ಹಿಂದೆ ಸರಿಯಲು ಕಾರಣವಾಗಿರುವ ಅಂಶಗಳು. ಸಿರಿಧಾನ್ಯಗಳಿಂದ ದಿನನಿತ್ಯದ ಆಹಾರಕ್ರಮಕ್ಕೆ ಹೊಂದುವAತಹ ರುಚಿಕರವಾದ ತಿಂಡಿಗಳನ್ನು ಮಾಡಬಹುದಾದರೂ ಅವುಗಳ ಬಗ್ಗೆ ಬಹುಮಂದಿಗೆ ಅದನ್ನು ತಯಾರುಮಾಡುವುದು ತಿಳಿದಿಲ್ಲ. ಸಿರಿಧಾನ್ಯಗಳಿಂದ ಮಾಡಲಾದ ತಿಂಡಿಗಳು ಸ್ಥಳೀಯಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆ. ಸಿಕ್ಕರೂ ಅವುಗಳ ಬೆಲೆ ದುಬಾರಿಯಾದ್ದರಿಂದ ಅವುಗಳು ಜನಪ್ರಿಯವಾಗುತ್ತಿಲ್ಲ. sssssಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದೊಂದಿಗೆ ನಾವು ನಡೆಸಿದ ಅಧ್ಯಯನದ ಸಾರಾಂಶ ಇಲ್ಲಿದೆ. ನಮ್ಮ ಅಧ್ಯಯನದ ಪ್ರಕಾರ ಭಾರತದಲ್ಲಿನ ಅತಿ ಹೆಚ್ಚು ಪೌಷ್ಟಿಕಾಂಶವುಳ್ಳ ಈ ಬೆಳೆಗಳನ್ನು ಈ ಅಂಶಗಳತ್ತ ಗಮನಹರಿಸುವುದರ ಮೂಲಕ ಉಳಿಸಿಕೊಳ್ಳಬಹುದಾಗಿದೆ.
ಸಂಸ್ಕರಣೆಯೇ ಅತಿ ದೊಡ್ಡ ಸವಾಲು
ಗ್ರಾಹಕರ ಬೇಡಿಕೆಗೆ ತಕ್ಕಹಾಗೆ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಹಾಗೆ ಕಿರುಧಾನ್ಯಗಳನ್ನು ಒದಗಿಸುವಲ್ಲಿ ಉತ್ಪಾದಕರು ಎದುರಿಸುವ ಬಹುಮುಖ್ಯ ಸವಾಲು ಸಂಸ್ಕರಣೆ. ರೈತರಿಗೆ ಸಂಸ್ಕರಣ ಘಟಕಗಳನ್ನು ಒದಗಿಸುವಲ್ಲಿ ಹಾಗೂ ಸಂಸ್ಕರಿತ ಸಿರಿಧಾನ್ಯಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ. ತಮ್ಮ ಜಮೀನುಗಳಿಗೆ ಹತ್ತಿರದಲ್ಲಿ ಸಂಸ್ಕರಣ ಘಟಕಗಳು ಇಲ್ಲದಿರುವುದರಿಂದ ರೈತರು ಅನಿವಾರ್ಯವಾಗಿ ಧಾನ್ಯಗಳ ಸಂಸ್ಕರಣಕ್ಕಾಗಿ ದೂರದ ಪ್ರದೇಶಗಳಿಗೆ ಹೋಗಬೇಕಾಗಿದೆ. ಉದಾಹರಣೆಗೆ ಧರ್ಮಪುರಿ (ತಮಿಳುನಾಡು), ಕೊರಪುಟ್ (ಒಡಿಶಾ) ಅಥವ ದಿನ್ದೋರಿ ಮತ್ತು ಮಂಡಲ ಜಿಲ್ಲೆ (ಮಧ್ಯ ಪ್ರದೇಶ)ಗಳಲ್ಲಿ ಕಿರುಧಾನ್ಯಗಳು ಮತ್ತು ಆರ್ಕ/ಹಾರಕಗಳನ್ನು ಬೆಳೆಯಲಾಗುತ್ತದೆ. ಈ ಧಾನ್ಯಗಳನ್ನು ಸಂಸ್ಕರಿಸಲು ದೂರದ ಮಹಾರಾಷ್ಟçದ ನಾಸಿಕ್‌ಗೆ ಕೊಂಡೊಯ್ಯಬೇಕಾಗುತ್ತದೆ. ಈ ಕಾರಣದಿಂದ ಭತ್ತ ಮತ್ತು ಗೋಧಿ ಉತ್ಪನ್ನಗಳಿಗೆ ಹೋಲಿಸಿದಲ್ಲಿ ಸಿರಿಧಾನ್ಯಗಳ ಉತ್ಪನ್ನಗಳಿಗೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಖಾಸಗಿ ವಲಯಗಳು ದೊಡ್ಡಮಟ್ಟದಲ್ಲಿ ಸಂಸ್ಕರಣ ಘಟಕಗಳನ್ನು ದಕ್ಷಿಣಭಾರತದಲ್ಲಿ (ಉದಾ: ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ) ಹಾಗೂ ಇತ್ತೀಚೆಗೆ ಛತ್ತೀಸ್‌ಗಡದ ರಾಯಪುರದಲ್ಲಿ ಸ್ಥಾಪಿಸಿದೆ. ಇದು ಸ್ಥಳೀಯ ಹಾಘೂ ಪ್ರಾದೇಶಿಕ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಉತ್ಪನ್ನ ಒದಗಿಸುವಲ್ಲಿ ಇತ್ಯಾತ್ಮಕ ಪರಿಣಾಮವನ್ನು ಬೀರಿದೆ. ಇದೇ ರೀತಿಯಲ್ಲಿ ದೇಶದ ಇತರ ಭಾಗಗಳಲ್ಲಿ ಕೂಡ ನಡೆದಲ್ಲಿ ಫಲಾನುಭವಿಗಳಿಗೆ ಪ್ರಯೋಜನವಾಗುತ್ತದೆ.
ಕಿರುಧಾನ್ಯಗಳಾದ ಆರ್ಕದಂತಹವುಗಳಿಗೆ ಸೂಕ್ತ ಸಂಸ್ಕರಣಾ ಸೌಲಭ್ಯಗಳ ಕೊರತೆಯಿದೆ
ದೇಶದಾದ್ಯಂತ ಸಿರಿಧಾನ್ಯ ಸಂಸ್ಕರಣ ಯಂತ್ರಗಳ ಮಾರಾಟವನ್ನು ತೆರಿಗೆ ವಿನಾಯ್ತಿ/ಕಡಿತದೊಂದಿಗೆ ನೀಡಿದಲ್ಲಿ ಅದು ಸಿರಿಧಾನ್ಯಗಳ ಬೆಲೆಯನ್ನು ಕಡಿಮೆಗೊಳಿಸುವುದರೊಂದಿಗೆ ಅದರ ಅಭಿವೃದ್ಧಿಯನ್ನು ಪ್ರೋತ್ಸಾಹಿಸದಂತಾಗುತ್ತದೆ. ಸಂಸ್ಕರಣ ಯಂತ್ರಗಳನ್ನು ಸಾಗಿಸುವುದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದಲ್ಲಿ ರಾಜ್ಯಗಳಲ್ಲಿ ತಂತ್ರಜ್ಞಾನವನ್ನು ಪಸರಿಸಲು ನೆರವಾಗುತ್ತದೆ. ಸರ್ಕಾರದ “ಸಿರಿಧಾನ್ಯಗಳ ಪ್ರಚಾರದ ಪೌಷ್ಟಿಕಾಂಶ ಭದ್ರತೆ”ಯಡಿಯಲ್ಲಿ ಸಣ್ಣ ಪ್ರಮಾಣದ ಸಿರಿಧಾನ್ಯ ಸಂಸ್ಕರಣ ಯಂತ್ರಗಳನ್ನು ತಮಿಳುನಾಡಿನಿಂದ (ಸೇಲಂ, ಈರೋಡ್, ಕೊಯಂಬತ್ತೂರು) ಉತ್ತರಭಾರತದ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದು ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ. ಈ ಕಾರ್ಯಕ್ರಮದಡಿಯಲ್ಲಿ ಪೂರೈಕೆಗೊಂಡ ಯಂತ್ರಗಳ ಸಂಪೂರ್ಣ ಬಳಕೆಯ ಕಡೆಗೆ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ನಮಗನ್ನಿಸಿದ್ದೇನೆಂದರೆ ಯಂತ್ರಗಳ ನಿರ್ವಹಣೆ ಕುರಿತು ಯುವಜನರಿಗೆ ತರಬೇತಿ ನೀಡಿದಲ್ಲಿ ಹೊಸ ಉದ್ಯೋಗದ ಅವಕಾಶಗಳನ್ನು ತೆರೆದಂತಾಗುತ್ತದೆ. ಇದರೊಟ್ಟಿಗೆ ಸದ್ಯದಲ್ಲಿರುವ ಗಿರಣಿಗಳ ಪ್ರಯೋಜನವನ್ನು ಪಡೆದಂತಾಗುತ್ತದೆ.
ನಿರ್ಧಿಷ್ಟವಾಗಿ ಹೇಳಬೇಕೆಂದರೆ ಹಲವು ಗಾತ್ರಗಳಲ್ಲಿರುವ ಕಿರುಧಾನ್ಯಗಳ ಹೊಟ್ಟನ್ನು ಬೇರ್ಪಡಿಸಲು ಸೂಕ್ತವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾದ ತುರ್ತಿನ ಸಂದರ್ಭವಿದಾಗಿದೆ. ಈ ನಿಟ್ಟಿನಲ್ಲಿ ಹೊಟ್ಟಿನೊಂದಿಗೆ ನುಚ್ಚು ಹಾಗೂ ಕಾಳುಗಳನ್ನು ಬೇರ್ಪಡಿಸಬಲ್ಲಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಜೊತೆಗೆ ಮೌಲ್ಯವರ್ಧಕ ಘಟಕಗಳ ಜರಡಿ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಈ ಕೆಲಸಕ್ಕೆ ದೊಡ್ಡ ಮಟ್ಟದ ಯಂತ್ರಗಳು ಸಿಗುತ್ತವೆ. ಆದರೆ ಸಮುದಾಯದ ಮಟ್ಟದಲ್ಲಿ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೊಂದುವAತೆ ಯಂತ್ರಗಳನ್ನು ರೂಪಿಸಬೇಕಿದೆ. ಇದು ರೈತರ ಉದ್ಯಮಗಳ ಅಭಿವೃದ್ಧಿಗೆ ನೆರವು ನೀಡುತ್ತವೆ.
ಗುಣಮಟ್ಟದ ಉತ್ಪನ್ನಗಳಿಗೆ ತಂತ್ರಜ್ಞಾನಗಳು ಮತ್ತು ಮಾನದಂಡಗಳು
ಸAಸ್ಕರಿತ ಉತ್ಪನ್ನಗಳು ತಕ್ಷಣ ಸಿಗುವಂತೆ ಮಾಡುವುದು ಸಿರಿಧಾನ್ಯಗಳಿಗೆ ಗ್ರಾಹಕರ ಬೇಡಿಕೆಯನ್ನು ತಂದುಕೊಡಬಲ್ಲದು. ಈ ಉತ್ಪನ್ನಗಳ ಗುಣಮಟ್ಟವವನ್ನು ಉತ್ತಮವಾಗಿ ಕಾಯ್ದಿರಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಗ್ರಾಹಕರ ಬೇಡಿಕೆಗೆ ತಕ್ಕಂತಿರುವ ಸಿರಿಧಾನ್ಯಗಳ ಉತ್ಪನ್ನಗಳನ್ನು ಒದಗಿಸಲು ಮಾನದಂಡಗಳನ್ನು ಮತ್ತು ಆಹಾರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಸಿರಿಧಾನ್ಯಗಳ ಅಕ್ಕಿ, ರವೆ ಹಾಗೂ ಹಿಟ್ಟು ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಹೆಚ್ಚು ಕಾಲ ಕೆಡದಂತೆ ಇರಿಸುವಂತಹ ಸೂಕ್ತ ತಂತ್ರಜ್ಞಾನಗಳ ಸಂಶೋಧನೆ ನಡೆಯಬೇಕಾಗಿದೆ. ಈ ಸಂಶೋಧನೆಗಳು ಉತ್ಪನ್ನಗಳ ಗುಣಮಟ್ಟ ಮತ್ತು ಪೌಷ್ಟಿಕಾಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು. ಈ ಸಂಶೋದನೆಗಳು ಸಿರಿಧಾನ್ಯಗಳ ಸಣ್ಣಮಾರುಕಟ್ಟೆಯನ್ನು ಬಲಪಡಿಸಲು ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಣಾಮಗಳನ್ನು ಉಂಟುಮಾಡಬಲ್ಲುದು. ಸಿರಿಧಾನ್ಯಗಳಲ್ಲಿನ ಪೌಷ್ಟಿಕಾಂಶಗಳ ಉಪಯೋಗವನ್ನು ಹೆಚ್ಚು ಹೆಚ್ಚು ಪಡೆಯಲು ಸಾಧ್ಯವಾಗುವಂತಹ ಸಂಶೋಧನೆಗಳು ಹೆಚ್ಚಾಗಬೇಕು. ಉದಾಹರಣೆಗೆ ಕಾಳುಗಳನ್ನು ನೆನಸಿಡುವುದರಿಂದ ಅದರಲ್ಲಿನ ಫೈಟಿಕ್ ಆಸಿಡ್ ಹಾಗೂ ಫೈಟೇಸ್ ಪ್ರಕ್ರಿಯೆ ಕಡಿಮೆಯಾಗುತ್ತದೆ ಇದರಿಂದ ಅವುಗಳಲ್ಲಿ ಪೌಷ್ಟಿಕಾಂಶಗಳು ನಷ್ಟವಾಗುವುದು ತಪ್ಪುತ್ತದೆ. ಮಹಾರಾಷ್ಟç, ಮಧ್ಯಪ್ರದೇಶ ಮತ್ತಿತರ ನೆರಯ ರಾಜ್ಯಗಳಲ್ಲಿ ಪಾಲಿಷ್ ಮಾಡಿದ ಸಿರಿಧಾನ್ಯದ ಅಕ್ಕಿಯನ್ನು (“ಭಾಗಾರ್ ಫುಡ್” ಎನ್ನುವ ಹೆಸರಿನಲ್ಲಿ ಫಾಸ್ಟ್ ಫುಡ್ ಆಗಿ ಬಳಸಲಾಗುತ್ತಿದೆ) ಹಲವು ಹೆಸರುಗಳಲ್ಲಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ‘ಕ¯ರ್ ಸ್ಟೋರಿಂಗ್’ ತಂತ್ರಜ್ಞಾನವನ್ನು ಬಳಸಿಕೊಂಡು ಪಾಲಿಷ್ ಮಾಡಿದಾಗ ನಷ್ಟವಾಗುತ್ತಿರುವ ಅಕ್ಕಿಯ ಪೌಷ್ಟಿಕಾಂಶಗಳನ್ನು ಕಡೆಗಣಿಸಿ ಇದನ್ನು ಮಾರಲಾಗುತ್ತಿದೆ. ಮತ್ತೊಂದೆಡೆ ಪಾಲಿಷ್ ಮಾಡದ ಹಾಗೂ ಅರೆಬೇಯಿಸಿದ ಕಿರುಧಾನ್ಯಗಳ ಅಕ್ಕಿಯ ಉತ್ಪನ್ನಗಳು ನಗರ ಹಾಗೂ ಅರೆಗ್ರಾಮೀಣ ಪ್ರದೇಶಗಳ ಮಾರುಕಟ್ಟೆಯಲ್ಲಿ ಹುಟ್ಟಿಕೊಳ್ಳುತ್ತಿವೆ. ಇಂತಹ ಉತ್ಪನ್ನಗಳ ಉತ್ಪಾದನೆಯನ್ನು ನಿರ್ದೇಶಿಸುವಂತಹ ಸಂಶೋಧನೆಗಳು ಕೂಡ ನಡೆಯಬೇಕಿದೆ. ಅಕ್ಕಿ ಮತ್ತು ಗೋಧಿಯ ಉತ್ಪನ್ನಗಳಿಗೆ ಅಔಆಇಘಿ ಮಾನದಂಡವಿದೆ. ಆದರೆ ಸಿರಿಧಾನ್ಯಗಳ ಸಂಸ್ಕರಣೆ ಮಾಡುವವರಿಗೆ ಅಂತಹ ಮಾನದಂಡಗಳಿಲ್ಲ. ಅಂದರೆ ಎಷ್ಟರಮಟ್ಟಿಗೆ ಹೊಟ್ಟು, ನುಚ್ಚು, ಸಂಸ್ಕರಣೆಯ ನಂತರ ಎಷ್ಟು ಧಾನ್ಯ ಉಳಿಯಬಹುದು ಎನ್ನುವುದಕ್ಕೆ ಮಾನದಂಡಗಳಿವೆ. ಮಾರುಕಟ್ಟೆಯಲ್ಲಿ ಭತ್ತ, ಬೀಜದ ಕಾಳುಗಳು, ಸಣ್ಣ ಕಲ್ಲುಗಳು, ಕೀಟನಾಶಕ ಬಳಸಿದ ಅಥವ ಮಗ್ಗುಲಾಗಿರುವ ಅಕ್ಕಿ ಸಾಮಾನ್ಯವಾಗಿ ಸಿಗುತ್ತದೆ. ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಇದನ್ನು ರೂಪಿಸುವಾಗ ಉತ್ಪನ್ನಗಳ ಐಡೆಂಟಿಟಿ ಹಾಗೂ ಅವುಗಳ ಸಂಯೋಜನೆಯ ವಿವರ, ಪೌಷ್ಟಿಕಾಂಶಗಳ ವಿವರಗಳು, ಗುಣಮಟ್ಟ ಕಾಯ್ದಿರಿಸಿಕೊಂಡ ಆಹಾರ ಸುರಕ್ಷತೆ ಮತ್ತು ಒಳ್ಳೆಯ ಉತ್ಪನ್ನಗಳ ನಡುವಿನ ವಿಭಿನ್ನತೆ ಇವುಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳ ಮೂಲಕ ಇವುಗಳ ಬಳಕೆ ಹೆಚ್ಚಳ
ಸಾರ್ವಜನಿಕ ಸಂಗ್ರಹಣೆ ಕಾರ್ಯಕ್ರಮಗಳು ಸಿರಿಧಾನ್ಯಗಳ ಬಳಕೆಯನ್ನು, ಅವುಗಳ ಪೌಷ್ಟಿಕತೆ ಹಾಗೂ ಸುಸ್ಥಿರತೆಯ ಪ್ರಯೋಜನಗಳನ್ನು ಪ್ರಚುರಪಡಿಸುವ ಅತ್ಯಮೂಲ್ಯ ಅವಕಾಶವನ್ನು ಒದಗಿಸುತ್ತದೆ. ಪ್ರತಿ ರಾಜ್ಯದ ಆಹಾರ ಭದ್ರತಾ ಮಸೂದೆ (೨೦೧೩), ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಿರಿಧಾನ್ಯಗಳನ್ನು ಸೇರಿಸುವುದರ ಬಗ್ಗೆ (ಒರಟು ಧಾನ್ಯಗಳೆನ್ನುವರು) ಮರುಪರಿಶೀಲಿಸಬೇಕು. ವೈವಿಧ್ಯಮಯ ಸಿರಿಧಾನ್ಯಗಳನ್ನು ಪಡಿತರ ಬೆಲೆಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಲು ವಿಕೇಂದ್ರಿತ ಸಂಗ್ರಹಣಾ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಕರಣಾ ವ್ಯವಸ್ಥೆ ಮತ್ತು ಅವುಗಳನ್ನು ಬ್ಲಾಕ್ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡುವ ಸಾರ್ವಜನಿಕ ವಿತರಣಾ ವ್ಯವಸ್ಥೆಗಳು ಬೇಕು. ಕರ್ನಾಟಕ ಸರ್ಕಾರವು ಉತ್ತರ ಹಾಗೂ ಜಿಲ್ಲೆಗಳಲ್ಲಿ ಜೋಳ ಹಾಗೂ ರಾಗಿಯನ್ನು ಯಶಸ್ವಿಯಾಗಿ ಪಡಿತರ ಬೆಲೆ ಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಜಿಲ್ಲೆಗಳಲ್ಲಿ ಜೋಳ ಮತ್ತು ರಾಗಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸಿಗುವಂತೆ ಮಾಡಲಾಗಿದೆ. ಗ್ರಾಹಕರು ಇವುಗಳನ್ನು ಬಳಸಲು ಸ್ಥಳೀಯ ಗಿರಣಿಗಳಲ್ಲಿ ಹಿಟ್ಟುಮಾಡಿಸಿಕೊಳ್ಳಬಹುದು. ಸಾಮೆ, ನವಣೆ, ಊದಲು ಹಾಗೂ ಬರಗನ್ನು ಇನ್ನೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೇರಿಸಿಲ್ಲ. ಇವುಗಳನ್ನು ಬಳಸುವಂತಾಗಬೇಕೆAದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಹೋಗುವ ಮುನ್ನ ಇವುಗಳ ಸಿಪ್ಪೆ/ಹೊಟ್ಟು ಬಿಡಿಸಿರಬೇಕು ಅಥವ ಈ ಕೆಲಸಕ್ಕೆ ನೆರವಾಗುವಂತಹ ಸಣ್ಣ ಮಟ್ಟದ ಸಂಸ್ಕರಣಾ ತಂತ್ರಜ್ಞಾವನ್ನು ಘಟಕದ ಮಟ್ಟದಲ್ಲಾದರೂ ಒದಗಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿಗೆ ಸಿರಿಧಾನ್ಯಗಳನ್ನಾಧರಿಸಿದ ರೆಡಿ ಟು ಈಟ್ ತಿಂಡಿಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಇದರಿಂದ ಮಕ್ಕಳಿಗೆ ಕಬ್ಬಿಣ ಮತ್ತು ಸತುವಿನ ಅಂಶ ದೊರಕುತ್ತದೆ ಎನ್ನುವುದನ್ನು ಪ್ರಚುರ ಪಡಿಸಬಹುದು. ಉದಾಹರಣೆಗೆ ಒರಿಸ್ಸಾದ ಮಾಕೆಂಗಿರಿ ಜಿಲ್ಲೆಗಳಲ್ಲಿನ ಸಕಾರಿ ಹಿತರಕ್ಷಣಾ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯಗಳನ್ನು ವಾಟರ್‌ಶೆಡ್ ಸಪೋರ್ಟ್ ಸರ್ವೀಸಸ್ ಅಂಡ್ ಆಕ್ಟಿವಿಟೀಸ್ ನೆಟ್‌ವರ್ಕ್ (WಂSSAಓ) ನವರು ಯಶಸ್ವಿಯಾಗಿ ನೀಡುತ್ತಿದ್ದಾರೆ. ಈ ಉದಾಹರಣೆಯು ಇಂತಹ ಹಲವು ಪ್ರಯತ್ನಗಳಿಗೆ ಉದಾಹರಣೆಯಾಗಿದೆ.
ದಿನ್ದೋರಿಯ ಮಂಡಿಯಲ್ಲಿ ಮಹಿಳೆಯರು ಸಿರಿಧಾನ್ಯಗಳನ್ನು ಮಾರುತ್ತಿದ್ದಾರೆ.
ವೈವಿಧ್ಯಮಯ ಸಿರಿಧಾನ್ಯಗಳನ್ನು ಪಡಿತರ ಬೆಲೆಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಲು ವಿಕೇಂದ್ರಿತ ಸಂಗ್ರಹಣಾ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಕರಣಾ ವ್ಯವಸ್ಥೆ ಮತ್ತು ಅವುಗಳನ್ನು ಬ್ಲಾಕ್ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡುವ ಸಾರ್ವಜನಿಕ ವಿತರಣಾ ವ್ಯವಸ್ಥೆಗಳು ಬೇಕು.
ಬೀಜದ ಗುಣಮಟ್ಟ ಉತ್ತಮಪಡಿಸುವಿಕೆ
ಭಾರತೀಯ ರಾಷ್ಟಿçÃಯ ಕೃಷಿ ಸಂಶೋಧನ ವ್ಯವಸ್ಥೆಯು ಬೀಜದ ಗುಣಮಟ್ಟವನ್ನು ಉತ್ತಮಗೊಳಿಸಲು ಬಹುಮುಖ್ಯ ಕೊಡುಗೆಯನ್ನು ನೀಡಿದೆ. ಆದರೂ ಬೀಜದ ವಿವಿಧ ಮಾದರಿ ಹಾಗೂ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಸಂಶೋಧನೆಗಳು ನಡೆಯಬೇಕಿದೆ. ಈ ಸಂಶೋಧನೆಗಳು ಮುಖ್ಯವಾಗಿ ಹವಾಮಾನ ಬದಲಾವಣೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಅತ್ಯುತ್ತಮ ಗುಣಮಟ್ಟದ ಬೀಜ ಉತ್ಪಾದನೆಗೆ ರೈತರು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊAದಿಗೆ ಕೈಜೋಡಿಸುವುದು ಉತ್ತಮ ದಾರಿ. ಇದನ್ನು ಮಧ್ಯಪ್ರದೇಶದ ಆಕ್ಷನ್ ಫಾರ್ ಸೋಶಿಯಲ್ ಅಡ್ವಾನ್ಸ್ಮೆಂಟ್‌ನವರು ಸ್ಥಾಪಿಸಿದ ರೈತ ಉತ್ಪಾದಕರ ಸಂಸ್ಥೆಯ ಮೂಲಕ ಮಾಡಿದ್ದಾರೆ. ಈ ರೀತಿ ಸಮುದಾಯ ಆಧಾರಿತ ಬೀಜ ಉತ್ಪಾದನೆಯನ್ನು ಸಾರ್ವಜನಿಕ ಬೀಜ ಮಾರುಕಟ್ಟೆ ವ್ಯವಸ್ಥೆಯೊಡನೆ ಸೇರಿಸಿದಲ್ಲಿ ಉತ್ತಮ ಗುಣಮಟ್ಟದ ಸಿರಿಧಾನ್ಯಗಳ ಬೀಜಗಳನ್ನು ಪಡೆಯಬಹುದು.
ಭಾರತದಾದ್ಯಂತ ವಿಸ್ತೃತ ಪರಿಣಾಮ ಬೀರುವ ಸಲುವಾಗಿ ಸಂಯೋಜಿತ ಪ್ರಯತ್ನ
ಪ್ರಸ್ತುತ ಹಲವಾರು ಲಾಭರಹಿತ ಸಂಸ್ಥೆಗಳು, ಸಮುದಾಯ ಆಧಾರಿತ ಸಮೂಹಸಂಸ್ಥೆಗಳು ಮತ್ತು ರೈತರು ಉತ್ಪಾದಕರ ಸಂಸ್ಥೆಗಳು ಭಾರತದಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಹೆಚ್ಚಿಸಲು ಹಾಗೂ ಮಾರುಕಟ್ಟೆ ವಿಸ್ತರಿಸಲು ಶ್ರಮಿಸುತ್ತಿವೆ. ಭಾರತ ಸರ್ಕಾರ ಕೂಡ ವಿವಿಧ ಮಟ್ಟಗಳಲ್ಲಿ ಸಿರಿಧಾನ್ಯಗಳ ಪ್ರಚಾರ ಮಾಡುತ್ತಿದೆ. ಸಿರಿಧಾನ್ಯಗಳ ಪ್ರಚಾರವನ್ನು ಒಳಗೊಂಡ ಕೆಲವು ಮುಖ್ಯ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳೆಂದರೆ : ಪೌಷ್ಟಿಕತೆಯ ಭದ್ರತೆಗಾಗಿ ಸಿರಿಧಾನ್ಯಗಳ ತೀವ್ರ ಪ್ರಚಾರ ಇತ್ತಿಚೆಗೆ ಇದನ್ನು ಓಈSಒ ನೊಂದಿಗೆ ಸೇರಿಸಲಾಗಿದೆ. ಇದರೊಂದಿಗೆ Iಅಂಖ ಸಂಸ್ಥೆಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಸಿರಿಧಾನ್ಯಗಳ ವಿವಿಧ ಉತ್ಪನ್ನಗಳ ತಯಾರಿಕೆಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನಗಳನ್ನು ಇನ್ನಷ್ಟು ಉತ್ತಮಗೊಳಿಸಿ ಈ ಉತ್ಪನ್ನಗಳು ಎಲ್ಲೆಡೆಯೂ ಸಿದ್ಧವಾಗಿ ದೊರೆಯುವಂತೆ ವಾಣಿಜ್ಯಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕು.
ಈ ಎಲ್ಲ ಪ್ರಯತ್ನಗಳನ್ನು ಒಟ್ಟಿಗೆ ಮಾಡುತ್ತಿಲ್ಲ ಹಾಗೂ ಇದರ ಒಟ್ಟು ಪರಿಣಾಮ ಸೀಮಿತವಾದದ್ದು. ಈ ಅಧ್ಯಯನದ ಒಳನೋಟಗಳು ಭವಿಷ್ಯದ ಕ್ರಮಗಳನ್ನು ಪರಿಣಾಮಕಾರಿಯಾಗಿಸಿ ಸಿರಿಧಾನ್ಯಗಳ ಮೌಲ್ಯವನ್ನು ಅಭಿವೃದ್ಧಿಪಡಿಸಲು ಮಹತ್ವದ ಪಾತ್ರ ವಹಿಸುವವರ ನಡುವಿನ ಸಂಪರ್ಕಜಾಲವನ್ನು ಬಲಪಡಿಸಬೇಕು. ಸಂಯೋಜಿತವಾದ ವಿಧಾನಗಳು ಹಾಗೂ ಮಧ್ಯಸ್ಥಿಕೆ ವಹಿಸುವ ಮೂಲಕ ಉತ್ತಮಗುಣಮಟ್ಟದ ಬೀಜಗಳನ್ನು ಒದಗಿಸಬಹುದು, ಸಣ್ಣ ಮಟ್ಟದ ಸ್ಥಳೀಯ ಉದ್ಯಮಗಳನ್ನು ಆರಂಭಿಸಲು ವಿಕೇಂದ್ರಿಕೃತ ಸಂಸ್ಕರಣಾ ಸೌಕರ್ಯ/ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಸಿರಿಧಾನ್ಯಗಳ ಕೃಷಿ ಹಾಗೂ ಬಳಕೆಯನ್ನು ಪ್ರಚುರಗೊಳಿಸಬಹುದು.
ಕೃತಜ್ಞತೆಗಳು
This study was carried out in the context of the IFAD and EC funded project on “Linking agrobiodiversity value chains, climate adaptation and nutrition: Empowering the poor to manage risk” linked to the CGIAR Research Programmes on Climate Change, Agriculture and Food
Security (CCAFS) and Agriculture for Nutrition and Health (A4NH).
King EDIO., Impact of Reduced drudgery of women in production and post-harvest processing of small millets,
MSSRF Working paper. No.9, 2017, Chennai.M.S.Swaminathan Research Foundation.
Mondal A., I. O. King, S. Roy, S. Priyam, G. Meldrum, S. Padulosi, and S. Mishra, Making millets matter in Madhya
Pradesh, 2016, Farming Matters 06; 32.2, 10-13 pp. http://www.agriculturesnetwork.org/farmingmatters
Padulosi S., Bhag Mal, O. I. King and E. Gotor, Minor Millets as a Central Element for Sustainably Enhanced
Incomes, Empowerment, and Nutrition in Rural India, 2015, Sustainability 7(7), 8904-8933; doi:10.3390/su7078904http://www.mdpi.com/2071-1050/7/7/8904
Rajshekar S.C. and S. Raju, Introduction of millets in PDSLessons from Karnataka, 2017, Internal Report of the M.S.
Swaminathan Research Foundation. Chennai, India.
E D Israel Oliver King
M S Swaminathan Research Foundation
Chennai, India
E-mail: ediok151173@gmail.com
Stefano Padulosi and Gennifer Meldrum
Bioversity International, Rome, Italy



