ಸ್ಥಳೀಯ ಬೀಜ ವ್ಯವಸ್ಥೆಗಳು – ಆಹಾರ ಭದ್ರತೆ ಹೆಚ್ಚಳಕ್ಕಾಗಿ, ಕೃಷಿ ಸಹಿಷ್ಣುತೆಗಾಗಿ

ಎಂ ಕಾರ್ತಿಕೇಯನ್ ಮತ್ತು ಸಿ ಎಸ್ ಪಿ ಪಾಟೀಲ್

ಕಿರುಧಾನ್ಯಗಳು ಗಟ್ಟಿ, ಪೌಷ್ಟಿಕತೆಯಲ್ಲಿ ಉನ್ನತ ಗುಣಗಳನ್ನು ಹೊಂದಿವೆ; ಆಹಾರ ಮತ್ತು ಮೇವಿನ ಅಗತ್ಯಗಳನ್ನು ಪೂರೈಸುತ್ತವೆ; ಜೊತೆಗೇ ಇಂಗಾಲವನ್ನೂ ಹಿಡಿದಿಡುತ್ತವೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಈ ಧಾನ್ಯಗಳು ದಕ್ಷಿಣ ಏಶ್ಯಾ ಪ್ರದೇಶದಲ್ಲಿ ತಮ್ಮ ಪ್ರಾಚೀನ ಇತಿಹಾಸದಿಂದಾಗಿ ಗಮನಾರ್ಹ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿವೆ. ಈ ಎಲ್ಲಾ ಹೆಚ್ಚುಗಾರಿಕೆಗಳನ್ನು ಹೊಂದಿದ್ದರೂ ಕಿರುಧಾನ್ಯಗಳನ್ನು ಬೆಳೆಯುವ ಪ್ರದೇಶಗಳ ವಿಸ್ತೀರ್ಣದಲ್ಲಿ ಕುಸಿತ ಕಂಡುಬoದಿದೆ; ಜೊತೆಗೇ ಈ ತಳಿಗಳ ವೈವಿಧ್ಯವೂ ನಷ್ಟವಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ವಿಭಿನ್ನ ಪ್ರಮಾಣಗಳಲ್ಲಿ ಕಿರುಧಾನ್ಯಗಳ ತಳಿಗಳ ಒಳವೈವಿಧ್ಯ ಹಾಗೂ ಬೆಳೆವೈವಿಧ್ಯ ಕುಸಿಯುತ್ತ ಬಂದಿರುವುದನ್ನು ಗಮನಿಸಲಾಗಿದೆ. ಇಷ್ಟೇ ಅಲ್ಲ, ಕೃಷಿ ಸಂಶೋಧನಾ ವ್ಯವಸ್ಥೆಯ ಮೂಲಕ ಹೊಸದಾಗಿ ಬಿಡುಗಡೆಯಾದ ಸುಧಾರಿತ ತಳಿಗಳು ಕೃಷಿ ಪ್ರದೇಶಗಳಲ್ಲಿ ಅಷ್ಟಾಗಿ ವ್ಯಾಪಿಸಿಲ್ಲ. ಪ್ರಸ್ತುತ ಭಾರತದಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯು (ಎನ್‌ಎಆರ್‌ಎಸ್) ತಳಿಗಳ ಸುಧಾರಣೆಯನ್ನೇ ಮುಖ್ಯ ಗಮನವಾಗಿ ಇಟ್ಟುಕೊಂಡ ಮುಂಚೂಣಿ ಸಂಸ್ಥೆಯಾಗಿದೆ. ಇದು ಹಲವು ಶಿಫಾರಸುಗಳನ್ನು ಬಿಡುಗಡೆ ಮಾಡುತ್ತದೆ. ಈ ಸಂಶೋಧನೆಯನ್ನು ಕೃಷಿ ಪ್ರದೇಶಗಳಿಂದ ದೂರವಾಗಿರುವ ಕೇಂದ್ರಗಳಲ್ಲಿ, ರೈತರ ಕನಿಷ್ಠ
ಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಈ ಸಂಶೋಧನೆಗಳು ಪ್ರಮುಖ ಕೃಷಿ ಪ್ರದೇಶಗಳನ್ನು ತಲುಪಿದ ಉದಾಹರಣೆಗಳು ಕಡಿಮೆ. ಇನ್ನೊಂದೆಡೆ ಸ್ಥಳೀಯ ವೈವಿಧ್ಯಮಯ ತಳಿಗಳನ್ನು ಬೆಳೆಯುವುದಕ್ಕಾಗಿ ಹೊಲಗಳಲ್ಲೇ, ರೈತರ ಜೊತೆಗೂಡಿ ಕೆಲಸ ಮಾಡುವ ಸ್ವಯಂಸೇವಾ ಸoಸ್ಥೆಗಳ ಸಂಖ್ಯೆಯೂ ಸೀಮಿತವಾಗಿದೆ. ಇವುಗಳೆಲ್ಲ ನಿರ್ದಿಷ್ಟ ಸ್ಥಳ ಆಧಾರಿತ ಕಾರ್ಯಕ್ರಮಗಳಾಗಿದ್ದು ಸೀಮಿತ ವ್ಯಾಪ್ತಿಯಲ್ಲಿವೆ. ಅಲ್ಲದೆ ಇವೆರಡೂ ವ್ಯವಸ್ಥೆಗಳಲ್ಲದೆ ಅನೌಪಚಾರಿಕ ಬೀಜ ವ್ಯವಸ್ಥೆಯೂ ಹಳ್ಳಿಗಳಲ್ಲಿ ಇದೆ. ತೀವ್ರಗತಿಯಲ್ಲಿ ಕುಸಿಯುತ್ತಿರುವ ಜಾಗತಿಕ ವಂಶವಾಹಿ ವೈವಿಧ್ಯದ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ವ್ಯವಸ್ಥೆಗಳು ಆಹಾರ ಭದ್ರತೆಯನ್ನು ಉತ್ತೇಜಿಸುವಲ್ಲಿ ಅತ್ಯವಶ್ಯವಾದ ಪಾತ್ರವನ್ನು ನಿರ್ವಹಿಸುತ್ತಿವೆ; ಇವು ಜೀವವೈವಿಧ್ಯದ ರಕ್ಷಣೆಗೆ ಅತ್ಯಂತ ಮುಖ್ಯವಾದ ಸಂಗತಿಗಳಾಗಿವೆ. ಈ ಮೂರೂ ವ್ಯವಸ್ಥೆಗಳೂ ತಮ್ಮದೇ ಆದ ಶಕ್ತಿ ಸಾಮರ್ಥ್ಯವನ್ನು ಹೊಂದಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸುತ್ತಿವೆಯಾದರೂ, ಇವುಗಳು ತಮ್ಮದೇ ಆದ ಚೌಕಟ್ಟಿನಲ್ಲೇ ಕಾರ್ಯ ನಿರ್ವಹಿಸುತ್ತಿವೆ ಎಂಬುದೂ ವಾಸ್ತವ. ಅಗತ್ಯವಾಗಿ ಬೇಕಾದ ಸಂಘಟಿತ ಶಕ್ತಿಯನ್ನು ಸಾಧಿಸಲು ಈ ಮೂರೂ ವ್ಯವಸ್ಥೆಗಳನ್ನು ಒಂದೆಡೆಗೆ ತರಬೇಕಾದ ಅಗತ್ಯವಿದೆ. ಕಿರುಧಾನ್ಯಗಳ ತಳಿ ವೈವಿಧ್ಯವನ್ನು ಸಾಧಿಸಲು ಮತ್ತು ಅವುಗಳನ್ನು
ವ್ಯಾಪಕವಾಗಿ ಕೃಷಿ ಮಾಡಲು ಇದು ಸೂಕ್ತವಾದ ಕ್ರಮವಾಗಿದೆ. ಈ ಪೂರಕ ಪಾತ್ರಗಳನ್ನು ನಿರ್ವಹಿಸುತ್ತಿರುವ ವ್ಯವಸ್ಥೆಗಳನ್ನು ಏಕೀಕರಣಗೊಳಿಸುವ ಅಗತ್ಯವನ್ನು ಮನಗಂಡು ಧಾನ್ ಪ್ರತಿಷ್ಠಾನವು ಒಂದು ಏಕೀಕೃತ ಮಾದರಿಯನ್ನು ರೂಪಿಸಿತು. ಇದಕ್ಕಾಗಿ ಅದು `ರೆವಲೋರೈಸಿಂಗ್ ಸ್ಮಾಲ್ ಮಿಲೆಟ್ಸ್ ಇನ್ ರೈನ್‌ಫೆಡ್ ರೀಜನ್ಸ್ ಆಫ್ ಸೌತ್ ಏಶ್ಯಾ’ (ರೆಸ್‌ಮಿಸಾ RESMISA) ಎಂಬ ಒಂದು ಅಭ್ಯುದಯ ಎನ್‌ಜಿಓವನ್ನು ಸ್ಥಾಪಿಸಿತು. ಈ ಯೋಜನೆಗೆ ಐಡಿಆರ್‌ಸಿಯ ಸಿಐಎಫ್‌ಆರ್‌ಎಫ್ ಮತ್ತು
ಕೆನಡಾದ ಡಿಎಫ್‌ಎಟಿಡಿಗಳು ನಿಧಿಸಹಾಯ ನೀಡಿದವು. ಈ ಯೋಜನೆಯನ್ನು ೨೦೧೧ರಲ್ಲಿ ಆರಂಭಿಸಲಾಯಿತು. ಇದು ರಾಗಿ, ಸಾಮೆ, ಹರ್ಕ ಮತ್ತು ಕೋಡೋ – ಈ ನಾಲ್ಕು ಕಿರುಧಾನ್ಯಗಳನ್ನು ಗಮನದಲ್ಲಿ ಇಟ್ಟುಕೊಂಡಿದೆ. ಐದು ಪ್ರದೇಶಗಳಲ್ಲಿ (ತಮಿಳುನಾಡಿನಲ್ಲಿ ಮೂರು ಮತ್ತು ಒಡಿಶಾ ಮತ್ತು ಜಾರ್ಖಂಡ್‌ಗಳಲ್ಲಿ ತಲಾ ಒಂದು), ಅಂದರೆ ಭಾರತದ ವಿಭಿನ್ನ ಕೃಷಿವಾತಾವರಣದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಪ್ರದೇಶದ ರೈತರಿಗೆ ಮತ್ತು ಅವರ ಸಂಘಟನೆಗಳಿಗೆ (ಸ್ವಯಂಸೇವಾ ಸಂಘಟನೆಗಳ ಫೆಡರೇಶನ್/ ಅಸೋಸಿಯೇಶನ್), ಧಾನ್ ಪ್ರತಿಷ್ಠಾನದ ವಿಜ್ಞಾನಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳು, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು
ಮತ್ತು ಐಸಿಎಆರ್‌ನ ಆಲ್ ಇಂಡಿಯಾ ಕೋ ಆರ್ಡಿನೇಟೆಡ್ ಸ್ಮಾಲ್ ಮಿಲೆಟ್ಸ್ ಇಂಪ್ರೂವ್‌ಮೆoಟ್ ಪ್ರಾಜೆಕ್ಟ್ – ಇವರೆಲ್ಲರಿಗೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದೆ. ಈ ಯೋಜನೆಯ ಮಾರ್ಗದರ್ಶಿ ಕಾರ್ಯವಿಧಾನ ಎಂದರೆ ಇದು: ಕೃಷಿಕರ ನಾಯಕತ್ವದಲ್ಲಿ ಸಂಶೋಧನೆ ನಡೆಸುವುದು; ಈ ಮೂಲಕ ದೇಸಿ ಜ್ಞಾನ ವ್ಯವಸ್ಥೆಗಳನ್ನು ನಿರ್ಮಿಸುವುದು; ಜೊತೆಗೇ ಲಿಂಗ ಸಂವೇದನೆಯ ವೈಜ್ಞಾನಿಕ ಮತ್ತು ಭಾಗೀದಾರಿ ವಿಧಾನಗಳನ್ನು ಅನುಸರಿಸುವುದು.

ಕಿರುಧಾನ್ಯಗಳಲ್ಲಿ ತಳಿವೈವಿಧ್ಯವು ಕುಸಿಯುತ್ತಿದೆ. ತಳಿ ಅಭಿವೃದ್ಧಿ ಕುರಿತು ಸರ್ಕಾರವು ನಡೆಸಿದ
ಸಂಶೋಧನೆಗಳು ಅಗತ್ಯವಿದ್ದವರಿಗೆ ತಲುಪುವುದೇ ಕಡಿಮೆ; ಎನ್‌ಜಿಓಗಳ ಯತ್ನಗಳೂ ಚದುರಿಹೋಗಿವೆ ಮತ್ತು ತೀರಾ ಸಣ್ಣ ಪ್ರಮಾಣದಲ್ಲಿದೆ. ಈ ಎಲ್ಲಾ ಸಂಸ್ಥೆಗಳೂ ಒಟ್ಟಾಗಿ ಕೆಲಸ ಮಾಡುವಂತೆ ವೇದಿಕೆ ರೂಪಿಸಬೇಕಿದೆಯಷ್ಟೇ ಅಲ್ಲ, ಸ್ಥಳೀಯ ಬೀಜ ವ್ಯವಸ್ಥೆಗಳು ಸಂರಕ್ಷಣೆಗೊAಡು ಬೆಳೆಯುವಂತೆನೋಡಿಕೊಳ್ಳಬೇಕಿದೆ. ರೆಸ್‌ಮಿಸಾ ಮಾದರಿಯು  ಈ ದೃಷ್ಟಿಯಲ್ಲಿ ಸ್ಥಳೀಯ ಬೀಜವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ವಿವಿಧ ತಳಿ
ಸುಧಾರಣೆ ಯತ್ನಗಳನ್ನು ಒಗ್ಗೂಡಿಸುವ ಒಂದು ಪ್ರಯತ್ನವಾಗಿದೆ.

 

ರೆಸ್‌ಮಿಸಾ ಮಾದರಿ
ರೆಸ್‌ಮಿಸಾ ಮಾದರಿ (ಹರಿವು ನಕಾಶೆಯನ್ನು ನೋಡಿರಿ)ಯು ಕೃಷಿ ಕ್ಷೇತ್ರದಲ್ಲೇ ನಡೆಯುವ ಸಂವಾದಗಳು, ಭಾಗೀದಾರಿ ವೈವಿಧ್ಯ ತಳಿ ಆಯ್ಕೆ (ಪಿವಿಎಸ್) ಮತ್ತು ಸಮುದಾಯ ಆಧಾರಿತ ವ್ಯವಸ್ಥೆ – ಇವುಗಳನ್ನು ಏಕೀಕರಿಸುತ್ತದೆ. ತಳಿ ವೈವಿಧ್ಯದ ಈಗಿನ ಸ್ಥಿತಿಯನ್ನು ಮತ್ತು ಬೀಜ ವಿತರಣಾ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಈ ಸಂಶೋಧನೆಯು ಆರಂಭವಾಗುತ್ತದೆ. ಕ್ಷೇತ್ರ ಅಧ್ಯಯನ, ಹೊಗಳಲ್ಲಿ ನಡೆ, ಜೀವವೈವಿಧ್ಯ ಸ್ಪರ್ಧೆಗಳು ಮತ್ತು ಸ್ಥಳೀಯ ರೈತರೊಂದಿಗೆ ಸಂವಾದ ಇವುಗಳನ್ನು ಇದು ಒಳಗೊಂಡಿದೆ. ಈ ಮೂಲಕ ಕೃಷಿಯಲ್ಲಿರುವ ಬೆಳೆಗಳ ವೈವಿಧ್ಯವನ್ನು ಹುಡುಕಲಾಗುತ್ತದೆ. ಇದಾದ ಮೇಲೆ ಸ್ಥಳೀಯ ವೈವಿಧ್ಯಗಳ ಜೀವವೈವಿಧ್ಯ ಬ್ಲಾಕ್‌ಗಳನ್ನು ಮತ್ತು ಅಂಗರಚನಾ ಶಾಸ್ತ್ರೀಯ (ಮಾರ್ಫಾಲಾಜಿಕಲ್) ಗುಣಗಳನ್ನು ಗುರುತಿಸಲಾಗುತ್ತದೆ. ಹೀಗೆ ಗುರುತಿಸಿದ ತಳಿಗಳನ್ನು ಜನಪ್ರಿಯ ಮತ್ತು ನಶಿಸುತ್ತಿರುವ

ತಳಿಗಳೆಂದು ವರ್ಗೀಕರಿಸಲಾಗುತ್ತದೆ. ನಶಿಸುತ್ತಿರುವ ತಳಿಗಳನ್ನು ಪ್ರಮುಖ ಕೃಷಿಕರ ಮೂಲಕ ಹೊಲಗಳಲ್ಲೇ ರಕ್ಷಿಸಿಕೊಳ್ಳುವ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಜನಪ್ರಿಯ ತಳಿಗಳು ಭಾಗೀದಾರಿ ವೈವಿಧ್ಯ ತಳಿ ಆಯ್ಕೆ (ಪಿವಿಎಸ್) ಪ್ರಯೋಗಕ್ಕೆ ಸೇರಿಕೊಂಡು ಸ್ಥಳೀಯ ಪರೀಕ್ಷೆಗಳಿಗೆ ಒಳಗಾಗುತ್ತವೆ. ಪಿವಿಎಸ್‌ನಲ್ಲಿ ಹೊಲಗಳಲ್ಲಿ ಸೂಕ್ತ ವೈವಿಧ್ಯದ ಸ್ವೀಕಾರಾರ್ಹತೆಯನ್ನು ನಡೆಸುವಾಗ ತಾಯಿ ಪ್ರಯೋಗ, ಶಿಶು ಪ್ರಯೋಗಗಳನ್ನು ಮತ್ತು ಅನೌಪಚಾರಿಕ ಸಂಶೋಧನೆ ಮತ್ತು ಕೃಷಿಸ್ಥಳದಲ್ಲೇ ಸಂರಕ್ಷಣೆ ಮಾಡುವ, ತಳಿ ಅಭಿವೃದ್ಧಿ ಮಾಡುವ ಮತ್ತು ಸ್ಥಳೀಯ ಬೀಜ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಮಗ್ರ ಮಾದರಿ ಈಗಿರುವ ಬೀಜ ವ್ಯವಸ್ಥೆಯನ್ನು ಮತ್ತು ತಳಿ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳುವುದು ಕ್ಷೇತ್ರ ಸಮೀಕ್ಷೆ, ಕ್ಷೇತ್ರದಲ್ಲಿ ನಡೆ, ರೈತರೊಂದಿಗೆ ಸಂವಾದ, ಜೀವವೈವಿಧ್ಯ ಸ್ಪರ್ಧೆಗಳು, ಬೀಜದ ಹರಿವಿನ ಅಧ್ಯಯನ ಮತ್ತು ಬೀಜ ಸಂಗ್ರಹ ಭಾಗೀದಾರಿ ತಳಿ ಆಯ್ಕೆ ಕೃಷಿಕ್ಷೇತ್ರದಲ್ಲೇ ಸಂರಕ್ಷಣೆ ರೈತರ ಮತ್ತು ಮಾರುಕಟ್ಟೆ ಅಭಿವೃದ್ಧಿಯನ್ನು ನಡೆಸಲಾಗುತ್ತದೆ. ಪಿವಿಎಸ್ ಮೂಲಕ ಹೊರಬರುವ ಆಯ್ದ ತಳಿಗಳನ್ನು
ಅಗತ್ಯಗಳನ್ನು ಗುರುತಿಸಲು ಸ್ಥಿತಿ ವಿಶ್ಲೇಷಣೆ ಜೀವವೈವಿಧ್ಯ ಬ್ಲಾಕ್‌ಗಳು ಹಲವುಪಟ್ಟು ಪ್ರಮಾಣದಲ್ಲಿ ಬೆಳೆಯುವ ಮತ್ತು ಉತ್ತೇಜಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ಹಾಗೆಯೇ ಸಮುದಾಯ ಬೀಜ ವ್ಯವಸ್ಥೆಯ ಮೂಲಕ ನಶಿಸುತ್ತಿರುವ ಸ್ಥಳೀಯ ತಳಿಗಳನ್ನು ಕೃಷಿ ಮೂಲಕ ಸಂರಕ್ಷಿಸುವ ಯತ್ನವೂ ನಡೆಯುತ್ತದೆ.

ತಳಿವೈವಿಧ್ಯ ಮತ್ತು ಬೀಜ ವ್ಯವಸ್ಥೆ ಕೃಷಿ ಪ್ರದೇಶಗಳಲ್ಲಿ ಹಲವು ಬಗೆಯ ಕಿರುಧಾನ್ಯಗಳ ತಳಿಗಳಿದ್ದರೂ, ಅಧ್ಯಯನಕ್ಕೆ ಆಯ್ದುಕೊಂಡ ನಾಲ್ಕು ತಳಿಗಳ ಪೈಕಿ ಎರಡಕ್ಕಿಂತ ಹೆಚ್ಚು ತಳಿಗಳು ಕೃಷಿಪ್ರದೇಶವನ್ನು ಶಿಶು ಪ್ರಯೋಗ (ಬೇಬಿ ಟ್ರಯಲ್) ಅನೌಪಚಾರಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಮುದಾಯ ಆಧಾರಿತ ಬೀಜ
ವ್ಯವಸ್ಥೆ ಬೀಜ ಶುದ್ಧೀಕರಣ, ಬೇಡಿಕೆ ಹುಟ್ಟಿಸುವುದು, ಸಾಮೂಹಿಕ ಬೀಜಪ್ರಮಾಣ ಹೆಚ್ಚಳ, ವಿತರಣೆ ಆವರಿಸಿಕೊಂಡಿದ್ದು ಕಾಣಲಿಲ್ಲ. ಹಳ್ಳಿ ಮಟ್ಟದಲ್ಲಿ ಎಲ್ಲಾ
ಹೊಲಗಳಲ್ಲೂ ತಳಿ ವೈವಿಧ್ಯವು ತುಂಬಾ ಸೀಮಿತವಾಗಿತ್ತು. ಈ ಪ್ರದೇಶಗಳಲ್ಲಿ ಕಿರುಧಾನ್ಯಗಳ ವೈವಿಧ್ಯವನ್ನು ಹೆಚ್ಚಿಸಬೇಕಾಗಿದೆ ಎಂಬ ಅಗತ್ಯವನ್ನು ಈ ಸನ್ನಿವೇಶವು ತಿಳಿಸಿಕೊಟ್ಟಿತು. ಇದಲ್ಲದೆ ಶೇ. ೯೦ಕ್ಕಿಂತ ಹೆಚ್ಚಿನ ಪ್ರಮಾಣದ ರೈತರು ಹೊಲದಲ್ಲೇ ರಕ್ಷಿಸಿದ ಕಿರುಧಾನ್ಯದ ಬೀಜಗಳನ್ನು ಬಳಸುವುದು ಕಂಡುಬAದಿತು. ಅವರು ಬೀಜ ಆಯ್ಕೆ ನಿಯಮಾವಳಿಗಳನ್ನು ಅನುಸರಿಸುತ್ತಿಲ್ಲ; ಆದ್ದರಿಂದಲೇ ಇಲ್ಲಿ ತಳಿಗಳು ಬೆರಕೆಯಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ತಳಿಗಳನ್ನು ಸುಧಾರಿಸುವ ಮತ್ತು ತಳಿ ವೈವಿಧ್ಯವನ್ನು ವಿಸ್ತರಿಸುವ ಅತ್ಯುತ್ತಮ ಕಾರ್ಯತಂತ್ರ ಎಂದರೆ ಪ್ರತಿಯೊಬ್ಬ ರೈತರಿಗೂ ತಳಿಯ ಆಯ್ಕೆಯನ್ನು ನೀಡುವುದು ಮತ್ತು ಸರಳ ಗುಣಮಟ್ಟದ ಬೀಜ ಆಯ್ಕೆ ವಿಧಾನಗಳನ್ನು ಉತ್ತೇಜಿಸುವುದು. ಆಯ್ದ ತಳಿಗಳನ್ನು ಉತ್ಪಾದಿಸಲು ಪಿವಿಎಸ್ ಯತ್ನಿಸಿತು. ಭಾಗೀದಾರಿ ತಳಿ ಆಯ್ಕೆ ಸಾಂಪ್ರದಾಯಿಕ ತಳಿಗಳು ಹಾಗೂ ಬಿಡುಗಡೆಯಾದ ತಳಿಗಳು ಎರಡನ್ನೂ ಹೊಂದಿದ ಭರವಸೆದಾಯಕವಾದ ತಳಿಗಳನ್ನು (೮-೧೦) ರೈತರ ನಿರೀಕ್ಷಿತ ಗುಣಗಳ ಆಧಾರದಲ್ಲಿ ಪಟ್ಟೀಕರಿಸಲಾಯಿತು. ಈ ತಳಿಗಳನ್ನು ರೈತರ ನಿರ್ವಹಣಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಪ್ರತೀ ಕ್ಷೇತ್ರದಲ್ಲೂ ಮೌಲ್ಯಪಾಪನ ಮಾಡಲಾಯಿತು. ಈ ತಳಿ ಪ್ರಯೋಗಗಳನ್ನು ತಾಯಿ ಪ್ರಯೋಗ ಎಂದು ಕರೆಯುತ್ತಾರೆ. ಇದನ್ನು ಧಾನ್ ಪ್ರತಿಷ್ಠಾನದ ತರಬೇತಾದ ಸಿಬ್ಬಂದಿವರ್ಗವು ತಾಂತ್ರಿಕ ಸಿಬ್ಬಂದಿವರ್ಗದ ಮಾರ್ಗದರ್ಶನದಲ್ಲಿ ಪರಾಮರ್ಶಿಸಿತು. ಈ ಧಾನ್ಯಗಳನ್ನು ಬೆಳೆಯುವ ಮತ್ತು ಫಸಲು ಪಡೆಯುವ ಹೊಣೆಗಾರಿಕೆಯನ್ನು ೧೫-೨೦ ರೈತರು ವಹಿಸಿಕೊಂಡರು. ಅವರು ಮೌಲ್ಯಮಾಪನ ವ್ಯವಸ್ಥೆಯಲ್ಲೂ ಪಾಲ್ಗೊಂಡರು. ಕ್ಷೇತ್ರಕ್ಕೆ ಸೂಕ್ತವಾದ ತಳಿಗಳನ್ನು ಸಂಖ್ಯಾತ್ಮಕ ವಿಶ್ಲೇಷಣೆ ಮತ್ತು ರೈತರ ಆಯ್ಕೆಯ ವಿಶ್ಲೇಷಣೆಯ ಆಧಾರದಲ್ಲಿ ಗುರುತಿಸಲಾಯಿತು. ಸಂಖ್ಯಾತ್ಮಕ ವಿಶ್ಲೇಷಣೆಯಲ್ಲಿ ರೈತರ ಗುಂಪುಗಳು ನೀಡಿದ ಅಂಕಗಳನ್ನು ಅನುಸರಿಸಿತು; ಇಲ್ಲಿ ಪ್ರತಿಯೊಂದೂ ತಳಿ ಪ್ರಯೋಗದಲ್ಲಿ ಪುರುಷ ಮತ್ತು ಮಹಿಳಾ ರೈತರು ಭಾಗವಹಿಸಿದ್ದರು. ಎರಡು ಸುತ್ತುಗಳಲ್ಲಿ ನಡೆಸಿದ ತಾಯಿ ಪ್ರಯೋಗಗಳ ಮೌಲ್ಯಮಾಪನದ ಮೂಲಕ ಪ್ರತೀ ಬೆಳೆಗೂ ಆಯಾ ಪ್ರದೇಶಗಳಲ್ಲಿ ೧ರಿಂದ ೪ ಬಹುಮತದ ಆಯ್ಕೆಯ ತಳಿಗಳನ್ನು ಗುರುತಿಸಲಾಯಿತು (ಇವರೆಡನ್ನೂ ಬಿಡುಗಡೆ ಮಾಡಿದ್ದು, ಎರಡೂ ಸಾಂಪ್ರದಾಯಿಕ ತಳಿಗಳಾಗಿವೆ. ಕೋಷ್ಟಕ ೧ ನೋಡಿ). ಹೀಗೆ ಆಯ್ಕೆಯಾದ ತಳಿಗಳನ್ನು ಪ್ರತ್ಯೇಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಿಶು ಪ್ರಯೋಗಗಳಲ್ಲಿ ರೈತರ ನಿರ್ವಹಣಾ ವಿಧಾನದಡಿಯಲ್ಲಿ ಇದ್ದ ರೈತರ ಇತರೆ ತಳಿಗಳೊಂದಿಗೆ ವಿಶ್ಲೇಷಿಸಲಾಯಿತು. ಇಲ್ಲಿ ಪ್ರತಿಯೊಂದೂ ತಳಿಯ
ಬೆಳೆ ಪ್ರದೇಶವು ತಾಯಿ ಪ್ರಯೋಗದ ಪ್ರದೇಶಕ್ಕಿಂತ ಹೆಚ್ಚಾಗಿತ್ತು (ಕನಿಷ್ಠ ೨೦೦ ಚದರ ಮೀಟರ್). ರೈತರಿಂದ ಬಹುಮತದಲ್ಲಿ ಅಂಗೀಕೃತವಾದ ಗುಣಗಳನ್ನು ಹೊಂದಿದ್ದ ತಳಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಇವುಗಳನ್ನು ಅನೌಪಚಾರಿಕ ಸಂಶೋಧನೆ ಮತ್ತು ಅಭಿವೃದ್ಧಿಯಡಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರನ್ನು ತಲುಪುವ ಮೂಲಕ ಬಹುಸಂಖ್ಯೆಯಲ್ಲಿ ಬೆಳೆಯಲಾಯಿತು. ಹೀಗೆ ೩ ವರ್ಷಗಳ ಕ್ಷಿಪ್ರ ಅವಧಿಯಲ್ಲಿ ಪ್ರತಿಯೊಂದೂ ಯೋಜನೆಯಲ್ಲಿ ತಳಿ ವೈವಿಧ್ಯವನ್ನು ವಿಸ್ತರಿಸಲು ಸಾಧ್ಯವಾಯಿತು. ಇದಲ್ಲದೆ ಭಾರೀ ಪ್ರಮಾಣದಲ್ಲಿ ರೈತರು ತಮ್ಮ ಆಯ್ಕೆಯ ತಳಿಯ ಬೀಜವನ್ನೂ ಹೊಂದುವoತಾಯಿತು. ಸಾಂಪ್ರದಾಯಿಕ ತಳಿ ವ್ಯವಸ್ಥೆಗಿಂತ ಇದು ವಿಭಿನ್ನ: ಆ ವ್ಯವಸ್ಥೆಯಲ್ಲಿ ಸುಧಾರಿತ ಬೀಜಗಳನ್ನು ರೈತರ ಸಮುದಾಯಕ್ಕೆ ತಲುಪಿಸಲು ೮ರಿಂದ ೧೦ ವರ್ಷಗಳು ಬೇಕಾಗುತ್ತವೆ.

ಕೃಷಿಕ್ಷೇತ್ರದಲ್ಲೇ ಸಂರಕ್ಷಣೆ
ಒoದು ಬೆಳೆಯ ಸ್ಥಳೀಯ ವಂಶವಾಹಿ ಸಂಪನ್ಮೂಲವನ್ನು ಸoರಕ್ಷಿಸಲು ಆಸಕ್ತ ರೈತರೊಂದಿಗೆ ಎರಡು ಜೀವವೈವಿಧ್ಯ ಘಟಕಗಳನ್ನು (ಬ್ಲಾಕ್) ಸ್ಥಾಪಿಸಲಾಯಿತು. ಈ ಬ್ಲಾಕ್‌ಗಳು ರೈತರಲ್ಲಿ ಅವರದೇ ಪ್ರದೇಶದಲ್ಲಿ ಸಿಗುವ ವೈವಿಧ್ಯಮಯ ತಳಿಗಳ ಬಗ್ಗೆ ಜಾಗೃತಿ ಮೂಡಿಸುವ ಸಾಧನಗಳೂ ಆದವು. ಅಲ್ಲದೆ ಈ ತಳಿಗಳ ಬೀಜಗಳನ್ನು ಇನ್ನಷ್ಟು ಶುದ್ಧೀಕರಿಸಲು ಮತ್ತು ಅಂಗರಚನಾ ಸ್ವರೂಪಗಳನ್ನು ಅಧ್ಯಯನ ಮಾಡಲು ಸಂಶೋಧನಾ ಕೇಂದ್ರಕ್ಕೆ ಕಳಿಸಲಾಯಿತು. ಕೃಷಿಕ್ಷೇತ್ರದಲ್ಲೇ ಸಂರಕ್ಷಣೆ ಮಾಡಲು ಆಸಕ್ತಿ ಇರುವ ರೈತರನ್ನು ಬೆಂಬಲಿಸಲು, ಪ್ರತಿಯೊಂದೂ ಯೋಜನಾ ಸ್ಥಳದಲ್ಲಿ ಜೀವವೈವಿಧ್ಯ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಸಮುದಾಯ ಆಧಾರಿತ ಬೀಜ ವ್ಯವಸ್ಥೆ
ಕ್ಷೇತ್ರ ಪ್ರಯೋಗದಲ್ಲಿ ಸ್ಥಳೀಯ ಸಮುದಾಯ ಸಂಘಟನೆಗಳಾದ ಸ್ವಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟಗಳು, ಸಂಘಟನೆಗಳು ಭಾಗವಹಿಸುವಂತೆ ನಿರ್ದಿಷ್ಟ ಯತ್ನಗಳನ್ನು ಮಾಡಲಾಯಿತು. ಪ್ರಯೋಗ ನಿರತ ರೈತರು ಅನುಭವ ಪಡೆಯಲೆಂದು, ತಳಿ ವೈವಿಧ್ಯದ ನಾಶದ ಬಗ್ಗೆ ಅರಿವು ಪಡೆಯಲೆಂದು ಪ್ರವಾಸಗಳನ್ನು ಯೋಜಿಸಲಾಯಿತು. ಅವರನ್ನು ಜೀವವೈವಿಧ್ಯ ನಿಧಿಯ ನಿರ್ವಹಣೆಯಲ್ಲಿಯೂ ಭಾಗವಹಿಸುವಂತೆನೋಡಿಕೊಳ್ಳಲಾಯಿತು. ಸ್ವಸಹಾಯ ಗುಂಪುಗಳ ಒಕ್ಕೂಟಗಳು /
ಸಂಘಟನೆಗಳು ಕೃಷಿಕ್ಷೇತ್ರದಲ್ಲೇ ತಳಿ ಸಂರಕ್ಷಣೆ ಮಾಡುವ ಮತ್ತು ಪಿವಿಎಸ್‌ನಿಂದ ಬಿಡುಗಡೆಯಾಗುವ ತಳಿಗಳನ್ನು ಉತ್ತೇಜಿಸುವ ಕೆಲಸವನ್ನು ನಿರ್ವಹಿಸಲು ಸಾಧ್ಯವಿದೆ. ಏಕೆಂದರೆ ಅವುಗಳು ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಆರ್ಥಿಕ ಬಂಡವಾಳವನ್ನು ಕ್ರೋಡೀಕರಿಸಿಕೊAಡು ಬಂದಿವೆ. ಈ ಸ್ವಸಹಾಯ ಗುಂಪುಗಳ ಆಸಕ್ತ
ಪ್ರಯೋಗನಿರತ ರೈತರು ರೆಸ್‌ಮಿಸಾ ಸಂಶೋಧನಾ ಸಮನ್ವಯ ಸಮಿತಿ (ಆರ್‌ಆರ್‌ಸಿಸಿ) ಎಂಬ ರೈತಗುಂಪನ್ನು ರಚಿಸಿಕೊಂಡರು. ಇದು ಸುಸ್ಥಿರತೆಯ ಆಧಾರದಲ್ಲಿ ಬೀಜಗಳ ಉತ್ಪಾದನೆಯ ಗುಣಮಟ್ಟದ, ಬೀಜ ಶುದ್ಧೀಕರಣದ ಮತ್ತು ಬೀಜ ವಿತರಣೆಯ ಹೊಣೆಗಾರಿಕೆಗಳನ್ನು ವಹಿಸಿಕೊಂಡಿದೆ.

ಯೋಜನಾ ಸ್ಥಳಗಳು ಈಗಿರುವ ತಳಿಗಳ ಸಂಖ್ಯೆ ಜನಪ್ರಿಯ ತಳಿಗಳು
ಸಾಂಪ್ರದಾಯಿಕ ಬಿಡುಗಡೆಯಾದವು ಸoಖ್ಯೆ ಹೆಸರು
ರಾಗಿ
ಅoಚೆಟ್ಟಿ  2  3  2  ಜಿಪಿಯು ೨೮ (ಆರ್), ಇಂಡಾಫ್ ೫ (ಆರ್)
ಬೇರೋ  4  –  2 ದೆಂಬಾ (ಸಾಂ), ಲೋಹರ್‌ದಗಿಯಾ (ಸಾಂ)
ಜವಾಧು ಗುಡ್ಡಗಳು  2  1  ಮುತ್ತನ್ ಕೆಲ್ವರಾಗು (ಸಾಂ)
ಸೆಮಿಲ್‌ಗುಡ್ಡ  19  2  4 ಬಾಟಿ (ಸಾಂ), ಮಾಟಿ (ಸಾಂ), ಕಲಕರೆಂಗಾ (ಸಾಂ), ಸುನಮನಿ
(ಸಾಂ)
ಸಾಮೆ
ಜವಾಧು ಗುಡ್ಡಗಳು  9  –  3 ಸಿತ್ತಾನ್ (ಸಾಂ), ಕರುಸಿತ್ತಾನ್ (ಸಾಂ), ವೆಲ್ಲ ಸಾಮೈ (ಸಾಂ)
ಸೆಮಿಲ್‌ಗುಡ್ಡ 8 2 1 ಬಡಾ ಸಾವ್ (ಸಾಂ)
ಹರ್ಕ
ಪೆರೈಯೂರ್ 3 1 ಸಾದೈ (ಸಾಂ)
ಕೋಡೋ
ಪೆರೈಯೂರ್ ೪ – ೧ 4 1 ಸಿರು ವಾರಗು (ಸಾಂ)ಸಿರು ವಾರಗು (ಸಾಂ)

ಕಲಿತ ಅಂಶಗಳು
ಈ ಬಗೆಯ ಏಕೀಕೃತ ಮಾದರಿಯು ಹಲವು ಅಂಶಗಳಲ್ಲಿ ವಿಶಿಷ್ಟವಾಗಿದೆ. ಇಡೀ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ೫೭೮ ಪುರುಷ ಮತ್ತು ೩೩೩ ಮಹಿಳಾ ರೈತರು ಪಾಲ್ಗೊಂಡ ಬೃಹತ್ ಮಾದರಿ. ಇದರಿಂದಾಗಿ ಇವರೆಲ್ಲರೂ ತಮ್ಮ ಪ್ರತಿಯೊಂದೂ ಚಟುವಟಿಕೆಯ ಹಿಂದಿರುವ ಅರ್ಥವನ್ನು ಚೆನ್ನಾಗಿ ಅರಿಯಲು ಅನುಕೂಲವಾಯಿತು. ರೈತರೊಂದಿಗೆ ಕೆಲಸ ಮಾಡಲು ವಿಜ್ಞಾನಿಗಳಿಗೆ ಅವಕಾಶ ಸಿಕ್ಕಿದ್ದರಿಂದ ಪರಸ್ಪರ ಹೆಚ್ಚು ಅರಿತುಕೊಳ್ಳಲು, ಹೆಚ್ಚು ಅರ್ಥಪೂರ್ಣ ಪ್ರಯೋಗಗಳನ್ನು ನಡೆಸಲು ಮತ್ತು ಪ್ರತಿಯೊಬ್ಬರ ಅನುಭವವನ್ನೂ ಇನ್ನೊಬ್ಬರು ಶ್ಲಾಘಿಸಲು ನೆರವಾಯಿತು. ಒಂದು ತಳಿಯ ಫಸಲಿನ ಪ್ರಮಾಣವೇ ಈ ಪ್ರಯೋಗಗಳ ಪ್ರಮುಖ ಮಾನದಂಡವಾಗಿದ್ದರೂ,
ಪ್ರಯೋಗನಿರತ ರೈತರು ಒಂದು ತಳಿಯನ್ನು ಆಯ್ಕೆ ಮಾಡುವ ಮುನ್ನ ತಳಿಯ ಬೆಳೆ ಕಾಲಾವಧಿ, ಬೆಳೆಯು ಬಲಿತಾಗ ಆ ಕಾಳುಗಳನ್ನು ಒಡೆಯದಂತೆ ನೋಡಿಕೊಳ್ಳುವುದು, ಅಕಾಲಿಕವಾಗಿ ಉದುರದಂತೆ ಗಮನ ವಹಿಸುವುದು, ಸಮಾನವಾಗಿ ಬಲಿಯುವುದು, ಒಳ್ಳೆಯ ಮೇವು ಆಹಾರವೂ ಸಿಗುವುದು – ಹೀಗೆ ಹಲವು ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡರು. ಅದರಲ್ಲೂ ಮಹಿಳಾ ರೈತರು ಧಾನ್ಯದ ಬಣ್ಣ, ರುಚಿ, ಧಾನ್ಯದ ಗಟ್ಟಿತನ ಮತ್ತು ಒಟ್ಟಾರೆ ಗುಣಮಟ್ಟ ಕಾಪಾಡಿಕೊಳ್ಳುವ ಸಾಮರ್ಥ್ಯ – ಇವುಗಳ ಬಗ್ಗೆ ನಿರ್ದಿಷ್ಟವಾಗಿ ಗಮನ ಕೊಟ್ಟರು. ಈ ಅನುಭವವು ಸಾಂಪ್ರದಾಯಿಕ ತಳಿಗಳು ಈಗಿನ ಔಪಚಾರಿಕ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸಲಾದ ರೈತರ ಅಗತ್ಯಗಳನ್ನು
ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಸಾಬೀತುಪಡಿಸಿತು. ಭಾಗೀದಾರರ ಸಹಯೋಗದಿಂದಾಗಿ ಜನನದ್ರವ್ಯವನ್ನು (ಜರ್ಮ್ಪ್ಲಾಸಂ) ಇಡೀ ರಾಜ್ಯದಲ್ಲಿ
ಹಂಚಿಕೊಳ್ಳಲು ಸಾಧ್ಯವಾಯಿತು; ಇದರಿಂದಾಗಿ ದೂರದ ಗ್ರಾಮಗಳಲ್ಲಿರುವ ರೈತರೂ ತಳಿ ವೈವಿಧ್ಯವನ್ನು ಹೊಂದುವoತಾಯಿತು. ತಳಿ ವೈವಿಧ್ಯ ಸುಧಾರಣೆಯನ್ನು
ಈಗಿರುವ ಮೈಕ್ರೋಫೈನಾನ್ಸ್ನಂಥ ಸ್ವಸಹಾಯ ಗುಂಪುಗಳೊoದಿಗೆ ಜೋಡಿಸಿದಂತೆಯೂ ಆಯಿತು.

ತಳಿ ಸುಧಾರಣೆಯು ಒಂದು ನಿರಂತರ ಪ್ರಕ್ರಿಯೆಯಾಗಬೇಕು. ಅದು ರೈತರ ಈಗಿನ ಅಗತ್ಯಗಳನ್ನು ಪೂರೈಸುವಂತಿರಬೇಕು (ಇದು ಯೋಜನೆಯಲ್ಲಿ ವಿಭಾಗಶಃ ನಡೆಯುತ್ತದೆ). ಸಮುದಾಯ ಬೀಜ ವ್ಯವಸ್ಥೆಯೊಳಗೇ ಇದನ್ನು ಸ್ಥಾಪಿಸುವುದರಿಂದ ಯೋಜನಾ ಕಾಲಾವಧಿಯ ನಂತರವೂ ಈ ಪ್ರಕ್ರಿಯೆಯನ್ನು ಮುಂದುವರಿಸಿಕೊAಡು ಹೋಗಬಹುದಾಗಿದೆ. ಈ ಮಾದರಿಯು ಎನ್‌ಎಆರ್‌ಎಸ್‌ನ ಸಾಂಪ್ರದಾಯಿಕ ಸಂಶೋಧನಾ ಮಾರ್ಗದಲ್ಲಿ ಸ್ಥಳೀಯ ಜನನದ್ರವ್ಯವನ್ನು ಅಳವಡಿಸಿಕೊಳ್ಳುವುದಕ್ಕೂ ಅವಕಾಶ
ಮಾಡಿಕೊಡುತ್ತದೆ. ಅಲ್ಲದೆ ಔಪಚಾರಿಕ ಮತ್ತು ಅನೌಪಚಾರಿಕ ಬೀಜ ವ್ಯವಸ್ಥೆಗಳ ನಡುವೆ ಉತ್ಪಾದನಾ ಸಹಯೋಗವನ್ನೂ ರೂಪಿಸುತ್ತದೆ. ಕೃಷಿಕ್ಷೇತ್ರದಲ್ಲೇ ಸಂರಕ್ಷಣೆ ಮಾಡುವುದನ್ನು ಪಿವಿಎಸ್ ಮತ್ತು ಸಮುದಾಯ ಬೀಜ ವ್ಯವಸ್ಥೆಯೊಂದಿಗೆ ಕ್ರೋಡೀಕರಿಸುವುದರಿಂದ ತಳಿ ಸುಧಾರಣೆ ಮತ್ತು ಬಗೆಬಗೆಯ ಕಿರುಧಾನ್ಯ ತಳಿಗಳ ಹೆಚ್ಚಳವನ್ನು ಕಾಣಬಹುದಾಗಿದೆ. ರೈತರ ಸಂಘಟನೆಗಳು, ಅಭ್ಯುದಯ ಸಂಘಟನೆಗಳು ಮತ್ತು ಸಂಶೋಧನಾ ಸಂಘಟನೆಗಳು – ಹೀಗೆ ಬಹು ಭಾಗೀದಾರರ ಸಹಯೋಗದಿಂದ ಏಕೀಕೃತ
ಮಾದರಿಯನ್ನು ಜಾರಿಗೊಳಿಸಲು ಅನುಕೂಲವಾಯಿತು. ಲಿಂಗ ಸoವೇದಿ ಮತ್ತು ರೈತ ಭಾಗಿತ್ವದ ಭಾಗೀದಾರಿ ಸಂಶೋಧನಾ ವಿಧಾನ ಮತ್ತು ಈಗಿರುವ ಅಧಿಕಾರದ ಸಮೀಕರಣಗಳನ್ನು ಮೀರಿ ಪರಿಣಾಮಕಾರಿ ಸಂಬAಧಗಳನ್ನು ಸ್ಥಾಪಿಸುವುದು ಈ ಬಗೆಯ ಸಹಯೋಗಗಳು ಯಶಸ್ವಿಯಾಗಲು ತುಂಬಾ ಮುಖ್ಯವಾಗುತ್ತವೆ. ಈ ವಿಧಾನಗಳನ್ನು ಭೌಗೋಳಿಕ ಇತಿಮಿತಿಗಳಿಲ್ಲದೆ ಎಲ್ಲೆಡೆ, ಎಲ್ಲಾ ಬಗೆಯ ಬೆಳೆಗಳಿಗೂ ಅನುಸರಿಸಬಹುದು. ಏಕೀಕೃತ ವಿಧಾನದ ಅಗತ್ಯ ಮತ್ತು ಭಾಗೀದಾರರೊಡನೆ ಸಹಭಾಗಿತ್ವವನ್ನು ಗಮನಿಸಿದಾಗ, ಸಣ್ಣ ಕೃಷಿಕ ಮನೆಗಳ ಜೀವನ ನಿರ್ವಹಣೆಯನ್ನು ಸುಧಾರಿಸಲು ಇಂಥ ಯತ್ನಗಳನ್ನು ಸಾಂಸ್ಥೀಕರಿಸುವ ಅಗತ್ಯವಿದೆ.

ಈ ಪ್ರಕ್ರಿಯೆಯಲ್ಲಿ ಔಪಚಾರಿಕ ಬೀಜ ವ್ಯವಸ್ಥೆಯಲ್ಲಿ ಮತ್ತು ಇತರೆ ರಾಜ್ಯ ನಿಧಿಸಹಾಯದ ಬೆಳೆ ಬೆಂಬಲ ವ್ಯವಸ್ಥೆಗಳಲ್ಲಿ ಸಮರ್ಥ ಸಾಂಪ್ರದಾಯಿಕ ತಳಿಗಳನ್ನು ಸೇರಿಸಿಕೊಳ್ಳುವ ಯತ್ನಗಳನ್ನು ಮಾಡಬೇಕಿದೆ. ತನ್ಮೂಲಕ ರೈತರಿಗೆ ಈ ನಿಟ್ಟಿನಲ್ಲಿ ಇರುವ ಹಕ್ಕುಗಳನ್ನು ಒದಗಿಸಬೇಕಿದೆ.

M Karthikeyan

Principal Investigator, RESMISA project and Program Leader for Rainfed Farming Development Program,

DHAN Foundation, India.

C S P Patil

Former Principal Scientist, University of Agricultural Sciences, Bangalore, India.

ಉಲ್ಲೇಖಗಳು

Gill, T. B., Bates, R., Bicksler, A., Burnette, R., Ricciardi, V., & Yoder, L.,Strengthening informal seed systems to enhance food security in Southeast Asia, Journal of Agriculture, Food Systems and Community Development, 2013, 3(3), 139–153.

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೧, ಮಾರ್ಚ್ ೨೦೧೪

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp