ಪೌಷ್ಟಿಕ ತೋಟಗಳು – ಮಹಿಳೆಯರು ತೋರಿದ ದಾರಿ

ಜೆ ಕೃಷ್ಣನ್

ಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ತಾಲೂಕು ಪೂರ್ವ ಘಟ್ಟದ ಪಶ್ಚಿಮ ರಮಣೀಯ ಭಾಗದಲ್ಲಿದೆ. ಇದು ಗುಡ್ಡಬೆಟ್ಟಗಳಿಂದ ಕೂಡಿರುವುದರಿಂದ ಕಾವೇರಿ ನದಿಯ ನೀರಿನ ಬಳೆಕೆಗೆ ಮಿತಿ ಇದೆ. ಈ ಪ್ರದೇಶವು ತೀವ್ರವಾದ ನೀರಿನ ಬರದಿಂದ ಬಳಲುತ್ತಿದೆ; ಕೃಷಿ ಮತ್ತು ದೈನಂದಿನ ಬಳಕೆಗೂ ನೀರಿನ ಕೊರತೆ ಇದೆ. ಇಂಥ ಮಳೆ ಆಧಾರಿತ ಪ್ರದೇಶದಲ್ಲಿ ನೆಲಗಡಲೆಯು ಮುಖ್ಯ ಬೆಳೆಯಾಗಿದೆ. ಇದಲ್ಲದೆ ಅಂತರಬೆಳೆಯಾಗಿ ತೊಗರಿ, ಅಲಸಂದೆ ಮುoತಾದವನ್ನು ಬೆಳೆಯುತ್ತಾರೆ. ಈ ಬೆಳೆಗಳು ರೈತರ ಆದಾಯದ ಮೂಲವಷ್ಟೇ ಅಲ್ಲ, ಕುಟುಂಬದ ಮತ್ತು ರಾಸುಗಳ ಪ್ರಮುಖ ಪ್ರೋಟೀನ್ ಮೂಲಗಳೂ ಹೌದು. ಆದರೆ ಕಳೆದ ಎರಡು ದಶಕಗಳಲ್ಲಿ ರೈತರು ಪದೇ ಪದೇ ಬೆಳೆ ವೈಫಲ್ಯ, ಹೆಚ್ಚಿನ ಪ್ರಮಾಣದ ಉತ್ಪಾದನಾ ವೆಚ್ಚ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದು ಕಡಿಮೆ ಇಳುವರಿಯನ್ನು, ಕಡಿಮೆ ವರಮಾನವನ್ನು ಪಡೆಯುತ್ತಿದ್ದಾರೆ. ಇದಲ್ಲದೆ, ರಾಸಾಯನಿಕಗಳ ವಿಪರೀತ ಬಳಕೆಯಿಂದಾಗಿ ಮಣ್ಣಿನ ಆರೋಗ್ಯ ಕೆಟ್ಟುಹೋಗಿರುವುದಷ್ಟೇ ಅಲ್ಲ, ಇಡೀ ಜೀವವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಮೇಲಾಗಿ ವರ್ಷಕ್ಕೊಮ್ಮೆ ಮುಂಗಾರು ಮಳೆ ವಿಫಲವಾದರೆ ರೈತರು ಮಳೆ ಪ್ರದೇಶದಲ್ಲಿ ಕಚ್ಚಿಕೊಳ್ಳುವ ರಾಗಿಯನ್ನು ಬೆಳೆಯುತ್ತಾರೆ. ಅಂಥ ವರ್ಷಗಳಲ್ಲಿ ಇಲ್ಲಿನ ಜನರಿಗೆ ಮತ್ತು
ರಾಸುಗಳಿಗೆ ಸೂಕ್ತ ಸತ್ವಾಂಶಗಳು ದೊರಕುವುದಿಲ್ಲ.

ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಕೃಷಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಮೂಲಗಳನ್ನು ಒದಗಿಸಲು ಎಎಂಇ
ಪ್ರತಿಷ್ಠಾನವು ಪೆನ್ನಾಗರಂ ತಾಲೂಕಿನ ೨೦ ಗ್ರಾಮಗಳಲ್ಲಿ ಕೈತೋಟ (ಕಿಚನ್ ಗಾರ್ಡನ್) ಕಾರ್ಯಕ್ರಮವನ್ನು ಜಾರಿಗೆ ತಂದಿತು. ಧರ್ಮಪುರಿ ಫಾರ್ಮ್ ಇನಿಶಿಯೇಟಿವ್ (ಡಿಎಫ್‌ಐ) ಭಾಗವಾದ ಈ ಕಾರ್ಯಕ್ರಮವನ್ನು ಶ್ರೀವತ್ಸ್ ರಾಮ್ಪ್ರತಿಷ್ಠಾನವು ಬೆಂಬಲಿಸಿದೆ.ಆರoಭಿಕ ಯತ್ನಗಳು ಒಂದು ಸಾರ್ವಜನಿಕ ಸಂಬoಧ ಸಂಸ್ಥೆಯ ಮೂಲಕ ಈಗಿರುವ ಸನ್ನಿವೇಶದ ವಿಶ್ಲೇಷಣೆಯನ್ನು ಮಾಡಲಾಯಿತು. ಭಾರೀ ಸಂಖ್ಯೆಯಲ್ಲಿ ರೈತರು, ಅದರಲ್ಲೂ ಮಹಿಳೆಯರು ಭಾಗವಹಿಸಿದರು.

ಈಗಿನ ಸನ್ನಿವೇಶವನ್ನು ವಿಶ್ಲೇಷಿಸಿದರು; ಭವಿಷ್ಯದ ಬೆಳವಣಿಗೆಯ ಬಗ್ಗೆ ಚರ್ಚಿಸಿದರು. ನೆಲಗಡಲೆ ಬೆಳೆಯನ್ನು ಸುಧಾರಿಸುವುದು ಈ ಹೊಸ ಯತ್ನದ ಪ್ರವೇಶಬಿಂದು ಎಂದು ಗುರುತಿಸಲಾಯಿತು. ಹಾಗೆಯೇ ಕೈತೋಟವನ್ನು ವಿಸ್ತರಿಸಬೇಕು ಎನ್ನುವುದೂ ಇನ್ನೊಂದು ಸಲಹೆಯಾಗಿತ್ತು. ಆರoಭಿಕವಾಗಿ ೨೦ ಗ್ರಾಮಗಳ ೨೫ ಯುವ ಮಹಿಳೆಯರಿಗೆ
ನೆಲಗಡಲೆಯನ್ನು ಪಾರಿಸರಿಕ ಕೃಷಿ ವಿಧಾನದಲ್ಲಿ ಬೆಳೆಯುವ ಬಗ್ಗೆ ತೀವ್ರ ತರಬೇತಿಯನ್ನು ನೀಡಲಾಯಿತು. ಫಾರ್ಮರ್ ಫೀಲ್ಡ್ ಸ್ಕೂಲ್ (ಎಫ್‌ಎಫ್‌ಎಸ್)ಗಳ ಸಂದರ್ಭದಲ್ಲಿ ಅವರ ಕೌಶಲವನ್ನು ಹೆಚ್ಚಿಸುವ ಸಲುವಾಗಿಯೂ ಈ ತರಬೇತಿಗಳನ್ನು ಬಳಸಿಕೊಳ್ಳಲಾಯಿತು. ಈ ತರಬೇತಾದ ಮಹಿಳೆಯರು ಎಎಂಇ ಪ್ರತಿಷ್ಠಾನದ ಸಿಬ್ಬಂದಿಯೊoದಿಗೆ ೨೦ ಗ್ರಾಮಗಳಲ್ಲಿ ಎಫ್‌ಎಫ್‌ಎಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಸುಸ್ಥಿರ ಕೃಷಿ ವಿಧಾನಗಳ ಮೂಲಕ ನೆಲಗಡಲೆ ಬೆಳೆಯುವ ವಿಧಾನದ ತರಬೇತಿಯನ್ನು ಎಫ್‌ಎಫ್‌ಎಸ್ ಮೂಲಕ ಸುಮಾರು ೪೦೦ ಮಹಿಳೆಯರು ಪಡೆದುಕೊಂಡರು.

ಕೈತೋಟಗಳ ಸ್ಥಾಪನೆ

ಉತ್ತಮ ನೆಲಗಡಲೆ ಇಳುವರಿ ಸಿಕ್ಕಿದ ಮೇಲೆ ಮಹಿಳೆಯರು ತಮ್ಮ ಕುಟುಂಬಕ್ಕೆ ಸಹಾಯಕವಾಗಬಹುದಾದ ಇನ್ನಿತರೆ ಸಂಗತಿಗಳನ್ನೂ ಕಲಿಯಲು ಆಸಕ್ತಿ ತೋರಿದರು. ಸುಧಾರಿತ ಪೌಷ್ಟಿಕತೆಗಾಗಿ ಕೈತೋಟಗಳ ಪರಿಕಲ್ಪನೆಯನ್ನು ಅದೇತಾನೆ ಪರಿಚಯಿಸಲಾಗಿತ್ತು. ಮಹಿಳೆಯರು ಮುಖ್ಯತಃ ಬೆಳೆ ಬೆಳೆಯದ ಕಾಲಾವಧಿಯಲ್ಲಿ ಇದನ್ನು ಕಲಿಯಬಯಸಿದರು. ಹೀಗೆ ಅವರಿಗೆ ಪರಿಸರ ಸ್ನೇಹಿ ವಿಧಾನದಲ್ಲಿ ಕಡಮೆ ಖರ್ಚಿನಲ್ಲಿ ಕೈತೋಟ ಮಾಡುವ ವಿಧಾನವನ್ನು ಕಲಿಸಲಾಯಿತು.

ಆರಂಭದಲ್ಲಿ ಮಹಿಳೆಯರು ೧೩ ಬಗೆಯ ತರಕಾರಿ ಬೀಜಗಳನ್ನು ತಮ್ಮ ಹಿತ್ತಲಿನಲ್ಲಿ ಬೆಳೆಯುವುದರ ಮೂಲಕ ಕೈತೋಟ ಆರಂಭಿಸಿದರು (ಕೋಷ್ಟಕ ೧ ನೋಡಿ). ಅವರಿಗೆ ತರಕಾರಿ ಮತ್ತು ಸೊಪ್ಪಿನಲ್ಲಿ ಒಳ್ಳೆಯ ಇಳುವರಿ ಬರಲಾರಂಭಿಸಿತು. ಅದನ್ನೇ ಅವರು ಬಳಸಿಕೊಂಡರು. ಉಳಿದ ಅಲ್ಪ ತರಕಾರಿಗಳನ್ನು ನೆರೆಯವರೊಂದಿಗೆ ಹoಚಿಕೊoಡರು; ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿದರು. ಪ್ರತಿದಿನವೂ ತರಕಾರಿಗಳು ಹೆಚ್ಚು ಹೆಚ್ಚು ಲಭ್ಯವಾಗುತ್ತಿದ್ದಂತೆ ಈ ಕುಟುಂಬಗಳು ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸುವುದನ್ನೇ ನಿಲ್ಲಿಸಿದವು. ಹೀಗೆ ಅವರು ಪ್ರತಿ ತಿಂಗಳೂ ೨೧೦೦ ರೂ.ಗಳನ್ನು ಉಳಿಸಿದರು. ಪ್ರತಿಯೊಂದು ತಿಂಗಳಿಗೆ ಒಂದು ಕುಟುಂಬವು ೬-೯ ಕಿಲೋಗ್ರಾಂ ಬದನೆ, ೭-೯ ಕಿಲೋಗ್ರಾಂ ಹೀರೇಕಾಯಿ, ೧೦-೧೪ ಕಿಲೋಗ್ರಾಂ ಬೆಂಡೆಕಾಯಿ, ೪-೬ ಕಿಲೋಗ್ರಾಂ ಹಾಗಲಕಾಯಿಯನ್ನು ತಮ್ಮ ಹಿತ್ತಲಿನಲ್ಲೇ ಬೆಳೆದರು. ಇದರಲ್ಲಿ ಶೇಕಡಾ ೪೦ರಷ್ಟನ್ನು ಅವರು ಮಾರುಕಟ್ಟೆಯಲ್ಲಿ ಮಾರಿದರು. ಇದಕ್ಕಾಗಿ ಅವರಿಗೆ ಬಂದ ಸರಾಸರಿ ವರಮಾನ ೨೦೦೦-೨೪೦೦ ರೂ. ಕಾರ್ಯಕ್ರಮದ ಭಾಗವಾಗಿ ೪೦೦ ರೈತರು ತಮ್ಮ ಮನೆಗಳ ಸುತ್ತಮುತ್ತ ತಲಾ ೧೦೦ರಿಂದ ೧೫೦ ಚದರ ಅಡಿ ಪ್ರದೇಶದಲ್ಲಿ ಕೈತೋಟವನ್ನು ಸ್ಥಾಪಿಸಿಕೊಂಡರು.

ತರಕಾರಿ ಬೆಳೆಯುವಲ್ಲಿ ಭಾರೀ ಉತ್ಸಾಹವನ್ನು ತೋರಿದ ಮಹಿಳೆಯರು ಈಗ ನೀರಿನ ಕೊರತೆಯನ್ನು ಎದುರಿಸಬೇಕಾಯಿತು. ಆದ್ದರಿಂದ ಅವರಿಗೆ ಕೈತೋಟಗಳನ್ನು ವಿಸ್ತರಿಸಲು ತೊಡಕಾಯಿತು. ತರಕಾರಿ ಬೆಳೆಯುವುದೂ ಮಳೆಯನ್ನು ಅವಲಂಬಿಸಿದೆ; ಮುಂಗಾರು ವಿಫಲವಾದಾಗ ಈ ಮಹಿಳೆಯರು ತ್ಯಾಜ್ಯ ನೀರನ್ನು ಮರುಬಳಕೆ
ಮಾಡುವ ಯೋಚನೆ ಮಾಡಿದರು. ಅಡುಗೆ ಮನೆಯಿಂದ ಹೊರಬರುವ ತ್ಯಾಜ್ಯ ನೀರನ್ನು ಅವರು ಅಳೆದರು; ಅದು ಪ್ರತಿದಿನವೂ ಸುಮಾರು ೪೦-೫೦ ಲೀಟರ್ ಎಂದು ತಿಳಿಯಿತು. ಈ ನೀರನ್ನು ವ್ಯರ್ಥವಾಗಿ ಹೋಗಲು ಬಿಡುವ ಬದಲು ಕೈತೋಟಕ್ಕೆ ಹರಿಸಿದರು. ಈ ಸಂಪನ್ಮೂಲವನ್ನು ಚೆನ್ನಾಗಿ ಬಳಸಿಕೊಳ್ಳಲು ಅವರು ನೀರನ್ನು
ಶುದ್ಧೀಕರಿಸಿದರು. ತ್ಯಾಜ್ಯ ನೀರನ್ನು ೫೦ ಲೀಟರ್ ಸಾಮರ್ಥ್ಯದ ಡ್ರಮ್‌ಗೆ ತುಂಬಿದರು. ಈ ಡ್ರಮ್‌ನ ಮೂಲಕ ಚಿಕ್ಕ ಪ್ರಮಾಣದಲ್ಲಿ ಹನಿ ನೀರಾವರಿ ವಿಧಾನದಲ್ಲಿ ತರಕಾರಿ ಗಿಡಗಳ ಬೇರಿಗೆ ನೀರು ಹನಿಸಿದರು. ಇಲ್ಲಿ ಇನ್ನೂ ಒಂದು ವಿನೂತನ ವಿಧಾನವನ್ನು ಅನುಸರಿಸಲಾಯಿತು. ಒಂದು ಲೀಟರ್ ನೀರಿನ ಬಾಟಲಿಗಳನ್ನು ತರಕಾರಿ ಗಿಡಗಳಿಗೆ ಹನಿ ನೀರಾವರಿ ಮಾದರಿಯಲ್ಲಿ ನೀರು ಕೊಡಲು ಬಳಸಲಾಯಿತು. ಈ ವಿಧಾನಗಳ ಮೂಲಕ ನೀರಿನಆವಿಯಾಗುವಿಕೆಯನ್ನು ಮತ್ತು ಸೋರಿಕೆಯನ್ನು ನಿಯಂತ್ರಿಸಲಾಯಿತು.
ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲಾಯಿತು. ಈಗ ಬಹುತೇಕ ಎಲ್ಲಾ ಕೃಷಿ ಕುಟುಂಬಗಳೂ ತರಕಾರಿಗಳನ್ನು ಬೆಳೆಯಲು ಅಡುಗೆಮನೆಯ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿವೆ.

ಪುರುಷರು ಮತ್ತು ಮಕ್ಕಳೂ ಸೇರಿದಂತೆ ಇಡೀ ಕುಟುಂಬಗಳು ಈಗ ಕೈತೋಟದಲ್ಲಿ ಆಸಕ್ತಿ ವಹಿಸಿವೆ. ಪುರುಷರು ತೋಟಕ್ಕೆ ನೀರು ಕೊಡುವ, ಬೇಲಿ ಹಾಕುವ ಕೆಲಸದಲ್ಲಿ ತೊಡಗಿದರೆ ಮಹಿಳೆಯರು ಗಿಡಗಳನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗುತ್ತಾರೆ. ನೀರು ಹನಿಸುವುದು ಕಟಾವು – ಇವೂ ಮಹಿಳೆಯರ ಕೆಲಸಗಳು. ಮಕ್ಕಳು ಕೂಡಾ ತಮ್ಮ ಬಿಡುವಿನ ವೇಳೆಯಲ್ಲಿ ತಾಯಂದಿರಿಗೆ ನೆರವಾಗುತ್ತಾರೆ.

ಈಗ ಆಹಾರ ಬಳಕೆಯ ವ್ಯವಸ್ಥೆಯಲ್ಲಿ ತುಂಬಾ ಗಮನಾರ್ಹವಾದ ಬದಲಾವಣೆ ಕಾಣುತ್ತದೆ. ಕುಟುಂಬದ ಆಹಾರ ವ್ಯವಸ್ಥೆಯಲ್ಲಿ ಈಗ ಹಲವು ಬಗೆಯ ತರಕಾರಿಗಳಿವೆ. ಹಾಗೆಯೇ ಇವರ ಆರೋಗ್ಯದಲ್ಲಿಯೂ ಸುಧಾರಣೆಯಾಗಿದೆ. ಹೆಚ್ಚು ಹೆಚ್ಚು ಸೊಪ್ಪು ತಿನ್ನುತ್ತಿರುವುದರಿಂದ ಅವರಿಗೆ ಈಗ ಅಜೀರ್ಣದ ಸಮಸ್ಯೆಯೇ ಇಲ್ಲವೆಂದು ಹೇಳುತ್ತಾರೆ.

ಆರಂಭದ ೨೦೧೦-೧೧ ಮತ್ತು ೨೦೧೧-೧೨ರ ವರ್ಷಗಳಲ್ಲಿ ಸಾಮಾನ್ಯವಾಗಿ ಕೈತೋಟದ ಚಟುವಟಿಕೆಯನ್ನು ಕೃಷಿ ಮಾಡದ ಕಾಲಾವಧಿಯಲ್ಲಿ ಅಂದರೆ ಜನವರಿಯಿಂದ ಜೂನ್ ಅವಧಿಯಲ್ಲಿ ಮಾಡಿದರು. ಈಗ ಮಹಿಳೆಯರು ಮುಖ್ಯ ಬೆಳೆ ಬೆಳೆಯುವ ಕಾಲದಲ್ಲೂ ತರಕಾರಿ ಬೆಳೆದು ವರ್ಷಪೂರ್ತಿ ತರಕಾರಿ ಪಡೆಯುತ್ತಿದ್ದಾರೆ.

ಈ ಮಹಿಳೆಯರು ಅಂತಾರಾಷ್ಟ್ರೀಯ ಕುಟುಂಬ ಕೃಷಿ ವರ್ಷದ ಉದ್ಘಾಟನಾ ಸಮಾರಂಭದಲ್ಲಿ, ಬೆಂಗಳೂರಿನಲ್ಲಿ ತಮ್ಮ ಜ್ಞಾನವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದಿದ್ದರು. ಮನೆಯಂಗಳದಲ್ಲೇ ಬೆಳೆದ ತರಕಾರಿಗಳನ್ನು ಪ್ರದರ್ಶಿಸಿದ ಅವರು ತಮ್ಮ ಅನುಭವಗಳನ್ನು ಹಂಚಿಕೊoಡರು. ಈ ಮಹಿಳೆಯರಿಗೆ ಕೈತೋಟಗಳು ಅವರ ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವಲ್ಲಿ ಮತ್ತು ಒಂದು ಗೌರವಯುತ ವರಮಾನವನ್ನು ತರುವಲ್ಲಿ ಸಹಾಯಕವಾಗಿವೆ. ಇದಲ್ಲದೆ ಮಹಿಳೆಯರಿಗೆ ತರಕಾರಿ ಖರೀದಿಸಲೆಂದು ೧೦-೧೫ ಕಿಲೋಮೀಟರ್ ಪ್ರಯಾಣ ಮಾಡುವ ತಾಪತ್ರಯವೂ ತಪ್ಪಿದೆ. ಬಹುಮುಖ್ಯವಾಗಿ ಈ ಮನೆತೋಟಗಳು ಕುಟುಂಬಗಳ ಮತ್ತು ಸಮಾಜದ ಒಟ್ಟಾರೆ ಬಂಧವನ್ನು ಬಲಪಡಿಸುವ ಮೂಲ ಅಂಶಗಳಾಗಿವೆ.

J Krishnan

FAO trained FFS facilitator AME Foundation, No.5/1299-B-2, NSCB Road, Behind TAMS Colony Lakkiampatty, Dharmapuri – 636705

Email: josephkrish@rediffmail.com

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೪, ಡಿಸೆಂಬರ್ ೨೦೧೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp