ಭೂಮಿಯ ಶಿಥಿಲೀಕರಣ ತಗ್ಗಿಸಲು ಸಾಮೂಹಿಕ ಕ್ರಮ – ಪಾರಿಸರಿಕ ಭದ್ರತೆಗೆ ಅಡಿಪಾಯ

ಮಾನವನ ಚಟುವಟಿಕೆಗಳಿಂದ ಮಾರ್ಪಾಡಾಗುತ್ತಿರುವ ಪ್ರಕೃತಿದತ್ತ ಸ್ಥಳಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜೀವನ ನಿರ್ವಹಣೆ – ಎರಡನ್ನೂ ಜೋಡಿಸಿ ಪರಸ್ಪರ ಲಾಭದಾಯಕವಾಗುವಂತೆ ಮಾಡುವುದಕ್ಕೆ ಅವಕಾಶಗಳಿವೆ. ಪರಿಸರ ವ್ಯವಸ್ಥೆಯ ಸ್ವಾಸ್ಥ ್ಯವನ್ನು ಮತ್ತು ಅವು ನೀಡುವ ಸೇವೆಗಳನ್ನು ಮರುಸ್ಥಾಪಿಸುವ ಮತ್ತು ಕೃಷಿ ಮತ್ತು ಕೃಷಿಯೇತರ ವರಮಾನಗಳನ್ನು ಬಲಪಡಿಸುವ ಯತ್ನಗಳು ಕಾಡುಗಳನ್ನು ಸಂರಕ್ಷಿಸುತ್ತವೆ; ಬಡತನವನ್ನೂ ನಿವಾರಿಸುವಲ್ಲಿ ಕೊಡುಗೆ ನೀಡುತ್ತವೆ. ಈ ಪ್ರಕರಣ ಅಧ್ಯಯನವು ರಾಜಸ್ಥಾನದ ಬುಡಕಟ್ಟು ಹಳ್ಳಿಯಲ್ಲಿ ಸಮುದಾಯ ಅರಣ್ಯವನ್ನು ಸಂರಕ್ಷಿಸುವ ಮತ್ತು ಮಣ್ಣಿನ ಶಿಥಿಲೀಕರಣವನ್ನು ತಗ್ಗಿಸುವ ಸಾಮೂಹಿಕ ಕ್ರಮಗಳ ಪರಿಣಾಮವನ್ನು ದಾಖಲಿಸಿದೆ.

ಚಿತ್ರವಾಸ್ ಬುಡಕಟ್ಟು ಹಳ್ಳಿಯಲ್ಲಿ ಎರಡು ಭಿಲ್ ಬುಡಕಟ್ಟುಗಳಿವೆ. ದಕ್ಷಿಣ ಅರಾವಳಿ ಪರ್ವತಶ್ರೇಣಿಗಳ ನಡುವೆ ಇರುವ ಈ ಹಳ್ಳಿಯನ್ನು ಚಿತ್ರವಾಸ್ ಎಂದು ಕರೆದಿದ್ದೇ ಅದು `ಚಿರತೆಗಳ ನಿವಾಸ’ ಆಗಿದ್ದರಿಂದ. ದಟ್ಟ ಮತ್ತು ಶ್ರೀಮಂತ ಕಾಡಿನಿಂದ ಆ ಪ್ರದೇಶವು ಆವೃತವಾಗಿದ್ದನ್ನು, ಅಲ್ಲಿನ ಕಣಿವೆಗಳಲ್ಲಿ ಅತಿ ಕಡಿಮೆ ಪ್ರದೇಶದಲ್ಲಿ ಕೃಷಿ ನಡೆಯುತ್ತಿದ್ದುದನ್ನು ಹಳ್ಳಿಯ ನಿವಾಸಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ `ಚಿರತೆಗಳ ಆವಾಸಸ್ಥಾನ’ದ ಜೀವ-ಜಲಚರ
ವ್ಯವಸ್ಥೆಯು ಶಿಥಿಲಗೊಂಡಿದೆ. ಇದಕ್ಕೆ ಹಲವು ಜೈವಿಕ ಮತ್ತು ಅಜೈವಿಕ ಕಾರಣಗಳಿವೆ. ಭೂಮಿಯ ಶಿಥಿಲೀಕರಣ, ಅರಣ್ಯದ ನಾಶ, ತೊರೆಗಳು ಒಣಗಿದ್ದು, ಬದಲಾದ ಭೂಬಳಕೆ – ಇವುಗಳು ಇಲ್ಲಿನ ಸಮುದಾಯದ ಜೀವನ ನಿರ್ವಹಣೆಯ ಮೇಲೆ ಭಾರೀ ಪ್ರತಿಕೂಲ ಪರಿಣಾಮವನ್ನು ಬೀರಿವೆ. ಈ ಬದಲಾವಣೆಗಳು ಸಮುದಾಯದ ಸಾಮಾಜಿಕ – ಸಾಂಸ್ಥಿಕ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಚಿತ್ರವಾಸ್ ಒಂದು ಗ್ರಾಮ ಪಂಚಾಯಿತಿ. ಅದರಲ್ಲಿ ನಾಲ್ಕು ವಸತಿ ಪ್ರದೇಶಗಳಿವೆ: ಸಕ್ರಿಯಾ, ಭಾಮ್ರಬಾರಾ, ಪಿಪಲ್‌ಸಾರಿ ಮತ್ತು ಕುಂಡಾಲ. ಈ ಹಳ್ಳಿಯು ಒಟ್ಟು ೨೧೭ ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು ಒಂದು ವನ್ಯಜೀವಿ ಅಭಯಾರಣ್ಯದ ಪಕ್ಕದಲ್ಲಿದೆ.

ಎಫ್‌ಇಎಸ್ ಮಧ್ಯಸ್ಥಿಕೆ

ಎಫ್‌ಇಎಸ್‌ನ ಕಾರ್ಯವು ಈ ಹಳ್ಳಿಯಲ್ಲಿ ೨೦೦೧ರಲ್ಲಿ ಆರಂಭವಾಯಿತು. ಆರಂಭಿಕ ಸಂವಾದಗಳ ಪರಿಣಾಮವಾಗಿ ಗ್ರಾಮ ಅರಣ್ಯ ಸಂರಕ್ಷಣಾ ಮತ್ತು ನಿರ್ವಹಣಾ ಸಮಿತಿಯು ರಚನೆಗೊಂಡಿತು. ಅರಣ್ಯ ಇಲಾಖೆಯ ಈ ಸಮಿತಿಯು ಅದರಲ್ಲಿ ನೋಂದಾವಣೆಯಾದ ಮೇಲೆ ಮೈಕ್ರೋ ಪ್ಲಾನ್ ಅನುಸಾರವಾಗಿ ತನ್ನ ಕೆಲಸಗಳನ್ನು ಆರಂಭಿಸಿತು. ಆದರೆ ಇಲ್ಲಿ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಿದ್ದಂತೆ `ಖಚಿತವಾಗಿ ನಿರೂಪಿಸಿದ ಬಳಕೆದಾರ ಗಡಿಗಳ’ನ್ನು ಇಟ್ಟುಕೊಳ್ಳಬೇಕೆಂಬ ನೀತಿಯು ಹಳ್ಳಿಗಳ ನಡುವಣ
ಸಮಸ್ಯೆಗಳು ಮತ್ತು ಹಳ್ಳಿಯ ಮನೆಗಳ ನಡುವಿನ ಸಂಗತಿಗಳನ್ನು ನಿರ್ಲಕ್ಷಿಸಿತು. ಕ್ಯಾರಾ ಕಾ ಖೇತ್ ಎಂಬ ವಸತಿ ಪ್ರದೇಶದ ಗ್ರಾಮಸ್ಥರು (ರವಚ್ ಕಂದಾಯ ಗ್ರಾಮ) ಮತ್ತು ರಿಚವಾರಾ ಕಂದಾಯ ಗ್ರಾಮ (ಎರಡೂ ಪ್ರದೇಶಗಳು ಚಿತ್ರವಾಸ್ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿವೆ) ಗಳ ಜನರು ತಮ್ಮ ಹಕ್ಕುಗಳಿಗಾಗಿ  ಹೋರಾಟ ಆರಂಭಿಸಿದರು. ಈ ಅಂತರ್‌ಗ್ರಾಮ ಬಳಕೆಯ ಹಕ್ಕುಗಳ ಬೇಡಿಕೆಯಿಂದಾಗಿ ಸಂಪನ್ಮೂಲಗಳ ಸಾoಪ್ರದಾಯಿಕ ಬಳಕೆಯ ಪ್ರಮಾಣವೇ ಅವುಗಳ ಮೇಲೆ ಹಕ್ಕು ಸ್ಥಾಪಿಸುವ
ಆಧಾರ ಎಂಬoತಾಯಿತು. ಎಫ್‌ಇಎಸ್ ತಂಡದ ಸದಸ್ಯರು ಮತ್ತು ಈ ಹಳ್ಳಿಗಳ ಸಮುದಾಯಗಳು `ಹಕ್‌ದಾರಿ ಪಟ್ಟಿ’ಯನ್ನು ಮಾಡಲು ಮುಂದಾದವು. ಈ ಪಟ್ಟಿಯಿಂದಾಗಿ ವಿಎಫ್‌ಪಿಎಂಸಿ ಸದಸ್ಯತ್ವವನ್ನು ನಿರ್ಧರಿಸಲು ಅನುಕೂಲವಾಯಿತು. ಗರಾಸಿಯಾ ಮತ್ತು ಗಾಮೇಟಿ ಬುಡಕಟ್ಟುಗಳಿಗೆ ಸೇರಿದ ಒಟ್ಟು ೧೫೦೮ ಮನೆಗಳ ಪೈಕಿ ೯೯೯ ಹಕ್‌ದಾರರನ್ನು ಒಳಗೊಂಡ (೧೮ ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು) ಎಲ್ಲಾ ೩೨೫ ಕುಟುಂಬಗಳನ್ನು ಈ ಸಂಸ್ಥೆಯ ಭಾಗವಾಗಿ ಗುರುತಿಸಲಾಯಿತು. ಜಂಟಿ ಅರಣ್ಯ
ನಿರ್ವಹಣೆಯ ವ್ಯವಸ್ಥೆಯಲ್ಲಿ ಇಲ್ಲಿನ ೨೧೭ ಹೆಕ್ಟೇರ್‌ಗಳಷ್ಟು ಕಾಡನ್ನು ಸಂರಕ್ಷಿಸಲು ಮತ್ತು ನಿರ್ವಹಿಸಲು ಇವರೆಲ್ಲರೂ ಒಪ್ಪಿಕೊಂಡರು. ಭಾಗೀದಾರರ ಕುರಿತ ಈ ಹೊಸ ತಿಳಿವಳಿಕೆಯಿಂದಾಗಿ (ಎಲ್ಲಾ ಬಳಕೆದಾರರ ಹಕ್ಕುಗಳ ಬೇಡಿಕೆ ಮತ್ತು ಮಾನ್ಯತೆಯ ಆಧಾರದಲ್ಲಿ) ಅರಣ್ಯ ಇಲಾಖೆಯು ಸಮ್ಮತಿಸಿದ ಅರಣ್ಯಭಾಗವೊಂದರಲ್ಲಿ ಪರಿಸರ ಪುನಶ್ಚೇತನ ಮತ್ತು ನಿರ್ವಹಣಾ ಯೋಜನೆಗಳನ್ನು ಮರುರೂಪಿಸುವ ಸಭೆಗಳನ್ನು ಕರೆಯಲಾಯಿತು.

ಸಮುದಾಯ ಭಾಗಿತ್ವ ಮತ್ತು ಭೌತಿಕ ಮಧ್ಯಪ್ರವೇಶ

ಹೀಗೆ ಭಾಗೀದಾರರನ್ನು ಗುರುತಿಸಿದ ನಂತರ ಸಮುದಾಯವು ಅರಣ್ಯಭಾಗದ ನಿರ್ವಹಣೆಗಾಗಿ ಮತ್ತು ಕೆಲಸಗಳ ನಿಭಾವಣೆಗಾಗಿ ಸನ್ನಿವೇಶಗಳನ್ನು ಆಧರಿಸಿದ ನೀತಿ ಮತ್ತು
ನಿಯಮಗಳನ್ನು ರೂಪಿಸಿತು. ವಿವಿಧ ಪ್ರದೇಶಗಳಲ್ಲಿ ಭಾಗೀದಾರರು ಹಂಚಿಹೋಗಿರುವುದರಿAದ ಸಮುದಾಯವು ನಿಯಮಿತ ಸಭೆಗಳು, ಸ್ವಯಂ ನಿಗಾ ಮತ್ತು ನಿಯಮಿತ ಅನುಸಂಧಾನದ ವ್ಯವಸ್ಥೆಯನ್ನು ರೂಪಿಸಿತು. ಈ ಹಿಂದೆ ಇಂಥ ಸಭೆಗಳು ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತಿದ್ದವು. ಆಗ ಮೇಟ್ ವ್ಯವಸ್ಥೆ ಇತ್ತು. ಮೇಟ್ ಎಂದರೆ ಹಳ್ಳಿಯಲ್ಲಿ ಪ್ರಭಾವಶಾಲಿಯಾದ ಕಾಮಗಾರಿ ಮೇಲ್ವಿಚಾರಕ. ಈ ಪ್ರಕ್ರಿಯೆಗಳಿಂದ ಸಮುದಾಯಗಳು ಕಾರ್ಯದಕ್ಷತೆ, ತಮ್ಮ ಸಂಪನ್ಮೂಲಗಳ ಮೇಲಿನ ಒಡೆತನ, ಮತ್ತು ಬಹುಮುಖ್ಯವಾಗಿ ಸಾಂಪ್ರದಾಯಿಕ ಶಕ್ತಿ ಕೇಂದ್ರಗಳ ಪ್ರಾಮುಖ್ಯ ಕುಸಿತ – ಇಂಥ ವಿಷಯಗಳನ್ನು ನಿರ್ವಹಿಸಿದವು. ಅರಣ್ಯ ಇಲಾಖೆಯು ಯೋಜನಾ ಅನುಮತಿ ನೀಡಿದ ಮೇಲೆ ನಡೆದ ಮೊದಲ ಭೌತಿಕ ಕೆಲಸ ಎಂದರೆ ಅರಣ್ಯಪ್ರದೇಶವನ್ನು ರಕ್ಷಿಸಲು ಕಲ್ಲಿನ ಆವರಣವನ್ನು ನಿರ್ಮಿಸಿದ್ದು. ಈ ಕಲ್ಲಿನ ಗೋಡೆಯ ಗುಂಟ ಜತ್ರೋಫ ಸಸಿಗಳನ್ನು ನೆಟ್ಟಿದ್ದರಿಂದ ಇನ್ನೊಂದು ಸಸ್ಯ ತಡೆಯನ್ನು ನಿರ್ಮಿಸಿದ ಹಾಗೂ ಆಯಿತು. ಮಣ್ಣು ಮತ್ತು ನೀರು ಸಂರಕ್ಷಣೆಯ ಸರಣಿ ಕ್ರಮಗಳನ್ನು (ಸಾಯಿಲ್ ಎಂಡ್ ವಾಟರ್
ಕನ್ಸರ್ವೇಶನ್ ) ಅನುಸರಿಸಲಾಯಿತು; ಇಲ್ಲಿ ಸಡಿಲ ಕಲ್ಲುಬಂಡೆಗಳ ಚೆಕ್‌ಡ್ಯಾಮ್, ಗಲ್ಲಿಗಳು, ಗಡಿಗುಂಟ ಗುಂಡಿಗಳು ಮತ್ತು ಕಲ್ಲು ತಡೆಗಳನ್ನು ನಿರ್ಮಿಸಿ ಸ್ಥಳದಲ್ಲೇ ಮಣ್ಣು ಮತ್ತು ತೇವಾಂಶವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಲಾಯಿತು. ೫೦ ಸಾವಿರ ಸ್ಥಳೀಯ ಸಸ್ಯಗಳನ್ನು ನೆಟ್ಟು, ಹುಲ್ಲಿನ ಬೀಜವನ್ನು ಬಿತ್ತಿ ಸಸ್ಯ ಬಲವೃದ್ಧಿಯನ್ನೂ ಸಾಧಿಸಲು ಹೆಜ್ಜೆ ಇಡಲಾಯಿತು. ಸರ್ವಬಳಕೆಯ ಭೂಪ್ರದೇಶದ ಪುನರುಜ್ಜೀವನ ಚಟುವಟಿಕೆಗಳ ಜೊತೆಗೇ ಮಹಿಳೆಯರ ಗುಂಪುಗಳು ಕೃಷಿ ಭೂಮಿಯಲ್ಲಿ ಜೀವನ ನಿರ್ವಹಣೆಯ ಹೊಸ ಕ್ರಮಗಳನ್ನು ಆರಂಭಿಸಿದರು. ಕೃಷಿ ಭೂಮಿಯ ಬದುಗಳನ್ನು ಕಟ್ಟುವುದು, ಕುಡಿಯುವ ನೀರಿನ ಮತ್ತು ನೀರಾವರಿಗೆ ಬೇಕಾದ ಅದರಲ್ಲೂ ಬಡ ಮನೆಗಳಿಗೆ ಬೇಕಾದ ನೀರಿನ ಮೂಲಸೌಕರ್ಯವನ್ನು ವಿಸ್ತರಿಸಲು ಸಹಕರಿಸಿದರು. ಇಂಧನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಕೈತೋಟವನ್ನು ಬೆಳೆಸಲಾಯಿತು. ಮೇವಿನ ಹೊಲಗಳನ್ನೂ ಅಭಿವೃದ್ಧಿಪಡಿಸಲಾಯಿತು. ಇದರಿಂದಾಗಿ ಜೀವನ ನಿರ್ವಹಣೆಯು ಸುಧಾರಿಸಿತಲ್ಲದೆ ನಿರ್ಣಯ ಪ್ರಕ್ರಿಯೆಯಲ್ಲಿ ಸಮುದಾಯದಲ್ಲಿ ಮಹಿಳೆಯರಿಗೆ ಅವಕಾಶವು ಸಿಕ್ಕಿತು.

ಸಮಸ್ಯೆಗಳು

ಕೆಲಸ ಮುಂದುವರಿದoತೆ ಹಳ್ಳಿಯು ಹಲವು ಸಮಸ್ಯೆಗಳನ್ನು ಎದುರಿಸಿತು. ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಅರಣ್ಯ ಪ್ರದೇಶದ ಒತ್ತುವರಿ. ಲಾಲಾ ಭುಜಿ ಎಂಬ ಹಳ್ಳಿಯ ನಿವಾಸಿಯು ೩-೪ ಬಿಘಾ (ಸುಮಾರು ೨.೩ ಎಕರೆ) ಅರಣ್ಯವನ್ನು ಕೃಷಿಗಾಗಿ ಒತ್ತುವರಿ ಮಾಡಲು ಪ್ರಯತ್ನಿಸಿದ. ಆಗ ಹಳ್ಳಿಯವರು ಆತನಿಗೆ ಒಮ್ಮೆ ಫಸಲನ್ನು ತೆಗೆದ ಮೇಲೆ ಮತ್ತೆ ತನ್ನದೇ ಖರ್ಚಿನಲ್ಲಿ ಬೇಲಿ ಕಟ್ಟಬೇಕೆಂಬ ಷರತ್ತನ್ನು ವಿಧಿಸಿ ಅವಕಾಶ ನೀಡಿದರು. ಆದರೆ ಕೊಯ್ಲಿನ ನಂತರವೂ ಲಾಲಾ ಭುಜಿಯು ಆ ಪ್ರದೇಶವನ್ನು ಬಿಟ್ಟುಕೊಡುವ ಬದಲು ಮತ್ತೊಂದು ಬೆಳೆಯನ್ನು ಅದೇ ಪ್ರದೇಶದಲ್ಲಿ ಬೆಳೆಯಲು ಮುಂದಾದ. ಹಳ್ಳಿಯ ಆದೇಶವನ್ನು ಅನುಸರಿಸಲು ಒಪ್ಪಲಿಲ್ಲ. ಆಗ ಭಾರೀ ಪ್ರಮಾಣದಲ್ಲಿ ಸಮುದಾಯ ಪ್ರತಿಭಟನೆಗಳು ನಡೆದವು; ಆಮ್ ಸಭಾಗಳು ನಡೆದು ಈ ವಿಷಯವನ್ನು ಚರ್ಚಿಸಿದವು. ಸಮುದಾಯದ ಒತ್ತಡವು ಹೆಚ್ಚಾಗಿ ಲಾಲಾನು ಆ ಒತ್ತುವರಿ ಪ್ರದೇಶವನ್ನು ಬಿಟ್ಟುಕೊಡಲೇಬೇಕಾಯಿತು; ಅಲ್ಲದೆ ಆತನು ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗಿಯಾದನು.

ಸಂರಕ್ಷಣಾ ವಿಧಾನ

ಸಂಬಳಕ್ಕೆ ನೇಮಿಸಿಕೊಂಡ ಕಾವಲುಗಾರರು, ಕೆಲವು ವ್ಯಕ್ತಿಗಳಿಗೆ ಹೊಣೆಗಾರಿಕೆ ವಹಿಸುವುದು, ಮುಂತಾದ ಹಲವು ಸಂರಕ್ಷಣಾ ವಿಧಾನಗಳನ್ನು ಪ್ರಯತ್ನಿಸಿ ಅವುಗಳೆಲ್ಲವೂ ವಿಫಲವಾದ ಮೇಲೆ ಸಮುದಾಯವು ತನ್ನದೇ ಆದ `ಲಾಠಿ’ ವ್ಯವಸ್ಥೆಯನ್ನು ಜಾರಿಗೆ ತಂದಿತು. ಲಾಠಿ ವ್ಯವಸ್ಥೆಯು ಒಂದು ಬಗೆಯ ಅರಣ್ಯ ಸಂರಕ್ಷಣಾ ವ್ಯವಸ್ಥೆ. ಇಲ್ಲಿ ಮೂರು ಬೇರೆ ಬೇರೆ ಮನೆಗಳ ಸದಸ್ಯರು ಕೈಯಲ್ಲಿ ಒಂದು ಲಾಠಿ ಹಿಡಿದುಕೊಂಡು ಪ್ರತಿದಿನವೂ ಅರಣ್ಯದ ಸುತ್ತಮುತ್ತ ಓಡಾಡಿಕೊಂಡು ಅದನ್ನು ಸಂರಕ್ಷಿಸುತ್ತಾರೆ. ದಿನದ ಸಂಜೆ ಅವರು ತಮ್ಮ ಲಾಠಿಗಳನ್ನು ಬೇರೆ ಮೂವರು ವ್ಯಕ್ತಿಗಳಿಗೆ ವರ್ಗಾಯಿಸುತ್ತಾರೆ; ಅದು ರಕ್ಷಣೆಯ ಕರ್ತವ್ಯವನ್ನೂ ಅವರಿಗೆ ವರ್ಗಾಯಿಸಿದಂತೆ. ಲಾಠಿಯು ಹೀಗೆ ಬೇರೆ ಬೇರೆ ಮನೆಗಳಿಗೆ ಸಾಗುತ್ತಿರುತ್ತದೆ; ಸಮುದಾಯ ಆಧಾರಿತ ಸಂರಕ್ಷಣೆಯನ್ನು ಪ್ರತಿನಿಧಿಸುತ್ತದೆ.

ಅರಣ್ಯ ಪ್ರದೇಶದಲ್ಲಿ ಯಾವುದೇ ರಾಸು ಕಂಡುಬoದರೆ ಅದನ್ನು ಗ್ರಾಮ ಸಮಿತಿಗೆ ತಿಳಿಸಲಾಗುತ್ತದೆ. ಸಮಿತಿಯ ಸಭೆಯಲ್ಲಿ ಹಳ್ಳಿಯ ನಿಯಮಗಳ ಪ್ರಕಾರ ಏರಿಕೆ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ಭೌತಿಕವಾಗಿ ಅರಣ್ಯ ಪ್ರದೇಶದಿಂದ ದೂರ ಇರುವವರಿಗೆ ಅದನ್ನು ಸಂರಕ್ಷಣೆ ಮಾಡಲು ಆಗುವುದಿಲ್ಲವಾದ್ದರಿಂದ ಅವರೆಲ್ಲರೂ ಉತ್ಪನ್ನಗಳಿಗೆ ಹೆಚ್ಚಿನ ಮೊತ್ತ ಕೊಡಬೇಕೆಂದು ನಿರ್ಧಾರವಾಗಿದೆ. ಬೇರೆ ಹಳ್ಳಿಗಳ ಸದಸ್ಯತ್ವವನ್ನು ತಿರಸ್ಕರಿಸಿದ ಚಿತ್ರವಾಸ್ ಗ್ರಾಮವು ಈಗ ಈ ವಿಧಾನವನ್ನು ಒಪ್ಪಿಕೊಂಡಿದೆ. ಈಗ ಸಮುದಾಯ ವ್ಯವಸ್ಥೆಯಲ್ಲಿ ಸರಿಸುಮಾರು ಎಲ್ಲಾ ಹಳ್ಳಿಗಳ ಪ್ರತಿನಿಧಿಗಳಿದ್ದಾರೆ. ಎಲ್ಲರಿಗೂ ಅರಣ್ಯಭಾಗದ ಮೇಲೆ ಒಂದು ಪ್ರಮಾಣದ ಹಕ್ಕಿದೆ. ನಿರ್ವಹಣಾ ಸಮಿತಿಯೂ ಈಗ ವಿವಿಧ ವಸತಿಪ್ರದೇಶಗಳಿಂದ ಪ್ರಾತಿನಿಧ್ಯ ಹೊಂದಿದೆ. ನಿರ್ಣಯ ಪ್ರಕ್ರಿಯೆಯೂ ಹೆಚ್ಚು ಜನರ ಭಾಗಿತ್ವವನ್ನು ಹೊಂದಿದೆ. ಈ ಬೆಳವಣಿಗೆಗಳು ಸಂಸ್ಥೆಯು ಬಲಗೊಳ್ಳುತ್ತಿದೆ ಮತ್ತು ಕ್ರಮೇಣವಾಗಿ ಬೆಳೆಯುತ್ತಿದೆ ಎಂಬುದನ್ನು ಬಿoಬಿಸುತ್ತದೆ.

ಫಲಿತಾಂಶಗಳು
ಈ ಕಾರ್ಯದ ಫಲಿತಾಂಶಗಳು ಹಲವು ಬಗೆಯವು. ಸಮುದಾಯದಸಾಮುದಾಯಿಕ ಶಕ್ತಿಯು ನೈಸರ್ಗಿಕ ಸಂಪನ್ಮೂಲಗಳ ಸುಧಾರಿತ ಆಡಳಿತದಲ್ಲಿ ಪ್ರತಿಫಲಿತವಾದವು. ಜೈವಿಕ ರಾಶಿ (ಬಯೋಮಾಸ್), ನೀರು ಮತ್ತು ಮಣ್ಣಿನ ಫಲವತ್ತತೆಯಲ್ಲೂ ಸುಧಾರಣೆ ಕಂಡುಬoದಿತು.

ಸುಧಾರಿತ ಸ್ಥಳೀಯ ಆಡಳಿತ:

ಸಾಮೂಹಿಕವಾಗಿ ಅರಣ್ಯವನ್ನು ಸಂರಕ್ಷಿಸುವ ಮೂಲಕ ಸಮುದಾಯವು ನೈಜ ಸ್ಥಳೀಯ ಸ್ವಯಮಾಡಳಿತವನ್ನು ಸ್ಥಾಪಿಸಿದಂತಾಗಿದೆ. ಇದು ಕೇವಲ ಸಂರಕ್ಷಣಾ ಕಾರ್ಯಸೂಚಿಯೊಂದನ್ನೇ ಹೊಂದಿಲ್ಲ. ಸಾಮಾಜಿಕ- ಸಾಂಸ್ಕೃತಿಕ-ರಾಜಕೀಯ ಮತ್ತು ಆರ್ಥಿಕ ಅಂಶಗಳನ್ನೂ ಒಳಗೊoಡಿದೆ. ಸಮುದಾಯದ ಒಳಗಣ ವೈವಿಧ್ಯಮಯ ಆಸಕ್ತಿಗಳನ್ನು ನಿರ್ವಹಿಸುವ ಮೂಲಕ ಇವರೆಲ್ಲ ಬಡ ಮನೆಗಳ ಮೇಲೆ ಹೆಚ್ಚಿನ ಗಮನ ನೀಡಿದರು. ಸ್ಥಳೀಯ ಸನ್ನಿವೇಶದ ಹಿನ್ನೆಲೆಯಲ್ಲಿ ನೀತಿಗಳನ್ನು ರೂಪಿಸಲಾಯಿತು.

ಸಸ್ಯಸಮೃದ್ಧಿ

ಪುನಶ್ಚೇತನದ ಪ್ರಯತ್ನಗಳಿಂದ ಜೈವಿಕರಾಶಿಯ ಗುಣಾತ್ಮಕ ಮತ್ತು ಸಂಖ್ಯಾತ್ಮಕ ಸುಧಾರಣೆ ಕಂಡುಬoದಿತು. ಕ್ಷೇತ್ರದ ಅಂಕಿ ಅಂಶಗಳ ಅಧ್ಯಯನದ ದಾಖಲೆಗಳು ಜೈವಿಕ ರಾಶಿ ಪ್ರಮಾಣದಲ್ಲಿ ಶೇಕಡಾ ೧೦೦ರಷ್ಟು ಏರಿಕೆ ಉಂಟಾಗಿದ್ದನ್ನು ತಿಳಿಸಿವೆ; ರಕ್ಷಿತ ಅರಣ್ಯಭಾಗದಲ್ಲಿ ಈ ಹಿಂದೆ ರಕ್ಷಣೆಗೆ ಮುನ್ನ ಹೆಕ್ಟೇರಿಗೆ ಇದ್ದ ೧೪೦.೪೩ ಟನ್ ತೂಕವು ಈಗ ೩೦೧.೬೨ ಟನ್‌ಗೆ ಹೆಚ್ಚಿದೆ. ಈ ಪ್ರದೇಶದ ಜೀವವೈವಿಧ್ಯದಲ್ಲೂ ಗಮನಾರ್ಹ ಹೆಚ್ಚಳ ಕಂಡುಬoದಿದೆ. ೧೧ ಮರಗಳು, ೨೯ ಕುರುಚಲು ಸಸ್ಯಗಳು, ೨೪ ಬಗೆಯ ಹುಲ್ಲಿನ ತಳಿಗಳು ಕಂಡುಬoದಿವೆ. ರಕ್ಷಣೆ ಇಲ್ಲದ ಪ್ರದೇಶದಲ್ಲಿ ಇವುಗಳ ಪ್ರಮಾಣ : ೩ ಮರಗಳು, ೪ ಕುರುಚಲು ಸಸ್ಯಗಳು ಮತ್ತು ೧೨ ಹುಲ್ಲಿನ ವಿಧಗಳು.

ಮಣ್ಣಿನ ಸುಧಾರಣೆ

ಜೈವಿಕರಾಶಿಯ ಹೆಚ್ಚಳವು ಸಂರಕ್ಷಿತ ಅರಣ್ಯಭಾಗದ ಮಣ್ಣಿನ ಆರೋಗ್ಯ ಸುಧಾರಣೆಗೂ ಕಾರಣವಾಗಿದೆ. ಮಣ್ಣಿನ ಪರೀಕ್ಷೆಯಿಂದ ಸಾವಯವ ಇಂಗಾಲ (ಓಸಿ), ಸಾರಜನಕ ಮತ್ತು ಪೊಟಾಶ್‌ನ ಲಭ್ಯತೆಯ ಪ್ರಮಾಣವು ಸುಧಾರಣೆಗೊಂಡಿದೆ. ಸಾವಯವ ವಸ್ತುಗಳ ಹೆಚ್ಚಳದಿಂದಾಗಿ ಇಲ್ಲಿನ ರಂಜಕದ ಪ್ರಮಾಣ ಕಡಿಮೆಯಾಗಿದೆ (ಸಾವಯವ ವಸ್ತುಗಳ ಪ್ರಮಾಣ ಹೆಚ್ಚಿದಂತೆ ರಂಜಕದ ಪ್ರಮಾಣ ಕಡಿಮೆಯಾಗುತ್ತದೆ ಎಂದು ವರದಿಗಳು ಹೇಳುತ್ತವೆ). ಇಲ್ಲಿನ ಪಿಎಚ್ ಪ್ರಮಾಣವು ಸಹಜವಾಗಿದೆ; ವಿದ್ಯುತ್ ಸಂವಾಹಕತೆಯೂ ಸಹಜವಾಗಿದೆ. ಇದಲ್ಲದೆ ಮಣ್ಣಿನ ಪೌಷ್ಟಿಕ ಸ್ಥಿತಿಯೂ ಸುಧಾರಣೆಗೊಂಡಿದೆ. ಒಟ್ಟಾರೆ ಇಲ್ಲಿನ ಮಣ್ಣಿನ ಆರೋಗ್ಯ ಸಾಕಷ್ಟು ಸುಧಾರಿಸಿದೆ.

ನೀರಿನ ಲಭ್ಯತೆಯ ಹೆಚ್ಚಳ

ಸಾವಯವ ವಸ್ತುಗಳು ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ನೀರಿನ ಅಥವಾ ಜಲಜೀವನದ ಚಕ್ರದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ. ಏಕೆoದರೆ ಇದು ನೀರು ಮಣ್ಣಿನೊಳಗೆ ಇಂಗುವುದಕ್ಕೆ, ಮಣ್ಣಿನಲ್ಲೇ ಸಂಗ್ರಹಗೊಳ್ಳುವುದಕ್ಕೆ ಸಹಕರಿಸುತ್ತದೆ. ಗರಿಷ್ಠ ಪ್ರಮಾಣದ ಸಾವಯವ ವಸ್ತುಗಳನ್ನು ಒಳಗೊಂಡ ಮಣ್ಣು ಮಳೆನೀರನ್ನು ನೆಲದೊಳಕ್ಕೆ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದಾಗಿ ಭೂಮಿಯ ಅಂತರ್ಜಲದ ಮರುಪೂರಣವಾಗುತ್ತದೆ. ಈ ನೀರನ್ನೇ ಜನರು ಕುಡಿಯುವುದಕ್ಕಾಗಿ ಮತ್ತು ನೀರಾವರಿಗಾಗಿ ಬಳಸುವುದರಿಂದ ನೀರಿನ ಮರುಪೂರಣ ತುಂಬಾ ಮುಖ್ಯವಾಗಿದೆ. ಮಣ್ಣಿನ ಸಾವಯವ ಪ್ರಮಾಣ ಕಡಿಮೆಯಾದರೆ ಅದು ನೀರನ್ನು ಹೀರಿಕೊಳ್ಳುವುದಿಲ್ಲ; ಆಗ ನೀರು ಹರಿದು ಹೋಗುತ್ತದೆ; ಭೂ ಸವಕಳಿಯಾಗುತ್ತದೆ. ಆಗ ಅಂತರ್ಜಲ ಕಡಿಮೆಯಾಗುತ್ತದೆ; ಸಸ್ಯಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಸಿಗುವುದಿಲ್ಲ. ಚಿತ್ರವಾಸ್‌ನಲ್ಲಿ ಜೈವಿಕ ರಾಶಿ ಮತ್ತು ಸಾವಯವ ವಸ್ತುಗಳ ಹೆಚ್ಚಳವು ಅಂತರ್ಜಲದ ಮಟ್ಟವನ್ನು ಸುಧಾರಿಸಿದೆ. ಅರಣ್ಯ ಪ್ರದೇಶಗಳಿಂದ ಹುಟ್ಟುವ ಋತುಮಾನ ಆಧಾರಿತ ತೊರೆಗಳು ಈಗ ಹೆಚ್ಚು ಕಾಲಾವಧಿಯವರೆಗೆ ಹರಿಯುತ್ತವೆ. ಇವು ಈ ಮೊದಲು ವರ್ಷದ ಬಹುಪಾಲು ಅವಧಿಯಲ್ಲಿ ಒಣಗಿಯೇ ಇರುತ್ತಿದ್ದವು. ಇದರಿಂದ ತೆರೆದ ಬಾವಿಗಳ ನೀರಿನ ಪ್ರಮಾಣ ಹೆಚ್ಚಿದೆ; ಇವೆಲ್ಲವೂ ಬಹುತೇಕ ಯೋಜನೆಯು ಆರಂಭವಾಗುವ ಮುನ್ನ ಒಣಗಿದ್ದವು. ಅಲ್ಲಿದ್ದ ಒಟ್ಟು ೫೦ ಬಾವಿಗಳ ಪೈಕಿ ೪೦ ಬಾವಿಗಳು ಒಣಗಿದ್ದವು. ಈಗ ಕೇವಲ ೧೦ ಬಾವಿಗಳಲ್ಲಿ ಮಾತ್ರ ನೀರಿಲ್ಲ.

ಸಮಾರೋಪ

ಭಾರತದ ಬಹುಪಾಲು ಗುಡ್ಡಗಾಡು ವಸತಿಪ್ರದೇಶಗಳಲ್ಲಿ ಅರಣ್ಯಪ್ರಧಾನವಾದ ಭೂಮಿಯಿದೆ. ಇಂಥ ಭೂಪ್ರದೇಶವು ಅರಾವಳಿ ಪರ್ವತಶ್ರೇಣಿಯಿಂದ ಹಿಡಿದು ಛೋಟನಾಗಪುರ ಪ್ರಸ್ಥಭೂಮಿಯವರೆಗೆ ಸಮಾನಾಂತರವಾಗಿ ಹಬ್ಬಿದ್ದನ್ನು ಕಾಣಬಹುದು. ಇಲ್ಲಿ ಕಾಡಿನ ನಾಶವಾಗಿರುವುದರಿಂದ ಕೆಳಪ್ರದೇಶದಲ್ಲಿ ಇರುವ ಕೃಷಿಭೂಮಿಗಳ ಗುಣಮಟ್ಟ ಕುಸಿದಿದೆ. ಈ ಪ್ರದೇಶಗಳ ಪಾರಿಸರಿಕ ಪುನರುಜ್ಜೀವನ ಯೋಜನೆಯಲ್ಲಿ
ಮುಖ್ಯವಾಗಿರುವುದು ಸ್ಥಳೀಯ ಸಮುದಾಯ ಸಂಸ್ಥೆಗಳನ್ನು ಅರಿಯುವುದು, ಸಾಮೂಹಿಕ ಕ್ರಮಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಅರಣ್ಯ ಮತ್ತು ಇತರೆ ಸರ್ವಬಳಕೆಯ ಭೂಪ್ರದೇಶಗಳನ್ನು ಅನಾದಿ ಕಾಲದಿಂದಲೂ ನಿರ್ವಹಿಸುತ್ತ ಬಳಸುತ್ತ ಬಂದಿರುವ ಸಮುದಾಯಗಳ ಪರವಾಗಿ ಬಲಪಡಿಸುವುದೇ ಆಗಿದೆ. ಜಂಟಿ
ಅರಣ್ಯ ನಿರ್ವಹಣೆ ವ್ಯವಸ್ಥೆಗಳು ಒಂದು ಮಟ್ಟದ ಭದ್ರತೆ ಮತ್ತು ಸ್ಥಳೀಯ ಸಮುದಾಯಕ್ಕೆ ಅರಣ್ಯ ಸಂರಕ್ಷಣಾ ಮತ್ತು ಪುನಶ್ಚೇತನ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಬೇಕಾದ ಉತ್ತೇಜನವನ್ನು ನೀಡಿವೆ. ಮಾನವ ಚಟುವಟಿಕೆಯಿಂದ ಮಾರ್ಪಾಡಾಗುತ್ತಿರುವ ಹಲವು ಪ್ರಾಕೃತಿಕ ಪ್ರದೇಶಗಳಲ್ಲಿ ಸಂರಕ್ಷಣೆ ಮತ್ತು ಜೀವನ ನಿರ್ವಹಣೆಯ ಅಂಶಗಳನ್ನು ಪರಸ್ಪರ ಜೋಡಿಸುವ ಅವಕಾಶಗಳು ಬೇಕಾದಷ್ಟಿವೆ. ಪರಿಸರ ವ್ಯವಸ್ಥೆಯ ಸ್ವಾಸ್ಥ ್ಯವನ್ನು ಮತ್ತು ಅವು ನೀಡುವ ಸೇವೆಗಳನ್ನು ಮರುಸ್ಥಾಪಿಸುವ ಮತ್ತು ಕೃಷಿ ಮತ್ತು ಕೃಷಿಯೇತರ ವರಮಾನಗಳನ್ನು ಬಲಪಡಿಸುವ ಯತ್ನಗಳು ಕಾಡುಗಳನ್ನು ಸಂರಕ್ಷಿಸುತ್ತವೆ; ಬಡತನವನ್ನೂ ನಿವಾರಿಸುವಲ್ಲಿ ಕೊಡುಗೆ ನೀಡುತ್ತವೆ.

ಇದು `ಭೂ ಶಿಥಿಲೀಕರಣವನ್ನು ತಗ್ಗಿಸಲು ಸಾಮೂಹಿಕ ಕ್ರಮ – ಚಿತ್ರವಾಸ್, ಗೋಗುಂದಾ ತೆಹಸಿಲ್, ಉದಯಪುರ ಜಿಲ್ಲೆ, ರಾಜಸ್ಥಾನ’ ಎಂಬ ಮೂಲ ಲೇಖನದ ಮರುಪ್ರಕಟಣೆ. ಮೂಲಲೇಖನವನ್ನು  www.sapplpp.orgಇಲ್ಲಿ ನೀವು ಓದಬಹುದು.

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೩, ಸೆಪ್ಟೆಂಬರ್ ೨೦೧೪

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp