ಎಸ್.ಸುಭಾಷಿಣಿ, ಕೆ.ಪೆರುಮಾಳ್, ಕೆ. ವಿಜಯಲಕ್ಹ್ಮೀ , ಮತ್ತು ಎ.ವಿ.ಬಾಲಸುಬ್ರಮಣ್ಯನ್
ತಮಿಳು ನಾಡಿನ ರೈತರು ಭತ್ತದ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸುವುದಕ್ಕಾಗಿಎಸ್‌ಆರ್‌ಐ ಪದ್ಧತಿಯನ್ನು ಕಂಡುಕೊoಡರು. ಹೆಚ್ಚು ಸಂಖ್ಯೆಯ ರೈತರು ಎಸ್‌ಆರ್‌ಐ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ಅದನ್ನು ಅಳವಡಿಸಿಕೊಂಡರು. ಈ ಪದ್ಧತಿಯನ್ನು ಅಧಿಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಪರಸ್ಪರ ಸಹಕಾರ ಅತಿ ಮುಖ್ಯವಾಗಿದೆ.
ಬೆಳೆದ ಐವತ್ತುವರ್ಷಗಳಲ್ಲಿ ತಮಿಳು ನಾಡಿನಲ್ಲಿನ ಭತ್ತ ಬೆಳೆಯುವ ಪ್ರದೇಶಗಳು ೨.೮ಮಿಲಿಯನ್ ಹೆಕ್ಟೇರ್‌ಗಳಿಂದ ೨.೧ ಮಿಲಿಯನ್ ಹೆಕ್ಟೇರ್‌ನಷ್ಟು ಇಳಿಕೆಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರದ ಪೂರೈಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಪ್ರಯತ್ನಿಸಲಾಗಿದೆ. ಹಲವು ಬಗೆಯ ಬೇಸಾಯ ಕ್ರಮಗಳಲ್ಲಿ ಎಸ್‌ಆರ್‌ಐ (ಸಿಸ್ಟಮ್ ಆಫ್‌ರೈಸ್‌ಇಂಟೆನ್ಸಿಫಿಕೇಷನ್) ವಿಧಾನ ಬಹಳ ಜನಪ್ರಿಯತೆ ಗಳಿಸಿದೆ. ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ರೈತರು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ವಿಧಾನವು ಕಡಿಮೆ ಬಿತ್ತನೆ ಬೀಜಗಳು, ಕಡಿಮೆ ನೀರು ಬಳಸಿಕೊಂಡು ಹೆಚ್ಚಿನ ಪ್ರಮಾಣದ ಇಳುವರಿಯನ್ನು ನೀಡುತ್ತದೆ.
ದೇಸೀ ತಳಿಯ ಬೀಜ ಸಂರಕ್ಷಣೆ
ಬಹಳಷ್ಟು ದೇಸೀ ತಳಿಯ ಬೀಜಗಳು ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಬಳಸಲ್ಪಡುತ್ತಿವೆ. ದೇಸೀ ಬೀಜಗಳು ಸಾವಯವ ಕೃಷಿಗೆ
ಸರಿಹೊಂದುತ್ತವೆ. ಕೀಟಗಳಿಂದ ಮತ್ತು ಯಾವುದೇ ರೀತಿಯ ರೋಗಗಳಿಂದ ಹಾನಿಗೊಳಗಾಗುವುದಿಲ್ಲ. ರೈತರು ಈ ದೇಸೀ ತಳಿಯ ಬೀಜಗಳ ಮಹತ್ವವನ್ನು ಮನಗಂಡಿದ್ದಾರೆ. ಆದರೆ ಇವನ್ನು ಸಂರಕ್ಷಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಾಂಪ್ರದಾಯಿಕ ಬೀಜಗಳ ಸಂರಕ್ಷಣೆಗಾಗಿ ‘ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್’ (ಅIಏS) ಎಂಬ ಎನ್ ಜಿ ಓ ಕಳೆದ ಏಳು ವರ್ಷಗಳಿಂದ ರೈತರೊಂದಿಗೆ ಸತತವಾಗಿ ಶ್ರಮಿಸುತ್ತಿವೆ.
ಬೀಜೋತ್ಪಾದನೆಗೆ ಸೂಕ್ತ ವ್ಯವಸ್ಥೆ
ಸಾಂಪ್ರದಾಯಿಕ ತಳಿಯ ಬೀಜಗಳು ನಿರೀಕ್ಷಿತ ಪ್ರಮಾಣದಲ್ಲಿ, ತತ್‌ಕ್ಷಣದಲ್ಲಿ ದೊರೆಯುವುದಿಲ್ಲ. ಇವುಗಳನ್ನು ಬೇರೆ ಬೇರೆ ರೈತರಿಂದ ಪಡೆದುಕೊಂಡು ಒಟ್ಟುಗೂಡಿಸ ಬೇಕಾಗುತ್ತದೆ. ಅದರಲ್ಲೂ ದೊರೆಯುವ ಬೀಜಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಮತ್ತು ಮಿಶ್ರಿತವಾಗಿರುತ್ತದೆ. ಇವುಗಳನ್ನು ಬೇಸಾಯಕ್ಕೆ ಬಳಸುವಾಗ
ಶುದ್ಧೀಕರಿಸುವುದು ಕಷ್ಟವಾಗುತ್ತದೆ. ಎಸ್‌ಆರ್‌ಐ ಪದ್ಧತಿಯು ಅತಿ ಕಡಿಮೆ ಬೀಜವನ್ನು ಬಳಸುವುದರಿಂದ ೨-೩ಕೆ.ಜಿಯಷ್ಟು ಬೀಜವನ್ನು ಶುದ್ಧೀಕರಿಸುವುದು (ಬೇರೆ ಪದ್ಧತಿಗಳಿಗೆ ಹೋಲಿಸಿದರೆ ೨೫-೩೦ಕೆ.ಜಿ) ಸುಲಭವಾಗಿದೆ ಮತ್ತು ಗುಣಮಟ್ಟದ ಬೀಜಗಳನ್ನು ಆರಿಸಿಕೊಳ್ಳುವುದು ಸುಲಭವಾಗಿದೆ.
ಏಕಕಾಲದಲ್ಲಿ ವಿವಿಧ ರೀತಿಯ ಬೇಸಾಯವನ್ನು ಮಾಡುವ ಸನ್ನಿವೇಶವಿದ್ದಲ್ಲಿ, ಎಸ್‌ಆರ್‌ಐ ಅದಕ್ಕೆ ಪರಿಹಾರ ನೀಡುತ್ತದೆ. ಎಸ್‌ಆರ್‌ಐ ಪದ್ದತಿಯಲ್ಲಿ ಬೇಸಾಯಕ್ಕೆ ಬೇಕಾಗುವ ಸ್ಥಳಾವಕಾಶ ತುಂಬಾ ಕಡಿಮೆ. (ಸಾಂಪ್ರದಾಯಿಕ ಪದ್ಧತಿಯಲ್ಲಿ ೮ ಸೆಂಟ್ಸ್ನಷ್ಟು ಸ್ಥಳ ಬೇಕಾದರೆ, ಎಸ್‌ಆರ್‌ಐನಲ್ಲಿ ೧ ಸೆಂಟ್ಸ್). ಇದರಿಂದಾಗಿ ಬೇರೆ ಬೇರೆ ರೀತಿಯ ಬೇಸಾಯವನ್ನು ಮಾಡಲು ಸ್ಥಳಾವಕಾಶವನ್ನು ಕಲ್ಪಿಸಬಹುದಾಗಿದೆ. ಈ ಪದ್ಧತಿಯಲ್ಲಿ ಬಿತ್ತನೆ ಬೀಜದ ಪ್ರಮಾಣ ಕಡಿಮೆಯಾಗಿರುವುದರಿಂದ ಇದರ ನಿರ್ವಹಣೆಯನ್ನು
ಸಮರ್ಪಕವಾಗಿ ಮಾಡಬಹುದಾಗಿದೆ. ಈ ಪದ್ಧತಿಯಲ್ಲಿ ನೀರಿನ ಅವಶ್ಯಕತೆ ಕಡಿಮೆ ಬೀಳುವುದರಿಂದ ವಿಭಿನ್ನ ರೀತಿಯ ಬೆಳೆಗಳನ್ನು ಒಂದೇ ಸಮಯದಲ್ಲಿ ಬೆಳೆಯಬಹುದಾಗಿದೆ. ಎಸ್‌ಆರ್‌ಐ ಪೈರುಗಳು ಮುರುಟಿಕೊಳ್ಳುವುದು ತೀರ ಅಪರೂಪ. ಹಾಗೊಮ್ಮೆ ಮುರುಟಿಕೊಂಡರೂ ಅದು ಸಸಿ ಬೆಳವಣಿಗೆಯ ಕೊನೆಯ
ಹಂತದಲ್ಲಿ, ಫಸಲು ಮೂಡಿದ ಮೇಲಷ್ಟೇ. ಇದರಿಂದ ಪೈರಿನ ಸತ್ವಕ್ಕಾಗಲೀ ಪರಿಶುದ್ಧತೆಗಾಗಲೀ ಯಾವುದೇ ಧಕ್ಕೆ ಆಗುವುದಿಲ್ಲ.
ಈ ವಿಷಯಗಳನ್ನು ಅರ್ಥ ಮಾಡಿಕೊಂಡು ರಾಜ್ಯಾದ್ಯಂತ ಸುಮಾರು ಮೂರು ಸಾವಿರ ರೈತರು ಸಾಂಪ್ರದಾಯಿಕ ಬಿತ್ತನೆ ಬೀಜಗಳನ್ನು ಸಂರಕ್ಷಿಸಲು ಸಕ್ರಿಯರಾದರು. CIKS ನಿಂದ ಬೀಜೋತ್ಪಾದನೆ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆದ ರೈತರು ೫.೫ಟನ್/ಹೆಕ್ಟೇರ್‌ನಷ್ಟು ಇಳುವರಿ ಪಡೆದುಕೊಂಡರು. CIKS ಬೀಜೋತ್ಪಾದನೆಗೆ ಎರಡು
ಪ್ರಮಾಣ ಪತ್ರಗಳನ್ನು ನೀಡುತ್ತದೆ. (ಸರ್ಕಾರದ ಬೀಜೋತ್ಪಾದನಾ ಪ್ರಮಾಣಪತ್ರ ಇಲಾಖೆಯಿಂದ ಮತ್ತು ಆರ್ಗ್ಯಾನಿಕ್ ಪ್ರಮಾಣಪತ್ರ ಏಜೆನ್ಸಿಯಿಂದ). ಈ ಪ್ರಮಾಣಪತ್ರವನ್ನು ನೋಂದಾಯಿತ ರೈತರಿಗೆ ನೀಡಲಾಗುತ್ತದೆ. ರೈತರು ಬೀಜೋತ್ಪಾದನೆಯ ಎರಡೆರಡು ಪ್ರಮಾಣಪತ್ರವನ್ನು ಪಡೆಯುವುದು ಇಲ್ಲಿ ಮಾತ್ರ.
ಅಳವಡಿಕೆಯ ತಿಳಿವಳಿಕೆ ಯಾವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಎಸ್‌ಆರ್‌ಐ ಪದ್ಧತಿಯನ್ನು ಅಳವಡಿಸಿಕೊಂಡರೋ ಆ ಎಲ್ಲಾ ರೈತರು ಎಸ್‌ಆರ್‌ಐ ನ ಮೂಲತತ್ವಗಳನ್ನು ಅಳವಡಿಸಿಕೊಂಡಿದ್ದಾರೆಯೇ ಎಂದು ತಿಳಿದುಕೊಳ್ಳಲು ನಮ್ಮಲ್ಲಿ ಜಿಜ್ಞಾಸೆ ಮೂಡಿತು. ಅದನ್ನು ತಿಳಿದುಕೊಳ್ಳಲು ೨೦೧೩ರ ಜನವರಿಯಲ್ಲಿ ನಾಗಪಟ್ಟಣಂನಲ್ಲಿ ಅಧ್ಯಯನ ನಡೆಸಲಾಯಿತು. ಈ ಪ್ರದೇಶದಲ್ಲಿ ಬೇಸಾಯವನ್ನು ಸಾಂಬಾ (ಆಗಸ್ಟ್-ಜನವರಿ) ಮತ್ತು ಕುರುವಾಯಿ(ಮೇ-ಆಗಸ್ಟ್) ಮಾಸಗಳಲ್ಲಿ ಒಟ್ಟು ಎರಡು ಬಾರಿ ಮಾಡಲಾಗುತ್ತದೆ. ರೈತರು ಎಸ್‌ಆರ್‌ಐನ ಎಲ್ಲಾ ಏಳು ತತ್ವಗಳನ್ನು ಅನುಸರಿಸಿದ್ದರೆ ಅವರನ್ನು ನಾವು ಫುಲ್ ಅಡಾಪ್ರ‍್ಸ್ ಎಂದೂ, ಮೂರು ತತ್ವಗಳನ್ನು ಅನುಸರಿಸಿದ್ದರೆ ಮೀಡಿಯಮ್ ಅಡಾಪ್ರ‍್ಸ್ ಎಂದೂ ಮತ್ತು ಕೇವಲ ಒಂದು ತತ್ವವನ್ನು ಅನುಸರಿಸಿದ್ದರೆ ಲೋ ಅಡಾಪ್ರ‍್ಸ್ ಎಂದೂ ವರ್ಗೀಕರಿಸಿದೆವು. ನಮ್ಮ ಅಧ್ಯಯನದ ಪ್ರಕಾರ ೩೦ರಲ್ಲಿ ಕೇವಲ ಇಬ್ಬರು ರೈತರು (೬.೬೭%) ಪೂರ್ಣ ಪ್ರಮಾಣದಲ್ಲಿ, ೧೭ ರೈತರು (೫೬.೬೭%) ಮಧ್ಯ ಮಪ್ರಮಾಣದಲ್ಲಿ ಮತ್ತು ೧೧ ರೈತರು (೩೬.೬೭%) ಅತಿ ಕಡಿಮೆ ಪ್ರಮಾಣದಲ್ಲಿ ಈ ಪದ್ಧತಿಯನ್ನು ಅನುಸರಿಸಿದ್ದರು. ರೈತರು ಎಸ್‌ಆರ್‌ಐ ತತ್ವಗಳನ್ನು ಐಡಿಯಲ್ (ಆದರ್ಶ) ಅಥವಾ ರೆಕಮೆಂಡೆಡ್ (ಶಿಫಾರಸು) ಮಟ್ಟದಲ್ಲಿ ಅಳವಡಿಸಿಕೊಳ್ಳದಿದ್ದರೂ ಮೊದಲಿಗಿಂತ ಹೆಚ್ಚಾಗಿ ಅನುಸರಿಸಿದ್ದರು.
ಉದಾಹರಣೆಗೆ: ೪ ರೈತರು ೨-೫ಕೆ.ಜಿ/ಎಕರೆಗೆ ಬಿತ್ತನೆ ಬೀಜವನ್ನು ಬಳಸಿದ್ದರೆ, ೧೫ ರೈತರು ೫-೧೫ಕೆಜಿ/ಎಕರೆಗೆ ಬೀಜವನ್ನು ಬಳಸಿದ್ದರು. (ಮೊದಲು ೨೫-೩೦ಕೆಜಿ/ಎಕರೆಗೆ ಬಳಸುತ್ತಿದ್ದರು). ರೈತರಿಗೆ ಪೂರ್ಣ ಪ್ರಮಾಣದಲ್ಲಿ ಎಸ್‌ಆರ್‌ಐ ಅಳವಡಿಸಿಕೊಳ್ಳಲಾಗದಿರುವುದಕ್ಕೆ ಹಲವಾರು ಕಾರಣಗಳಿವೆ. (ಬಾಕ್ಸ್.೧ ರಲ್ಲಿರುವಂತೆ)
ಬಾಕ್ಸ್.೧ : ಎಸ್‌ಆರ್‌ಐ ಅಳವಡಿಕೆಗೆ ಇರುವ ತೊಡಕುಗಳು
|
ನಮ್ಮ ಅಧ್ಯಯನದ ಪ್ರಕಾರ ಎಸ್‌ಆರ್‌ಐ ಪದ್ಧತಿಯನ್ನು ಏಕಕಾಲದಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಪಡೆಯಬಹುದು. ಪೂರ್ಣ ಪ್ರಮಾಣದಲ್ಲಿ (ಫುಲ್‌ಅಡಾಪ್ರ‍್ಸ್) ರೈತರು ಇದನ್ನು ಅಳವಡಿಸಿಕೊಂಡರೆ ಸುಮಾರು ೫೦೦-೬೦೦ ಕೆಜಿಯಷ್ಟು ಹೆಚ್ಚುವರಿ ಇಳುವರಿಯನ್ನು ಪಡೆಯಬಹುದು. (೨೭-೩೫ರಷ್ಟು ಹೆಚ್ಚು). ಮತ್ತು ಪ್ರತಿ ಎಕರೆಗೆ ೩೫೦೦- ೪೦೦೦ ರೂಗಳಷ್ಟು ಉಳಿಸಬಹುದಾಗಿದೆ (೩೦-೩೫%ವರೆಗೆ). ಮೀಡಿಯಮ್ ಅಡಾಪ್ರ‍್ಸ್ ೩೦೦-೪೦೦ ಕೆಜಿ (೧೫-೨೦%) ಮತ್ತು ೨೦೦೦-೨೫೦೦ರೂಗಳಷ್ಟು ಪ್ರತಿ ಎಕರೆಗೆ ಉಳಿಸಬಹುದು. ಲೋ ಅಡಾಪ್ರ‍್ಸ್ ೧೮೦-೨೪೦ಕೆಜಿ ಇಳುವರಿ ಪಡೆಯಬಹುದು; ಮತ್ತು ೧೦೦೦-೧೫೦೦ ರೂಗಳಷ್ಟು (೧೦-೧೫%) ಉಳಿಸಬಹುದು. ಇದರಿಂದ ಎಷ್ಟೇ ಕಡಿಮೆ ಪ್ರಮಾಣದಲ್ಲಿ ಎಸ್‌ಆರ್‌ಐ ಯನ್ನು ಅಳವಡಿಸಿಕೊಂಡರೂ ರೈತರು ಲಾಭವನ್ನು ಗಳಿಸಬಹುದು ಎಂಬ ಅಂಶ ತಿಳಿಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಇದೇ ಮುಖ್ಯ ಕಾರಣವಾಗಿದೆ.
ಅಂತಿಮ ನಿರ್ಧಾರ
ಆದಾಗ್ಯೂ ಎಸ್‌ಆರ್‌ಐ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಹಲವಾರು ಸಮಸ್ಯೆಗಳಿವೆ. ಇದರಲ್ಲಿ ಕೆಲವು ಸಮಸ್ಯೆಗಳನ್ನು ಸೂಕ್ತ ತರಬೇತಿಯಿಂದ ಪರಿಹರಿಸಿಕೊಳ್ಳಬಹುದು. ಪ್ರತಿಯೊಂದು ಹಳ್ಳಿಯಲ್ಲಿ ಒಂದು ಗುಂಪಿನ ಮಹಿಳೆಯರಿಗೆ ತರಬೇತಿ ನೀಡಿದರೆ ಎಸ್‌ಆರ್‌ಐ ಅನ್ನು ವಿಸ್ತರಿಸಬಹುದು. ಇದರಿಂದ ಮಹಿಳೆಯರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಇದರ ಬಗೆಗಿನ ಅಧ್ಯಯನ ಮತ್ತು ವಿಸ್ತರಣೆಗೆ ಹೆಚ್ಚಿನ ಸಹಕಾರದ ಅಗತ್ಯವಿದೆ. ಕಡಿಮೆ ವೆಚ್ಚದಲ್ಲಿ ಲೆವೆಲಿಂಗ್ ಉಪಕರಣಗಳು ಮತ್ತು ಮೆಕ್ಯಾನಿಕಲ್ ಟ್ರಾನ್ಸ್ ಪ್ಲಾಂಟರಗಳು ಪರಿಚಯಿಸಬೇಕಾಗಿದೆ. ಎಸ್‌ಆರ್‌ಐ ಪದ್ಧತಿಯನ್ನು ಮೇಲ್ದರ್ಜೆಗೆ ಏರಿಸಲು ಅನ್ವೇಷಣಾಕಾರರು ಮತ್ತು ಅಭಿವೃದ್ಧಿ ಪ್ರಾಧಿಕಾರಗಳು ಕೆಲವೊಂದು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಇದರಿಂದ ಭತ್ತದ ಉತ್ಪಾದನೆ ಹೆಚ್ಚಾಗುವುದಲ್ಲದೇ ಆದಾಯವನ್ನು ಹೆಚ್ಚಿಸುವಲ್ಲಿಯೂ
ಸಹಾಯವಾಗುತ್ತದೆ.
S Subhashini, K Perumal, K Vijayalakshmi and A V Balasubramanian
Centre for Indian Knowledge Systems No. 30, Gandhi Mandapam Road, Kotturpuram
Chennai – 600085, India.
E-mail :info@ciks.org
Website : www.ciks.org
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೧, ಮಾರ್ಚ್ ೨೦೧೩



