ರಾಘವೇಂದ್ರ ದುಬೆ, ಅರವಿಂದ ಪಟೇಲ್, ಎ.ಕೆ.ಚೌರಾಸಿಯಾ ಮತ್ತು ಮೀನಾ ಗೋಖಲೆ
ಮದ್ಯವರ್ತಿಗಳನ್ನು ಹೊರತು ಪಡಿಸಿ ರೈತರೆಲ್ಲಾ ಒಟ್ಟಾಗಿ ಕೃಷಿ ಮಾರುಕಟ್ಟೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದರೆ ವ್ಯವಸಾಯೋತ್ಪನ್ನ ಆದಾಯದಲ್ಲಿ ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣಬಹುದು. ರೈತರ ಸಹಕಾರಿ ಸಂಘಟನೆಗಳಲ್ಲಿ ಒಂದಾದ ದೇವ್‌ಪಾಸ್ಲಿ ಅಂತಹ ಪ್ರಯತ್ನಗಳಲ್ಲಿ ಒಂದಾಗಿದೆ. ಆದಾಯದಲ್ಲಿ ಹೆಚ್ಚಳದ ಜತೆಜತೆಗೆ ಗುಜರಾತಿನಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಸಮುದಾಯದ ಸಾಮಾಜಿಕ ಜೀವನಶೈಲಿಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ.
ಭಾರತದಲ್ಲಿ ವ್ಯವಸಾಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಸಂಖ್ಯೆಯೇ ಶೇ.೮೦ರಷ್ಟಿದೆ. ಅದರಲ್ಲಿ, ಕೆಲವೊಂದು ಭೌಗೋಳಿಕ ಪ್ರದೇಶಗಳಲ್ಲಿ ಆದಿವಾಸಿಗಳೇ ಹೆಚ್ಚಿದ್ದಾರೆ. ಯಾವುದೇ ಯೋಜನೆಯಲ್ಲಿ ಆದಿವಾಸಿಗಳನ್ನು ತೊಡಗಿಸಿಕೊಳ್ಳದ ಹೊರತು ಆ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು
ನಿರೀಕ್ಷಿಸುವುದು ಕಷ್ಟವೆನಿಸುತ್ತದೆ. ಅನಿಶ್ಚಿತ ವಾತಾವರಣವನ್ನೇ ನೆಚ್ಚಿಕೊಂಡು ಚಿಕ್ಕಪುಟ್ಟದಾಗಿ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಣ್ಣ ಹಾಗೂ ಮಧ್ಯಮ ಶ್ರೇಣಿಯ ರೈತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ವ್ಯವಸಾಯ ಕ್ಷೇತ್ರದಲ್ಲಿ ಅಳವಡಿಸುತ್ತಿರುವ ಆಧುನಿಕ ತಂತ್ರಜ್ಞಾನ, ಅದಕ್ಕೆ ದೊರೆಯುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲ. ಅಷ್ಟೇ ಅಲ್ಲ ಅವರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಹೊರಗಿನ ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕಿ ಅವರು ನಲಗುತ್ತಿದ್ದಾರೆ. ಅದರಲ್ಲೂ ಬುಡಕಟ್ಟು ಜನಾಂಗವು ತೀರಾ ಶೋಷಣೆಗೆ ಒಳಗಾಗಿದೆ. ಕಾರಣ ಬುಡಕಟ್ಟು ಸಮುದಾಯದ ಬೆಳವಣಿಗೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದರೂ, ಹಲವು ರಿಯಾಯಿತಿಗಳನ್ನು ಕೊಡುತ್ತಿದ್ದರೂ ಅವರಿಗೆ ಅದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹೀಗೆ ಶೋಷಿತ ಸಮುದಾಯಕ್ಕೆ ನೆರವಾಗಲು ಸಾಕಷ್ಟು ಸರ್ಕಾರಿ ಸಂಸ್ಥೆಗಳು ಎನ್‌ಜಿಒಗಳ ಜೊತೆಗೂಡಿ ಕೆಲಸ ಮಾಡುತ್ತಿವೆ. ತಮ್ಮ ಯೋಜನೆಗಳನ್ನು ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸುತ್ತಿವೆ.
ಸಮುದಾಯ ಆಧಾರಿತ ಒಕ್ಕೂಟ (CBO) ಸ್ಥಾಪನೆ ಮತ್ತು ಬಲವರ್ಧನೆ ಅಂತಹ ಯೋಜನೆಗಳಲ್ಲಿ ಒಂದಾಗಿದೆ. ಸಿಬಿಒ ಸಂಸ್ಥೆ, ಬುಡಕಟ್ಟು ಸಮುದಾಯದ ಜನರಿಗೆಂದೇ ದೇವ್‌ಪಸ್ಲಿ ಮಂಡಳಿ ಮತ್ತು ಸ್ವಯಂ ಸೇವಾ ತಂಡದoತಹ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸoಘಟನೆಯ ಬಲವರ್ಧನೆ
ಭಾರತದ ಆರು ರಾಜ್ಯಗಳಲ್ಲಿರುವ ತೀರಾ ಬಡತನ ರೇಖೆಗಿಂತಲೂ ಕೆಳಮಟ್ಟದಲ್ಲಿರುವ ೩೩,೦೦೦ಕ್ಕೂ ಹೆಚ್ಚು ರೈತಾಪಿ ಕುಟುಂಬಗಳಸಮಗ್ರ ಅಭಿವೃದ್ಧಿಗೆ ಬಿಎಐಎಫ್ (ಭಾರತೀಯ ಕೃಷಿ ಕೈಗಾರಿಕಾಪ್ರತಿಷ್ಠಾನ) ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ೧೯೯೬ ರಿಂದ ೨೦೦೪ರ ಆಸುಪಾಸಿನಲ್ಲಿ ಯೂರೋಪಿಯನ್ ಒಕ್ಕೂಟದ ಸಹಾಯದಿಂದ ಶುರುವಾದ ಯೋಜನೆ ಅನುಷ್ಠಾನಗೊಂಡಿತು. ಹೀಗೆ ಗುರುತಿಸಲಾದ ಆರು ರಾಜ್ಯಗಳಲ್ಲಿ ಗುಜರಾತ್ ಸಹ ಒಂದು.ಗುಜರಾತಿಯನ್ನು ಯೋಜನೆಯನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲಾಯಿತು. ಹೀಗೆ ಯೋಜನೆಯ ಅನುಷ್ಠಾನಕ್ಕೆ ಆಯ್ದುಕೊಳ್ಳಲಾದ ಸ್ಥಳವೆಂದರೆ ಸೂರತ್ ಜಿಲ್ಲೆಯ ದೇವಘಡ್ ಮತ್ತು ಭರೂಚಾ ಜಿಲ್ಲೆಯ ಚಾಸ್ವಾಡ್. ದೇವಘಡ್ ಭಾಗದಲ್ಲಿ ೧೩ ಹಳ್ಳಿಗಳಿವೆ. ಅವುಗಳಲ್ಲಿ ಉಬ್ಬು, ತಗ್ಗುಗಳಿಂದ ಕೂಡಿದ ಭೂಪ್ರದೇಶವೇ ಸಾಕಷ್ಟು ಸಂಖ್ಯೆಯಲ್ಲಿದ್ದು ಅದರಲ್ಲಿ ಶೇಕಡ ೩೩ರಷ್ಟು ಭೂಮಿಯಲ್ಲಿ ಮಾತ್ರ ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಶೇಕಡ ೧೦ರಷ್ಟು ರೈತರು ಮಾತ್ರ ತಮಗೆ ಅವಶ್ಯವಿರುವಷ್ಟು ಬೆಳೆಯನ್ನು ವರ್ಷವಿಡಿ ಬೆಳೆದುಕೊಳ್ಳುತ್ತಿದ್ದಾರೆ. ಅಂತಹ ಪ್ರದೇಶಗಳಲ್ಲಿ ಚೌಧರಿ, ವಾಸವಾ, ಗ್ಯಾಮಿಟ್ ಮತ್ತು ಕೋಟ್ವಾಲಿಯ ಸೇರಿದ್ದು ಅದರಲ್ಲಿ ಬುಡಕಟ್ಟು ಸಮುದಾಯದವರೇ ಹೆಚ್ಚಿದ್ದಾರೆ.
ಕ್ಷೇತ್ರಾಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಯನ್ನು ಅಲ್ಲಿ ಅಳವಡಿಸಲಾಯಿತು. ಯೋಜನೆಯ ಅನುಷ್ಠಾನದ ಜತೆಜತೆಗೆ ಆದಾಯದಲ್ಲಿ ಹೆಚ್ಚಳ ಮತ್ತು ಭೂ ಆಧಾರಿತ ಕಾರ್ಯಕ್ರಮಗಳಲ್ಲಿ ಉತ್ಪಾದನೆಯ ಹೆಚ್ಚಳ, ಜಾನುವಾರು ಅಭಿವೃದ್ಧಿ ಯೋಜನೆ ಮತ್ತು ಕೃಷಿಯೇತರ ಗ್ರಾಮೀಣ ಉದ್ಯಮಗಳನ್ನು ಕೈಗೊಳ್ಳುವ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಗಳಿಗೆ ಪೂರಕವಾಗಿ ಸಮುದಾಯ ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಮಾನವ ವಿಕಾಸ ಸಂಘದAತಹ ಕಾರ್ಯಕ್ರಮಗಳು ಒಳಗೊಂಡಿದ್ದವು. ಇವುಗಳ ಮೂಲಕ ಜನ ಸಂಘಟನೆಗಳನ್ನು ಸ್ಥಾಪಿಸಿಕೊoಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತಹ ಸಂಘಟನೆಗಳನ್ನು ಹುಟ್ಟುಹಾಕುವುದು ಮತ್ತು ನಿಧಾನವಾಗಿ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಸಂರಕ್ಷಣೆಯನ್ನು ಮಾಡುವುದೇ ಕಾರ್ಯಕ್ರಮ ಅನುಷ್ಠಾನದ ಮುಖ್ಯ ಉದ್ದೇಶವಾಗಿದೆ. ಯೋಜನೆಯ ಲಾಭ ೩೪,೬೬೦ ಕುಟುಂಬಗಳಿಗೆ ದೊರೆಯಲಿದ್ದು, ಅವರ ಜೀವನ ಮಟ್ಟ ಬಡತನದ ರೇಖೆಗಿಂತಲೂ ಮೇಲ್ಮಟ್ಟದಲ್ಲಿರುತ್ತದೆ. ಹೀನಾಯ ಸ್ಥಿತಿಯಲ್ಲಿದ್ದ ೨೩,೨೦೭ ಹೆಕ್ಟೇರ್‌ನಷ್ಟಿದ್ದ ಭೂಮಿಯೀಗ ಹಸಿರು ವಲಯವಾಗಿದ್ದು, ಆಹಾರ ಭದ್ರತೆಗೆ ಪೂರಕವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಸೇರಿದಂತೆ ವಿವಿಧ ಹಂತಗಳಲ್ಲಿ ಮಹಿಳಾ ಪ್ರಾತಿನಿಧ್ಯವುಳ್ಳ ೧೩೮೩ ಜನ ಸಂಘಟನೆಗಳನ್ನು ಪ್ರಾರಂಭಿಸಲಾಗಿದೆ.
ದೇವ್‌ಪಸ್ಲಿ: ದೇವಘಡ್ ವಿಭಾಗದ ಪರಿವಾರ ಉತ್ಥಾನ ಸಹಕಾರ ಮಂಡಳಿ
‘ದೇವ್‌ಪಸ್ಲಿ’ಯು ಒಂದು ಸಹಕಾರಿ ಸಂಘಟನೆಯಾಗಿದ್ದು ಯೋಜನೆಯನ್ನು ಅನುಷ್ಠಾನಗೊಳಿಸುವ ಜತೆಗೆ ಸಮಗ್ರ ಅಭಿವೃದ್ಧಿಯನ್ನು ಕಾಣುವ ಉದ್ದೇಶವನ್ನು ಹೊಂದಿದೆ. ಈ ಸಹಕಾರ ಮಂಡಳಿಯನ್ನು ಗುಜರಾತ್ ರಾಜ್ಯ ಸಹಕಾರ ಕಾಯ್ದೆಯ ಅನ್ವಯ ೨೧ನೇ ಏಪ್ರಿಲ್ ೨೦೦೫ರಂದು ಪ್ರಾರಂಭಿಸಲಾಗಿದೆ. ಮಂಡಳಿಯ ಸದಸ್ಯರು ತಾವು ಬೆಳೆದ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಳ, ಬೆಳೆದ ಬೆಳೆಗಳನ್ನು ಒಟ್ಟುಗೂಡಿಸುವುದು, ಅವುಗಳನ್ನು ಕ್ರೋಢೀಕರಿಸಿ ನೇರ ಮಾರಾಟ ಮಾಡುವುದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅವರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಮಟ್ಟದ ಜೀವನ ಶೈಲಿಯಲ್ಲಿ ಸುಧಾರಣೆಯನ್ನು ಕಾಣುವುದಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಸಹಕಾರಿ ಮಂಡಳಿಯಲ್ಲಿ ಸದಸ್ಯತ್ವ ಮತ್ತು ಷೇರುದಾರರಾಗಿ ಟಿಟಿಎಸ್‌ಡಿ ಯೋಜನೆ (೫೮೦೦)ಯ ಅಡಿಯಲ್ಲಿ ಫಲಾನುಭವವನ್ನು ಹೊಂದಿದ್ದಾರೆ. ಹೀಗೆ ಫಲಾನುಭವ ಹೊಂದಿದ ೫೮೦೦ ಸದಸ್ಯರು ಮೇಲ್ಕಾಣಿಸಿದ ೧೩ ಹಳ್ಳಿಗಳಿಂದಲೇ ಬoದಿರುವುದು ಗಮನಾರ್ಹ. ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಗ್ರಾಮೀಣ ವಿಕಾಸ ಸಮಿತಿ (ಜಿವಿಎಸ್) ಸ್ಥಾಪಿಸಲಾಗಿದೆ. ಹೀಗೆ ಸ್ಥಾಪಿಸಲಾದ ೧೩ ಗ್ರಾಮ ವಿಕಾಸ ದೇವಪಸ್ಲಿ ವ್ಯಾಪಾರಸ್ಥರು ಮಂಡಳ ಬೀಜ ಮತ್ತು ಗೊಬ್ಬರ ತಯಾರಕರು ಮತ್ತು ಪೂರೈಕೆದಾರರು ಸಂಗೋಪನಾ ಇಲಾಖೆ, ಕೃಷಿ, ಬುಡಕಟ್ಟು ಕಲ್ಯಾಣ ಇತ್ಯಾದಿ ಸಮಿತಿಯಿಂದ ಒಬ್ಬೊಬ್ಬ ಪ್ರತಿನಿಧಿಯನ್ನು ಆರಿಸಿಕೊಳ್ಳಲಾಗಿದೆ. (ದೊಡ್ಡ ಗ್ರಾಮೀಣ ಪ್ರದೇಶವಾದರೆ ಇಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ). ಹೀಗೆ ಹದಿನೈದು ಜನರನ್ನು ಒಳಗೊಂಡ ಸಹಕಾರ ಸಂಸ್ಥೆಯ ನಿರ್ದೇಶಕ ಮಂಡಳಿಯನ್ನು ರಚಿಸಲಾಯಿತು.
ಸದಸ್ಯರ ನಾಮ ನಿರ್ದೇಶನವು ಸರ್ವ ಸಮ್ಮತವಾಗಿದ್ದು ಪ್ರತಿನಿಧಿಗಳ ಆಯ್ಕೆಯನ್ನು ಗ್ರಾಮೀಣ ವಿಕಾಸ ಸಮಿತಿಯಲ್ಲಿ ಮಾಡಲಾಯಿತು.
| ಮೀನಾ ಬೆನ್ ಚುನಿಲಾಲ್ ದೇವೋರಾ ೨೬ ವರ್ಷದ ಮಹಿಳೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಆದಿವಾಸಿ ಸಂಪ್ರದಾಯದ ಪ್ರಕಾರ, ಆಕೆಗೆ ವಂಶಪಾರoಪರ್ಯವಾಗಿ ತನ್ನ ತಂದೆಯಿoದ ೬೦ ಗುಂಟೆಗಳಷ್ಟು ಭೂಮಿ ದೊರೆತಿದೆ. ಆಕೆ ತನ್ನ ಪತಿಯ ಜತೆಗೂಡಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಳೆ. ತೀರಾ ಅತ್ಯಲ್ಪ ಪ್ರಮಾಣದಲ್ಲಿ ವರ್ಷಕ್ಕೊಂದು ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿದೆ. ಭೂಮಿಯು ತೀರಾ ಗಡುಸಾಗಿದ್ದು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ ವರ್ಷಕ್ಕೊಮ್ಮೆ ಬೆಳೆ ಬೆಳೆದರಾಯಿತು. ಇನ್ನುಳಿದ ದಿನಗಳಲ್ಲಿ ಆಕೆಗೆ ಕೆಲಸವೇ ಇಲ್ಲ. ಹೊಟ್ಟೆಗೆ ತಿನ್ನಲಿಕ್ಕೂ ಸಾಕಷ್ಟು ಆಹಾರ ಲಭಿಸದೆ ಅವರು ಮರದ ಬುಡ್ಡೆಗಳ ಅಡಿಯಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅವರು ದೈನಂದಿನ ಆಹಾರಕ್ಕಾಗಿ ಭಡ್ಕು (ನೀರಿನಲ್ಲಿ ಬೇಯಿಸಿದ ಅನ್ನದ ಗಂಜಿ)ವನ್ನೇ ಅವಲoಬಿಸಿದ್ದರು.BAIF’ನ ಯೋಜನೆಯ ಅಡಿಯಲ್ಲಿ ಮೀನಾ ಮತ್ತು ಚುನಿಲಾಲ್ ಸಾಕಷ್ಟು ತರಬೇತಿ ಶಿಬಿರಗಳಿಗೆ ಭೇಟಿಕೊಟ್ಟಿದ್ದಾರೆ ಮತ್ತು ತಮ್ಮ ಕೃಷಿ ಅಭ್ಯಾಸಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡುಕೊoಡಿದ್ದಾರೆ, ತರಕಾರಿ ಬೆಳೆ ಮತ್ತು ಹುಳ ಗೊಬ್ಬರ ತಯಾರಿಕಾ ವಿಧಾನದಲ್ಲೂ ಸಾಕಷ್ಟು ಅಂಶಗಳನ್ನು ಕಲಿತುಕೊಂಡಿದ್ದಾರೆ. ಇದೀಗ ಮೀನಾ ತನ್ನ ಹಳ್ಳಿಯಲ್ಲಿರುವ ದುರ್ಗಾ ಬಚಾವತ್ ಘಾಟ್ ಸ್ವಯಂ ಸೇವಾ ತಂಡದ ಸದಸ್ಯೆಯಾಗಿದ್ದಾಳೆ. ಆಕೆ ನಿಯಮಿತವಾಗಿ ಸಭೆಗೆ ಹಾಜರಾಗುತ್ತಿದ್ದಾಳೆ. ಎಸ್‌ಎಚ್‌ಜಿ (ಸ್ವಯಂ ಸೇವಾ ತಂಡ)ಯಿAದ ಹತ್ತು ಸಾವಿರ ರೂಗಳನ್ನು ಕಡವಾಗಿ ಪಡೆದುಕೊಂಡಿದ್ದಾಳೆ. ತನ್ನ ತೋಟದಲ್ಲಿ ಹೊಸ ಮನೆಯನ್ನು ಕಟ್ಟು- ಕೊಂಡಿದ್ದು ಪಡೆದುಕೊಂಡ ಸಾಲವನ್ನು ಹಿಂದಿರುಗಿಸಿದ್ದಾಳೆ. ಇದೀಗ ಆಕೆ ಮತ್ತು ಅವಳ ಪತಿ ದೇವ್ ಪಸ್ಲಿ ಸಹಕಾರ ಮಂಡಳಿಯ ಸದಸ್ಯರಾಗಿದ್ದಾರೆ. ಅವರು ಪ್ರಮಾಣೀಕೃತ ಬೀಜ ಮತ್ತು ಗೊಬ್ಬರ, ಕೀಟನಾಶಕಗಳನ್ನು ದೇವ್‌ಪಸ್ಲಿ ಸಹಕಾರ ಸಂಸ್ಥೆಯಿAದ ಖರೀದಿಸಿದ್ದಾರೆ. ತಾವು ಖರೀದಿಸುವ ಉತ್ಪನ್ನಗಳ ಮೇಲೆ ಎರಡು ಸಾವಿರ ರೂಗಳನ್ನು ಉಳಿಸುತ್ತಿದ್ದಾರೆ. ಸಹಕಾರಿ ಸಂಸ್ಥೆಗಳ ಮೂಲಕ ವಸ್ತುಗಳನ್ನು ಖರೀದಿಸುವುದು ಆಕೆಗೆ ಖುಷಿ ಕೊಡುವ ವಿಷಯವಾಗಿದೆ. ಆಕೆಗೀಗ ಗುಣಮಟ್ಟದ ಮಾಹಿತಿ ಸಕಾಲದಲ್ಲಿ ಲಭಿಸುತ್ತಿದೆ. ಅವರಿಂದು ವರ್ಷಕ್ಕೆ ಮೂರು ಬಾರಿ ಬೆಳೆ ತೆಗೆಯುತ್ತಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ತಂಡದಿAದ ಪಡೆದುಕೊಂಡಿ- ದ್ದಾರೆ. ಆಕೆಯೀಗ ತನ್ನದೇ ಆದ ಪುಟ್ಟ ಕೈತೋಟವನ್ನು ಹೊಂದಿದ್ದು ಅದರಲ್ಲಿ ಕುಟುಂಬಕ್ಕೆ ಅಗತ್ಯವಾದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆಕೆಯ ಕುಟುಂಬದ ಆಹಾರ ಕ್ರಮದಲ್ಲಿ ಅಕ್ಕಿ, ಬೇಳೆ, ರೋಟಿ ಮತ್ತು ತರಕಾರಿಗಳಿವೆ. ಬೆಳೆ ಇಳುವರಿಯ ಪ್ರಮಾಣ ಶೇಕಡ ೧೦ರಷ್ಟು ಹೆಚ್ಚಲಿದೆ. ಅದರೊಂದಿಗೆ ತರಕಾರಿ ಮತ್ತು ಹಾಲಿನ ಉತ್ಪಾದನೆಯ ಪ್ರಮಾಣದಲ್ಲೂ ಏರಿಕೆಯಾಗಿದೆ. ಕಳೆದ ವರ್ಷ ಮೀನಾ ಅವರ ಕುಟುಂಬ ಬೆಳೆ ಮಾರಾಟ ಮಾಡುವ ಮೂಲಕ ೫೦ ಸಾವಿರ ರೂಗಳನ್ನು ಆದಾಯವನ್ನು ಗಳಿಸಿದೆ. ಅವರಿಗ ಒಂದು ವರ್ಷಕ್ಕೆ ಸಾಕಾಗುವಷ್ಟು ದವಸ, ಧಾನ್ಯವನ್ನು ತಮ್ಮ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದ್ದಾರೆ. ಅವರ ಕುಟುಂಬದ ನಿವ್ವಳ ಆಧಾಯದಲ್ಲಿ ಹೆಚ್ಚಳವಾಗಿರುವುದರಿಂದ ಆಹಾರ ಭದ್ರತೆ ಹೆಚ್ಚಿದ್ದು ಕುಟುಂಬ ಸoಭ್ರಮದ ಹೊಸ್ತಿಲಲ್ಲಿದೆ. |
ಒಂದು ವೇಳೆ ಯಾವುದಾದರೂ ಸದಸ್ಯರು ಕ್ರಿಯಾಶೀಲರಾಗಿರದಿದ್ದರೆ ಅಥವಾ ಮಂಡಳಿಯ ನಿರ್ದೇಶಕರಾಗಿ ಮುಂದುವರೆಯಲು ಇಚ್ಛಿಸದ ಪಕ್ಷದಲ್ಲಿ ಗ್ರಾಮೀಣ ವಿಕಾ ಸಮಿತಿಯು ಅಂತಹ ಸದಸ್ಯರ ಬದಲಿಗೆ ಮತ್ತೊಬ್ಬರನ್ನು ಅದೇ ಗ್ರಾಮದ ವತಿಯಿಂದ ಎಲ್ಲರ ಒಮ್ಮತದ ಮೇರೆಗೆ ಆಯ್ಕೆ ಮಾಡುತ್ತದೆ. ಮಂಡಲಿಯು ತನ್ನೆಲ್ಲಾ ಚಟುವಟಿಕೆಗಳನ್ನು ದೇವಘಡ್ ಮಾಂಡವಿ ರಾಷ್ಟೀಯ ಹೆದ್ದಾರಿಯಲ್ಲಿರುವ ಜುನಾವನ್‌ನಲ್ಲಿರುವ ಕೃಷಿ ಸೇವಾ ಕೇಂದ್ರ (ಎಎಸ್‌ಸಿ)ವನ್ನು ಆಧರಿಸಿತ್ತು. ಸುತ್ತಮುತ್ತಲ ಗ್ರಾಮಸ್ಥರಿಗೆ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಮಾಹಿತಿಗಳನ್ನು ನೀಡುವುದು, ಕೃಷಿ ಭೂಮಿಗೆ ಅನುಕೂಲವಾಗುವಂತೆ ಗೊಬ್ಬರ ಮತ್ತು ರಸಗೊಬ್ಬರವನ್ನು ವಿತರಣೆ
ಮತ್ತು ಹಳ್ಳಿಯ ಸಮೀಪದಲ್ಲಿ ರೈತರಿಗೆ ಅನುಕೂಲವಾಗುವ ಜೈವಿಕ ಕೀಟನಾಶಕ ಘಟಕಗಳನ್ನು ಸ್ಥಾಪಿಸುವುದು ಸೇರಿತ್ತು. ಈ ಅಂಶಗಳನ್ನು ಮನಗಂಡ ಸಹಕಾರ ಮಂಡಲಿಯು ತನ್ನೆಲ್ಲಾ ಚಟುವಟಿಕೆಗಳನ್ನು ಕೃಷಿ ಸೇವಾ ಕೇಂದ್ರಗಳ ಮೂಲಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮುಂದಾಯಿತು.
ಆರoಭಿಕ ಹಂತದಲ್ಲಿ ಮಂಡಳಿಯು ಬೀಜ ಮತ್ತು ಗೊಬ್ಬರ ಉತ್ಪನ್ನಕ್ಕೆ ಅಗತ್ಯವಾದ ಪರವಾನಗಿಯನ್ನು ಹೊಂದಿತು. ಖಾಸಗಿ ಮತ್ತು ಸರ್ಕಾರದಿಂದ ಪ್ರಮಾಣೀಕೃತ ಬೀಜ ಮತ್ತು ಗೊಬ್ಬರ ಉತ್ಪಾದಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲಾಯಿತು. ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ಸಂಬoಧಿತ ನಿರ್ದೇಶಕ ಮಂಡಳಿಯ ಸದಸ್ಯರ ನೇತೃತ್ವದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಅದೆಂದರೆ ಆಯಾ ಹಳ್ಳಿಯಲ್ಲಿರುವ ಸ್ವಯಂಸೇವಾ ತಂಡಗಳ ಸಹಾಯದಿಂದ ಹಳ್ಳಿಗಳ ಪಟ್ಟಿಯನ್ನು ಮಾಡಲಾಯಿತು. ನಂತರ ಹೀಗೆ ಗುರುತಿಸಲಾದ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾದ ಗುಣಮಟ್ಟದ ಬೀಜ ಮತ್ತು ಗೊಬ್ಬರದ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಹೀಗೆ ಸಿದ್ಧಪಡಿಸಲಾದ ಪಟ್ಟಿಗೆ ಅನುಗುಣವಾಗಿ ಬೇಡಿಕೆಯನ್ನು ಪ್ರತಿಷ್ಠಿತ ಉತ್ಪಾದಕ ಸಂಸ್ಥೆಗಳಿಗೆ ಸಲ್ಲಿಸಲಾಯಿತು. ನಂತರ ಅವುಗಳನ್ನು ಅವರಿಂದ ಖರೀದಿಸಲಾಯಿತು. ಒಮ್ಮೆ ಉತ್ಪನ್ನಗಳನ್ನು ಖರೀದಿಸಿದ ನಂತರ ಅದರ ಬಗ್ಗೆ ಮಾಹಿತಿಯನ್ನು ಸ್ವಯಂ ಸೇವಾ ತಂಡಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮುಟ್ಟಿಸಲಾಯಿತು. ಒಮ್ಮೆ ತಮಗೆ ಬೇಕಾದ ಉತ್ಪನ್ನಗಳು ಬಂದಿವೆ ಎಂಬ ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ತಮಗೆ ಅವಶ್ಯಕವಾದ ವಸ್ತುಗಳನ್ನು ಕೊಳ್ಳಲು ಮುಗಿಬೀಳಲು ಪ್ರಾರಂಭಿಸಿದರು. ಸ್ವಯಂ ಸೇವಾ ತಂಡಗಳಿoದ ವಿತರಣೆಯಾಗುತ್ತಿದ್ದ ಮಳಿಗೆಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಕೃಷಿ ಸೇವಾ ಕೇಂದ್ರಗಳ ಸಂಖ್ಯೆಯೂ ದ್ವಿಗುಣವಾಯಿತು. ಸ್ವಯಂ ಸೇವಾ ತಂಡಗಳು ತಮ್ಮನ್ನು ಋತುಮಾನ ಆಧಾರಿತ ಚಟುವಟಿಕೆಗಳಾದ ಬೀಸುವಿಕೆ ಮತ್ತು ಕೆಂಪು ಮೆಣಸಿನ ಕಾಯಿ ಪುಡಿಯ ಮಾರಾಟ, ಅರಿಷಿಣ ಪುಡಿ, ಹಪ್ಪಳಗಳ ಮಾರಾಟವನ್ನು ಕೃಷಿ ಸೇವಾ ಕೇಂದ್ರದ ನೆರವಿನಿoದ ಮಾಡುತ್ತಿದೆ. ಇಂತಹ ಕ್ರಿಯಾತ್ಮಕ ಚಟುವಟಿಕೆಯ ಯಶಸ್ಸಿಗೆ ಸ್ವಯಂ ಸೇವಾ ತಂಡ ಮತ್ತು ನಿರ್ದೇಶಕ ಮಂಡಳಿಯ ನಡುವಿನ ಸೌಹಾರ್ದ ಸಂಬoಧ, ರೈತರ ಬೇಡಿಕೆಗೆ ತಕ್ಕಂತೆ ಸಕಾಲದಲ್ಲಿ ಸ್ಪಂದಿಸುವುದು ಸೇರಿತ್ತು. ಮಂಡಲಿಯು ಉತ್ತಮ ಗುಣಮಟ್ಟದ ಪದಾರ್ಥಗಳನ್ನಷ್ಟೇ ಖರೀದಿಸಿ ಮಾರಾಟ ಮಾಡುತ್ತಿದೆ. ಹೀಗೆ ಮಾಡುವುದರಿಂದ ಪ್ರತಿಯೊಂದು ವಸ್ತುವೂ ಮಾರಾಟವಾಗುತ್ತಿದೆ. ಇದರಿಂದ ಬಂಡವಾಳವೂ ಹೊರೆಯಾಗದೆ ಅಗತ್ಯಕ್ಕೆ ತಕ್ಕಂತೆ ಸಾಲವೂ ಲಭಿಸುತ್ತದೆ. ಆರ್ಥಿಕ ಸುಭದ್ರತೆ ಮಂಡಳಿಗೆ ಇಂತಹ ಚಟುವಟಿಕೆಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ವಿಷಯವಾಗಿತ್ತು. ಮೊದಲನೆಯದಾಗಿ, ತನ್ನ ನೆಲೆಯನ್ನು ಸುಭದ್ರಪಡಿಸಿಕೊಳ್ಳುವುದು ಮತ್ತು ಸದಸ್ಯರ ಬೆಳವಣಿಗೆಗೆ ಪೂರಕವಾಗಿರುವುದು. ಕಳೆದ ಏಳು ವರ್ಷಗಳಲ್ಲಿ, ಮಂಡಲಿಯು ಎರಡೂ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿಯನ್ನು ಸಾಧಿಸಿದೆ. ಇಂದು ಸವಾಲುಗಳನ್ನು ಎದುರಿಸಲು ಅಗತ್ಯವಾದ ತನ್ನದೇ ಆದ ಸೂಕ್ತ ವೇದಿಕೆಯನ್ನು ಸ್ಥಾಪಿಸಿಕೊಂಡಿದ್ದು ಅಗತ್ಯ ಬಂಡವಾಳವನ್ನು ಹೊoದಿದೆ.
ಸಹಕಾರ ಮಂಡಳಿ ಸ್ಥಾಪನೆಯಾದ ಮೊದಲ ಮೂರು ವರ್ಷಗಳಲ್ಲಿ, ಮಂಡಳಿಯು ವಿಷಯಗಳನ್ನು ಸಂಗ್ರಹಿಸಲು ಸಾಕಷ್ಟು ಹಣವನ್ನು ಹೂಡಿಕೆ ಮಾಡಿತು. ನಾಲ್ಕನೆಯ ವರ್ಷದಲ್ಲಿ ಅದರ ಬೆಳವಣಿಗೆಯಲ್ಲಿ ಸಾಕಷ್ಟು ಪರಿವರ್ತನೆಯಾಯಿತು. ಆದಾಯ ಗಳಿಕೆ ಕ್ರಮೇಣ ಹೆಚ್ಚಿತು. ಮೊದಲ ವರ್ಷದಲ್ಲಿದ್ದ ನಿವ್ವಳ ಆದಾಯದ ಮೊತ್ತ ೭ ಲಕ್ಷ ರೂಗಳಷ್ಟಿತ್ತು. ಆರನೆಯ ವರ್ಷದ ಹೊತ್ತಿಗೆ ಅದರ ಮಟ್ಟ ೯೧ ಲಕ್ಷ ರೂಗಳಷ್ಟಾಯಿತು. ಮಾರಾಟದ ಪ್ರಮಾಣದಲ್ಲಿ ಹೆಚ್ಚಳವಾದರೂ ಲಾಭಾಂಶದ ಮಟ್ಟವನ್ನು ಮಾತ್ರ ಮೊದಲಿನ ಪ್ರಮಾಣದಲ್ಲಿ ಕಾಯ್ದುಕೊಳ್ಳಲಾಯಿತು. ಹಾಗಾಗಿ ಸದಸ್ಯರಿಗೆ ಸಾಕಷ್ಟು ಲಾಭದಾಯಕವಾಯಿತು. ಮೊದಲ ಏಳು ವರ್ಷಗಳಲ್ಲಿ, ಸಹಕಾರ ಮಂಡಳಿಯು ತಾನು ಗಳಿಸಿದ ಲಾಭವನ್ನು ತನ್ನ ಸದಸ್ಯರಿಗೆ ವಿತರಿಸಲಿಲ್ಲ. ಅದಕ್ಕೆ ಬದಲಾಗಿ ಈ ಲಾಭಾಂಶವನ್ನು ವಿವಿಧ ಹೂಡಿಕೆಗಳಲ್ಲಿ ತೊಡಗಿಸಿತು. ಅದರಿಂದಾಗಿ ಎಂತಹ ತುರ್ತು ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸುವಷ್ಟರ ಮಟ್ಟಿಗೆ ಆರ್ಥಿಕವಾಗಿ ಸಬಲವಾಯಿತು. ಎಂಟನೆಯ ವರ್ಷದಲ್ಲಿ ಸಹಕಾರ ಮಂಡಳಿಯು ತಾನು ಗಳಿಸಿದ ಲಾಭವನ್ನು ವಿತರಿಸಲು ಯೋಜಿಸಿದೆ. ಇದು ನಿಜಕ್ಕೂ ಮಂಡಳಿಗೆ ಹಾಗೂ ಅದರ ಪಾಲುದಾರರಿಗೆ ಬದಲಾವಣೆಯ ಪರ್ವ ಎಂದರೆ ಅತಿಶಯೋಕ್ತಿಯಲ್ಲ.
ಬಾಂಧವ್ಯ ಬೆಸುಗೆ
ಸಾಕಷ್ಟು ಸರ್ಕಾರಿ ಇಲಾಖೆಗಳು, ಅದರಲ್ಲೂ ಕೃಷಿ ಇಲಾಖೆ ರೈತರ ಉಪಯೋಗಕ್ಕೆಂದು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳನ್ನು ಸಹಕಾರಿ ಮಂಡಳಿಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ. ಯೋಜನೆಯ ಅನುಷ್ಠಾನದ ನಿರ್ವಹಣೆಗಾಗಿ ಸಹಕಾರ ಮಂಡಳಿಗೆ ಶೇಕಡ ೫ರಷ್ಟು ಕಮಿಷನ್ ದೊರೆಯುತ್ತದೆ. ಪ್ರಸ್ತುತ ಈ ಸೌಲಭ್ಯವು ಕಡಲೆಕಾಯಿ, ಸೋಯಾಬೀನ್ಸ್, ಗೋಧಿ ಮತ್ತು ಭತ್ತದ ಬೆಳೆಗೆ ಲಭಿಸುತ್ತಿದೆ. ಹೀಗೆ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡ ಸಹಕಾರ ಮಂಡಳಿಯು ಇತರೆ ಬೀಜ
ಮತ್ತು ಗೊಬ್ಬರ ಉತ್ಪಾದನಾ ಸಂಸ್ಥೆಗಳ ಜತೆಗೆ ಹೊಂದಾಣಿಕೆ ಮಾಡಿಕೊoಡಿದೆ. ಆ ಸಂಸ್ಥೆಗಳು ಸಹಕಾರ ಮಂಡಳಿಗೆ ಸಾಲದ ರೂಪದಲ್ಲಿ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿವೆ. ಅದರೊಂದಿಗೆ ಸಹಕಾರ ಮಂಡಳಿಯ ಸದಸ್ಯರಿಗೆ ಅಗತ್ಯವಾದ ಸೂಕ್ತ ತರಬೇತಿ ಮತ್ತು ಅಗತ್ಯ ಮಾಹಿತಿಗಳನ್ನು ನೀಡುತ್ತಿದೆ. ಹಾಗಾಗಿ,
ಸಹಕಾರ ಮಂಡಲಿಯು ಹಲವಾರು ಪ್ರದೇಶಗಳಲ್ಲಿ ಸಾಕಷ್ಟು ಸಂಸ್ಥೆಗಳಿಗೆ ಮತ್ತು ತನ್ನ ಸದಸ್ಯರ ನಡುವಿನ ಸೇತುವಾಗಿದೆ.
ರಚನಾತ್ಮಕ ಚಟುವಟಿಕೆಗಳು
ಸಹಕಾರ ಮಂಡಲಿಯು ಋತುಮಾನಕ್ಕೆ ತಕ್ಕಂತೆ ಮತ್ತು ದೀರ್ಘಕಾಲೀನ ವ್ಯಾಪಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಬಹಳಷ್ಟು ಸ್ವಯಂ ಸೇವಾ ತಂಡಗಳು ಹುಳುಗಳಿಂದ ಉತ್ಪನ್ನವಾಗುವ ಗೊಬ್ಬರ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರಂಭಿಕ ವರ್ಷಗಳಲ್ಲಿ ಸಹಕಾರ ಮಂಡಲಿಯು ಜೈವಿಕ ಗೊಬ್ಬರ ಮಾರಾಟಕ್ಕೆ ಅಗತ್ಯವಾದ ವೇದಿಕೆಯನ್ನು ಕಲ್ಪಿಸಿತ್ತು. ಪ್ರಸ್ತುತ ಈ ಜವಾಬ್ದಾರಿಯನ್ನು ಸ್ವಯಂ ಸೇವಾ ತಂಡಗಳಿಗೆ ವಹಿಸಲಾಗಿದ್ದು ಅವು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿವೆ. ತಾವು ಬೆಳೆದ ಉತ್ಪನ್ನಗಳನ್ನು ಒಟ್ಟುಗೂಡಿ ಮಾರಾಟ ಮಾಡುವ ಅಗತ್ಯತೆ ಇಂದು ರೈತರ ಮುಂದಿದೆ. ಮೂರು, ಐದು ಮತ್ತು ಆರನೆಯ ವರ್ಷದಲ್ಲಿ, ಸಹಕಾರ ಮಂಡಳಿಯು ಉದ್ದಿನ ಬೇಳೆ, ಸೋಯಾಬೀನ್ಸ್, ಕಡಲೆಕಾಯಿ ಬೀಜ ಮತ್ತು ತರಕಾರಿಗಳನ್ನು ಸೂರತ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತು. ಆರನೆಯ ವರ್ಷದಲ್ಲಿ ಸೂರತ್ ನಗರದಲ್ಲಿ ತನ್ನದೇ ಆದ ತರಕಾರಿ ಮಳಿಗೆಯೊಂದನ್ನು ಸ್ಥಾಪಿಸಿ ನಿರ್ವಹಿಸಲು ಮುಂದಾಯಿತು. ಆದರೆ ಸಹಕಾರ ಮಂಡಲಿಗೆ ತನ್ನದೇ ಆದ ವಾಹನ ಸೌಕರ್ಯ
ಹೊಂದಿಲ್ಲದಿರುವುದು ಮತ್ತು ಸಾರಿಗೆ ವೆಚ್ಚದಲ್ಲಿ ಹೆಚ್ಚಳ ಮತ್ತಿತರ ಅಂಶಗಳಿoದ ಅಂತಹ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಅದರ ಏಳನೆಯ ವರ್ಷದಲ್ಲಿ ಮಾರಾಟಗಾರರು ಸಹಕಾರ ಮಂಡಲಿಯ ಬಾಗಿಲಿನಲ್ಲಿ ತರಕಾರಿಗಳನ್ನು ಕೊಳ್ಳಲು ಬಯಸಿದರು. ಪ್ರಸ್ತುತ ರೈತಾಪಿ ಕುಟುಂಬದವರೇ ನೇರವಾಗಿ ತರಕಾರಿಗಳನ್ನು ಬೇರೆ ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಅನುಭವಗಳ ಸರಮಾಲಿಕೆಯಲ್ಲಿ ತನ್ನ ಯಾನವನ್ನು ಮುಂದುವರೆಸಿರುವ ಮಂಡಳಿ ಇಂದು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಮುಂಬರುವ ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಒಟ್ಟಾಗಿ ಮಾರುಕಟ್ಟೆ ಮಾಡುವ ಉದ್ದೇಶವನ್ನು ಹೊಂದಿದೆ. ಇದು ನಿಜಕ್ಕೂ ಸಹಕಾರ ಮಂಡಲಿ ಮತ್ತು ಅದರ ಸದಸ್ಯರ ಪಾಲಿಗೆ ಯಶಸ್ಸಿನ ಸೋಪಾನವೆಂದರೆ ಅತಿಶಯೋಕ್ತಿಯಾಗಲಾರದು.
ಪರಿಣಾಮಗಳು
ಕ್ರಿಯಾ ಯೋಜನೆಗಳನ್ನು ಹೀಗೆ ಕೈಗೊಂಡ ಕಾರಣ ವ್ಯವಸಾಯೋತ್ಪನ್ನಗಳ ಉತ್ಪಾದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಅದರಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಹಾರ ಭದ್ರತೆಯ ಭಾವನೆ ಮೂಡಿದೆ. ಯೋಜನೆಯ ಅನುಷ್ಠಾನಕ್ಕೆ ಮುನ್ನ, ಕೃಷಿ ಸಮುದಾಯವು ಗೆಡ್ಡೆಗಳನ್ನು ಆಧರಿಸಿ ಜೀವನ ನಡೆಸುತ್ತಿದ್ದವು. ಇಂದು ಪ್ರತಿಯೊಂದು ಕುಟುಂಬವೂ ತಮ್ಮದೇ ಆದ ಒಂದು ವರ್ಷಕ್ಕೆ ಆಗುವಷ್ಟರ ಮಟ್ಟಿಗೆ ಆಹಾರ ಸಾಮಗ್ರಿಯನ್ನು ಹೊಂದಿದೆ. ಜಾನಖಾವುದಲ್ಲಿರುವ ತರಕಾರಿ ಮಾರುಕಟ್ಟೆಯ ಮೂಲಕ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಗ್ರಾಮಸ್ಥರಿಗೆ ತರಕಾರಿಯೂ ಸಾಕಷ್ಟು ಲಭಿಸುತ್ತಿದೆ. ಅದರಿಂದಾಗಿ ಆಹಾರ ಭದ್ರತೆಯಲ್ಲಷ್ಟೇ ಹೆಚ್ಚಳವಾಗಿಲ್ಲ ಅದರೊಂದಿಗೆ ಯೋಜನೆ ಅನುಷ್ಠಾನಗೊಂಡ ಪ್ರದೇಶದ ಆಚೆಗೂ ಇರುವ ಗ್ರಾಮಸ್ಥರಿಗೆ ಅತ್ಯಗತ್ಯವಾದ ದೈನಂದಿನ ಪೌಷ್ಟಿಕಾಂಶಗಳು ಲಭಿಸುತ್ತಿವೆ. ಆರ್ಥಿಕ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ
ಪ್ರತಿಯೊoದು ಹಳ್ಳಿಯಲ್ಲೂ ಉಳುಮೆಗಾಗಿ ೩-೪ ಟ್ರ್ಯಾಕ್ಟರ್ ಗಳು ಬಂದಿವೆ. ಸಹಕಾರ ಮಂಡಲಿಯ ಪ್ರತಿಯೊಬ್ಬ ಸದಸ್ಯನಿಗೂ ಆಯಾ ಋತುಮಾನದಲ್ಲಿ ಐದರಿಂದ ಆರು ಸಾವಿರ ರೂ.ಗಳಷ್ಟು ದೊರೆಯುತ್ತಿದೆ. ಮೇಲ್ನೋಟಕ್ಕೆ ಈ ಮೊತ್ತವು ಅಷ್ಟೇನು ಬೃಹತ್ತಾಗಿ ಕಾಣಿಸದಿದ್ದರೂ ಸಣ್ಣ ಪುಟ್ಟ ರೈತರಿಗೆ ಅತ್ಯಗತ್ಯವಾದ ಮೊತ್ತವಾಗಿದೆ.
ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ ಅಂಶವೆoದರೆ, ಈ ಯೋಜನೆಯ ಲಾಭವು ೪೫೦೦ಕ್ಕೂ ಹೆಚ್ಚು ಸದಸ್ಯರನ್ನು ಮುಟ್ಟಿದೆ ಮತ್ತು ಅದೆಷ್ಟೋ ಪ್ರಕರಣಗಳಲ್ಲಿ ಒಂದು ವರ್ಷದಲ್ಲಿ ಎರಡು ಬಾರಿ ವರಮಾನವನ್ನು ಗಳಿಸಿದ್ದಾರೆ.
ಹೀಗೆ ಆದಾಯದಲ್ಲಿ ಹೆಚ್ಚಳ ಮತ್ತು ಉಳಿತಾಯ ಮಾಡುವ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಮೊಬೈಲ್ ಬ್ಯಾಂಕಿoಗ್ ಪರಿಚಯಿಸಲ್ಪಟ್ಟಿದೆ. ಮೊಬೈಲ್ ಬ್ಯಾಂಕಿoಗ್ ಒಂದು ರಚನಾತ್ಮಕ ಯೋಜನೆಯಾಗಿದ್ದು ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಇದರಿಂದ ಹಣಕಾಸಿನ ಲಾಭದ ಜತೆ ಜತೆಗೆ, ಇಡೀ ಬುಡಕಟ್ಟು ಸಮುದಾಯದ ಮೇಲೆ ಉಂಟಾದ ಸಾಮಾಜಿಕ ಬದಲಾವಣೆ ನಿಜಕ್ಕೂ ಸ್ತುತ್ಯಾರ್ಹ. ಈ ಮುನ್ನ ಬುಡಕಟ್ಟು ಸಮುದಾಯದವರು ಒಟ್ಟಾಗಿ ಕೆಲಸ ಮಾಡುವ
ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರಲಿಲ್ಲ. ಆದರಿಂದು ಸಂಘಟಿತ ಸoಸ್ಥೆಗಳ ಒಕ್ಕೂಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದರ ನೇರ ಪರಿಣಾಮ ಬುಡಕಟ್ಟು ಜನಾಂಗದ ಮಹಿಳೆಯರ ಮೇಲಾಗುತ್ತಿದೆ. ಪ್ರತಿಯೊಂದು ಗ್ರಾಮೀಣ ಮಟ್ಟದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಹಣ ನಿರ್ವಹಿಸುವ ಬಗೆಯನ್ನು ಕಲಿತುಕೊಂಡಿದ್ದಾರೆ, ಸ್ವಯಂ ಸೇವಾ ತಂಡಗಳ ಚಟುವಟಿಕೆಗಳ ಮುನ್ನಡೆ ಮತ್ತು ಸಹಕಾರಕ್ಕೆ ನೆರವಾಗುತ್ತಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಭವಿಷ್ಯದ ನೋಟದಲ್ಲಿ
ಸಹಕಾರ ಮಂಡಲಿಯು ತನ್ನ ದೃಷ್ಟಿಕೋನವನ್ನು ಕೇವಲ ಯೋಜನೆಗಷ್ಟೇ ಮೀಸಲಿಟ್ಟಿಲ್ಲ. ಬದಲಿಗೆ ಅದರಾಚೆ ನೆಟ್ಟಿದ್ದು, ಬೆಳವಣಿಗೆಯ ಹಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅಭಿವೃದ್ಧಿಶೀಲ ಕಾರ್ಯಕ್ರಮಗಳಲ್ಲಿ ಬುಡಕಟ್ಟು ಜನಾಂಗೀಯರನ್ನು ತೊಡಗಿಸಿಕೊಂಡಿದೆ. ಕೇವಲ ಯೋಜನೆಯ ಫಲಾನುಭವ ಪಡೆಯುವುದಕ್ಕಷ್ಟೇ ಅವರ ಪಾತ್ರವನ್ನು ಸೀಮಿತಗೊಳಿಸದೆ ಇಡೀ ಕ್ರಿಯಾಯೋಜನೆಯ ಪಾಲುದಾರರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಬೆಳವಣಿಗೆಯ ಹಾದಿಯಲ್ಲಿ ಒಂದು ಸಹಕಾರ ಸಂಸ್ಥೆಯಾಗಿರುವ ದೇವ್‌ಪಸ್ಲಿ ಕ್ರಮಿಸಬೇಕಾದ ದೂರ ಸಾಕಷ್ಟಿದೆ. ಸಹಕಾರ ಮಂಡಳಿಯು ಸಂಘಟಿತ ಮಾರಾಟ ಪ್ರಕ್ರಿಯೆಯ ಮೂಲಕ ವ್ಯವಹಾರದ ಗತಿಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದರ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಹೊಸ ಹೊಸ ಗ್ರಾಹಕರಿಗೂ ತನ್ನ ಸೇವೆ
ಮುಟ್ಟುವಂತೆ ಮಾಡುವುದರತ್ತ ಚಿಂತಿಸಿದೆ. ಮುಂಬರುವ ವರ್ಷದಲ್ಲಿ ಹೊಸ ಸವಾಲನ್ನು ಸ್ವೀಕರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
Raghvendra Dubey, Arvind Patel and A K Chourasia
BAIF-GRISERV Office 3rd Floor Indra Complex
Manjalpur, Vadodara, Gujarat 39004
E-mail: raghvendra124@gmail.com
Meena Gokhale
BAIF Development Research Foundation BAIF Bhavan, National Highway no.4 Pune-411 058
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೨, ಜೂನ್ ೨೦೧೩



