ಬದಲಾವಣೆಯ ಗಾಳಿಯಲ್ಲಿ ಸ್ಥಿರತೆಯ ಸವಾಲು – ಕುರಿಗಾಹಿಯೊಬ್ಬನ ಗೊಂದಲದ ಕಥೆ

ಖಾಂಡು ಕೊಲ್ಪೆ ಒಬ್ಬ ಕುರಿಗಾಹಿ. ಕುರಿ ಸಾಕಣೆ ಈತನಿಗೆ ವಂಶಪಾರoರ‍್ಯವಾಗಿ ಬಂದದ್ದು. ಇವನು ಜ್ಞಾನ, ತಿಳಿವಳಿಕೆ ಎಲ್ಲವೂ ಅನುಭವ ಸಿದ್ಧವಾದದ್ದು. ನೋಡಿ ತಿಳಿದದ್ದು. ಉದಾಹರಣೆಗೆ ತಂದೆ ಕುರಿ ಕಾಯುವುದನ್ನು ನೋಡಿ ಇವನೂ ಕಲಿತ. ನವಜಾತ ಮರಿಗಳನ್ನು ವಾತ್ಸಲ್ಯದಿಂದ ಅಪೂರ್ವವಾದ ಕಾಳಜಿಯಿಂದ ಪಾಲನೆ ಮಾಡುವ ಬಗೆಯನ್ನು ತನ್ನ ತಾಯಿಯಿಂದ ಕಲಿತ. ಮುಪ್ಪಿನಲ್ಲಿ ಆರೈಕೆ ಮಾಡುವ ಬಗೆ ಹೇಗೆ ಎಂಬುದನ್ನು ತನ್ನ ಚಿಕ್ಕಪ್ಪ, ಚಿಕ್ಕಮ್ಮರಿಂದ ಕಲಿತುಕೊಂಡ. ಅಪ್ಪನೊಂದಿಗೆ ತೋಟದ
ಪರಿಸರದಲ್ಲಿ ಸುತ್ತಾಡುವ ಮೂಲಕ ಗಿಡ ಗಂಟೆಗಳ ಪರಿಚಯ ಮಾಡಿಕೊಂಡ. ಸೂರ್ಯ ನೆತ್ತಿಗೇರುವ ಮುನ್ನವೇ ಕುರಿಗಳನ್ನು ತನ್ನ ತೋಟದಲ್ಲಿ ಮೇಯಿಸಲು ಬಿಡುತ್ತಿದ್ದ. ಇವೆಲ್ಲವೂ ಖಾಂಡುವಿನ ಅನುಭವ ಯಾನದ ಒಂದಿಷ್ಟು ತುಣುಕುಗಳು. ಅದು ದೂರವಾಣಿ, ಟೀವಿ ಬರುವುದಕ್ಕೆ ಮುನ್ನ ಅವನ ಜೀವನ ಕ್ರಮದಲ್ಲಿ ಕಲಿತ ಪಾಠಗಳು.

ಅಂದಹಾಗೆ ಖಾಂಡು ಕೊಲ್ಪೆಯ ಕುಟುಂಬದವರು ಕುರಿ ಕಾಯುವ ವೃತ್ತಿಯನ್ನು ಅನುಸರಿಸಿಕೊಂಡು ಮಹಾರಾಷ್ಟçಕ್ಕೆ ವಲಸೆ ಬಂದಿದ್ದಾರೆ. ಖಾಂಡು ಕೊಲ್ಪೆಯೂ ಅವರಲ್ಲಿ ಒಬ್ಬನಾಗಿದ್ದಾನೆ. ಇಲ್ಲೊಂದು ವಿಷಯವನ್ನು ನಿಮಗೆ ಹೇಳಲೇ ಬೇಕು. ಭಾರತದಲ್ಲಿ ಬಹುತೇಕ ಕುರಿ ಸಾಗಣಿಕೆ ಕೆಲಸವನ್ನು ಹೀಗೆ ವಲಸೆ ಬಂದ ಕುರುಬ ಕುಟುಂಬಗಳೇ ಮಾಡುತ್ತಿವೆ. ಹೀಗೆ ವಲಸೆ ಬಂದ ಕುಟುಂಬಗಳು ಸಾಂಪ್ರದಾಯಿಕ ಜೀವನಶೈಲಿಯನ್ನು ಅಳವಡಿಸಿಕೊಂಡಿವೆ. ಖಾoಡು ಅನಕ್ಷರಸ್ಥ. ಅವನಿಗೆ ಓದು ಅಥವಾ ಬರಹದ
ಜ್ಞಾನವಿಲ್ಲ. ತನ್ನ ತಿಳುವಳಿಕೆಗೆ ಬಂದಷ್ಟೇ ಕೆಲಸವನ್ನು ಮಾಡುತ್ತಾನೆ. ಕುರಿ ಕಾಯುವುದು ಅವರ ಮನೆತನದ ಚಾಕರಿ. ಕಳೆದ ನಾಲ್ಕುನೂರು ವರ್ಷಗಳಿಂದ ಅದೇ ವೃತ್ತಿಯನ್ನು ಅವನ ಹಿರಿಕರು ಮುಂದುವರೆಸಿಕೊoಡು ಬಂದಿದ್ದಾರೆ. ಹೀಗೆ ವೃತ್ತಿ ಪ್ರಾವಿಣ್ಯತೆ ಅವರ ಸಮುದಾಯದಲ್ಲಿ ಹಾಸು ಹೊಕ್ಕಾಗಿದೆ. ಅವರ ಜಾಣ್ಮೆ ಮತ್ತು ತಿಳುವಳಿಕೆಗಳನ್ನು ಅವರ ದೈನಂದಿನ ಜೀವನಕ್ರಮದಲ್ಲಿ, ಹಾಡು, ನೃತ್ಯ ಮತ್ತು ಕಥೆಗಳಲ್ಲಿ ಕಾಣಬಹುದು. ಸಮುದಾಯದ ಹಿರಿಯ ತಲೆಗಳು ಬಯಲು ಪ್ರದೇಶದಲ್ಲಿ ಕುಳಿತು ತಮ್ಮ ಪೂರ್ವೀಕರ ಕಥೆಗಳನ್ನು ಹೇಳುತ್ತಿದ್ದರೆ ಈಗಿನವರು ಬಿಟ್ಟ ಕಣ್ಣಿನಿಂದ, ನಕ್ಷತ್ರಗಳ ಗುಚ್ಛವಿರುವ ಆಗಸದತ್ತ ಮುಖವರಳಿಸಿ ಕೇಳುತ್ತಾ ಆನಂದಿಸುತ್ತಾರೆ. ಅಂದಹಾಗೆ ಈ ಸಮುದಾಯ ಅರ್ಥೈಸಿಕೊಂಡ ಜ್ಞಾನ ಪುಸ್ತಕ ಜ್ಞಾನವಲ್ಲ. ಅವರ ತಿಳಿವಳಿಕೆ ಯಾವುದೇ ಪುಸ್ತಕ ಅಥವಾ ಕಾಗದಪತ್ರಗಳಲ್ಲೂ ದಾಖಲಾಗಿಲ್ಲ. ಆದರೂ ತಿಳಿವಳಿಕೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿಯುತ್ತಲೇ ಬಂದಿದೆ. ಅವರ ಜ್ಞಾನ ಪ್ರಾಯೋಗಿಕವಾದದ್ದು. ಅನುಭವದಿಂದ ಕಂಡುಕೊoಡದ್ದು. ಅಭ್ಯಾಸಬಲದಿಂದ, ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ, ಅವರಿವರ ಕಾರ್ಯವೈಖರಿಯನ್ನು ಗಮನಿಸುವುದರಿಂದ ಅರ್ಥೈಸಿಕೊಂಡದ್ದು. ಅಂತಹ ಜ್ಞಾನ ಅವರ ಸಂಸ್ಕೃತಿಯಲ್ಲಿ, ಮನದಾಳದಲ್ಲಿ ಅವರು ಇಷ್ಟ ಪಡುವ ಕುರಿಗಳಲ್ಲಿ, ನೇಯ್ಗೆ ಮಾಡುವ ಕಂಬಳಿಗಳಲ್ಲಿ,ವಾಸಮಾಡುವ ಹುಲ್ಲುಗಾವಲುಗಳಲ್ಲಿ ಹಾಸುಹೊಕ್ಕಾಗಿದೆ.

ಖಾಂಡು ಅನಕ್ಷರಸ್ತನಾದರೂ ಅವನು ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿದ. ಅವನ ದೊಡ್ಡ ಮಗನಿಗೆ ಓದು ಚೆನ್ನಾಗಿ ಹತ್ತಿತ್ತು. ವಿದ್ಯೆಯಲ್ಲಿ ಅವನಿಗೆ ಸಾಕಷ್ಟು ಅಭಿರುಚಿಯಿತ್ತು. ಹೆಚ್ಚಿನ ಶಿಕ್ಷಣಕ್ಕಾಗಿ ಕಾಲೇಜಿಗೂ ಸೇರಿದ. ಪದವೀಧರನಾಗಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿದ. ಹೀಗೆ ಓದಿನ ಅಭಿರುಚಿ ಬೆಳೆಸಿಕೊಂಡ ಅವನೆಂದೂ ಕುರಿ ಕಾಯವ ವೃತ್ತಿಯತ್ತ ಮುಖ ಮಾಡಲಿಲ್ಲ. ಆದರೆ ಖಾಂಡುವಿನ ಎರಡನೆಯ ಮಗನಿಗೆ ಓದಿನಲ್ಲಿ ಅಷ್ಟೇನು ಅಭಿರುಚಿ ಇರಲಿಲ್ಲ. ಹಾಗಾಗಿ ಅವನು ವಂಶಪಾರoರ‍್ಯ ಕಸುಬಾದ
ಕುರಿ ಕಾಯುವಿಕೆ ವೃತ್ತಿಯನ್ನೇ ಮುಂದುವರೆಸಿದ. ಆದರೆ ಅವನ ಪ್ರವೃತ್ತಿ ಖಾಂಡುವಿಗಿoತ ಸ್ವಲ್ಪ ಭಿನ್ನವಾಗಿತ್ತು. ತಾನಿದ್ದ ಪ್ರದೇಶದ ಬಳಿ ನಡೆಯುತ್ತಿದ್ದ ತರಬೇತಿ ಶಿಬಿರದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಶಿಬಿರದಲ್ಲಿ ಮಂಡನೆಯಾಗುತ್ತಿದ್ದ ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ. ಖಾಂಡುವಿನದು ಪ್ರಾಯೋಗಿಕ ಅನುಭವ. ಸತತ ಐವತ್ತು ವರ್ಷಗಳ ಕಾಲ ಕುರಿ ಸಾಗಣಿಕೆಯಿಂದ ಕಂಡುಕೊoಡದ್ದಾಗಿತ್ತು. ಆದರೆ ಅವನ ಎರಡನೆಯ ಮಗನ ಅನುಭವ ಪ್ರಾಯೋಗಿಕವಾದುದಲ್ಲ. ಅದು ಒಂದು ತರಗತಿಯ ಚೌಕಟ್ಟಿಗಷ್ಟೇ ಮೀಸಲಾದದ್ದು. ಸೂರ್ಯನ ಸೂರಿನ ಅಡಿಯ ಕಲಿಕೆಗೆ ಬದಲು ವಿದ್ಯುತ್ ದೀಪದ ಅಡಿಯಲ್ಲಿ ಕಲಿತದ್ದಾಗಿತ್ತು.

ತರಬೇತಿ ಶಿಬಿರದಲ್ಲಿ ಗೋಡೆಯ ಮೇಲೆ ಪ್ರಾತ್ಯಕ್ಷಿಕೆಗಳನ್ನು ಮೂಡಿಸಿ, ಬಣ್ಣ ಬಣ್ಣದ ಚಿತ್ತಾರಗಳುಳ್ಳ ಭಿತ್ತಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿಷಯಜ್ಞಾನವನ್ನು ತಿಳಿಸಲಾಗುತಿತ್ತು. ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಕೈಯಲ್ಲಿ ಚಿತ್ತಾಕರ್ಷಕವಾದ ಕರಪತ್ರಗಳನ್ನು ಹಿಡಿದುಕೊಂಡು ಮುಖವರಳಿಸಿ ಮನೆಗೆ ಬರುತ್ತಿದ್ದರು. ಆದರೆ ಖಾಂಡು! ಸುಡು ಬಿಸಿಲ ಬೇಗೆಗೆ ಬೆದರಿ ಹುಣಸೆ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು ಅನುಭವದ ಬುತ್ತಿಯೊಂದಿಗೆ ಮನೆಗೆ ಮರಳುತ್ತಿದ್ದ. ಒಂದರ್ಥದಲ್ಲಿ ಆಧುನಿಕ ಜೀವನಶೈಲಿಯನ್ನು ಖಾಂಡು ಎದುರಿಸಿದ್ದು ಹೀಗೆ.

ಒಮ್ಮೆ ಹೀಗಾಯಿತು. ಕಳೆದ ವರ್ಷ ಕೆಲ ಕುರಿಗಳು ಅನಿರೀಕ್ಷಿತವಾಗಿ ಕೊನೆಯುಸಿರೆಳೆದವು. ಎಲ್ಲರಿಗೂ ಆತಂಕ. ಖಾಂಡು ಮತ್ತವನ ಕುಟುಂಬದ ಸದಸ್ಯರು ಪರಿಸ್ಥಿತಿಯ ಅವಲೋಕನ ಮಾಡಿದರು. ಸಾವಿಗೀಡಾದ ಕುರಿಗಳನ್ನು ಪರಿಶೀಲಿಸಿದಾಗ ಅವುಗಳ ಯಕೃತ್ತಿನ ಮೇಲೆ ಮೀನಿನಾಕಾರದ ಮಚ್ಚೆಗಳು ಇರುವುದು ಕಂಡು ಬಂದಿತ್ತು. ಅoತಹ ಮಚ್ಚೆಗಳನ್ನು ಅವರು ಈ ಮುನ್ನ ನೋಡಿಯೇ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಚ್ಚೆಗಳು ಮೂಡಿರಬಹುದು ಎಂದು
ತಲೆ ಕೆಡಿಸಿಕೊಂಡರು. ಪರಸ್ಪರ ಚರ್ಚೆ ನಡೆಸಿದರು. ಸಮಸ್ಯೆಯ ಪರಿಹಾರಕ್ಕೆ ಚಿಂತನ, ಮಂಥನ ನಡೆಸಿದರು. ಈ ಸಂದರ್ಭದಲ್ಲಿ ಸಮುದಾಯದ ಕೆಲ ಹಿರೀಕರು ಕೆಲವೊಂದು ಸಲಹೆಗಳನ್ನು ನೀಡಿದರು. ತಮ್ಮ ಕಾಲಮಾನದಲ್ಲಿ ತಾವು ಕಂಡಿದ್ದ ಯಾವುದೋ ಒಂದು ಗಿಡಮೂಲಿಕೆಯ ಹೆಸರನ್ನು ಹೇಳಿದರು. ಅದನ್ನು ಬಳಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದು ಅವರ ಸರ್ವಸಮ್ಮತ ಅಭಿಪ್ರಾಯವಾಗಿತ್ತು. ಹಿರೀಕರ ಮಾತನ್ನೇ ಸಂಪೂರ್ಣವಾಗಿ ನಂಬಿದ್ದ ಸಮುದಾಯದವರು, ಗಿಡಮೂಲಿಕೆಗಾಗಿ ಎಲ್ಲೆಂದರಲ್ಲಿ ಅಲೆದರು. ಸೋಜಿಗವೆಂದರೆ ಅವರ ಗಮನ ಗಿಡಮೂಲಿಕೆಯ ಹುಡುಕಾಟದತ್ತ ನೆಟ್ಟಿತ್ತೇ ಹೊರತು ಅನಿರೀಕ್ಷಿತವಾಗಿ ಸಾವಿಗೀಡಾಗುತ್ತಿದ್ದ ಕುರಿಗಳತ್ತ ಇರಲಿಲ್ಲ. ಅದೆಷ್ಟೇ ಹುಡುಕಾಟ ನಡೆಸಿದರೂ ಅವರು ಅರಸಿಕೊಂಡು ಹೋದ ಗಿಡಮೂಲಿಕೆ ಕಣ್ಣಿಗೆ ಕಾಣಲಿಲ್ಲ. ವಾಸ್ತವಾಂಶ ಏನೆಂದರೆ, ಅವರು ಹಿರೀಕರು ಗಿಡಮೂಲಿಕೆ ಕಂಡ ವಾತಾವರಣಕ್ಕೂ ಇಂದಿನ ಸ್ಥಿತಿಗತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಬದಲಾದ ಪರಿಸರದಲ್ಲಿ ಗಿಡಮೂಲಿಕೆಗಳು ನಮ್ಮಿಂದ ದೂರಸರಿಯತೊಡಗಿವೆ. ಇದೇ ಸಮಯಕ್ಕೆ ಸಮುದಾಯದ ಹಿರಿಯ ತಲೆಗಳು ಹುಲ್ಲು ಮೇಯಿಸುವ ಸ್ಥಳವನ್ನೇ ಬದಲಿಸಿ ಎಂಬ ಸೂಚನೆಯನ್ನು ನೀಡಿದವು.

ಆದರೆ ಅವರ ಸೂಚನೆ ಖಾಂಡುವಿನ ಎರಡನೆಯ ಮಗನಿಗೆ ಸಮ್ಮತವಾಗಲಿಲ್ಲ. ಅವನದೋ ಪುಸ್ತಕ ಜ್ಞಾನ. ಈ ಮೊದಲೇ ತಿಳಿಸಿದಂತೆ ವಿದ್ಯುತ್ ದೀಪದ ಅಡಿಯಲ್ಲಿ ಕಲಿತದ್ದು. ಸರಿ, ಶಿಬಿರವೊಂದರಲ್ಲಿ ಕಲಿತಿದ್ದಂತೆ ಹುಳುಗಳ ನಾಶಕ್ಕಾಗಿ ಹಾಕುವ ಔಷಧಿಯನ್ನು ಮನೆಗೆ ಕೊಂಡು ತಂದ. ಅವನ ಮಾತಿನಂತೆ ಕುಟುಂಬದ ಇತರೆ ಸದಸ್ಯರು ಆಗತಾನೇ ಗರ್ಭಧರಿಸುತ್ತಿದ್ದ ತಮ್ಮ ಕುರಿಗಳಿಗೆ ಅದೇ ಔಷಧಿಯನ್ನು ನೀಡಿದರು. ಅವರ ಉದ್ದೇಶ ಯಕೃತ್ತಿನ ಮೇಲೆ ಮೂಡುವ ಮಚ್ಚೆ ನಿವಾರಿಸುವುದಾಗಿತ್ತು. ಆದರೆ ಆದದ್ದೇ ಬೇರೆ. ಔಷಧ ಬಳಸಿದ ಕೆಲ ದಿನಗಳಲ್ಲೇ ಕುರಿಗಳಿಗೆ ಗರ್ಭಪಾತವಾಯಿತು. ಇದೇನಿದು ಸೋಜಿಗ? ಹುಳಕ್ಕೆ ಹಾಕುವ ಔಷಧಿಗೂ ಕುರಿಗಳ ಗರ್ಭಪಾತಕ್ಕೂ ಎತ್ತಣಿಂದೆತ್ತ ಸಂಬoಧವ? ಯಾರಿಗೂ ಸಂಬoಧ ಕಲ್ಪಿಸಲಾಗದ ಸಂಗತಿಯಾಗಿತ್ತು. ತರಬೇತಿ ಶಿಬಿರದಲ್ಲಿ ಆ ಔಷಧದ ಬಗ್ಗೆ ಉಲ್ಲೇಖ ಮಾಡಲಾಗಿತ್ತೇ ಹೊರತು ಅದನ್ನು ಬಳಸುವ ಬಗೆ, ಗರ್ಭ ಧರಿಸಿದ ಕುರಿಗಳಿಗೆ ಆ ಔಷಧಿಯನ್ನು ಕೊಡಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿರಲಿಲ್ಲ. ಇಲ್ಲೊಂದು ಅಂಶವನ್ನು ನಾವು ಗಮನಿಸಬೇಕು. ಕುಟುಂಬದ ಇತರೆ ಸದಸ್ಯರು ಔಷಧಿಯನ್ನು ಬಳಸಿದರೂ ಖಾಂಡುವಿನ ಪ್ರಾಯೋಗಿಕ ಜ್ಞಾನ ಮಾತ್ರ ಔಷಧಿ ಬಳಕೆಗೆ ಅನುಮತಿ ನೀಡಿರಲಿಲ್ಲ.

ಹೌದು, ಸರಿಯಾದ ತಿಳುವಳಿಕೆಯಿಲ್ಲದೆ ಆಧುನಿಕ ಚಿಕಿತ್ಸಾ ಕ್ರಮಗಳನ್ನು ಅಳವಡಿಸಿಕೊಂಡರೆ ಅದರಿಂದ ಆಗುವ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚು. ಒಂದು ಕ್ಷಣ ಪ್ರಮಾದದ ಪ್ರತಿಫಲವನ್ನು ಕುರಿಗಳು ಅನುಭವಿಸಬೇಕಾಯಿತು. ಹೌದು, ನಮ್ಮಲ್ಲಿ ಬಹುತೇಕರಿಗೆ ಇಂದು ಕುರಿ ಆರೈಕೆಯ ಅನುಭವವಿಲ್ಲ. ಹಾಗೆಂದೇ ಇoದು ಕುರುಬರು ತಮ್ಮ ಕುರಿಗಳನ್ನು ಬೇಗನೇ ಮಾರಾಟ ಮಾಡಲೆಂದು ಮಾರುಕಟ್ಟೆಗೆ ತರುತ್ತಾರೆ. ಕುರಿಗಳನ್ನು ಹೆಚ್ಚು ದಿನ ತಮ್ಮ ಬಳಿ ಇಟ್ಟುಕೊಳ್ಳಲು ಬಯಸುವುದಿಲ್ಲ. ಅವು ಜನಿಸಿದ ಎರಡರಿಂದ ಮೂರು ತಿಂಗಳಲ್ಲೇ ಮಾರಾಟಕ್ಕೆಂದು ಮಾರುಕಟ್ಟೆಗೆ ಬರುತ್ತವೆ. ಆದರೆ ಕುರಿ ಸಾಕಣಿಕೆ ಕೇಂದ್ರದಲ್ಲಿರುವ ವಿಜ್ಞಾನಿಗಳ ಪ್ರಕಾರ ಕುರಿಗಳನ್ನು ಒಂಬತ್ತು ತಿಂಗಳಾದರೂ ತಮ್ಮ ಬಳಿ ಇಟ್ಟುಕೊಂಡು ಸಾಕಬೇಕು.

‘ಸ್ವಾಮಿ! ಅವರಿಗೇನು ಕೂತು ಹೇಳುತ್ತಾರೆ. ಆದರೆ ಇಲ್ಲಿ ನಮ್ಮ ಕಷ್ಟ ಕೇಳುವರ‍್ಯಾರು?’ ಎನ್ನುವುದು ಖಾಂಡುವಿನ ಮೊಂಡು ವಾದ. ಹೊಸ ತಳಿಯ ಹತ್ತಿ ಬೆಳೆದ ಹುಲ್ಲುಗಾವಲುಗಳಲ್ಲಿ ಮೇವನ್ನು ಉಂಡ ಕುರಿಗಳು ತೊಂದರೆಗೆ ಸಿಲುಕಿವೆ. ಹೀಗೆ ತೊಂದರೆಗೆ ಈಡಾದ ಕುರಿಗಳ ಸಂಕಟವನ್ನು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಅಷ್ಟೇಕೆ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಲು ವೈದ್ಯರ ತಂಡವೂ ಹರಸಾಹಸ ಪಡುತ್ತಿದೆ. ಅಂತಹ ಗೊಂದಲದ ಗೂಡಲ್ಲೇ ಕುರಿಗಳು ಮೃತ್ಯುವಿನ ಕೂಪಕ್ಕೆ ಶರಣಾಗುವಂತಾಯಿತು. ವೈದ್ಯಲೋಕದ ಪ್ರಕಾರ ಇದೊಂದು ಬಗೆಯ ಅಪರೂಪದ ಕಾಯಿಲೆ. ಸಮಸ್ಯೆಗೆ ಪರಿಹಾರ ಕಂಡುಕೊAಡು ತಳಿಯನ್ನು ಸಂರಕ್ಷಿಸುವ ಬದಲು ತಪ್ಪಾಗಿ ಅರ್ಥೈಸಿಕೊಂಡು ಹುಳುಗಳ ನಿವಾರಣೆಗಾಗಿ ಕೊಡುವ ಔಷಧಿಯನ್ನು ಬಳಸುವಂತೆ ವೈದ್ಯರು ಕುರುಬರಿಗೆ ಸಲಹೆ ನೀಡಿದ್ದರು.

ಬಹಳಷ್ಟು ಅಭಿವೃದ್ಧಿ ಶೀಲ ಕಾರ್ಮಿಕರು ಮತ್ತು ರೈತರಿಗೆ ವಸ್ತು, ವಿಷಯಗಳ ಬಗ್ಗೆ ಪೂರ್ಣವಾದ ಜ್ಞಾನವಿದ್ದಂತಿಲ್ಲ. ಹಾಗಾಗಿ ಅವರು ತಮಗೆ ಲಭ್ಯವಿರುವ ಅನುಪಯುಕ್ತ ಮಾಹಿತಿಯ ಜಾಡಿನಲ್ಲೇ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಿದ್ದಾರೆ.

ನಾವು ಏನೇ ಸಲಹೆ ಕೊಡುವ ಮುನ್ನ ನಾವು ಹೇಳುತ್ತಿರುವ ವಿಷಯ ಅಥವಾ ಸೂಚನೆ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಗಮನಿಸಬೇಕಿತ್ತು. ಅಂತೆಯೇ ಕುರಿ ಕಾಯಿಸಲು ವಲಸಿಗರಾಗಿ ಬರುವ ಕುಟುಂಬಗಳು ಎದುರಿಸುತ್ತಿರುವ ಮೇವಿನ ಸಮಸ್ಯೆ ಅಥವಾ ಜೀವನಾಧರವಾದ ಕುರಿಗಳನ್ನು ಕಾಡುವ ಕಾಯಿಲೆಗಳ ಬಗ್ಗೆ ನಮ್ಮ ಗಮನ ಹರಿಯಬೇಕಿತ್ತು. ಅಯ್ಯೋ ಬಿಡಿ ಸ್ವಾಮಿ ಎಲ್ಲಾ ಸರಿಯಾಗಿದೆ ಎಂದು ತಲೆಯಾಡಿಸುವ ಬದಲು ವಿಷಯದ ಗಂಭೀರತೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಒಂದು ವೇಳೆ ಊರಿಂದೂರಿಗೆ ವಲಸೆ ಬಂದ ಕುರಿಗಳೇನಾದರೂ ನಮ್ಮ ಸ್ಥಳದಲ್ಲೇ ಸಾವಿಗೀಡಾದರೆ ಅದರ ಹೊಣೆ ಹೊರುವವರಾದರೂ ಯಾರು? ಎಂಬುದನ್ನು ಮೊದಲು ಯೋಚಿಸಬೇಕು.

ಖಾಂಡು ಅವರ ಚಿಂತನೆ ಈ ನಿಟ್ಟಿನಲ್ಲಿ ಹರಿದಿತ್ತು. ಕೀಟನಾಶಕಗಳಲ್ಲಿ ವಿಷಕಾರಕ ಅಂಶಗಳಿರುತ್ತವೆ. ಹಾಗಂತ ನೇರವಾಗಿ ಹೇಳಲು ಸಾಧ್ಯವೇ? ಅದರಲ್ಲೂ ಹೆಗಲ ಮೇಲೆ ಟವಲ್ ಹಾಕಿಕೊಂಡ ಅನಕ್ಷರಸ್ಥ ಮುದುಕನ ಮಾತಿಗೆ ಬೆಲೆ ಕೊಡುವವರು ಯಾರು? ಎನ್ನುವುದು ಖಾಂಡುವಿನ ಆಲೋಚನಾ ಸರಣಿಯಾಗಿತ್ತು.

ಖಾಂಡುವಿನ ಎರಡನೆಯ ಮಗ ಗ್ಯಾಜೆಟ್, ಟ್ರಾ ್ಯಕ್ಟರ್, ವಿದ್ಯುತ್ ಚಾಲಿತ ಉಳುಮೆ ಯಂತ್ರ, ಮೋಟಾರು ಸೈಕಲ್, ಮೊಬೈಲ್ ಒಡನಾಟದಲ್ಲಿ ಬೆಳೆದಿದ್ದಾನೆ. ಅವೆಲ್ಲಾ ಪರಿಕರಗಳು ತನ್ನದಾಗಬೇಕು ಎಂದು ಬಯಸುತ್ತಾನೆ. ಅವನ ವಿಷಯಜ್ಞಾನ ಎಷ್ಟರ ಮಟ್ಟಿಗೆ ಇದೆ ಎಂದರೆ, ಕಂಪ್ಯೂಟರ್ ಬಳಸಿಕೊಂಡು ಇಂಟರ್‌ನೆಟ್ ಅಕ್ಸೆಸ್
ಮಾಡುವಷ್ಟು ಸಮರ್ಥನಾಗಿದ್ದಾನೆ. ಇಲ್ಲೊಂದು ಮಾತು, ಸ್ಥಳೀಯ ಕಛೇರಿಗಳೇನೋ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಕಿರು ಸಂದೇಶಗಳನ್ನು ಗ್ಯಾಜೆಟ್‌ಗಳ ಮೂಲಕ ರವಾನಿಸುತ್ತಿವೆ. ದಿನನಿತ್ಯವೂ ಅದೆಷ್ಟೋ ಸಂದೇಶಗಳು ಮೂಡಿ ಮರೆಯಾಗುತ್ತವೆ. ಆದರೆ ಸ್ಮರಣಿಕೆಗಳಲ್ಲಿ ಉಳಿಯುವುದೆಷ್ಟು? ಎನ್ನುವುದೇ ಪ್ರಶ್ನೆ. ಅದರಲ್ಲೂ ತುರ್ತು ಅಗತ್ಯ ಬಿದ್ದಾಗ ಅದೆಷ್ಟು ಸಂಗತಿಗಳು, ಸoದೇಶಗಳು ನಮ್ಮ ನೆನಪಿನ ಪುಟಗಳಲ್ಲಿ ಹಾದುಹೋಗುತ್ತವೆ?

ಆಧುನಿಕರ ಸ್ಥಿತಿ ಹೀಗಾದರೆ ಸಂಪ್ರದಾಯವನ್ನೇ ನಂಬಿಕೊoಡು ಬoದ ಹಿರೀಕರ ವಿಚಾರವನ್ನೇ ತೆಗೆದುಕೊಳ್ಳಿ. ಅವರೆಂದು ಜೀವನಕ್ರಮದಲ್ಲಿ ಅನುಸರಿಸಬೇಕಾದ ಅಭ್ಯಾಸಗಳನ್ನು ಬರೆದಿಡಲಿಲ್ಲ. ಬದಲಿಗೆ ಪ್ರಾಯೋಗಿಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ತಮ್ಮ ಸಂಪ್ರದಾಯಗಳಲ್ಲಿ, ಜೀವನ ಕ್ರಮದಲ್ಲಿ, ದೈನಂದಿನ ಬದುಕಿನ ಹೆಜ್ಜೆಗಳಲ್ಲಿ ಅವು ಹೆಗ್ಗುರುತುಗಳಾಗಿದ್ದವು. ತಾವು ನಡೆದುಬಂದ ಹಾದಿಯನ್ನು ಸರಿಯಾಗಿ ಪಾಲಿಸದಿದ್ದರೆ ದೇವರು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ ಎನ್ನುವ ಬೆದರಿಕೆಯ ನುಡಿಗಳನ್ನು ಹೇರುತ್ತಿದ್ದರು. ಅವರ ಒಟ್ಟಾರೆ ದೃಷ್ಟಿ ಬಲವಂತವಾಗಿಯಾದರೂ ಅಭ್ಯಾಸಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎನ್ನುವುದಾಗಿತ್ತು. ಅವರೆಂದೂ ಸುತ್ತಣ ಪರಿಸರಕ್ಕೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಹುಲ್ಲುಗಾವಲಿನಲ್ಲಿ ಹೊಚ್ಚ ಹೊಸ ಹುಲ್ಲು ಬೆಳೆದ ನಂತರವಷ್ಟೇ ಅವರು ವಲಸೆ ಹೋಗುತ್ತಿದ್ದರು.

ಆಧುನಿಕತೆಯ ಪರಿಸರದಲ್ಲಿ ಬೆಳೆದ ಖಾಂಡುವಿನ ಮಗ ಮತ್ತವನ ಸ್ನೇಹಿತರ ದೃಷ್ಟಿಯಲ್ಲಿ ತಮ್ಮ ಸಮುದಾಯದ ಹಿರೀಕರು ನಗೆಪಾಟಲಿನ ವಸ್ತುವಾಗಿದ್ದರು. ಅವರ ಮಟ್ಟಿಗೆ ಆ ಹಿರೀಕರು ಅವೈಜ್ಞಾನಿಕರು, ಆಧುನಿಕತೆಯ ಸೋಂಕಿಲ್ಲದ ಅನಾಗರೀಕರು ಮತ್ತು ಮೂರ್ಖರು ಎಂಬುದಾಗಿತ್ತು. ಆದರೆ ಯಾವುದು ವೈಜ್ಞಾನಿಕತೆ? ಯಾವುದು ಆಧುನೀಕತೆ? ಯಾವುದು ತಿಳುವಳಿಕೆ? ಯಾವುದು ಬುದ್ಧಿವಂತಿಕೆ? ಔಷಧೀಯ ಗುಣವುಳ್ಳ ಹುಲ್ಲನ್ನು ಸೇವಿಸುವುದರಿಂದ ಯಕೃತ್ತಿನ ಮೇಲೆ ಮೂಡಿರುವ ಮಚ್ಚೆಗಳು ಮಾಯವಾಗುತ್ತವೆ ಎನ್ನುವ ನಂಬಿಕೆಯೋ ಅಥವಾ ಔಷಧೀಯ ಗುಣಗಳುಳ್ಳ ಹುಲ್ಲು, ಸಸ್ಯಗಳು ಇನ್ನೂ ಇದೆ ಎನ್ನುವುದೋ?

ಒಂದು ಸಂಗತಿ. ಇಂದು ಮಾರುಕಟ್ಟೆಯಲ್ಲಿ ಶೀಶೆಗಳಲ್ಲಿ ಔಷಧಿ ಸುಲಭವಾಗಿ ದೊರೆಯುತ್ತದೆ. ಆದರೆ ಪ್ರಕೃತಿಯಲ್ಲಿ ಔಷಧೀಯ ಸಸ್ಯಗಳು ಮರೆಯಾಗುತ್ತಿವೆ. ಹೌದು, ಎಲ್ಲೇ ನೋಡಿದರು ಜನ ವಾತಾವರಣ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಅದರಲ್ಲೂ ಇತ್ತೀಚಿನ ವಾತಾವರಣ ಗಮನಿಸಿದಾಗ ಯಾವಾಗ ಮಳೆ ಬರುತ್ತದೆ ಎಂದು ಅಂದಾಜಿಸುವುದೇ ಕಷ್ಟವಾಗುತ್ತದೆ. ಅಂದಮೇಲೆ ಕೆಲವೊoದು ಚಿಹ್ನೆಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಂದಿಲ್ಲಿಗೆ ವಲಸೆ ಹೋಗುವ ಕುರುಬರ ಬಗ್ಗೆ ಹೇಳಲೇನಿದೆ? ಹೌದು,
ಬದಲಾದ ಕಾಲಮಾನದಲ್ಲಿ ಸಾಂಪ್ರದಾಯಿಕ ವಿಧಾನಗಳು ಭವಿಷ್ಯದಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲಿಕ್ಕಾಗದು. ಹಾಗಂತ ಪ್ರಸ್ತುತ ಲಭ್ಯವಿರುವ ಆಧುನಿಕ ವ್ಯವಸ್ಥೆಯೂ ಸಮರ್ಪಕವಾಗಿದೆ ಎಂದು ಅಭಿಪ್ರಾಯಿಸಲು ಸಾಧ್ಯವಿಲ್ಲ. ಖಾಂಡು ಅಂಥವರನ್ನು ಕಾಡುತ್ತಿರುವ ಅನಿಶ್ಚತತೆಯ ಕಾರಣವೂ ಅದುವೇ ಆಗಿದೆ.

ಸಮಸ್ಯೆಯ ಮೂಲವೆಲ್ಲಿದೆ?

ಖಾಂಡುವಿನoತಹ ಕುರುಬ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಯನ್ನೇ ವಿಶ್ವದಾದ್ಯಂತ ಸಣ್ಣ ಪುಟ್ಟ ಕುರಿಸಾಗಣೆದಾರರು, ರೈತರು ಎದುರಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಆರ್ಥಿಕ ಸ್ಥಿತಿಗತಿಯು ಸಾಧಾರಣ ಕೈಗಾರಿಕಾ ಕ್ಷೇತ್ರದಿಂದ ಇಂರ‍್ನೆಟ್ ಮತ್ತು ಮೊಬೈಲ್ ಆಧಾರಿತ ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದತ್ತ ಹೊರಳಿದೆ. ಪ್ರಸ್ತುತ ನಮ್ಮನ್ನು ಕಾಡುತ್ತಿರುವ ಸಮಸ್ಯೆಯ ಆಳವನ್ನು ಅರ್ಥ ಮಾಡಿಕೊಳ್ಳಲು ಸಾಂಪ್ರದಾಯಿಕ ತಿಳಿವಳಿಕೆ, ನಂಬಿಕೆಗಳಿಗೆ ಸಾಧ್ಯವಾಗುತ್ತಿಲ್ಲ. ಈ ವಿಶ್ಚದಲ್ಲಿ ಅದೆಷ್ಟೋ ಸಂಗತಿಗಳು ನಮ್ಮ ಅರಿವಿಗೇ ಬಾರದಂತೆ ಅದೆಷ್ಟೋ ಹಂತದಲ್ಲಿ ಒಮ್ಮಿಂದೊಮ್ಮೆಗೇ ನಡೆಯುತ್ತಿವೆ. ಈ ನಡುವೆ ಚಿಕ್ಕ ಪುಟ್ಟ ರೈತರು ಮತ್ತು ಜಾನುವಾರುಗಳು ತೊಂದರೆಗೆ ಸಿಲುಕಿವೆ. ದಿನಕ್ರಮೇಣ ಅವರ ಸ್ಥಿತಿಗತಿಗಳು ನೆನೆಗುದಿಗೆ ಬೀಳುವಂತಾಗಿದೆ. ಹಾಗಿದ್ದರೆ ಸಮಸ್ಯೆಯ ಮೂಲವೆಲ್ಲಿದೆ?

ಕೃಷಿ ಮತ್ತು ಜಾನುವಾರುಗಳ ಪೋಷಣೆ ಹೇಗೆ ಮಾಡಬೇಕು ಎನ್ನುವ ತಿಳಿವಳಿಕೆ ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಬೇರೂರಿದೆ. ಕಾಲಕಾಲಕ್ಕೆ ತಕ್ಕಂತೆ ನಮ್ಮ ತಿಳುವಳಿಕೆಗೆ ಸಾಕಷ್ಟು ಮಾಹಿತಿ ಮತ್ತು ಜ್ಞಾನ ಸೇರ್ಪಡೆಯಾಗುತ್ತಲೇ ಬಂದಿದೆ. ಈ ಮುನ್ನ ಮಾಹಿತಿ ಕ್ಷೇತ್ರದ ಬೆಳವಣಿಗೆ ತುಂಬಾ ತಡವಾಗಿ ಅರ್ಥವಾಗುತಿತ್ತು. ಮತ್ತೊಂದು ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು, ಅಭಿವೃದ್ಧಿಗಳು ಉಳಿದ ಸಮುದಾಯವನ್ನು ಅಷ್ಟು ಸುಲಭವಾಗಿ ತಲುಪುತ್ತಿರಲಿಲ್ಲ. ನಾವಿಂದು ಬದಲಾವಣೆಯ ಯುಗದಲ್ಲಿದ್ದೇವೆ. ಪರಿವರ್ತನೆಯ ಹಾದಿಯಲ್ಲಿ ನಮ್ಮ ಬದುಕು ಸಾಗಿದೆ. ಕೇವಲ ಒಂದು ಮೌಸ್ ಬಟನ್ ಕ್ಲಿಕ್ ಮಾಡಿದರೆ ಸಾಕು ಇಡೀ ಮಾಹಿತಿ ಲೋಕವೇ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಹಾಗಂತ ಬಂದದ್ದೆಲ್ಲವನ್ನೂ ಸ್ವೀಕರಿಸುವುದು, ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ. ಅದರಲ್ಲೂ ಸಣ್ಣಪುಟ್ಟ ರೈತ ಕುಟುಂಬಗಳು ಪರಿಸ್ಥಿತಿಗೆ ಹೊಂದಿಕೊಳ್ಳುವುದಕ್ಕೆ ತುಂಬಾ ಕಷ್ಟ ಪಡುತ್ತಾರೆ.

ಮಾಹಿತಿಯ ಪ್ರಮಾಣ
ಒಂದು ವಿಚಿತ್ರ ಪರಿಸ್ಥಿತಿಯ ನಮ್ಮ ರೈತ ಸಮುದಾಯ ಬದುಕು ಸವೆಸುತ್ತಿದೆ. ಈ ಸ್ಥಿತಿಯಲ್ಲಿ ಅವರು ಸಮಾಜ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಕ್ಷಣಕ್ಷಣವೂ ಅಪ್‌ಗ್ರೇಡ್ ಆಗಬೇಕಿದೆ. ಆದರೆ ಬಹಳಷ್ಟು ರೈತರು ಮತ್ತು ಅಭಿವೃದ್ಧಿ ಹೊಂದಿದ ಕೆಲಸಗಾರರು ಅಪೂರ್ಣವಾದ ಮಾಹಿತಿಯಿಂದ ಬಳಲುತ್ತಿದ್ದಾರೆ ಅಥವಾ ದೊರೆತ ಮಾಹಿತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗೆ ಹೇಗೆ ಎಂಬುದು ತಿಳಿಯದೇ ಒದ್ದಾಡುತ್ತಿದ್ದಾರೆ. ಮಾಹಿತಿ ವರ್ಗಾವಣೆಯ ಮೂಲ ಇತ್ತೀಚಿನ ದಿನಗಳಲ್ಲಿ ಮಾಹಿತಿಯ ನೆಲೆಗಟ್ಟು ಸಾಕಷ್ಟು ವಿಸ್ತಾರವಾಗಿದೆ. ರೇಡಿಯೋ, ಟೀವಿ, ಇಂಟರ್‌ನೆಟ್, ಪತ್ರಿಕೆಗಳು, ಮಾರುಕಟ್ಟೆ ಪ್ರತಿನಿಧಿಗಳು, ಮೊಬೈಲ್ ಸಂದೇಶಗಳು ಮಾಹಿತಿಯ ಮೂಲವಾಗುತ್ತಿವೆ. ಈ ಸೌಲಭ್ಯಗಳೇನೋ ಅಭಿವೃದ್ದಿ ಶೀಲ ಕೆಲಸಗಾರರ, ಎನ್‌ಜಿಓಗಳ, ಸರ್ಕಾರಿ ಸೇವೆಯಲ್ಲಿರುವವರಿಗೆ ತಲುಪುತ್ತಿದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮಾಹಿತಿ ಎಲ್ಲವೂ ರೈತರಿಗೆ ತಲುಪಿದೆ, ಅವರ ಬೇಡಿಕೆಗಳನ್ನು ಪೂರೈಸಿದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹೀಗೆ ಸಾಗರದಂತೆ ಪ್ರವಹಿಸುತ್ತಿರುವ ಮಾಹಿತಿಗಳಲ್ಲಿ ಯಾವುದು ನಂಬಲರ್ಹವಾದದ್ದು, ಯಾವುದನ್ನು ನಂಬಬಾರದು ಎನ್ನುವ ಗೊಂದಲದಲ್ಲಿ ರೈತರು ಮುಳುಗಿದ್ದಾರೆ.

ಮಾಹಿತಿಯ ಹರಿವು
ಮಾಹಿತಿಯ ಹರಿವು ಬಹುತೇಕ ಏಕಮುಖವಾಗಿದೆ. ಅದು ಪ್ರಯೋಗಾಲಯ ಅಥವಾ ಸಂಶೋಧನಾ ಕೇಂದ್ರದಿoದ ಅಥವಾ ನಿರ್ಣಾಯಕನ ಮೂಲಕವಾಗಿ ರೈತನಿಗೆ ತಲುಪುತ್ತದೆ. ಆದರೆ ರೈತನಿಗೆ ಸಮರ್ಪಕವಾದ ಸಂದೇಶಗಳು ಸಂದೇಶವಾಹಕನ  ಮೂಲಕವೇ ತಲುಪುತ್ತವೆ. ಹೀಗೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬನಿಗೆ
ಸಂದೇಶ ಪ್ರಸಾರವಾಗುವಾಗ ಅದೆಷ್ಟೋ ವಿಷಯಗಳು ಮಾರ್ಗಮಧ್ಯದಲ್ಲೇ ಸೋರಿಹೋಗುವ ಸಾಧ್ಯತೆ ಹೆಚ್ಚು. ಅದರಲ್ಲೂ ರೈತಾಪಿ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ನಮ್ಮಲ್ಲಿನ್ನೂ ಸರಿಯಾಗಿಲ್ಲ. ಬಹುಶಃ ಆ ಕಾರಣದಿಂದಲೇ ಅದೆಷ್ಟೋ ಹೊಸ ಯೋಜನೆಗಳನ್ನು ಭಾರೀ ಬಂಡವಾಳ ಹೂಡಿ ಅನುಷ್ಠಾನಕ್ಕೆ ತಂದಿದ್ದರೂ ಅವುಗಳ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಇದು ವಿರ‍್ಯಾಸವಲ್ಲದೇ ಮತ್ತೇನು?

ಬದಲಾವಣೆ ಬೇಕಾಗಿದೆ

ಪ್ರಸ್ತುತ ಪರಿಸ್ಥಿತಿ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿಪೂರ್ಣ ಬದಲಾವಣೆಯಾಗಬೇಕಾದ ಅವಶ್ಯಕತೆಯಿದೆ.

ವಿಷಯ ಪರಿಷ್ಕರಣೆ
ವ್ಯವಸಾಯ ಕ್ಷೇತ್ರಗಳಲ್ಲಿ ಹೊಸ ನೋಟ ಮೂಡಬೇಕಾಗಿದೆ. ಸಾಂಪ್ರದಾಯಿಕ ಬೇಸಾಯ ಕ್ರಮಗಳು ಹಾಳಾಗುವ ಮುನ್ನ ಅವುಗಳನ್ನು ಪುನಶ್ಚೇತನಗೊಳಿಸುವ ಅವಶ್ಯಕತೆಯಿದೆ. ಹೌದು, ಬದಲಾದ ಕಾಲಮಾನದಲ್ಲಿ ಆರೋಗ್ಯ ತೊಂದರೆ ಮತ್ತು ಹದಗೆಟ್ಟ ವಾತಾವರಣ ಕುರಿತ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದೆಯೇ? ಒಂದು ವೇಳೆ ಬದಲಾವಣೆ ಬಯಸಿದರೂ ಯಾವ ವಿಚಾರದಲ್ಲಿ ಬದಲಾಗಬೇಕು ಮತ್ತು ಯಾವುದನ್ನು ಉಳಿಸಿಕೊಳ್ಳಬೇಕು? ಎಂಬ ಪ್ರಶ್ನೆಗಳು ಕಾಡುತ್ತವೆ. ಇರುವ ತಿಳುವಳಿಕೆಗೆ ಹೊಸ ವಿಚಾರಗಳನ್ನು ಸೇರಿಸುತ್ತಾ ಹೋಗಬಹುದು. ಆದರೆ ಹೀಗೆ ಅಳವಡಿಸಿಕೊಂಡ ಯಾವು ಆಧುನಿಕ ಅಭ್ಯಾಸಗಳು ಹೆಚ್ಚು ಕಾಲ ಸ್ಥಿರವಾಗಿರಬಲ್ಲವು, ಯಾವ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರಿಗೆ ಮತ್ತು ಬೋಧಕರಿಗೆ ಹೆಚ್ಚಿನ ತಿಳಿವಳಿಕೆ ಮೂಡುತ್ತದೆ ಎನ್ನುವತ್ತ ನಮ್ಮ ಚಿಂತನೆಗಳು ಹರಿಯಬೇಕು. ಅಂತಹ ಚಿಂತನೆಯಲ್ಲಿ ಒಡಮೂಡಿದ ಅಭ್ಯಾಸ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯ ಏರಿಳಿತದ ಪ್ರಭಾವವನ್ನು ತಡೆದುಕೊಳ್ಳಲು ಸಾಧ್ಯ.

ಜ್ಞಾನ ಸಂಗ್ರಹಣೆ ಮತ್ತು ಪುನರುತ್ಥಾನ
ನಾವಿಂದು ಕ್ಲೌಡ್ ತಂತ್ರಜ್ಞಾನದಿoದ ಶೈತ್ಯಾಗಾರದವರೆಗೆ ಸಾಕಷ್ಟು ಸೌಲಭ್ಯಗಳಿಂದ ಸಜ್ಜಿತರಾಗಿದ್ದೇವೆ. ಅದರಲ್ಲಿ ಪರಂಪರಾನುಗತವಾಗಿ ಬoದ ಮಾಹಿತಿಗಳನ್ನು ದಾಖಲಿಸಿ ಇಟ್ಟುಕೊಳ್ಳಲು ಸಾಧ್ಯವಿದೆ. ಅಂದರೆ ವಸ್ತು, ವಿಷಯ, ಮಾಹಿತಿ ಸಂಗ್ರಹಣೆಯನ್ನು ಹಲವು ಬಗೆಯಲ್ಲಿ ಮಾಡಬಹುದು. ಹೀಗೆ ಸಂಗ್ರಹಿಸಿ ಇಟ್ಟುಕೊಂಡ
ಮಾಹಿತಿಯನ್ನು ನಮ್ಮದಾಗಿಸಿಕೊಳ್ಳುವುದು ಮತ್ತು ಕಾಲಕ್ಕೆ ತಕ್ಕಂತೆ ಪುನರುತ್ಥಾನ ಮಾಡುವುದು ಕಷ್ಟಕರವಾದ ಸಂಗತಿ ಎನಿಸುತ್ತಿದೆ. ಅದನ್ನು ಸರಿಪಡಿಸಿಕೊಳ್ಳಲು ಮಾಹಿತಿ ಕುರಿತಾದಂತಹ ಸಾರ್ವಜನಿಕ ಸಂಪನ್ಮೂಲವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ನಿರ್ವಹಿಸಬೇಕು. ಹೀಗೆ ಮಾಡುವುದರಿಂದ ವಿವಿಧ ಕಾರ್ಯಕ್ರಮಗಳ ಸಾಧಕ, ಬಾಧಕ ಸಂಗತಿಗಳು ನಮಗೆ ಪಾರದರ್ಶಕವಾಗಿ ಲಭ್ಯವಾಗುತ್ತದೆ. ಇಂತಹ ಕ್ಷೇತ್ರಗಳಲ್ಲೂ ತಮ್ಮ ಸೇವೆಯನ್ನು ವಿಸ್ತರಿಸಿಕೊಳ್ಳುವ ಕೆಲಸವಾಗಬೇಕು. ಆ ಸ್ಥಳದಿಂದಲೇ ಅವರು ರೈತ ಸಮುದಾಯದೊಂದಿಗೆ ಮಾಹಿತಿ ವಿನಿಮಯವನ್ನು ಮಾಡಿಕೊಳ್ಳುವ ಪ್ರಕ್ರಿಯೆಗೆ ನಾವು ಮುಂದಾಗಬೇಕು.

ತರಬೇತಿ ವಿಧಾನಗಳ ಪುನರವಲೋಕನ
ಒಬ್ಬೊಬ್ಬರು ಒಂದೊAದು ಬಗೆಯಲ್ಲಿ ವಿಷಯವನ್ನು ಗ್ರಹಿಸುತ್ತಾರೆ. ಅವರ ಕಲಿಯುವಿಕೆಯಲ್ಲಿ ಸಂಸ್ಕೃತಿಯು ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಬAಧ ಸಾಕಷ್ಟು ಕೆಲಸಗಳು ಆಗಿವೆ. ಆದರಿಂದು ಜ್ಞಾನ ಪ್ರಸರಣ ಕಾರ್ಯ ಅತಿ ಶೀಘ್ರವಾಗಿ ಆಗಬೇಕಿದೆ. ಹೊಸ ಯೋಜನೆಗಳನ್ನು ರೂಪಿಸುವಾಗ ಸಮಾಜದ ವಿವಿಧ ವರ್ಗಗಳನ್ನು ಅದು ಮುಟ್ಟುವ ಬಗೆಯತ್ತಲೂ ಗಮನ ಹರಿಸಬೇಕಾಗುತ್ತದೆ. ಅಂದರೆ ನಾವು ರೂಪಿಸುವ ಯೋಜನೆಗಳು ಎಷ್ಟರ ಮಟ್ಟಿಗೆ ರೈತಾಪಿ ಸಮುದಾಯವನ್ನು ತಲುಪುತ್ತವೆ. ಆ ಸಮುದಾಯದವರಿಗೆ ಅದೆಷ್ಟರ ಮಟ್ಟಿಗೆ ಉಪಕೃತವಾಗುತ್ತದೆ. ಅದರ ಅಳವಡಿಕೆಗೆ ಏನಾದರೂ ತರಬೇತಿಯ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಗಮನ ಹರಿಸಬೇಕು. ಒಂದು ವೇಳೆ ತರಬೇತಿಯ ಅವಶ್ಯಕತೆ ಕಂಡು ಬಂದರೆ ಅದಕ್ಕಾಗಿ ವ್ಯಯಿಸುವ ಸಮಯವೆಷ್ಟು ಎನ್ನುವುದರ ಬಗ್ಗೆಯೂ ತಿಳಿವಳಿಕೆ ಇರಬೇಕು. ಅದರೊಂದಿಗೆ ಯೋಜನೆ ಜಾರಿಯೊಂದಿಗೆ ಪರಿಸರದ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಸಾಕಷ್ಟು ಅರಿವು ಇರಬೇಕಾಗುತ್ತದೆ.

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ರೈತಾಪಿ ವರ್ಗದವರನ್ನು ಪದೇ ಪದೇ ಭೇಟಿ ಮಾಡಿ ಅವರೊಂದಿಗೆ ಸಮಾಲೋಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ವಿಚಾರ ವಿನಿಮಯದ ಮೂಲಕ ಯೋಜನೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಪ್ರಾಯೋಗಿಕ ಕೇಂದ್ರಗಳಿಗೆ ಕಳುಹಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಯೋಜನೆ ಕುರಿತಂತೆ ರೈತರಿಗೆ ಸಾಕಷ್ಟು ಮಾಹಿತಿ ನೀಡುವ, ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯತೆಯಿದೆ. ಈ ಹಂತದಲ್ಲಿ ಅಂತರ್ಜಾಲ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಹಿಂದೆಯೇ ಹೇಳಿದಂತೆ, ಸಾಕಷ್ಟು ಮಾಹಿತಿಯೂ ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು.

ಮಾಹಿತಿ ಹರಿವಿನ ಮರುನಿರ್ದೇಶನ
ಮಾಹಿತಿ ಹರಿವು ಹತ್ತಾರು ದಿಕ್ಕುಗಳಲ್ಲಿ ಹರಿಯಬೇಕು. ಅದರಲ್ಲೂ ಎಕ್ಸ್ಟೆನ್ಷನ್ ವರ್ಕರ್ (ಸಂದೇಶವಾಹಕರು)ಗಳು ಬದಲಾದ ಪರಿಸ್ಥಿತಿಯಲ್ಲಿ ಏಜೆಂಟರAತೆ ಕಾರ್ಯ ನಿರ್ವಹಿಸುತ್ತಾರೆ. ಹೊಸ ಮಾರ್ಗೋಪಾಯಗಳನ್ನು ಪ್ರಯೋಗಾಲಯದಿಂದ ಕೃಷಿಭೂಮಿಯತ್ತ ಕೊಂಡೊಯ್ಯುತ್ತಾರೆ. ವಿರ‍್ಯಾಸವೆಂದರೆ ಸಮಾಜದಲ್ಲಿ ಅವರ
ಪಾತ್ರ ಲಕ್ಷ ್ಯಕ್ಕೇ ಬರುತ್ತಿಲ್ಲ. ಅವರ ಪಾತ್ರವನ್ನೂ ಗಣನೆಗೆ ತಂದುಕೊoಡು ಅವರನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ವ್ಯವಸಾಯ ಕ್ಷೇತ್ರದಲ್ಲಿ ರೈತರನ್ನು ಕಾಡುತ್ತಿರುವ ನಾನಾ ಬಗೆಯ ಸಮಸ್ಯೆಗಳನ್ನು ಪ್ರಯೋಗಾಲಯದತ್ತ ಕೊಂಡೊಯ್ಯಲು ನೆರವಾಗುತ್ತದೆ. ಮಧ್ಯವರ್ತಿಗಳಂತೆ ಕೆಲಸ
ನಿರ್ವಹಿಸುವ ಸಂದೇಶವಾಹಕರು ಸಮುದಾಯ, ವಿಜ್ಞಾನಿಗಳಿಗೆ ಮತ್ತು ನಿರ್ಣಾಯಕರಿಗೆ ಸಂಬoಧ ಸೇತುವಾಗಿ ಕೆಲಸ ಮಾಡುತ್ತಾರೆ. ಅವರ ಕಾರ್ಯಗಳಲ್ಲಿ ರೈತರ ಭೂಮಿಯಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಪರಿಣಿತರಿಂದ ಸೂಕ್ತ ಸಲಹೆಗಳನ್ನು ಪಡೆದು ರೈತರಿಗೆ ಮುಟ್ಟಿಸುವುದಾಗಿದೆ. ಹೀಗೆ ಅವರು ಸಂಗ್ರಹಿಸುವ ಮಾಹಿತಿಗಳಲ್ಲಿ ಮರಣ, ಅನಾರೋಗ್ಯ ಕುರಿತ ಸಮೀಕ್ಷೆಗಳು, ಕಾರ್ಯಕ್ಷೇತ್ರದಲ್ಲಾಗುವ ಬದಲಾವಣೆಗಳ ದಾಖಲಾತಿ, ತಳಿಯ ಯಶಸ್ಸು ಮತ್ತು ವೈಫಲ್ಯತೆ, ಹೊಸ ತಂತ್ರಜ್ಞಾನವನ್ನು ಕೈಗೊಳ್ಳುವುದು, ನಿರ್ವಹಣಾ ಪರಿಪಾಠ ಮತ್ತಿತರ ವಿಷಯಗಳಿರುತ್ತವೆ. ಇವರನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಸಮಾಜವು ಅವರನ್ನು ನೋಡುವ ದೃಷ್ಟಿಯನ್ನೇ
ಬದಲಾಯಿಸಬಹುದು. ಅಷ್ಟೇ ಅಲ್ಲ, ಅನಿಶ್ಚಿತವಾದ ಭವಿಷ್ಯದಲ್ಲಿ ಅವರಿಂದ ಉತ್ತಮ ಪಾತ್ರವನ್ನು ನಿರೀಕ್ಷಿಸಬಹುದು. ಬದಲಾವಣೆಯ ಬಿರುಗಾಳಿ ನಮ್ಮ ಸಮಾಜದ ಮೇಲೆ ಬೀಸಿದಷ್ಟೂ ಕೆಲವೊಂದಿಷ್ಟು ಅನಾಹುತಗಳನ್ನು ತಪ್ಪಿಸಬಹುದು. ಅದರೊಂದಿಗೆ ಕೆಲವೊಂದು ಯಶಸ್ಸು ಮತ್ತು ಭರವಸೆಯನ್ನು ಹೊಂದಲು ಸಾಧ್ಯ.

ಮುಖ್ಯವಾಗಿ ಖಾಂಡುವಿನAತೆ, ಕುರುಬರು ಬದಲಾವಣೆಯ ಗಾಳಿ ಬೀಸಿದಂತೆ ತಾವೂ ಬಾಗುತ್ತಾರೆ; ಬದಲಾಗಬೇಕು ಎನ್ನುವ ಇಚ್ಛೆಗಿಂತ ಗಾಳಿ ತನ್ನನ್ನು ಎಲ್ಲಿ ಕೊಚ್ಚಿಕೊಂಡು ಹೋಗುತ್ತದೆಯೇ ಎನ್ನುವ ಭಯದಿಂದ. ಆದರೆ ಭವಿಷ್ಯದಲ್ಲಿ ಅಭಿವೃದ್ಧಿ ಪರವಾದ ಕಾರ್ಯಗಳಿಂದ ಹಾನಿಗಿಂತ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಭವಿಷ್ಯದ ದೃಷ್ಟಿಯಿಂದ ಹೇಳುವುದಾದರೆ ಇಂಥಾ ಸಮಗ್ರ ಜ್ಞಾನವು ಅವರನ್ನು ಸುರಕ್ಷಿತವಾಗಿಯೇ ಇಡುತ್ತದೆ.

Nitya Sambamurti Ghotge

ANTHRA

F, Lantana Gardens NDA Road Bavdhan

Pune 411021 Maharashtra, India

E-mail: anthra.pune@gmail.com

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೩, ಸೆಪ್ಟೆಂಬರ್ ೨೦೧೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp