ಆಹಾರ ಭದ್ರತೆ ಹಾಗೂ ಜೀವನ ಮಟ್ಟ ಸುಧಾರಣೆಗಾಗಿ ಬೀಜಸಾರ್ವಭೌಮತ್ವ

ಸಂಜಯ್ ಎಂ ಪಾಟೀಲ್

ಸಮುದಾಯದ ಸಂಪನ್ಮೂಲ’ವಾದ ಬಿತ್ತನೆ ಬೀಜವು ಸಾವಿರಾರು ವರ್ಷಗಳಿಂದ ಜೋಪಾನವಾಗಿ ಸಂರಕ್ಷಿಸಲ್ಪಟ್ಟಿದೆ ಮತ್ತು ಉತ್ಪಾದಿಸಲ್ಪಡುತ್ತಿದೆ. ಮತ್ತು ಇದೀಗ `ವಾಣಿಜ್ಯ
ಸ್ವಾಮ್ಯದ ಸಂಪನ್ಮೂಲ’ವಾಗಿ ಮಾರ್ಪಾಟಾಗಿದೆ. ಉತ್ತಮ ಜನಜೀವನಕ್ಕಾಗಿ ಮತ್ತು ಆಹಾರಭದ್ರತೆಗಾಗಿ ರೈತರು ಬಿತ್ತನೆ ಬೀಜವನ್ನು ಸಂರಕ್ಷಿಸಿದ್ದಾರೆ ಮತ್ತು ವಿವಿಧ ಬೀಜತಳಿಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.

ಮಹಾರಾಷ್ಟ್ರಥಾನೆ ಜಿಲ್ಲೆಯ ಜವಾಹರ್ ಬ್ಲಾಕ್ ಒಂದು ಗುಡ್ಡಗಾಡು ಪ್ರದೇಶ. ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುವ ಈ ಪ್ರದೇಶವು ಜೀವ ವೈವಿಧ್ಯದ ‘ಹಾಟ್ ಸ್ಪಾಟ್’ ಎಂದು
ಪರಿಗಣಿಸಲ್ಪಟ್ಟಿದೆ. ಈ ಪ್ರದೇಶವು ವಿವಿಧ ತಳಿಯ ಭತ್ತ, ಜೋಳಹಾಗೂ ರಾಗಿ ಹಾಗೂ ಬೇಳೆ ಬೆಳೆಗಳಿಗೆ ಆಶ್ರಯ ತಾಣವಾಗಿದೆ. ಬೈಫ್ ಡೆವಲಪ್‌ಮೆಂಟ್ ರಿಸರ್ಚ್ಫೌಂ ಡೇಷನ್ ಮತ್ತು ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಟ್ರಾನ್ಸ್ಫರ್ ಫಾರ್ ರೂರಲ್ ಏರಿಯಾಸ್ (ಒIಖಿಖಿಖಂ) ಜೊತೆಗೂಡಿ ವಿಭಿನ್ನ ರೀತಿಯ ಭತ್ತದ ತಳಿಗಳು ಮತ್ತು ಇತರೆ ಬೆಳೆಗಳನ್ನು ಸಂರಕ್ಷಿಸುವ ಸದುದ್ದೇಶದಿoದ ಕೆಲಸಮಾಡುತ್ತಿವೆ ಮತ್ತು ಈ ಕಾರ್ಯಕ್ಕೆ ಸಮುದಾಯವನ್ನು ಮುಂಚೂಣಿಯಲ್ಲಿ ಬಿಟ್ಟುಕೊಂಡಿವೆ. ಆರಂಭಿಕ ಹoತವಾಗಿ ಸ್ಥಳೀಯ ಸಂಗತಿಗಳ ತಿಳಿವಳಿಕೆ ನೀಡುವ ಜೊತೆಗೆ ಸಾವಯವ ಕೃಷಿ ಪದ್ಧತಿಯನ್ನೂ ಪರಿಚಯಿಸಲಾಗಿದೆ.

ಸಹಭಾಗಿತ್ವದಲ್ಲಿ ಸಮಗ್ರ ಅಭಿವೃದ್ಧಿ

ಪ್ರಾಥಮಿಕ ಹಂತದಲ್ಲಿ ಸುಮಾರು ೫-೧೦ ಸದಸ್ಯರನ್ನು (ರೈತರನ್ನು) ಸೇರಿಸಿ ಒಂದೊoದು ಪ್ರತ್ಯೇಕ ಗುಂಪನ್ನಾಗಿ ನಿಯೋಜಿಸಲಾಯ್ತು.  ಈ ಗುಂಪುಗಳಿಗೆ ವಿವಿಧ ರೀತಿಯ ಬೆಳೆಗಳ ಸಂರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯ್ತು. ರೈತರ ತಂಡಗಳು ಪ್ರಾತ್ಯಕ್ಷಿಕೆಗಳಿರುವ (ಇನ್ಸಿಟು) ಜರ್ಮ್ ಪ್ಲಾಸ್ಮ್ ಕೇಂದ್ರಗಳಿಗೆ ಭೇಟಿ ನೀಡಿ, ವಿವಿಧ ಬಗೆಯ ನೆಲದಲ್ಲಿ ಬೆಳೆದ ಭತ್ತ, ರಾಗಿ ಮತ್ತಿತರ ಬೆಳೆಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದವು. ಪರಸ್ಪರ ಸಂವಾದ ನಡೆಸಿ ಇಳುವರಿ, ಫಸಲಿನ ಪ್ರಮಾಣ, ಜೊಳ್ಳು ಪ್ರಮಾಣ, ಕೀಟ ನಿಯಂತ್ರಣ, ಕ್ಷಾಮ ನಿರ್ವಹಣೆಯೇ ಮೊದಲಾದ ಸಂಗತಿಗಳನ್ನು ಚರ್ಚಿಸಿದವು. ಯುವಕರು ಮತ್ತು ಮಹಿಳಾ ರೈತರು ಸೇರಿದಂತೆ ಸುಮಾರು ೨೨೫ ರೈತರು ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದಿದ್ದರು. ಈ ತರಬೇತಿಯು ರೈತರಿಗೆ ಬಿತ್ತನೆ ಬೀಜಗಳ ಮತ್ತು ವಿವಿಧ ಬೆಳೆಗಳ ಗುಣಮಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಿದೆ. ಸರಿಸುಮಾರು ೩೬೦ ರೈತರು ವಿವಿಧ ರೀತಿಯ ಬೆಳೆಗಳ ಉತ್ಪಾದನೆ, ಬೀಜಸಂಸ್ಕರಣೆ, ನರ್ಸರಿಗಳ ಸ್ಥಾಪನೆ, ಸಿಂಗಲ್ ಸೀಡಿಂಗ್ ಪದ್ದತಿಯಲ್ಲಿ ಭತ್ತದ ನಾಟಿ ಮಾಡುವಿಕೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುತ್ತಾರೆ.

ಸತತ ಸಂಶೋಧನೆಗಳ ನಂತರ ಕೆಲವು ರೈತರಿಗೆ ಬೀಜೋತ್ಪಾದನೆಗಾಗಿ ಉತ್ತಮವಾದ ಸುಧಾರಿತ ಮೊಳಕೆ ಬೀಜಗಳನ್ನು ಒದಗಿಸಲಾಯಿತು. ಸಾವಯವ ಪದ್ಧತಿಯನ್ನು ಅನುಸರಿಸಿ ಕೃಷಿಗಾರಿಕೆ ನಡೆಸಲಾಯ್ತು. ೨೦೧೩ರ ಖಾರಿಫ್ ನಲ್ಲಿ ೨೬ ರೈತರು ಭತ್ತ, ಜೋಳ, ರಾಗಿ ಮೊದಲಾದ ಬೆಳೆಗಳ ಬೀಜೋತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೀಗೆ ಉತ್ಪಾದನೆಯಾದ ಬೀಜಗಳನ್ನು ಕಮ್ಯೂನಿಟಿ ಸೀಡ್ ಬ್ಯಾಂಕ್‌ಗಳಲ್ಲಿ ಸoರಕ್ಷಿಸಲಾಯ್ತು.

ಜೀವ ವೈವಿಧ್ಯ ಸಂರಕ್ಷಣೆ ಮತ್ತು ಜೀವನಮಟ್ಟ ಸುಧಾರಣೆ

ರೈತರು ಬಿತ್ತನೆ ಬೀಜಗಳಿಗಾಗಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದರು. ಆದರೆ ಈಗ ಅವರಲ್ಲಿಯೇ ಉತ್ತಮ ಗುಣಮಟ್ಟದ, ಯಾವುದೇ ರೋಗಗಳಿಂದ ಮುಕ್ತವಾದ, ಉತ್ತಮ ಪೌಷ್ಟಿಕಾಂಶವುಳ್ಳ ಭತ್ತದ ತಳಿಗಳಾದ ಕೋಲ್ಪಿ, ಕಸಬಾಯಿ, ಲಾಲ್ಯ, ಜುನಾಕೋಲಂ, ರಾಜ್ಗುಡ್ಯ, ಮಸೂರಿ, ದಾಹ್ವುಲ್, ಭಾಂಗ್ಯಾ ತಳಿಗಳ ಬೀಜಗಳು ದೊರೆಯುತ್ತವೆ. ಜೋಳದ ಬೆಳೆಗೆ ಕಲ್ಪೇರಿ, ಧವಲ್ಪೇರಿ, ಶೀತೋಲಿ, ನಗಾಲಿ, ದಸರ್ಬೇದ್ರಿ ಮುಂತಾದ ತಳಿ ಬೀಜಗಳು ರೈತರ ನಡುವೆ ಜನಪ್ರಿಯವಾಗಿವೆ.

ಉತ್ತಮವಾದ ವ್ಯವಸಾಯ ಪದ್ಧತಿಯನ್ನು ಅಳವಡಿಸಿಕೊಂಡ ರೈತರು ಅತಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭತ್ತದ ಇಳುವರಿಯು ೧೨-೧೫ಕ್ವಿಂಟಾಲ್/ಎಕರೆಯಿoದ ೨೦-೨೫ಕ್ವಿಂಟಾಲ್/ ಎಕರೆಯಷ್ಟು ಏರಿಕೆಯಾಗಿದೆ. ಅದೇ ರೀತಿ ಜೋಳದ ಇಳುವರಿಯು ೧೦-೧೨ಕ್ವಿ/ಎಕರೆಯಿಂದ ೧೭-೨೨ಕ್ವಿ/ಎಕರೆಯಷ್ಟು ಏರಿಕೆಯಾಗಿದೆ.

ರೈತರು ಉತ್ತಮ ಗುಣಮಟ್ಟದ ಸಾವಯವ ಗೊಬ್ಬರಗಳನ್ನು ಮತ್ತು ನೈಸರ್ಗಿಕ ಕೀಟನಾಶಕಗಳನ್ನು ತಯಾರಿಸುವುದರಿಂದ ಮತ್ತು ಬಳಸುವುದರಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಭತ್ತದ ವ್ಯವಸಾಯದ ವೆಚ್ಚವು ರೂ. ೧೨೪೦೦/ಎಕರೆ ಯಿಂದ ರೂ. ೭೫೦೦/ಎಕರೆಯಷ್ಟು ಇಳಿಕೆಯಾಗಿದೆ
ಮತ್ತು ಜೋಳದ ಉತ್ಪಾದನಾ ವೆಚ್ಚವು ರೂ. ೭೫೦೦/ಎಕರೆಯಿಂದ ರೂ. ೫೩೦೦/ಎಕರೆಯಷ್ಟು ಇಳಿಕೆಯಾಗಿದೆ. ಸಾವಯವ ಗೊಬ್ಬರಗಳ
ಬಳಕೆಯಿಂದ ಮಣ್ಣಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ತೇವಾಂಶವನ್ನೂ ಕಾಪಾಡಿಕೊಳ್ಳಬಹುದಾಗಿದೆ.

ಸಮುದಾಯ ಮಟ್ಟದಲ್ಲಿ ಬೀಜೋತ್ಪಾದನೆ
ಬೀಜ ಸಂರಕ್ಷಣೆಯಲ್ಲಿ ಸ್ಥಿರತೆ ಸಾಧಿಸಲು ಸಮುದಾಯದ ಮಟ್ಟದಲ್ಲಿ ಬೀಜಗಳ ಆಯ್ಕೆ, ಉತ್ಪಾದನೆ ಮತ್ತು ವಿನಿಮಯ ಕಾರ್ಯಗಳು ನಡೆಯಬೇಕಾಗುತ್ತದೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ಬೀಜೋತ್ಪಾದನೆ ಮತ್ತು ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಉತ್ತಮ ಗುಣಮಟ್ಟದ ಬೀಜೋತ್ಪಾದನೆ, ಬೀಜಗಳ ವಿನಿಮಯದ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಒಂದು ‘ಬೀಜಸಂರಕ್ಷಣಾ ಸಮಿತಿ’ಯನ್ನು ರಚಿಸಲಾಯ್ತು. ಈ ‘ಶಿವರ್ ಫೇರಿ’ (ಕ್ಷೇತ್ರ ಭೇಟಿ) ಸಮಿತಿಯು
ಸ್ಥಳ ಪರಿಶೀಲನೆ ನಡೆಸಿದ ನಂತರ ರೈತರಿಗೆ ಬೀಜಗಳ ಆಯ್ಕೆ ಮತ್ತು ಬೀಜೋತ್ಪಾದನೆ ಬಗ್ಗೆ ಸಮರ್ಪಕ ಮಾಹಿತಿ ಒದಗಿಸುತ್ತದೆ. ಈ ಸಮಿತಿಯು ಬೀಜೋತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತದೆ. ಪ್ರಸ್ತುತ ೧೧ ಹಳ್ಳಿಗಳಿಗೆ ಈ ರೀತಿಯ ೩ ಸಂರಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ೨೫೦ಕ್ಕೂ ಹೆಚ್ಚು ವಿವಿಧ ಬಗೆಯ ಬೀಜದ ತಳಿಗಳನ್ನು ಸೀಡ್ ಬ್ಯಾಂಕ್‌ಗಳಲ್ಲಿ ಸಂರಕ್ಷಿಸಲಾಗಿದೆ.

ಸರಿಸುಮಾರು ೧೧ ಹಳ್ಳಿಗಳಿಂದ ೭೨೪ ರೈತರು ನೇರವಾಗಿ ಬೀಜೋತ್ಪಾದನೆ, ಬೀಜ ಸಂರಕ್ಷಣೆ ಮತ್ತು ಸಮುದಾಯ ಮಟ್ಟದ ಸೀಡ್ ಬ್ಯಾಂಕಿAಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಹೆಚ್ಚಿನ ಪ್ರಚಾರಕ್ಕಾಗಿ ೧೦ ಯುವಕರ ತಂಡವನ್ನು ರಚಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಬೀಜೋತ್ಪಾದನೆಯ ತಂತ್ರಜ್ಞಾನದ ಬಗ್ಗೆ
ಮಾಹಿತಿ ನೀಡಲಾಗುತ್ತದೆ. ನಿರಂತರವಾಗಿ ಬೀಜೋತ್ಪಾದನೆಯ ಬಗ್ಗೆ ಸ್ಥಳದಲ್ಲಿಯೇ ವಿವರಿಸಲಾಗುತ್ತದೆ. ವಿಶೇಷವಾಗಿ ಸಮುದಾಯ ಮಟ್ಟದಲ್ಲಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲು ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದರಿಂದ ರೈತರಲ್ಲಿ ಬೀಜಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ. ವಿವಿಧ ರೀತಿಯ ಮೇಳ ಮತ್ತು ವಸ್ತು ಪ್ರದರ್ಶನಗಳನ್ನು ಏರ್ಪಡಿಸಿರುವುದರಿಂದ ಈ ಯೋಜನೆಯು ಮಹಾರಾಷ್ಟçದ ವಿವಿಧ ಭಾಗಗಳಲ್ಲಿನ ರೈತರನ್ನು ಯಶಸ್ವಿಯಾಗಿ ತಲುಪಿದೆ.

ಕೈತೋಟಗಳಲ್ಲಿ ಬೆಳೆವೈವಿಧ್ಯ
ಬುಡಕಟ್ಟು ಸಮುದಾಯದ ಜನ ತಮ್ಮ ಹೊಲಗಳಲ್ಲಿ ವಿಭಿನ್ನ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಆಹಾರ ಬೆಳೆಗಳು ಹೆಚ್ಚಿನ ಪೌಷ್ಟಿಕಾಂಶದಿoದ ಕೂಡಿರುತ್ತವೆ ಮತ್ತು ಆರೋಗ್ಯದಾಯಕವಾಗಿರುತ್ತವೆ. ಈ ಸಮುದಾಯದ ಜನ ತಮ್ಮ ಪ್ರತಿಯೊಂದು ಮನೆಯ ಹಿಂಭಾಗದಲ್ಲೂ ಸ್ವಲ್ಪ ಜಾಗವನ್ನು ಬೆಳೆಗಳನ್ನು ಬೆಳೆಯಲು ಮೀಸಲಿಟ್ಟಿರುತ್ತಾರೆ. ಈ ಭೂಮಿಯಲ್ಲಿ ಅವರು ವಿವಿಧ ರೀತಿಯ ಗಿಡ-ಮರಗಳನ್ನು, ಔಷಧೀಯ ಸಸ್ಯಗಳನ್ನು ಬೆಳೆಸಿರುತ್ತಾರೆ. ಕೈತೋಟಗಳಲ್ಲಿ ಹೆಚ್ಚಿನದಾಗಿ ಆಯಾ ಕಾಲಕ್ಕೆ, ಹವಾಮಾನಕ್ಕೆ ತಕ್ಕಂತೆ ತರಕಾರಿಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯುತ್ತಾರೆ. ಸುತ್ತಲೂ ಗಡಿಗಳಲ್ಲಿ ವಿವಿಧ ರೀತಿಯ ಮರಗಳನ್ನು ಬೆಳೆಸಲಾಗುತ್ತದೆ. ಕೈತೋಟಗಳಲ್ಲಿ ಬೆಳೆಯಲಾಗುವ ತರಕಾರಿಗಳು ಪೌಷ್ಟಿಕತೆಯಿಂದ ಕೂಡಿರುತ್ತವೆ ಮತ್ತು ವರ್ಷಪೂರ್ತಿ ಆಹಾರ ಭದ್ರತೆಯನ್ನು ಒದಗಿಸುತ್ತದೆ.

ಕೆಲಸಕ್ಕೆ ಸಂದ ಗೌರವ
2011-12ರಲ್ಲಿ ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಆಂಡ್ ಫಾರ್ಮರ್ಸ್ ರೈಟ್ಸ್ ಅಥಾರಿಟಿ, ಕೃಷಿ ಸಚಿವಾಲಯ, ಭಾರತ ಸರ್ಕಾರ- ವತಿಯಿಂದ ‘ದ ಸೀಡ್ ಸೇವರ್ ಫಾರ್ಮರ್ ಸಂಸ್ಥೆ’ಗೆ

ಕೋಷ್ಟಕ-೧: ವಿವಿಧ ರೀತಿಯ ಬಳಕೆಗೆ ಅನುಗುಣವಾಗಿ ವಿವಿಧರೀತಿಯ ತಳಿಗಳ ಸಂರಕ್ಷಣೆ ಫಾರ್ಮರ್ ಸಂಸ್ಥೆ’ಗೆ

ಗುಣಸ್ವಭಾವ ವಿವಿಧ ರೀತಿಯ ತಳಿಗಳು
ಪ್ರಾಕೃತಿಕ
ವಿಕೋಪಗಳಿಗೆ ಅನುಗುಣವಾಗಿ
ಖಾಲಿ ಖುದಾಯಿ, ಖಾಲಿ ಖಡಸಿ,
ದುಲಾ-೧, ದುಲಾ-೨, ಹರಿಭತ್ ಧವಳ್, ದಂಗಿ(ಕೆAಪು), ದಂಗಿ(ಬಿಳಿ), ಧವಳ್.
ಅಧಿಕ
ಇಳುವರಿಗಾಗಿ
ಕೋಪಿ, ಕಸ್ಬಾಯಿ, ರಾಗುದ್ಯಾ,
ಸುರ್ತಿಕೋಲಮ್, ಲಾಲ್ಯಾ, ಜಾವ್ಯಾ ಚಿಗುಂಡಿ.
ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಬಾಂಗ್ಲಾ ್ಯ, ಕಸ್ಬಾಯಿ, ಚಿಮನ್ಸಾಲ್,ಸುರ್ತಿಕೋಲಮ್, ಝಿನಿ, ಕೋಲ್ಪಿ, ದಂಗಿ(ಬಿಳಿ), ರಾಗುದ್ಯ, ಮಹಾದಿ.
ಔಷಧೀಯ ಗುಣಗಳಿಗನು ಗುಣವಾಗಿ ಮಹದಿ (ದುರ್ಬಲತೆ,ಸಣ್ಣ-ಪುಟ್ಟ ಗಾಯಗಳು ಮತ್ತು ಮೂಳೆಗಳ ಕೂಡುವಿಕೆಗೆ), ಖಾಲಿ ಖಡಸಿ (ದುರ್ಬಲತೆ ನಿವಾರಣೆಗೆ) ದಾಂಗಿ (ಕೆಂಪು), ಮಾಲ್ಗುದ್ಯ (ಪ್ರಸವದನಂತರದ ದುರ್ಬಲತೆ ನಿವಾರಣೆಗೆ)
ಮೇವು, ಹುಲ್ಲಿನ
ಪ್ರಮಾಣಕ್ಕನು ಗುಣವಾಗಿ
ಕೋಲ್ಪಿ, ರಾಗುದ್ಯಾ, ಪಚೇಕಿ, ವಾಕ್ವೇಲ್ ದಾಂಗಿ, ಕಸ್ಬಾಯ್, ಝಿನಿ,ಬಾಂಗ್ಲ್ಯಾ ,ಮಹಾದಿ.
ಅಂತರ್ಜಲಕ್ಕನು ಗುಣವಾಗಿ ಕಸ್ವೇಲ್
ಆಹಾರ
ಉಪಯೋಗಕ್ಕಾಗಿ ಬಿರಿಯಾನಿ,
ಪಲಾವ್ ಮತ್ತು ಇತರೆ ಖಾದ್ಯಗಳಿಗಾಗಿ (ಬಾಂಗ್ಲಾ ್ಯ, ಕಸ್ಬಾಯಿ, ಕೋಲ್ಪಿ, ಮಸೂರ, ರಾಜ್ಗುಡ್ಯ,
ಸುರ್ತಿಕೋಲಮ್,) ಅಂಬಲಿ (ಗಂಜಿ)- ದಾಂಗಿ(ಬಿಳಿ), ದಾಂಗಿ (ಕೆಂಪು) ಮಹದಿ, ಹಪ್ಪಳಕ್ಕಾಗಿ- ಧುನ್ಧುನ್, ರಾಜ್ಗುಡ್ಯಾ, ಮಾಲ್ಗುಡ್ಯಾ. ನುಚ್ಚಿಗಾಗಿ- ದುಲ-೧, ದುಲ-೨, ಸಾಗ್ ಭತ್.

 

ಶ್ರೀ ಸುನಿಲ್ ಕಮಾಡಿ, ಥಾಣೆ ಜಿಲ್ಲೆಯ ಜವಾಹರ್ ತಾಲೂಕಿನ, ಕಮಾಡಿಪಾಡ ಹಳ್ಳಿಯ ೩೫ ವರ್ಷದ ಯುವ ರೈತ. ಏಳು ಜನ ಸದಸ್ಯರನ್ನೊಳಗೊಂಡ ಅವರ ಕುಟುಂಬಸ್ಥರು ಮಳೆ ಆಧಾರಿತ ಕೃಷಿಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ೨೦೦೮ರಲ್ಲಿ ಅವರಿಗೆ ತಾವು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುತ್ತಿರುವ ಬಗ್ಗೆ ಮನವರಿಕೆ ಯಾಯಿತು. ‘ಬೈಫ್ – ಎಮ್‌ಐಟಿಟಿಆರ್‌ಎ’ದ ತಾಂತ್ರಿಕ ಸಹಕಾರದೊoದಿಗೆ ಅವರು ಸಾವಯವ ಗೊಬ್ಬರದ ಬಳಕೆಯಿಂದ ಮಣ್ಣಿನ ಗುಣಮಟ್ಟವನ್ನು ಉತ್ತಮಗೊಳಿಸುವ ಮಾರ್ಗವನ್ನು ಕಲಿತರು. ಅವರು ಸಾವಯವ ಗೊಬ್ಬರದ ಉತ್ಪಾದನೆಯ ತರಬೇತಿಯನ್ನೂ ಪಡೆದುಕೊಂಡರು ಮತ್ತು ಹೆಚ್ಚಿನ ಇಳುವರಿಗಾಗಿ  ಪರಿಣಿತರಾದರು. ಅವರು ವಿವಿಧ ರೀತಿಯ ಹಣ್ಣು ತರಕಾರಿಗಳನ್ನು (ಹಾಗಲಕಾಯಿ, ಸೋರೇಕಾಯಿ, ಕುಂಬಳಕಾಯಿ, ಬದನೆಕಾಯಿ) ಅವರ ಗೃಹಬಳಕೆಗಾಗಿ ಬೆಳೆದರು. ಅವರ ಇಡೀ ಕುಟುಂಬ ಈ ಕೆಲಸದಲ್ಲಿ ಕೈಜೋಡಿಸಿತ್ತು.

ಸುನಿಲ್ ಅವರು ಬೆಳೆದ ಭತ್ತದ ಬೆಳೆಯನ್ನು ಪರೀಕ್ಷಿಸುತ್ತಿದ್ದಾಗ ಅವರಿಗೆ ಅಚ್ಚರಿ ಕಾದಿತ್ತು. ತಮ್ಮ ಹೊಲದಲ್ಲಿ ಅನಿರೀಕ್ಷಿತ ಮಟ್ಟದಲ್ಲಿ ಭತ್ತದ ತೆನೆಯ ಗೊಂಚಲುಗಳನ್ನು ಕಂಡರು. ಆ ಗೊಂಚಲುಗಳಲ್ಲಿ ಭತ್ತದ ಕಾಳುಗಳು ಅಧಿಕ ಪ್ರಮಾಣದಲ್ಲಿದ್ದವು ಮತ್ತು ಅವುಗಳ ಗಾತ್ರವೂ ದೊಡ್ಡದಾಗಿದ್ದವು. ಅವರು ಆ ತೆನೆಗಳನ್ನು ಜಾಗರೂಕತೆಯಿಂದ ತೆಗೆದಿರಿಸಿ ನಂತರದ ನಾಲ್ಕು ಬೆಳೆಗಳಲ್ಲಿ ಅಂದರೆ ೨೦೧೦ರ ಬೇಸಿಗೆ ಕಾಲ, ೨೦೧೧ರ ಮುಂಗಾರು, ೨೦೧೨ರ ಬೇಸಿಗೆ, ೨೦೧೩ರ ಮುಂಗಾರು ಬೇಸಾಯದಲ್ಲಿ ಈ ಬೀಜವನ್ನು ಬಳಸಿದರು. ಸತತ ಮೂರು ವರ್ಷಗಳ ಕಾಲ ಬೈಫ್ ಮಾರ್ಗದರ್ಶನದಲ್ಲಿ ಉತ್ತಮ ಫಸಲು ತೆಗೆದರು.

ಸುತ್ತಮುತ್ತಲಿನ ರೈತರು ಈ ವಿಶಿಷ್ಟ ತಳಿಯ ಭತ್ತದ ಹೆಚ್ಚಿನ ಇಳುವರಿ, ಮತ್ತು ಯಾವುದೇ ರೀತಿಯ ರೋಗಗಳಿಗೆ ತುತ್ತಾಗದೇ, ಯಾವುದೇ ರೀತಿಯ ಕೀಟಗಳಿಂದ ಹಾನಿಗೊಳಗಾಗದೇ ಇರುವುದನ್ನು ಕಂಡು ಇದರ ಬಗ್ಗೆ ಆಸಕ್ತಿತೋರಿದರು. ೨೦೧೨ರ ಖಾರಿಫ್ ಸಮಯದಲ್ಲಿ ಬೆಳೆದ ಬೆಳೆಯಲ್ಲಿ ಸುನಿಲ್ ೫ ಕ್ವಿಂಟಾಲ್ ನಷ್ಟು ಬಿತ್ತನೆ ಬೀಜವನ್ನು ‘ಸೀಡ್ ಬ್ಯಾಂಕ್’ಗೆ ಪೂರೈಸಿದರು. ಆ ಅಶ್ವಿನಿ ತಳಿಯ ಭತ್ತದೊಂದಿಗೆ ಸುನಿಲ್ ಕಮಾಡಿ ‘ಎಸ್‌ಆರ್‌ಐ’ ಪದ್ಧತಿಯಲ್ಲಿ ಭತ್ತದ
ಬೀಜಗಳನ್ನು ಇತರೆ ರೈತರಿಗೆ ನೀಡಲಾಯಿತು.

ಸುನಿಲ್ ‘ಬಿಯಾನೀ ಸವರ್ಧನ ಸಮಿತಿ’ (ಬೀಜಸಂರಕ್ಷಣಾ ರೈತರ ಬೇಸಾಯ ಮಾಡುವ ತರಬೇತಿಯನ್ನೂ ಪಡೆದುಕೊಂಡರು. ೨೦೧೦ರಲ್ಲಿ ಸುನಿಲ್ `ಬೈಫ್’ನ ‘ಕ್ರಾಪ್ ಜೆರ್ಮ್ ಪ್ಲಾಸ್ಮ್ ಕನ್ಸರ್ವೇಷನ್ ಪ್ರೋಗ್ರಾಂ’ ಕಾರ್ಯಕ್ರಮದಲ್ಲಿ ಸಕ್ರಿಯರಾದರು. ಅವರು ಈ ಪದ್ಧತಿಯ ಅಳವಡಿಕೆಯಿಂದ ಸುಮಾರು ೨೧ ವಿವಿಧ ತಳಿಗಳನ್ನು ಸಂರಕ್ಷಿಸಿದರು ಮತ್ತು ಬೀಜಗಳ ಆಯ್ಕೆಯಲ್ಲಿ ಸಂಘ)ಯ ಸಕ್ರಿಯ ಸದಸ್ಯರಾಗಿದ್ದಾರೆ. ಸುನಿಲ್ ಅವರ ಈ ಪರಿಶ್ರಮಕ್ಕೆ ನವದೆಹಲಿಯಲ್ಲಿ ೨೦೧೧-೨೦೧೨ರ ಪ್ಲಾಂಟ್ ಜೆನೋಮ್ ಸೇವಿಯರ್ ಫಾರ್ಮರ್ ರೆಕಾಗ್ನಿಶನ್ ಪ್ರಶಸ್ತಿಯ ಗೌರವ ಸಂದಿದೆ. ಸುನಿಲ್ ಈ ತಳಿಗೆ `ಅಶ್ವಿನಿ’ ಎಂದು ತಮ್ಮ ಮಗಳ ಹೆಸರನ್ನೇ ಇರಿಸಿದ್ದಾರೆ.

ಪ್ಲಾಂಟ್ ಜೆನೊಮ್ ಸೇವಿಯರ್ ಕಮ್ಯುನಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶ್ರೀ ಮಾವಂಜಿ ಪವಾರ್(ಚೌಕ್ ಗ್ರಾಮ) ಮತ್ತು ಶ್ರೀ ಸುನಿಲ್ ಕಮಾಡಿ (ಕಮಾಡಿಪಾಡ ಗ್ರಾಮ) ಇವರಿಗೆ ‘ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರೆಕಾಗ್ನಿಶನ್ ೨೦೧೧-೧೨’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮುಂದಿನ ದಾರಿ

ಬೀಜೋತ್ಪಾದನೆ ಮತ್ತು ಅದರ ಬಳಕೆಯಿಂದ ಉತ್ತಮ ಇಳುವರಿ ಗಳಿಸುವ ನಿಟ್ಟಿನಲ್ಲಿ ರೈತರಿಗೆ ಹೆಚ್ಚಿನ ತಿಳಿವು ನೀಡುವ ಮೂಲಕ ಜನಜೀವನ ಮಟ್ಟವನ್ನು ಸುಧಾರಿಸಬಹುದು ಎಂಬುದು ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳನ್ನು, ತರಕಾರಿಗಳನ್ನು ಸಂರಕ್ಷಿಸುವುದರಿAದ ಸಮುದಾಯಕ್ಕೆ ಹೆಚ್ಚಿನ ಆಹಾರ ಭದ್ರತೆಯನ್ನು ಒದಗಿಸಬಹುದಾಗಿದೆ. ಸಮುದಾಯಗಳಲ್ಲಿ ಸೀಡ್ ಬ್ಯಾಂಕ್ ಜಾಲವನ್ನು ಅಭಿವೃದ್ಧಿಪಡಿಸುವುದರಿಂದ ಹೆಚ್ಚಿನ ರೈತರಿಗೆ ಸಹಾಯವಾಗಲಿದೆ ಮತ್ತು ಈ ಜಾಲದ ಸಹಾಯದಿಂದ ಉತ್ತಮ ಮಾರುಕಟ್ಟೆಯ ವ್ಯವಸ್ಥೆ ದೊರೆಯುತ್ತದೆ. ಇದರಿಂದ ಸಮುದಾಯಕ್ಕೆ ಧಾನ್ಯಗಳ ಉತ್ತಮ ದಾಸ್ತಾನು ವ್ಯವಸ್ಥೆಯನ್ನೂ ಕಲ್ಪಿಸಬಹುದಾಗಿದೆ. ರೈತ ಸಮುದಾಯವು ಬೀಜ ಸಂರಕ್ಷಣೆಯ ಕಾಯಕದಲ್ಲಿ ತೊಡಗಿಕೊಂಡಿರುವುದರಿoದ ಅವರಿಗೆ ಸಹಕಾರದ ಅಗತ್ಯವಿದೆ. ರೈತರ ವಿವಿಧಬಗೆಯ ಉತ್ಪನ್ನಗಳಿಗೆ ‘ಪಿಪಿವಿ ಮತ್ತು ಎಫ್‌ಆರ್’ ಕಾಯ್ದೆ ಪ್ರಕಾರ ನೋಂದಣಿ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಜನರಲ್ಲಿ ಆಹಾರದಲ್ಲಿನ ಪೌಷ್ಟಿಕಾಂಶದ ಪ್ರಮಾಣ ಮತ್ತು ಗುಣಮಟ್ಟವನ್ನು ತಿಳಿಸಲು ಹೆಚ್ಚಿನ ಅಧ್ಯಯನದ ಅವಶ್ಯಕತೆಯಿದೆ.

Sanjay M Patil

BAIF Development Research Foundation,

Dr. Manibhai Desai Nagar, N.H. 4, Warje,

Pune- 411058, Maharashtra.

E- mail: sanjaypatil21@gmail.com

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೧, ಮಾರ್ಚ್ ೨೦೧೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp