ಬಡತನ ರೇಖೆಯಿಂದ ಹೊರ ಬoದ ಮಹಿಳೆ

ಲ್ಯಾಂಡೆಸಾ

ಕೇರಳದ ಕುಡುಂಬಶ್ರೀ (ಕೆಡಿಎಸ್) ಹಾಗೂ ಆಂಧ್ರ ಪ್ರದೇಶದ ಇಂದಿರಾ ಕ್ರಾಂತಿ ಪಾಠಮ್ (ಐಕೆಪಿ) ಯೋಜನೆಗಳು ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಮಹಿಳೆಯರ ಜೀವನ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. UNWOMENನಿಂದ ಯೋಜಿತಗೊಂಡು, ಲ್ಯಾಂಡೆಸ್ಸಾದಿoದ ಅನುಷ್ಠಾನಗೊಂಡ ಅಧ್ಯಯನವೊಂದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಅನುಸರಿಸಬೇಕಾದ ಪ್ರಕ್ರಿಯೆ ಹಾಗೂ ಅದು ಹೆಚ್ಚು ಪರಿಣಾಮಕಾರಿಯಾಗುವಂತೆ ಅನುಸರಿಸಬೇಕಾದ ವಿಧಾನಗಳನ್ನು ಪಟ್ಟಿಮಾಡಿದೆ.

ಸ್ವಸಹಾಯ ಗುಂಪು (ಎಸ್‌ಎಚ್‌ಜಿ) ವ್ಯವಸ್ಥೆ ಜಾರಿಗೆ ಬಂದ ನಂತರ ಭಾರತೀಯ ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಸರ್ಕಾರಿ ಮತ್ತು ಸರ್ಕಾರೀಯೇತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸ್ವ ಸಹಾಯ ಗುಂಪು ವ್ಯವಸ್ಥೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಕಾರ್ಯಕ್ರಮಗಳಲ್ಲಿ ಕೇರಳದ ಕುಡುಂಬಶ್ರೀ (ಕೆಡಿಎಸ್) ಮತ್ತು ಆಂಧ್ರಪ್ರದೇಶದ ಇಂದಿರಾ ಕ್ರಾಂತಿ ಪಥ (ಐಕೆಪಿ) ಜನಪ್ರಿಯ ಯೋಜನೆಗಳಾಗಿ ಗಮನ ಸೆಳೆದಿವೆ. ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮೀಣ ಮಹಿಳೆಯರು ಒಂದುಗೂಡಿದ್ದಾರೆ. ಗ್ರಾಮೀಣ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಲಾದ ಯೋಜನೆಯು ಕೃಷಿ ಅಭಿವೃದ್ಧಿ, ಸಣ್ಣ ಪುಟ್ಟ ವ್ಯಾಪಾರ, ಗೃಹಕೈಗಾರಿಕೆ ಉತ್ಪನ್ನಗಳನ್ನು ತಾವೇ ಮಾರಾಟ ಮಾಡುವ ಅವಕಾಶ, ಆರೋಗ್ಯ ಮತ್ತು ಶಿಕ್ಷಣ, ಲಿಂಗ ಸಮಾನತೆ ಸೇರಿದಂತೆ ಸಾಕಷ್ಟು ಹೊಸ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಮುಖ್ಯವಾಗಿ ಐಕೆಪಿ ಯೋಜನೆಯ ಪರಿಧಿಯಲ್ಲಿ ಬರುವ ಸಮುದಾಯ ನಿರ್ವಹಿತ
ಸುಸ್ಥಿರ ಕೃಷಿ (ಸಿಎಂಎಸ್‌ಎ) ಮತ್ತು ಕೆಡಿಎಸ್‌ನ ಅಡಿಯಲ್ಲಿ ಬರುವ ಮಹಿಳಾ ಆರ್ಥಿಕ ಸಬಲೀಕರಣ ಗಮನಾರ್ಹವಾಗಿದೆ. ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಈಗಾಗಲೇ ಇದರ ಫಲಾನುಭವವನ್ನು ಲಕ್ಷಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ. ಸುಧಾರಿತ
ವ್ಯವಸಾಯ ಪದ್ಧತಿಗೆ ಕಾರಣರಾಗಿದ್ದಾರೆ. ಪ್ರಸ್ತುತ ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ ಕಾರ್ಯಕ್ರಮವನ್ನು ೧೨ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು ೨೦ ಲಕ್ಷಕ್ಕೂ ಅಧಿಕ ಮಂದಿಗೆ ಅದರ ಪ್ರಯೋಜನ ಉಂಟಾಗಿದೆ.

ಮೇಲ್ಕಾಣಿಸಿದ ಎರಡು ಯೋಜನೆಗಳಿಗೆ ಅನ್ವಯಿಸುವಂತೆ ಎರಡು ನಿದರ್ಶನಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಇವೆರಡೂ ಯೋಜನೆಯ ಅನುಷ್ಠಾನದಲ್ಲಿ ಮಹಿಳೆಯರ ಪಾತ್ರವೇ ಅನನ್ಯ. ಕೃಷಿ ಭೂಮಿ ಸಾಗಣೆ, ತಂತ್ರಜ್ಞಾನ ವಿನಿಮಯ ಮತ್ತು ಬಳಕೆ, ಸಂಪನ್ಮೂಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಬಂಜರು ಭೂಮಿಯನ್ನು ಹಸನಾಗಿಸಿ ಕೃಷಿ ಭೂಮಿಯನ್ನಾಗಿಸುವ ಉದ್ದೇಶ ಸಾರ್ಥಕವಾಯಿತು. ಯೋಜನೆಯ ಫಲಾನುಭವದ ಕಾರಣ ಗೃಹಿಣಿಯರು (ಕೂಲಿ ಕಾರ್ಮಿಕರು) ಕೃಷಿ ಕ್ಷೇತ್ರದಲ್ಲಿ ಏಜೆಂಟರಾಗಿ ಬದಲಾದರು. ಹೀಗೆ ಎರಡು ಜನಪ್ರಿಯ ಯೋಜನೆಗಳಲ್ಲಿ ರಾಜ್ಯ, ನಾಗರೀಕ ಸಮಾಜ ಮತ್ತು ಮಾರುಕಟ್ಟೆಯ ಪ್ರತಿನಿಧಿಗಳನ್ನು ಒಂದುಗೂಡಿಸಲು ಸಾಧ್ಯವಾಯಿತು. ಅದರ ಮೂಲಕ ಮಾರಾಟ, ತರಬೇತಿ, ನೂತನ ಕಾರ್ಯಕ್ರಮಗಳ ಅನುಷ್ಠಾನ ಮತ್ತಿತರ ಸಂಗತಿಗಳನ್ನು ಸಾಧಿಸಲು ಸಾಧ್ಯವಾಯಿತು.

ಸಿಎಂಎಸ್‌ಎ: ಕುಟುಂಬ ಆಹಾರ ಭದ್ರತೆಗೆ ಕಾರಣವಾದ ಯೋಜನೆ
ಅತಿ ಇಂಧನ, ಅತಿ ಬಂಡವಾಳ ಮತ್ತು ರಸಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳಿಂದಲೇ ನಡೆಯುತ್ತಿದ್ದ ಉತ್ಪಾದನಾ ತಂತ್ರಗಳ ಬದಲಿಗೆ ಪಾರಿಸರಿಕವಾಗಿ ಮತ್ತು ಹಣಕಾಸಿನ ದೃಷ್ಟಿಯಿಂದ ಸುಸ್ಥಿರವಾದ ತಂತ್ರಗಳಿಗೆ ಬೆಳೆ ನಿರ್ವಹಣಾ ಪದ್ಧತಿಯನ್ನು ಬದಲಾಯಿಸುವುದೇ ಸಿಎಂಎಸ್‌ಎನ ಉದ್ದೇಶವಾಗಿದೆ. ಈ ಉಪಕ್ರಮಕ್ಕೆ ಮಹಿಳೆಯರನ್ನೇ ಮೂಲ ಚಾಲನಾ ಶಕ್ತಿಯನ್ನಾಗಿ ಮತ್ತು ಒಡತಿಯನ್ನಾಗಿ ಮಾಡುವುದರ ಮೂಲಕ ಇದನ್ನು ಸಿಎಂಎಸ್‌ಎಯು ಬಹು ಜಾಣತನದಿಂದ ಮಹಿಳೆಯರ ಆರ್ಥಿಕ
ಸಬಲೀಕರಣದೊಂದಿಗೆ ಜೋಡಿಸಿದೆ.

ಭಾರತದ ಕೃಷಿಕರ ವರ್ಗೀಕರಣದ ಪ್ರಕಾರ ಲಕ್ಷ್ಮಿಯು ಸಣ್ಣ ಕೃಷಿಕರ ವರ್ಗದಲ್ಲಿ ಬರುತ್ತಾಳೆ. ಈಕೆ ಆಂಧ್ರಪ್ರದೇಶದ ವಿಶಾಖಪಟ್ಟಣo ಜಿಲ್ಲೆಯ ಪದ್ಮನಾಭ ಮಂಡಲದ ವ್ಯಾಪ್ತಿಗೆ ಬರುವ ಕೊರಡಾ ಗ್ರಾಮದಲ್ಲಿ ವಾಸಿಸುತ್ತಿದ್ದಾಳೆ. ಆಕೆಯ ಇಡೀ ಕುಟುಂಬ ಒಂದು ಎಕರೆ ಕೃಷಿ ಭೂಮಿಯಿಂದ ಬರುವ ಆದಾಯವನ್ನೇ ನೆಚ್ಚಿಕೊಂಡಿದೆ. ಮುಖ್ಯವಾಗಿ ಈ ಕೃಷಿ ಭೂಮಿಯು ಮಳೆನೀರನ್ನೇ ಅವಲಂಬಿಸಿಕೊAಡಿದೆ. ಮಳೆ ನೀರಿನ ಹರಿವು ಆಧರಿಸಿ ಜಮೀನಿನಲ್ಲಿ ಭತ್ತ, ತರಕಾರಿ, ಕಾಳು, ಧಾನ್ಯ ಮತ್ತು ಪಪ್ಪಾಯಿಯನ್ನು
ಬೆಳೆಯುತ್ತಾರೆ. ಆಂಧ್ರಪ್ರದೇಶದ ಇಂಥ ಹಲವು ಸಣ್ಣ ಕೃಷಿಕ ಕುಟುಂಬಗಳ ಹಾಗೆಯೇ ಲಕ್ಷ್ಮಿಯಾ ಕುಟುಂಬದ ಬಹುಪಾಲು ಆದಾಯವು ಬಳಕೆಗೆ ಆಹಾರ ಖರೀದಿಸಲು ಮತ್ತು ರಾಸಾಯನಿಕ ಕೀಟನಾಶಕ ಮತ್ತು ರಸಗೊಬ್ಬರ ಮುಂತಾದ ಕೃಷಿ ಒಳಸುರಿಗಳನ್ನು ಖರೀದಿಸಲು ಪಡೆದ ಸಾಲವನ್ನು ತೀರಿಸಲೆಂದೇ ಖರ್ಚಾಗುತ್ತದೆ. ಒಂದೆಕರೆ ಕೃಷಿಭೂಮಿ ಇದ್ದರೂ ಅವಳ ಕುಟುಂಬವು ಆದಾಯದಲ್ಲಾಗಲೀ, ಆಹಾರದಲ್ಲಾಗಲೀ ಭದ್ರತೆಯನ್ನು ಹೊಂದಿಲ್ಲ. ಯಾವುದೇ ಮಾನದಂಡದಲ್ಲಿ ನೋಡಿದರೂ, ಆಕೆಯು ಕಡುಬಡವಿ ಅಲ್ಲವಾದರೂ ಬಡವರಲ್ಲಿ ಬಡವಳಾಗಿದ್ದಾಳೆ.

ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಹಸಿಗೊಬ್ಬರ ಮತ್ತು ಎಸ್‌ಆರ್‌ಐಯಂತಹ ಪಾರಿಸರಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಲಕ್ಷಿ ್ಮಯ ಕುಟುಂಬದ ಉತ್ಪಾದನೆಯು ನಿಜಕ್ಕೂ ಸುಧಾರಿಸಿತು; ಅಲ್ಲದೆ ಉತ್ಪನ್ನದ ಬಗೆಗಳೂ ಗಮನಾರ್ಹವಾಗಿ ಹೆಚ್ಚಿದವು.

ಕೃಷಿವೆಚ್ಚವು ಹಿಂದೆ ಇದ್ದಿದ್ದಕ್ಕಿಂತ ನಾಲ್ಕನೇ ಒಂದು ಭಾಗಕ್ಕೆ ಇಳಿದಿದ್ದರಿಂದ ಅವಳ ಕುಟುಂಬವು ಪ್ರತಿವರ್ಷವೂ ಬಹುಬೆಳೆಗಳನ್ನು ಬೆಳೆಯಲು ಸಾಧ್ಯವಾಯಿತು. ತರಕಾರಿ, ಕಾಳು ಮತ್ತು ಧಾನ್ಯಗಳನ್ನು ಖರೀದಿಸುವ ಪ್ರಮಾಣವು ಗಮನಾರ್ಹವಾಗಿ ತಗ್ಗಿದೆ. ಲಕ್ಷಿ ್ಮಯ ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸಿದ್ದರಿಂದ ಕೃಷಿ ಚಟುವಟಿಕೆಗಳ ವಿಸ್ತರಣೆಗಾಗಿ ಹೆಚ್ಚುವರಿ ಅರ್ಧ ಎಕರೆ ಜಮೀನನ್ನು ಅವರು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದ್ದಾರೆ. ಇದನ್ನು ಆಂಶಿಕವಾಗಿ ಎಸ್‌ಆರ್‌ಐ ವಿಧಾನದಲ್ಲಿ ಭತ್ತ ಬೆಳೆಯಲು
ಬಳಸುತ್ತಿದ್ದಾರೆ; ಇನ್ನುಳಿದ ಪ್ರದೇಶದಲ್ಲಿ ೩೬ ಚದರ ಅಡಿಗಳ ಏಳು ಸ್ತರದ ತರಕಾರಿ, ಹಣ್ಣು ಮತ್ತು ಗೆಡ್ಡೆಗೆಣಸುಗಳನ್ನು ಬೆಳೆಯಲು ಬಳಸುತ್ತಿದ್ದಾರೆ. ಸ್ಥಳೀಯ ಎನ್‌ಪಿಎಂ (ಕೀಟನಾಶಕೇತರ ನಿರ್ವಹಣೆ) ಅಂಗಡಿಯೊoದನ್ನು ಸ್ಥಾಪಿಸಿ ಅದರಲ್ಲಿ ಜೈವಿಕ ಕೀಟನಾಶಕಗಳನ್ನು ಮತ್ತು ಜೈವಿಕ ಗೊಬ್ಬರಗಳನ್ನು ಮಾರುವ ಅಂಗಡಿಯನ್ನೂ ಸ್ಥಾಪಿಸಿ ಜೀವನೋಪಾಯ ಹುಡುಕಿಕೊಂಡಿದ್ದಾರೆ.

ಲಕ್ಷ್ಮಿ ತನ್ನ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಬಹು ಹಂತದ ತರಕಾರಿ ತೋಟದ ಬಗ್ಗೆ ಹೇಳಿಕೊಳ್ಳುತ್ತಾಳೆ. ಆ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕಾರಣ, ಸಾಕಷ್ಟು ಬಗೆಯ ತರಕಾರಿ, ಕಾಳು, ಗೆಡ್ಡೆ ಮತ್ತು ಹಣ್ಣುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ೩೬ ಚದರ ಅಡಿ ಜಾಗದಲ್ಲೇ ಏಳು ಘಟ್ಟಗಳನ್ನಾಗಿ ವಿಭಾಗಿಸಿಕೊಂಡು ಅದರಲ್ಲಿ
ಪ್ರತ್ಯೇಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮೊದಲ ಘಟ್ಟದಲ್ಲಿರುವ ಬೆಳೆಗಳು ಅಷ್ಟೇನು ಸೂರ್ಯನ ಬೆಳಕನ್ನು ಅವಲಂಬಿಸಿಲ್ಲ. ಉದಾಹರಣೆಗೆ ನೆಲದೊಳಗೆ ಬೆಳೆಯುವ ಬೆಳೆಗಳು (ಕ್ಯಾರೆಟ್, ಬೀಟರೂಟ್ ಮತ್ತು ಶುಂಠಿ). ಎರಡನೆಯ ವರ್ಗದಲ್ಲಿ ಬಳ್ಳಿಗಳು ಬರುತ್ತವೆ.

ಇವು ನೆಲದ ತುಂಬಾ ಹರಡಿಕೊಳ್ಳುತ್ತವೆ. ಉದಾ: ಸೋರೆಕಾಯಿ ಮತ್ತು ಸೌತೆಕಾಯಿ. ಮೂರನೇ ಘಟ್ಟದಲ್ಲಿ ಎಲೆ ತರಕಾರಿಗಳು. ಉದಾ: ವನಸ್ಪತಿ ಪತ್ರೆಗಳು, ಕೊತ್ತಂಬರಿ ಮತ್ತು ಪಾಲಾಕ್ ಮತ್ತು ಅರ‍್ಯಾಂತಸ್ ಗಿಡಗಳು. ನಾಲ್ಕನೆಯ ಘಟ್ಟದಲ್ಲಿ ಬದನೆಕಾಯಿ, ಟೊಮೆಟೋ, ಮೆಣಸಿನಕಾಯಿ, ಐದನೆಯ ಘಟ್ಟದಲ್ಲಿ ಹೇರಳೆ  ಮತ್ತು ಕೆಂಪು ಮೆಣಸಿನಕಾಯಿ, ಆರನೆಯ ಘಟ್ಟದಲ್ಲಿ ಪರಂಗಿಮರ, ನುಗ್ಗೆಕಾಯಿ, ಸೀತಾಫಲ ಮತ್ತು ಪೇರಲೆಕಾಯಿ, ಏಳನೆಯ ಹಾಗೂ ಅಂತಿಮ ಘಟ್ಟದಲ್ಲಿ ವಿಶೇಷವಾಗಿ ಹಣ್ಣಿನ ಬೆಳೆ ಬೆಳೆಯಲು ಗಮನ ಹರಿಸಲಾಗಿದೆ. ಅದರಲ್ಲೂ ಮಾವಿನ ಬೆಳೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಕಾರಣ ಮಾವಿನ ಮರಕ್ಕೆ ಸೂರ್ಯನ ಬೆಳಕು ಹೆಚ್ಚಾಗಿ ಅಗತ್ಯವಿದೆ.

ಹೀಗೆ ಲಕ್ಷ್ಮಿ ಅವರ ಕುಟುಂಬ ವರ್ಷದುದ್ದಕ್ಕೂ ವಿವಿಧ ತಳಿಗಳನ್ನು ಬೆಳೆಯುತ್ತಿರುವುದರಿಂದ ಆಹಾರ ಸುರಕ್ಷತೆಯ ಜತೆಗೆ ಕೌಟುಂಬಿಕ ಆದಾಯದಲ್ಲೂ ಗಣನೀಯ ಏರಿಕೆ ಕಂಡು ಬoದಿದೆ. ಸಣ್ಣ ಹೊಲವನ್ನೂ ಉತ್ತಮ ಇಳುವರಿ ಭೂಮಿಯನ್ನಾಗಿ ಬದಲಿಸಿಕೊಳ್ಳಬಹುದು. ಕೇವಲ ೦.೨೫ ಎಕರೆ ಪ್ರದೇಶದಲ್ಲಿ ಹೀಗೆ ಏಳು ಹಂತಗಳಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಅಳವಡಿಸಿಕೊಂಡಾಗ ಅದರಿಂದ ಬರುತ್ತಿರುವ ನಿವ್ವಳ ಗಳಿಕೆ ನಾಲ್ಕು ಸದಸ್ಯರಿರುವ ಲಕ್ಷಿ ್ಮಯ ಕುಟುಂಬಕ್ಕೆ ಸಾಕಾಗುತ್ತಿದೆ. ನಿಜ ಹೇಳಬೇಕೆಂದರೆ ಅವರೀಗ ಮಾರುಕಟ್ಟೆಗೆ ಸಾಗಿಸುವಷ್ಟು ಮಿಗತೆಯನ್ನೂ ಸಾಧಿಸಿದ್ದಾರೆ.

ಲಕ್ಷ್ಮಿ ಅವರ ಕುಟುಂಬ ಭತ್ತದ ಬೆಳೆಯಲ್ಲಿ ಎಸ್‌ಆರ್‌ಐ ವಿಧಾನವನ್ನು ಅಳವಡಿಸಿಕೊಂಡಿದೆ. ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ಅವರು ನಿಯಮಿತವಾಗಿ ಬಳಸುತ್ತಿದ್ದಾರೆ. ಅದರಿಂದಾಗಿ ಇಳುವರಿಯ ಪ್ರಮಾಣ ಮೊದಲಿಗಿಂತಲೂ ಹೆಚ್ಚಿದೆ. ಅವಳೀಗ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾಳೆ.
ಈ ಮುನ್ನ ವರ್ಷಕ್ಕೆ ಒಂದೇ ಇಳುವರಿಯನ್ನು ತೆಗೆಯುತ್ತಿದ್ದ ಲಕ್ಷ್ಮಿಯೀಗ ಭತ್ತ ಮತ್ತು ಕಾಳುಗಳನ್ನು ಎರಡು ಋತುಮಾನಗಳಲ್ಲಿ ಬೆಳೆಯುತ್ತಿದ್ದಾಳೆ. ಅದರೊಂದಿಗೆ ಮಣ್ಣಿನ ಫಲವತ್ತತೆಯೂ ಹೆಚ್ಚಿದ್ದು ಪದೇ ಪದೇ ಕೃಷಿ ಉತ್ಪಾದನೆಗಳ ಬೆಳವಣಿಗೆಗೆ ಪೂರಕವಾಗಿದೆ. ತಮ್ಮ ಕುಟುಂಬದ ಅಗತ್ಯವನ್ನು ಪೂರೈಸಿಕೊಂಡು ಉಳಿದುದ್ದನ್ನು
ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾಳೆ. ಇದೀಗ ಆಕೆ ಸೀಡ್ ಬ್ಯಾಂಕ್ ಸ್ಥಾಪಿಸಿ ನಿರ್ವಹಿಸುತ್ತಿದ್ದಾಳೆ. ಈ ಬ್ಯಾಂಕಿನಲ್ಲಿ ಭತ್ತ, ತರಕಾರಿ ಮತ್ತು ಹಣ್ಣಿನ ಬೀಜಗಳನ್ನು ವರ್ಗೀಕರಿಸಿ ಸಂರಕ್ಷಿಸಲಾಗುತ್ತಿದೆ. ಮೊದಲಿಗೆ ಈ ಯೋಜನೆಯನ್ನು ಸಿಎಂಎಸ್‌ಎ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಗಿತ್ತು. ೩೬ ಚದರ ಅಡಿ ವ್ಯವಸಾಯವನ್ನೇ ಮಾದರಿಯಾಗಿಟ್ಟುಕೊಂಡು ರೈತರಿಂದ ಒಟ್ಟಾಗಿಸಂಗ್ರಹಿಸಿದ ತರಕಾರಿ, ಗೆಡ್ಡೆಗಳು, ಹಣ್ಣು ಮತ್ತು ಬಳ್ಳಿಕಾಯಿಯ ಬೀಜವನ್ನು ಜೋಪಾನವಾಗಿ ಇಡಲಾಗುತ್ತಿತ್ತು. ಹೀಗೆ ಚಿಕ್ಕದಾಗಿ ಸಿಎಂಎಸ್‌ಎನಿAದ ಶುರುವಾದ ಕಾರ್ಯ ಯೋಜನೆ ದಿನಗಳೆದಂತೆ ದೊಡ್ಡದಾಗುತ್ತಾ ಹೋಯಿತು. ಇಕ್ರಿಸಾಟ್‌ನಂಥ ಸಂಶೋಧನಾ ಸoಸ್ಥೆಗಳು ವಿವಿಧ ಬಗೆಯ ಬೀಜಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ಇವುಗಳನ್ನೂ ಈ ಸ್ವಸಹಾಯ ಗುಂಪಿಗೆ ಸೇರಿಸಲಾಯಿತು. ಈ ಬೀಜ ಬ್ಯಾಂಕಿನಲ್ಲಿ ಇರುವ ಬೀಜಗಳ ಸಂಖ್ಯೆಯು ಐದರಿಂದ ೧೮ಕ್ಕೆ ಏರಿತು. ಹೀಗೆ ರೂಪುಗೊಂಡಿರುವ ಸೀಡ್ ಬ್ಯಾಂಕ್‌ನಿoದ ಸದಸ್ಯರು ಸುಸ್ಥಿತಿಯಲ್ಲಿರುವ ಬೀಜಗಳನ್ನು ಪಡೆದುಕೊಳ್ಳಬಹುದು. ಆದರೆ ಒಂದು ಷರತ್ತು: ಹೀಗೆ ಸಂಗ್ರಹಿಸಿದ ಬೀಜದಷ್ಟೇ ಪ್ರಮಾಣವನ್ನು ಶೇಕಡ ೫೦ರಷ್ಟು ಹೆಚ್ಚುವರಿಯೊಂದಿಗೆ ಬೀಜ ಬ್ಯಾಂಕಿಗೆ ಹಿoದಿರುಗಿಸಬೇಕು. ಇದರಿಂದಾಗಿ ಬೀಜ ಬ್ಯಾಂಕ್ ಬೆಳೆಯುತ್ತದೆ. ಮುಖ್ಯವಾಗಿ ಬೀಜ ವಿನಿಮಯ ಚಟುವಟಿಕೆಗಳು ಗ್ರಾಮೀಣ
ಸಂಸ್ಥೆಗಳ (VOs) ಮಟ್ಟದಲ್ಲಿ, ಮಂಡಲ ಪಂಚಾಯ್ತಿಗಳ ಮಟ್ಟದಲ್ಲೂ ಪ್ರಾರಂಭವಾಗತೊಡಗಿತು. ಅದರಿಂದಾಗಿ ಜಿಲ್ಲೆಯಾದ್ಯಂತ ಮತ್ತು
ಅದರಾಚೆಗೂ ವಿಸ್ತಾರವಾಯಿತು.

ಬೀಜ ಬ್ಯಾಂಕ್‌ಗಳ ನಿರ್ವಹಣೆ ಅಷ್ಟು ಸುಲಭವಲ್ಲ. ಅದಕ್ಕಾಗಿ  ವಿಶೇಷ ತಂತ್ರಜ್ಞಾನದ ಅರಿವು ಬೇಕು. ಅದೆಂದರೆ, ಬೀಜ ನಿರ್ವಹಣೆಯ ಜತೆಗೆ ಲೆಕ್ಕಾಚಾರಗಳನ್ನು ನಿರ್ವಹಿಸುವ ಬಗೆ.ಲಕ್ಷ್ಮಿಯು ಈ ಜವಾಬ್ದಾರಿಯನ್ನು ವಹಿಸಿಕೊಂಡಳು. ಅಗತ್ಯವಾದ ತಂತ್ರಗಳನ್ನು ಬೇಗನೇ ಕಲಿತುಕೊಂಡಳು. ತಮ್ಮ ಮನೆಯಲ್ಲೇ ಬೀಜಗಳ ಸಂರಕ್ಷಣೆಗೆ ಅಗತ್ಯವಾದ ಜಾಗವನ್ನು ಮೀಸಲಿಟ್ಟಳು. ತಮ್ಮ ತಂಡದ ಪರವಾಗಿ ತಾನೇ ಬೀಜ ಬ್ಯಾಂಕಿನ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾಳೆ.

ಅವಳ ಬದುಕಿನಲ್ಲಿ ಇವೆಲ್ಲವಕ್ಕೂ ವಿಶೇಷವಾದ ಅರ್ಥವಿದೆಯಾ? ಅವಳೀಗ ಹೇಳಿಕೊಳ್ಳುತ್ತಾಳೆ. ಆಕೆಯ ವಾರ್ಷಿಕ ಆದಾಯವೀಗ ಐವತ್ತು ಸಾವಿರಗಳಷ್ಟಾಗಿದೆ. ಇದು ಹಿಂದಿನ ಆದಾಯಕ್ಕಿಂತ ಗಮನಾರ್ಹವಾದ ಜಿಗಿತವೇ ಹೌದು. ಆಕೆಯ ಕುಟುಂಬದ ಆಹಾರದ ಚೀಲವೂ ಸುಧಾರಿಸಿದೆ. ಆಕೆ ಬಗೆ ಬಗೆಯ ತರಕಾರಿ, ಹಣ್ಣು ಮತ್ತು ಗೆಡ್ಡೆ ಗೆಣಸುಗಳನ್ನು ತನ್ನ ದೈನಂದಿನ ಆಹಾರ ಕ್ರಮದಲ್ಲಿ ಬಳಸುತ್ತಿದ್ದಾಳೆ. ಕುಟುಂಬದ ಮೇಲೆ ಬೀಳುತ್ತಿದ್ದ ಆರ್ಥಿಕ ಹೊರೆ ಮೊದಲಿಗಿಂತಲೂ ಕಡಿಮೆಯಾಗಿದೆ. ಯಶಸ್ಸಿನಿಂದಾಗಿ ಆಕೆಯ ವಿಶ್ವಾಸ ವೃದ್ಧಿಸಿದೆ. ಮುಖ್ಯವಾಗಿ ಕುಟುಂಬದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ಆಕೆ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಆಕೆ ತೆಗೆದುಕೊಳ್ಳುವ ಕೆಲ ನಿರ್ಣಯಗಳಿಗೆ ಇಂದಿಗೂ ಪುರುಷರು ಸಮ್ಮತಿ ಸೂಚಿಸಬೇಕಿದ್ದರೂ ಆಕೆಯಲ್ಲೀಗ ತಾನು ಸ್ವತಂತ್ರಳು ಎನ್ನುವ ಭಾವನೆ ಮೂಡಿದೆ.

ಸಿಎಂಎಸ್‌ಎ ಪ್ರಯೋಗಗಳನ್ನು ತನ್ನ ಜಮೀನಿನಲ್ಲಿ ಅಳವಡಿಸಿಕೊಳ್ಳಲು, ಆ ನಿಟ್ಟಿನಲ್ಲಿ ತನ್ನ ಕುಟುಂಬ ವರ್ಗದವರ ಮನವೊಲಿಸಲು ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ
ಪಡಬೇಕಾಗಿತ್ತು. ಆದರೀಗ ತನ್ನ ಕುಟುಂಬ ಸದಸ್ಯರ ಮನ ಒಲಿಕೆಯಲ್ಲಿ ಯಶಸ್ವಿಯಾಗಿದ್ದಾಳೆ. ಮಾರಾಟ, ಖರೀದಿ ಸೇರಿದಂತೆ ಆಯವ್ಯಯದ ವಿಚಾರದಲ್ಲೂ ಆಕೆಯೀಗ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ವಿಜಯನಗರಂನಲ್ಲಿರುವ ಮಾರುಕಟ್ಟೆಗೆ ಆಕೆ ಹೋಗುತ್ತಾಳೆ. ಅಲ್ಲಿ ತನ್ನ ಉತ್ಪನ್ನವನ್ನು ಮಾರಿ ಜೈವಿಕ ಕೀಟನಾಶಕ ಉತ್ಪಾದನೆಗೆ ಅವಶ್ಯವಾದ ವಸ್ತುಗಳನ್ನು ಖರೀದಿಸುತ್ತಿದ್ದಾಳೆ.

ಸುಸ್ಥಿರ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮನೆಯ ಆಹಾರ ಭದ್ರತೆಯನ್ನು ಸಾಧಿಸಿದ್ದಕ್ಕಾಗಿ ಖಂಡಿತವಾಗಿಯೂ ಆಕೆ ಬದಲಾವಣೆಯ ಸಂಕೇತವಾಗಿದ್ದಾಳೆ. ಲಕ್ಷ್ಮಿಯ ಪ್ರಕರಣದಿಂದ ನಾವು ತಿಳಿದುಕೊಳ್ಳಬೇಕಾದ ಅಂಶವೊoದಿದೆ. ಅದೆಂದರೆ, ಮಳೆ ನೀರನ್ನೇ ಅವಲಂಬಿಸಿಕೊoಡಿರುವ ಪ್ರದೇಶಗಳು ಮತ್ತು ಅದನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಸೂಕ್ತವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳಬಹುದು. ಲಕ್ಷ್ಮಿಯ ಮಾತುಗಳಲ್ಲೇ ಹೇಳಬೇಕೆಂದರೆ, ಎಲ್ಲಿಯವರೆಗೆ ನಾವು ಸಾಂಪ್ರದಾಯಿಕ ವ್ಯವಸಾಯ ಪದ್ಧತಿಗೇ ಜೋತು ಬಿದ್ದಿರುತ್ತೇವೋ ಅಲ್ಲಿಯವರೆಗೆ ನಮಗೆ ಬಡತನ ಕಟ್ಟಿಟ್ಟ ಬುತ್ತಿ. ಸಿಎಂಎಸ್‌ಎ ತಂತ್ರಜ್ಞಾನವು ಆಕೆಯ ಕುಟುಂಬ ಬಡತನದ ಸುಳಿಯಿಂದ ಹೊರಬರಲು ಸಹಾಯ ಮಾಡಿದೆ.

ಒಟ್ಟು ಗುತ್ತಿಗೆ : ಕೇರಳದಲ್ಲಿ ಮಹಿಳೆಯರನ್ನು ಬೆಳೆಗಾರರನ್ನಾಗಿ ಪರಿವರ್ತಿಸಿದ ಬಗೆ

ಕುಡುಂಬಶ್ರೀ (ಕೆಡಿಎಸ್) ಎನ್ನುವುದು ಕೇರಳ ರಾಜ್ಯ ಸರ್ಕಾರದ ಬಡತನ ನಿರ್ಮೂಲನಾ ಯೋಜನೆಯಾಗಿದೆ. ಕೇರಳದಲ್ಲಿ ಗ್ರಾಮೀಣ ಮಟ್ಟದಲ್ಲಿರುವ ಮಹಿಳೆಯರು ಒಂದಾಗಿ ನೆರೆಹೊರೆ ತಂಡಗಳನ್ನು (ಎನ್‌ಎಚ್‌ಜಿ) ರಚಿಸಿಕೊಂಡಿದ್ದಾರೆ. ಕೆಡಿಎಸ್ ಸಹ ಮೂರು ಹಂತದ ಮಹಿಳಾ ತಂಡಗಳನ್ನು ರಚಿಸಿದೆ. ಅವೆಂದರೆ  ಗ್ರಾಮೀಣ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಪ್ರದೇಶ ಅಭಿವೃದ್ಧಿ ಸೊಸೈಟಿ (ಎಡಿಎಸ್), ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಸೊಸೈಟಿ (ಸಿಡಿಎಸ್). ಪ್ರತಿಯೊಂದು ಮಟ್ಟದಲ್ಲೂ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಎಲ್ಲರೂ ಒಟ್ಟಾಗಿ ಸಿಡಿಎಸ್-ಎಡಿಎಸ್ ಮತ್ತು ಎನ್‌ಎಚ್‌ಜಿ ಮಟ್ಟದಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಇಡೀ ಕಾರ್ಯಭಾರದ ನಿರ್ವಹಣೆಯನ್ನು ಮಹಿಳೆಯರೇ ಮಾಡುತ್ತಾರೆ.

ನೀವು ಯಾವುದೇ ಎನ್‌ಎಚ್‌ಜಿ ಸದಸ್ಯರನ್ನು ‘ನಿಮ್ಮ ಆರ್ಥಿಕ ಸ್ಥಿತಿಯ ಸುಧಾರಣೆಗೆ ನೀವೇನು ಮಾಡುತ್ತೀರಿ?’ ಎಂದು ಪ್ರಶ್ನಿಸಿ. ಆಗ ಅವರಲ್ಲಿ ಶೇಕಡ ೯೮ರಷ್ಟು ಜನರು ‘ನಾವೆಲ್ಲರೂ ಒಟ್ಟಾಗಿ ಗುತ್ತಿಗೆ ಜಮೀನಿನಲ್ಲಿ ವ್ಯವಸಾಯ ಮಾಡಲು ಬಯಸಿದ್ದೇವೆ ಎಂದೇ ಉತ್ತರಿಸುತ್ತಾರೆ’ ಎನ್ನುತ್ತಾರೆ ತಿರುವನಂತಪುರದ ಕುಡುಂಬಶ್ರೀ ಅಧಿಕಾರಿ. ಈ ಮೊದಲು ೯೦೦ ಮಹಿಳಾ ತಂಡಗಳು ಮೈಕ್ರೋ ಎಂಟರ್‌ಪ್ರೆ Êಸ್ (ಚಿಲ್ಲರೆ ಮಾರಾಟ)ದಲ್ಲಿ ತೊಡಗಿಸಿಕೊಂಡಿದ್ದವು. ಆದರೀಗ ೨.೧೫ ಲಕ್ಷ ಮಹಿಳಾ ತಂಡಗಳು ಒಟ್ಟಾಗಿ ಗುತ್ತಿಗೆ ಜಮೀನಿನಲ್ಲಿ ಸಾಗುವಳಿಯನ್ನು ಮಾಡುತ್ತಿವೆ. ಈ ಸಂಖ್ಯೆಯು  ಮಹಿಳಾ ಸದಸ್ಯರಲ್ಲಿ ಒಟ್ಟು ಗುತ್ತಿಗೆಯ ಕುರಿತು ಉಂಟಾಗಿರುವ ಜಾಗೃತಿಯನ್ನು ಸೂಚಿಸುತ್ತದೆ.

ಯಾವ ಕಾರಣಕ್ಕೆ ಅವರಲ್ಲಿ ಆಸಕ್ತಿ ಹೆಚ್ಚಿದೆ ಎಂಬುದನ್ನು ಈ ಕೆಳಗಿನ ನಿದರ್ಶನದ ಮೂಲಕ ತಿಳಿದುಕೊಳ್ಳೋಣ.

ರಮಣಿ ಶ್ರೀನಿವಾಸನ್, ಶೀಬಾ ಬಾಲಕೃಷ್ಣನ್, ಶ್ರೀಜಾ ಧರನ್ ಮತ್ತು ಬಿಂದು ಸತ್ಯನ್ ಇವರೆಲ್ಲರೂ ಗ್ರಾಮಶ್ರೀ ಜಾಯಿಂಟ್ ಲಯಬಿಲಿಟಿ ತಂಡದ ಸದಸ್ಯರು. ತ್ರಿಸೂರು ಜಿಲ್ಲೆಯ ಮುಲ್ಲಾಶರ‍್ರಿ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿದ್ದಾರೆ. ಈ ತಂಡವು ತಮ್ಮದೇ ಆದ ಎನ್‌ಎಚ್‌ಜಿ ತಂಡವನ್ನು ರಚಿಸಿಕೊಂಡಿದೆ. ಕೆಡಿಎಸ್ ರೈತರ ಆರ್ಥಿಕ ಅಭಿವೃದ್ಧಿಗೆ ಮುನ್ನಡಿ ಇಡುವುದಕ್ಕೇ ಮುನ್ನವೇ ಅಂದರೆ ೨೦೦೬ರಲ್ಲೇ ಗುತ್ತಿಗೆ ಭೂಮಿಯಲ್ಲಿ ಒಟ್ಟಾಗಿ ವ್ಯವಸಾಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಡಿಎಸ್ ಈ ತಂಡವನ್ನು ಎನ್‌ಎಚ್‌ಜಿಯೊಳಗೆ ಕ್ರಿಯಾಶೀಲ ತಂಡ (ಎಜಿ) ಎಂದು ಗುರುತಿಸಿತ್ತು.

ಈ ತಂಡವು ವ್ಯವಸಾಯ ಚಟುವಟಿಕೆಯನ್ನು ಕೈಗೊಂಡ ಪಕ್ಷದಲ್ಲಿ, ಅವರಿಗೆ ಕೆಲವೊಂದು ವಿಶೇಷ ರಿಯಾಯಿತಿಗಳು ಸಿಗುತ್ತಿದ್ದವು. ಆ ಸಂದರ್ಭದಲ್ಲಿ ರಮಣಿ ಮತ್ತವರ ತಂಡದ ಸದಸ್ಯರೆಲ್ಲರೂ ಭೂರಹಿತ ಕೂಲಿಕಾರ್ಮಿಕರಾಗಿದ್ದರು. ಅವರೆಲ್ಲರೂ ಒಟ್ಟಾಗಿ ಸ್ಥಳೀಯ ಜಮೀನ್ದಾರರೊಬ್ಬರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅದರಿಂದ ಬರುವ ಆದಾಯವನ್ನೇ ತಮ್ಮ ಜೀವನಕ್ಕೆ ಆಧಾರ ಮಾಡಿಕೊಂಡಿದ್ದರು. ಅವರೆಲ್ಲರೂ ಒಟ್ಟಾಗಿ ಮೂವರು ಜಮೀನ್ದಾರರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಒಟ್ಟು ಜಮೀನಿನ ವಿಸ್ತಾರ ೧೩.೫ ಎಕರೆಗಳಷ್ಟಿತ್ತು. ೧೯೯೮ರಲ್ಲಿ ಈ ಪ್ರದೇಶದಲ್ಲಿ ಭೂಮಾಲೀಕರು ವ್ಯವಸಾಯೋತ್ಪನ್ನ ಚಟುವಟಿಕೆಯನ್ನು ನಿಲ್ಲಿಸಿದ್ದರು. ಕಾರಣ ಅಧಿಕ ಕೂಲಿ (೧೯೯೮ರಲ್ಲಿ ಪ್ರತಿನಿತ್ಯ ಕೂಲಿ ಬೆಲೆ ೧೨೫ ರೂ.ಗಳು), ಹಾಗಾಗಿ ಯಾವುದೇ ಬೆಳೆ ಬೆಳೆಯದ ಜಮೀನು ವರ್ಷಾನುಗಟ್ಟಲೇ ಪಾಳು ಬಿದ್ದಿತ್ತು. ರಮಾಮಣಿ ಮತ್ತವರ ತಂಡದ ಸದಸ್ಯರಿಗೆ ಗ್ರಾಮ ಪಂಚಾಯ್ತಿ ಮೂಲಕ ಒಟ್ಟು ಗುತ್ತಿಗೆ ಯೋಜನೆಯ ಬಗ್ಗೆ ತಿಳಿಯಿತು. ೧೯೯೮ರಲ್ಲಿ ಪ್ರಾರಂಭವಾದ ಕುಡುಂಬಶ್ರೀ ಯೋಜನೆಯ ಭಾಗವಾಗಿ ಈ ಪ್ರದೇಶದಲ್ಲಿ ವ್ಯವಸಾಯ ಚಟುವಟಿಕೆಗಳನ್ನು ಪ್ರಾರಂಭಿಸಿಲು ತೀರ್ಮಾನಿಸಿದರು. ಈ ಮಹಿಳೆಯರಿಗೆ ಭೂಮಾಲೀಕರ ಪರಿಚಯವಿತ್ತು. ಹಾಗಾಗಿ ಅವರೆಲ್ಲರೂ ಒಟ್ಟಾಗಿ ಮಾಲೀಕರಿಂದ ಭೂಮಿಯನ್ನು ಗುತ್ತಿಗೆ ಪಡೆದರು. ಮಳೆಯನ್ನು ಆಧರಿಸಿದಂತೆ ಮೊದಲ ನಾಲ್ಕು ತಿಂಗಳಲ್ಲಿ ಮಳೆ ಆಧಾರಿತ ಬೆಳೆ ಬೆಳೆಯಲು ಪ್ರಾರಂಭಿಸಿದರು. ಗ್ರಾಮ
ಪಂಚಾಯ್ತಿಯ ವಾರ್ಡ್ ಸದಸ್ಯರ ನೆರವಿನಿಂದ ಮತ್ತು ಸಿಡಿಎಸ್ ಸದಸ್ಯರ ಸಹಕಾರದಿಂದ ಅವರು ಗುತ್ತಿಗೆ ಒಪ್ಪಂದಕ್ಕೆ ಬರಲು ಸಾಧ್ಯವಾಯಿತು.

ಭೂಮಾಲೀಕರು ತಮ್ಮ ೫.೫ ಎಕರೆ ಭೂಮಿಯನ್ನು ವಾರ್ಷಿಕ ಪ್ರತಿ ಎಕರೆಗೆ ೧೨ ಸಾವಿರ ರೂ ಗುತ್ತಿಗೆಯಂತೆ ನೀಡಿದರು. ಇನ್ನುಳಿದ ಎಂಟು ಎಕರೆ ಭೂಮಿಯನ್ನು ಬೆಳೆ ಫಸಲಿನ ಅರ್ಧದಷ್ಟು ಭಾಗವನ್ನು ಕೊಡುವುದು ಎಂಬ ಷರತ್ತನ್ನು ವಿಧಿಸಿದರು. ಗುತ್ತಿಗೆ ಪಡೆಯುವುದಕ್ಕೂ ಮುನ್ನ ಪೂರ್ವಭಾವಿಯಾಗಿ ಮುಂಗಡ ಹಣವನ್ನು ನೀಡುವುದು ಅವರಿಗೆ ಸವಾಲಿನ ವಿಷಯವಾಗಿತ್ತು. ಅದರಲ್ಲೂ ಗುತ್ತಿಗೆಯ ಮುಂಗಡ ಬಾಬ್ತನ್ನು ನಗದು ರೂಪದಲ್ಲಿ ಕೊಡಬೇಕಿತ್ತು. ಇನ್ನುಳಿದ ಹಣವನ್ನು ಬೆಳೆ ಬೆಳೆದ ನಂತರ ಕೊಡಬಹುದಿತ್ತು. ಸರಿ, ಆ ಮಹಿಳೆಯರು ತಮ್ಮ ಆಪ್ತರಿಂದ ಮತ್ತು ಎನ್‌ಎಚ್‌ಜಿ ಇಂದ ಸಾಲವನ್ನು ಪಡೆದುಕೊಂಡು ಪ್ರಾರಂಭಿಸಿದರು. ಸಿಡಿಎಸ್‌ನವರೂ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಚರ್ಚಿಸಿ ಅವರಿಗೆ ಸೂಕ್ತ ಸಲಹೆಯನ್ನು ನೀಡಿದರು. MGNREGA ಎಂಬ ಹೆಚ್ಚುವರಿ ಯೋಜನೆಯೊಂದನ್ನು ಜಾರಿಗೆ ತಂದರು. ಇದರ ನೆರವಿನಿಂದ ಭೂಮಿಯನ್ನು ಸಿದ್ಧತೆಗೊಳಿಸಲಾಯಿತು.MGNREGA  ನೆರವಿನಿoದ ರೈತಾಪಿ ಮಹಿಳೆಯರಿಗೆ ಸ್ವಲ್ಪ ಮಟ್ಟಿನ ನಗದು ದೊರೆಯಿತು. ಆ ಹಣವು ಎನ್‌ಎಚ್‌ಜಿ ಉಳಿತಾಯ, ಎನ್‌ಎಚ್‌ಜಿ ಸಾಲ ಮತ್ತು ವೈಯಕ್ತಿಕ ಸಾಲಗಳೊಂದಿಗೆ ಸೇರ್ಪಡೆಯಾಯಿತು. ಇವೆಲ್ಲವನ್ನೂ ಒಟ್ಟುಗೂಡಿಸಿ ಗುತ್ತಿಗೆ ಪಡೆದ ಜಮೀನಿಗೆ ಬಾಡಿಗೆಯನ್ನು ನೀಡಿದರು.

ಈ ಮಹಿಳೆಯರಿಗೆ ಭತ್ತದ ಬೆಳೆ ಹೇಗೆ ಬೆಳೆಯಬೇಕೆಂಬ ತಂತ್ರಜ್ಞಾನದ ಪರಿಚಯವಿದ್ದರೂ ಸಿಡಿಎಸ್‌ನಲ್ಲಿ ತರಬೇತಿ ನೀಡಿ ಅವರಿಗೆ ಪ್ರೋತ್ಸಾಹ ನೀಡಲಾಯಿತು. ಯಾರಾದರೂ ಅವರನ್ನು ನೀವೇಕೆ ತರಬೇತಿಗೆ ಒಳಗಾಗುತ್ತಿದ್ದೀರಾ ಎಂದು ಪ್ರಶ್ನಿಸಿದರೆ ಅವರಿಂದ ಬರುತ್ತಿದ್ದ ಉತ್ತರವಿಷ್ಟೇ – `ಸಿಡಿಎಸ್‌ನವರು ನಮಗೆ ವೈಜ್ಞಾನಿಕ ರೀತಿಯಲ್ಲಿ ಬೆಳೆ ನಿರ್ವಹಣೆಯನ್ನು ಹೇಳಿಕೊಡಲಿದ್ದಾರೆ. ಅದರಿಂದಾಗಿ ನಮಗೆ ಕೀಟಗಳ ದಾಳಿಯಿಂದ ಬೆಳೆ ನಷ್ಟವಾಗುವುದಿಲ್ಲ; ಸಾಲದ ಬಾಧೆ ಇರುವುದಿಲ್ಲ’ ಎಂದು.

ಆದರೆ ಎಲ್ಲರೂ ಒಟ್ಟಾಗಿ ಗುತ್ತಿಗೆ ಮಾಡುವುದರಲ್ಲಿ ಎರಡು ಬಗೆಯ ತಾಪತ್ರಯಗಳಿವೆೆ. ಅವೆಂದರೆ, ೧) ಬೆಳೆ ನಷ್ಟ ಅಥವಾ ಕಡಿಮೆ ಬೆಳೆ ಬರುವುದು. ಅದರಿಂದಾಗಿ ಗುತ್ತಿಗೆ ಪಡೆದವರ ಮೇಲೆ ಅಧಿಕ ಹಣದ ಒತ್ತಡ ಬೀಳುವುದು ಮತ್ತು ೨) ಒಂದೊಮ್ಮೆ ಬೆಳೆ ಕೆಲ ವರ್ಷಗಳವರೆಗೆ ಚೆನ್ನಾಗಿ ಬಂದರೆ, ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದು ಭೂಮಾಲೀಕರ ಮನಃಪರಿವರ್ತನೆಗೂ ಕಾರಣವಾಗಿ ಭೂಮಿಯನ್ನು ಹಿಂಪಡೆದುಕೊಳ್ಳುವುದಕ್ಕೂ ಕಾರಣವಾಗಬಹುದು. ರಮಣಿ ಮೇಲಿನ ಎರಡೂ ವಿಷಯದಲ್ಲೂ ಅದೃಷ್ಟಶಾಲಿ ಎನ್ನಬಹುದು. ಆಕೆ ಗುತ್ತಿಗೆ ಪಡೆದ ಭೂಮಿಯಲ್ಲಿ ಉತ್ಪಾದಿಸುತ್ತಿದ್ದ ಬೆಳೆ ವಿಶ್ವಾಸಾರ್ಹವಾಗಿತ್ತು. ಕಾಲ ಕಾಲಕ್ಕೆ ಬೀಳುತ್ತಿದ್ದ ಮಳೆ, ಮುಖ್ಯವಾಗಿ ಅವರ ಗುತ್ತಿಗೆ ಕರಾರು ಅನಿರ್ಭಾದಿತವಾಗಿ ಮುಂದುವರೆದಿತ್ತು. ಭೂಮಾಲೀಕರಿಂದ ಗುತ್ತಿಗೆ ಪ್ರತಿವರ್ಷವೂ ನವೀಕರಿಸಲ್ಪಡುತ್ತಿತ್ತು. ಮಳೆ ಆಧಾರಿತ ಭೂಮಿಯಲ್ಲಿ ಪ್ರತಿ ಎಕರೆಗೆ ೧೨೦೦ ಕೆಜಿ ಇಳುವರಿಯನ್ನು ಪಡೆಯಲು ಆ ಮಹಿಳೆಯರು ಯಶಸ್ವಿಯಾದರು. ಅಂದರೆ ಅವರ ಒಟ್ಟು ಉತ್ಪಾದನೆ ೧೫,೫೦೦ ರಿಂದ ೧೬,೫೦೦ ಕೆಜಿಯಷ್ಟಾಯಿತು. ಉತ್ಪಾದನೆಯ ಈ ಪ್ರಮಾಣದ ಕಾರಣ ಅವರ ಒಟ್ಟು ಆದಾಯ ರೂ. ೨,೨೫,೦೦೦ ದಿಂದ ರೂ. ೨,೭೫,೦೦೦ ದಷ್ಟಾಯಿತು. ಪ್ರತಿಯೊಬ್ಬ ಸದಸ್ಯರಿಗೂ ೪೦ ಸಾವಿರ ರೂ ಆದಾಯ ಬಂತು. ೨೦೦೯ರಲ್ಲಿ ನಬಾರ್ಡ್ನಲ್ಲಿ ಜಾಯಿಂಟ್ ಲಯಬಲಿಟಿ ಗ್ರೂಪ್ (ಜೆಎಲ್‌ಜಿ) ಎಂದು ನೋಂದಣಿ ಮಾಡಿಕೊoಡ ನಂತರ ಅವರ ಬದುಕಿನ ಯಾನಕ್ಕೆ ಹೊಸ ಆಯಾಮವೇ ಬಂತು. ಕೆಡಿಎಸ್‌ನ ನೂತನ ಅಧಿಕೃತ ನೀತಿಯ ಅನ್ವಯ ನೋಂದಣಿ ಪ್ರಕ್ರಿಯೆ ನಡೆಯಿತು. ಅದರ ಪ್ರಕಾರ ಹೀಗೆ ನೋಂದಣಿಯಾಗಬಯಸುವ ಗುಂಪುಗಳು ವ್ಯವಸಾಯೋತ್ಪನ್ನ ಸಾಲವನ್ನು ತೀರಾ ಕಡಿಮೆ ಬಡ್ಡಿ ದರದಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಿoದ ಪಡೆಯಬಹುದಾಗಿತ್ತು. ೨೦೧೧ರಲ್ಲಿ ಸಿಡಿಎಸ್ ಮತ್ತು ಗ್ರಾಮ ಪಂಚಾಯ್ತಿಗಳು ಕೆಡಿಎಸ್‌ನ ಅಧೀನಕ್ಕೆ ಬಂದವು. ಅವೆಲ್ಲವೂ ಸರಬರಾಜು ಸಂಸ್ಥೆಗಳಾಗಿ ಸಾರ್ವಜನಿಕ ವಲಯ ಮಾರುಕಟ್ಟೆ ಸಹಕಾರ ಘಟಕಗಳಾಗಿ ಬದಲಾದವು. ಈ ಘಟಕಗಳು ಬತ್ತದ ಬೆಳೆಯನ್ನು ಖರೀದಿಸುತ್ತಿದ್ದವು. ಅವು ಸರ್ಕಾರದ ಪರವಾಗಿ ಪ್ರತಿ ಕೆಜಿ ಅಕ್ಕಿಗೆ ಕನಿಷ್ಠ ೧೭ ರೂ. ಬೆಂಬಲ ಬೆಲೆ ನೀಡುತ್ತಿದ್ದವು. ಆ ದಿನಗಳಲ್ಲಿ ಸಗಟು ಮಾರುಕಟ್ಟೆಯ ಬೆಲೆ ಪ್ರತಿ ಕೆಜಿಗೆ ೧೩ ರೂ.ಗಳಷ್ಟಿತ್ತು.

ರಮಣಿ ಅವರ ಕಥೆ ತುಂಬಾ ಸರಳವಾಗಿದೆ. ಅವರಿಗೆ ಬೆನ್ನೆಲುಬಾಗಿ ನಿಂತ ಸಂಸ್ಥೆಗಳು ಸಿಡಿಎಸ್ ಮತ್ತು ಎಡಿಎಸ್ – ಇವೆರಡೂ ಸಂಸ್ಥೆಗಳು ಕೆಡಿಎಸ್‌ನಿಂದ ರೂಪಿತವಾಗಿದ್ದವು. ಅವುಗಳ ನೆರವಿನಿಂದ ಮಹಿಳೆಯರು ಒಟ್ಟು ಗುತ್ತಿಗೆ ಪಡೆದುಕೊಂಡ ಭೂಮಿಯಲ್ಲಿ ಸಾಗುವಳಿ ಮಾಡಲು ಸಾಧ್ಯವಾಯಿತು. ಭೂಮಾಲೀಕರು ಮಾರುಕಟ್ಟೆ
ಸ್ನೇಹಿ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರು. ಹೀಗೆ ಗುತ್ತಿಗೆ ಪಡೆದ ಭೂಮಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡದ ಮಹಿಳೆಯರು ತಮಗೆ ತಿಳಿದ ಭತ್ತವನ್ನೇ ಬೆಳೆದರು. ಆ ಸಂದರ್ಭದಲ್ಲಿ ಅವರಿಗೆ ಎನ್‌ಆರ್‌ಇಜಿಎ ಮತ್ತು ಎನ್‌ಎಚ್‌ಜಿಯಿಂದ ಸಾಲ ಸೌಲಭ್ಯ ದೊರಕಿತು. ಪ್ರಾರಂಭಿಕ ಸವಾಲನ್ನು ಧೈರ್ಯವಾಗಿ ಎದುರಿಸಿದ ಅವರು ಯಶಸ್ಸನ್ನು ತಮ್ಮದಾಗಿಸಿಕೊಂಡರು. ತಮ್ಮ ನಡೆಯಿಂದ ಅವರು ತೋರಿಸಿದ್ದಿಷ್ಟೇ: ಬಂಜರು ಭೂಮಿಯನ್ನೂ ಯಶಸ್ವಿಯಾಗಿ ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಬಹುದು; ಈ ಪ್ರಕ್ರಿಯೆಯ ಮೂಲಕ ಕುಟುಂಬಗಳ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.

ಸಪ್ಲೈ ಕಂಪನಿಯೊoದಿಗೆ ಅವರು ಬೆಳೆಸಿಕೊಂಡ ಸಂಪರ್ಕದಿoದ ಅವರ ಪ್ರಯತ್ನಕ್ಕೆ ಯಶಸ್ಸು ಬಂತು. ಬೆಂಬಲ ಬೆಲೆ ಯೋಜನೆಯ ಮೂಲಕ ಮಾರಾಟ ಮಾಡಲು ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ತಡೆದುಕೊಳ್ಳಲು ಸಾಧ್ಯವಾಯಿತು.

ಈ ಪ್ರಯೋಗದಲ್ಲಿ ಹಲವು ಪಾಠಗಳಿವೆ. ಮಹಿಳೆಯರುಮತ್ತು ಕುಟುಂಬ ವರ್ಗದವರು ಭೂಮಾಲೀಕರ ವಿಶ್ವಾಸವನ್ನು ಗಳಿಸಿದ್ದರು ಆ ಕಾರಣ ಅವರ ಗುತ್ತಿಗೆ ಅವಧಿ ವರ್ಷಕ್ಕೊಮ್ಮೆಮುಂದುವರೆಯುತ್ತಲೇ ಬಂತು. ಕೇರಳದಲ್ಲಿ ಜಮೀನನ್ನು ಗುತ್ತಿಗೆ ನೀಡುವ ಕ್ರಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಜಮೀನು ಗುತ್ತಿಗೆ ನೀಡುವ ಪದ್ಧತಿ ಇಂದಿಗೂ ಮೌಖಿಕ ಮತ್ತುಸಾಧಾರಣ ಪೇಪರ್ ಮೇಲಿನ ಒಪ್ಪಂದಗಳಿoದ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಂತಹ ಪದ್ಧತಿಗಳಿಂದ
ಭೂಮಾಲೀಕರಿಗೆ ಲಾಭವಾಗುತ್ತದೆ. ಗುತ್ತಿಗೆ ನೀಡಿದವರು ಒಪ್ಪಿದರೆ ಮಾತ್ರವೇ ಗುತ್ತಿಗೆದಾರರಿಗೆ ಲಾಭ ದೊರಕುತ್ತದೆ. ಮಾರುಕಟ್ಟೆ ದರದಲ್ಲಿ ಗುತ್ತಿಗೆ ಹಣವನ್ನು ಬಾಡಿಗೆಯಾಗಿ ನೀಡಿದರೂ, ಮಹಿಳೆಯರು ಭತ್ತದಂತಹ ಸರಳ ಬೆಳೆಯನ್ನೇ ಬೆಳೆದು ಸಾಕಷ್ಟು ಲಾಭ ಗಳಿಸಿದರು ಎಂಬುದಿಲ್ಲಿ ಸ್ಪಷ್ಟ. ಸಿಡಿಎಸ್ ಮತ್ತು ಎಡಿಎಸ್ ಸಂಸ್ಥೆಗಳ ಪಾತ್ರವು ಕೇವಲ ಸನ್ನಿವೇಶವನ್ನು ಸೃಷ್ಟಿಸುವುದಕ್ಕಷ್ಟೇ ಸೀಮಿತ; ಕೆಲವು ಮಾತ್ರ ಗುಂಪುಗಳಿಗೆ ಹಿನ್ನೆಲೆಯಲ್ಲಿ ಸಬ್ಸಿಡಿ ನೀಡುವ ದೃಷ್ಟಿಯಿಂದ ಯೋಜನೆಯ ಮೇಲೆ ನಿಗಾ ಇಡುತ್ತವೆ. ಆದರೆ ತಂತ್ರಜ್ಞಾನ ವಿನಿಮಯದ ಅಂಶ ಮಾತ್ರ ತೀರಾ ಕಡಿಮೆ.

ಹಾಗಿದ್ದರೆ ಈ ಮಹಿಳೆಯರ ಬದುಕಿನಲ್ಲಿ ಬದಲಾವಣೆಗೆ ಕಾರಣವಾದ ಅಂಶಗಳೇನು? ಅವರ ಪ್ರಕಾರ ಅವರ ಆದಾಯದ ಮೂಲವು ಹೆಚ್ಚಿತು.

ತಮ್ಮೆಲ್ಲಾ ವೈಯಕ್ತಿಕ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಯಿತು. ಒಂದು ತಂಡವಾಗಿ ಅವರ ನಿವ್ವಳ ಆದಾಯದಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಇತ್ತೀಚೆಗೆ ತಾನೇ ಅವರು ಅರ್ಧ ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಮಹಿಳೆಯರು ತಾವು ಗಳಿಸಿದ ಹಣವನ್ನು ಚಿನ್ನಾಭರಣ ಮತ್ತು ಗೃಹೋಪಯೋಗಿ ಉಪಕರಣಗಳಮೇಲೂ ವಿನಿಯೋಗಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆ ಮಹಿಳೆಯರು ತಮ್ಮ ಬೆಳವಣಿಗೆಯ ಜತೆ ಜತೆಗೆ ತಮ್ಮ ಆಸ್ತಿ,ಪಾಸ್ತಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.

ಕೆಡಿಎಸ್ ನೆರವಿನಿಂದ ಎಲ್ಲರೂ ಒಂದಾಗಿ ಗುತ್ತಿಗೆ ತೆಗೆದುಕೊಂಡು ಮಾಡುವ ಸಾಗುವಳಿ ರೀತಿಯು ಸರಳವಾಗಿದೆ. ಭತ್ತ ಮತ್ತು ಬಾಳೆಹಣ್ಣಿನ ಮುಖ್ಯ ಬೆಳೆಯೊಂದಿಗೆ ಅಂತರಬೆಳೆಯಾಗಿ ತರಕಾರಿ, ಗೆಡ್ಡೆ ಗೆಣಸು ಮತ್ತು ಹಣ್ಣುಗಳನ್ನು ಬೆಳೆಯಲಾರಂಭಿಸಿದರು. ಸರಳತೆಯಲ್ಲೇ ಇದರ ಯಶಸ್ಸು ಅಡಗಿದೆ. ಜೊತೆಗೆ ಮಹಿಳೆಯರ ಸಾಮೂಹಿಕ ನಾಯಕತ್ವ ಮತ್ತು ಪಂಚಾಯತ್ ರಾಜ್‌ಗಳ ಬೆಂಬಲವೂ ಇತ್ತು.

ಮೂಲ: ಲ್ಯಾಂಡೆಸ್ಸ, ಮಹಿಳೆಯರಿಂದ ಭಾರತೀಯ ವ್ಯವಸಾಯ ಪದ್ಧತಿಯ ರೂಪಾಂತರ, ಡಿಸೆಂಬರ್ ೨೦೧೩, ನವದೆಹಲಿ ಇವರ ಆಂಧ್ರಪ್ರದೇಶದ ಇಂದಿರಾ ಕ್ರಾಂತಿ ಪಥಮ್ ಮತ್ತು ಕೇರಳದ ಕುಡುಂಬಶ್ರೀ ಯೋಜನೆಯ ಸಮಗ್ರ ಅಧ್ಯಯನದ ಸಾರ.

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೨, ಜೂನ್ ೨೦೧೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp