ಬಿಸ್ವಮೋಹನ್ ಮೊಹಾಂತಿ
ಸ್ಥಳೀಯ ಪರಿಸರದ ಆಧಾರದಲ್ಲಿ ಮಾಡುವ ಸಣ್ಣ ಹಿಡುವಳಿ ಆಹಾರ ಉತ್ಪಾದನೆಯು ಸುಸ್ಥಿರವಾಗಿದೆ; ಹವಾಗುಣ ಬದಲಾವಣೆಗಳನ್ನು ನಿರೋಧಿಸುತ್ತದೆ; ಹಾಗೂ ಜೀವವೈವಿಧ್ಯವನ್ನು ಪೋಷಿಸುತ್ತದೆ. ಮಾಲ್ಕನಗಿರಿಯ ಆದಿವಾಸಿ ಕೃಷಿಕರು ಪಾರಿಸರಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಬೀಜಗಳ ಮೇಲಿನ ತಮ್ಮ ನಿಯಂತ್ರಣವನ್ನು ಮರಳಿ ಪಡೆದಿದ್ದಾರೆ; ಹಾಗೆಯೇ ತಮ್ಮ ಜೀವನ ನಿರ್ವಹಣೆಯನ್ನೂ…
ಒಡಿಶಾದ ಮಾಲ್ಕನಗಿರಿ ಜಿಲ್ಲೆಯ ಮಲೇಲ್‌ಗುಡ ಒಂದು ಸಣ್ಣ ಗ್ರಾಮ. ಈ ಗ್ರಾಮದಲ್ಲಿ ಸುಮಾರು ೭೮ ಆದಿವಾಸಿ ಕುಟುಂಬಗಳಿವೆ. ಅವರಲ್ಲಿ ಬಹುತೇಕರು ಮಳೆ ಆಧಾರಿತ
ವ್ಯವಸಾಯವನ್ನೇ ನಂಬಿಕೊAಡಿದ್ದಾರೆ. ಆದಿವಾಸಿ ಸಮುದಾಯಗಳು ಸಾಂಪ್ರದಾಯಿಕ ವ್ಯವಸಾಯ ಪದ್ಧತಿಯಲ್ಲಿ ಎತ್ತಿದ ಕೈ. ಆದರೆ ಹಸಿರು ಕ್ರಾಂತಿ ತಂತ್ರಜ್ಞಾನದ ಪ್ರಸರಣದಿಂದಾಗಿ ಹೈಬ್ರಿಡ್ ಬೀಜಗಳ ಮತ್ತು ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದುದರಿಂದ ಇವರೂ ಆಧುನಿಕ ಕೃಷಿ ವಿಧಾನಗಳತ್ತ ಮುಖ ಮಾಡಿದರು. ಆರಂಭಿಕ ವರ್ಷಗಳಲ್ಲಿ ಕಂಡುಬAದ ಇಳುವರಿ ಹೆಚ್ಚಳದಿಂದಾಗಿ ಪ್ರತಿಯೊಬ್ಬರೂ ಹೊಸ ವಿಧಾನಗಳಿಗೇ ಜೋತುಬೀಳುವಂತಾಯಿತು. ಕೆಲ ವರ್ಷಗಳ ನಂತರ, ರೈತರಿಗೆ ಇಳುವರಿಯ ಪ್ರಮಾಣ ಸ್ಥಿರವಾಗಿಲ್ಲ ಎಂಬುದು ಗಮನಕ್ಕೆ ಬಂತು. ಆದರೆ ಆ ಹೊತ್ತಿಗಾಗಲೇ ಅವರ ಮಣ್ಣಿಗೆ, ಅವರ ಜೇಬಿಗೆ ಮತ್ತು ಅವರ ಜೀವನನಿರ್ವಹಣೆಗೆ ಧಕ್ಕೆ ಒದಗಿಯೇಬಿಟ್ಟಿತ್ತು.
ಗ್ರಾಮೀಣ ಪುನರ್ ನಿರ್ಮಾಣ ಮತ್ತು ಏಕೀಕೃತ ಸಾಮಾಜಿಕ ಸೇವಾ ಚಟುವಟಿಕೆ (ORRISSA) ಸಂಸ್ಥೆ ಈ ಪ್ರದೇಶದಲ್ಲಿ ಪ್ರಾಕೃತಿಕ ಬೇಸಾಯ ಪದ್ಧತಿಯನ್ನು ಪುನರುಜ್ಜೀವಿಸುವ ಏಕೈಕ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ೨೦೦೭ರಿಂದ ತನ್ನ ಕಾರ್ಯಾಚರಣೆಯನ್ನು ಆರಂಭಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸುತ್ತ ಬಂದಿದೆ. ಆಹಾರ ಮತ್ತು ಜೀವನ ಶೈಲಿ ಕುರಿತಸಮಸ್ಯೆ ಪರಿಹಾರಕ್ಕೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ ಪರಿಣಾಮವಾಗಿ ತಾವು ಎದುರಿಸುತ್ತಿರುವ ಆಹಾರ ಸಮಸ್ಯೆಯನ್ನು ಬಗೆಹರಿಸಬೇಕಾದರೆ ತಮ್ಮ ಮೂಲಭೂತ ವ್ಯವಸಾಯ ಕ್ರಮದಲ್ಲೇ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದು ಸಮುದಾಯಗಳು ಕಂಡುಕೊoಡವು. ಈ ಹಿನ್ನೆಲೆಯಲ್ಲಿ ಮೊದಲಿಗೆ ಅವರು ಸಾಂಪ್ರದಾಯಿಕ ರೀತಿಯಲ್ಲಿ ಬೀಜೋತ್ಪನ್ನ ಮತ್ತು ಬೀಜ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಲು ನಿರ್ಧರಿಸಿದರು. ಈ ದಿಸೆಯಲ್ಲೇ ಸಮುದಾಯಗಳು ಸಾಂಪ್ರದಾಯಿಕ ಬೀಜಗಳನ್ನು ಹುಡುಕಲು ಆರಂಭಿಸಿದವು.ಆದರೆ ಈ ಕುಟುಂಬಗಳಲ್ಲಿ ಲಭ್ಯವಿದ್ದ ಸ್ಥಳೀಯ ಬೀಜದ ಪ್ರಮಾಣ ತುಂಬಾ ಸೀಮಿತವಾಗಿತ್ತು. ಹತ್ತಿರದ ಹಳ್ಳಿಗಳಿಂದ ಬೀಜ ವಿನಿಮಯ ಪ್ರಕ್ರಿಯೆಯ ಮೂಲಕ ಕಿರುಧಾನ್ಯ ಮತ್ತು ಬೇಳೆಕಾಳುಗಳ ಬೀಜಗಳನ್ನು ಸಂಗ್ರಹಿಸಲಾಯಿತು. ಸ್ಥಳೀಯ ಬೀಜಗಳನ್ನು ಹಲವುಪಟ್ಟು ಹೆಚ್ಚಿಸುವ ಕೆಲಸವನ್ನು ನಿರ್ವಹಿಸುವುದಕ್ಕೆ ಮುಂದಾದ ಹಿರಿಯ ರೈತರನ್ನು ಗ್ರಾಮದ ಮುಖ್ಯಸ್ಥರು ಗುರುತಿಸಿದರು.
ಕುಟುಂಬಗಳು ಕೃಷಿ ವ್ಯವಸ್ಥೆಯಲ್ಲಿ ಜೀವವೈವಿಧ್ಯವನ್ನು ಪೋಷಿಸಲು ಉತ್ತೇಜಿಸುವುದಕ್ಕಾಗಿ ಸಬುಜಾ ಪಾದರ್, ಘರಬಾರಿ ಮುಂತಾದ ಸಾoಪ್ರದಾಯಿಕ ಕೃಷಿ ವಿಧಾನವನ್ನು ಪುನಶ್ಚೇತನಗೊಳಿಸಲು ಸಮುದಾಯಗಳು ನಿರ್ಧರಿಸಿದವು. ಇದನ್ನು ಸಾಧಿಸಲು ಆದಿವಾಸಿ ಕೃಷಿಕ ಗುಂಪುಗಳು ಕ್ಲಸ್ಟರ್ ಮತ್ತು ಹಳ್ಳಿ ಮಟ್ಟದಲ್ಲಿ ಬೀಜನಕಾಶೆಯ ವಿಧಾನವನ್ನು ಅನುಸರಿಸಿದವು.ಇದನ್ನು ಅವುಗಳು ಗ್ರಾಮ ಪಂಚಾಯತ್ ಸಂಘಟನೆಗಳೊAದಿಗೆ ಹಂಚಿಕೊAಡವು. ಈ ಪ್ರಕ್ರಿಯೆಯು ಪ್ರದೇಶದಲ್ಲಿ ಬೆಳೆ ಸಿರಿವಂತಿಕೆಯನ್ನು ಹೆಚ್ಚಿಸುವ ಅವಕಾಶಗಳನ್ನು ತೆರೆಯಿತು. ಬೀಜ ವಿನಿಮಯ ಮಾಡಿಕೊಳ್ಳುವುದು ವೈಯಕ್ತಿಕ ಆಸೆಗಳಿಗೆ ತಕ್ಕಂತೆ ಸ್ಥಳೀಯ ಬೀಜಗಳನ್ನು ಬಳಸುವ ಬದಲಿಗೆ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಸಾಧನವಾಯಿತು.
ಸಾಂಪ್ರದಾಯಿಕ ಮಿಶ್ರತಳಿ ಪದ್ಧತಿಯ ಹೆಚ್ಚುಗಾರಿಕೆಯನ್ನು ಗಮನಿಸಿರುವ ಮಲೇಲ್‌ಗುಡದ ರೈತರು ಇದೀಗ ಪ್ರಾಚೀನ ಸಾಂಪ್ರದಾಯಿಕ ವ್ಯವಸಾಯ ಪದ್ಧತಿಯನ್ನು ಅಳವಡಿಸಲು ನಿರ್ಧರಿಸಿದರು. ಪ್ರಸ್ತುತ ೭೮ ಮನೆಗಳು ಮಿಶ್ರತಳಿ ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿವೆ. ಅದರಲ್ಲಿ ಕಾಳುಗಳು, ಕಿರುಧಾನ್ಯಗಳು, ದ್ವಿದಳ ಧಾನ್ಯಗಳು ಸೇರಿವೆ. ಈ ಬೆಳೆಗಳನ್ನು ರೈತರು ವರ್ಷವಿಡೀ ಬೆಳೆಯಲು ಅನುಕೂಲವಾಗುವಂತೆ ಏಕೀಕೃತಗೊಳಿಸಲಾಗಿದೆ. ಅದರೊಂದಿಗೆ ಭೂಮಿಯ ಫಲವತ್ತತೆಯು ಹೆಚ್ಚಳವಾಗುವಂತೆ, ಹವಾಮಾನ ವೈಪರೀತ್ಯಗಳನ್ನು ಬೆಳೆಗಳು ಸಮರ್ಥವಾಗಿ ಎದುರಿಸುವಂತೆ ನೋಡಿಕೊಳ್ಳಲಾಗುತ್ತಿದೆ. ೨೦೧೪ರಲ್ಲಿ ಸುಮಾರು ೧೦ ಮನೆಗಳು ಒಂದರಿAದ ಆರು ಬಗೆಯ ಬೆಳೆಗಳನ್ನು ಮತ್ತು ಏಳು ಕುಟುಂಬಗಳು ೭-೧೫ ಬಗೆಯ ಬೆಳೆಗಳನ್ನು ತಮ್ಮ ಭೂಮಿಯಲ್ಲಿ ಬೆಳೆದರು.
ಈ ಬೆಳೆಗಳನ್ನು ರೈತರು ವರ್ಷವಿಡೀ ಬೆಳೆಯಲು ಅನುಕೂಲವಾಗುವಂತೆ ಏಕೀಕೃತಗೊಳಿಸಲಾಗಿದೆ. ಅದರೊಂದಿಗೆ ಭೂಮಿಯ ಫಲವತ್ತತೆಯು
ಹೆಚ್ಚಳವಾಗುವಂತೆ, ಹವಾಮಾನ ವೈಪರೀತ್ಯಗಳನ್ನು ಬೆಳೆಗಳು ಸಮರ್ಥವಾಗಿ ಎದುರಿಸುವಂತೆ ನೋಡಿಕೊಳ್ಳಲಾಗುತ್ತಿದೆ.
ಬೇಸಿಗೆ ಕಾಲದಲ್ಲೂ ಈ ಕುಟುಂಬಗಳು ಬೆಳೆಯನ್ನು ಬೆಳೆದವು. ಈ ಕುಟುಂಬಗಳು ಬರ ನಿರೋಧಕ ತರಕಾರಿಗಳನ್ನು ಮತ್ತು ಬಳ್ಳಿ ಬೆಳೆಗಳನ್ನು ಬೆಳೆದವು. ಇರುವ ಮಣ್ಣಿನ ತೇವಾಂಶಕ್ಕೆ ತಕ್ಕಂತೆ ತರಕಾರಿ ಉತ್ಪಾದನೆ ಮಾಡುವುದೇ ಇದರ ಉದ್ದೇಶವಾಗಿತ್ತು. ಮನೆಯಿಂದ ಹೊರ ಹಾಕುವ ತ್ಯಾಜ್ಯ ನೀರನ್ನು ಬಳಸಿ ಗಿಡಗಳ ಸಂರಕ್ಷಣೆ ಮಾಡಲಾಯಿತು. ಆರೋಗ್ಯಕರ ಗಿಡಗಳನ್ನು ಬೆಳೆಯಲು ದ್ರವ ಗೊಬ್ಬರವನ್ನು ಬಳಸಲಾಯಿತು. ಮಹಿಳೆಯರಲ್ಲೇ ಸಕ್ರಿಯಳಾದ ಮಾಂಗುಳಿ ಪಾಂಗಿ ತರಕಾರಿ ಮಾರಾಟವೊಂದರಿoದಲೇ ೨೦೧೨ರ ಸುಡು ಬೇಸಿಗೆಯ ಸಂದರ್ಭದಲ್ಲೂ ೪೫೦೦ ರೂ. ಗಳಿಸಿದಳು. ೨೦೧೪ರಲ್ಲಿ ೩೯ ಕುಟುಂಬಗಳು ತರಕಾರಿಗಳನ್ನು ಮೂರು ತಿಂಗಳ ಕಾಲ ಬೆಳೆದರು ಮತ್ತು ೨೭ ಕುಟುಂಬಗಳು ೪-೬ ತಿಂಗ¼ ಕಾಲ ಬೆಳೆದರು.
ಮಾದರಿ ರೈತರಿವರು
ಗ್ರಾಮಸ್ಥರಲ್ಲಿ ಒಬ್ಬರಾದ ಅರ್ಜುನ್ ದೂರಾ ಈ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಕುಟುಂಬಗಳನ್ನು ಭೇಟಿ ಮಾಡಿದರು. ಬೀಜೋತ್ಪಾದನೆಯ ಪ್ರಮಾಣ ಹೆಚ್ಚಳದ ಬಗ್ಗೆ ಪ್ರಯತ್ನಗಳನ್ನು ಮಾಡಿದ ಮೊದಲಿಗರಾದರು. ಕೇವಲ ಎರಡು ಎಕರೆಯಲ್ಲೇ ಮಿಶ್ರತಳಿಯ ಸಾಂಪ್ರಾಯಿಕ ಬೀಜಗಳನ್ನೇ ಬಿತ್ತನೆ ಮಾಡಿ ಒಂಬತ್ತು ಸದಸ್ಯರಿರುವ ಕುಟುಂಬಕ್ಕೆ ಸಾಕಷ್ಟು ಆಹಾರವನ್ನು ಒದಗಿಸಬಹುದು ಎಂದು ತೋರಿಸಿಕೊಟ್ಟರು. ಅವರು `ತರಳ ಸಾರ’ (ದನದ ಮೂತ್ರ, ಸಗಣಿ ಮತ್ತು ಸ್ಥಳೀಯ ಮರದ ಎಲೆಗಳಿಂದ ತಯಾರಾದ ದ್ರವೀಯ ಗೊಬ್ಬರ) ಎಳ್ಳಿನ ಬೆಳೆಗೆ ಬಳಸಿ ಸ್ಥಳೀಯ ಸೂಕ್ತ ವಿಧಾನಗಳ ಶಕ್ತಿಯನ್ನು ಅರಿತರು. ೨೦೧೨ರ ಹೊತ್ತಿಗೆ ಅರ್ಜುನ್ ಸುವಾಸಿತ ಭತ್ತ ಮತ್ತು ಎಳ್ಳಿನ ಬೆಳೆಯಿಂದ ಸಾಕಷ್ಟು ಹಣವನ್ನು ಸಂಪಾದಿಸಿದರು. ಈ ಹಣದಿಂದ ಸಾಲಕ್ಕಾಗಿ ಮುಟ್ಟುಗೋಲಿಗೆ ಹಾಕಿದ್ದ ನಾಲ್ಕು ಎಕರೆ ಜಮೀನನ್ನು ಮರಳಿ ಪಡೆದುಕೊಂಡರು. ಅರ್ಜುನರ ಪ್ರಯತ್ನಗಳಿಂದ ಇತರರೂ ಪ್ರೇರಿತರಾದರು. ಮಾಂಗುಲಿ ಪಂಗಿ, ಚಂದ್ರಮ ಖಾರಾ, ದುಖಿಯಾ ಬೇಂಡ, ಜಯಾ ಮಡ್ಕಮಿ ಗ್ರಾಮಸ್ಥರೂ ಸಹ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಬೇಸಾಯ ಕ್ರಮವನ್ನು ಮಾಡಿದರು. ಆ ಗ್ರಾಮಸ್ಥರೆಲ್ಲರೂ ಅರ್ಜುನ್ ದೂರಾನ ಜತೆಗೂಡಿ ಸಾಂಪ್ರದಾಯಿಕ ವ್ಯವಸಾಯ ಪದ್ಧತಿಯ ಜಾಗೃತಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಗ್ರಾಮದ ಇತರರನ್ನೂ ಸಹ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಹೀಗೆ ಅರ್ಜುನ್ ದೂರಾರೊಂದಿಗೆ ಈ ರೈತರು ಸಾಂಪ್ರದಾಯಿಕ ವ್ಯವಸ್ಥೆಯ ಮೇಲೆ ಮತ್ತೆ ನಂಬಿಕೆ ಸ್ಥಾಪಿಸಿದರು ಮತ್ತು ಅದರೊಂದಿಗೆ ಬರುವ ಘನತೆಯನ್ನೂ ಮನದಟ್ಟು ಮಾಡಿಕೊಟ್ಟರು.
ಬಿಹಾನ ಮಾ
ಸ್ಥಳೀಯ ಬೀಜಗಳ ಆಯ್ಕೆ ಮತ್ತು ಸಂಸ್ಕರಣೆಯಲ್ಲಿ ಆದಿವಾಸಿ ಮಹಿಳೆಯರ ಪಾತ್ರ ಹಿರಿದು. ಈ ನಿಟ್ಟಿನಲ್ಲಿ ಕ್ರಾಂತಿಯನ್ನೆ ಉಂಟುಮಾಡಿದ ಕಂಚನ್ ಪೂಜಾರಿಯನ್ನು ಮಲೇಲ್‌ಗುಡದ ರೈತ ಸಮುದಾಯದವರು ‘ಬೀಜಗಳ ತಾಯಿ’ ಎಂದೇ ಗುರುತಿಸಿದರು. ಕಂಚನ್, ನೆನಗುದಿಗೆ ಬಿದ್ದ ಪ್ರಾಚೀನ ಬೀಜ ತಳಿಗಳನ್ನು ಪತ್ತೆ ಹಚ್ಚಿದರು. ಇತರೆ ಗ್ರಾಮದಿಂದ ಬೀಜಗಳನ್ನು ತಂದರು. ಅವುಗಳ ಹೆಚ್ಚಳಕ್ಕಾಗಿ ದುಖಿಯಾ ಬೆಂಡ, ಜಯಾ ಮಡ್ಕಾಮಿ, ಮಂಗುಳಿ ಪಾoಗಿ, ಚಂದ್ರಮ ಖಾರ ಅವರಿಗೆ ನೀಡಿದರು. ಆರಂಭದಲ್ಲಿ ಈ ರೈತರು ಕಿರುಧಾನ್ಯ ಮತ್ತು ಬೇಳೆ ಬೆಳೆಗಳನ್ನು ಕೈಗೆತ್ತಿಕೊಂಡರು. ಅದರ ಫಲಾನುಭವವನ್ನು ಕೆಲ ರೈತಾಪಿ ಕುಟುಂಬದವರೊoದಿಗೆ ಹoಚಿಕೊoಡರು. ಅದರಿಂದಾಗಿ ಗ್ರಾಮದ ಕೆಲ ಕುಟುಂಬಗಳೂ ತಮ್ಮ ಕುಟುಂಬ ಕೃಷಿ ಭೂಮಿಯಲ್ಲಿ ಬೆಳೆ ವೈವಿಧ್ಯವನ್ನು ಕಾಪಾಡುವುದರ ಜೊತೆಗೇ ಬೀಜ ವಿನಿಮಯ ಮಾಡಿಕೊಳ್ಳಲೂ
ನೆರವಾಯಿತು.
ಪ್ರತಿಯೊಬ್ಬ ರೈತರಿಗೂ ಕಂಚನ್ ಸಂಪರ್ಕ ಬಿಂದುವಾಗಿದ್ದಾರೆ. ಆಕೆ ರೈತರಿಗೆ ಅವರು ಅನುಸರಿಸಿಕೊಂಡು ಬಂದoತಹ ವ್ಯವಸಾಯ ಪದ್ಧತಿ, ಕೃಷಿ ಭೂಮಿಯನ್ನು ಆಧಾರವಾಗಿಟ್ಟುಕೊಂಡು ನೆರವು ನೀಡುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಮಹಿಳೆಯರು ಋತುಮಾನಕ್ಕೆ ತಕ್ಕುದಾದ ತರಕಾರಿ ನರ್ಸರಿಯನ್ನು ಸ್ಥಾಪಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.
ಎಲ್ಲಾ ಕುಟುಂಬಗಳೂ ಸಸಿಗಳನ್ನು ಸಂಗ್ರಹಿಸಿ ತಮ್ಮ ಮನೆಯ ಹಿತ್ತಲಲ್ಲಿ ಬೆಳೆದುಕೊಳ್ಳಲಿ ಎಂಬುದೇ ಇದರ ಉದ್ದೇಶವಾಗಿತ್ತು. ಹಲವು ವರ್ಷಗಳಿಂದ ಕಂಚನ್ ರೈತರ ನಡುವೆ ವಾರ್ಷಿಕ ಹಾಗೂ ಋತುಮಾನ ಸಂಬoಧಿ ಬೀಜ ವಿನಿಮಯ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಿಂದೆ ಇರುತ್ತಿದ್ದ ಬಾಹ್ಯ ಅವಲಂಬನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಅಂಶವು ಬೀಜ ಮತ್ತು ಇತರೆ ಒಳಸುರಿಗಳಿಗೂ ಅನ್ವಯಿಸುತ್ತದೆ. ಸಮುದಾಯಗಳು ತಮ್ಮದೇ ಆದ ಸಾವಯವ ಗೊಬ್ಬರ ಹಾಗೂ ತ್ಯಾಜ್ಯ ಗೊಬ್ಬರಗಳನ್ನು ತಯಾರಿಸಿಕೊಂಡು ರಸಗೊಬ್ಬರ ಮತ್ತು ಕೀಟನಾಶಕಗಳ ಬದಲಿಗೆ ಬಳಸುತ್ತಿವೆ. ಕಾಂಪೋಸ್ಟ್ ಗುಂಡಿ ನಿರ್ಮಿಸಲು ಸರ್ಕಾರದಿಂದಲೂ ಸೂಕ್ತ ನೆರವು ದೊರೆಯುತ್ತಿದೆ.
ಬಡತನದಿಂದ ಸಮೃದ್ಧಿಯೆಡೆಗೆ ೨೦೦೯ರಲ್ಲಿ ವರ್ಷಕ್ಕೆ ನಾಲ್ಕರಿಂದ ಎಂಟು ತಿಂಗಳು ಮಾತ್ರ ಆಹಾರವನ್ನು ಉತ್ಪಾದಿಸುತ್ತಿದ್ದ ಸಮುದಾಯಗಳು ಇದೀಗ ವರ್ಷದಲ್ಲಿ ಎಂಟು ತಿಂಗಳ ಕಾಲ ಮುಖ್ಯ ಆಹಾರವನ್ನು ಪಡೆಯುತ್ತಿದ್ದಾರೆ ಮತ್ತು ಹತ್ತು ತಿಂಗಳ ಕಾಲ ಬೇರೆ ಆಹಾರಗಳನ್ನೂ ಪಡೆಯುತ್ತಾರೆ. ಸುವಾಸಿತ ಅಕ್ಕಿಯನ್ನು ಮತ್ತು ತರಕಾರಿಗಳನ್ನು
ಪ್ರೀಮಿಯಂ ಬೆಲೆಗೆ ಮಾರುವುದರಿಂದಲೂ ಈ ಕುಟುಂಬಗಳು ತಮ್ಮ ಹಣದ ಅಗತ್ಯವನ್ನು ಪೂರೈಸಿಕೊಳ್ಳುತ್ತಿವೆ.
|
ಆಹಾರೋತ್ಪಾದನೆಗೆ ಅನುಗುಣವಾಗಿ ಮಾಲ್ಕನ್‌ಗಿರಿಯ ಮಲೇಲ್‌ಗುಡ ಗ್ರಾಮಸ್ಥರ ಮಟ್ಟ |
||
|
ಕುಟುಂಬಗಳ |
||
| ಬೆಳೆ | 2010 | 2014 |
| ಭತ್ತ | ||
| ಕುಟುoಬವೊAದಕ್ಕೆ ೧೨ ತಿಂಗಳ ಅವಧಿಯ
ಹೆಚ್ಚುವರಿ ಆಹಾರ |
0 | 11 |
| ಕುಟುಂಬವೊoದಕ್ಕೆ ೧೨ ತಿಂಗಳ ಆಹಾರ | 4 | 18 |
| ಕುಟುಂಬವೊoದಕ್ಕೆ ೯ ತಿಂಗಳ ಆಹಾರ | 15 | 21 |
| ರಾಗಿ | ||
| ಕುಟುಂಬವೊoದಕ್ಕೆ ೧೨ ತಿಂಗಳ ಆಹಾರ | 8 | 11 |
| ಕುಟುಂಬವೊoದಕ್ಕೆ ೯ ತಿಂಗಳ ಆಹಾರ | 7 | 13 |
| ಬೇಳೆಗಳು | ||
| ಕುಟುಂಬವೊoದಕ್ಕೆ ೧೨ ತಿಂಗಳ ಆಹಾರ | 0 | 2 |
| ಕುಟುಂಬವೊoದಕ್ಕೆ ೯ ತಿಂಗಳ ಆಹಾರ | 17 | 28 |
| ಕುಟುಂಬವೊoದಕ್ಕೆ ೬ ತಿಂಗಳ ಆಹಾರ | 10 | 15 |
| ಎಣ್ಣೆ ಬೀಜಗಳು | ||
| ತಾವು ಬೆಳೆದ ಎಣ್ಣೆ ಬೀಜಗಳನ್ನು ಮಾರಾಟ ಮಾಡಿ ರೈತಾಪಿ ಕುಟುಂಬಗಳು ೧೦,೦೦೦ ರೂಪಾಯಿಗಳಿಗೂ ಹೆಚ್ಚು ಆದಾಯ ಗಳಿಸಿದವು. | 5 | 10 |
| ದಿಣ್ಣೆಪ್ರದೇಶಗಳಲ್ಲಿ ಮಿಶ್ರ ಬೆಳೆ (ಸ್ಥಳೀಯ ವೈವಿಧ್ಯಗಳೊಂದಿಗೆ) | ||
| ಕುಟುAಬವೊoದಕ್ಕೆ ೧೨ ತಿಂಗಳ ಆಹಾರ | 2 | 4 |
| ಕುಟುಂಬವೊoದಕ್ಕೆ ೯ ತಿಂಗಳ ಆಹಾರ | 5 | 7 |
| ಕುಟುಂಬವೊAದಕ್ಕೆ ೬ ತಿಂಗಳ ಆಹಾರ | 3 | 10 |
| ಘರ್‌ಬಾರಿ (ಹಿತ್ತಲು ಕೈದೋಟ) | ||
| ಕುಟುಂಬವೊoದಕ್ಕೆ ೧೨ ತಿಂಗಳ ಆಹಾರ | 0 | 4 |
| ಕುಟುಂಬವೊoದಕ್ಕೆ ೯ ತಿಂಗಳ ಆಹಾರ | 5 | 13 |
| ಕುಟುಂಬವೊoದಕ್ಕೆ ೬ ತಿಂಗಳ ಆಹಾರ | 10 | 28 |
ಈ ನಿಟ್ಟಿನಲ್ಲಿ ಹಿಂದೆ ಇರುತ್ತಿದ್ದ ಬಾಹ್ಯ ಅವಲಂಬನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಅಂಶವು ಬೀಜ ಮತ್ತು ಇತರೆ ಒಳಸುರಿಗಳಿಗೂ ಅನ್ವಯಿಸುತ್ತದೆ. ಸಮುದಾಯಗಳು ತಮ್ಮದೇ ಆದ ಸಾವಯವ ಗೊಬ್ಬರ ಹಾಗೂ ತ್ಯಾಜ್ಯ ಗೊಬ್ಬರಗಳನ್ನು ತಯಾರಿಸಿಕೊಂಡು ರಸಗೊಬ್ಬರ ಮತ್ತು ಕೀಟನಾಶಕಗಳ ಬದಲಿಗೆ ಬಳಸುತ್ತಿವೆ. ಕಾಂಪೋಸ್ಟ್ ಗುಂಡಿ ನಿರ್ಮಿಸಲು ಸರ್ಕಾರದಿಂದಲೂ ಸೂಕ್ತ ನೆರವು ದೊರೆಯುತ್ತಿದೆ. ಈ ವಿಧಾನಗಳಿಂದ ಅರ್ಜುನ್ ದೂರಾ, ಲಕ್ಷಿ ್ಮ ಖಿಲಾ ಮತ್ತು ಚಂದ್ರಮ ಖಾರಾ ಮೊದಲಾದವರು ರೈತ ನಾಯಕರಾಗಿ ಹೊಮ್ಮಿರುವುದು ಮತ್ತು ಅವರೆಲ್ಲರೂ ಸ್ಥಳೀಯ ಬೆಳೆಗಳು ಒಣಭೂಮಿ ಸನ್ನಿವೇಶದಲ್ಲೂ ಹವಾಗುಣ ವೈಪರೀತ್ಯಗಳಿಗೆ
ನಿರೋಧಕತೆ ತೋರುತ್ತಿರುವ ಬಗ್ಗೆ ಉತ್ಸಾಹಿತರಾಗಿ ಮಾಹಿತಿ ಹಂಚಿಕೊಳ್ಳುವುದು – ಇದರಿಂಧಾಗಿ ಈ ಅಭಿವೃದ್ಧಿ ಮಾದರಿಯು ಸುಸ್ಥಿರ ಎಂಬ ವಿಶ್ವಾಸವನ್ನು ಮೂಡಿಸಿದೆ.
ಮಲೇಲ್‌ಗುಡದಲ್ಲಿರುವ ರೈತಾಪಿ ವರ್ಗದವರೀಗ ಬೀಜ ಹಾಗೂ ಆಹಾರೋತ್ಪಾದನೆಯ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದಾರೆ. ತಮ್ಮ ಅನುಭವದ ಮೂಲಕವೇ ಬಡತನದ ರೇಖೆ ದಾಟಿ ಮೇಲೇರುವುದು ಹೇಗೆ ಎಂಬುದನ್ನು, ಸಮಾಜದಲ್ಲಿ ಘನತೆಯಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿತುಕೊಂಡಿದ್ದಾರೆ.
Biswamohan Mohanty
Organisation for Rural Reconstruction & Integrated Social Service Activities
(ORRISSA), 40/570, Laxmi Vihar,
Post: Sainik School, Bhubaneswar-751005, Odisha
E-mail: orrissabbsr@gmail.com
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೨, ಜೂನ್ ೨೦೧೪



