ಪರಿವರ್ತನೆಗಳ ಜಾಡಿನಲ್ಲಿ ಕೃಷಿವಿಜ್ಞಾನದ ಮೂಲಕ ಮಹಿಳಾ ಸಬಲೀಕರಣ ಮತ್ತು ಪರಿವರ್ತನೆ


ವ್ಯವಸ್ಥೆಯಿಂದ ಸಬಲೀಕರಣಗೊಂಡಾಗ, ಮಹಿಳೆಯರು ಬದಲಾವಣೆಯ ಸಕ್ರಿಯ ಕರ್ತೃಗಳಾಗಬಹುದು. ಅವರು ತಮ್ಮ ಹಾಗೂ ತಮ್ಮ ಮನೆಯ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಒಡಿಶಾ ಮಿಲೆಟ್ ಮಿಷನ್ (OMM) ಕೃಷಿವಿಜ್ಞಾನದ ಮಾದರಿಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ರೈತರಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ವ್ಯವಸ್ಥಿತವಾಗಿ ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಮಹಿಳೆಯರಿಗೆ ಅಧಿಕಾರ ನೀಡುತ್ತದೆ.


 

ಜಾಗತಿಕ ದಕ್ಷಿಣದಲ್ಲಿನ ಸಣ್ಣ-ಪ್ರಮಾಣದ ರೈತರು ಉಳಿದ ರೈತರು ಎದುರಿಸಿದೇ ಇರುವ ರೀತಿಯಲ್ಲಿ ಹವಾಮಾನ ಬದಲಾವಣೆಗೆ ಗುರಿಯಾಗುತ್ತಾರೆ. ಹವಾಮಾನ ಬದಲಾವಣೆಯಿಂದಾಗಿ ಆಹಾರ ಉತ್ಪಾದನೆಯಲ್ಲಿನ ನಿರೀಕ್ಷಿತ ಇಳಿಕೆಯು ಈ ಪ್ರದೇಶಗಳಲ್ಲಿ ಪೌಷ್ಟಿಕಾಂಶದ ಕೊರತೆಗಳು, ನೈಸರ್ಗಿಕ ಸಂಪನ್ಮೂಲಗಳ ಅವನತಿ ಮತ್ತು ಅಸುರಕ್ಷಿತ ಭೂ ಹಿಡುವಳಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಮಹಿಳೆಯರು, ಸಾಮಾಜಿಕ ದುರ್ಬಲತೆಗಳೊಂದಿಗೆ ಹವಾಮಾನ ಬದಲಾವಣೆಯ ಹೊರೆಯನ್ನು ಹೊರಬೇಕಾಗುತ್ತದೆ. ಈ ಪ್ರದೇಶಗಳಲ್ಲಿನ ವಲಸೆಯು ಗಂಡಸರಿಗಿಂತ ಮಹಿಳೆಯರಿಗೆ ಅಪಾಯಕಾರಿಯಾಗಿದೆ.

ಕೃಷಿ ವಲಯದಲ್ಲಿನ ಅಂತರಾಷ್ಟ್ರೀಯ ಹವಾಮಾನ ಬದಲಾವಣೆಯ ಸಂವಾದವು ಮುಖ್ಯವಾಗಿ ಪಾಶ್ಚಾತ್ಯ ತಾಂತ್ರಿಕ ವಿಧಾನದಿಂದ ರೂಪುಗೊಂಡಿದೆ. ಜಾಗತೀಕರಣಗೊಂಡ ಕೈಗಾರಿಕಾ ಆಹಾರ ವ್ಯವಸ್ಥೆಯ ಅಗತ್ಯತೆಗಳನ್ನು ಆಧಾರಿಸಿದೆ. ಇದು ಜಾಗತಿಕ ದಕ್ಷಿಣದ ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತ ಸಮುದಾಯಗಳಲ್ಲಿ ಮುಖ್ಯವಾಗಿ ಮಹಿಳೆಯರ ಸಂಕಷ್ಟಗಳನ್ನು ಹೆಚ್ಚಿಸುತ್ತದೆ. ಹವಾಮಾನ ನೀತಿಗಳು, ನಿಧಿಗಳು ಮುಖ್ಯವಾಗಿ ಪರಿಣಾಮವನ್ನು ತಗ್ಗಿಸುವ ಬಗ್ಗೆ ಇದೆಯೇ ಹೊರತು ಹೊಂದಾಣಿಕೆ ಕ್ರಮಗಳ ಬಗೆಗಲ್ಲ.

ಸಣ್ಣ ಹಿಡುವಳಿದಾರರ ಜೀವನೋಪಾಯದ ಅನಿಶ್ಚಿತ ಸ್ವರೂಪವನ್ನು ಗಮನಿಸಿದರೆ ಹೊಂದಾಣಿಕೆಯು ಈಗಿನ ಅಗತ್ಯವಾಗಿದೆ. ಸಾಂಪ್ರದಾಯಿಕವಾಗಿ, ಮಳೆಯಾಶ್ರಿತ ಕೃಷಿ ಪರಿಸರ ವ್ಯವಸ್ಥೆಗಳ ಪರಿಸರ ಮತ್ತು ಸಾಮಾಜಿಕ ವಿಕಸನದ ಕಾರಣದಿಂದಾಗಿ, ಸಣ್ಣ ಹಿಡುವಳಿದಾರ ರೈತರು ಹವಾಮಾನದಲ್ಲಿನ ಬದಲಾವಣೆಗಳನ್ನು ಎದುರಿಸಲು ಬೇಕಾದ ಜ್ಞಾನ, ಸಂಪರ್ಕಜಾಲಗಳು ಮತ್ತು ನಿರ್ವಹಣಾ ಪದ್ಧತಿಗಳ ವಿಷಯದಲ್ಲಿ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿದ್ದರು. ಮಹಿಳೆಯರು ಸ್ಥಳೀಯ ಜ್ಞಾನದ ಪಾಲಕರಾಗಿದ್ದಾರೆ (ಉದಾ: ಬೀಜ ಪ್ರಭೇದಗಳು ಅಥವಾ ಕೃಷಿ ಪದ್ಧತಿಗಳು). ಕುಟುಂಬದ ಆಹಾರ ಸುರಕ್ಷತೆಯ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಸಣ್ಣ ಹಿಡುವಳಿದಾರ ರೈತರು ಕೈಗೊಂಡ ಹೊಂದಾಣಿಕೆಯ ಕ್ರಮಗಳು ಜಮೀನಿನಲ್ಲಿ ವೈವಿಧ್ಯೀಕರಣ, ನೀರಿನ ತಂತ್ರಜ್ಞಾನಗಳ ಅಳವಡಿಕೆ ಮತ್ತು ನಿರ್ವಹಣೆ, ಬಿತ್ತನೆ ಮಾಡಲು ಬೆಳೆ ಪ್ರಭೇದಗಳ ಆಯ್ಕೆ ಮತ್ತು ಅಪಾಯಗಳನ್ನು ಕಡಿಮೆ ಮಾಡುವ ತಂತ್ರಗಳನ್ನು ಒಳಗೊಂಡಿವೆ. ಇಂತಹ ಅನೇಕ ಸಾಂಪ್ರದಾಯಿಕ ತತ್ವಗಳನ್ನು ಈಗಿನ ಕೃಷಿ ಪರಿಸರ ವಿಜ್ಞಾನದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಕೃಷಿಪರಿಸರವಿಜ್ಞಾನದ ಅಂಶಗಳು

ಕೃಷಿವಿಜ್ಞಾನ, ಅಥವಾ ಸಾಮಾಜಿಕ ಮತ್ತು ಪರಿಸರ ತತ್ವಗಳ ಅನ್ವಯ ಸುಸ್ಥಿರ ಆಹಾರ ವ್ಯವಸ್ಥೆಗಳ ವಿನ್ಯಾಸ ಮತ್ತು ನಿರ್ವಹಣೆ ಮಾಡುವುದು ಈಗಿರುವ ಸುಸ್ಥಿರವಲ್ಲದ ಆಹಾರವ್ಯವಸ್ಥೆಯ ಬದಲಾವಣೆಗೆ ಭರವಸೆಯ ಮಾರ್ಗವೆಂದು ಗುರುತಿಸಲಾಗಿದೆ. 2019 ರಿಂದ, UN FAO ಆಹಾರ ವ್ಯವಸ್ಥೆಗಳ ರೂಪಾಂತರ ಮತ್ತು ಸ್ಥಿತಿಸ್ಥಾಪಕತ್ವದ ಕಡೆಗಿನ ಕಾರ್ಯಾಚರಣೆಯ ಭಾಗವಾಗಿ “ಕೃಷಿವಿಜ್ಞಾನದ 10 ಅಂಶಗಳು” ಎನ್ನವುದನ್ನು ಜನಪ್ರಿಯಗೊಳಿಸಿದೆ. ಈ ಹತ್ತು ಅಂಶಗಳಲ್ಲಿ, “ಮರುಬಳಕೆ, ದಕ್ಷತೆ, ವೈವಿಧ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಸಮಷ್ಟಿಪರಿಣಾಮ”ಗಳು ಮುಖ್ಯ ಪರಿಸರ ಲಕ್ಷಣಗಳಾಗಿವೆ. “ಜ್ಞಾನದ ಸಹ-ಸೃಷ್ಟಿ, ಮಾನವ ಮತ್ತು ಸಾಮಾಜಿಕ ಮೌಲ್ಯಗಳು, ಸಂಸ್ಕೃತಿ ಮತ್ತು ಆಹಾರ ಸಂಪ್ರದಾಯಗಳು, ಜವಾಬ್ದಾರಿಯುತ ಆಡಳಿತ, ಸುತ್ತೋಲೆ, ಆರ್ಥಿಕತೆಯಲ್ಲಿ ಒಗ್ಗಟ್ಟು”  ಈ ಹೆಚ್ಚುವರಿ ಐದು ಲಕ್ಷಣಗಳು ಕೃಷಿಪರಿಸರದ ಸಾಮಜಿಕ ಹಾಗೂ ರಾಜಕೀಯ ಅಂಶಗಳಾಗಿವೆ. “ಅಗ್ರಿಇಕೊಲಜಿ ಯುರೋಪ್”‌ ಎನ್ನುವ ಯುರೋಪಿಯನ್‌ ಅಸೋಸಿಯೇಷನ್‌, FAO ಕಾರ್ಯಕ್ರಮದ ಚೌಕಟ್ಟಿಗೆ ಕೃಷಿಪರಿಸರವಿಜ್ಞಾನವನ್ನು ಉತ್ತಮಗೊಳಿಸಲು ಕೆಲವು ಮಧ್ಯಸ್ಥಿಕೆಗಳನ್ನು ಸೂಚಿಸಿದೆ. ಕೃಷಿಪರಿಸರ ವಿಜ್ಞಾನದಲ್ಲಿ ಲಿಂಗ ಸೇರ್ಪಡೆಯನ್ನು ನೇರವಾಗಿ ಹೇಳದಿದ್ದರೂ ಸಾಮಾಜಿಕ ಮತ್ತು ರಾಜಕೀಯ ತತ್ವಗಳಲ್ಲಿ ಇದು ಸೂಚಿತವಾಗಿದೆ. ಕೃಷಿಪರಿಸರ ವಿಜ್ಞಾನದ ಬಳಕೆಯಿಂದ ಕೃಷಿಪರಿಸರ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯ ಸಾಮರ್ಥ್ಯಗಳು ಹೆಚ್ಚಿದೆ ಎಂದು ಕ್ಷೇತ್ರದ ಪುರಾವೆಗಳು ತೋರಿಸಿವೆ. ಒರಿಸ್ಸಾ ಮಿಲೆಟ್ ಮಿಷನ್ ತನ್ನ ಕಾರ್ಯಚಟುವಟಿಕೆಯ ಚೌಕಟ್ಟಿನಲ್ಲಿ ಕೃಷಿವಿಜ್ಞಾನದ ಎಲ್ಲಾ ಅಂಶಗಳನ್ನು ಯಶಸ್ವಿಯಾಗಿ ಸಂಯೋಜಿಸಿದ ವಿಶ್ವದ ಏಕೈಕ ಉದಾಹರಣೆಯಾಗಿದೆ. ಇದನ್ನು ಗುರುತಿಸಿಯೇ, UN-FAO ಒರಿಸ್ಸಾ ಮಿಲೆಟ್ ಮಿಷನ್‌ನ ಕೃಷಿ ಪರಿಸರ ವಿಜ್ಞಾನದ ಚೌಕಟ್ಟನ್ನು ವಿಶ್ವದ ಇತರ ದೇಶಗಳಿಗೆ ಅನ್ವಯಿಸಲು ಅಧ್ಯಯನ ಮಾಡುತ್ತಿದೆ.

ಒರಿಸ್ಸಾ ಮಿಲೆಟ್‌ ಮಿಷನ್‌

ಒರಿಸ್ಸಾ ಮಿಲೆಟ್ಸ್ ಮಿಷನ್ (OMM) ಒರಿಸ್ಸಾ ಸರ್ಕಾರದ ಪ್ರಮುಖ ಉಪಕ್ರಮವಾಗಿದ್ದು, ರಾಜ್ಯದಾದ್ಯಂತ ಪ್ಲೇಟ್-ಟು-ಫಾರ್ಮ್ ವಿಧಾನದೊಂದಿಗೆ ಸಿರಿಧಾನ್ಯಗಳನ್ನು ಪುನರುಜ್ಜೀವನಗೊಳಿಸಲು 2017 ರಲ್ಲಿ ಪ್ರಾರಂಭವಾಯಿತು. 1. ಇದು ಕೃಷಿ ಮತ್ತು ರೈತ ಸಬಲೀಕರಣ ಇಲಾಖೆಯ ಮುಖ್ಯ ಉಪಕ್ರಮವಾಗಿದ್ದು, ಆಹಾರ ವ್ಯವಸ್ಥೆಯಲ್ಲಿ ಪೌಷ್ಟಿಕಾಂಶದ ಕೊರತೆಗಳನ್ನು ಪರಿಹರಿಸುವಲ್ಲಿ ಮುಖ್ಯಪಾತ್ರ ವಹಿಸಿದೆ. ಪೌಷ್ಟಿಕಾಂಶ ಭರಿತ ರಾಗಿಯ ಮನೆಬಳಕೆ ಹೆಚ್ಚಿಸುವುದರ ಜೊತೆಗೆ ರಾಜ್ಯ ಪೌಷ್ಟಿಕಾಂಶ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ವಿತರಿಸಲು ಮುಂದಾಯಿತು. OMM ಪ್ರಸ್ತುತ ಒರಿಸ್ಸಾದ ಎಲ್ಲಾ 30 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ 2023 ರ ಹೊತ್ತಿಗೆ, OMM 264,000 ಹೆಕ್ಟೇರ್‌ಗಳಷ್ಟು ಭೂಮಿಯನ್ನು ಆವರಿಸಿದ್ದು, 202,784 ಸಿರಿಧಾನ್ಯಗಳ ರೈತರಿಗೆ ಪ್ರಯೋಜನಕಾರಿಯಾಗಿದೆ. 2. ಇದು ಕೃಷಿ ಪರಿಸರದ ವೈಶಿಷ್ಟ್ಯಗಳನ್ನು ಮತ್ತು ಗ್ರಾಮೀಣ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಕಡಿಮೆ ಮಾಡುವಲ್ಲಿ OMM ನ ಪರಿಣಾಮವನ್ನು ದಾಖಲಿಸುತ್ತದೆ.

ಚೌಕ ೧

ಸುಂದರ್‌ಗಢ್ ಜಿಲ್ಲೆಯ ಭೂರಹಿತ ಕೂಲಿ ಕಾರ್ಮಿಕಳಾದ ಜ್ಯೋತಿ ತನ್ನ ಹಳ್ಳಿಯಲ್ಲಿ ಪಾಳು ಬಿದ್ದಿದ್ದ ಒಂದು ಎಕರೆ ಜಮೀನಿನನ್ನು ಗೇಣಿಗೆ ತೆಗೆದುಕೊಂಡು ಬೆಳೆ ಬೆಳೆಯಲು ಮುಂದಾದಳು. OMM ಮೂಲಕ ತರಬೇತಿ ಪಡೆದ ನಂತರ, ಕೃಷಿ ಅಭ್ಯಾಸಗಳನ್ನು ಅನುಸರಿಸಿದಳು ಮತ್ತು ಸ್ವತಃ ಜೈವಿಕ ಒಳಹರಿವುಗಳನ್ನು ಸಿದ್ಧಪಡಿಸಿ ಮತ್ತು ಬಳಸಿದಳು. ಕಾಲಕ್ರಮೇಣ ಹೆಚ್ಚಿನ ಇಳುವರಿ ಗಳಿಸಿದಳು. ಹೆಚ್ಚುವರಿ ಆದಾಯದೊಂದಿಗೆ ಅವಳು ಮತ್ತಷ್ಟು ಪಾಳುಭೂಮಿಯಲ್ಲಿ ಕೃಷಿಯನ್ನು ಆರಂಭಿಸಿದಳು. ಮಾರುಕಟ್ಟೆಗಾಗಿ ಮುಖ್ಯ ಸಿರಿಧಾನ್ಯದ ಬೆಳೆಯೊಂದಿಗೆ ಉಳಿದ ಬೆಳೆಗಳನ್ನು ಬೆಳೆದಳು. ಅವಳು ತನ್ನ ಹಿತ್ತಲಿನಲ್ಲಿ ಕೋಳಿಸಾಕಣೆ ಮಾಡುವ ಮೂಲಕ, ತನ್ನ ಸುತ್ತಲಿದ್ದ ಉಳಿದ ರೈತರಿಗೆ ಎರೆಹುಳುಗೊಬ್ಬರ ಮಾರುವ ಮೂಲಕ ಕೃಷಿಆದಾಯವನ್ನು ಹೆಚ್ಚಿಸಿಕೊಂಡಳು. ಈ ಪ್ರಗತಿಪರ ರೈತಮಹಿಳೆಯು ಉಳಿದವರಿಗೆ ಸ್ಪೂರ್ತಿಯಾದಳು. ವೈಯುಕ್ತಿಕವಾಗಿ ಉಳಿದ ರೈತಮಹಿಳೆಯರನ್ನು ವೈವಿಧ್ಯಮಯ ಆಹಾರ ಉತ್ಪಾದನೆಯಲ್ಲಿ ತೊಡಗಿಕೊಳ್ಳಲು ಉತ್ತೇಜಿಸಿದಳು. ಉತ್ತಮ ಪೌಷ್ಟಿಕಾಂಶ ಮತ್ತು ಹೆಚ್ಚುವರಿ ಆದಾಯದ ಲಾಭವನ್ನು ಇದರಿಂದ ಪಡೆಯಬಹುದು ಎನ್ನುವುದನ್ನು ತೋರಿಸಿದಳು.

 

ಕೃಷಿಪರಿಸರವಿಜ್ಞಾನವನ್ನು ತತ್ವಗಳಿಂದ ವ್ಯಾಖ್ಯಾನಿಸಲಾಗಿದೆಯೇ ಹೊರತು ರೂಢಿಗತ ಪದ್ಧತಿಗಳಿಂದಲ್ಲ. ಯಾವುದೇ ಆಹಾರ ಅಥವಾ ಕೃಷಿ ಪದ್ಧತಿಯು ಎಷ್ಟರಮಟ್ಟಿಗೆ ಕೃಷಿಪರಿಸರವಿಜ್ಞಾನಕ್ಕೆ ಅನುಸಾರವಾಗಿದೆ ಎನ್ನುವುದನ್ನು ಅದು ಎಷ್ಟರಮಟ್ಟಿಗೆ ಅದರ ಲಕ್ಷಣಗಳನ್ನು ಯಾವ ಮಟ್ಟಕ್ಕೆ ಒಳಗೊಂಡಿದೆ ಎನ್ನುವುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಬಹುದು. ಆಗ್ರೋಇಕಾಲಜಿ ಯುರೋಪಿನ ಐದು ಅಂಶಗಳು ಕೃಷಿಪರಿಸರ ವ್ಯವಸ್ಥೆಯ ಪ್ರಮಾಣವನ್ನು ಅಳೆಯಲು ಅನುವುಮಾಡಿಕೊಡುತ್ತದೆ (ಚಿತ್ರ 1).

**Footnote: ಅಡಿಟಿಪ್ಪಣಿ:

  1. OMM ಗೆ ಸಂಬಂಧಿಸಿದ ಮಹಿಳಾ ಉದ್ಯಮಗಳ ಕುರಿತು ನವೀಕರಿಸಿದ ಸಂಗತಿಗಳು ಮತ್ತು ಅಂಕಿಅಂಶಗಳನ್ನು ಪ್ರಕಾಶ್ ಮಲ್ಲಿಕ್ ಅಸೋಸಿಯೇಟ್ ರಾಜ್ಯ ಸಂಯೋಜಕ, WASSAN ಒದಗಿಸಿದೆ. WASSAN OMM ಸಚಿವಾಲಯದ ಭಾಗವಾಗಿದ್ದು, ಅದರ ತಾಂತ್ರಿಕ ವಿನ್ಯಾಸ ಮತ್ತು ಅನುಷ್ಠಾನ ಪಾಲುದಾರ ಸಂಸ್ಥೆಯಾಗಿದೆ. ಉಳಿದೆಲ್ಲ ಸಂಗತಿಗಳನ್ನು OMM ಅಧಿಕೃತ ವೆಬ್ಸೈಟ್ https:// milletsodisha.com ನಿಂದ ತೆಗೆದುಕೊಳ್ಳಲಾಗಿದೆ.
  1. ಲೇಖನವನ್ನು ಬರೆಯುವ ಸಮಯದಲ್ಲಿ, ಮಹಿಳೆಯರ ಮೇಲೆ OMM ಪ್ರಭಾವದ ಬಗ್ಗೆ ವಿವರವಾದ ಮಾಹಿತಿಯು ಲಭ್ಯವಿರಲಿಲ್ಲ. ಆದರೆ OMM ನಿಂದ ಲಾಭ ಪಡೆದ ರೈತರಲ್ಲಿ ಕನಿಷ್ಠ ಅರ್ಧದಷ್ಟು ಮಂದಿ ಮಹಿಳೆಯರು ಎಂದು ಊಹಿಸಬಹುದು.
  2. https://www.agroecology-europe.org/the-13-

principles-of-agroecology/ ಇಂದ ತೆಗೆದುಕೊಳ್ಳಲಾಗಿದೆ.

 ಪ್ರತಿ ಹಂತದಲ್ಲೂ ಮಹಿಳೆಯರು ಯಾವ ರೀತಿ ಲಾಭ ಪಡೆದಿದ್ದಾರೆ

ಇಲ್ಲಿ ಪ್ರತಿಯೊಂದು ಹಂತಗಳಲ್ಲಿ OMM ನ ಕೆಲವು ವಿನ್ಯಾಸ ವೈಶಿಷ್ಟ್ಯಗಳ ವಿಶ್ಲೇಷಣೆಯನ್ನು ದಾಖಲಿಸಲಾಗಿದೆ. ಪ್ರತಿ ಹಂತದಲ್ಲಿ ಹೇಗೆ ಮಹಿಳೆಯರನ್ನು ಸಬಲೀಕರಣಗೊಳಿಸಲಾಯಿತು ಎನ್ನುವುದನ್ನು ಉದಾಹರಣೆಗಳೊಂದಿಗೆ ನೀಡಲಾಗಿದೆ.

) ಹಂತ 5 (ಕೃಷಿ ಪರಿಸರವಿಜ್ಞಾನ ತತ್ವಗಳು: ಭಾಗವಹಿಸುವಿಕೆ, ಸ್ಥಳೀಯತೆ, ನ್ಯಾಯಸಮ್ಮತತೆ ಮತ್ತು ನ್ಯಾಯ)

‌ಟಿಟ್ಟೊನಲ್‌ ಮತ್ತು ಇತರರ ಪ್ರಕಾರ (2020) ಜಮೀನುಗಳಿಂದ ಹಿಡಿದು ಇಡೀ ಕೃಷಿ ವಲಯದಲ್ಲಿನ  ಕೃಷಿಪರಿಸರವಿಜ್ಞಾನದ ವ್ಯವಸ್ಥೆಯ ಮಾಪನ ಮಾಡಲು ಪ್ರತಿಹಂತದಲ್ಲೂ ಹೆಚ್ಚಿನ ಸಂಖ್ಯೆಯ ಮಧ್ಯಸ್ಥಿಕೆದಾರರನ್ನು ಒಳಗೊಳ್ಳಬೇಕಾಗುತ್ತದೆ. ಇದು ಸಂಕೀರ್ಣತೆಯನ್ನು ಹೆಚ್ಚಿಸುತ್ತದೆ. ಈ ಸರ್ಕಾರಿ ಕಾರ್ಯಕ್ರಮದ ಉದ್ದೇಶ ಕೃಷಿಪರಿಸರವಿಜ್ಞಾನದ ಉಪಕ್ರಮದ ಭಾಗವಾಗಿ ಹಲವು ಮಧ್ಯಸ್ಥದಾರರೊಂದಿಗೆ ಕೂಡಿ ಸಾರ್ವಜನಿಕ ಆರೋಗ್ಯಕರ ಆಹಾರಕ್ರಮವನ್ನು ಪ್ರಚುರಪಡಿಸುವುದು. OMM ನ ವಿನ್ಯಾಸವು ಇದನ್ನು ತನ್ನ ಕಾರ್ಯಕ್ರಮದ  ರೂಪುರೇಷೆಯಲ್ಲಿ ಒಳಗೊಂಡಿದೆ (ಚಿತ್ರ 1) ಅಂದರೆ 4 ಮತ್ತು 5ನೇ ಹಂತಗಳು.

OMM ವಿಕೇಂದ್ರೀಕೃತ ವಿಧಾನದ ಮೂಲಕ ವಿವಿಧ ಹಂತಗಳಲ್ಲಿ ಮಧ್ಯಸ್ಥಗಾರರನ್ನು ಒಗ್ಗೂಡಿಸುತ್ತದೆ. ಈ ಮಧ್ಯಸ್ಥಗಾರರು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳು, ಸಾರ್ವಜನಿಕ ಹೂಡಿಕೆಯನ್ನು ನಿರ್ವಹಿಸುವ ಸರ್ಕಾರಿ ಇಲಾಖೆಗಳು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಎನ್‌ಜಿಒಗಳಿಗೆ ಸೇರಿದವರಾಗಿರುತ್ತಾರೆ. ಇವರು 143 ಬ್ಲಾಕ್‌ಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಹಾಯಮಾಡುತ್ತಾರೆ. ಮಾರ್ಚ್ 2023 ರ ಹೊತ್ತಿಗೆ, 116 ರೈತ ಉತ್ಪಾದಕ ಸಂಸ್ಥೆಗಳು (ಎಲ್ಲವೂ ಮಹಿಳಾ ರೈತರನ್ನು ಒಳಗೊಂಡಿವೆ. ಕೆಲವು ಸಂಸ್ಥೆಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ). 1,869 ಮಹಿಳಾ ಸ್ವಸಹಾಯಗುಂಪುಗಳು (WSHGs) OMM ನ ಭಾಗವಾಗಿದೆ. ನ್ಯಾಯೋಚಿತ ಮತ್ತು ಖಚಿತವಾದ ಬೆಲೆಗಳು, ಸಿರಿಧಾನ್ಯಗಳ ಸ್ಥಳೀಯ ಸಂಗ್ರಹಣೆ, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಗ್ಗೂಡಿಸುವುದು, ಲಿಂಗ ಸಂವೇದನೆ, ಇವೆಲ್ಲವೂ OMM ನ ವಿಶಿಷ್ಟ ಲಕ್ಷಣಗಳಾಗಿವೆ. ಇದು ಇಡೀ ಆಹಾರ ವ್ಯವಸ್ಥೆಯನ್ನು ಹವಾಮಾನ-ನಿರೋಧಕ ಸಿರಿಧಾನ್ಯಗಳಿಗೆ ವ್ಯಾಪಕವಾಗಿ ಬದಲಾಗುವಂತೆ ಮಾಡಿದೆ. ಸರ್ಕಾರವು ಬಂಡವಾಳ ಮತ್ತು ತರಬೇತಿಗೆ ನೀಡುತ್ತಿರುವ ಹಣಕಾಸಿನ ಬೆಂಬಲದಿಂದ ಮಹಿಳಾ ರೈತರು ಈ ಸಿರಿಧಾನ್ಯ ಮೌಲ್ಯ ಸರಪಳಿಯಲ್ಲಿ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಅವರೀಗ ಧಾನ್ಯಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಸ್ಕರಣಾ ಘಟಕಗಳನ್ನು ನಡೆಸುತ್ತಿದ್ದಾರೆ. ಆಗಸ್ಟ್ 2023ರವರೆಗೆ ನೋಡಿದಾಗ 1382 ರಾಗಿ ಸಂಸ್ಕರಣಾ ಘಟಕಗಳು ಮತ್ತು 229 ಆಹಾರ ಮಳಿಗೆಗಳು ಮಹಿಳೆಯರಿಂದ ನಡೆಸಲ್ಪಡುತ್ತಿವೆ. ಇದು ಅವರಿಗೆ ಸ್ಥಿರವಾದ ಮಾಸಿಕ ಆದಾಯವನ್ನು ಒದಗಿಸುತ್ತಿದೆ. ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿದೆ.

ಬಿ) ಹಂತ 4 (ಕೃಷಿ ಪರಿಸರ ತತ್ವಗಳು: ಪರ್ಯಾಯ ಆಹಾರ ಜಾಲಗಳ ಅಭಿವೃದ್ಧಿ)

ಬದಲಿ  ಸಿರಿಧಾನ್ಯ ಆಹಾರ ವ್ಯವಸ್ಥೆಯನ್ನು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುವುದರೊಂದಿಗೆ ಪ್ರಚಾರಗಳೊಂದಿಗೆ ನಡವಳಿಕೆಯಲ್ಲಿ ಬದಲಾವಣೆ ತರುವ ಮೂಲಕ ಯಶಸ್ವಿಯಾಗಿ ಅಭಿವೃದ್ಧಿಗೊಳಿಸಲಾಗಿದೆ. ರಾಜ್ಯ ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಸಿರಿಧಾನ್ಯಗಳ ಸಂಗ್ರಹಣೆ ಮಾಡಲು ನೀತಿಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ಖಾಸಗಿ ಮಾರುಕಟ್ಟೆಗಳಿಗೆ ಪೂರೈಸಲು ಮಹಿಳಾ ಸ್ವಸಹಾಯಗುಂಪುಗಳು ಉದ್ಯಮಿಗಳಾಗಲು ಬೆಂಬಲ ನೀಡಲಾಯಿತು. ಮಹಿಳಾ ಸ್ವಸಹಾಯ ಸಂಘಗಳು ಸಿರಿಧಾನ್ಯ ಆಧಾರಿತ ರಸ್ತೆಬದಿ ಆಹಾರ, ರೆಡಿ ಟು ಕುಕ್‌ ಅಥವಾ ರೆಡಿ ಟು ಆಹಾರಗಳನ್ನು ತಯಾರಿಸಿ ಅವುಗಳನ್ನು ರಾಜ್ಯ ಪೌಷ್ಟಿಕಾಂಶ ಕೇಂದ್ರಗಳು ಹಾಗೂ ಖಾಸಗಿ ಅಂಗಡಿಗಳಿಗೆ ಒದಗಿಸಿದವು.

ಮಹಿಳಾ ಸ್ವಸಹಾಯ ಸಂಘಗಳು ವಿಭಿನ್ನ ಗಾತ್ರದ 4 ವಿಭಿನ್ನ ರೀತಿಯ ಆಹಾರ ಮಳಿಗೆಗಳನ್ನು ನಿರ್ವಹಿಸುತ್ತವೆ. ಜನರ ವಿವಿಧ ಆಹಾರ ಅಗತ್ಯಗಳನ್ನು ಪೂರೈಸುತ್ತಿವೆ. ಈ ಮಳಿಗೆಗಳಿಗೆ ಆರಂಭಿಕ ಬಂಡವಾಳವನ್ನು ಸರ್ಕಾರವು ಒದಗಿಸುತ್ತದೆ. ಮಳಿಗೆಯ ಎಲ್ಲಾ ಕಾರ್ಯಾಚರಣೆಯ ವೆಚ್ಚಗಳನ್ನು ಮಹಿಳಾ ಸ್ವಸಹಾಯ ಸಂಘಗಳು ನೋಡಿಕೊಳ್ಳುತ್ತವೆ. ಸಣ್ಣ ಆಹಾರ ಮಳಿಗೆಯಾದ ಮಿಲ್ಲೆಟ್‌ ಟಿಫಿನ್‌ ಸೆಂಟರ್‌ನ ಪ್ರತಿ ಘಟಕವು ಮಾಸಿಕ ರೂ. 30,000 ಗಳಿಸುತ್ತಿದೆ. OMM ನ ಅತಿ ದೊಡ್ಡ ಆಹಾರ ಮಳಿಗೆಯಾದ ಮಿಲೆಟ್ ಶಕ್ತಿ ಕೆಫೆಯ ಪ್ರತಿ ಘಟಕವು ರೂ. 200,000 ಗಳಿಸುತ್ತಿದೆ. OMM ಅಡಿಯಲ್ಲಿ 2 ಜಿಲ್ಲೆಗಳಲ್ಲಿ ಅಂಗನವಾಡಿಗಳು ಅಥವಾ ರಾಜ್ಯ ಪೌಷ್ಟಿಕಾಂಶ ಕೇಂದ್ರಗಳಲ್ಲಿ ಮಕ್ಕಳ ಆಹಾರದಲ್ಲಿ ಸಿರಿಧಾನ್ಯಗಳನ್ನು ಪ್ರಾಯೋಗಿಕವಾಗಿ ಸೇರಿಸಲಾಗಿದೆ. ಇದರಲ್ಲಿ ಒಂದು ಜಿಲ್ಲೆಯಾದ ಕಿಯೋಂಜಾರ್‌ನಲ್ಲಿ ಎಲ್ಲಾ ಅಂಗನವಾಡಿಗಳಲ್ಲಿನ 27,000 ಮಕ್ಕಳಿಗೆ ಪ್ರತಿ ತಿಂಗಳು 8 ರಾಗಿ ಲಡ್ಡುಗಳನ್ನು ನೀಡಲಾಗುತ್ತಿದೆ. 59 ಮಹಿಳಾ ಸ್ವಸಹಾಯ ಸಂಘಗಳು, ಪ್ರಸ್ತುತ ಲಾಡೂಗಳಿಗೆ ರಾಗಿ ಹಿಟ್ಟನ್ನು ಪೂರೈಸುವಲ್ಲಿ ತೊಡಗಿಕೊಂಡಿವೆ. ಇದರಿಂದ ಮಾಸಿಕ ರೂ. 30,000 ಲಾಭ ಗಳಿಸುತ್ತಿದೆ. ಈ ಸಂಘಗಳು ಲಾಡುಗಳನ್ನು ಮಾಡಿ ಅಂಗನವಾಡಿಗಳಿಗೆ ಮಾರುವ ಮೂಲಕ ಮಾಸಿಕ ಸರಾಸರಿ ರೂ. 16500 ಲಾಭ ಗಳಿಸುತ್ತಿವೆ.

ಸಿ) ಹಂತ 3 (ಕೃಷಿ ಪರಿಸರ ತತ್ವ: ಕೃಷಿ ಪರಿಸರ ವ್ಯವಸ್ಥೆಗಳ ಮರುವಿನ್ಯಾಸ)

 ಪರಿಸರ ವ್ಯವಸ್ಥೆಗಳ ಜೈವಿಕ ವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಕೃಷಿ ಪರಿಸರವಿಜ್ಞಾನದ ಮುಖ್ಯ ಅಂಶವಾಗಿದೆ. ಭಾಗವಹಿಸುವ ವೈವಿಧ್ಯಮಯ ಪ್ರಯೋಗಗಳ ಮೂಲಕ ರೈತರ ಆದ್ಯತೆಯ ಭೂಪ್ರದೇಶಗಳನ್ನು ಸಂಶೋಧಿಸಲು OMM ಬೆಂಬಲ ವ್ಯವಸ್ಥೆಗಳನ್ನು ಸ್ಥಾಪಿಸಿದೆ. ರಾಗಿ ಉತ್ಪಾದನೆ ಮತ್ತು ಬಳಕೆಯನ್ನು ವಿಕೇಂದ್ರೀಕರಿಸಲಾಯಿತು. OMM ವಿವಿಧ ಸ್ಥಳೀಯ ತಳಿಗಳ ಕುರಿತು ಪ್ರಯೋಗಗಳನ್ನು ನಡೆಸಲು ಮುಂದಾದ ರೈತರಿಗೆ ಬೆಂಬಲ ವ್ಯವಸ್ಥೆಯನ್ನು ಒದಗಿಸಿತು. ಈ ಪ್ರಯೋಗಗಳು ವಿವಿಧ ಹಂತಗಳನ್ನು ಒಳಗೊಂಡಿತ್ತು. ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ವಿಕೇಂದ್ರೀಕರಣಗೊಳಿಸಲಾಯಿತು. ವಿವಿಧ ಭೂಪ್ರದೇಶಗಳ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸಮುದಾಯ-ನಿರ್ವಹಣೆಯ ಬೀಜ ಕೇಂದ್ರಗಳನ್ನು (CMSCs) ಪ್ರತಿ ಬ್ಲಾಕ್‌ನಲ್ಲಿ ಸ್ಥಾಪಿಸಲಾಗಿದೆ. ಈ CMSC ಗಳನ್ನು ರೈತರಿಂದ ಬೀಜಗಳನ್ನು ಸಂಗ್ರಹಿಸುವ ನೋಂದಾಯಿತ ರೈತ ಉತ್ಪಾದಕ ಸಂಸ್ಥೆಗಳು (FPOs) ನಿರ್ವಹಿಸುತ್ತವೆ. ಮಾರುಕಟ್ಟೆಗಾಗಿ ಬೀಜ ಶುದ್ಧೀಕರಣ, ಉಪಚಾರ ಹಾಗೂ ದ್ವಿಗುಣಗೊಳಿಸುವಿಕೆಗೆ ನಿಯಮಗಳನ್ನು ರೂಪಿಸಲಾಗಿದೆ. ಮಹಿಳಾ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಜೈವಿಕ ಒಳಸುರಿಯುವಿಕೆಗಳ ಮೂಲಕ ಬೀಜೋಪಚಾರ ಮಾಡುವುದು, ಬೀಜ ಸಂಗ್ರಹಣೆ ಮತ್ತು ಮಾರಾಟಗಳಲ್ಲಿ ತೊಡಗಿಕೊಂಡಿದೆ.

ಡಿ) ಹಂತ 2 (ಕೃಷಿ ಪರಿಸರ ತತ್ವ: ಕೃಷಿ ಪರ್ಯಾಯಗಳು)

OMM ಜಾಗೃತಿ, ತರಬೇತಿ ಮತ್ತು ಆರಂಭಿಕ ಬಂಡವಾಳವನ್ನು ಒದಗಿಸುವ ವಿಷಯದಲ್ಲಿ ಅಗತ್ಯ ಬೆಂಬಲ ವ್ಯವಸ್ಥೆಗಳನ್ನು ಒದಗಿಸಿತು. ಇದು ರೈತರಿಗೆ ಜೈವಿಕ ಒಳಸುರಿಯುವಿಕೆಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ಬೆಳೆಯುತ್ತಿರುವ ಮಾರುಕಟ್ಟೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಜಶಿಪುರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್ (JFPCL) ನ ಆರ್ಥಿಕ ಬೆಂಬಲ ಮತ್ತು ತಾಂತ್ರಿಕ ಮಾರ್ಗದರ್ಶನದೊಂದಿಗೆ ಮಯೂರ್‌ಭಂಜ್ ಜಿಲ್ಲೆಯ ಮಾ ಹಿಂಗುಲಾ ಮಹಿಳಾ ಸ್ವಸಹಾಯ ಸಂಘ 2020 ರಲ್ಲಿ ಜೈವಿಕ ಒಳಸುರಿಯುವಿಕೆ ಘಟಕವನ್ನು ಪ್ರಾರಂಭಿಸಿತು. ಆಗ ಆ ಬ್ಲಾಕಿನಲ್ಲಿ (ಸ್ಥಳೀಯ ಆಡಳಿತ ಘಟಕ) ಜೈವಿಕ ಒಳಸುರಿಯುವಿಕೆ 5000 ಲೀಟರ್‌ಗಳಿಗೆ ಮಾರುಕಟ್ಟೆಯಿದ್ದು ಭವಿಷ್ಯದಲ್ಲಿ ಬೆಳೆಯಬಹುದೆಂದು ಅಂದಾಜಿಸಲಾಯಿತು.

JFPCL ಮಾರ್ಕೆಟಿಂಗ್ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.  ಸ್ವಸಹಾಯ ಸಂಘದ ಸದಸ್ಯರು ಭವಿಷ್ಯದಲ್ಲಿ ಸುರಕ್ಷಿತ ಆದಾಯ ಸಿಗುವುದರ ಬಗ್ಗೆ ಸಾಕಷ್ಟು ಭರವಸೆ ಹೊಂದಿದ್ದಾರೆ. ಸಿರಿಧಾನ್ಯ ಕೃಷಿ ಮಾತ್ರವಲ್ಲದೆ ಭತ್ತ, ತರಕಾರಿ ಕೃಷಿಯಲ್ಲೂ ಜನರು ಈ ಒಳಸುರಿಯುವಿಕೆಗಳನ್ನು ಬಳಸುತ್ತಿದ್ದಾರೆ ಎಂದು ಅವರು ಸಂತೋಷಪಡುತ್ತಾರೆ.

) ಹಂತ 1 (ಕೃಷಿ ಪರಿಸರ ತತ್ವ: ಒಳಸುರಿಯುವಿಕೆಗಳ ದಕ್ಷತೆಯ ಹೆಚ್ಚಳ)

ಇಳುವರಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಒಳಸುರಿಯುವಿಕೆಗಳ ದಕ್ಷತೆಯನ್ನು ಹೆಚ್ಚಿಸಲು OMM ರೈತರಿಗೆ ಕೃಷಿ ಪರಿಸರ ಅಭ್ಯಾಸಗಳಲ್ಲಿ ತರಬೇತಿ ನೀಡಿದರು. ಇಂತಹ ಪದ್ಧತಿಗಳಿಗೆ ಅಗತ್ಯವಿರುವ ಸೈಕಲ್ ವೀಡರ್ ನಂತಹ ಕೃಷಿ ಉಪಕರಣಗಳನ್ನು ಬಾಡಿಗೆ ಕೇಂದ್ರಗಳ ಮೂಲಕ ರೈತರಿಗೆ ಲಭ್ಯವಾಗುವಂತೆ ಮಾಡಲಾಯಿತು. ಕಡಿಮೆಯಾದ ಒಳಸುರಿಯುವಿಕೆಗಳ ವೆಚ್ಚಗಳು, ಹೆಚ್ಚಿದ ಉತ್ಪಾದಕತೆ, ಕಡಿಮೆ GHG ಹೊರಸೂಸುವಿಕೆ, ಕಡಿಮೆಯಾದ ನೀರಿನ ಬಳಕೆ ಮತ್ತು ಮಣ್ಣಿನ ಗುಣಮಟ್ಟ ಸುಧಾರಣೆಯಂತಹ ಹಲವಾರು ಪ್ರಯೋಜನಗಳನ್ನು ರೈತರು ವರದಿ ಮಾಡಿದ್ದಾರೆ. ವಿಶ್ವ ಆಹಾರ ಕಾರ್ಯಕ್ರಮವು OMMನ ಲಿಂಗ ಒಳಗೊಳ್ಳುವಿಕೆಯ ಕ್ರಮವನ್ನು ಶ್ಲಾಘಿಸಿದೆ. ಅದರಲ್ಲೂ ಸೈಕಲ್‌ ವೀಡರ್‌ ವಿನ್ಯಾಸದಲ್ಲಿ ಲಿಂಗ ಸ್ನೇಹಿಯಾಗಿರುವುದು ಗುರುತಿಸಿದೆ.

 ಉಪಸಂಹಾರ : ಹೊಂದಾಣಿಕೆಯ ಕ್ರಮಗಳಾಗಿ ದೊಡ್ಡ ಪ್ರಮಾಣದ ಕೃಷಿ ಪರಿಸರ ವ್ಯವಸ್ಥೆಗಳು

OMM ದೊಡ್ಡ ಪ್ರಮಾಣದಲ್ಲಿ ಕೃಷಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹವಾಮಾನ ಬದಲಾವಣೆಗೆ ಉತ್ತಮ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸಲು ಸಾವಿರಾರು ಕೃಷಿ ಕುಟುಂಬಗಳಿಗೆ ಸಹಾಯ ಮಾಡಿದೆ. OMM ನ ಹೊಂದಾಣಿಕೆಯ ಕ್ರಮಗಳು ಕೃಷಿ ಪರಿಸರದ ರೂಪುರೇಷೆಯಲ್ಲಿ ತಾಂತ್ರಿಕ, ಪರಿಸರ, ಸಾಮಾಜಿಕ ಮತ್ತು ಆಡಳಿತ ತತ್ವಗಳನ್ನು ಒಳಗೊಳ್ಳುತ್ತವೆ. ಈ ಕ್ರಮಗಳಿಂದಾಗಿ ಜೀವನೋಪಾಯದ ಅವಕಾಶಗಳು ಹೆಚ್ಚಿವೆ, ಆದಾಯ ಹೆಚ್ಚಿದೆ ಮತ್ತು ಉತ್ತಮ ಪೌಷ್ಟಿಕಾಂಶ ದೊರಕುವಂತಾಗಿದೆ. ಜೊತೆಗೆ OMM ಮಹಿಳೆಯರ ಸಾಮಾಜಿಕ-ಆರ್ಥಿಕ ಸಬಲೀಕರಣದ ಲಾಭ ಗಳಿಸಿಕೊಟ್ಟಿದೆ.

ಹವಾಮಾನ ಬದಲಾವಣೆಯ ನೀತಿ, ಹೂಡಿಕೆಯ ರೂಪುರೇಷೆಗಳನ್ನು ಹಾಕಿಕೊಳ್ಳುವಲ್ಲಿ ಸಾಂಪ್ರದಾಯಿಕತೆಯ ಪೋಷಕರಾದ ಮಹಿಳೆಯ ಜ್ಞಾನ, ಅನುಭವ ಮತ್ತು ದೃಷ್ಟಿಕೋನಗಳನ್ನು ಒಳಗೊಳ್ಳುವುದು ಅಗತ್ಯವಾಗಿದೆ. OMM ನಿರೂಪಿಸಿರುವಂತೆ, ಆಹಾರ ಮತ್ತು ಕೃಷಿಯಲ್ಲಿ ಮಹಿಳೆಯರಿಗೆ ಪ್ರಮುಖ ಪಾತ್ರ ವಹಿಸಲು ಅವಕಾಶ ನೀಡುವ ಕೃಷಿಪರಿಸರ ವ್ಯವಸ್ಥೆಗಳು ಹವಾಮಾನ ಬದಲಾವಣೆಯ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ರೂಪಿಸುತ್ತವೆ.

ಪರಾಮರ್ಶನಗಳು

https://www.agroecology-europe.org/the-13-principlesof-agroecology/

Tittonell P, Piñeiro G, Garibaldi LA, Dogliotti S, Olff H and Jobbagy EG (2020) Agroecology in Large

Scale Farming–A Research Agenda. Frontiers in Sustainable Food Systems. 4:584605.

doi: 10.3389/fsufs.2020.584605u

 


Bindu Mohanty

Senior Coordinator (Research & Partnerships) of RRA

Network Hub

Watershed Support Services and Activities Network

(WASSAN)

Plot. No. 685 & 686,

Road. No. 12 Narasimhaswamy Colony, Nagole

Hyderabad. 500 068

Telangana

E-mail: bindu@wassan.org

 


 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೩ ; ಸೆಪ್ಟಂಬರ್ ೨೦‌೨‌೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp