ಗ್ರಾಮೀಣ ಸಮುದಾಯಗಳಲ್ಲಿ ನಾವೀನ್ಯತೆ ಅಳವಡಿಕೆ ಸಾಮರ್ಥ್ಯವನ್ನು ನಿರ್ಮಿಸುವುದು


ಸಣ್ಣ ಹಿಡುವಳಿದಾರರಿಗೆ ಸುಸ್ಥಿರ ಯಾಂತ್ರೀಕರಣ ಎನ್ನುವುದು ಕೇವಲ ಯಂತ್ರಗಳ ಬಗ್ಗೆ ಅಲ್ಲ - ಇದು ಸ್ಥಳೀಯ ಸಾಮರ್ಥ್ಯ, ಉದ್ಯಮ ಮತ್ತು ವಿಶ್ವಾಸವನ್ನು ನಿರ್ಮಿಸುವ ಕುರಿತಾದದ್ದು. ಇನ್ನೋವೇಶನ್ ಗಿಲ್ಡ್‌ನ ಪರಿಸರ ವ್ಯವಸ್ಥೆಯ ಮಾದರಿಯು ಸೂಕ್ತ ಪಾಲುದಾರಿಕೆಗಳೊಂದಿಗೆ, ತಂತ್ರಜ್ಞಾನವು ಗ್ರಾಮೀಣ ಭಾರತದಲ್ಲಿ ನಿಜವಾಗಿಯೂ ಬೇರೂರಬಹುದು ಎಂದು ತೋರಿಸುತ್ತದೆ.


ಭಾರತದಲ್ಲಿ, ಶೇ.90 ಕ್ಕಿಂತ ಹೆಚ್ಚು ರೈತರು ಕೃಷಿಯನ್ನು ತಮ್ಮ ಪ್ರಮುಖ ಆದಾಯದ ಮೂಲವಾಗಿ ಅವಲಂಬಿಸಿದ್ದಾರೆ. ಶೇ.70 ರಷ್ಟು ರೈತ ಸಮುದಾಯವು ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿಗಳನ್ನು ಹೊಂದಿದೆ. ಬಹುದೊಡ್ಡ ದೇಶೀಯ ಮಾರುಕಟ್ಟೆಯ ಹೊರತಾಗಿಯೂ, ಅಸ್ತಿತ್ವದಲ್ಲಿರುವ ಯಂತ್ರೋಪಕರಣಗಳು ಸಣ್ಣ ಮತ್ತು ಅತಿ ಸಣ್ಣ ರೈತರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಲವಾರು ನಾವೀನ್ಯತೆಗಳ ಹೊರತಾಗಿಯೂ, ಅವು ಇಂಟರ್ನೆಟ್ ವೀಡಿಯೊಗಳು ಮತ್ತು ಪೈಲಟ್ ಯೋಜನೆಗಳನ್ನು ಮೀರಿ ಹೋಗುವುದಿಲ್ಲ. ಸೀಮಿತ ಉತ್ಪಾದನೆ ಮತ್ತು ವಿತರಣಾ ಮಾರ್ಗಗಳೊಂದಿಗೆ, ರೈತರಿಗೆ ಈ ಯಂತ್ರಗಳು ಮತ್ತು ಸಾಧನಗಳ ಲಭ್ಯತೆ ಮತ್ತು ಬಳಕೆ, ಲಾಜಿಸ್ಟಿಕ್ ಮತ್ತು ಆರ್ಥಿಕವಾಗಿ ಹೊರೆ ಎನಿಸುತ್ತದೆ.

ತಂತ್ರಜ್ಞಾನ ಅಳವಡಿಕೆಯ ಕೊರತೆಗೆ ಕಾರಣವಾಗುವ ಕೆಲವು ಅಂಶಗಳು:

  • ಅವರ ನಿರ್ದಿಷ್ಟ ಬೆಳೆಗಳು ಅಥವಾ ಪರಿಸ್ಥಿತಿಗಳಿಗೆ ಪ್ರಯೋಜನವಾಗಬಹುದಾದ ಉದಯೋನ್ಮುಖ ಸಾಧನಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಸೀಮಿತ ಅರಿವು.
  • ವಿನ್ಯಾಸಗೊಳ್ಳುವ ಹೆಚ್ಚಿನ ಯಂತ್ರಗಳು "ಪ್ರಮಾಣಿತ ಉತ್ಪನ್ನಗಳು" ಎಂದೇ ಇರುತ್ತವೆ. ಆದರೆ ಪ್ರತಿಯೊಂದು ಹಳ್ಳಿ ಮತ್ತು ಜಮೀನಿನ ಮಣ್ಣು, ಬೆಳೆಗಳು, ಭೂಪ್ರದೇಶ ಅಥವಾ ಅಭ್ಯಾಸಗಳಲ್ಲಿ ವಿಭಿನ್ನವಾಗಿರುತ್ತದೆ.
  • ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ (SOPs) ಅನುಪಸ್ಥಿತಿ

ಮತ್ತು ಅಸಮರ್ಪಕ ವಿಶ್ವಾಸಾರ್ಹ ನಿರ್ವಹಣಾ ಸೇವೆಗಳು.

  • ಸಕಾಲಿಕ ದುರಸ್ತಿ ಮತ್ತು ನಿರ್ವಹಣೆಗೆ ತರಬೇತಿ ಪಡೆದ ತಂತ್ರಜ್ಞರು ಮತ್ತು ಮೂಲಸೌಕರ್ಯಗಳ ಕೊರತೆ.
  • ಅಪರಿಚಿತ ಯಂತ್ರಗಳ ಮೇಲೆ ಹೂಡಿಕೆ ಮಾಡುವುದರ ಬಗ್ಗೆ ರೈತರಿಗೆ ನಂಬಿಕೆ ಕಡಿಮೆ.

ನಾವೀನ್ಯತೆಗಳು ಮತ್ತು ಸಣ್ಣ ಹಿಡುವಳಿದಾರ ರೈತರು ಮತ್ತು ಕೃಷಿ ಸಮುದಾಯಗಳಿಂದ ತಂತ್ರಜ್ಞಾನ ಅಳವಡಿಕೆಯನ್ನು ಹೆಚ್ಚಿಸಲು, ಇನ್ನೋವೇಶನ್ ಗಿಲ್ಡ್ ಕೌಶಲ್ಯಪೂರ್ಣ ಗ್ರಾಮ ಮಟ್ಟದ ಉದ್ಯಮಿಗಳ ವ್ಯಾಪಕವಾದ ಸ್ಥಳೀಯ ಜಾಲವನ್ನು ಬೆಳೆಸಿದೆ. ಗ್ರಾಮ ಮಟ್ಟದ ಉದ್ಯಮಿಗಳು (VLEಗಳು) ಗ್ರಾಮೀಣ ನಾವೀನ್ಯತೆ ಸರಪಳಿಯಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ. ಈ VLEಗಳಿಗೆ ಸ್ಥಳೀಯ ಕೃಷಿ ಪರಿಸ್ಥಿತಿಗಳ ಅರಿವಿರುವುದರಿಂದ ತಂತ್ರಜ್ಞಾನದ ಬಳಕೆಯಲ್ಲಿ ಕೃಷಿ ಸಮುದಾಯಗಳಿಗೆ ಮಾರ್ಗದರ್ಶನ ನೀಡಬಲ್ಲರು. ಸರಿಯಾದ ಕೌಶಲಗಳು, ಪರಿಕರಗಳು ಮತ್ತು ಪಾಲುದಾರಿಕೆಗಳೊಂದಿಗೆ VLE ಗಳ ಗುಂಪನ್ನು ಸಿದ್ಧಪಡಿಸುವ ಮೂಲಕ, ಹಳ್ಳಿಗಳಲ್ಲಿ ವಿಶ್ವಾಸಾರ್ಹ ಮತ್ತು ಬೆಂಬಲಿತ ಮಾನವ ಸಂಪನ್ಮೂಲಗಳ 'ನಿರ್ಣಾಯಕ ಸಮೂಹ'ವನ್ನು ನಿರ್ಮಿಸಬಹುದು.

ಇನ್ನೋವೇಶನ್ ಗಿಲ್ಡ್‌ನ ಪರಿಸರ ವ್ಯವಸ್ಥೆಯ ವ್ಯವಸ್ಥಿತ ವಿಧಾನ

ಇನ್ನೋವೇಶನ್ ಗಿಲ್ಡ್ ಅನುಷ್ಠಾನಕ್ಕಾಗಿ ಹಂತ-ಹಂತದ ವಿಧಾನವನ್ನು ನಿರ್ಮಿಸಿದೆ, ಅದು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ.

  1. ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು VLE ಗುರುತಿಸುವಿಕೆ

ಗ್ರಾಮೀಣ ಸಮುದಾಯಗಳಿಗೆ ಹೊಸ ವಿಚಾರಗಳನ್ನು ಸಂಪರ್ಕಿಸಲು, ಸಮುದಾಯವನ್ನೇ ಆರಂಭಿಕ ಹಂತವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಎರಡು ಪ್ರಮುಖ ಪಾಲುದಾರಿಕೆಗಳು ಬೇಕಾಗುತ್ತವೆ. ಎ) ಇನ್ನೋವೇಶನ್ ಗಿಲ್ಡ್ ಸ್ಥಳೀಯ ಜೀವನೋಪಾಯಗಳ ಬಗ್ಗೆ ಅರಿವಿರುವ ಮತ್ತು ಆಳವಾದ ತಿಳುವಳಿಕೆಯನ್ನು ಹೊಂದಿರುವ, ಪ್ರಾದೇಶಿಕ ತಂತ್ರಜ್ಞಾನಗಳ ಕೊರತೆಯ ಬಗ್ಗೆ ಮಾಹಿತಿಯನ್ನು ಒದಗಿಸುವ ಮತ್ತು ಸಂಭಾವ್ಯ ಗ್ರಾಮ ಮಟ್ಟದ ಉದ್ಯಮಿಗಳನ್ನು ಗುರುತಿಸುವ ಸಂಸ್ಥೆಗಳೊಂದಿಗೆ ಪಾಲುದಾರರು. ಇವು ಸ್ವಸಹಾಯ ಗುಂಪುಗಳು (SHG ಗಳು),

ರೈತ ಉತ್ಪಾದಕ ಸಂಸ್ಥೆಗಳು (FPO ಗಳು) ಅಥವಾ ಅವುಗಳ ಸ್ವಂತ ಶಾಖೆಗಳನ್ನು ಒಳಗೊಂಡಿರುತ್ತವೆ. ಬಿ) ಗ್ರಾಮ ಮಟ್ಟದ ಉದ್ಯಮಿಗಳು (VLE ಗಳು) ತಾಂತ್ರಿಕವಾಗಿ ಉತ್ತಮವಾಗಿರುವ ಮತ್ತು ಸ್ಥಳೀಯ ಉದ್ಯಮವನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವ ಸ್ಥಳೀಯ ಸಂಪನ್ಮೂಲಗಳು. ಇವರಲ್ಲಿ ಸ್ಥಳೀಯ ಮೆಕ್ಯಾನಿಕ್ಸ್, ಎಲೆಕ್ಟ್ರಿಷಿಯನ್, ಪ್ಲಂಬರ್, ಐಟಿಐ ಇತ್ಯಾದಿ ಪದವೀಧರರು ಸೇರಿದ್ದಾರೆ. 

  1. ತಂತ್ರಜ್ಞಾನ ಕೊರತೆ ಗುರುತಿಸುವಿಕೆ

ವಿಶ್ವಾಸವನ್ನು ಬೆಳೆಸಲು ಸ್ಥಳೀಯ ಪಾಲುದಾರರು ಮತ್ತು ಅವರ ಗುರುತಿಸಲಾದ ರೈತ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತದೆ. ಇದನ್ನು ನೇರ ಸಭೆಗಳು ಮತ್ತು ಕ್ಷೇತ್ರ ಭೇಟಿಗಳ ಮೂಲಕ ಮಾಡಲಾಗುತ್ತದೆ. ಇದರೊಂದಿಗೆ ತಂತ್ರಜ್ಞಾನ ಕೊರತೆಯ ಸರಿಪಡಿಸುವಂತಹ ಕ್ರಮಗಳ ಅನುಷ್ಠಾನವನ್ನು ಅನುಸರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪ್ರಸ್ತುತ ಬಳಸುತ್ತಿರುವ ಪರಿಕರಗಳು ಮತ್ತು ವಿನ್ಯಾಸ, ಸಾಮರ್ಥ್ಯ, ಕಚ್ಚಾ ವಸ್ತು ಮತ್ತು ಇಂಧನ ಮೂಲ ಹೊಂದಾಣಿಕೆ ಇತ್ಯಾದಿಗಳಲ್ಲಿನ ಕೊರತೆಗಳನ್ನು ಗುರುತಿಸಲಾಗುತ್ತದೆ.

  1. ತಂತ್ರಜ್ಞಾನ ಮ್ಯಾಪಿಂಗ್

ಸ್ಥಳೀಯ ಅಗತ್ಯಗಳನ್ನು ಗುರುತಿಸಿಕೊಂಡ ನಂತರ, ತಂತ್ರಜ್ಞಾನ ಸಭೆಗಳಲ್ಲಿ ಅವಶ್ಯಕತೆಗಳನ್ನು ಮ್ಯಾಪಿಂಗ್‌ ಮಾಡಲಾಗುತ್ತದೆ. ಆಸಕ್ತಿಯುಳ್ಳ ನಾವೀನ್ಯಕಾರರನ್ನು ಗುರುತಿಸಲಾಗುತ್ತದೆ. ಮೊದಲನೆಯದಾಗಿ, ಅಸ್ತಿತ್ವದಲ್ಲಿರುವ ನಾವೀನ್ಯತೆಗಳನ್ನು ಸ್ಥಳೀಯತೆಗೆ ಹೊಂದಿಕೊಳ್ಳುವಂತೆ ರೂಪಿಸಲಾಗುತ್ತದೆ. ಅಗತ್ಯವಿದ್ದರೆ, ತಳಮಟ್ಟದ ಪರಿಹಾರಗಳಿಗಾಗಿ ವಿಶಾಲವಾದ ಮಾರುಕಟ್ಟೆಯನ್ನು ಪರಿಶೀಲಿಸಲಾಗುತ್ತದೆ. ನಾವೀನ್ಯತೆಗಳು ಮತ್ತು ರೈತರ ನಡುವಿನ ಅಂತರವನ್ನು ಕಡಿಮೆ ಮಾಡಲು ವರ್ಚುವಲ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ VLE ಗಳು ಹೊಸ ಕಾರ್ಯಾಚರಣೆಯನ್ನು ಕಾಣಬಹುದು.

  1. VLEಗಳ ವ್ಯಾಪಾರದ ಮಾದರಿಗಳ ನಿರ್ಮಾಣ

VLE ಗಳನ್ನು ಸಂಪರ್ಕ ಸೇತುವೆಗಳೆಂದು ಪರಿಗಣಿಸಲಾಗುತ್ತದೆ. VLE ಯ ಆಸಕ್ತಿ ಮತ್ತು ಕೌಶಲ್ಯಗಳ ಆಧಾರದ ಮೇಲೆ, ಅವರು ಆಯ್ಕೆಮಾಡಿದ ಯಂತ್ರದಿಂದ ಹೇಗೆ ಗಳಿಸಲು ಬಯಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ - ಎ) ಹೊಸ, ಪರೀಕ್ಷಿಸಲ್ಪಟ್ಟ ತಂತ್ರಜ್ಞಾನಗಳನ್ನು ಮಾರಾಟ ಮಾಡಲು ಮತ್ತು ವಿತರಿಸಲು ಸ್ಥಳೀಯ ತಜ್ಞರಾಗುವುದು; ಬಿ) ಹಳ್ಳಿಗಳಾದ್ಯಂತ ಯಂತ್ರಗಳಿಗೆ ವಿಶ್ವಾಸಾರ್ಹ, ಸ್ಥಳೀಯ ಸೇವೆಯನ್ನು ನೀಡುವುದು. ಸಿ) ವಿಶೇಷ ಯಂತ್ರಗಳನ್ನು ಹೊಂದುವ ಮತ್ತು ಬಾಡಿಗೆಗೆ ನೀಡುವ ಮೂಲಕ ಸಣ್ಣ ರೈತರ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುವುದು. ಡಿ) ಹಳ್ಳಿಯ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಸ್ಥಳೀಯವಾಗಿ ಸಣ್ಣ, ಕಸ್ಟಮೈಸ್ ಮಾಡಿದ ಕೃಷಿ ಉಪಕರಣಗಳನ್ನು ಜೋಡಿಸುವುದು ಅಥವಾ ತಯಾರಿಸುವುದು. ನಂತರ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ವ್ಯಾಪಾರದ ಮಾದರಿಗಳನ್ನು ಸಿದ್ಧಪಡಿಸುವಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

  1. VLE ಗಳಿಗೆ ಬೆಂಬಲ

ಇತರ ಯಾವುದೇ ಉದ್ಯಮಿಗಳಂತೆ VLE ಗಳಿಗೂ ತಮ್ಮ ಉದ್ಯಮಗಳನ್ನು ನಿರ್ಮಿಸಲು ಅಗತ್ಯವಾದ ವ್ಯವಸ್ಥೆಯ ಬೆಂಬಲದ ಅಗತ್ಯವಿದೆ.

ಎ) ಸಾಮರ್ಥ್ಯ ವೃದ್ಧಿ: ಇನ್ನೋವೇಶನ್ ಗಿಲ್ಡ್ ಸಮಗ್ರ, ಅವಶ್ಯಕತೆ ಆಧಾರಿತ ತರಬೇತಿಯನ್ನು ಒದಗಿಸುತ್ತದೆ. ಇದು ಕಾರ್ಯಾಗಾರ ಪರಿಕರಗಳು, ವೆಲ್ಡಿಂಗ್ ಮತ್ತು ಸುರಕ್ಷತಾ ಕ್ರಮಗಳಂತಹ ಅಗತ್ಯ ಮೂಲಭೂತ ಕೌಶಲ್ಯಗಳೊಂದಿಗೆ ಪ್ರಾರಂಭವಾಗುತ್ತದೆ, ಇದನ್ನು ಹೆಚ್ಚಾಗಿ ಪ್ರಮಾಣೀಕೃತ ಐಟಿಐ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುತ್ತದೆ. ಪ್ರಾಯೋಗಿಕವಾಗಿ ಸನ್ನದ್ಧಗೊಳಿಸಲು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ, ಪವರ್ ವೀಡರ್, ಬ್ರಷ್ ಕಟ್ಟರ್ ಮತ್ತು ಆಯಿಲ್ ಎಂಜಿನ್‌ಗಳು ಸೇರಿದಂತೆ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ 5 ದಿನಗಳ ವಿಶೇಷ ತರಬೇತಿಯನ್ನು ಅನಂತಪುರದ ದಕ್ಷಿಣ ಪ್ರಾದೇಶಿಕ ಕೃಷಿ ಯಂತ್ರೋಪಕರಣ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಯಲ್ಲಿ (SRFMT&TI) ನಡೆಸಲಾಯಿತು.

ಬಿ) ನವನಿರ್ಮಿತಿಕಾರರಿಗೆ ಅವಕಾಶ: ಭಾರೀ ಯಂತ್ರೋಪಕರಣಗಳಲ್ಲಿ ಹೂಡಿಕೆ ಮಾಡುವ VLE ಗಳು ತಮ್ಮ ಪ್ರದೇಶಗಳಿಗೆ ಅವು ಹೊಂದುತ್ತದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಪಾಲುದಾರರ ಮೂಲಕ, ನವನಿರ್ಮಿತಿಕಾರರು ಅಗತ್ಯ ಬದಲಾವಣೆಗಳನ್ನು ಮಾಡಲು ಅನುಕೂಲವಾಗುವಂತೆ ಇನ್ನೋವೇಶನ್ ಗಿಲ್ಡ್ ಸ್ಥಳೀಯರಿಂದ ಪ್ರತಿಕ್ರಿಯೆಯನ್ನು ಪಡೆಯುತ್ತದೆ. VLE ಗಳು ತಮ್ಮ ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ಇನ್ನೋವೇಶನ್ ಗಿಲ್ಡ್ VLE ಗಳು ದಾಸ್ತಾನು ನಿರ್ಮಿಸಲು ಅಥವಾ ಹೊಸ ಉತ್ಪನ್ನಗಳೊಂದಿಗೆ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶವನ್ನು ಒದಗಿಸುತ್ತದೆ.

ಸಿ) ವ್ಯವಹಾರಕ್ಕೆ ಅಗತ್ಯವಿರುವ ಪರಿಕರಗಳು ಮತ್ತು ವೇದಿಕೆಗಳಿಗೆ ಪ್ರವೇಶ:

ಪ್ರತಿಯೊಬ್ಬ VLE ವ್ಯವಹಾರ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಅವರ ಪ್ರಗತಿಯನ್ನು ಟ್ರ್ಯಾಕ್ ಮಾಡಲು, ಗಿಲ್ಡ್ ಕಾಸ್ಟ್‌ ಎಕನಾಮಿಕ್ಸ್‌ ಕ್ಯಾಲ್ಕುಲೇಟರ್ ಅನ್ನು ನೀಡುತ್ತದೆ - ಇದು VLE ಗಳು ದೈನಂದಿನ ವೆಚ್ಚಗಳನ್ನು ಅಂದಾಜು ಮಾಡಲು, ನ್ಯಾಯಯುತ ಸೇವಾ ಬೆಲೆಗಳನ್ನು ಹೊಂದಿಸಲು ಮತ್ತು ಅವರು ಕಾರ್ಯನಿರ್ವಹಿಸುವ ಪ್ರತಿಯೊಂದು ಯಂತ್ರಕ್ಕೂ ಬ್ರೇಕ್‌ಈವನ್ ಪಾಯಿಂಟ್‌ಗಳನ್ನು ಗುರುತಿಸಲು ಸಹಾಯ ಮಾಡುವ ಸರಳ ಸಾಧನವಾಗಿದೆ.

ಡಿ) ಹಣಕಾಸು ಸಂಸ್ಥೆಗಳಿಗೆ ಪ್ರವೇಶ: ಉನ್ನತ ಮಟ್ಟದ ಯಂತ್ರೋಪಕರಣಗಳಿಗೆ ಹೆಚ್ಚಿನ ಹೂಡಿಕೆಗಳು ಬೇಕಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಗಮಗೊಳಿಸಲು, ಲಭ್ಯವಿರುವ ಆಯ್ಕೆಗಳನ್ನು - ಕಡಿಮೆ ಬಡ್ಡಿದರದಲ್ಲಿ FPC ಗಳಿಂದ ಸಬ್ಸಿಡಿಗಳು ಅಥವಾ ಹಣಕಾಸು ಮುಂತಾದವುಗಳನ್ನು ಗಮನಿಸಲಾಗುತ್ತದೆ. ನಂತರ, VLE ಗಳು ಅವುಗಳ ಮೇಲೆ ಅಥವಾ ಸ್ಥಳೀಯ ಪಾಲುದಾರರ ಮೇಲೆ ಹೆಚ್ಚುವರಿ ವೆಚ್ಚಗಳಿಲ್ಲದೆ ಹಲವು ಹಣಕಾಸು ಆಯ್ಕೆಗಳಲ್ಲಿ ಒಂದನ್ನು ಹೊಂದಲು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆಗಳನ್ನು ನಿರ್ಮಿಸಲಾಗುತ್ತದೆ.

ಈ ಎಲ್ಲಾ ಹಂತಗಳು ಒಟ್ಟಾಗಿ ಒಂದು ಚಕ್ರವನ್ನು ಸೃಷ್ಟಿಸುತ್ತವೆ, ಅಲ್ಲಿ ನಾವೀನ್ಯತೆ, ಉದ್ಯಮ ಮತ್ತು ಪ್ರತಿಕ್ರಿಯೆ ಒಂದನ್ನೊಂದು ಬಲಪಡಿಸುತ್ತದೆ.

ಕೋಷ್ಟಕ 1: ಕೆಲವು ವಿವರಣಾತ್ಮಕ ಪ್ರಕರಣಗಳು

ಶೇಕ್ ಬಾಜಿ (ತೆಲಂಗಾಣ) - ಹಸ್ತಚಾಲಿತ

ಉಪಕರಣ ಮಾರಾಟ

ರೈತ ಮಹಿಳೆಯರಿಗೆ ಶ್ರಮದಾಯಕವಾದ ಕಳೆ ತೆಗೆಯುವಿಕೆ ಮತ್ತು ಹತ್ತಿ ಬಿತ್ತನೆಗೆ ಪರಿಹಾರ ಕಂಡುಹಿಡಿದರು. ಸಣ್ಣ ಸಾಧನಗಳ ನಾವಿನ್ಯಕಾರರೊಂದಿಗೆ ಪಾಲುದಾರಿಕೆ ಹೊಂದಿದ್ದು ಕಳೆ ತೆಗೆಯುವ ಬ್ಲೇಡ್‌ನಿಂದ ಹಿಡಿದು ಸೌರ ಕೀಟ ಬಲೆಗಳವರೆಗೆ 23 ಕಡಿಮೆ ಬೆಲೆಯ ಉಪಕರಣಗಳನ್ನು ಮಾರಾಟ ಮಾಡಿದರು. ಪರಿಣಾಮಕಾರಿ, ದಕ್ಷ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ರೂ. 4,440 ಲಾಭ ಗಳಿಸಿದರು.

ಕುಡಾ ವೆಂಕಟೇಶ್ (ಆಂಧ್ರ ಪ್ರದೇಶ) -ಗ್ರಾಮೀಣ ದುರಸ್ತಿ ಸೇವೆಗಳು

ತೈಲ ಎಂಜಿನ್‌ಗಳು, ಸಂಸ್ಕರಣಾ ಯಂತ್ರಗಳು ಮತ್ತು ವಿದ್ಯುತ್ ಚಾಲಿತ ಕಳೆ ತೆಗೆಯುವ ಯಂತ್ರಗಳಂತಹ ಸ್ಥಳೀಯ ಕೃಷಿ ಯಂತ್ರೋಪಕರಣಗಳ ದುರಸ್ತಿ ಘಟಕವನ್ನು ಸ್ಥಾಪಿಸಿದರು. ರೈತರಿಗೆ ಯಂತ್ರಗಳು ಲಭ್ಯವಿಲ್ಲ ಎನ್ನುವ ಕೊರತೆಯನ್ನು ಕಡಿಮೆ ಮಾಡುವ ಮೂಲಕ ಒಂದು ಋತುವಿನಲ್ಲಿ, ರೂ.26,600 ಗಳಿಸಿದರು. ವಿಶ್ವಾಸಾರ್ಹ ಸ್ಥಳೀಯ ಸೇವಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದರು.

ಮಾ ಕಮಲಾ ಎಫ್‌ಪಿಸಿ (ಒರಿಸ್ಸಾ) – ಯಾಂತ್ರೀಕೃತ

ಹುಣಸೆ ಸಂಸ್ಕರಣೆ

ಹುಣಸೆ ಬೀಜ ತೆಗೆಯುವ ಯಂತ್ರವನ್ನು ಪರಿಚಯಿಸಲಾಯಿತು, ಇದು ದಿನಕ್ಕೆ 100 ರಿಂದ 360 ಕೆಜಿಗೆ ಉತ್ಪಾದನೆಯನ್ನು ಹೆಚ್ಚಿಸಿತು ಮತ್ತು ಕೂಲಿ ವೆಚ್ಚವನ್ನು 84% ರಷ್ಟು ಕಡಿತಗೊಳಿಸಿತು,

ಇದರಿಂದಾಗಿ ಮಹಿಳಾ ಸ್ವಸಹಾಯ ಗುಂಪುಗಳು ಘಟಕವನ್ನು ನಿರ್ವಹಿಸಲು ಮತ್ತು ಬಾಡಿಗೆಗೆ ನೀಡುವಂತಾಯಿತು.

ಪೆರೈಯಾ (ತಿರುಪತಿ, ಆಂಧ್ರಪ್ರದೇಶ)

– ಮಡಿ ತಯಾರಿಸುವ ಬಾಡಿಗೆ ಯಂತ್ರಗಳು

10 ಹಳ್ಳಿಗಳಲ್ಲಿ ಟೊಮೆಟೊ ಕೃಷಿಗಾಗಿ ಗ್ರಾಹಕರ ಅಗತ್ಯಕ್ಕೆ ತಕ್ಕ ಸೇವೆಗಳನ್ನು ಒದಗಿಸಲಾಗಿದೆ. 35 ಎಕರೆಯಿಂದ ಒಂದು ಋತುವಿನಲ್ಲಿ ₹38,700 ಗಳಿಸಲಾಯಿತು.

 

ಶೀಲಾ ದೀದಿ (ಮಧ್ಯಪ್ರದೇಶ) -

ಸಿಂಗಲ್ ವೀಲ್ ವೀಡರ್

ಕಳೆ ಕೀಳುವ ಸಮಯವನ್ನು ಎಕರೆಗೆ ಐದು ದಿನಗಳಿಂದ 8-10 ಗಂಟೆಗಳವರೆಗೆ ಇಳಿದಿದೆ. ಒಂದು ತಿಂಗಳಲ್ಲಿ 30 ಎಕರೆಯಲ್ಲಿ ಕಳೆ ಕೀಳಲಾಗಿದೆ. ಇದರಿಂದ ಮಹಿಳೆಯರ ಶ್ರಮವನ್ನು ಕಡಿಮೆ ಮಾಡಲಾಗಿದೆ.

ಶುಂಠಿ ಕೊಯ್ಲಿನ ಯಂತ್ರದಲ್ಲಿ ಮಾರ್ಪಾಡು (ಅರಕು, ಆಂಧ್ರಪ್ರದೇಶ)

ರೈತರು ಮತ್ತು ವಿಎಲ್‌ಇಗಳು ಒಂದಾಗಿ ಎತ್ತನ್ನು ಬಳಸಿ ಶುಂಠಿ ಕೊಯ್ಲು ಮಾಡುತ್ತಿದ್ದ ಯಂತ್ರದಲ್ಲಿ ಬದಲಾವಣೆ ಮಾಡಿದರು. ಇದು ಆ ಭೂ ಪ್ರದೇಶಕ್ಕೆ ಸೂಕ್ತವಾದ ಕೂಲಿ ಮಿತವ್ಯಯ ಸಲಕರಣೆ.

ಕರಿಮೆಣಸು ಬಿಡಿಸುವ ಯಂತ್ರಗಳ ಉದ್ಯಮಿಗಳು (ಅರಕು ಮತ್ತು ಪಾಡೇರು)

ಮೆಣಸು ಬಿಡಿಸುವ ಯಂತ್ರಗಳು 97.5%ರಷ್ಟು ಸಂಸ್ಕರಣಾ ವೆಚ್ಚವನ್ನು ಕಡಿಮೆಮಾಡಿತು. ಸಂಸ್ಕರಣೆಯ ಗುಣಮಟ್ಟವನ್ನು ಸುಧಾರಿಸಿತು. ಸ್ಥಳೀಯವಾಗಿ ರಿಪೇರಿ ಹಾಗೂ ನಿರ್ವಹಣಾ ಬೆಂಬಲ ಇತ್ಯಾದಿಗಳನ್ನು ಒದಗಿಸಿತು.

 

ಪ್ರದೇಶದ ಮೇಲಾದ ಪರಿಣಾಮ

ಇನ್ನೋವೇಶನ್ ಗಿಲ್ಡ್ ವಿಧಾನವು ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾದ ನಾವೀನ್ಯತೆಯೊಂದಿಗೆ ಸಂಪರ್ಕಿಸುವ ಸ್ಥಿತಿಸ್ಥಾಪಕ, ಸಮುದಾಯ-ಕೇಂದ್ರಿತ ಪರಿಸರ ವ್ಯವಸ್ಥೆಯನ್ನು ಯಶಸ್ವಿಯಾಗಿ ಸ್ಥಾಪಿಸಿದೆ. ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಾದ್ಯಂತ 7 ಪ್ರಾದೇಶಿಕ ಪಾಲುದಾರರೊಂದಿಗೆ 250+ VLE ಗಳ ಜಾಲವನ್ನು ಸ್ಥಾಪಿಸಲಾಗಿದೆ. 40 ಕ್ಕೂ ಹೆಚ್ಚು ನಾವೀನ್ಯಕಾರರ ಗುಂಪಿನಿಂದ ತಂತ್ರಜ್ಞಾನಗಳೊಂದಿಗೆ ಮ್ಯಾಪ್ ಮಾಡಲಾದ 81 ಸಕ್ರಿಯ VLE ಗಳಿವೆ. ಈ VLE ಗಳಲ್ಲಿ ಸುಮಾರು 50, ಇನ್ನೋವೇಶನ್ ಗಿಲ್ಡ್ ನಡೆಸಿದ 5 ಸಮಗ್ರ ತರಬೇತಿ ಕಾರ್ಯಕ್ರಮಗಳಲ್ಲಿ ಒಂದನ್ನು ಅನುಸರಿಸಿವೆ.

VLE ಗಳು ಯಂತ್ರೋಪಕರಣಗಳ ನಿಯಮಿತ ದುರಸ್ತಿ ಮತ್ತು ನಿರ್ವಹಣೆ, ಕಾರ್ಯಾಚರಣೆಯ ಬೆಂಬಲ ಮತ್ತು ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಖಾತ್ರಿಗೊಳಿಸುವ ಮೂಲಕ ಸುಸ್ಥಿರ ವ್ಯವಹಾರಗಳನ್ನು ನಡೆಸುತ್ತವೆ. ಸ್ಥಳೀಯ ಯುವಕರಿಗೆ ಉದ್ಯೋಗವನ್ನು ಒದಗಿಸುವುದರೊಂದಿಗೆ ತಂತ್ರಜ್ಞಾನ ಅಳವಡಿಕೆಯನ್ನು ಚುರುಕುಗೊಳಿಸುತ್ತವೆ. ಕೆಲವು ಪ್ರಕರಣಗಳನ್ನು ಕೋಷ್ಟಕ 1 ರಲ್ಲಿ ವಿವರಿಸಲಾಗಿದೆ.

ಮುಂದಿನ ಹಾದಿ: ಸಹಯೋಗಗಳ ಮೂಲಕ ಬೆಳವಣಿಗೆಯನ್ನು ಸುಸ್ಥಿರವಾಗಿರಿಸಿಕೊಳ್ಳುವುದು

ಸವಾಲುಗಳನ್ನು ಎದುರಿಸಿ ತಂತ್ರಜ್ಞಾನ ಅಳವಡಿಕೆಯನ್ನು ಚುರುಕುಗೊಳಿಸಲು ಸಂಪನ್ಮೂಲಗಳನ್ನು ನೀಡಲು, ಸಹಯೋಗವು ಮುಂದಿನ ಮಾರ್ಗವಾಗಿದೆ ಎನ್ನುವುದು ನಮ್ಮ ನಂಬಿಕೆ. ಇನ್ನೋವೇಶನ್ ಗಿಲ್ಡ್ ತಂತ್ರಜ್ಞಾನ ಪರಿಹಾರಗಳನ್ನು ರೂಪಿಸಲು ಭಾರತದಾದ್ಯಂತ CSO ಗಳು ಮತ್ತು ನಾವೀನ್ಯಕಾರರೊಂದಿಗೆ ಸಹಯೋಗವನ್ನು ಬಯಸುತ್ತದೆ. ನಾವೀನ್ಯಕಾರರು ಮತ್ತು VLE ಗಳಿಗೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪಾಲುದಾರರೊಂದಿಗಿನ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ.

ಪರಾಮರ್ಶನ:

Ministry of Agriculture & Farmers Welfare, Agriculture Census 2015–16: All India report on number and area of operational holdings (Phase-I), 2019, Department of Agriculture, Cooperation & Farmers Welfare, Government of India. https://agcensus.nic.in/


S Sai Mohan
Project Coordinator (Innovation Guild)
WASSAN (Watershed Support Services and Activities
Network)
Plot No. 685 and 686, Street No. 12,
Lakshmi Narasimha Colony, Mallikarjun Hills,
Nagole, Hyderabad,
Telangana 500068.
E-mail: saimohan@wassan.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೪ ; ಡಿಸೆಂಬರ್‌ ೨೦‌೨೫

Recent Posts

ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಕಣ್ಣಿಗೆ ಕಾಣುವಷ್ಟು ದೂರಕ್ಕೂ ಹಬ್ಬಿದ ಕುಂಬಳಕಾಯಿ ಹೊಲಗಳು. ಪೂರ್ವ ಒರಿಸ್ಸಾದ ಮಯೂರ್‌ಭಂಜ್ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕಾರಂಜಿಯಾ ಬ್ಲಾಕ್‌ನಲ್ಲಿ ನೀವು ಅದನ್ನು ಕಾಣಬಹುದು.

ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಹರೇಲಾ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಆಚರಿಸಲಾಗುವ ರೋಮಾಂಚಕ ಮತ್ತು ಮಹತ್ವದ ಹಬ್ಬ. ಇದು ಪ್ರಕೃತಿ, ಕೃಷಿ ಸಂಪ್ರದಾಯಗಳು ಮತ್ತು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯೊಂದಿಗಿನ ಆಳವಾದ ಸಂಪರ್ಕದ ಪ್ರತಿಬಿಂಬ. ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಆಚರಿಸಲಾಗುವ ಹರೇಲಾ, ಮಾನವೀಯತೆ ಮತ್ತು ಪರಿಸರದ ಸಾಮರಸ್ಯದ ಸಹಬಾಳ್ವೆಯನ್ನು ನೆನಪಿಸುತ್ತದೆ, ಆಧ್ಯಾತ್ಮಿಕತೆಯನ್ನು ಪರಿಸರ ಜಾಗೃತಿಯೊಂದಿಗೆ ಬೆರೆಸುತ್ತದೆ.

ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕೃಷಿ, ಜೀವನೋಪಾಯ ಮತ್ತು ಹವಾಮಾನ-ನಿರೋಧಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಬಹುಮುಖಿ ವಿಧಾನದಿಂದ ಮಹಿಳಾ ರೈತರಿಗೆ ಸಮೃದ್ಧವಾದ, ಸುಸ್ಥಿರವಾದ ಮತ್ತು ಆರ್ಥಿಕವಾಗಿ ಸುರಕ್ಷಿತವಾದ ಭವಿಷ್ಯವನ್ನು ನಿರ್ಮಿಸಬಹುದು. ಕಾರಂಜಾದ ಪರಿವರ್ತನೆಯು ಈ ವಿಧಾನದ ಪ್ರಮುಖ ಉದಾಹರಣೆಯಾಗಿದೆ.