ಕಣ್ಣಿಗೆ ಕಾಣುವಷ್ಟು ದೂರಕ್ಕೂ ಹಬ್ಬಿದ ಕುಂಬಳಕಾಯಿ ಹೊಲಗಳು. ಪೂರ್ವ ಒರಿಸ್ಸಾದ ಮಯೂರ್ಭಂಜ್ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕಾರಂಜಿಯಾ ಬ್ಲಾಕ್ನಲ್ಲಿ ನೀವು ಅದನ್ನು ಕಾಣಬಹುದು.
ಕಳೆದ ಋತುವಿನಲ್ಲಿ, ರೈತರು ಸುಧಾರಿತ ಕೃಷಿ ತಂತ್ರಗಳು ಮತ್ತು ರೋಗ-ನಿರೋಧಕ ಬೀಜಗಳನ್ನು ಬಳಸಿಕೊಂಡು ಕಾರಂಜಿಯಾ ಮತ್ತು ನೆರೆಯ ಕಿಯೋಂಜಾರ್ ಜಿಲ್ಲೆಯ ಸುಮಾರು 2,000 ಎಕರೆಗಳಲ್ಲಿ ಕುಂಬಳಕಾಯಿ ಬಳ್ಳಿಗಳನ್ನು ಬೆಳೆಸಿದರು. ಈ ಪೌಷ್ಟಿಕಾಂಶಯುಕ್ತ ತರಕಾರಿ ರೈತರಿಗೆ ಎಕರೆಗೆ ಸರಾಸರಿ $830 ರಿಂದ $870 ನಿವ್ವಳ ಲಾಭವನ್ನು ತರುತ್ತಿದೆ. ಇದು ಅದ್ಭುತವಾದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ.
ಕೆಲವೇ ವರ್ಷಗಳ ಹಿಂದಿನ ಕಥೆ ತುಂಬಾ ಭಿನ್ನವಾಗಿತ್ತು. ಈ ಪ್ರದೇಶದಲ್ಲಿ ಮರಳು ಮಿಶ್ರಿತ ಗೋಡು ಮಣ್ಣು ಮತ್ತು ಹವಾಮಾನ ಕುಂಬಳಕಾಯಿ ಕೃಷಿಗೆ ಸೂಕ್ತವಾಗಿದ್ದರೂ, ಸಾಂಪ್ರದಾಯಿಕ ಕೃಷಿ ವಿಧಾನಗಳು ಮತ್ತು ಸ್ಥಳೀಯ ಕುಂಬಳಕಾಯಿ ಪ್ರಭೇದಗಳನ್ನು ಬಳಸುವ ಸಣ್ಣ ಹಿಡುವಳಿದಾರರು ಕಡಿಮೆ ಇಳುವರಿ ಮತ್ತು ಮಾರುಕಟ್ಟೆ ಸಮಸ್ಯೆಯೊಂದಿಗೆ ಹೋರಾಡಿದರು. ದೊಡ್ಡ ಕುಂಬಳಕಾಯಿಗಳಿಗೆ ಮಾರುಕಟ್ಟೆ ಬೇಡಿಕೆ ಇದೆ. ಸ್ಥಳೀಯ ಪ್ರಭೇದಗಳು ರೋಗ ಬಾಧೆಗೆ ಒಳಗಾಗುವ ಸಾಧ್ಯತೆಯು ಹೆಚ್ಚಿರುವುದರಿಂದ ಅತಿ ಕೀಟನಾಶಕ ಬಳಕೆ ಮಾಡಲಾಯಿತು. ಇದು ತರಕಾರಿಯ ಕಳಪೆ ಗುಣಮಟ್ಟಕ್ಕೆ ಕಾರಣವಾಯಿತು.
2021 ರಲ್ಲಿ ಪೂರ್ವ-ಪಶ್ಚಿಮ ಬೀಜ ಜ್ಞಾನ ವರ್ಗಾವಣೆ ಪ್ರತಿಷ್ಠಾನ (EWS-KT) ಮಯೂರ್ಭಂಜ್ ಮತ್ತು ಕಿಯೊಂಜಾರ್ನಲ್ಲಿರುವ ಸಣ್ಣ ಹಿಡುವಳಿದಾರ ರೈತರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ಪರಿಸ್ಥಿತಿ ಬದಲಾಗಲು ಪ್ರಾರಂಭಿಸಿತು. EWS-KT ಸ್ಥಳೀಯ ರೈತರೊಂದಿಗೆ ತರಕಾರಿ ಉತ್ಪಾದನಾ ಪ್ರದರ್ಶನ ಪ್ಲಾಟ್ಗಳನ್ನು ಸ್ಥಾಪಿಸಿತು ಮತ್ತು ಸುಧಾರಿತ ಕೃಷಿ ತಂತ್ರಗಳ ಕುರಿತು ತರಬೇತಿ ಅವಧಿಗಳನ್ನು ನಡೆಸಿತು. ಏರುಮಡಿಗಳು, ಸರಿಯಾದ ಅಂತರ, ಸೂಕ್ತವಾದ ರಸಗೊಬ್ಬರ ಮತ್ತು ಸಮಗ್ರ ಕೀಟ ನಿರ್ವಹಣೆ (IPM) ವಿಧಾನಗಳು ರೈತರಿಗೆ ಹೆಚ್ಚಿನ ಮತ್ತು ಉತ್ತಮ-ಗುಣಮಟ್ಟದ ಇಳುವರಿಯನ್ನು ತಂದುಕೊಟ್ಟಿತು. ಹೀಗಿದ್ದೂ, ಸ್ಥಳೀಯ ಕುಂಬಳಕಾಯಿ ಪ್ರಭೇದಗಳಿಗೆ ಮಾರುಕಟ್ಟೆಯ ಸವಾಲುಗಳಿವೆ.
2022 ರಲ್ಲಿ, EWS-KT ಕಿಯೋಂಜಾರ್ನಲ್ಲಿ ತರಕಾರಿ ಉತ್ಪಾದನಾ ಕಲಿಕಾ ಕೇಂದ್ರವಾದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಿತು. ಅಲ್ಲಿ ರೈತರು ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಸುಸ್ಥಿರ ಕೃಷಿ ಪದ್ಧತಿಗಳಿಗೆ ಒಡ್ಡಿಕೊಳ್ಳುತ್ತಾರೆ. ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಮತ್ತು EWS-KT ರೈತರ ಕುಂಬಳಕಾಯಿ ಪ್ರಾತ್ಯಕ್ಷಿಕೆ ಪ್ಲಾಟ್ಗಳಲ್ಲಿ, ರೈತರು ಏಕರೂಪದ ದೊಡ್ಡ ಕುಂಬಳಕಾಯಿಗಳನ್ನು ನೋಡಿದರು. ಅವರು ಕಲಿತ ಸುಧಾರಿತ ಕೃಷಿ ತಂತ್ರಗಳೊಂದಿಗೆ ಈ ಕುಂಬಳಕಾಯಿ ಸೇರಿದರೆ ಮಾರುಕಟ್ಟೆ ಬೇಡಿಕೆಯನ್ನು ಪೂರೈಸಬಲ್ಲದು ಎನ್ನುವುದು ಅವರಿಗೆ ಅರಿವಾಯಿತು.
ಚೌಕ 1: ಉತ್ತಮ ಜೀವನೋಪಾಯಕ್ಕಾಗಿ ಸುಧಾರಿತ ಕುಂಬಳಕಾಯಿ ಕೃಷಿ
ರಾಯ್ಬರಿ ಬೆಹೆರಾ ಒರಿಸ್ಸಾದ ಮಯೂರ್ಭಂಜ್ ಜಿಲ್ಲೆಯ ಕಾರಂಜಿಯಾ ಬ್ಲಾಕ್ನಲ್ಲಿರುವ ಸಾರಂಗಗಡ ಎಂಬ ಹಳ್ಳಿಯಲ್ಲಿ ತರಕಾರಿ ಬೆಳೆಯುತ್ತಿರುವ ಯುವ ರೈತಮಹಿಳೆ. ಈಕೆ ತಮ್ಮ ಪತಿಯೊಂದಿಗೆ ಸ್ವಂತವಾಗಿ ಕೃಷಿ ಮಾಡುತ್ತಾರೆ. ಮಾ ತಾರಿಣಿ ಎಂಬ ಮಹಿಳಾ ಸ್ವ-ಸಹಾಯ ಗುಂಪಿನ ಭಾಗವಾಗಿ ಬೆಳೆಗಳನ್ನು ಬೆಳೆಯುತ್ತಾರೆ. ಜುಲೈ 2023 ರಲ್ಲಿ, ರಾಯ್ಬರಿ ಪೂರ್ವ-ಪಶ್ಚಿಮ ಬೀಜ ಜ್ಞಾನ ವರ್ಗಾವಣೆ ಪ್ರತಿಷ್ಠಾನದ ತಾಂತ್ರಿಕ ಕ್ಷೇತ್ರ ಅಧಿಕಾರಿ ಸಾನು ಕುಮಾರ್ ಬೆಹೆರಾ ಅವರ ಅಮೂಲ್ಯ ಮಾರ್ಗದರ್ಶನದಲ್ಲಿ 800 ಚದರ ಮೀಟರ್ ಪ್ರಾತ್ಯಕ್ಷಿಕೆ ಭೂಮಿಯಲ್ಲಿ ಕುಂಬಳಕಾಯಿಗಳನ್ನು ಬೆಳೆಸಿದರು. ಈ ಅನುಭವವು ಅವರಿಗೆ ಸುಧಾರಿತ ಕೃಷಿ ತಂತ್ರಗಳಾದ ಏರುಮಡಿಗಳು, ಗುಣಮಟ್ಟದ ಬೀಜಗಳು ಮತ್ತು ಕೀಟ ತಡೆಗಟ್ಟುವಿಕೆ ಮತ್ತು ನೈಸರ್ಗಿಕ ಕೀಟ ನಿಯಂತ್ರಣ ವಿಧಾನಗಳಿಗೆ ಆದ್ಯತೆ ನೀಡುವ ಸಮಗ್ರ ಕೀಟ ನಿರ್ವಹಣೆ (IPM) ಬಗ್ಗೆ ಕಲಿಸಿತು. ಈ ವಿಧಾನಗಳು ಅವರಿಗೆ ಹೆಚ್ಚಿನ ಇಳುವರಿ ಮತ್ತು 286% ನಷ್ಟು ಪ್ರಭಾವಶಾಲಿ ROI ಅನ್ನು ತಂದುಕೊಟ್ಟವು. "ಸರಿಯಾದ ಕೃಷಿ ಪದ್ಧತಿಗಳು ಗಮನಾರ್ಹ ವ್ಯತ್ಯಾಸವನ್ನುಂಟುಮಾಡುತ್ತವೆ ಎನ್ನುವುದು ನನ್ನ ನಂಬಿಕೆ. ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡ ನಂತರ, ನನ್ನ ಬೆಳೆಗಳ ಗುಣಮಟ್ಟ ಸುಧಾರಣೆಗೊಳ್ಳುವುದರ ಜೊತೆಗೆ ಉತ್ಪಾದನಾ ವೆಚ್ಚದಲ್ಲಿ ಗಮನಾರ್ಹ ಇಳಿಕೆ ಆದದ್ದನ್ನು ಕಂಡಿದ್ದೇನೆ," ಎಂದು ರಾಯ್ಬರಿ ಹೆಮ್ಮೆಯಿಂದ ಹಂಚಿಕೊಂಡರು. ರಾಯ್ಬರಿ 2 ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಟೊಮೆಟೊ, ಮೆಣಸಿನಕಾಯಿ, ಹೂಕೋಸು ಮತ್ತು ಹಾಗಲಕಾಯಿ ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ. ಕುಂಬಳಕಾಯಿ ಪ್ರಾತ್ಯಕ್ಷಿಕೆಯು ಯಶಸ್ವಿ ಫಲಿತಾಂಶಗಳನ್ನು ಕಂಡ ನಂತರ, ಖಾರಿಫ್ ಋತುವಿನಲ್ಲಿ (ಜುಲೈ ನಿಂದ ಅಕ್ಟೋಬರ್ 2024) ದೊಡ್ಡ ಪ್ರಮಾಣದಲ್ಲಿ ಕುಂಬಳಕಾಯಿಗಳನ್ನು ಬೆಳೆಸಲು ನಿರ್ಧರಿಸಿದರು. ಇದಕ್ಕಾಗಿ 30 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದರು. 5,481 ಟನ್ ಕುಂಬಳಕಾಯಿ ಇಳುವರಿ ಪಡೆದರು. ರೂ. 738,000 ($8,800) ಹೂಡಿಕೆ ಮಾಡಿ ರೂ.1,819,800 ($21,700) ನಿವ್ವಳ ಲಾಭವನ್ನು ಗಳಿಸಿದರು. ತನ್ನ ಸ್ವಂತ ಭೂಮಿಯಲ್ಲಿ ಕೃಷಿ ಮಾಡುವುದರ ಜೊತೆಗೆ, ರಾಯ್ಬರಿ ಮಾ ತಾರಿಣಿ ಸ್ವ-ಸಹಾಯ ಗುಂಪಿನೊಂದಿಗೆ ಸಾಮೂಹಿಕ ಕುಂಬಳಕಾಯಿ ಉದ್ಯಮವನ್ನು ಪ್ರಾರಂಭಿಸಿದರು. ಸ್ವ-ಸಹಾಯ ಗುಂಪಿನ ಮಹಿಳೆಯರು ರಾಯ್ಬರಿಯ ಕುಂಬಳಕಾಯಿ ಪ್ರದರ್ಶನ ಸ್ಥಳದಲ್ಲಿ ಇಡಬ್ಲ್ಯೂಎಸ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಅವರಲ್ಲಿ ಕೆಲವರು ತಮ್ಮ ಕೃಷಿ ಪದ್ಧತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ತಮ್ಮ ಜೀವನೋಪಾಯವನ್ನು ಸುಧಾರಿಸಿಕೊಳ್ಳಲು ಕುಂಬಳಕಾಯಿಗಳನ್ನು ಬೆಳೆಯುವಲ್ಲಿ ಆಸಕ್ತಿ ತೋರಿಸಿದರು. ಕುಂಬಳಕಾಯಿ ವಿಶೇಷವಾಗಿ ಮಹಿಳಾ ರೈತರಿಗೆ ಆಕರ್ಷಕ ಬೆಳೆಯಾಗಿದೆ. ಏಕೆಂದರೆ ತುಲನಾತ್ಮಕವಾಗಿ ಇದು ಅತ್ಯಲ್ಪ ಹೂಡಿಕೆ ಮತ್ತು ಕಡಿಮೆ ನಿರ್ವಹಣಾ ಅವಶ್ಯಕತೆಗಳನ್ನು ಹೊಂದಿದೆ. ಆಗಸ್ಟ್ 2024 ರಲ್ಲಿ, ರಾಯ್ಬರಿ ಮತ್ತು ಸ್ವ-ಸಹಾಯ ಗುಂಪಿನ ಇತರ ನಾಲ್ವರು ಸದಸ್ಯರು ಕುಂಬಳಕಾಯಿಗಳನ್ನು ಬೆಳೆಯಲು 30 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದರು. ರೋಗ ನಿರೋಧಕ ತಳಿಯನ್ನು ಆಯ್ಕೆ ಮಾಡಿಕೊಂಡು ಸುಧಾರಿತ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡರು. ಅನೇಕ ಮಹಿಳೆಯರಿಗೆ, ಕೃಷಿಗೆ ಆರ್ಥಿಕ ಅಡೆತಡೆಗಳು ಇರಬಹುದು. ಗುಂಪಿನಲ್ಲಿ ಒಟ್ಟಾಗಿ ಕೃಷಿ ಮಾಡುವುದರಿಂದ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬಹುದು. ತಮ್ಮ ಕುಂಬಳಕಾಯಿ ತೋಟಕ್ಕೆ ಹಣವನ್ನು ಸಂಗ್ರಹಿಸಲು, ಮಹಿಳೆಯರು ಸ್ವಸಹಾಯ ಗುಂಪುಗಳಿಂದ, ಸರ್ಕಾರಿ ಕಾರ್ಯಕ್ರಮದ ಮೂಲಕ ಬ್ಯಾಂಕ್ಗಳಿಂದ ಸಾಲವನ್ನು ಪಡೆದರು. ಜೊತೆಗೆ ತಮ್ಮಲ್ಲಿನ ಹಣವನ್ನು ಒಗ್ಗೂಡಿಸಿದರು. ಅಂತಿಮವಾಗಿ ರೂ.738,000ಗಳನ್ನು ($8,800) ಹೂಡಿಕೆ ಮಾಡಿದರು. ಇದು ಲಾಭದಾಯಕ ಹೂಡಿಕೆಯಾಗಿತ್ತು: ಅವರ ಸಾಮೂಹಿಕ ಕುಂಬಳಕಾಯಿ ತೋಟವು ರೂ.1,750,200 ($20,800) ನಿವ್ವಳ ಲಾಭವನ್ನು ಗಳಿಸಿತು. ಅದನ್ನು ಅವರು ತಮ್ಮೊಳಗೆ ಸಮಾನವಾಗಿ ಹಂಚಿಕೊಂಡರು. ಲಾಭದೊಂದಿಗೆ, ರಾಯ್ಬರಿ ಮತ್ತು ಅವರ ಗುಂಪು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಮುಂದಿನ ಋತುವಿನ ಬೆಳೆಗೆ ಸರಬರಾಜು ಮತ್ತು ಕೂಲಿಕಾರನನ್ನು ಒಳಗೊಂಡಂತೆ ತಮ್ಮ ಕೃಷಿಯಲ್ಲಿ ಮತ್ತಷ್ಟು ಹೂಡಿಕೆ ಮಾಡುತ್ತಿದೆ. ಕುಂಬಳಕಾಯಿ ಖಾರಿಫ್ ಋತುವಿಗೆ ಹೆಚ್ಚು ಸೂಕ್ತವಾದ ಬೆಳೆಯಾಗಿದ್ದು, ರಬಿ ಋತುವಿಗೆ (ನವೆಂಬರ್ ನಿಂದ ಏಪ್ರಿಲ್) ರಾಯ್ಬರಿ ಕಲ್ಲಂಗಡಿಗಳನ್ನು ಬೆಳೆಯಲು ಯೋಜಿಸುತ್ತಿದ್ದಾರೆ. ಅವರು ತಮ್ಮ ಪತಿಯೊಂದಿಗೆ ಗುತ್ತಿಗೆ ಪಡೆದ 8 ಎಕರೆಯಲ್ಲಿ ಮತ್ತು ಸ್ವಸಹಾಯ ಗುಂಪಿನೊಂದಿಗೆ 10 ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲಿದ್ದಾರೆ. ಸರಿಯಾದ ಬೆಂಬಲ ಮತ್ತು ತಿಳಿವಳಿಕೆ ಇದ್ದರೆ, ಮಹಿಳೆಯರು ಕೃಷಿಯನ್ನು ಹೊಸತನದೊಂದಿಗೆ ನಡೆಸಬಹುದು ಎಂದು ರಾಯ್ಬರಿ ತೋರಿಸಿದ್ದಾರೆ. ಮೂಲ: https://www.ews-kt.com/improved-pumpkin-farming-forbetter- livelihoods/ ort and knowledge, women can lead the way in farming innovation. Source: https://www.ews-kt.com/improved-pumpkin-farming-forbetter- livelihoods/ ort and knowledge, women can lead the way in farming innovation. |
ಉತ್ತಮ ರೋಗ ನಿರೋಧಕತೆಯನ್ನು ಹೊಂದಿರುವ ಈ ಕುಂಬಳಕಾಯಿಗಳನ್ನು ಬೆಳೆಸುವುದರಿಂದ ರೈತರು ಕೀಟನಾಶಕಗಳನ್ನು ಸಿಂಪಡಿಸುವ ಬದಲು ಫೆರೋಮೋನ್ ಬಲೆಗಳಂತಹ ಹೊಸ ಬಗೆಯ ಕೀಟ ನಿರ್ವಹಣಾ ತಂತ್ರಗಳನ್ನು ಅವಲಂಬಿಸಬಹುದು. ಹೆಚ್ಚಿನ ರೈತರು ತಮ್ಮ ಕುಂಬಳಕಾಯಿ ಹೊಲಗಳಲ್ಲಿ ಕೀಟನಾಶಕಗಳನ್ನು ಬಳಸದೆ ಇರುವುದರಿಂದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಯಿತು. ಇದರಿಂದ ಪರಿಸರ ಮತ್ತು ಗ್ರಾಹಕರಿಗೆ ಪ್ರಯೋಜನವಾಯಿತು.
ಈ ಪ್ರದೇಶದಲ್ಲಿ ಉತ್ಪಾದಿಸುವ ಕುಂಬಳಕಾಯಿಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವುದರೊಂದಿಗೆ ಕೋಲ್ಕತ್ತಾಗೆ (ಸುಮಾರು ನಾಲ್ಕು ಗಂಟೆಗಳ ದೂರದಲ್ಲಿ) ರವಾನಿಸಲಾಗುತ್ತದೆ. ಇದಕ್ಕಾಗಿ ಹೊಸ ವಿಧದ ದೀರ್ಘಾವಧಿಯ ಶೆಲ್ಫ್ ಲೈಫ್, ದೂರದ ಸಾಗಣೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಅಗತ್ಯ. ಮೇಲ್ಭಾಗ ಮತ್ತು ಕೆಳಭಾಗ ಸಮತಟ್ಟಾಗಿರುವುದರಿಂದ ದೂರದೂರಿಗೆ ಕಳಿಸಲು ಕುಂಬಳಕಾಯಿಗಳನ್ನು ಜೋಡಿಸಲು ಸುಲಭವಾಗುತ್ತದೆ. ಇವುಗಳಿಂದ ಮಾರಾಟಕ್ಕೆ ಅನುಕೂಲವಾಗುತ್ತದೆ ಎಂದು ರೈತರು ಅರಿತರು.
ಇಂದು, ಕಾರಂಜಿಯಾ ಮತ್ತು ಅಕ್ಕಪಕ್ಕದ ಊರಿನ ರೈತರು ಉತ್ತಮ ಗುಣಮಟ್ಟದ ಬೀಜಗಳು ಮತ್ತು ಉತ್ತಮ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಕುಂಬಳಕಾಯಿ ಉತ್ಪಾದನೆಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಿದ್ದಾರೆ. ಕುಂಬಳಕಾಯಿ ಕೃಷಿಗಾಗಿ ಹೆಚ್ಚು ಹೆಚ್ಚು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದಾರೆ. ಕೊಯ್ಲಿನ ಸಮಯದಲ್ಲಿ, ಬೆಳೆಗಾರರ ಉತ್ತಮ ಗುಣಮಟ್ಟದ ಕುಂಬಳಕಾಯಿಗಳನ್ನು ಕೊಳ್ಳಲು ಪಶ್ಚಿಮ ಬಂಗಾಳದಿಂದ ನೂರಾರು ಟ್ರಕ್ಗಳು ಬರುತ್ತವೆ. ರೈತರು ತಮ್ಮ ಲಾಭವನ್ನು ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.
ರೈತರು ಕಡಿಮೆ ಇಳುವರಿ ನೀಡುವ ಸಾಂಪ್ರದಾಯಿಕ ಕುಂಬಳಕಾಯಿ ತಳಿಗಳಿಂದ ಹೆಚ್ಚಿನ ಇಳುವರಿ ನೀಡುವ ತಳಿಗಳಿಗೆ ಬದಲಾಗಿರುವುದರಿಂದ, EWS-KT ಯ ಹಸ್ತಕ್ಷೇಪವು ಕುಂಬಳಕಾಯಿ ಮಾರುಕಟ್ಟೆಯನ್ನು ಬದಲಿಸಿದೆ. ಕುಂಬಳಕಾಯಿ ಬೀಜಗಳು ಸೇರಿದಂತೆ ಉತ್ತಮ ಗುಣಮಟ್ಟದ ಒಳಸುರಿಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಇದು ರೈತರು, ಕೃಷಿ-ಒಳಸುರಿಗಳ ವಿತರಕರು ಮತ್ತು ತರಕಾರಿ ಮೌಲ್ಯ ಸರಪಳಿಯಲ್ಲಿರುವ ಇತರರಿಗೆ ಉತ್ತೇಜಕ ವಿಸ್ತರಣಾ ಅವಕಾಶವಾಗಿದೆ.
EWS-KT ಕಾರ್ಯನಿರ್ವಾಹಕ ನಿರ್ದೇಶಕ ಸ್ಟುವರ್ಟ್ ಮಾರಿಸ್ ಇತ್ತೀಚೆಗೆ ಪೂರ್ವ ಒರಿಸ್ಸಾದ ಕುಂಬಳಕಾಯಿ ಹೊಲಗಳಿಗೆ ಭೇಟಿ ನೀಡಿದರು. "ಮಾರುಕಟ್ಟೆ ಮತ್ತು ಭೂಮಿ ಲಭ್ಯವಿರುವಲ್ಲಿ, ಪೌಷ್ಟಿಕಾಂಶಯುಕ್ತವಾದ ಕುಂಬಳಕಾಯಿ ಒಂದು ಅದ್ಭುತ ಬೆಳೆ" ಎಂದು ಅವರು ಹೇಳಿದರು. EWSKT ಯ ಆಫ್ರಿಕಾದ ಕುಂಬಳಕಾಯಿ ಯೋಜನೆಯ ಬಗ್ಗೆ ಹೇಳುತ್ತಾ, "ಪೂರ್ವ-ಪಶ್ಚಿಮ ಬೀಜ ಸಂಸ್ಥಾಪಕ ಮತ್ತು ವಿಶ್ವ ಆಹಾರ ಪ್ರಶಸ್ತಿ ಪುರಸ್ಕೃತ ಸೈಮನ್ ಗ್ರೂಟ್ ಅವರು ಆಫ್ರಿಕಾದಲ್ಲಿ ಒಂದು ಮಿಲಿಯನ್ ಎಕರೆ ಕುಂಬಳಕಾಯಿ ಬೆಳೆಸುವ ಗುರಿಯನ್ನು ಹೊಂದಿದ್ದಾರೆ. ಭಾರತದ ಒರಿಸ್ಸಾದಲ್ಲಿರುವ ಈ ಸರಳ ಹೆಚ್ಚು ಲಾಭದಾಯಕ ಕ್ಷೇತ್ರಗಳಿಂದ ಸಾಕಷ್ಟು ಸ್ಫೂರ್ತಿ ಪಡೆಯಬಹುದು."
ಟಿಪ್ಪಣಿ: This article was originally published at https:// www.ews-kt.com/odisha-india-a-new-hub-for-pumpkinfarming/
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೩ ; ಸೆಪ್ಟಂಬರ್ ೨೦೨೫



