ಉತ್ತಮ ಆದಾಯಕ್ಕಾಗಿ ಮೌಲ್ಯವರ್ಧನೆ


ರೈತ ಉತ್ಪಾದಕ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಮೌಲ್ಯವರ್ಧನೆಯಲ್ಲಿ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿದಲ್ಲಿ ಉತ್ಪನ್ನದ ಗುಣಮಟ್ಟ ಹೆಚ್ಚುತ್ತದೆ, ಮಾರಾಟದ ಸಾಮರ್ಥ್ಯ ಸುಧಾರಿಸುತ್ತದೆ, ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಮತ್ತು ಆದಾಯವನ್ನು ಒದಗಿಸುತ್ತದೆ.


ಭಾರತದಲ್ಲಿನ ಕೃಷಿಗುಂಪಿನಲ್ಲಿ ಮುಖ್ಯವಾಗಿ ಇರುವುದು ಸಣ್ಣ ಮತ್ತು ಅತಿಸಣ್ಣ ರೈತರು. ರೈತರ ಪ್ರಾಥಮಿಕ ಸವಾಲುಗಳು ಬೆಳೆ ವೈಫಲ್ಯ, ಹವಾಮಾನ ಬದಲಾವಣೆಗಳು, ತಿಳುವಳಿಕೆ ಮತ್ತು ಮಾರ್ಗದರ್ಶನದ ಕೊರತೆ, ಸಾಲದ ಹೊರೆ, ದುಡಿಯುವ ಬಂಡವಾಳದ ಕೊರತೆ. ಇವು ಅವರನ್ನು ದುರ್ಬಲರನ್ನಾಗಿಸಿದೆ. ಅಸಂಘಟಿತರಾಗಿರುವುದರಿಂದ ಒಳಸುರಿಯುವಿಕೆಗಳನ್ನು ಪಡೆಯಲು, ಮಾರುಕಟ್ಟೆಯ ಮೇಲೆ ಹತೋಟಿ ಸಾಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಸಣ್ಣ ರೈತರ ಗುಂಪುಗಳಾದ ರೈತ ಉತ್ಪಾದಕ ಸಂಸ್ಥೆಗಳು (FPOs) ಮತ್ತು ಸಹಕಾರಿ ಸಂಸ್ಥೆಗಳು ರೈತರು, ಮೀನುಗಾರರು, ಹಾಲು ಉತ್ಪಾದಕರು, ನೇಕಾರರು ಮತ್ತು ಇತರರಂತಹ ಪ್ರಾಥಮಿಕ ಉತ್ಪಾದಕರಿಂದ ರಚಿಸಲ್ಪಟ್ಟ ಕಾನೂನು ಸಂಸ್ಥೆಗಳಾಗಿವೆ. ಅವು ಉತ್ಪಾದಕ ಕಂಪನಿಯಾಗಿರಬಹುದು ಅಥವಾ ಸದಸ್ಯರ ನಡುವೆ ಲಾಭಗಳ ಹಂಚಿಕೆಯನ್ನು ಸಕ್ರಿಯಗೊಳಿಸುವ ಸಹಕಾರಿ ಸಂಘವಾಗಿರಬಹುದು.  ಅಂತಹ ಉತ್ಪಾದಕ ಸಂಸ್ಥೆಗಳ ಪ್ರಾಥಮಿಕ ಧ್ಯೇಯವು ತಮ್ಮ ಸಂಸ್ಥೆಯ ಉತ್ಪಾದಕರಿಗೆ ಉತ್ತಮ ಆದಾಯ ಸಿಗುವಂತೆ ಮಾಡುವುದು.  ಅವು ಆದಾಯವನ್ನು ಹೆಚ್ಚಿಸುವ ನಿರೀಕ್ಷೆ ಹೊಂದಿರುತ್ತದೆ, ವಹಿವಾಟು ವೆಚ್ಚಗಳು ಸೇರಿದಂತೆ ಒಳಸುರಿಯುವಿಕೆ ಖರೀದಿಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಸಂಸ್ಕರಣೆ, ವಿತರಣೆ ಮತ್ತು ಮಾರುಕಟ್ಟೆ ಸೇರಿದಂತೆ ಮೌಲ್ಯವರ್ಧನೆಯಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತದೆ, ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಔಪಚಾರಿಕ ಸಾಲಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಈ ಎಫ್‌ಪಿಒಗಳು ಸದಸ್ಯರ ವಿಶ್ವಾಸವನ್ನು ಗಳಿಸುವ ವಿಷಯದಲ್ಲಿ ನಿಯಮಿತವಾಗಿ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತವೆ. ಮತ್ತೊಂದೆಡೆ ಸದಸ್ಯರಿಗೆ ಅದರ ಸ್ವರೂಪದ ಕುರಿತಾಗಲಿ, ತಾವು ಅದರ ಸದಸ್ಯರಾಗುವ ಆಯ್ಕೆ ಕುರಿತಾಗಲಿ ಸ್ಪಷ್ಟತೆಯಿರುವುದಿಲ್ಲ. ಪ್ರಸ್ತುತ, ಬೆಂಬಲವನ್ನು ನೀಡುತ್ತಿರುವ ಮುಖ್ಯವಾಹಿನಿಯ ಪ್ರಮುಖ ಸಂಸ್ಥೆ ಎಂದರೆ, ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್). ಇದು ತಾಂತ್ರಿಕ ಮತ್ತು ವ್ಯವಸ್ಥಾಪಕ ಬೆಂಬಲದ ಜೊತೆಗೆ ಹಣಕಾಸಿನ ನೆರವು ನೀಡುವ ಮೂಲಕ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುತ್ತಿದೆ. ಶ್ರೀ ಬಾಲಾಜಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಚೌಕ 1 ರಲ್ಲಿ ಉದಾಹರಣೆಯಾಗಿ ನೀಡಲಾಗಿದೆ.

ಚೌಕ 1 :  ಶ್ರೀ ಬಾಲಾಜಿ ರೈತ ಉತ್ಪಾದಕ ಕಂಪನಿ

ಶ್ರೀ ಬಾಲಾಜಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂಬುದು ಬಿಹಾರದ ಗಯಾದ ಮುರೇರಾ ಗ್ರಾಮದಲ್ಲಿ 2019 ರಲ್ಲಿ ಪ್ರಾರಂಭವಾದ ರೈತ ಉತ್ಪಾದಕ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಆರಂಭದಲ್ಲಿ ATMA ಗುಂಪಿನಂತೆ ಪ್ರಾರಂಭಿಸಲಾಯಿತು. ಹಿಂದೆ “ಶ್ರೀ ಬಾಲಾಜಿ ಕೃಷಿ ಉದಯ್ಮಿ ಸಮೂಹ” ಎಂದು ಕರೆಯಲಾಗುತ್ತಿತ್ತು. ಸುಮಾರು 30 ರೈತರನ್ನು ತೊಡಗಿಸಿಕೊಂಡು ಇದನ್ನು ಪ್ರಾರಂಭಿಸಲಾಯಿತು. ನಂತರ, ಈ ಸಂಸ್ಥೆಯು ರೂ 3,20,000 ಆರಂಭಿಕ ಬಂಡವಾಳದೊಂದಿಗೆ ಕಸ್ಟಮ್ ನೇಮಕಾತಿ ಕೇಂದ್ರವನ್ನು ಸ್ಥಾಪಿಸಿತು. ನಂತರ, ರೂ. 10 ಲಕ್ಷ ಹೂಡಿಕೆಯೊಂದಿಗೆ ವಿವಿಧ ಕೃಷಿ ಉಪಕರಣಗಳನ್ನು ಖರೀದಿಸಿ ಅದನ್ನು ಬಳಸಲಾರಂಭಿಸಿದರು. ಮೊದಲ ವರ್ಷ ರೂ. 4 ಲಕ್ಷ ಲಾಭ ಪಡೆದರು. ಸದಸ್ಯತ್ವದ ವಿಸ್ತರಣೆ ಈ ಸಂಸ್ಥೆ ಎದುರಿಸಿದ ಪ್ರಮುಖ ಅಡಚಣೆಯಾಗಿದೆ. ಕೆವಿಕೆ ಮತ್ತು ಎಟಿಎಂಎ ಗುಂಪುಗಳು ಮತ್ತು ಎಟಿಎಂಎ ಗುಂಪಿನ ಜನರು ಅವರಿಗೆ ಸಹಾಯ ಮಾಡಿದರು. ಪ್ರಸ್ತುತ, ಅವರು ಲೆಮೊನ್ಗ್ರಾಸ್ ಕೃಷಿ, G-9 ಬಾಳೆಹಣ್ಣುಗಳು ಮತ್ತು ರೆಡ್ ಲೇಡಿ ಪಪ್ಪಾಯಿ ಮತ್ತು ಮೀನುಗಾರಿಕೆಯನ್ನು ಒಳಗೊಂಡಿರುವ ಹೊಸ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಸ್ಮತಿ ಅಕ್ಕಿಯ (1121 ಮತ್ತು 1509) ತಳಿಗಳನ್ನು ಬಂಗಾಳ ಮತ್ತು ಪಂಜಾಬ್‌ನ ಮಾರುಕಟ್ಟೆಗಳಿಗೆ ಉತ್ತಮ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಲು ಪ್ರಾರಂಭಿಸಿದರು.

ಕೆಲವು ಯಶೋಗಾಥೆಗಳು

ಕೊಯ್ಲಿನ ನಂತರ ನಷ್ಟ ಕಡಿಮೆ ಮಾಡುವ ಮತ್ತು ಉತ್ತಮ ಆದಾಯ ಗಳಿಸುವ ಮೌಲ್ಯವರ್ಧನೆಯು ಹಲವು ಎಫ್‌ಪಿಒಗಳ ತಂತ್ರವಾಗಿದೆ. ವಿವಿಧ ಸಂದರ್ಭಗಳಲ್ಲಿ ಇಂತಹ ಪ್ರಯತ್ನಗಳ ಹಲವು ಉದಾಹರಣೆಗಳಿವೆ. ಏಕರೂಪದ ಉತ್ಪಾದನೆ ಅಥವ ಸ್ಥಳೀಯ ಉತ್ಪಾದನೆಯ ಸಂದರ್ಭದಲ್ಲಿ ಇದನ್ನು ಕಾಣಬಹುದು. ಇದು ಅವರಿಗೆ ಸಂಘಟನೆಯ ಅವಕಾಶವನ್ನು ಒದಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಂಸ್ಕರಣೆ, ಮೌಲ್ಯವರ್ಧನೆಗೆ ಅಗತ್ಯವಿರುವ ಕೌಶಲ್ಯಗಳ ಸಾಮರ್ಥ್ಯದ ಮೂಲಕ ಸದಸ್ಯರ ಸಾಮರ್ಥ್ಯಗಳನ್ನು ಸುಧಾರಿಸಬೇಕು.

ವೈವಿಧ್ಯಮಯ ಸನ್ನಿವೇಶಗಳ ಕೆಲವು ಉದಾಹರಣೆಗಳನ್ನು ಕೆಳಗೆ ವಿವರಿಸಲಾಗಿದೆ.

ಮೇಘಾಲಯದಲ್ಲಿ ಬಾಳೆಯ ಮೌಲ್ಯವರ್ಧನೆ

ಮೇಘಾಲಯದ ಬೋಲ್ಕಿಂಗ್ಗ್ರೆ ಮಹಿಳಾ ಸರಕು ಹಿತಾಸಕ್ತಿ ಗುಂಪು ಬಾಳೆ ಕೃಷಿಗೆ ಸಂಬಂಧಿಸಿದೆ. ಬಾಳೆಹಣ್ಣು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮೇಘಾಲಯದ ಗಾರೋ ಬೆಟ್ಟಗಳಲ್ಲಿ ವ್ಯಾಪಕವಾಗಿ ಬೆಳೆಯುವ ತೋಟಗಾರಿಕಾ ಬೆಳೆಯಾಗಿದೆ. ಅವರು ಬಿಟಗುರಿ (ಅಥವಾ ನೇಂದ್ರನ್) ಎಂಬ ದೇಸಿ ಬಾಳೆಹಣ್ಣನ್ನು ಬೆಳೆಯುತ್ತಾರೆ. ಹಣ್ಣಿನ ಗಾತ್ರ ಮತ್ತು ಚಿಪ್ಸ್‌ ಮಾಡಲು ಸೂಕ್ತವಾಗಿರುವುದು ಈ ವಿಶಿಷ್ಟ ಬಾಳೆಯ ಆಕರ್ಷಣೆಯಾಗಿದೆ. ಈಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಕೇಂದ್ರದ ನೆರವಿನಿಂದ ಉಪ್ಪಿನಕಾಯಿ ಹಾಗೂ ಬಾಳೆಹಣ್ಣಿನ ಚಿಪ್ಸ್ ಮಾಡುವ ತಂತ್ರವನ್ನು ಕಲಿತರು. ಇದರಿಂದಾಗಿ ಅವರ ವಾರದ ಹಾಗೂ ತಿಂಗಳ ಆದಾಯ ಹೆಚ್ಚಿತು.

ಮೀನು ಮತ್ತು ಅದರ ಉತ್ಪನ್ನಗಳ ಮೌಲ್ಯವರ್ಧನೆ

ATMA ಗುಂಪು (ಶ್ರೀ ರೇಣುಕಾದೇವಿ ಎಟಿಎಂಎ ಗುಂಪು) ಮೌಲ್ಯವರ್ಧನೆಯೊಂದಿಗೆ ಗುಂಪು ವಿಧಾನದ ಮೂಲಕ ಅವರ ಕೃಷಿ ಮತ್ತು ಆದಾಯದ ಸ್ಥಿತಿಯನ್ನು ಹೆಚ್ಚಿಸಲು ಯೋಜಿಸಿದೆ. ಮೌಲ್ಯವರ್ಧನೆ ಮತ್ತು ಕೊಯ್ಲಿನ ನಂತರದ ತಂತ್ರಜ್ಞಾನ ಎರಡರಲ್ಲೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ, ಮೀನು ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ (ಒಣ ಉತ್ಪನ್ನಗಳು, ಬೇಯಿಸಿದ ವಸ್ತುಗಳು ಮತ್ತು ಸಂಗ್ರಹಿಸಬಹುದಾದ ಮೀನು ಉತ್ಪನ್ನಗಳು) ಉತ್ಪಾದನೆಯ ವ್ಯಾಪ್ತಿಯನ್ನು ಹೆಚ್ಚಿಸಲು, ಜೊತೆಗೆ ಮಾರುಕಟ್ಟೆ ತಂತ್ರಗಳ ಕುರಿತು ಮೀನು ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ತಮಿಳುನಾಡು ಡಾ ಜಯಲಲಿತಾ ಮೀನುಗಾರಿಕಾ ವಿಶ್ವವಿದ್ಯಾಲಯದ ಸಹಾಯದಿಂದ ಗುಂಪು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಗುಂಪು ಮೌಲ್ಯವರ್ಧನೆಯನ್ನು ಕೈಗೊಳ್ಳಬೇಕಾಗಿದೆ.

ಮಾವಿನ ಮೌಲ್ಯವರ್ಧನೆಕೃಷಿ ವಿಜ್ಞಾನ ಕೇಂದ್ರ, ಉನ್ನಾವ್ ಮತ್ತು ಉತ್ತರ ಪ್ರದೇಶದ ಜಿಲ್ಲಾ ಕೃಷಿ ಇಲಾಖೆಯು ಶ್ರೀಮತಿ ತಾರಾವತಿ ಅವರಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವ ಮೂಲಕ ಅವರ ಕೃಷಿಯನ್ನು ಉತ್ತಮ ರೀತಿಯಲ್ಲಿ ಸುಸ್ಥಿರಗೊಳಿಸಿಕೊಳ್ಳಲು ಸಹಾಯ ಮಾಡಿದೆ. ನಂತರ ಅವರು “ಮಾವಿನ ಹಣ್ಣಿನ ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ” ಯೋಜನೆಯ ಭಾಗವಾದರು. ನಂತರ, ಆಕೆ ತನ್ನ ಜಮೀನಿನ ಮಾವಿನ ಹಣ್ಣಿನಲ್ಲಿ ಮೌಲ್ಯವರ್ಧನೆಯನ್ನು ಪ್ರಾರಂಭಿಸಿದಳು. ಉಪ್ಪಿನಕಾಯಿ ಮತ್ತು ಪುಡಿಯನ್ನು ತಯಾರಿಸಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಳು.

ಉಪಸಂಹಾರ

ರೈತ ಉತ್ಪಾದಕ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಅವರು ರೈತರಿಗೆ ಹೆಚ್ಚಿನ ಚೌಕಾಶಿ ಶಕ್ತಿಯಂತಹ ಅನೇಕ ಪ್ರಯೋಜನಗಳನ್ನು ಒದಗಿಸುತ್ತಾರೆ, ಒಳಸುರಿಯುವಿಕೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಾರೆ. ಈ ಸಂಸ್ಥೆಗಳ ಸಾಮರ್ಥ್ಯವನ್ನು ವಿವಿಧ ತರಬೇತಿ ಕಾರ್ಯಕ್ರಮಗಳ ಮೂಲಕ ನಿರ್ಮಿಸಬೇಕು. ಉತ್ತಮ ಗುಣಮಟ್ಟದ ಉತ್ಪನ್ನವನ್ನು ಪಡೆಯಲು, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಮೌಲ್ಯವರ್ಧನೆಯ ಮೂಲಕ ಉತ್ತಮ ಆದಾಯವನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ, ಅವರು NABARD ಮತ್ತು SFAC (ಸಣ್ಣ ರೈತರ ಕೃಷಿ ಉದ್ಯಮ ಒಕ್ಕೂಟ), KVK ಗಳು, ATMA ಹಾಗೂ ಹಲವಾರು NGOಗಳಿಂದ ಬೆಂಬಲ ಪಡೆಯುತ್ತಿದ್ದಾರೆ. 

ಪರಾಮರ್ಶನ ಲೇಖನಗಳು

  1. Bikkina, N., Turaga, R. M. R., & Bhamoriya, V., Farmer producer organizations as farmer collectives: A case study from India., 2018, Development Policy Review,36(6), 669-687.
  2. Inspiring stories of progressive women farmers., 2020, Ministry of Agriculture & Farmers Welfare Department of Agriculture, Cooperation & Farmers Welfare. https://agricoop.nic.in/sites/default/files/Success%20Story%20_%208.pdf
  3. NABARD., Farmer producer organisations., 2015, https://www.nabard.org/demo/auth/

writereaddata/File/FARMER%20PRODUCER%20ORGANISATIONS.pdf

ಅಯ್ಯಗಾರಿ ರಾಮಲಾಲ್, ದಂಡಪಾಣಿ ರಾಜು, ಮಧುಲಿಕಾ ಸಿಂಗ್, ಅಜಯ್ ಕುಮಾರ್ ಮತ್ತು ಅಂಬಿಕಾ ರಾಜೇಂದ್ರನ್


Ayyagari Ramlal and Ambika Rajendran

Division of Genetics, ICAR-Indian Agricultural Research Institute (IARI),

Pusa Campus, Delhi – 110012

Corresponding author Email: rambikarajendran@gmail.com

 

Dhandapani Raju

Division of Plant Physiology, ICAR-Indian Agricultural Research Institute (IARI),

Pusa Campus, Delhi – 110012

 

Madhulika Singh, and Ajay Kumar

Cereal Systems Initiative for South Asia (CSISA – CIMMYT), Bihar

 

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೨ ; ಜೂನ್ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...