ಕೃಷಿಪರಿಸರಶಾಸ್ತ್ರ ಶಿಕ್ಷಣ: ಶಿಕ್ಷಣಶಾಸ್ತ್ರ ಮತ್ತು ಅಭ್ಯಾಸ


ಕಲಿಕೆಯಲ್ಲಿ ರೇಖಾತ್ಮಕ ವಿಧಾನದಿಂದ ಆವರ್ತಕ ವಿಧಾನದ ಕಡೆಗೆ ಬದಲಾಗುವ ಅವಶ್ಯಕತೆಯಿದೆ.  ವಿದ್ಯಾರ್ಥಿಗಳು ವ್ಯವಸ್ಥಿತ ಚಿಂತನೆಯತ್ತ ಸಾಗಿದಾಗ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಮುಖ್ಯವಾದ ಸಾಮರ್ಥ್ಯಗಳನ್ನು ರೂಪಿಸಿಕೊಂಡಾಗ ಸಂಭವಿಸುತ್ತದೆ. ಇದು ಕಲಿಕೆಗೆ ಸಹಾಯಮಾಡುತ್ತದೆ ಮತ್ತು ಇದನ್ನು ಕಲಿಸಲಾಗುವುದಿಲ್ಲ.


ನಮ್ಮ ಕೃಷಿ ಶಿಕ್ಷಣವು ಇನ್ನೂ ರೈತರನ್ನು ಹೊರಗಿನ ಮಧ್ಯಸ್ಥಗಾರರಂತೆ ಕಾಣುತ್ತದೆ.  ನಾವು ʼಅವರಲ್ಲಿಗೆ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹೋಗುತ್ತೇವೆ ಮತ್ತು ಪರಿಹಾರವನ್ನು ಸೂಚಿಸುತ್ತವೆ.ʼ ಈ ವಾಕ್ಯವನ್ನು ಪ್ರಖ್ಯಾತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮುಂದೆ ಹೇಳಿದಾಗ, ನಾನು ಇದರ ಮೂಲಕ ಏನನ್ನು ಹೇಳಬಯಸಿದ್ದೆನೋ ಅದನ್ನು ಹೇಳಲಾಗಿಲ್ಲ ಎನ್ನುವುದು ಅರ್ಥವಾಯಿತು. ಅವರು ತಮ್ಮನ್ನು ನಾನು ನನ್ನ ಅವಲೋಕನವನ್ನು ಸಮರ್ಥಿಸಿಕೊಳ್ಳುವಂತಹ ಹಲವು ಪ್ರತಿಕ್ರಿಯೆಗಳು ಅತ್ತಲಿಂದ ಇತ್ತ ಹಾರಾಡಿದವು.

ಕಳೆದ 7 ವರ್ಷಗಳಿಂದ ಸಂಶೋಧಕರು, ಕಾರ್ಯಕರ್ತರು ಮತ್ತು ಸಾಧಕರಿಗೆ ಕೃಷಿಪರಿಸರ ಶಾಸ್ತ್ರದ ಸರ್ಟಿಫಿಕೇಟ್ ಕೋರ್ಸ್ ನಡೆಸಿದ್ದೇವೆ. ಭಾರತದ 15 ರಾಜ್ಯಗಳು ಮತ್ತು 4 ಬೇರೆ ದೇಶಗಳಿಂದ ಸುಮಾರು 170 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಭಾರತದಲ್ಲಿ ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿಪರಿಸರ ಶಾಸ್ತ್ರವು ಹೊಸದಾಗಿ ಸೇರ್ಪಡೆಯಾದ ವಿಷಯವಾಗಿತ್ತು. ಕೃಷಿವಿಜ್ಞಾನದ ವಿಧಾನಗಳು ಬಹಳ ಹಿಂದಿನಿಂದಲೂ ‘ರೂಢಿಯಲ್ಲಿದ್ದರೂ’ – ಅದರ ವಿಜ್ಞಾನವು ಸಾಕಷ್ಟು ಹೊಸದಾಗಿದ್ದು ಈ ಚಳುವಳಿಯೂ ಹೊಸದಾಗಿತ್ತು. ಭಾರತದಲ್ಲಿ ರೈತ ಚಳುವಳಿಗಳು, ರೈತ ಹೋರಾಟಗಳಿದ್ದವು. ಬಹುತೇಕ ಅವು ಆರ್ಥಿಕ ಸಮಸ್ಯೆಗಳು,  ಭೂಮಿ ಹಕ್ಕು ಮತ್ತು ಅರಣ್ಯ ಹಕ್ಕುಗಳ ಸುತ್ತ ಇದ್ದವು. ಪ್ರಸ್ತುತ ರೈತ ಹೋರಾಟ ಕೂಡ ಮಾರುಕಟ್ಟೆ ಸಮಸ್ಯೆಗಳ ಸುತ್ತಲೇ ನಡೆಯುತ್ತಿದೆ. ಕೃಷಿ ವಿಜ್ಞಾನದ ಕಲಿಕೆಯು ಸಾವಯವ ಕೃಷಿ ಅಥವಾ ಸುಸ್ಥಿರ ಕೃಷಿ ಕೋರ್ಸ್‌ನ ಅರ್ಥ ಮತ್ತು ನಿರೀಕ್ಷೆಯನ್ನು ಸೂಚಿಸುತ್ತಿದೆ.  ಕೋರ್ಸ್‌ನ ಆರಂಭಿಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇದು ಮುಕ್ತ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಸವಾಲಿನ ವಿಷಯವಾಗಿದೆ. ಅಲ್ಲಿ ವಿದ್ಯಾರ್ಥಿಗಳು ಪೂರ್ವ ನಿಗದಿತ ಮಾಹಿತಿಗಳಿಗಿಂತ ನೈಜ ವಿದ್ಯಮಾನಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕಲಿಯುತ್ತಾರೆ.

ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಹೆಚ್ಚಾಗಿ ಸಾವಯವ ಕೃಷಿಯ ತಂತ್ರಗಳನ್ನು ಕಲಿಯುವ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಂತ್ರಜ್ಞಾನವನ್ನು ಅತಿಯಾಗಿ ಅವಲಂಬಿಸಿರುವುದರಿಂದ ಸವಾಲನ್ನು ಅದೇ ನಿಭಾಯಿಸುವ ಸರಳವಾದ ವಿಧಾನವಾಗಿದೆ.

ಕಾಲಕಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ನಡುವಿನ ವಿಭಜನೆಯು ಮರೆಯಾಗುತ್ತಿದೆ. ಆಧುನಿಕ ವಿಜ್ಞಾನವು ಸರಳ ಹಾಗೂ ಮಿತಕಾರಿಯಾಗಿದೆ. ಅದು ತ್ವರಿತ ಸಲಹೆಗಳನ್ನು ನೀಡುತ್ತಿದ್ದು ಅದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಕೃಷಿಯಲ್ಲೂ ಕಾಣಿಸಿಕೊಳ್ಳುತ್ತಿದೆ. ಒಂದು ಕೀಟಕ್ಕೆ ಒಂದು ಕೀಟನಾಶಕ, ಅಂತಹ ಮಿತವಾದದ ಅದ್ಭುತ ಉದಾಹರಣೆಯಾಗಿದೆ. ಸಾಂಪ್ರದಾಯಿಕ ಒಳಸುರಿಯುವಿಕೆಯ ಕೃಷಿಗೆ ಪರ್ಯಾಯಗಳು ಎಂದು ಹೇಳಲಾಗುವ ಬದಲಿ ಕ್ರಮಗಳು ಕೂಡ ಮಾಹಿತಿ ಆಧಾರಿತ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಬೀಜಾಮೃತ, ಜೀವಾಮೃತ, ಮುಚ್ಚುಗೆ, ಬ್ರಹ್ಮಾಸ್ತ್ರ. ಇದು ವಿಭಿನ್ನ ಚರ್ಚೆಯ ಕ್ಷೇತ್ರವಾಗಿದೆ – ಆದರೆ ತಂತ್ರಜ್ಞಾನ ಆಧರಿತವಾದ ವಿಧಾನದ(ಟೆಕ್ನೋ-ಫಿಕ್ಸಿಂಗ್‌) ಮೇಲಿನ ಅತಿಯಾದ ಬಳಕೆಯು ನಮ್ಮ ಕೃಷಿ ಶಿಕ್ಷಣ ವ್ಯವಸ್ಥೆಗೆ ಅನುಕೂಲಕರವಾಗಿದೆ.

ಇದು ಯಾವುದರ ಕುರಿತು?

ಹೀಗಿದ್ದೂ, ಸಾಂಪ್ರದಾಯಿಕ ಕೃಷಿಯಿಂದ ಕೃಷಿವಿಜ್ಞಾನ ಎನ್ನುವುದು ಕೇವಲ ಬದಲಿ ವಿಧಾನವಾಗಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತು. ಉತ್ಪಾದಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಂತಹ ಕೃಷಿಪರಿಸರ ವ್ಯವಸ್ಥೆಗಳ ನಿರ್ವಹಣೆ ಮಾಡುವುದು ಮತ್ತು ಅವುಗಳನ್ನು ಹೇಗೆ ಅಭ್ಯಾಸ ಮಾಡಬೇಕು ಹೇಗೆ ವಿನ್ಯಾಸಗೊಳಿಸಬೇಕು ಎನ್ನುವುದರ ಚೌಕಟ್ಟನ್ನು ರೂಪಿಸುವುದು ಈ ಕೋರ್ಸ್‌ ಎಂದು ಅವರಿಗೆ ಕ್ರಮೇಣ ಅರ್ಥವಾಯಿತು. ಕೃಷಿಪರಿಸರ ಸಿದ್ಧಾಂತಗಳನ್ನು ಬೋಧಿಸುವುದಕ್ಕಿಂತ ಕೃಷಿವಿಜ್ಞಾನಿಗಳನ್ನು ರೂಪಿಸುವುದರ ಕಡೆಗೆ ಹೆಚ್ಚಿನ ಗಮನಹರಿಸಿದ್ದರಿಂದ ವಿದ್ಯಾರ್ಥಿಗಳು ನೈಜ ಜೀವನ ಪರಿಸ್ಥಿತಿಗಳು ಹಾಗೂ ವಿದ್ಯಮಾನಗಳಿಗೆ ತೆರೆದುಕೊಂಡರು. ಸರಳವಾದ ದೃಷ್ಟಿಕೋನಕ್ಕೆ ಹೋಲಿಸಿದರೆ, ಕೃಷಿ ವ್ಯವಸ್ಥೆ, ನೈಸರ್ಗಿಕ ಪರಿಸರ ವ್ಯವಸ್ಥೆ, ಆಹಾರ ವ್ಯವಸ್ಥೆ, ಮಾರುಕಟ್ಟೆ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯಂತಹ ವಿವಿಧ ವ್ಯವಸ್ಥೆಗಳು ಪರಸ್ಪರ ಬೀರುವ ಪರಿಣಾಮದಿಂದ ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಇದು ಅವಕಾಶವನ್ನು ಕಲ್ಪಿಸಿದೆ.

ಪರಿಣಾಮಾತ್ಮಕ ಕ್ರಿಯೆಯ ಪರ್ಯಾಲೋಚನೆ ಆಧಾರಿತ ಶಿಕ್ಷಣಶಾಸ್ತ್ರದ ಮೇಲೆ ಕೇಂದ್ರಿತವಾದ ಕೋರ್ಸಿನಲ್ಲಿ ರೇಖಾತ್ಮಕ ವಿಧಾನದಿಂದ ಆವರ್ತಕ ವಿಧಾನಕ್ಕೆ ಮಾದರಿ ಬದಲಾವಣೆಯಾಯಿತು. ಕಲ್ಪಿತ ಸಿದ್ಧಾಂತವು ಸಕ್ರಿಯ, ಸಾಮಾಜಿಕ ಕಲಿಕೆಯ ಸಂಕೀರ್ಣ ವಾಸ್ತವತೆಯು ಈ ಮಾರ್ಗದ ಆರಂಭ ಬಿಂದುವಾಗಿದೆ. ಸಾಂಪ್ರದಾಯಿಕ ಸಿದ್ಧಾಂತ ಆಧಾರಿತ ಕಾರ್ಯತಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಸಂಕೀರ್ಣವಾದ ಸುಸ್ಥಿರತೆಯ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸುವಲು ಹೆಚ್ಚು ಸೂಕ್ತವಾಗಿದೆ. ಕ್ರಿಯಾಶೀಲ ಕಲಿಕೆಯು ತರಗತಿಯ ಹೊರಗೆ ಸಂಕೀರ್ಣ ಜಗತ್ತಿನಲ್ಲಿ ನಡೆಯುತ್ತದೆ. ಆದ್ದರಿಂದ ಕಲಿಕೆಯ ಪ್ರತಿ ಅಂಶವು ನಿಜಬದುಕಿನ ಅನುಭವವು ಅದರ ಪರ್ಯಾಲೋಚನೆ ಮತ್ತು ಆ ವಿಷಯದ ಕುರಿತಾದ ಸಿದ್ಧಾಂತದೊಂದಿಗೆ ಆರಂಭವಾಗುತ್ತದೆ. ಕ್ಷೇತದ ಕೆಲಸಗಳಲ್ಲಿ ತೊಡಗಿಸಿಕೊಂಡು ಅಲ್ಲಿನ ಸವಾಲುಗಳನ್ನು ಕಂಡುಹಿಡಿಯುವುದು ಮತ್ತು ಅದರ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು. ಮಾದರಿ ಕ್ಷೇತ್ರದಲ್ಲಿ ಕಲಿಕೆಯು ಆರಂಭವಾಗುತ್ತದೆ ಮತ್ತು ಅನುಭವವನ್ನು ಹೆಚ್ಚಿನ ಜನರೊಂದಿಗೆಹಂಚಿಕೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ. ಆವರ್ತಕ ವಿಧಾನದ ಮೂಲಕ ವಿದ್ಯಾರ್ಥಿಗಳು ಮೊದಲು ನೈಜ ಜೀವನದ ವಿದ್ಯಮಾನಗಳು ಅಥವಾ ಕ್ರಿಯೆಗೆ ತೆರೆದುಕೊಳ್ಳುವ ಮೂಲಕ ಕಲಿಯುತ್ತಾರೆ. ಪಡೆದುಕೊಂಡ ತಿಳಿವಳಿಕೆಯನ್ನು ಪರ್ಯಾಲೋಚಿಸುತ್ತಾರೆ ಮತ್ತು ಮುಂದಿನ ಕ್ರಿಯಾಶೀಲ ಆವರ್ತನವನ್ನು ಕೆಳಗಿನ ಚಿತ್ರದಲ್ಲಿ ವಿವರಿಸಲಾಗಿದೆ.

ಕೃಷಿ ಶಿಕ್ಷಣದಲ್ಲಿ, ರೈತರು ಯಾವಾಗಲೂ ವಿಸ್ತರಣಾ ವ್ಯವಸ್ಥೆಯಿಂದ ಜ್ಞಾನವನ್ನು ಸ್ವೀಕರಿಸುವವರಾಗಿ ಉಳಿಯುತ್ತಾರೆ – ಕೃಷಿಕನಿಗೆ ಹೇಗೆ ಕೃಷಿ ಮಾಡಬೇಕೆಂದು ಕಲಿಸಲು ಎಲ್ಲರೂ ಅಲ್ಲಿರುತ್ತಾರೆ! ಕೇವಲ ಮಾಹಿತಿ ಸಂಗ್ರಹಣೆ ಅಥವಾ ತಂತ್ರಜ್ಞಾನ ರೂಪಾಂತರಕ್ಕೆ ವಿರುದ್ಧವಾಗಿ, ರೈತರು ಮತ್ತು ಇತರ ವೃತ್ತಿಪರರು ಜ್ಞಾನ ಕೇಂದ್ರವಾಗಿ ಈ ಕೋರ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳು ಕೋರ್ಸಿನುದ್ದಕ್ಕೂ ರೈತರೊಂದಿಗೆ ಹಲವು ಬಾರಿ ಸಂವಾದ ನಡೆಸುತ್ತಾರೆ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಅವರೊಂದಿಗೆ ಇರುತ್ತಾರೆ. ಆರಂಭದಲ್ಲಿ ವಿದ್ಯಾರ್ಥಿಗಳು ಕೃಷಿ ಯೋಜನೆ, ತಂತ್ರಗಳು, ಪದ್ಧತಿಗಳು, ಮಾರುಕಟ್ಟೆಯೊಂದಿಗೆ ಸಂವಹನ ಇತ್ಯಾದಿಗಳ ಬಗ್ಗೆ ಕಲಿಯಲು ಸುಸ್ಥಾಪಿತ ಪರಿಸರ ಫಾರ್ಮ್‌ಗಳಲ್ಲಿ ಆಯೋಜಿಸಲಾಗುತ್ತದೆ. ಪರಸ್ಪರ ಸಂವಾದವು ಮುಕ್ತಚೌಕಟ್ಟಿನಲ್ಲಿರುತ್ತದೆ – ಇದರೊಂದಿಗೆ ರೈತರು ವಿದ್ಯಾರ್ಥಿಗಳನ್ನು ಅವರ ತೋಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು, ಕೃಷಿ ಯೋಜನೆಯ ಕುರಿತು ವಿವರಿಸಲು, ಸಂಪನ್ಮೂಲ ಹರಿವು ಇತ್ಯಾದಿಗಳ ಬಗ್ಗೆ ತಿಳಿಸಿಕೊಡುವಂತೆ ರೂಪಿಸಿರಲಾಗುತ್ತದೆ. ಆ ಅನುಭವದಿಂದ ಕಲಿತು, ವಿವಿಧ ಪರಿಕರಗಳ ಮೂಲಕ ಸವಾಲುಗಳನ್ನು ಗುರುತಿಸಲು ಮತ್ತು ಪರಿಹಾರವನ್ನು ಒಗ್ಗೂಡಿ-ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳ ಗುಂಪನ್ನು ಒಂದು ಫಾರ್ಮ್‌ಗೆ ನಿಯೋಜಿಸಲಾಗುತ್ತದೆ. ಗುರುತಿಸಿದ ಸವಾಲುಗಳಿಗೆ ಅನುಗುಣವಾಗಿ ಪರಿಣಿತರೊಂದಿಗೆ ಆ ಕುರಿತು ತಿಳಿವಳಿಕೆ ನೀಡುವಂತಹ ಚರ್ಚೆ ಸಂವಾದಗಳು ಇರುತ್ತವೆ. ರೈತರು ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾರೆ – ಅವರು ಕಲಿಯಲು ಎಷ್ಟು ಉತ್ಸುಕರಾಗಿದ್ದರು, ಯಾರಿಗಾದರೂ ತೋಟಗಳಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಯಾವುದೇ ನಿರ್ಬಂಧಗಳಿದ್ದರೆ, ತೊಡಗಿಸಿಕೊಳ್ಳುವಿಕೆ ಇತ್ಯಾದಿ. ಕೆಲವು ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ಆಹಾರ ಸಂಸ್ಕಾರಕರು, ಬೀಜ ಬೆಳೆಗಾರರೊಂದಿಗೆ ಕೆಲಸ ಮಾಡಿದರು.

ತಿಳಿವಳಿಕೆಯಿಂದ ಮುಖ್ಯ ಸಾಮರ್ಥ್ಯಗಳವರೆಗೆ

ಈ ಕೋರ್ಸ್‌ ಕೃಷಿವಿಜ್ಞಾನವನ್ನು ಬೋಧಿಸುವುದಕ್ಕಿಂತ ಹೆಚ್ಚಾಗಿ ಕೃಷಿವಿಜ್ಞಾನಿಗಳನ್ನು ಅಭಿವೃದ್ಧಿ ಪಡಿಸುವುದರ ಕಡೆಗೆ ಗಮನಕೇಂದ್ರೀಕರಿಸುವುದರಿಂದ ವಿಷಯಕ್ಕಿಂತ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನನೀಡಲಾಗಿದೆ. ಪ್ರಪಂಚವನ್ನು ಹೇಗೆ ನೋಡಲು ಕಲಿಯುತ್ತೇವೋ ಅದು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ನಮ್ಮ ಭವಿಷ್ಯದ ಕ್ರಿಯೆಗಳಲ್ಲಿ ಹೆಚ್ಚಿನ ಸುಸ್ಥಿರತೆಯನ್ನು ತರುವ ಗುರಿಯನ್ನು ಹೊಂದಿದ್ದಲ್ಲಿ, ಶಿಕ್ಷಣದ ಬಗ್ಗೆ ಮರುಚಿಂತನೆ ಮತ್ತು ಶಿಕ್ಷಣದಲ್ಲಿ ಸೈದ್ಧಾಂತಿಕ ಜ್ಞಾನಕ್ಕೆ ಮಾತ್ರ ಒತ್ತು ನೀಡುವ ಬದಲು ಅನುಭವದಿಂದ ಸಾಮರ್ಥ್ಯಗಳನ್ನು ಕಂಡುಕೊಳ್ಳುವುದನ್ನು ತುರ್ತಾಗಿ ಮಾಡಬೇಕಿದೆ. ಕೃಷಿ ಕ್ಷೇತ್ರದಲ್ಲಿನ ಮುಂದಿನ ಪೀಳಿಗೆಯ ವೃತ್ತಿಪರರು ತಮ್ಮ ಶೈಕ್ಷಣಿಕ ಮತ್ತು ಕ್ಷೇತ್ರ ಅಧ್ಯಯನಗಳ ಮೂಲಕ ಮತ್ತು ಚಟುವಟಿಕೆಗಳ ಮೂಲಕ ವೃತ್ತಿಪರ ಸ್ಥಾನಕ್ಕೆ ತಕ್ಕ ಕೆಲವು ಮುಖ್ಯ ಅಂಶಗಳನ್ನು ಕಲಿತು ಅಭ್ಯಸಿಸಬೇಕಾಗುತ್ತದೆ.

ಇದರರ್ಥ ವಿದ್ಯಾರ್ಥಿಗಳು ಪದ್ಧತಿಗಳನ್ನು ಗಮನಿಸಬೇಕು, ಅವುಗಳಲ್ಲಿ ಭಾಗವಹಿಸಬೇಕು, ಪಾಲುದಾರರೊಂದಿಗೆ ಮಾತುಕತೆ ನಡೆಸಬೇಕು ಮತ್ತು ಭಾಗವಹಿಸುವಿಕೆ ಮತ್ತು ಗಮನಿಸುವಿಕೆಯ ಅನುಭವದ ಮೂಲಕ ಕೃಷಿ ಜ್ಞಾನವನ್ನು ಪಡೆಯಬೇಕು ಹಾಗೂ ಪರ್ಯಾಲೋಚನಾ ಚಟುವಟಿಕೆಗಳ ಮೂಲಕ ಆಹಾರ ವ್ಯವಸ್ಥೆಗಳ ಬಗ್ಗೆ ಅರಿಯಬೇಕು.

ಬೋಧನೆಯಿಂದ ಸುಗಮಕಾರರರಾಗುವತ್ತ

ಪ್ರಸ್ತುತದಲ್ಲಿನ ಜ್ಞಾನ ಗಳಿಕೆಯ ವ್ಯವಸ್ಥೆಯಲ್ಲಿ ಶಿಕ್ಷಕರು ಜ್ಞಾನದ ʼಮಾಲೀಕʼ ಮತ್ತು ʼಕೊಡುವವನುʼ, ಅವರು ವಿದ್ಯಾರ್ಥಿಗಳ ಖಾಲಿ ಮೆದುಳನ್ನು ತುಂಬುತ್ತಾರೆ. ಜ್ಞಾನವು ಶಿಕ್ಷಕರಿಂದ ವಿದ್ಯಾರ್ಥಿಗಳ ಕಡೆ ಸಾಗುತ್ತದೆಯೇ ಹೊರತು ಬೇರೆ ರೀತಿಯಲ್ಲಾಗಲಿ ಅಥವಾ ಕಲಿಕಾರ್ಥಿಗಳ ನಡುವೆಯೂ ಅಲ್ಲ. ʼಜ್ಞಾನವು ವಿಕಸನಗೊಳ್ಳುತ್ತದೆʼ ಎಂದು ಅನಿಶ್ಚತತೆಯಲ್ಲಿ ಬಿಡುವುದಕ್ಕಿಂತ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಬಿತ್ತುವುದು ಸೂಕ್ತ. ಶಿಕ್ಷಕರಿಂದ ಸುಗಮಕಾರರಾಗುವುದನ್ನು ಸದ್ಯಕ್ಕೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಕೋರ್ಸಿನಲ್ಲಿ ಶಿಕ್ಷಕರಿಗೆ ಸುಗಮಕಾರರಾಗುವಂತೆ ವಿನಂತಿಸಿಕೊಳ್ಳಲಾಯಿತು. ಈ ಪಾತ್ರ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಹಲವರಿಗೆ ಅದರಲ್ಲಿಯೂ ಪ್ರೊಫೆಸರ್‌ಗಳಿಗೆ ಸುಲಭವಾಗಲಿಲ್ಲ. ಸುಗಮಗೊಳಿಸುವಿಕೆಯು ಉನ್ನತ ಮಟ್ಟದ ಕಾರ್ಯ ಇದರಲ್ಲಿ ಶಿಕ್ಷಕರು ಕಾರ್ಯವನ್ನು ವಿನ್ಯಾಸಗೊಳಿಸಬೇಕು, ಕಾರ್ಯವನ್ನು ನಿಯೋಜಿಸಬೇಕು, ಅದಕ್ಕೆ ಸೂಕ್ತ ಪರಿಕರಗಳನ್ನು ಸೃಷ್ಟಿಸಿ, ಒದಗಿಸಬೇಕು ಮತ್ತು ಪ್ರಗತಿಯನ್ನು ಪರಿಶೀಲಿಸಬೇಕು.

ಸುಗಮ ಸ್ಥಿತ್ಯಂತರವನ್ನು ಸುಲಭಗೊಳಿಸಲು, ನಾವು ಒಗ್ಗೂಡಿದ ಕಲಿಕೆ, ಸಹಕಾರಿ ಕಲಿಕೆ, ಚರ್ಚೆಗಳು, ಗುಂಪು ಯೋಜನೆಗಳು, ಪೀರ್ ಟ್ಯೂಟರಿಂಗ್, ಅನುಭವತ್ಮಾಕ ಕಲಿಕೆ, ಸಮಸ್ಯೆ ಆಧಾರಿತ ಕಲಿಕೆ, ಆಟಗಳು, ಸೃಜನಶೀಲ ಅಭಿವ್ಯಕ್ತಿಗಳು ಇತ್ಯಾದಿಗಳಿಗೆ ಅವಕಾಶವನ್ನು ಒದಗಿಸಿದ್ದೇವೆ. ಇದರಿಂದಾಗಿ ಸುಗಮಕಾರರ ಅನುಪಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಅಭಿಪ್ರಾಯಗಳನ್ನು ರೂಪಿಸಬಹುದು ಮತ್ತು ಜ್ಞಾನವನ್ನು ನಿರ್ಮಿಸಕೊಳ್ಳಬಹುದು. ಒಬ್ಬರದೇ ಅಭಿಪ್ರಾಯ/ಭಾಷಣಕ್ಕಿಂತ ಹೆಚ್ಚಾಗಿ, ನಾವು ಕೇಸ್ ಸ್ಟಡೀಸ್, ಅನುಕರಣೆ, ಪ್ರಸ್ತುತಿಗಳು, ಯೋಜನೆಗಳು, ಚರ್ಚೆಗಳು, ಸಂಭಾಷಣೆ ಇತ್ಯಾದಿಗಳನ್ನು ಬಳಸಿದ್ದೇವೆ. ವಿವಿಧ ಸಂವಾದಾತ್ಮಕ ವಿಧಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸ್ವತಂತ್ರ/ಸ್ವಾವಲಂಬಿಗಳಾಗಲು ಮತ್ತು ಅವರನ್ನು ಜೀವಮಾನವಿಡಿ ಕಲಿಕಾರ್ಥಿಗಳಾಗಿ ಉಳಿಯುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ಕ್ರಮಬದ್ಧ ಆಲೋಚನೆಯ ಕಡೆಗೆ

ವಿಮರ್ಶಾತ್ಮಕ ಪ್ರಶ್ನೆಗಳ ಬಗ್ಗೆ ಆಲೋಚಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಕ್ಕಿಂತ ಹೆಚ್ಚಾಗಿ ಉತ್ತರಗಳನ್ನು ಹೇಳಲು ಶಿಕ್ಷಕರು ಉತ್ಸುಕರಾಗಿದ್ದಾರೆ.  ಇದು ಮರಳಿ ಸರಳವಾದ ಪರಿಹಾರ ಆಧಾರಿತ ಕೃಷಿಯನ್ನು ಮತ್ತೊಮ್ಮೆ ಉಲ್ಲೇಖಿಸುತ್ತದೆ. ಕೋರ್ಸ್‌ನಲ್ಲಿ ನಾವು ಮೊದಲಿಗೆ ಸಿದ್ಧಾಂತಗಳನ್ನು ಮಾತ್ರ ಒದಗಿಸದೆ, ವಿದ್ಯಮಾನ/ಸವಾಲುಗಳೊಂದಿಗೆ ಆರಂಭಿಸಿ, ವಿದ್ಯಾರ್ಥಿಗಳು ಹಲವು ವಿಭಿನ್ನ ಆಯ್ಕೆಗಳನ್ನು ಕಂಡುಕೊಳ್ಳಲು ಅವಕಾಶ ನೀಡುವ ಮೂಲಕ ಇದನ್ನು ತರಲು ಪ್ರಯತ್ನಿಸಿದ್ದೇವೆ.

ಪರಿಸರ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಾಮಾಜಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅಂತರ್‌ಶಿಸ್ತೀಯ ಆಲೋಚನಾ ವ್ಯವಸ್ಥೆ ಮತ್ತು ಅನಿಶ್ಚಿತಿತ, ಕ್ಷಿಪ್ರಬದಲಾವಣೆಯ ಯುಗದಲ್ಲಿ ಮಾಹಿತಿಪೂರ್ಣ ಕ್ರಿಯೆಯ ಅಗತ್ಯವಿರುತ್ತದೆ. ಹೀಗಿದ್ದೂ, ನಮ್ಮ ಔಪಚಾರಿಕ ಶಿಕ್ಷಣವು ವಿವಿಧ ಶಿಸ್ತುಗಳ ಜ್ಞಾನದ ಪ್ರಸರಣವನ್ನು ಆಧರಿಸಿದ್ದು, ನಿಸ್ಸಂದಿಗ್ಧವಾದ ಸತ್ಯಗಳನ್ನು ಪ್ರಸ್ತುತಪಡಿಸುತ್ತದೆ.

ಮಿತವಾದ, ರೇಖಾತ್ಮಕ, ಶಿಸ್ತೀಯ ಚಿಂತನೆಗಳು ಸರಳವಾದ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ. ಆದರೆ ಕೃಷಿ ಮತ್ತು ಆಹಾರ ವ್ಯವಸ್ಥೆಯಂತಹ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವಾಗ ಇವು ಸೂಕ್ತವಾದದ್ದಲ್ಲ ಅಥವಾ ಈ ವಿಧಾನ ಹೊಂದುವುದಿಲ್ಲ. ಶಿಸ್ತು ಆಧಾರಿತ ಚಿಂತನೆಯು ಈ ಕೋರ್ಸ್‌ನ ಪ್ರಮುಖ ಅಂಶವಾಗಿದೆ. ಇದರಲ್ಲಿ ಪರಿಸ್ಥಿತಿಯನ್ನು ಅರಿಯಲು ಬಹುದೃಷ್ಟಿಕೋನವನ್ನು ಹೊರಗಿನ ಸಂಶೋಧಕರಾಗಿ ನೋಡದೆ ಒಳಗಿನವರಾಗಿ ಅಭ್ಯಾಸಮಾಡಿದರು. ವಿದ್ಯಾರ್ಥಿಗಳು ಇಡಿಯಾಗಿ ಪರಿಸ್ಥಿತಿಯನ್ನು ಅರಿಯುವಂತಹ ಸಾಮರ್ಥ್ಯವನ್ನು ರೂಪಿಸುವುದು ಸುಲಭದ ಮಾತಾಗಿರಲಿಲ್ಲ. ಇಲ್ಲವಾದಲ್ಲಿ ಕುರುಡರು ಆನೆಯನ್ನು ವರ್ಣಿಸಿದಂತಾಗಿತ್ತು.

ಸವಾಲುಗಳು

ಈ ಮಾದರಿ ಪರಿವರ್ತನೆಯು ಸರಾಗವಾಗಿರಲಿಲ್ಲ. ಈ ಪ್ರಕ್ರಿಯೆಯು ಅನ್ವೇಷಣೆಗೆ ಸಮಯವನ್ನು ಬೇಡುತ್ತದೆ, ತಪ್ಪುಗಳಾಗುತ್ತವೆ, ಕಂಡುಕೊಂಡಿದ್ದನ್ನು ಪುನರ್‌ಪರಿಶೀಲಿಸಿ ಶಿಕ್ಷಕರ ನೆರವಿನೊಂದಿಗೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಾಳ್ಮೆಗೆಡುತ್ತಿದ್ದರು. ಇನ್ನೊಂದೆಡೆ, ಈ ಪ್ರಕ್ರಿಯೆಯನ್ನು ಸುಗಮವಾಗಿರಿಸಲು ತರಗತಿ ನಡೆಯುವ ಸ್ಥಳವನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಬೇಕಾಯಿತು. ಭಾರತೀಯ ಶೈಲಿಯ ತರಗತಿಗಳಲ್ಲಿ ಎತ್ತರದ ವೇದಿಕೆಯಿದ್ದು ಶಿಕ್ಷಕರನ್ನು ವಿದ್ಯಾರ್ಥಿಗಳು ತಲೆಯೆತ್ತಿ ನೋಡುವಂತೆ ಇರುತ್ತದೆ. ಅಲ್ಲಿ ಚರ್ಚೆಗೆ ಅವಕಾಶವಿರುವುದಿಲ್ಲ. ವಿಶ್ವವಿದ್ಯಾಲಯದೊಳಗೆ ಇದಕ್ಕೆ ಅವಕಾಶಗಳು ಕಡಿಮೆಯಿದ್ದವು. ಕಲಿಕೆಯನ್ನು ವೈವಿಧ್ಯಮಯಗೊಳಿಸುವ ಮೂಲಕ ಅದನ್ನು ತೋಟ, ಮಾರುಕಟ್ಟೆ, ಕೈಗಾರಿಕೆಗಳಿಗೆ ಕೊಂಡೊಯ್ಯುವ ಮೂಲಕ ಈ ಗಡಿಗಳನ್ನು ಮುರಿಯಬಹುದಿತ್ತು. ಈ ರೀತಿಯ ವೈವಿಧ್ಯೀಕರಣವು ವಿವಿಧ ಬಗೆಯ ಸಂಪನ್ಮೂಲ ವ್ಯಕ್ತಿಗಳನ್ನು ಒಂದೇ ಮಟ್ಟದ ಕೌಶಲಕ್ಕೆ ಒಗ್ಗಿಸುವುದು ಹೊಸ ಸವಾಲುಗಳನ್ನು ಒಡ್ಡುತ್ತದೆ.

ಕೋವಿಡ್‌, ಕಳೆದೆರಡು ವರ್ಷಗಳಲ್ಲಿ ಕೆಲವು ಸವಾಲುಗಳನ್ನು ಒಡ್ಡಿದೆ. ಅವುಗಳನ್ನು ಅಳವಡಿಸಿಕೊಳ್ಳುವಾಗ ಆನ್‌ಲೈನ್‌ ಮೂಲಕ ವಿವಿಧ ದೇಶಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪಡೆಯುವ ಅವಕಾಶ ಹಾಗೂ ವೈವಿಧ್ಯತೆಯನ್ನು ಒಳಗೊಳ್ಳಬಹುದು ಎನ್ನುವುದು ಅರಿವಾಯಿತು. ಈ ಎಲ್ಲ ಸವಾಲುಗಳ ನಡುವೆಯೂ ನಮ್ಮ ಕೆಲಸವನ್ನು ಖುಷಿಯಿಂದ ಮಾಡಿದ್ದೇವೆ. ನಾವೀಗ ಐದು ದೇಶಗಳಲ್ಲಿ ಹರಡಿರುವ ಕೃಷಿವಿಜ್ಞಾನದ ವೃತ್ತಿಗಾರರ ದೊಡ್ಡ ಸಂಪರ್ಕಜಾಲದ ಭಾಗವಾಗಿದ್ದೇವೆ.

‌ಅಂಶುಮನ್‌ ದಾಸ್


ಅಂಶುಮನ್ ದಾಸ್ ಅವರು ಕಳೆದ ಎರಡು ದಶಕಗಳಿಂದ ಸಣ್ಣ ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ Welthungerhilfe ಜೊತೆಗೆ ಸಹಯೋಗ ಹೊಂದಿದ್ದಾರೆ.  ಅವರು ಆಹಾರ ಮತ್ತು ಕೃಷಿ ವ್ಯವಸ್ಥೆಯಲ್ಲಿನ ಭವಿಷ್ಯದ ವೃತ್ತಿಪರರಿಗೆ ಶಿಕ್ಷಣಶಾಸ್ತ್ರವನ್ನು ಅಭಿವೃದ್ಧಿಪಡಿಸುವ ಜಾಗತಿಕ ಸಂಶೋಧನಾ ಒಕ್ಕೂಟದ ಭಾಗವಾಗಿದ್ದರು. ಶಿಕ್ಷಣಶಾಸ್ತ್ರದ ಕುರಿತು ತಿಳಿಯಲು ಇಲ್ಲಿಗೆ ಭೇಟಿ ನೀಡಿ https://www.nextfood-project.eu/ .


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೨; ಜೂನ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...