ಜೈವಿಕ ವೈವಿಧ್ಯತೆಯ ಪ್ರದರ್ಶನ ಸ್ಥಳೀಯ ಬೀಜಗಳ ಲಭ್ಯತೆ ಆಹಾರ ಸಾರ್ವಭೌಮತ್ವದತ್ತ ಹೆಜ್ಜೆ

ಮಹಾರಾಷ್ಟ ಭಾಗದ ಬುಡಕಟ್ಟು ಪ್ರದೇಶಗಳಲ್ಲಿನ ರೈತರು ತಮ್ಮ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಹಾರ ಸಾರ್ವಭೌಮತ್ವವನ್ನು ಸಾಧಿಸಿದ್ದಾರೆ. ರೈತರು ಈಗ ತಮ್ಮ ಸ್ಥಳೀಯ ಬೀಜಗಳ ಕುರಿತು ತಿಳಿದಿದ್ದಾರೆ ಮತ್ತು ಅವರ ಆಯ್ಕೆಯ ಬೀಜಗಳು ಅವರಿಗೆ ಸಿಗುತ್ತಿವೆ.

ಬೆಳೆಗಳಲ್ಲಿನ ತಳಿ ವೈವಿಧ್ಯತೆಯು ರೈತರ ಬದುಕಿಗೆ ಸುಸ್ಥಿರತೆಯನ್ನು ಒದಗಿಸುತ್ತದೆ. ಅದರಲ್ಲೂ ಪ್ರಾಕೃತಿಕ, ಹವಾಮಾನ ಮತ್ತು ಆರ್ಥಿಕ ಒತ್ತಡವಿರುವಂತಹ ಸೂಕ್ಷö್ಮ ಪ್ರದೇಶಗಳಲ್ಲಿ ಇದು ಅಗತ್ಯ. ಸ್ಥಳೀಯ ಪ್ರಾಕೃತಿಕ ಮತ್ತು ಕೃಷಿ ಪರಿಸ್ಥಿತಿಗಳಿಗೆ ಹೊಂದುವAತಹ ಬೆಳೆಗಳ ಸ್ಥಳೀಯ ತಳಿಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸಿರುವ ಹಿಂದೆ ಅಲ್ಲಿನ ರೈತರ ನೂರಾರು ವರ್ಷಗಳ ಪರಿಶ್ರಮವಿದೆ. ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಕಾಳುಗಳು, ತಿನ್ನಬಹುದಾದ ಗೆಡ್ಡೆ ಗೆಣಸುಗಳು, ಸ್ಥಳೀಯ ಮೂಲಿಕೆಗಳು ಇವೆಲ್ಲವೂ ಸ್ಥಳೀಯ ಕೃಷಿಯಲ್ಲಿ ಸೇರುತ್ತವೆ. ಇವು ಉತ್ತಮ ಪೌಷ್ಟಿಕಾಂಶ ಮೂಲಗಳಾಗಿದ್ದು ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳಿಗೆ ಆಹಾರ ಭದ್ರತೆಯನ್ನು ಒದಗಿಸುತ್ತವೆ. ಇವು ನಾಶವಾಗುತ್ತಿವೆ. ರೈತರು ಹೆಚ್ಚಿನ ಇಳುವರಿಯನ್ನು ಪಡೆಯುವ ಸಲುವಾಗಿ ಅಭಿವೃದ್ಧಿಗೊಳಿಸಿದ ತಳಿಗಳ ಬೀಜಗಳನ್ನೇ ಹೆಚ್ಚಾಗಿ ಕೃಷಿಗೆ ಬಳಸುತ್ತಿದ್ದಾರೆ. ಇದರಿಂದಾಗಿ ರೈತರು ಈ ಬೀಜಗಳ ಪೂರೈಕೆಗೆ ಹೊರಗಿನ ಏಜನ್ಸಿಗಳ ಮೇಲೆ ಅವಲಂಬಿತರಾಗಬೇಕಿದೆ. ಇದರೊಂದಿಗೆ ಹೆಚ್ಚಿನ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳ ಬಳಕೆಯಿಂದ ಕೃಷಿಯ ವೆಚ್ಚವು ಹೆಚ್ಚಿದೆ. ಪ್ರಾಕೃತಿಕ ಗುಣಮಟ್ಟವು ಕುಸಿದಿದ್ದು ಏಕ ಬೆಳೆ ಪದ್ಧತಿಯು ಜೈವಿಕ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಮಹಾರಾಷ್ಟçದ ನಂದುರ್ಬಾರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚು. ಅದರಲ್ಲೂ ಸತ್ಪುದ ಬೆಟ್ಟಪ್ರದೇಶದ ಧಡ್ಗಾಂವ್ ಮತ್ತು ಅಕ್ಕಲ್ಕುವ ಪ್ರದೇಶಗಳಲ್ಲಿ ಬುಡಕಟ್ಟು ಮತ್ತು ಬೆಟ್ಟಪ್ರದೇಶ ಹೆಚ್ಚು. ಈ ಪ್ರದೇಶದಲ್ಲಿ ಭ್ಹಿಲ್ ಮತ್ತು ಪವಾರಗಳು ಮುಖ್ಯ ಬುಡಕಟ್ಟುಗಳು. ಈ ಬುಡಕಟ್ಟು ಸಮುದಾಯಗಳವರ ಬಳಿ ಸಣ್ಣ ಪ್ರಮಾಣದ ಭೂಮಿಯಿದ್ದು ಅವರೆಲ್ಲ ಬಡರೈತರು. ಕಡಿಮೆ ಇಳುವರಿಯ ಕಾರಣದಿಂದಾಗಿ ಈ ಸಮುದಾಯಗಳವರು ತಮ್ಮ ಬದುಕಿಗೆ ಕಾಡನ್ನು ಆಶ್ರಯಿಸಿದ್ದಾರೆ. ನಂದುರ್ಬಾರ್ ಜಿಲ್ಲೆಯು ಅಪರೂಪದ ಸಾಂಪ್ರದಾಯಿಕ ಬೆಳೆಗಳ ವೈವಿಧ್ಯತೆಗೆ ಹೆಸರುವಾಸಿ. ಇವು ಮೆಕ್ಕೆಜೋಳ, ಜೋಳ, ಕಿರು ಧಾನ್ಯಗಳು, ಬೇಳೆಕಾಳುಗಳು ಮತ್ತು ಕಾಡಿನಲ್ಲಿ ಸಿಗುವ ತಿನ್ನಬಹುದಾದ ವಿವಿಧ ಗೆಡ್ಡೆಗೆಣಸುಗಳನ್ನು ಒಳಗೊಂಡಿದೆ. ಕಾಲಾಂತರದಲ್ಲಿ ಜೈವಿಕವೈವಿಧ್ಯವು ಅಳಿವಿನಂಚಿಗೆ ಬಂದು ನಿಂತಿದೆ.

ಜೈವಿಕ ವೈವಿಧ್ಯವು ಆಹಾರ ಭದ್ರತೆ, ಬದುಕಿನ ಭದ್ರತೆಗೆ ಅತ್ಯವಶ್ಯಕ. ಇದು ಸಣ್ಣರೈತರಿಗೆ ಕೃಷಿಸಂಬAಧಿ ಅಪಾಯಗಳನ್ನು ತಗ್ಗಿಸುತ್ತವೆ. ಇದನ್ನು ಅರಿತು ಃಂIಈ ಎನ್ನುವ ಸ್ವಯಂಸೇವಾ ಸಂಸ್ಥೆಯೊAದು ಸಮುದಾಯಗಳನ್ನೊಳಗೊಂಡAತೆ ಸಂರಕ್ಷಣೆ ಮತ್ತು ಬುಡಕಟ್ಟು ಆಹಾರ ಪುನರುಜ್ಜೀವನ ಯೋಜನೆಯನ್ನು ಹಮ್ಮಿಕೊಂಡಿದೆ. ಇದನ್ನು ನಂದುರ್ಬಾರ್ ಜಿಲ್ಲೆಯ ಧಡ್ಗಾಂವ್ ಮತ್ತು ಅಕ್ಕಲ್ಕುವ ಪ್ರದೇಶಗಳ ೧೪ ಹಳ್ಳಿಗಳಲ್ಲಿ ಕೈಗೊಳ್ಳಲಾಗಿದೆ. ಇದರ ಉದ್ದೇಶಗಳು ಬೆಳೆಯ ವೈವಿಧ್ಯತೆಯನ್ನು ದಾಖಲಿಸುವುದು, ಸಾಂಪ್ರದಾಯಿಕ ತಳಿಗಳ ವೈವಿಧ್ಯತೆಯನ್ನು ಕಾಪಾಡುವುದರೊಂದಿಗೆ ಆ ಕುರಿತ ಜ್ಞಾನವನ್ನು ಸ್ಥಳೀಯ ಸಮುದಾಯಗಳ ಸಹಭಾಗಿತ್ವದೊಂದಿಗೆ ಪ್ರಚುರಪಡಿಸುವುದು.

ಸಾಂಪ್ರದಾಯಿಕ ಸ್ಥಳೀಯತಳಿಗಳ ದಾಖಲೀಕರಣ
ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಆ ಊರಿನ ಪ್ರಮುಖರಾದ ಹಿರಿಯ ಗಂಡಸರು ಮತ್ತು ಹೆಂಗಸರನ್ನು ಮಾತಾಡಿಸಿ ಅವರಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಯಿತು. ದಾಖಲಿಸಿದ ಮಾಹಿತಿ ಸರಿಯಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಮತ್ತು ಇನ್ನಷ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸರಣಿ ಗುಂಪು ಚರ್ಚೆಗಳನ್ನು ನಡೆಸಲಾಯಿತು. ಬೀಜಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು, ಬುಡಕಟ್ಟು ಸಂಸ್ಕೃತಿಯನ್ನು ತಿಳಿಯಲು ಸಿಬ್ಬಂದಿಗಳು ಆ ಸಮುದಾಯಗಳ ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಂಡರು. ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ಸಂರಕ್ಷಿಸಲು ಆಸಕ್ತರಾದ ಕುಟುಂಬಗಳ ಪಟ್ಟಿಯನ್ನು ತಯಾರಿಸಿದರು.

ಈ ಭೇಟಿಯ ಸಂದರ್ಭಗಳಲ್ಲಿ ಸಿಬ್ಬಂದಿಗಳು ಇಂದಿಗೂ ತಮ್ಮ ಪುಟ್ಟ ಭೂಮಿಯಲ್ಲಿ ಸಾಂಪ್ರದಾಯಿಕ ತಳಿಗಳನ್ನು ಬೆಳೆಯುತ್ತಿರುವ ರೈತ ಕುಟುಂಬಗಳನ್ನು ಗುರುತಿಸಿದರು. ಈ ರೈತರನ್ನು ಒಳಗೊಂಡAತೆ ಗ್ರಾಮಗಳ ಮಟ್ಟದಲ್ಲಿ ಬೀಜಗಳ ಮೇಳವನ್ನು ಃಂIಈ ನವರು ಆಯೋಜಿಸಿದರು.

ಬೀಜಗಳನ್ನು ಸಂರಕ್ಷಿಸುವ ಪ್ರಕ್ರಿಯೆಯನ್ನು ತಿಳಿದಿದ್ದ ಐವರು ರೈತರನ್ನು ಆಯ್ಕೆಮಾಡಿ ಬೀಜ ಸಂರಕ್ಷಕರ ಗುಂಪನ್ನು ರಚಿಸಲಾಯಿತು. ಈ ಗುಂಪು ಎಲ್ಲ ಸ್ಥಳೀಯ ಸಾಂಪ್ರದಾಯಿಕ ತಳಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿತು. ಆರಂಭದಲ್ಲಿ ೧೨ ಬಗೆಯ ಮೆಕ್ಕೆಜೋಳ ಮತ್ತು ೯ ಬಗೆಯ ಜೋಳದ ತಳಿಗಳನ್ನು ಸಂಗ್ರಹಿಸಲಾಯಿತು. ನಂತರ ಇನ್ನಿತರ ಬೆಳೆಗಳ ವಿವಿಧ ತಳಿಗಳನ್ನು ಕೂಡ ಸಂಗ್ರಹಿಸಲಾಯಿತು. ಒಟ್ಟು ೨೫೮ ಬಗೆಯ ಸಾಂಪ್ರದಾಯಿಕ ಸ್ಥಳೀಯ ತಳಿಗಳನ್ನು ಸಂಗ್ರಹಿಸಲಾಯಿತು. ಕೋಷ್ಟಕ ಒಂದರಲ್ಲಿ ಸಂಗ್ರಹಿಸಲಾದ ಸಾಂಪ್ರದಾಯಿಕ ಸ್ಥಳೀಯ ತಳಿಗಳು, ಅವುಗಳ ಗುಣಗಳನ್ನು ಪಟ್ಟಿ ಮಾಡಲಾಗಿದೆ.

ಇನ್-ಸಿತು ಸಂರಕ್ಷಣೆ
ನಿರ್ದಿಷ್ಟ ಸ್ಥಳೀಯ ತಳಿಗಳ ಕುರಿತು ಪ್ರದರ್ಶನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಇನ್-ಸಿತು ಸಂರಕ್ಷಣಾ ವಿಧಾನದಲ್ಲಿ ಬಳಸಿ ದೃಢೀಕರಿಸಿಕೊಳ್ಳಲಾಯಿತು. ಪ್ರತಿ ಸಾಂಪ್ರದಾಯಿಕ ಸ್ಥಳಿಯ ತಳಿ ಕುರಿತು ಸಮುದಾಯಗಳೊಂದಿಗೆ ಚರ್ಚಿಸಿದ ಬಳಿಕ ಮೆಕ್ಕೆಜೋಳ ಮತ್ತು ಜೋಳ ಎರಡರಲ್ಲೂ ತಲಾ ೫ ಬಗೆಗಳನ್ನು ಇನ್-ಸಿತು ಸಂರಕ್ಷಣೆಗೆ ಆಯ್ಕೆ ಮಾಡಿಕೊಳ್ಳಲಾಯಿತು (ಕೋಷ್ಟಕ -೨). ಇನ್-ಸಿತು ಸಂರಕ್ಷಣಾ ವಿಧಾನಕ್ಕೆ ರೈತರ ಭೂಮಿಯನ್ನೇ ಬಳಸಲಾಯಿತು. ಈ ವಿಧಾನದಲ್ಲಿ ತಳಿಗಳನ್ನು ಸಂರಕ್ಷಿಸಿ ಬೆಳೆಸಲು ೧೦ ಕ್ಷೇತ್ರಗಳನ್ನು ಗುರುತಿಸಲಾಯಿತು.

ಸಂರಕ್ಷಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಮುದಾಯಗಳೇ ಆ ತಳಿಗಳು ಹೇಗೆ ಫಲ ಕೊಡುತ್ತವೆ ಎನ್ನುವುದನ್ನು ಗಮನಿಸಿ ವೈವಿಧ್ಯಮಯ ತಳಿಗಳ ಆಯ್ಕೆಯನ್ನು ಮಾಡಿದರು. ಬೀಜ ಸಂರಕ್ಷಕ ಸಮಿತಿಯ ಸದಸ್ಯರು, ತಳಿಗಳ ಕುರಿತು ತಿಳಿವಿದ್ದ ರೈತರು ಃಂIಈ ಸಿಬ್ಬಂದಿಯೊAದಿಗೆ ಇನ್ ಸಿತು ವಿಧಾನದಲ್ಲಿ ತಳಿಗಳನ್ನು ಬೆಳೆಸುತ್ತಿದ್ದ ಕ್ಷೇತ್ರಗಳಿಗೆ ತಳಿಗಳು ಬೆಳೆಯುತ್ತಿದ್ದ ಸಮಯದಲ್ಲಿ ಹಾಗೂ ಕೊಯ್ಲಿಗೆ ಮುನ್ನ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಸದಸ್ಯರಿಗೆ ಪರಿಶುದ್ಧ ತಳಿಗಳ ಆಯ್ಕೆಯನ್ನು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಮಾಡುವ ಕುರಿತು ತರಬೇತಿ ನೀಡಲಾಗಿತ್ತು. ಕಾಳಿನ ಗಾತ್ರ, ಬಣ್ಣ, ಗಿಡದ ಎತ್ತರ, ಗಿಡಗಳ ಅಡ್ಡಬೀಳುವಿಕೆ/ಬಾಗುವಿಕೆ (ಲಾಡ್ಜಿಂಗ್), ಕೀಟ ಮತ್ತು ರೋಗ ನಿರೋಧಕ ಶಕ್ತಿ, ಬರವನ್ನು ತಾಳಿಕೊಳ್ಳುವ ಶಕ್ತಿ, ಹೂಗೊಂಚಲಿನ ರಚನಾಸ್ವರೂಪ ಇತ್ಯಾದಿ ಗುಣಗಳನ್ನು ಆಧರಿಸಿ ಸದಸ್ಯರು ತಳಿಗಳನ್ನು ಆಯ್ಕೆಮಾಡಿದರು. Iಅಂಖನ ಆUSನಲ್ಲಿ ಹೇಳಲಾಗಿರುವ ಮಾರ್ಗದರ್ಶಕ ಸೂತ್ರಗಳಿಗನುಸಾರವಾಗಿ ವೈಜ್ಞಾನಿಕ ಮಾಹಿತಿ ಸಂಗ್ರಹಿಸಿದ ಯೋಜನೆಯ ಸಿಬ್ಬಂದಿಗಳು ೨೧ ಬಗೆಯ ಮೆಕ್ಕೆಯಜೋಳ ಮತ್ತು ೧೮ ಬಗೆಯ ಜೋಳದ ವಿಧಗಳ ರೂಪವಿಜ್ಞಾನದ ಗುಣಲಕ್ಷಣಗಳನ್ನು ಗುರುತಿಸಿದ್ದಾರೆ.

ಸಮುದಾಯಗಳು ಸಾಂಪ್ರದಾಯಿಕ ತಳಿಗಳು ಬರವನ್ನು ತಾಳಿಕೊಳ್ಳುವ ಗುಣ ಮತ್ತು ಕೀಟ ಹಾಗೂ ರೋಗಕ್ಕೆ ಅತಿಕಡಿಮೆ ತುತ್ತಾಗುವ ಗುಣ ಹೊಂದಿರುವುದನ್ನು ಕಂಡುಕೊoಡರು.

ಬೀಜ ಸಂರಕ್ಷಕ ಸಮಿತಿ
ಬೇರೆ ಬೇರೆ ಹಳ್ಳಿಗಳಿಂದ ಆಯ್ಕೆ ಮಾಡಿಕೊಂಡ ಬೀಜಸಂರಕ್ಷಕರು ಈ ಸಮಿತಿಯ ಸದಸ್ಯರು. ಇವರೆಲ್ಲ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಪ್ರತಿ ಯೋಜನೆಯನ್ನು ಹೊಲಗಳಲ್ಲಿ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಮಿತಿಯು ಪ್ರತಿ ತಿಂಗಳು ಹೊಲದಲ್ಲಿಯೇ ಸಭೆಯನ್ನು ನಡೆಸುತ್ತದೆ. ಇನ್-ಸಿತು ವಿಧಾನವನ್ನು ಅಳವಡಿಸಿರುವ ಕ್ಷೇತ್ರÀಗಳಿಗೆ ಭೇಟಿ ನೀಡುವುದರೊಂದಿಗೆ ಕಾರ್ಯಯೋಜನೆಯನ್ನು ಚರ್ಚಿಸಲಾಗುತ್ತದೆ. ಬೀಜಗಳನ್ನು ಸಂಗ್ರಹಿಸಿಟ್ಟು ಅವುಗಳನ್ನು ಇತರ ರೈತರೊಂದಿಗೆ ವಿನಿಮಯ ಮಾಡಿಕೊಳ್ಳುವುದು ಸಮಿತಿಯ ಹೊಣೆ. ಬ್ಲಾಕ್ ಮಟ್ಟದ ಬೀಜ ಸಂರಕ್ಷಕ ಸಮಿತಿಯ ಹೆಸರು “ಯಾಹಮೊಗಿ ಮಾತಾ ಸೀಡ್ ಸೇವರ್ ಕಮಿಟಿ”. ಪ್ರತಿ ಗುಂಪು ಬ್ಲಾಕ್ ಮಟ್ಟದ ಈ ಸಮಿತಿಗೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತದೆ. ಬ್ಲಾಕ್ ಮಟ್ಟದ ಸಮಿತಿಯಲ್ಲಿ ೧೦ ಮಂದಿ ಸದಸ್ಯರಿರುತ್ತಾರೆ. ವಿವಿಧ ತರಕಾರಿ ಬೆಳೆಗಳ ಬೀಜಗಳನ್ನು ಸಂರಕ್ಷಿಸಿದ ಸುಮಾರು ೭೦ ಮಂದಿ ಮಹಿಳಾ ಕೃಷಿಕರು ಬೀಜಸಂರಕ್ಷಕರಾಗಿದ್ದಾರೆ.

ಹಳ್ಳಿಗಳ ಮಟ್ಟದಲ್ಲಿ ಮೂರು ಬೀಜ ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು ಇವುಗಳನ್ನು ರೈತರೇ ನೋಡಿಕೊಳ್ಳುತ್ತಿದ್ದಾರೆ. ಆಸಕ್ತ ರೈತರಿಗೆ ಬೀಜ ಸಂರಕ್ಷಕ ಸಮಿತಿಯು ಬೀಜಗಳನ್ನು ವಿನಿಮಯದ ಆಧಾರದ ಮೇಲೆ ನೀಡುತ್ತದೆ. ಬೀಜ ಬ್ಯಾಂಕಿನಿAದ ಬೀಜಗಳನ್ನು ಪಡೆದ ರೈತ ತಾನು ಪಡೆದದ್ದಕ್ಕಿಂತ ಎರಡು ಪಟ್ಟು ಹೆಚ್ಚಿನ ಬೀಜಗಳನ್ನು ಬ್ಯಾಂಕಿಗೆ ಹಿಂತಿರುಗಿಸಬೇಕು. ಇತ್ತೀಚೆಗೆ ಬೀಜ ಸಂರಕ್ಷಕ ಸಮಿತಿಯು ೧೦ ಅರ್ಜಿಗಳನ್ನು (೫ ಮೆಕ್ಕೆಜೋಳ ಮತ್ತು ೫ ಜೋಳದ ಸಾಂಪ್ರದಾಯಿಕ ಸ್ಥಳೀಯ ತಳಿಗಳನ್ನು ಸಂರಕ್ಷಿಸಲು ಕೋರಿ) ದೆಹಲಿಯಲ್ಲಿರುವ PPಗಿ ಈಖಂ (ಠಿಡಿoಣeಛಿಣioಟಿ oಜಿ ಠಿಟಚಿಟಿಣ vಚಿಡಿieಣies ಚಿಟಿಜ ಜಿಚಿಡಿmeಡಿs ಡಿighಣ ಚಿಛಿಣs)ಗೆ ಸಲ್ಲಿಸಿದೆ.

ಫೋಟೊ: ಲೇಖಕರು ಜಾಗೃತಿ ಕಾರ್ಯಕ್ರಮ ಪ್ರಗತಿಯಲ್ಲಿದೆ

ಪರಿಣಾಮ
ಬೆಳೆಗಳ ವೈವಿಧ್ಯತೆ ಮತ್ತು ಅದಕ್ಕೆ ಸಂಬAಧಿಸಿದ ತಿಳಿವಳಿಕೆಯನ್ನು ಸಂರಕ್ಷಿಸುವ ಕ್ರಮವು ಹಲವು ಇತ್ಯಾತ್ಮಕ ಫಲಿತಾಂಶಗಳನ್ನು ನೀಡಿದೆ.

ತಮ್ಮ ಸಮುದಾಯಗಳಲ್ಲೇ ಅಪರಿಮಿತಿ ಜ್ಞಾನ/ತಿಳಿವಳಿಕೆ ಇದೆ ಎನ್ನುವುದು ಸಮುದಾಯಗಳಿಗೆ ಅರಿವಾಯಿತು. ತಮ್ಮಲ್ಲಿನ ಸಾಂಪ್ರದಾಯಿಕ ಸ್ಥಳೀಯ ತಳಿಗಳಲ್ಲಿ ಉತ್ತಮ ಗುಣಗಳು ಅಂದರೆ ರುಚಿ, ಸ್ವಾದ, ಹೆಚ್ಚು ದಿನ ಹಾಳಾಗದೆ ಉಳಿಯಬಲ್ಲ ಸಾಮರ್ಥ್ಯ, ಹೆಚ್ಚು ಪೋಷಕಾಂಶ ಇತ್ಯಾದಿಗಳಿರುವುದನ್ನು ಕಂಡುಕೊAಡರು. ಅದೇ ರೀತಿ ಈ ತಳಿಗಳು ಬರವನ್ನು ತಾಳಿಕೊಳ್ಳುವ, ಕೀಟ,ರೋಗ ಭಾದೆಗಳಿಗೆ ಸುಲಭವಾಗಿ ತುತ್ತಾಗದ ಗುಣಗಳನ್ನು ಹೊಂದಿರುವುದನ್ನು ಕಂಡುಕೊAಡರು. ಬೀಜಗಳ ಜೀವದ್ರವ್ಯ ಹೆಚ್ಚಿದ್ದು, ಅವುಗಳನ್ನು ಬೆಳೆಯಲು ತಗಲುವ ವೆಚ್ಚ ಕಡಿಮೆ. ಸಾಂಪ್ರದಾಯಿಕ ಸ್ಥಳೀಯ ತಳಿಗಳಲ್ಲಿನ ಈ ಗುಣಗಳನ್ನು ನೋಡಿದ ಮೇಲೆ ರೈತರು ಇವುಗಳನ್ನು ಹೆಚ್ಚಾಗಿ ಬೆಳೆಯಲು ಶುರುಮಾಡಿದರು. ೨೦೧೬-೧೭ರಲ್ಲಿ ೧೨೦ ಬೀಜ ಸಂರಕ್ಷಕ ರೈತರು ೧೨೦ ಎಕರೆಯಲ್ಲಿ ಮೆಕ್ಕೆಜೋಳ ಮತ್ತು ಜೋಳದ ಸಾಂಪ್ರದಾಯಿಕ ಸ್ಥಳೀಯ ತಳಿಗಳನ್ನು ಬೆಳೆದರು. ಇದಕ್ಕೂ ಮುಂಚೆ ಅವರು ೧/೮ ಎಕರೆಯಲ್ಲಿ ಮಾತ್ರ ಇವುಗಳನ್ನು ಬೆಳೆಯುತ್ತಿದ್ದರು. ಈ ತಳಿಗಳನ್ನು ಬೆಳೆಯಲು ಹೆಚ್ಚು ಮಂದಿ ರೈತರು ಆಸಕ್ತಿ ತೋರುತ್ತಿದ್ದಾರೆ.

ಬೀಜ ಉತ್ಪಾದನೆಯ ಮೇಲೆ ಹಿಡಿತ ಸಾಧಿಸಿರುವುದರಿಂದ ರೈತರಿಗೆ ಈಗ ಬೀಜಗಳು ಸುಲಭವಾಗಿ ಸಿಕ್ಕುತ್ತಿವೆ. ಹಾಗಾಗಿ ಹೊರಗಿನ ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಮುಂದಿನ ಖಾರಿಫ್ ಋತುವಿನಲ್ಲಿ ಸುಮಾರು ೫೫೦ ಕೆಜಿ ಮೆಕ್ಕೆಜೋಳ ಮತ್ತು ೫೦೦ ಕೆಜಿ ಜೋಳದ ಬೀಜಗಳು ಬಿತ್ತನೆಗೆ ಸಿಗಲಿದೆ. ಇದರೊಂದಿಗೆ ಬೀಜಗಳ ಬೆಲೆ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾಂಪ್ರದಾಯಿಕ ಸ್ಥಳೀಯ ತಳಿಗಳ ಸಂರಕ್ಷಣೆ, ಅವುಗಳ ಮಾದರಿಗಳನ್ನು ಬೆಳೆಸುವುದು ಹಾಗೂ ಇವುಗಳ ಪುನಶ್ಚೇತನದಲ್ಲಿ ಸಕ್ರಿಯವಾಗಿ ಬುಡಕಟ್ಟು ರೈತರು ಭಾಗವಹಿಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ತಮ್ಮ ಆಹಾರ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತಿದೆ. ಈಗ ಅವರಿಗೆ ಸ್ಥಳೀಯ ಬೀಜಗಳ ಬಗ್ಗೆ ತಿಳಿವಳಿಕೆ ದಕ್ಕಿದೆ ಮತ್ತು ತಮ್ಮ ಆಯ್ಕೆಯ ಬೀಜಗಳನ್ನು ಪಡೆಯುವುದು ಸಾಧ್ಯವಾಗುತ್ತಿದೆ.

Sudhir M Wagle

BAIF MITTRA Bhavan, Opp Niwas Homes,

Behind Bodhale Nagar, Nashik-Pune road,

Nashik -11

E-mail: mittransk@gmail.com

 

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೧ , ಮಾರ್ಚ್ ೨೦೧೭

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...