ತೆಂಗು ಕೀಟಗಳ ಜೈವಿಕ ನಿರ್ವಹಣೆಯ ಸಾಮೂಹಿಕ ಅಳವಡಿಕೆಯ ಸಾಮಾಜಿಕ ಪ್ರಕ್ರಿಯೆ

 


ಸಕ್ರಿಯ ಸಮುದಾಯದ ಭಾಗವಹಿಸುವಿಕೆಯೊಂದಿಗೆ ವ್ಯಕ್ತಿಯಿಂದ ಸಮುದಾಯ ಮಟ್ಟಕ್ಕೆ ವಿಸ್ತರಣಾ ವಿಧಾನಗಳಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಅಂತಹ ನಿರ್ದಿಷ್ಟ ವಿಸ್ತರಣಾ ವಿಧಾನಗಳು ತಂತ್ರಜ್ಞಾನಗಳ ಅಳವಡಿಕೆಯನ್ನು ಹೆಚ್ಚಿಸಬಹುದು, ತಂತ್ರಜ್ಞಾನಗಳ ಪರಿಷ್ಕರಣೆಗೆ ಅವಕಾಶವನ್ನು ನೀಡುತ್ತವೆ, ಪರಿಣಾಮಕಾರಿಯಾದ ಮೌಲ್ಯಮಾಪನ ಮತ್ತು ವೇಗವಾದ ತಂತ್ರಜ್ಞಾನದ ಪ್ರಸರಣ ಮಾಡುತ್ತದೆ.


ತೆಂಗು ಸಣ್ಣ ಮತ್ತು ಅತಿಸಣ್ಣ ರೈತರ ಬೆಳೆಯಾಗಿದ್ದು, ಅವರ ತೋಟದಲ್ಲಿ ಸತತವಾಗಿ ಬೆಳೆಯಲಾಗುತ್ತದೆ. ಸಾಂಪ್ರದಾಯಿಕ ವಿಸ್ತರಣಾ ವ್ಯವಸ್ಥೆಯು ರೈತರ ತೋಟಗಳಲ್ಲಿ ನಿರ್ವಹಣೆಯ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಾಂದರ್ಭಿಕ ಅಗತ್ಯಗಳು, ಅಗತ್ಯ ಆಧಾರಿತ ವಿತರಣಾ ಕಾರ್ಯವಿಧಾನಗಳನ್ನು ಹೆಚ್ಚಾಗಿ ಗಮನಿಸದೆ ಇರುವುದರಿಂದ ಬೆಳೆ ನಿರ್ವಹಣೆ ಹೆಚ್ಚಾಗಿ ರೈತ ರೈತರ ನಡುವಿನ ವಿಸ್ತರಣೆಯ ಮೇಲೆ ಅವಲಂಬಿತವಾಗಿದೆ.

ಕಪ್ಪು ದುಂಬಿ (ಕುರುವಾಯಿ), ಕೊಂಬಿನಂತಹ ರಚನೆ ಹೊಂದಿರುವುದರಿಂದ ಇದನ್ನು ಖಡ್ಗಮೃಗ ದುಂಬಿ ಎಂದೂ ಕರೆಯಲಾಗುತ್ತದೆ. ಇದು ತೆಂಗಿನ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಕಂಡುಬರುವ ಪ್ರಮುಖ ಕೀಟವಾಗಿದೆ. ತೋಟಗಳಲ್ಲಿ ಈ ಕಪ್ಪು ದುಂಬಿಯ ಪ್ರಮಾಣವು ತೆಂಗಿನ ಸಸಿಗಳಲ್ಲಿ ಶೇ೨೫ ರಿಂದ ೪೮ರಷ್ಟು ಇರುತ್ತದೆ. ಗರಿಗಳು ಚಿಗುರುವ ಮುನ್ನ ಹಾಗೂ ಫಲಭರಿತವಾದ ಬಳಿಕ ಇದನ್ನು ಕಾಣಬಹುದು. ಇದರ ಮುಖ್ಯ ಗುಣಲಕ್ಷಣವೆಂದರೆ ಹಾನಿಗೀಡಾದ ಚಿಗುರೆಲೆಗಳು ಅರಳಿದ ಮೇಲೆ ವಿಶಿಷ್ಟವಾಗಿ ‘V’ ಆಕಾರದಲ್ಲಿ ಬೀಸಣಿಕೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕೀಟಬಾಧೆಯಿಂದಾಗಿ ತೆಂಗಿನ ಸಸಿಗಳು ನಷ್ಟವಾಗುತ್ತದೆ. ಶೇ ೧೦ರಷ್ಟು ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ಈ ಕೀಟಬಾಧೆ ಕಂಡುಬಂದ ಪ್ರದೇಶಗಳಲ್ಲಿ ಸಾಮುದಾಯಿಕವಾಗಿ ರೈತರು ತುರ್ತಾಗಿ ನಿರ್ವಹಣೆ ಕೈಗೊಳ್ಳುವುದನ್ನು ಬೇಡುತ್ತದೆ. ಈ ಕೀಟಬಾಧೆಯನ್ನು ನಿರ್ವಹಿಸುವ ಜೈವಿಕ ನಿಯಂತ್ರಣಗಳ ಕುರಿತು ಅರಿವು ಕಡಿಮೆ ಎನ್ನುವುದನ್ನು ದತ್ತಾಂಶವು ತೋರಿಸುತ್ತದೆ.

 

ಸಮುದಾಯಗಳೊಂದಿಗೆ ಸಹಭಾಗಿತ್ವದ ವಿಶ್ಲೇಷಣೆಯು ಕೀಟವನ್ನು ನಿರ್ವಹಿಸಲು ಕಡಿಮೆ ವೆಚ್ಚ, ಸುರಕ್ಷಿತ, ಪರಿಸರ ಸ್ನೇಹಿ ಮತ್ತು ಜೈವಿಕ ನಿಯಂತ್ರಣ ಅಭ್ಯಾಸಗಳಿಗೆ ಆದ್ಯತೆ ನೀಡಲಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಅದಕ್ಕೆ ಕಾರಣಗಳು ಈ ಕೆಳಗಿನಂತಿವೆ :

  • ತೆಂಗಿನ ತೋಟದಲ್ಲಿ ಈ ಕೀಟವು ಎಲ್ಲೆಂದರಲ್ಲಿ ಕಂಡುಬರುತ್ತದೆ.
  • ತೆಂಗಿನ ಮರಗಳು ಎತ್ತರವಾಗಿದ್ದು, ಕೊಯ್ಲಿಗೆ ಮಾತ್ರವಲ್ಲದೆ ಮೇಲೆ ಹತ್ತಿ ಸ್ವಚ್ಛಗೊಳಿಸಲು ಮತ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಆ ಮರವನ್ನು ಹತ್ತುವುದರಲ್ಲಿ ನುರಿತಿರುವವರ ಅಗತ್ಯವಿರುತ್ತದೆ.
  • ಪ್ರಚಲಿತದಲ್ಲಿರುವ ವಿಸ್ತರಣಾ ಕಾರ್ಯವಿಧಾನಗಳು ತಂತ್ರಜ್ಞಾನ ಅಳವಡಿಕೆ ಘಟಕಗಳಾಗಿ ಒಬ್ಬೊಬ್ಬ ರೈತರನ್ನು ಮಾತ್ರವೇ ಗುರಿಯಾಗಿಸಿಕೊಂಡಿವೆ.
  • ನಿರ್ಣಾಯಕ ಎನ್ನುವಂತಹ ಜೈವಿಕ ಒಳಸುರಿಯುವಿಕೆಗಳು ಲಭ್ಯವಿಲ್ಲ. ಆದ್ದರಿಂದ ಅವುಗಳ ಕುರಿತು ಜ್ಞಾನ ಮತ್ತು ಅರಿವು ರೈತರಲ್ಲಿ ಸೀಮಿತವಾಗಿದೆ.

ತೆಂಗು ಮತ್ತು ಕಪ್ಪುದುಂಬಿಯ ಹಾವಳಿ ಹಿಂದಿನಿಂದಲೂ ಇರುವುದರಿಂದ ತೆಂಗು ಬೆಳೆಗಾರರಲ್ಲಿ ಇದಕ್ಕೆ ಸಂಬಂಧಿಸಿದಂತೆ ಹಲವಾರು ಸ್ಥಳೀಯ ತಂತ್ರಜ್ಞಾನಗಳು ಅಸ್ತಿತ್ವದಲ್ಲಿವೆ. ಕಪ್ಪುದುಂಬಿಯ ಸಂತಾನೋತ್ಪತ್ತಿ ತಾಣಗಳಾದ ಸಗಣಿ ಗುಂಡಿ, ಗೊಬ್ಬರದ ಗುಂಡಿ, ತೆಂಗಿನ ನಾರುಗಳನ್ನು ಹಾಕಿರುವ ಜಾಗದಲ್ಲಿ ಕ್ಲೆರೊಡೆಂಡ್ರಾನ್‌ ಇನ್ಫೊರ್ಚುನಾಟಂ ಸಸ್ಯವನ್ನು ಬೆಳೆಸುವುದು, ಲೋಹದ ಕೊಕ್ಕೆಯ ಬಳಕೆ, ಗುಂಡಿಗಳ ಮೇಲೆ ವರ್ಷದಲ್ಲಿ ಮೂರು ಬಾರಿ ಕಲ್ಲುಪ್ಪು, ಬೂದಿ ಮತ್ತು ಮರಳನ್ನು ಸಮಪ್ರಮಾಣದಲ್ಲಿ ಬೆರೆಸಿ ಹಾಕುವುದು ಈ ಕೆಲವು ಪದ್ಧತಿಗಳನ್ನು ಹಳೆಯ ತಲೆಮಾರಿನ ರೈತರು ಅನುಸರಿಸುತ್ತಿದ್ದರು. ಇವು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತಿತ್ತು. ಇಂದು ಇವುಗಳನ್ನು ಅನುಸರಿಸುತ್ತಿಲ್ಲ. ಈ ಕಪ್ಪುದುಂಬಿ ಹಾವಳಿ ತಡೆಗಟ್ಟುವ ಅಗತ್ಯತೆಯನ್ನು ಆಧರಿಸಿ ಜೈವಿಕ ನಿರ್ವಹಣೆಯ ಪರಿಣಾಮಕಾರಿಯಾದ, ಬಳಕೆಯ ಸಾಧ್ಯತೆಯಿರುವ ಹಾಗೂ ಇನ್ನಷ್ಟು ಸುಧಾರಣೆಗೆ ಅವಕಾಶವಿರುವಂತಹ ಮಾದರಿಯೊಂದನ್ನು ಐಸಿಎಆರ್‌ನ ಸೆಂಟ್ರಲ್‌ ಪ್ಲಾಂಟೇಶನ್‌ ಕ್ರಾಪ್ಸ್‌ ರಿಸರ್ಚ್‌ ಇನ್ಸಟ್ಯೂಟಿನ ಕೃಷಿ ವಿಸ್ತರಣಾ ವಿಜ್ಞಾನಿಗಳು ಏರಿಯಾ ವೈಡ್‌ ಕಮ್ಯುನಿಟಿ ಎಕ್ಸ್‌ಟೆನ್ಷನ್‌ ಅಪ್ರೋಚ್‌ಗಳನ್ನು ಆಧರಿಸಿ ರೂಪಿಸಿದ್ದಾರೆ.

ಭಾಗವಹಿಸುವಿಕೆಯ ವಿಸ್ತರಣೆ

ಆಲಪ್ಪುಳ ಜಿಲ್ಲೆಯ ಎರಡು ಪಂಚಾಯತ್‌ಗಳಲ್ಲಿ ೨೦೦೭ರಲ್ಲಿ ತೆಂಗು ಬೆಳೆಗಾರರಲ್ಲಿ ಗ್ರೀನ್‌ ಮಸ್ಕಾರ್ಡೈನ್‌ ಫಂಗಸ್‌ (ಜಿಎಂಎಫ್‌) ಅಳವಡಿಕೆಯನ್ನು ಸುಧಾರಿಸಲು ವಿಸ್ತರಣಾ ವಿಧಾನವನ್ನು ಬಳಸಲಾಯಿತು. ಆದರೆ ಕ್ಷೇತ್ರ ಪ್ರತಿಕ್ರಿಯೆಗಳು ಹಾಗೂ ಎಫ್‌ಎಲ್‌ಪಿಗಳಲ್ಲಿನ ವೈಫಲ್ಯಗಳಿಂದಾಗಿ ಇದು ಯಶ ಕಾಣಲಿಲ್ಲ. ೧೫೦೦ ಹೆಕ್ಟೇರ್‌ ಪ್ರದೇಶದಲ್ಲಿ ಕೀಟಗಳು ಮೊಟ್ಟೆ ಇಡುವ ಜಾಗಗಳಲ್ಲಿ ಚಿಕಿತ್ಸಾ ಕ್ಯಾಂಪೇನ್‌ ಕೈಗೊಳ್ಳಲಾಯಿತು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಲ್ಲದೆ ಪರಿಣಾಮಕಾರಿಯಾಗಿಲ್ಲ ಎನ್ನುವುದು ತಿಳಿದುಬಂದಿತು. ಬಯೋ ಏಜೆಂಟ್‌ ಹೆಚ್ಚಾಗಿ ಲಭ್ಯವಿಲ್ಲದಿದ್ದರಿಂದ ಹಾಗೂ ಇಡಿ ಪ್ರದೇಶವನ್ನು ಒಳಗೊಳ್ಳಲು ಸಾಧ್ಯವಾಗದಂತಹ ಸಮಸ್ಯೆಗಳನ್ನು ಎದುರಿಸಲಾಯಿತು.

ಸಾಮಾಜಿಕ ಪ್ರಕ್ರಿಯೆಯ ಮೂರು ಪ್ರಾಥಮಿಕ ಹಂತಗಳನ್ನು ಈ ಕೆಳಗಿನಂತೆ ಅಳವಡಿಸಿಕೊಳ್ಳಲಾಗಿದೆ :

೧ ಹಂತ – ಗ್ರಾಮೀಣ ಮಹಿಳೆಯರು ಸ್ವಸಹಾಯ ಸಂಘಗಳನ್ನು ಭಾಗವಹಿಸುವಿಕೆ ಅನುಷ್ಟಾನ ಕಾರ್ಯಕ್ರಮವು ಒಳಗೊಂಡಿತ್ತು. ಅವರಿಗೆ ಕಪ್ಪುದುಂಬಿ ತಡೆಗಟ್ಟುವ ತಂತ್ರಜ್ಞಾನಗಳನ್ನು ಕ್ಷೇತ್ರ ಆಧಾರಿತವಾಗಿ ಪರಿಚಯಿಸಲಾಯಿತು. ತಂತ್ರಜ್ಞಾನದ ಪರಿಣಾಮವನ್ನು ತೋರಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಹಾಗೂ ಅವರು ಸ್ವಯಂಪ್ರೇರಿತರಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವುದು ಅತ್ಯಗತ್ಯವಾಗಿತ್ತು. ತೆಂಗು ಬೆಳೆಗಾರರ ತೋಟದಲ್ಲಿ ಅವರು ತಂತ್ರಜ್ಞಾನ ಪ್ರಾತ್ಯಕ್ಷಿಕೆಯ ಎಲ್ಲ ಹಂತಗಳಲ್ಲಿ ಭಾಗಿಯಾದರು.

೨ ಹಂತ – ವಿಕೇಂದ್ರೀಕೃತ ಕಾರ್ಯಸಾಧುವಾದ ಮಾದರಿಯೊಂದನ್ನು ಕ್ಷೇತ್ರ ಮಟ್ಟದ ಉತ್ಪಾದನೆಗಾಗಿ ಕಂಡುಕೊಳ್ಳುವುದು. ಇದಕ್ಕಾಗಿ ಪಂಚಾಯತಿಯ ಕೃಷಿ ಅಧಿಕಾರಗಳೊಂದಿಗೆ ಜನಪ್ರತಿನಿಧಿಗಳು ಸುಶಿಕ್ಷಿತ ಗ್ರಾಮೀಣ ಕೃಷಿಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ಸ್ವಸಹಾಯ ಸಂಘದ ಮಹಿಳೆಯರು ಇದರಲ್ಲಿ ಭಾಗಿಯಾಗುವ ಮೂಲಕ ಅದನ್ನು ವಿಶ್ಲೇಷಿಸಿ, ತಾವು ಕಲಿತದ್ದರ ಪ್ರಾಯೋಗಿಕ ಪ್ರಕ್ರಿಯೆಯ ಕುರಿತು ಆಲೋಚಿಸಿ ಕಡಿಮೆ ವೆಚ್ಚದ ದ್ವಿಗುಣಗೊಳಿಸುವ ಸರಳ ವಿಧಾನವನ್ನು ಕಂಡುಕೊಂಡಿದ್ದು ಇವರುಗಳ ಮಹತ್ವದ ಕೊಡುಗೆಯಾಗಿದೆ.

೩ ಹಂತ – ಐಸಿಎಆರ್‌ – ಸಿಪಿಸಿಆರ್‌ಐ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ಜಿಎಂಎಫ್‌ನ ಉತ್ಪಾದನೆ/ದ್ವಿಗುಣಗೊಳಿಸುವಿಕೆ. ಕೃಷಿ ಅಧಿಕಾರಿಗಳು, ಮಹಿಳಾ ನಾಯಕಿಯರು ಹಾಗೂ ಸ್ಥಳೀಯ ಸ್ವಸಹಾಯ ಸಂಘಗಳು ವಹಿಸಿದ ನಾಯಕತ್ವ ಮತ್ತು ನೆರವು ಈ ಸಾಮಾಜಿಕ ಮಾದರಿಯ ಸುಸ್ಥಿರತೆಯಲ್ಲಿ ಪಾತ್ರ ವಹಿಸಿತು.

ಈ ಕ್ಷೇತ್ರ ವ್ಯಾಪಿ ಭಾಗವಹಿಸುವಿಕೆ ವಿಸ್ತರಣಾ ಕಾರ್ಯಕ್ರಮದ ಪರೀಕ್ಷಾರ್ಥ ಪ್ರಯೋಗವನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಎಡುವಾ ಗ್ರಾಮ ಪಂಚಾಯತಿಯಲ್ಲಿ ಕೈಗೊಳ್ಳಲಾಯಿತು. ಇದಕ್ಕಾಗಿ ೫೨೦ ಹೆಕ್ಟೇರ್‌ ಪ್ರದೇಶದಲ್ಲಿ ೧೧೦೧೪೩ ತೆಂಗಿನ ಮರಗಳು, ೫೪೬೫ ರೈತರನ್ನು ಒಳಗೊಳ್ಳಲಾಯಿತು. ಎಡುವಾ ಗ್ರಾಮಪಂಚಾಯ್ತಿಯ ಕೃಷಿ ಅಧಿಕಾರಿ ಶ್ರೀಮತಿ ತೇಜಸ್ವಿ ಬಾಯಿ ಅವರು ತಂಡಕ್ಕೆ ಗಣನೀಯ ಕೊಡುಗೆ ನೀಡಿದರು. ಅವರ ಪ್ರಕಾರ ʼತೆಂಗು ಇಲ್ಲಿನ ಬಹುಮುಖ್ಯ ಜೀವನಾಧಾರ ಬೆಳೆ. ಐಸಿಎಆರ್ಸಿಪಿಸಿಆರ್ಐನ ಸಾಮಾಜಿಕ ಸಂಶೋಧನ ಪ್ರಕ್ರಿಯೆಯಲ್ಲಿ ಪಾಲುದಾರರಾಗಿರುವುದು ಹೆಮ್ಮೆಯ ವಿಷಯ. ವಿಸ್ತರಣಾ ಕಾರ್ಯಕ್ರಮ ಅನುಷ್ಟಾನವು ಹೆಚ್ಚಿನ ತಿಳುವಳಿಕೆಯನ್ನು ನೀಡಿದೆ. ವಿಸ್ತರಣಾ ಏಜೆನ್ಸಿಗಳೊಂದಿಗೆ ಪರಸ್ಪರ ಕಲಿಕೆ ಮತ್ತು ಬೆಳೆಯುತ್ತಿರುವ ಪಾಲುದಾರಿಕೆಯು ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ದಕ್ಷತೆ ಮತ್ತು ಬಳಕೆಯನ್ನು ಉನ್ನತೀಕರಿಸುತ್ತದೆ ಎಂದು ನಾನು ಬಹಳ ವಿಶ್ವಾಸದಿಂದ ಹೇಳಬಲ್ಲೆ.‌ ಭಾಗವಹಿಸುವಿಕೆಯ ಸಾಮಾಜಿಕ ಸಂಶೋಧನೆಯಿಂದ ವ್ಯಕ್ತವಾದ ಸಂದೇಶವೆಂದರೆ ಸಮುದಾಯದ ಅಭಿವೃದ್ಧಿಗೆ ಅನ್ವೇಷಣೆಗಳು ಅಗತ್ಯ. ಮಹಿಳಾ ರೈತರು ತಂತ್ರಜ್ಞಾನಗಳನ್ನು ಪರಿಷ್ಕರಿಸಿ ಸರಳ ಬದಲಾವಣೆಗಳನ್ನು ತರುವಲ್ಲಿ ಉತ್ತಮ ಸಂಪನ್ಮೂಲದಾರರಾಗಿದ್ದಾರೆ. ಹಾಗಾಗಿ ಇವರು ವೇಗವಾಗಿ, ಪರಿಣಾಮಕಾರಿಯಾಗಿ ತಂತ್ರಜ್ಞಾನದ ಪ್ರಸರಣಕ್ಕೆ ಕೊಡುಗೆ ನೀಡುತ್ತಾರೆ.

ಮಧ್ಯಸ್ಥಿಕೆಗಳು

 ಯೋಜನೆಯ ಮಧ್ಯಸ್ಥಿಕೆಗಳು ಸಮುದಾಯ ಮಟ್ಟದಲ್ಲಿ ಜಾಗೃತಿ, ಕೆಲಸಗಳು, ಗುಂಪಿನ ಯತ್ನಗಳ ಒಗ್ಗೂಡಿಸುವಿಕೆ, ವಿಸ್ತರಣಾ ಸಂಸ್ಥೆಗಳೊಂದಿಗೆ ಸಂಪರ್ಕ, ಬಯೋ ಏಜೆಂಟ್‌ಗಳ ವಿಕೇಂದ್ರೀಕೃತ ಉತ್ಪಾದನೆ, ಭಾಗವಹಿಸುವಿಕೆಯ ಮೇಲ್ವಿಚಾರಣೆ, ಸುಧಾರಿತ ತಂತ್ರಜ್ಞಾನಗಳು ಮಹಿಳಾ ಗುಂಪುಗಳ ಕೈಗೆಟುಕುವಂತೆ ಮಾಡುವುದು.

ಸಾಮಾಜಿಕ ಜನಾಂದೋಲನ ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗಿದೆ. ಗೊಬ್ಬರದ ಗುಂಡಿ, ಎರೆಹುಳು ಗೊಬ್ಬರದ ಘಟಕಗಳು, ತೆಂಗಿನ ನಾರಿನ ಗುಂಡಿ, ಕೊಳೆತ ತೆಂಗಿನ ಮರದ ದಿಮ್ಮಿಗಳು ಸಂತಾನೋತ್ಪತ್ತಿಯ ತಾಣಗಳು. ಇಂತಹ ಕಡೆಗಳಲ್ಲಿ ಜಿಎಂಎಫ್ ಚಿಕಿತ್ಸೆ ನೀಡುವ ಕುರಿತು ಪಂಚಾಯತ್ ವ್ಯಾಪಕ ಪ್ರಚಾರಗಳನ್ನು ಮಾಡುವುದರ ಮೂಲಕ ಕೀಟಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಶಿಲೀಂಧ್ರವು ಅನ್ವಯಗೊಂಡ ವಾರದೊಳಗೆ ವಿವಿಧ ಹಂತದಲ್ಲಿರುವ ಕೀಟಗಳ ಮೇಲೆ ಪರಿಣಾಮ ಬೀರುತ್ತವೆ. ಎರೆಹುಳುಗಳಿಗೆ ಇದು ಹಾನಿಯುಂಟು ಮಾಡುವುದಿಲ್ಲ. ಜಿಎಂಎಫ್‌ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು ಹಾಗೂ ರೈತ ಸಮುದಾಯಗಳಲ್ಲಿ ಈ ತಂತ್ರಜ್ಞಾನದ ಅರಿವಿನ ಕೊರತೆಯು ಇದರ ಅಳವಡಿಕೆಗಿರುವ ಬಹುಮುಖ್ಯ ಕಂಟಕಗಳಾಗಿವೆ. ಗ್ರೀನ್‌ ಮಸ್ಕುರ್ಡೈನ್‌ ಫಂಗಸ್‌ ಉತ್ಪಾದನೆಯನ್ನು ಕ್ಷೇತ್ರ ಮಟ್ಟದಲ್ಲಿ ವಿಕೇಂದ್ರೀಕೃತವಾಗಿ ಉತ್ಪಾದಿಸಲು ಜಿಎಂಎಫ್‌ ದ್ವಿಗುಣಗೊಳಿಸುವ ಘಟಕಗಳನ್ನು ಕಾರ್ಯಪ್ರವೃತ್ತಗೊಳಿಸುವ ಸಲುವಾಗಿ ಮಹಿಳಾ ರೈತರ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಈ ಘಟಕಗಳ ಸಾಮರ್ಥ್ಯ ವರ್ಧನೆ, ಕೌಶಲ್ಯ ಉನ್ನತೀಕರಣವನ್ನು ವಿಶ್ವಾಸ ವೃದ್ಧಿಗಾಗಿ ಸತತವಾಗಿ ಮಾಡಲಾಗುತ್ತಿದೆ.

ಮತ್ತೊಂದು ಕಾರ್ಯತಂತ್ರವು ನೆಟ್‌ವರ್ಕ್ ಅನ್ನು ಪರಿಣಾಮಕಾರಿಯಾಗಿ ನಿರ್ಮಿಸುವುದು. ತಂತ್ರಜ್ಞಾನವನ್ನು ತ್ವರಿತವಾಗಿ ತಲುಪಿಸಲು ಮತ್ತು ವಿವಿಧ ಹಂತದ ಮಧ್ಯಸ್ಥಿಕೆಗಳಿಗಾಗಿ

ಕೃಷಿ ಇಲಾಖೆ, ತೆಂಗು ಕೃಷಿಕರ ಕ್ಲಸ್ಟರ್‌ಗಳು/ಗುಂಪುಗಳು, ಪಶುವೈದ್ಯಕೀಯ ಇಲಾಖೆ, ಹಾಲು ಸಹಕಾರ ಸಂಘಗಳು, ಜಾನುವಾರು ಸಾಕಣೆದಾರರು, ಸಮೂಹ ಮಾಧ್ಯಮ, ವಿಶೇಷವಾಗಿ ಆಕಾಶವಾಣಿ, ಸ್ಥಳೀಯ ಸ್ವಯಂ ಸರ್ಕಾರಗಳು ಮುಂತಾದ ಸಂಬಂಧಿತ ಪಾಲುದಾರರೊಂದಿಗೆ ಸಂಪರ್ಕ ಹೊಂದಿದೆ.

 ಆಲಪ್ಪುಳ ಮತ್ತು ತಿರುವನಂತಪುರ ಜಿಲ್ಲೆಗಳ ತೆಕ್ಕೇಕರ, ದೇವಿಕುಲಂಗರ ಮತ್ತು ಎಡವ ಈ ಮೂರು ಪಂಚಾಯತ್‌ಗಳಲ್ಲಿ ಅಂದಾಜು 2000 ಹೆಕ್ಟೇರ್ ತೆಂಗು ಪ್ರದೇಶವನ್ನು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಎರಡರಿಂದ ಮೂರು ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರು, ಆಯಾ ಪಂಚಾಯಿತಿಯ ವಿಸ್ತರಣಾ ಅಧಿಕಾರಿಗಳು, ಪ್ರತಿ ವಾರ್ಡ್‌ನಲ್ಲಿ 8-10 ಸದಸ್ಯರ ತೆಂಗು ಬೆಳೆಗಾರರ ಗುಂಪುಗಳು ತಂತ್ರಜ್ಞಾನ ವರ್ಗಾವಣೆ ಚಟುವಟಿಕೆಗಳು ಮತ್ತು ಸಂತಾನೋತ್ಪತ್ತಿ ಸ್ಥಳಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಒಟ್ಟು 150-200 ಮಹಿಳೆಯರನ್ನು ಪಂಚಾಯಿತಿ ಪ್ರತಿನಿಧಿಸಲು ಸಜ್ಜುಗೊಳಿಸಲಾಯಿತು. ಇದು ತಂತ್ರಜ್ಞಾನಗಳು ಮಹಿಳಾ ಸ್ನೇಹಿಯಾಗಿದ್ದು, ಸರಳವಾಗಿ ಅಳವಡಿಸಿಕೊಳ್ಳುವಂತಿದೆ ಎನ್ನುವುದನ್ನು ಸೂಚಿಸುತ್ತದೆ. 

ಸುಮಾರು ೩೨ ತರಬೇತಿ ಕಾರ್ಯಕ್ರಮಗಳನ್ನು ರೈತರು ಹಾಗೂ ರೈತ ಮಹಿಳೆಯರಿಗಾಗಿ ಆಯೋಜಿಸಲಾಯಿತು. ಮಧ್ಯಂತರ ತಿದ್ದುಪಡಿಗಾಗಿ, ತಜ್ಞರೊಂದಿಗೆ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗುತ್ತದೆ. ವಿಕೇಂದ್ರೀಕೃತ ಸುಸ್ಥಿರ ಬಯೋ ಇನ್‌ಪುಟ್ ಲಭ್ಯತೆಗಾಗಿ ಮಹಿಳಾ ಗುಂಪಿನಿಂದ ಕಡಿಮೆ ವೆಚ್ಚದ ಕೃಷಿ ಮಟ್ಟದ GMF ದ್ವಿಗುಣಗೊಳಿಸುವ ಘಟಕವನ್ನು ಸ್ಥಾಪಿಸಲಾಗಿದೆ.

 ಘಟಕದ ಸ್ಥಾಪನೆಯ ಆರಂಭಿಕ ವೆಚ್ಚ ಸುಮಾರು 8000 – 10000/- ರೂ.ಗಳು ಬೇಕಾಗುವ ಮೂಲ ವಸ್ತುಗಳು ಪ್ರೆಶರ್ ಕುಕ್ಕರ್ (20 ಲೀಟರ್ ಸಾಮರ್ಥ್ಯ), ಗ್ರೀನ್ ಮಸ್ಕಾರ್ಡಿನ್ ಫಂಗಸ್‌ನ ಕಲ್ಚರ್ (GMF), ಪಾಲಿಪ್ರೊಪಿಲೀನ್ ಕವರ್‌ಗಳು, ಗುಣಮಟ್ಟದ ಅಕ್ಕಿ ಮತ್ತು ಇತರ ಪರಿಕರಗಳು. ಹತ್ತಿ, ಅಲ್ಯೂಮಿನಿಯಂ ಫಾಯಿಲ್, ದಪ್ಪ ಮೇಣದಬತ್ತಿಗಳು, ಕೈ ಕೈಗವಸುಗಳು, ಇತ್ಯಾದಿ. ಶಿಲೀಂದ್ರ ಉತ್ಪಾದನೆಯನ್ನು ಕ್ಷೇತ್ರ ಮಟ್ಟದಲ್ಲಿ ಮಾಡುವಾಗ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರ ಬಳಕೆಯ ವಿಧಾನ ಸರಳ. ಜಿಎಂಎಫ್‌ನ ಒಂದು ಪಾಕೇಟನ್ನು (೧೦೦ ಗ್ರಾಂ) ಒಂದು ಲೀಟರ್‌ ನೀರಿನೊಂದಿಗೆ ಬೆರೆಸಿ ಅದನ್ನು ಸಗಣಿ ಗುಂಡಿಗಳು, ಗೊಬ್ಬರದ ಗುಂಡಿಗಳು, ಕೊಳೆತ ತೆಂಗಿನ ಗರಿಗಳು ಇತ್ಯಾದಿಗಳ ಮೇಲೆ ಸಿಂಪಡಿಸಬೇಕು. ಇವೇ ಕಪ್ಪುದುಂಬಿಯ ಸಂತಾನೋತ್ಪತ್ತಿ ತಾಣಗಳು. ಕೀಟಗಳು ೫-೭ ದಿನಗಳಲ್ಲಿ ಸಾಯುತ್ತವೆ.

ಇಡಿ ಪ್ರದೇಶದಲ್ಲಿ ಸಮುದಾಯ ದತ್ತು ಕಾರ್ಯಕ್ರಮಗಳನ್ನು ಯೋಜಿಸುವಾಗ, ಪಂಚಾಯತ್‌ನ ಪ್ರತಿ ವಾರ್ಡ್‌ನಲ್ಲಿರುವ ಕಪ್ಪುದುಂಬಿಗಳ ಎಲ್ಲಾ ಸಂಭಾವ್ಯ ಸಂತಾನೋತ್ಪತ್ತಿ ತಾಣಗಳನ್ನು ಜಿಪಿಎಸ್ ಬಳಸಿ ಮ್ಯಾಪ್ ಮಾಡಲಾಗಿದೆ. ಪಂಚಾಯತಿಯಲ್ಲಿ ಕಪ್ಪುದುಂಬಿಗಳ ಸಂತಾನೋತ್ಪತ್ತಿ ಸ್ಥಳಗಳಾದ ಜಾನುವಾರು ಸಾಕಣೆದಾರರ ಸ್ಥಳಗಳು (643), ಎರೆಹುಳ ಗೊಬ್ಬರ ಘಟಕಗಳು (7), ತೆಂಗಿನ ನಾರು, ಕರಟಗಳನ್ನು ಹೊಂದಿರುವ ತೆಂಗಿನಕಾಯಿ ಸಂಸ್ಕರಣಾ ಸ್ಥಳಗಳು (3) ಪ್ರತಿ ವಾರ್ಡ್‌ನಲ್ಲಿರುವ ಸ್ಥಳಗಳನ್ನು ಸೂಚಿಸಲು ಪಂಚಾಯತಿಯಲ್ಲಿ ಮ್ಯಾಪ್ ಮಾಡಲಾಗಿದೆ. ಈ ಸಂಭಾವ್ಯ/ನಿರ್ಣಾಯಕ ಅಳವಡಿಕೆಗಳಲ್ಲಿ ಶೇ.೮೨ರಷ್ಟು ಆರು ವಾರ್ಡುಗಳಲ್ಲಿ ವಿತರಿಸಲಾಗಿದೆ. ಈ ಸ್ಥಳಗಳಲ್ಲಿ ಜಿಎಂಎಫ್‌ ಬಳಸಲಾಗಿದೆ. ವಿವಿಧ ಭಾಗೀದಾರರು ಸಕ್ರಿಯವಾಗಿ ಭಾಗವಹಿಸಿದ ಒಂದು ವಾರದ ಅಭಿಯಾನವಾಗಿತ್ತು.

 ಜನಪ್ರತಿನಿಧಿಗಳು, ಕೃಷಿ ಮತ್ತು ಪಶುಸಂಗೋಪನಾ ಇಲಾಖೆಯ ವಿಸ್ತರಣಾ ಘಟಕಗಳು, 85 ಪ್ರತಿಶತ ಜಾನುವಾರು ಸಾಕಣೆದಾರರು ಸದಸ್ಯರಾಗಿರುವ ಹಾಲು ಸಹಕಾರ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಂಘಟಿತ ಪ್ರಯತ್ನಗಳ ಮೂಲಕ ಅವರನ್ನು ತಲುಪಲಾಯಿತು. ಈ ವಿಧಾನದ ಮೂಲಕ, 90 ಪ್ರತಿಶತಕ್ಕಿಂತಲೂ ಹೆಚ್ಚು ಸಂಭಾವ್ಯ ಅಳವಡಿಕೆದಾರರನ್ನು ಎರಡು ತಿಂಗಳೊಳಗೆ ತಲುಪಲಾಯಿತು. ಹಸ್ತಕ್ಷೇಪದ ನಂತರ ಕೀಟಗಳ ಹಾವಳಿಯು ಶೇ.೭೫.೮ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿಯು ಸೂಚಿಸುತ್ತದೆ. ಒಂದು ವಾರದ ಬಳಕೆಯ ನಂತರ ಶಿಲೀಂಧ್ರದಿಂದ ಕೀಟಗಳಿಗೆ ಸೋಂಕು ತಗುಲಿವೆ ಎಂದು ರೈತರು ಧೃಡಪಡಿಸಿದರು. ಇದು ಕೀಟಭಾದೆ ನಿಯಂತ್ರಣಕ್ಕೆ ಬಂದಿದ್ದನ್ನು ಸೂಚಿಸುತ್ತದೆ.

ನಿಯಮಿತವಾಗಿ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಯಿತು. ಭಾಗವಹಿಸಿದ ರೈತರು ಸಂತಾನೋತ್ಪತ್ತಿ ತಾಣಗಳಿಗೆ ಬಳಸಲಾಗುವ ಚಿಕಿತ್ಸಾ ವಿಧಾನವನ್ನು ಉತ್ತಮ ಫಲಿತಾಂಶ ಪಡೆಯಲು ಎರಡು ವರ್ಷಕ್ಕೆ ಬದಲಿಗೆ ವರ್ಷಕ್ಕೊಮ್ಮೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಪರಿಣಿತರು ಪರಿಶೀಲನೆಯ ನಂತರ ಅನುಮೋದನೆ ನೀಡಿದರು.

 ಫಲಿತಾಂಶಗಳು

ಈ ಕಾರ್ಯಕ್ರಮವು ೭೦-೮೦ ಪ್ರತಿಶತ ಸಂಭಾವ್ಯ ಅಳವಡಿಕೆದಾರರನ್ನು ತಲುಪಿದೆ. ಇದರಿಂದಾಗಿ ಕಪ್ಪುದುಂಬಿಗಳ ಸಂತಾನೋತ್ಪತ್ತಿಯು ಶೇ.೭೫ರಷ್ಟು ಕಡಿಮೆಯಾಗಿದೆ.

ಮಧ್ಯಸ್ಥಿಕೆ ಮಾಡದ (ಕೊಲ್ಲಂ ಜಿಲ್ಲೆಯ ನೀಂದಕರ ಗ್ರಾಮಪಂಚಾಯತಿ) ಕಡೆಯ ರೈತರಿಗೆ ಹೋಲಿಸಿದರೆ ಮಧ್ಯಸ್ಥಿಕೆ ಮಾಡಿದ ಪ್ರದೇಶಗಳಲ್ಲಿ (ಎಡವ ಗ್ರಾಮಪಂಚಾಯತಿ, ತಿರುವನಂತಪುರಂ ಜಿಲ್ಲೆ) ತೆಂಗು ಬೆಳೆಗಾರರಿಗೆ ಇದರ ಅರಿವು ಇತ್ತು ಎನ್ನುವುದನ್ನು ಗಮನಿಸಲಾಯಿತು. ಎರಡೂ ಪ್ರದೇಶಗಳಲ್ಲಿನ ಶೇ. ೯೦ರಷ್ಟು ರೈತರು ಬೆಳೆದ ದುಂಬಿಗಳನ್ನು ಗುರುತಿಸಬಲ್ಲವರಾಗಿದ್ದರು ಮತ್ತು ಶೇ. ೫೦-೬೦ರಷ್ಟು ಮಂದಿಗೆ ಸಾಮಾನ್ಯ ಸಂತಾನೋತ್ಪತ್ತಿ ತಾಣಗಳು ಹಾಗೂ ಸೋಂಕಿನ ಲಕ್ಷಣಗಳು ತಿಳಿದಿದ್ದವು.

ತೆಂಗು, ಹಲಸು, ತರಕಾರಿಗಳು, ಗೆಡ್ಡೆಗಳು ಮತ್ತು ಸಗಣಿ, ಅಣಬೆ ಕೃಷಿ/ ಮೊಟ್ಟೆಯ ಉತ್ಪಾದನೆ ಮತ್ತು ಸಂಸ್ಕರಣೆ, ಎರೆಹುಳುಗೊಬ್ಬರ ಇವುಗಳನ್ನೊಳಗೊಂಡ ಸಮಗ್ರ ಕೃಷಿ ಮಟ್ಟದಲ್ಲಿ ಮೌಲ್ಯವರ್ಧನೆಯನ್ನು ಕೈಗೊಳ್ಳಲಾಗಿದೆ.

ಕ್ಷೇತ್ರ ಮಟ್ಟದಲ್ಲಿ ಜಿಎಂಎಫ್‌ ಉತ್ಪಾದನಾ ತಂತ್ರಜ್ಞಾನವನ್ನು ಗುಂಪು ಪರಿಷ್ಕರಿಸಿತು. ಇದರಿಂದಾಗಿ ಉತ್ಪಾದನಾ ವೆಚ್ಚವು ಶೇ.೪೦ರಷ್ಟು ಹಾಗೂ ಸಮಯ ಶೇ. ೩೦ರಷ್ಟು ಕಡಿಮೆಯಾಯಿತು.

ಗ್ರಾಮೀಣ ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು. ಇಲ್ಲಿ ವಿವಿಧ ಜಿಲ್ಲೆಗಳ ೨೦೫೪ ಮಂದಿ ರೈತರಿಗೆ ತರಬೇತಿ ನೀಡಲಾಯಿತು.

ಕಲಿತ ಪಾಠಗಳು

ಸಾಮಾಜಿಕ-ಆರ್ಥಿಕ ಸನ್ನಿವೇಶಗಳು ಮತ್ತು ತಾಂತ್ರಿಕ ನಿಯತಾಂಕಗಳ ಆಧಾರದ ಮೇಲೆ ಸೂಕ್ತವಾದ ವಿಸ್ತರಣಾ ಕಾರ್ಯವಿಧಾನಗಳೊಂದಿಗೆ ಬೆಂಬಲಿತ ತಂತ್ರಜ್ಞಾನ ಪ್ಯಾಕೇಜ್, ವ್ಯಾಪಕವಾದ ಜಾಗೃತಿ ಮತ್ತು ಅಳವಡಿಕೆಗೆ ಕಾರಣವಾಗುತ್ತದೆ. ತಂತ್ರಜ್ಞಾನದ ಬೇಡಿಕೆಯನ್ನು ಹೆಚ್ಚಿಸುತ್ತದೆ.

ತಳಮಟ್ಟದಲ್ಲಿ ಭಾಗವಹಿಸುವಿಕೆ ಮತ್ತು ಕ್ರಿಯಾತ್ಮಕ ಸಂಪರ್ಕಗಳು ತಂತ್ರಜ್ಞಾನದ ಬಳಕೆಯ ಮೇಲೆ ಧನಾತ್ಮಕವಾಗಿ ಪರಿಣಾಮಕಾರಿ ರೀತಿಯಲ್ಲಿ ಪ್ರಭಾವ ಬೀರಬಹುದು. ಮಾದರಿ ಸಮುದಾಯ ವಿಸ್ತರಣಾ ವಿಧಾನವು ಜನ ಪ್ರತಿನಿಧಿಗಳು, ರೈತ ಸಂಘಟನೆಗಳು, ರೈತ ಮುಖಂಡರು, ರೈತರ ಸಹಕಾರ ಸಂಘಗಳು ಮತ್ತು ವಿವಿಧ ವಿಸ್ತರಣಾ ಇಲಾಖೆಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗಿನ ಸಮನ್ವಯದ ಸಂಪರ್ಕದ ಪಾತ್ರವನ್ನು ಒತ್ತಿಹೇಳುತ್ತದೆ.

ವಿಸ್ತರಣಾ ವಿಧಾನದ ನಿರ್ಣಾಯಕ ಅಂಶವೆಂದರೆ ತಂತ್ರಜ್ಞಾನದ ಅನುಕೂಲಕ್ಕಾಗಿ ವಿಕೇಂದ್ರೀಕೃತ ಆಯ್ಕೆ. ಮಹಿಳಾ ರೈತ ಗುಂಪುಗಳು ಮುಖ್ಯ ತರಬೇತುದಾರರಾಗಿ ಮತ್ತು GMF ನ ಕೃಷಿ ಮಟ್ಟದ ಉತ್ಪಾದಕರಾಗಿ ಜೈವಿಕ ನಿಯಂತ್ರಣ ತಂತ್ರಜ್ಞಾನದ ಸಾಮರ್ಥ್ಯ ನಿರ್ಮಾಣ ಮತ್ತು ‘ಸಂಭಾವ್ಯ ಮತ್ತು ನಿರ್ಣಾಯಕ ಅಳವಡಿಕೆದಾರರನ್ನು’ (ಅಂದರೆ. ಸಗಣಿ ಹೊಂಡ ಹೊಂದಿರುವ ಜಾನುವಾರು ರೈತರು, ತೆಂಗಿನಕಾಯಿ ಸಂಸ್ಕರಣೆ ಮತ್ತು ರೈತರ ಹೊಲಗಳಲ್ಲಿನ ಗೊಬ್ಬರ ಘಟಕಗಳಿಗೆ ಸಂಬಂಧಿಸಿದ ತೆಂಗಿನ ನಾರು ಘಟಕಗಳು) ಗುರಿಯಾಗಿಸಿಕೊಳ್ಳುವುದು. ಸಂಭಾವ್ಯ ಅಥವಾ ನಿರ್ಣಾಯಕ ಅಳವಡಿಕೆದಾರರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿರುವುದು, ತಂತ್ರಜ್ಞಾನವನ್ನು ಸಮುದಾಯ ಮಟ್ಟದಲ್ಲಿ ತೆಂಗು ಬೆಳೆಗಾರರು ತಂತ್ರಜ್ಞಾನವನ್ನು ಬಳಸದಿದ್ದರೆ ಅಳವಡಿಕೆಯನ್ನು ನಿಷ್ಪರಿಣಾಮಕಾರಿಯನ್ನಾಗಿ ಮಾಡುತ್ತದೆ.

ತಂತ್ರಜ್ಞಾನದ ಏಕೀಕರಣವು ಪ್ರಮುಖವಾಗಿದೆ. ಸಂತಾನೋತ್ಪತ್ತಿ ಸ್ಥಳಗಳಲ್ಲಿ ಕ್ಲೆರೊಡೆನ್ಡ್ರಾನ್ ಸಸ್ಯಗಳ ಸಂಯೋಜನೆಯಂತಹ ಸ್ಥಳೀಯ ತಾಂತ್ರಿಕ ಜ್ಞಾನ (ITK), ಉಪ್ಪು/ಮರಳು/ಬೂದಿ ಮಿಶ್ರಣವನ್ನು ಎಲೆಗಳ ಸುಳಿಯೊಳಗೆ ತುಂಬುವುದನ್ನು ಶಿಫಾರಸು ಮಾಡಲಾದ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.

ತಂತ್ರಜ್ಞಾನ ನಿರ್ದಿಷ್ಟ ಸಮುದಾಯ ವಿಸ್ತರಣೆ ಮಧ್ಯಸ್ಥಿಕೆಗಳು ರೈತರು  ಎಷ್ಟು ವರ್ಷಗಳಿಂದ ಆ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ, ಅವರ ಒಳಗೊಳ್ಳುವಿಕೆ ಮತ್ತು ವ್ಯಾಪ್ತಿಯನ್ನು ಲೆಕ್ಕಿಸದೆ ಕೃಷಿ ಸಮುದಾಯದ ಜ್ಞಾನದ ಸುಧಾರಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ಉತ್ತಮ ಫಲಿತಾಂಶಕ್ಕಾಗಿ ಸುಧಾರಿತ ತಂತ್ರಜ್ಞಾನ ಜ್ಞಾನವನ್ನು ಹೊಂದಲು ಬೇಡಿಕೆ ಹುಟ್ಟಿಸುತ್ತದೆ.

ಪ್ರದೇಶವಾರು ಇಂತಹ ವಿಧಾನಗಳನ್ನು ಪ್ರಸಾರಗೊಳಿಸುವಲ್ಲಿ ಸಮೂಹ ಮಾಧ್ಯಮಗಳು ಜಾಗೃತಿ ಉಂಟುಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.  ಸಾಮಾಜಿಕ ಭಾಗವಹಿಸುವಿಕೆ, ಸಂಪರ್ಕ ವಿಸ್ತರಣೆ, ಭಾಗವಹಿಸುವಿಕೆಯಲ್ಲಿ ಹೆಚ್ಚಳ, ಸಮೂಹ ಮಾಧ್ಯಮದ ಮಾನ್ಯತೆ ಮತ್ತು ತರಬೇತಿಗಳು, ಸಂಶೋಧನೆ ಮತ್ತು ವಿಸ್ತರಣಾ ಸಂಪರ್ಕಗಳು ಮಧ್ಯಸ್ಥಿಕೆಗೆ ಮೊದಲು ಮತ್ತು ನಂತರ ಹೋಲಿಸಿದಾಗ ಗಮನಾರ್ಹವಾಗಿ ಸುಧಾರಣೆಯಾಗಿದೆ, ಇದು ವಿಸ್ತರಣಾ ವಿಧಾನದ ಧನಾತ್ಮಕ ಪರಿಣಾಮವನ್ನು ಸೂಚಿಸುತ್ತದೆ.

ಜಾನುವಾರು ಸಾಕಣೆದಾರರು ಜೈವಿಕ ನಿಯಂತ್ರಣ ಪದ್ಧತಿಗಳ ಸಂಭಾವ್ಯ ಅಳವಡಿಕೆದಾರರಾಗಿದ್ದರೂ ಸಹ, ಸಮುದಾಯವು ಎಲೆಯ ಸುರುಳಿ ತುಂಬುವಿಕೆ, ಕೀಟನಾಶಕ್ಕೆ ಯಂತ್ರಬಳಕೆ ಮತ್ತು ಧನಾತ್ಮಕ ಪರಿಣಾಮ ಸೃಷ್ಟಿಯಲ್ಲಿ ರೋಗನಿರೋಧಕ ಕ್ರಮಗಳಿಗೆ ಸಂಬಂಧಿಸಿದ ಜೈವಿಕ ನಿರ್ವಹಣೆ ಅಭ್ಯಾಸಗಳನ್ನು ತಿಳಿದಿರಬೇಕು. ಇದು ಸಮೂಹ ಮಾಧ್ಯಮದ ಸಂಪರ್ಕ ವಿಸ್ತರಣೆ ಮತ್ತು ಭಾಗವಹಿಸುವಿಕೆಯಲ್ಲಿ ಪ್ರತಿಫಲಿಸುತ್ತದೆ.

ತಂತ್ರಜ್ಞಾನ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಣ ಮತ್ತು ಅರ್ಥಪೂರ್ಣ ಪಾಲುದಾರಿಕೆಯು ಧನಾತ್ಮಕ ಪ್ರಸರಣಕ್ಕೆ ಕಾರಣವಾಗುವುದರಿಂದ ತೆಂಗಿನ ಕೃಷಿಕರಲ್ಲಿ ತಂತ್ರಜ್ಞಾನಗಳ ಅಳವಡಿಕೆ, ಪರಿಷ್ಕರಣೆ ಮತ್ತು ಸುಧಾರಣೆಗಳು ಲಭ್ಯವಾಗುವಂತೆ ಮಾಡಲಾಗಿದೆ.

ಉಪಸಂಹಾರ

ಕೀಟ ನಿರ್ವಹಣೆ ಮತ್ತು ಸಮಗ್ರ ಜೈವಿಕ ನಿರ್ವಹಣಾ ತಂತ್ರಜ್ಞಾನಗಳ  ಜ್ಞಾನ ಪ್ರಸರಣಕ್ಕೆ ಪ್ರದೇಶದಾದ್ಯಂತ ಸಮುದಾಯ ಆಧಾರಿತ ವಿಧಾನಗಳ ಸ್ಥಾಪನೆಯು ಕೀಟನಾಶಕ ದುರುಪಯೋಗದ ಸಮಸ್ಯೆಗೆ ಸ್ವೀಕಾರಾರ್ಹ ಪರಿಹಾರಕ್ಕೆ ಕಾರಣವಾಗುತ್ತದೆ. AWCA ಒಂದು ನಿಷ್ಕ್ರಿಯ ಪ್ರಕ್ರಿಯೆಯಲ್ಲ ಎಂದು ಸಾಬೀತಾಯಿತು. ಆದರೆ ಮಧ್ಯಸ್ಥಗಾರರ ನಡುವೆ ಮತ್ತು ತಂತ್ರಜ್ಞಾನದ ಬೇಡಿಕೆ ಮತ್ತು ಬಳಕೆಯನ್ನು ಸುಧಾರಿಸುವ ಕುರಿತು ಸಂವಹನವನ್ನು ಒಳಗೊಂಡಿರುತ್ತದೆ. ಇದಕ್ಕೆ ಬಂದ ಪ್ರತಿಕ್ರಿಯೆಗಳು ಮತ್ತು ವಿಸ್ತರಣಾ ಅಧಿಕಾರಿಗಳ ಪ್ರತಿಕ್ರಿಯೆಗಳು ಇತರ ಕೃಷಿ ಸಮುದಾಯಗಳಿಗೆ ಹರಡಿದ್ದು ಧನಾತ್ಮಕ ಪರಿಣಾಮವನ್ನು ಸೂಚಿಸುತ್ತದೆ.

ನಿರ್ದಿಷ್ಟ ಅವಳವಡಿಕೆದಾರರ ವರ್ಗಗಳು ಮತ್ತು ವಿಶಾಲ ಪ್ರದೇಶದಲ್ಲಿ ಸಮುದಾಯ ವಿಸ್ತರಣಾ ವಿಧಾನದ ಮೇಲಿನ ಗಮನವು ವೈಯಕ್ತಿಕ ಮಟ್ಟದ ತಂತ್ರಜ್ಞಾನದ ಅಳವಡಿಕೆಯ ಅಸಮರ್ಥತೆ ಮತ್ತು ರೈತರ ಸಾಮಾಜಿಕ ಆರ್ಥಿಕ ಸಂಪನ್ಮೂಲಗಳ ವ್ಯಾಪಕ ವ್ಯತ್ಯಾಸವನ್ನು ನಿವಾರಿಸುತ್ತದೆ. ಹೀಗಿದ್ದೂ, ತೆಂಗಿನ ಕೃಷಿ ಸಮುದಾಯಗಳಲ್ಲಿ ಸಮರ್ಥನೀಯತೆ ಮತ್ತು ಸ್ವೀಕಾರಾರ್ಹತೆಗಾಗಿ ನಿರಂತರ ಪ್ರಯತ್ನಗಳು ಮತ್ತು ಘಟಕಗಳ ಅಗತ್ಯವಿದೆ. ಹೀಗಾಗಿ, ಕೃಷಿ ಮಟ್ಟದ ಉತ್ಪಾದನಾ ಘಟಕಗಳನ್ನು ಗ್ರಾಮೀಣ ಮಟ್ಟದ ಉದ್ಯಮಗಳಿಗೆ ಆಕರ್ಷಕ ಉತ್ಪನ್ನ ಮತ್ತು ಶೆಲ್ಫ್ ಜೀವಿತಾವಧಿಯೊಂದಿಗೆ ಪರಿವರ್ತಿಸಲು ಸಂಶೋಧನೆಗಳು, ತಾಂತ್ರಿಕ ಮೇಲ್ವಿಚಾರಣೆ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಅನುಕೂಲಗಳ ಅಗತ್ಯವಿದೆ. ಇಲ್ಲದಿದ್ದರೆ, ಘಟಕಗಳ ಯಶಸ್ಸು ಮತ್ತು ಸಮರ್ಥನೀಯತೆಯು ಸೀಮಿತವಾಗಿರುತ್ತದೆ ಮತ್ತು ಅವುಗಳು ಕಡಿಮೆ ಅವಧಿಯದ್ದಾಗಿರುತ್ತದೆ.

ಅನಿತಾಕುಮಾರಿ ಪಿ


Anithakumari.P,

Principal Scientist (Agricultural Extension),

ICAR CPCRI, regional Station, Krishnapuram P.O., Kayamkulam 690533

LEISA INDIA  MARCH 2021

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೧ ; ಮಾರ್ಚ್‌ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...