ಸಾವಯವದತ್ತ ಮುನ್ನಡಿಗೆ – ಸಾಂಸ್ಕೃತಿಕ ವಿನಿಮಯದ ಮೂಲಕ ಅರಿವಿನ ಆಂದೋಲನ


ಹೊಸ ತಲೆಮಾರುಗಳು ಸಾವಯವ ಕೃಷಿ ಬಗ್ಗೆ ಹೆಚ್ಚು ಶಿಕ್ಷಿತರಾಗಬೇಕಾರೆ ಅಜೈವಿಕ ಕೃಷಿ ಅವಲಂಬನೆ ಬಗ್ಗೆಯೂ ಅವರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವುದು ಅಷ್ಟೇ ಅಗತ್ಯವಾದುದು. ಈ ಉದ್ದೇಶವನ್ನಿಟ್ಟುಕೊಂಡೇ ಪ್ರಸ್ತುತ ‘ಡಬ್ಲ್ಯೂ.ಡಬ್ಲ್ಯೂ. ಒ.ಒ.ಎಫ್. ಇಂಡಿಯಾ’ ಕೆಲಸ ಮಾಡುತ್ತಿದೆ. ಭಾರತದಾದ್ಯಂತ ಯುವ ವೃತ್ತಿಪರರನ್ನು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದೇ ಇದರ ಮೂಲ ಉದ್ದೇಶ. ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ರೈತರು ಸಾವಯವ ಕೃಷಿ ಅನುಸರಿಸಲು ಸಹಕಾರ ನೀಡುವುದು ಮಾತ್ರವಲ್ಲ, ಸಾವಯವ ಬೆಳೆಗಳನ್ನು ಬೆಳೆಯಲು ಸ್ವಯಂಸೇವಕರನ್ನು ಒದಗಿಸುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿದೆ. ಜೊತೆಗೆ, ಬೇರೆ-ಬೇರೆ ದೇಶಗಳೊಂದಿಗೆ ಸಾಂಸ್ಕೃತಿಕ ವಿನಿಮಯ ನಡೆಸಲೂ ಅವಕಾಶ ಕಲ್ಪಿಸುತ್ತದೆ. ಹಾಗಾದರೆ, ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್.ಇಂಡಿಯಾ ಹುಟ್ಟಿದ್ದು ಹೇಗೆ? ಅದರ ಕಾರ್ಯವೈಖರಿಗಳೇನು? ಮುಂತಾದವುಗಳ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.


ಅಜೈವಿಕ ಅಥವಾ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವುದರ ಪರಿಣಾಮವಾಗಿ ಪರಿಸರ ಮತ್ತು ಆರೋಗ್ಯ ಸಂರಕ್ಷಣೆಯ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗುತ್ತಿದೆ. ಹಾಗಾಗಿ, ಆಹಾರ ಗುಣಮಟ್ಟಕ್ಕೆ ಸಂಬoಧಿಸಿದoತೆ ಗ್ರಾಹಕರ ಆದ್ಯತೆಯಲ್ಲಿ ಸಾಕಷ್ಟು ಬದಲಾವಣೆಯುಂಟಾಯಿತು. ಪರಿಣಾಮವಾಗಿ ಜಾಗತಿಕ ಗ್ರಾಹಕ ಸಮುದಾಯ ಸುರಕ್ಷಿತ ಮತ್ತು ಆರೋಗ್ಯಕರವಾದ ಸಾವಯವ ಆಹಾರೋತ್ಪನ್ನಗಳನ್ನು ಎದುರು ನೋಡತೊಡಗಿತು. ಇದರಿಂದಾಗಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾವಯವ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ವಾರ್ಷಿಕವಾಗಿ ಈ ಬೇಡಿಕೆಯ ಪ್ರಮಾಣ ಎಷ್ಟೆಂದರೆ ಸುಮಾರು ೨೦-೨೫%ರಷ್ಟು. ಅದರಲ್ಲಿಯೂ ಭಾರತದಲ್ಲಿ ಸಾವಯವ ಕೃಷಿ ಹೆಚ್ಚಿನ ಆದ್ಯತೆಯನ್ನು ಪಡೆಯುತ್ತಿದೆ.

ಭಾರತದ ಕೃಷಿ ವ್ಯವಸ್ಥೆಯಲ್ಲಿ ಸಾವಯವ ಕೃಷಿ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಾ ಬಂದಿದೆ ಎಂದು ಹೇಳಬಹುದು. ಆದ್ದರಿಂದಲೇ ಇಂದು ಭಾರತದಲ್ಲಿ ಸಾವಯವ ಕೃಷಿ ಗಣನೀಯ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿದೆ. ಭಿನ್ನವಾದ ಕೃಷಿ-ಪೂರಕ ವ್ಯವಸ್ಥೆ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು ಬಹುಸಂಖ್ಯೆಯಲ್ಲಿ ಇದ್ದರೂ ಕೂಡ ಬೆಳೆ, ದಾಸ್ತಾನು ಮತ್ತು ಉನ್ನತ ಜೀವವೈವಿಧ್ಯತೆಯನ್ನು ಇಲ್ಲಿನ ಕೃಷಿ ವ್ಯವಸ್ಥೆ ಕಾಪಾಡಿಕೊಂಡಿದೆ. ದೇಶದ ಹಲವು ಭಾಗಗಳಲ್ಲಿ ಅಂದರೆ ಪ್ರಮುಖವಾಗಿ ಗುಡ್ಡಗಾಡು ಮತ್ತು ಮಳೆ ಅವಲಂಬಿತ ಪ್ರದೇಶಗಳಲ್ಲಿ ಆನುವಂಶಿಕವಾದ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳು ಇದ್ದರೂ ಸಹ, ರೈತರು ಸಾವಯವ ಕೃಷಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ, ಜೊತೆ-ಜೊತೆಯೇ ಸ್ಥಳೀಯ ಮತ್ತು ಹೊರ ರಾಷ್ಟçಗಳ ಮಾರುಕಟ್ಟೆಗಳಲ್ಲಿ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇಂಥ ಸನ್ನಿವೇಶದಲ್ಲಿ ಹೊಸ ತಲೆಮಾರುಗಳಲ್ಲಿ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಒಲವನ್ನು ಹುಟ್ಟಿಸಬೇಕಾದರೆ, ಅಜೈವಿಕ ಕೃಷಿ ಕುರಿತಾಗಿಯೂ ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾ ಸಂಸ್ಥೆಯ ಹುಟ್ಟು
ದೀರ್ಘಕಾಲದಿಂದಲೂ ಭಾರತದಲ್ಲಿ ಅಜೈವಿಕ ಕೃಷಿ ವಿಧಾನ ಇಲ್ಲಿನ ರೈತರನ್ನು ನಿಯಂತ್ರಣದಲ್ಲಿಟ್ಟುಕೊAಡಿದೆ. ಹಾಗೆ ನೋಡಿದರೆ, ಇಲ್ಲಿನ ರೈತರಿಗೆ ಸಾವಯವ ಅಥವಾ ಜೈವಿಕ ಕೃಷಿ ವಿಧಾನದ ಕುರಿತು ಇರುವ ಮಾಹಿತಿ ಬಹಳ ಕಡಿಮೆ. ಈ ಬಗ್ಗೆ ಕೆಲವರು ಚೆನ್ನಾಗಿ ತಿಳಿದುಕೊಂಡಿದ್ದರೂ, ಅವರಿಗೆ ತಮ್ಮಲ್ಲಿರುವ ಮಾಹಿತಿಗಳನ್ನು ಜನರಿಗೆ ಅಥವಾ ರೈತರಿಗೆ ತಲುಪಿಸುವುದು ಹೇಗೆಂದು ಸರಿಯಾಗಿ ತಿಳಿದಂತಿಲ್ಲ. ಸಾಂಪ್ರದಾಯಿಕ ಕೃಷಿ ವಿಸ್ತರಣಾ ವ್ಯವಸ್ಥೆಯು ಪ್ರಮುಖವಾಗಿ ಸಾಂಪ್ರದಾಯಿಕ ಕೃಷಿ ತಂತ್ರಜ್ಞಾನ ಮತ್ತು ಅರಿವನ್ನು ಮಾತ್ರ ಉತ್ತೇಜಿಸುತ್ತದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಾ ಸರ್ಕಾರ ಅಥವಾ ಆಡಳಿತದ ಕಾನೂನು ರೂಪುರೇಷೆಗಳು ರಾಸಾಯನಿಕ ಕೃಷಿ ಪದ್ಧತಿಯನ್ನೇ ತುಂಬಾ ಪರಿಣಾಮಕಾರಿ ಎಂದು ಉತ್ತೇಜಿಸುತ್ತವೆಯೇ ಹೊರತು ಸಾವಯವ ಕೃಷಿ ತಂತ್ರಜ್ಞಾನ /ಆಗುಹೋಗುಗಳ ಬಗ್ಗೆ ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡಿರುವುದು ತೀರಾ ಕಡಿಮೆ.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ೨೦೦೭ರಲ್ಲಿ ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್.ಇಂಡಿಯಾ (ವರ್ಲ್ಡ್ ವೈಡ್ ಅಪಾರ್ಚುನಿಟೀಸ್ ಆನ್ ಆರ್ಗ್ಯಾನಿಕ್ ಫಾರ್ಮ್ಸ್ ಇಂಡಿಯಾ) ಜನ್ಮ ತಾಳಿತು. ಸಾವಯವ ಕೃಷಿ ಮಾಡಲು ಆಸಕ್ತಿ ಹೊಂದಿರುವ ರೈತರಿಗೆ ತಾಂತ್ರಿಕ ಸಹಕಾರ ನೀಡುವುದೇ ಸಂಸ್ಥೆಯ ಮೂಲ ಉದ್ದೇಶ. ಇದರಿಂದಾಗಿ ಕ್ರಮೇಣ ಈ ಸಂಸ್ಥೆ ಹೆಚ್ಚು-ಹೆಚ್ಚು ಸಾವಯವ ರೈತರನ್ನು ಸೆಳೆಯಲು ಸಾಧ್ಯವಾಯಿತು. ೨೦೦೭ರಲ್ಲಿ ಕೇವಲ ೧೪ ಸಾವಯವ ಕೃಷಿ ಕೇಂದ್ರಗಳು ಈ ಸಂಸ್ಥೆಯ ಜೊತೆಗಿದ್ದವು. ಆದರೆ, ಈಗ ಹಲವಾರು ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ಸುಮಾರು ೧೮೦ ಸಾವಯವ ಸಂಸ್ಥೆಗಳು ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್. ಇಂಡಿಯಾದ ಜೊತೆಗೇ ಕಾರ್ಯನಿರ್ವಹಿಸುತ್ತವೆ. ಇಷ್ಟೇ ಅಲ್ಲ, ಇಂದು ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್.ಇಂಡಿಯಾ ಸಂಪರ್ಕಜಾಲವು ಭಾರತದ ೧೬ ರಾಜ್ಯಗಳಿಗೆ ಹರಡಿದೆ.

ಸಾವಯವ ಕೃಷಿ ಪ್ರಯೋಗಗಳನ್ನು ಅನುಸರಿಸಲು ಮತ್ತು ಉತ್ತಮ ಫಸಲು ಪಡೆಯಲು ರೈತರಿಗೆ ಅಗತ್ಯವಾಗಿರುವ ಅನುಭವಿ ಸ್ವಯಂಸೇವಕರನ್ನು ನೀಡುತ್ತದೆ ಮತ್ತು ವಿದ್ಯಾರ್ಥಿಗಳಿಗೂ ಸಾವಯವ ಉತ್ಪನ್ನಗಳ ಸೌಲಭ್ಯ ಒದಗಿಸುವುದು ಡಬ್ಲ್ಯೂ.ಡಬ್ಲ್ಯೂ.  .ಒ.ಒ.ಎಫ್.ಇಂಡಿಯಾದ ಉದ್ದೇಶವಾಗಿದೆ. ಈ ಮೂಲಕ ದೇಶ-ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಸಾವಯವ ಮತ್ತು ಬಯೋಡೈನಮಿಕ್ ಜೀವನಶೈಲಿಯ ಕುರಿತು ಅರಿವು ಅಥವಾ ತಿಳುವಳಿಕೆಯನ್ನು ಸೃಷ್ಟಿಸುವುದೇ ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್. ಇಂಡಿಯಾದ ಪ್ರಮುಖ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಈ ಸಂಸ್ಥೆಯು ಜಗತ್ತಿನಾದ್ಯಂತ ತಮಗೆ ಅನುಕೂಲವಾಗುವ ರೀತಿಯಲ್ಲಿ ಸ್ಥಳಾವಕಾಶಗಳನ್ನು ಹುಡುಕಿಕೊಂಡಿದೆ ಹಾಗೂ ಜಗತ್ತಿನ ವಿವಿಧ ಭಾಗಗಳಲ್ಲಿ ಈ ಸಂಸ್ಥೆಯ ಕಾರ್ಯಕರ್ತರು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದಾರೆ. ಈ ಕಾರ್ಯಕರ್ತರಿಗೆ ಇಂಗ್ಲಿಷ್‌ನಲ್ಲಿ ‘ವೂರ‍್ಸ್’ ಎಂದು ಕರೆಯಲಾಗಿದೆ. ಇವರಿಗೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಇದರಿಂದ ಅವರ ಜ್ಞಾನದ ಮಟ್ಟನ್ನು ಹೆಚ್ಚಿಸಲಾಗುತ್ತದೆ. ಮಾತ್ರವಲ್ಲ, ಬೇರೆ-ಬೇರೆ ದೇಶಗಳಲ್ಲಿ ಅಲ್ಲಿನ ಜನರ ಜೀವನಶೈಲಿ ಮತ್ತು ಅಲ್ಲಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ, ಈ ವೂರ‍್ಸ್ ಬೇರೆ ಕಡೆಗೆ ಹೋದಾಗ ಅವರಿಗೆ ಅಗತ್ಯವಾದ ವಸತಿ ಮತ್ತು ಊಟದ ಸೌಲಭ್ಯ ಕಲ್ಪಿಸುವುದರೊಂದಿಗೆ ಅರ್ಥಿಕವಾಗಿ ಅಗತ್ಯವಾದ ಸಹಕಾರವನ್ನೂ ಸಂಸ್ಥೆಯೇ ನೀಡುತ್ತದೆ.

ಸಾವಯವ ಕೃಷಿ ಪ್ರಯೋಗಗಳ ಸಮರ್ಪಕ ಅನುಷ್ಠಾನ ಮತ್ತು ಸ್ವಯಂಸೇವಕರ ಸಂಪರ್ಕಜಾಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕಾಗಿ ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಭಾರತದ ನಾಲ್ಕು ವಿವಿಧ ಸ್ಥಳಗಳಲ್ಲಿ ಡಬ್ಲ್ಯೂ.ಡಬ್ಲ್ಯೂ. .ಒ.ಒ.ಎಫ್.ಗ್ಲೋಬಲ್ ವಿಲೇಜ್ (ಡಬ್ಲ್ಯೂ .ಜಿ.ವಿ.) ಅನ್ನು ಸ್ಥಾಪಿಸಿದೆ. ಇವು ಸಾವಯವ ಕೃಷಿಗೆ ಸಂಬAಧಿಸಿದAತೆ ಸಂಶೋಧನಾ ಕ್ಷೇತ್ರಗಳ ಸೌಲಭ್ಯ ಕಲ್ಪಿಸಿವೆ. ಮೊದಲ ಡಬ್ಲೂö್ಯಜಿವಿಯನ್ನು ಸುಮಾರು ೪.೫ ಎಕರೆ ಪ್ರದೇಶದಲ್ಲಿ ಮಧ್ಯಪ್ರದೇಶದ ಸುರಾಜ್‌ಪುರದಲ್ಲಿ ಸ್ಥಾಪಿಸಲಾಗಿದೆ. ಇದು ಇಲ್ಲಿ ವಿಶ್ವವಿಖ್ಯಾತ ಖಜುರಾಹೋ ದೇವಾಲಯಗಳಿಗೆ ಸಮೀಪದಲ್ಲಿದೆ ಮತ್ತು ಪನ್ನಾ ಹುಲಿ ಅಭಯಾರಣ್ಯ ಮತ್ತು ಕೇನ್ ನದಿಗೆ ಹೊಂದಿಕೊoಡoತಿದೆ.

ಕೃಷಿ ಶಿಕ್ಷಣ ಕಾರ್ಯಕ್ರಮಗಳು
ಸಾವಯವ ಕೃಷಿ ಕುರಿತು ಶಿಕ್ಷಣ ನೀಡುವುದಕ್ಕಾಗಿ ಮೂಲತಃ ಎರಡು ದಾರಿಗಳನ್ನು ಡಬ್ಲೂö್ಯ.ಡಬ್ಲೂö್ಯ.ಒ.ಒ.ಎಫ್.ಕಂಡುಕೊAಡಿದೆ. ಒಂದು ಸ್ವಯಂಸೇವಕರನ್ನು ಒದಗಿಸುವುದು ಮತ್ತು ಇನ್ನೊಂದು ತರಬೇತಿ ನೀಡುವಂಥದ್ದು.

ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು…
ಸ್ವಯಂಸೇವಕರು ಕೃಷಿ ಭೂಮಿಗಳಿಗೆ ಹೋಗಿ ಕಾರ್ಯನಿರ್ವಹಿಸುತ್ತಾರೆ ಅಥವಾ ಕೆಲವೊಮ್ಮೆಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಗ್ಲೋಬಲ್ ವಿಲೇಜ್‌ನಲ್ಲೂ ಕೆಲಸಮಾಡುವುದಿದೆ. ಜಗತ್ತಿನ ವಿವಿಧ ದೇಶಗಳಿಗೆ ಸೇರಿದವರನ್ನು ಸ್ವಯಂಸೇವಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಈ ಎಲ್ಲಾ ಸ್ವಯಂಸೇವಕರು ಮುಖ್ಯವಾಗಿ ಹಸಿರು ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಮತ್ತು ಸುಸ್ಥಿರ ಕೃಷಿ ವಿಧಾನದಲ್ಲಿ ಆಸಕ್ತಿ ಹೊಂದಿರುವ ಯುವಕರಾಗಿರುತ್ತಾರೆ. ಇವರು ಸ್ಥಳೀಯ ಸಾವಯವ ಕೃಷಿ ವಿಧಾನಗಳನ್ನು ಅರಿತುಕೊಂಡಿರುವುದರಿAದ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಇದು ಅವರಿಗೆ ಹೆಚ್ಚಿನ ಸಹಾಯವಾಗುತ್ತದೆ.

ಇಲ್ಲಿ ಕೆಲಸ ಮಾಡುವ ಸ್ವಯಂಸೇವಕರಿಗೆ ಕೃಷಿಭೂಮಿಯಲ್ಲಿಯೇ ತರಬೇತಿಗಳನ್ನು ನೀಡಿರುತ್ತಾರೆ. ಇಂಥ ತರಬೇತಿಗಳು ಅವರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲ, ಜೀವನದಾರಿಯನ್ನು ಹುಡುಕಿಕೊಡುತ್ತವೆ. ಉತ್ತಮ ಗುಣಮಟ್ಟದ ಸಾವಯವ ಕೃಷಿ ಬೆಳೆಯುವುದು, ಸುಸ್ಥಿರ ಕೃಷಿ ಬದುಕು ಮತ್ತು ತಮ್ಮ ಬದುಕಿಗೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಬದುಕುವ ಬಗೆಯನ್ನು ಕೃಷಿಭೂಮಿಯಲ್ಲಿ ಪಡೆದ ತರಬೇತಿಗಳು ಸ್ವಯಂಸೇವಕರಿಗೆ ಕಲಿಸಿಕೊಡುತ್ತವೆ. ಅಷ್ಟೇ ಅಲ್ಲ, ಅವರು ಸಾವಯವ ಕೃಷಿಗೆ ಸಂಬAಧಿಸಿದAತೆ ತಾವು ಪಡೆದ ಅರಿವು-ಅನುಭವಗಳು, ಸಾವಯವ ಉತ್ಪನ್ನಗಳನ್ನು ಪಡೆಯುವ ಬಗೆ ಮುಂತಾದವುಗಳ ಕುರಿತು ಪರಸ್ಪರ ಹಂಚಿಕೊಳ್ಳಲು ಇದು ವೇದಿಕೆ ಕಲ್ಪಿಸುತ್ತದೆ. ಸ್ವಯಂಸೇವಕರು ಆರೋಗ್ಯಕರ ಮತ್ತು ಸುರಕ್ಷಿತ ಆಹಾರ ಪದಾರ್ಥಗಳನ್ನು ಒದಗಿಸುವ ಜೊತೆಗೆ ಸ್ವಚ್ಛತೆಯನ್ನೂ ಕಾಪಾಡುತ್ತಾರೆ. ಈ ಸ್ವಯಂಸೇವಕರು ದಿನದಲ್ಲಿ ೪ರಿಂದ ೬ ಗಂಟೆಗಳ ಕಾಲ ಕೃಷಿಗೆ ನೆರವಾಗುತ್ತಾರೆ.

ತರಬೇತಿ ಕಾರ್ಯಕ್ರಮ ಹೇಗಿರುತ್ತವೆ?
ಡಬ್ಲೂö್ಯ.ಡಬ್ಲೂö್ಯ.ಒ.ಒ.ಎಫ್.ಇಂಡಿಯಾ ಸಂಸ್ಥೆಯು ತರಬೇತಿ ಕಾರ್ಯಕ್ರಮವನ್ನು ಜಾರಿಗೊಳಿಸಿರುವುದರ ಹಿಂದೆ ಮಹತ್ತರವಾದ ಉದ್ದೇಶವಿದೆ. ಅದೇನೆಂದರೆ, ಪರಿಸರವನ್ನು ಉತ್ತೇಜಿಸುವ, ಸಾವಯವ ಕೃಷಿ ಮತ್ತು ಅದಕ್ಕೆ ಸಂಬAಧಿಸಿದ ಸಂಶೋಧನಾ ಚಟುವಟಿಕೆಗಳು, ಪರಿಸರ ಮತ್ತು ಸಾವಯವ ಕೃಷಿಯನ್ನು ಉಳಿಸಿಕೊಂಡು ಹೋಗುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಪನ್ಮೂಲ ಸಂಪರ್ಕಜಾಲವನ್ನು ಒದಗಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಹುಟ್ಟುಹಾಕಲಾಗಿದೆ. ಇದಕ್ಕೆ ತರಬೇತಿ ಪಡೆಯಲು ಬೇರೆ ಬೇರೆ ದೇಶಗಳಿಂದ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ತರಬೇತಿ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಅಥವಾ ಗುಂಪು ಮಾಡಿಕೊಂಡು ಕೂಡ ನಡೆಸಲಾಗುತ್ತದೆ. ಹೆಚ್ಚೆಂದರೆ ೧೨ ವಾರಗಳ ತರಬೇತಿ ಪಡೆಯಬಹುದು. ಇಷ್ಟು ದೀರ್ಘಾವಧಿಯ ತರಬೇತಿ ಪಡೆದರೆ ಸಂಶೋಧನೆ, ಯೋಜನೆ ಮತ್ತು ತಮ್ಮ ಸ್ವಂತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹೆಚ್ಚು ಸಹಾಯವಾಗುತ್ತದೆ. ಹಾಗೆಯೇ ೪ರಿಂದ ೮ ವಾರಗಳ ತರಬೇತಿಯೂ ಇದೆ. ಇವರು ಕೂಡ ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾ ಸಲಹೆಗಾರರ ಸಲಹೆಗಳ ಮೇರೆಗೆ ತಮ್ಮ ಸಂಶೋಧನೆ ಮತ್ತು ಪ್ರಾಜೆಕ್ಟ್ ಗಳನ್ನು ಮುಂದುವರಿಸಬಹುದು.

ತರಬೇತಿಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲನೆಯದು ಪರಿಕಲ್ಪನೆ, ತಿಳುವಳಿಕೆ ಮತ್ತು ದೃಷ್ಟಿಕೋನ. ಈ ತರಬೇತಿ ಶುರುವಾಗುವುದು ಮನೆಯಿಂದ. ಇಲ್ಲಿ ತರಬೇತಿ ಪಡೆಯುವ ಇಂಟರ್ನಿ(ತರಬೇತಿ ಪಡೆಯುವವರು)ಗಳು ತರಬೇತಿಯ ಪ್ರಕ್ರಿಯೆ, ಅದರ ಉದ್ದೇಶ ಮತ್ತು ಡಬ್ಲೂö್ಯ.ಡಬ್ಲೂö್ಯ.ಒ.ಒ.ಎಫ್.ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಮೂಲಕ ಸಂಸ್ಥೆ ಮತ್ತು ತಮ್ಮ ನಡುವೆ ಅಮೂಲ್ಯವಾದ ಸಂಪರ್ಕಜಾಲವನ್ನು ಬೆಳೆಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಇದೇ ಸಮಯದಲ್ಲಿ ಪ್ರಾಜೆಕ್ಟ್ಗಳ ಬಗ್ಗೆ ಅರಿತುಕೊಳ್ಳುತ್ತಾರೆ. ಇನ್ನು ಎರಡನೆಯ ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ನಿರ್ದಿಷ್ಟವಾದ ಸಂಶೋಧನೆ ಮತ್ತು ಪ್ರಾಜೆಕ್ಟ್ಗಳಿಗೆ ಮೀಸಲಿಡುತ್ತಾರೆ. ಇಲ್ಲಿ ಇವರು ತಮ್ಮ ಸಂಶೋಧನೆಗಳಿಗೆ ಪ್ರತಿಕ್ರಿಯೆ ಮತ್ತು ಟೀಕೆಗಳನ್ನು ಪಡೆಯುತ್ತಾರೆ. ಈ ಮೂಲಕ ತಮ್ಮ ಸಂಶೋಧನಾ ಚಟುವಟಿಕೆಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಾರೆ. ಇದೆಲ್ಲಾ ಆದ ಬಳಿಕ ತಮ್ಮ ಪ್ರಾಜೆಕ್ಟ್ನ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಇನ್ನು ಕೊನೆಯ ಅಥವಾ ಮೂರನೇ ಹಂತದ ತರಬೇತಿಯಲ್ಲಿ ಇಂಟರ್ನಿಗಳು ತಮ್ಮ ಪ್ರಾಜೆಕ್ಟ್ಗಳನ್ನು ಕಾರ್ಯಗತಗೊಳಿಸಲು ತಾವಾಗಿಯೇ ಕೃಷಿ ಭೂಮಿಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಕಲಿಯುವ ಉದ್ದೇಶವನ್ನಿಟ್ಟುಕೊಂಡು ಕೆಲವು ಇಂಟರ್ನಿಗಳನ್ನು ಡಬ್ಲೂö್ಯಜಿವಿಗೆ ಸೇರಿಸಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ವಯಂಸೇವಕರು ಮತ್ತು ಇಂಟರ್ನಿಗಳ ಜೊತೆ ಸೇರಿಕೊಂಡು ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂದರೆ, ಸಾವಯವ ವಿಧಾನದಲ್ಲೇ ನರ್ಸರಿಗಳನ್ನು ಬೆಳೆಯುವುದು, ತಡೆಗೋಡೆಗಳ ನಿರ್ಮಾಣ, ಗೊಬ್ಬರಗಳ ತಯಾರಿಕೆಗೆ ಅಗತ್ಯವಾದ ವ್ಯವಸ್ಥೆ – ಮುಂತಾದ ಕೆಲಸಗಳನ್ನು ಜೊತೆಯಾಗೇ ಮಾಡುತ್ತಾರೆ.

ಕೊನೆಗೆ ಮೂರು ಹಂತದ ತರಬೇತಿಗಳು ಮುಗಿಯುವ ಹೊತ್ತಿಗೆ ಇಂಟರ್ನಿಗಳು ಸಂಪೂರ್ಣ ಪ್ರಾಜೆಕ್ಟ್ನ ರೂಪುರೇಷೆಗಳನ್ನು ಮುಂದಿಡಬೇಕಾಗುತ್ತದೆ. ತಮ್ಮ ಪರಿಕಲ್ಪನೆಯ, ಪ್ರಾಯೋಗಿಕ ಮತ್ತು ಸಂಶೋಧನೆಯನ್ನೊಳಗೊAಡ ಪಠ್ಯಕ್ರಮವನ್ನೇ ಅವರು ಪ್ರಸ್ತುತಪಡಿಸುತ್ತಾರೆ. ತರಬೇತಿ ಕಾರ್ಯಕ್ರಮದಲ್ಲಿ ಮೊದಲ ಹಂತದಿoದ ಕೊನೆಯ ತನಕದ ಪ್ರಾಜೆಕ್ಟ್ನ ದಾಖಲೆ ಸಂಗ್ರಹಗಳನ್ನೂ ಅವರು ಪ್ರಸ್ತುತಪಡಿಸಬೇಕು. ಇದು ಇಂಟರ್ನಿಗಳಿಗೆ ಬಹಳಷ್ಟು ಉಪಯುಕ್ತವಾಗುತ್ತದೆ. ತರಬೇತಿ ಮುಕ್ತಾಯಗೊಂಡ ಬಳಿಕ ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾ ವಿದ್ಯಾರ್ಥಿಗಳಿಗೆ ಕಲಿಕಾ ನೈಪುಣ್ಯತೆ ಬಗ್ಗೆ ಪ್ರಮಾಣ ಪತ್ರವನ್ನು ಕೂಡ ನೀಡುತ್ತದೆ.

ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್. ಇಂಡಿಯಾದ ಇಲ್ಲಿಯವರೆಗಿನ ಪಯಣ….

ವರ್ಷಗಳು ಸರಿದಂತೆ ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾಗೆ ಸೇರಬಯಸುವ ಸ್ವಯಂಸೇವಕರು ಮತ್ತು ಇಂಟರ್ನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಸಾವಯವ ಕೃಷಿ ವಿಧಾನ/ಪ್ರಯೋಗಗಳ ಬಗ್ಗೆ ಅವರ ಅರಿವಿನ ಅಳ-ಅಗಲವೂ ವಿಸ್ತಾರವಾಗಿದೆ. ಉದಾಹರಣೆಗೆ ಬೆಳೆ ಚಕ್ರ, ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಬಗೆ, ಗೊಬ್ಬರ, ಮಿಶ್ರ ಬೆಳೆ, ಬೆಳೆ ಉತ್ಪಾದನಾ ವ್ಯವಸ್ಥೆ ಮತ್ತು ಕೀಟ ನಿಯಂತ್ರಣ, ಹಸಿರು ಗೊಬ್ಬರ ಬಳಕೆ, ಹಸಿಗೊಬ್ಬರಗಳನ್ನು ಬಳಸುವ ವಿಧಾನ, ಪೌಷ್ಠಿಕ ಆಹಾರ ಆವರ್ತಗಳು ಮತ್ತು ಮರು ಬಳಕೆ ಮುಂತಾದವುಗಳ ಕುರಿತಾಗಿ ಇನ್ನಷ್ಟು ತಿಳಿದಂತಾಗಿದೆ. ಬೆಳೆಗಳನ್ನು ಕೀಟಗಳಿಂದ ರಕ್ಷಿಸುವ ಉದ್ದೇಶದಿಂದ ಸಮಪರ್ಕವಾದ ‘ಕೀಟ ನಿರ್ವಹಣೆ ವ್ಯವಸ್ಥೆ’ಯನ್ನು ಜಾರಿಗೆ ತಂದಿದ್ದಾರೆ. ಸಾವಯವ ಕೃಷಿ ವ್ಯವಸ್ಥೆಗೆ ಪೂರಕವಾದ ಪ್ರಮುಖ ಅಗತ್ಯಗಳೇನು ಎಂಬುದನ್ನು ಕೂಡ ಸಂಸ್ಥೆಯ ಮೂಲಕ ಅರಿತುಕೊಂಡoತಾಗಿದೆ.

ಇಲ್ಲಿರುವ ಸ್ವಯಂಸೇವಕರು ಅಜೈವಿಕ ವಸ್ತುಗಳು ಮತ್ತು ಅಜೈವಿಕ ಉತ್ಪನ್ನಗಳಿಂದ ಉಂಟಾಗುವ ಸೋಂಕುಗಳ ಕುರಿತು ಚರ್ಚಿಸುತ್ತಾರೆ. ಇದರೊಂದಿಗೆ ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾದ ಮೂಲಕ ವಿವಿಧ ಸಾವಯವ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಿಸುವುದು ಹೇಗೆಂಬುದರ ಕುರಿತಾಗಿಯೂ ಚೆನ್ನಾಗಿ ಮನದಟ್ಟುಮಾಡಿಕೊಂಡಿದ್ದಾರೆ. ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾರುಕಟ್ಟೆ ವೇದಿಕೆಯನ್ನು ಹೇಗೆ ವಿಶ್ಲೇಷಿಸಬೇಕೆಂಬುದನ್ನೂ (ಅಂದರೆ, ನೇರ ಮಾರುಕಟ್ಟೆ, ರೈತರ ಮಾರುಕಟ್ಟೆ, ವಿಶೇಷ ಮಳಿಗೆಗಳು, ಚಿಲ್ಲರೆ ವ್ಯಾಪಾರಿಗಳು ಇತ್ಯಾದಿ)ತಿಳಿದಿದ್ದಾರೆ. ಅಂತೆಯೇ, ಬೆಳೆಯುತ್ತಿರುವ ರಫ್ತು ಮಾರುಕಟ್ಟೆ ತಂತ್ರಗಾರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕ್ಷೇತ್ರಗಳಲ್ಲಿನ ಬದಲಾವಣೆಗಳನ್ನು ಗಮನಿಸುವ ಬಗೆಯೂ ಕರಗತವಾಗಿದೆ.

ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾವು ಹಲವಾರು ರೈತರು ಸಾವಯವ ಕೃಷಿಕರಾಗಿ ಪರಿವರ್ತನೆ ಹೊಂದಲು ಸಹಾಯ ಮಾಡಿದೆ. ಸ್ವಯಂಸೇವಕರು ಮತ್ತು ರೈತರ ಕೃಷಿಭೂಮಿಯ ನಡುವೆ ಪರಸ್ಪರ ಸಂಪರ್ಕಕ್ಕೆ ಅವಕಾಶ ಕಲ್ಪಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾವಯವ ಕೃಷಿಯಲ್ಲಿ ಒಲವು ತೋರಿಸಲು ಕಾರಣವಾಯಿತು. ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾದಡಿಯಲ್ಲಿ ದೇಶಾದ್ಯಂತ ಸುಮಾರು ೫೦ ಸಾವಯವ ಕೃಷಿ ಭೂಮಿಗಳು ಕೆಲಸ ಮಾಡುತ್ತಿವೆ. ಮುಂದಿನ ೫ ವರ್ಷಗಳಲ್ಲಿ ಸುಮಾರು ೫ ಸಾವಿರ ಸ್ವಯಂಸೇವಕರು ಮತ್ತು ೨೦೦ ಇಂಟರ್ನಿಗಳನ್ನು ಬಳಸಿಕೊಂಡು ವಿವಿಧ ಪ್ರಾಜೆಕ್ಟ್ಗಳ ಮೂಲಕ ೧೦೦೦ ಸಾವಯವ ಕೃಷಿ ಭೂಮಿಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ರೈತರು ಮತ್ತು ಸ್ವಯಂಸೇವಕರನ್ನು ಒಗ್ಗಟ್ಟಾಗಿಸಿ, ಸುಸ್ಥಿರ ಮತ್ತು ಆರೋಗ್ಯಕರವಾದ ಬದುಕು ನಿರ್ಮಿಸುವುದು ಮತ್ತು ಸಾಂಸ್ಕೃತಿಕ ವಿನಿಯಮಕ್ಕೆ ವೇದಿಕೆ ಕಲ್ಪಿಸುವ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ಡಬ್ಲ್ಯೂ.ಡಬ್ಲ್ಯೂ.ಒ.ಒ.ಎಫ್.ಇಂಡಿಯಾ ಕಾರ್ಯನಿರ್ವಹಿಸುತ್ತಿದೆ.

ಹರೀಶ್ ತಿವಾರಿ ಮತ್ತು ಪೂನಂ ತಿವಾರಿ


Harish Tewari

Director, WWOOF India,

A-46 Judge Farm, Haldwani,

Nainital, Uttarakhand, India

E-mail: sewak1@rediffmail.com

 Poonam Tewari

Junior Scientist,
College of Home Science,

G.B.P.U.A.&T.,Pantnagar University,

Uttarakhand, India.

ಆಂಗ್ಲ ಮೂಲ: ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೩, ಸೆಪ್ಟೆಂಬರ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...