ಎಸ್‌ಆರ್‌ಐ ಕ್ರಾಂತಿ – ಭತ್ತದ ಬೆಳೆಯ ಕ್ರಾoತಿ

ಅನಿಲ್‌ಕುಮಾರ್ ವರ್ಮಾ

ಹೊಸ ಪ್ರಯೋಗಗಳಿಗೆ ಉತ್ತಮ ಸಹಕಾರದ ಅಗತ್ಯವಿದೆ. ಇದಕ್ಕಾಗಿ ಸರ್ಕಾರದಿಂದ ಉತ್ತೇಜನ ಮತ್ತು ಮಾನ್ಯತೆ ಬೇಕಾಗಿದೆ. ಇಂತಹ ಹೊಸ ಪ್ರಯೋಗವು ‘ಕ್ರಾಂತಿ’ಯಾಗಿ ಬದಲಾದಾಗ ಆಹಾರ ಪದಾರ್ಥ ಉತ್ಪಾದನೆಯ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಬಿಹಾರ ಸರ್ಕಾರ ತೋರಿಸಿದೆ.

ಬಿಹಾರ ರಾಜ್ಯದ ಗಯಾಕ್ಕೆ ನಾನು ೨೦೦೭ರಲ್ಲಿ ರೈತಮಹಿಳೆಯರಿಗೆ ತಮ್ಮ ಹೊಲಗಳಲ್ಲಿ SಖI ಪದ್ಧತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ವಿಶೇಷ ಉದ್ದೇಶದೊಂದಿಗೆ ಬಂದೆ. ಇಲ್ಲಿ ನಾನು ಬಹಳಷ್ಟು ಕಷ್ಟಗಳನ್ನು ಎದುರಿಸಿದೆ. ಇಲ್ಲಿನ ರೈತರಲ್ಲಿದ್ದ ನಿರುತ್ಸಾಹದಿಂದ ದಿಗ್ಬ್ರಾಂತನಾದೆ. ಬೋಧಗಯಾದ ಒಂದು ಹಳ್ಳಿ ಶೇಖವಾರದಲ್ಲಿ ನಾನು ತಯಾರಿಸಿದ್ದ SRI ವಿಷಯಾಧಾರಿತ ಕಿರುಚಿತ್ರವನ್ನುn  ಪ್ರಸ್ತುತಪಡಿಸುತ್ತಿದ್ದ ಸಂದರ್ಭದಲ್ಲಿ ಆ ರೈತರಲ್ಲಿದ್ದ ಜ್ಞಾನಮಟ್ಟ ಸ್ಪಷ್ಟವಾಗಿ ಗೋಚರಿಸಿತು. ಆ ಸಂದರ್ಭದಲ್ಲಿ ಅಲ್ಲಿನ ರೈತರು, ‘ಈ ವ್ಯಕ್ತಿ ನಮ್ಮನ್ನು ಮೂರ್ಖರನ್ನಾಗಿ ಮಾಡಲು ಬಂದಿದ್ದಾನೆ, ನಾವು ತಲತಲಾಂತರದಿoದ ವ್ಯವಸಾಯ ಮಾಡುತ್ತಿದ್ದೇವೆ ನಮಗೆ ಗೊತ್ತಿದೆ ಯಾವ ರೀತಿ ಮಾಡಬೇಕು’ ಎಂದು ಎನ್ನುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ನಾನು ಈ ಸಭೆಯನ್ನು ಮುಕ್ತಾಯಗೊಳಿಸಿ ತರಳುವ ಸಂದರ್ಭದಲ್ಲಿ ಶ್ರೀಮತಿ ಕುಂತಿ ದೇವಿ ಎಂಬ ಮಹಿಳೆ ನನ್ನ ಬಳಿ ಬಂದು ಕನಿಕರ ತೋರುತ್ತಾ, ತನ್ನ ಭೂಮಿಯಲ್ಲಿ SRI ಅಳವಡಿಸಿಕೊಳ್ಳುವುದಾಗಿ ತಿಳಿಸಿದಳು. ಆ ಸಂದರ್ಭದಲ್ಲಿ ಅವಳು ನೆರೆಹೊರೆಯವರಿಂದ ಸಾಕಷ್ಟು ಒತ್ತಡಗಳನ್ನು ಎದುರಿಸಬೇಕಾಯಿತು. ಆದರೆ ಯಾವಾಗ ಅವಳು ಅಧಿಕ ಇಳುವರಿ (೯ಟನ್/ಒಂದು ಬೆಳೆಗೆ)
ಪಡೆಯಲಾರಂಭಿಸಿದಳೋ ಆಗ ವಾರಗೆಯ ರೈತರ ಅಭಿಪ್ರಾಯ ಬದಲಾಗತೊಡಗಿತು.

ಶೇಖ್‌ವಾರ ಮತ್ತು ಇತರೆ ಹಳ್ಳಿಗಳಲ್ಲಿನ ಬಹಳಷ್ಟು ಮಹಿಳೆಯರು ಈ ಕ್ರಾಂತಿಯ ಬಗ್ಗೆ ಕೇಳಿ ಹೆಚ್ಚಿನ ಮಾಹಿತಿ ಪಡೆಯಲು ಕುಂತಿದೇವಿಯನ್ನು ಭೇಟಿ ಮಾಡತೊಡಗಿದರು. ಗಯಾದಲ್ಲಿನ ನೂರಾರು ಮಹಿಳೆಯರು ತಮ್ಮ ಹೊಲಗಳಲ್ಲಿ SRI ಪದ್ಧತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಇವರ ಜೊತೆಗೆ ಪಕ್ಕದ ಜಿಲ್ಲೆ ನಳಂದಾದ ೨೫ ಮಹಿಳೆಯರು ಸೇರ್ಪಡೆಗೊಂಡರು. ಕೃಷಿವಿಜ್ಞಾನ ಕೇಂದ್ರ (ದ ಫಾರ್ಮ್ಸೈನ್ಸ್ ಸೆಂಟರ್ ಅಥವಾ ಕೆ ವಿ ಕೆ) – ಬಿಹಾರ್ ಕೃಷಿವಿಶ್ವವಿದ್ಯಾಲಯದ ಒಂದು ಸಂಸ್ಥೆ) ದ ಸಂಶೋಧಕರು ಈ ಹೊಲಗಳಿಗೆ ಭೇಟಿ ನೀಡಿದರು. ಇವರ ಜೊತೆಗೆ ಅಗ್ರಿಕಲ್ಚರ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್  (ATMA)ದ ವಿಜ್ಞಾನಿಗಳು ಭೇಟಿನೀಡಿ ಪರಿಶೀಲಿಸಿದರು. ಈ ಪದ್ಧತಿ ಅಳವಡಿಕೆಯಿಂದ ಅತ್ಯುತ್ತಮ ಇಳುವರಿ(೧೨ಟನ್/ಹೆಕ್ಟೇರ್) ಲಭಿಸುತ್ತದೆ ಎನ್ನುವುದಕ್ಕೆ ಕೃಷಿನಿರ್ದೇಶಕರು ಸ್ವತಃ ಸಾಕ್ಷಿಯಾದರು.

ಈ ಹೆಚ್ಚುವರಿ ಇಳುವರಿಯನ್ನು ಕಂಡ ಅಧಿಕಾರಿಗಳು ಅವರ ಸಿಬ್ಬಂದಿ ವರ್ಗದವರನ್ನು ಮತ್ತು ಹಿರಿಯ ಅಧಿಕಾರಿಗಳನ್ನು ಕರೆ ತಂದರು ಮತ್ತು ಇನ್ನೂ ಹೆಚ್ಚಿನ ರೈತರನ್ನು ಈ ಕೃಷಿ ಪದ್ಧತಿಯತ್ತ ಸೆಳೆಯುವಂತೆ ಸೂಚಿಸಿದರು.

ರೈತರಲ್ಲಿ ಈ ವ್ಯವಸ್ಥೆಯ ಅಳವಡಿಕೆಯಿಂದ ಹೆಚ್ಚಿನ ಉತ್ಸಾಹ ಕಂಡುಬರುತ್ತಿತ್ತು. ಮುಂಬರುವ ವರ್ಷದಲ್ಲಿ ೨೦೦೦ದಷ್ಟು ರೈತರೊಂದಿಗೆ ಇನ್ನೂಹೆಚ್ಚಿನ ಇಳುವರಿ ಗಳಿಸುವ ಗುರಿ ಹೊಂದಿದ್ದರು. ಆಶ್ರ‍್ಯವೆಂದರೆ ಅತಿ ಕಡಿಮೆ ಅವಧಿಯಲ್ಲಿ ೫೦೦೦ಕ್ಕೂ ಹೆಚ್ಚಿನ ರೈತರು ತಮ್ಮ ಹೊಲಗಳಲ್ಲಿ ಇದನ್ನು ಅಳವಡಿಸಿಕೊಂಡರು. ಪಾಟ್ನಾದಲ್ಲಿನ ‘ಬಿಹಾರ್ ರೂರಲ್ ಲೈವ್ಲಿಹುಡ್ಪ್ರೊಮೋಷನ್ ಸೊಸೈಟಿ’ (ಃಖಐPS-ವಿಶ್ವಬ್ಯಾಂಕ್ ನಿಧಿಯನ್ನು ಬಳಸಿ ರಾಜ್ಯಸರ್ಕಾರದಿಂದ ಕಾರ್ಯನಿರ್ವಹಿಸುವ ಒಂದು ಸಂಸ್ಥೆ)ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಲಂದಾದ ಜಿಲ್ಲಾ ಕೃಷಿ ಅಧಿಕಾರಿಗಳು ಹೊಲಗಳಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಿದ್ದರು ಮತ್ತು ಅಲ್ಲಿ ಕೆಲಸಗಳು ಹೇಗೆ ನಡೆಯುತ್ತಿವೆ ಎಂಬುದರ ಬಗ್ಗೆ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಸ್ಥಳಿಯ ಜಿಲ್ಲಾಮ್ಯಾಜಿಸ್ಟೆçÃಟ್‌ರವರು ಮತ್ತು ಕಮಿಷನರ್‌ರವರು ಹಲವಾರು ಬಾರಿ ಆ ಹಳ್ಳಿಗಳಿಗೆ
ತೆರಳಿ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದರು ಮತ್ತು ಸಮುದಾಯದ ಆಹಾರ ಭದ್ರತೆಗಾಗಿ ಅವರ ಅಪಾರವಾದ ಕೊಡುಗೆಗೆ ಅಭಿನಂದನೆ ಸಲ್ಲಿಸುತ್ತಿದ್ದರು.

ಈ ಎರಡೂ ಜಿಲ್ಲೆಗಳಲ್ಲಿ ‘PRADAN’ ರೈತರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿತ್ತು. ಈ ಕಾರ್ಯಾಗಾರದಲ್ಲಿ (ಶಿಬಿರದಲ್ಲಿ) ಎಸ್‌ಆರ್‌ಐ ಬಗೆಗಿನ ಗೀತೆಗಳು, ನಾಟಕಗಳು ಮತ್ತು ಕೆಲವೊಮ್ಮೆ ಸಂಕಿರಣಗಳನ್ನು ಮತ್ತು ರೈತರ ಸಮ್ಮಿಲನ(ಗೆಟ್-ಟುಗೆದರ್) ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಎಸ್‌ಆರ್‌ಐ ಕ್ರಾಂತಿಮಾಡಿದ ರೈತರು ಸಮಾಜದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಿAದ ಗುರುತಿಸಲ್ಪಟ್ಟರು. ಕಿಸಾನ್ ಮೇಳಗಳಲ್ಲಿ ಅವರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು ಮತ್ತು ಅವರ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಅತಿ ಹೆಚ್ಚು ಪ್ರಮಾಣದಲ್ಲಿ ರೈತರು ಈ ಕ್ರಾಂತಿಯ ಬಗ್ಗೆ ಮಾತನಾಡ ತೊಡಗಿದರು ಮತ್ತು ತಮ್ಮಹೊಲಗಳಲ್ಲಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಗಳಿಸಲಾರಂಭಿಸಿದರು. ೨೦೧೨-೧೩ರಲ್ಲಿ PRADAN, ೯ ವಿವಿಧ ಸಂಘ-ಸAಸ್ಥೆಗಳ ಜೊತೆಗೂಡಿ ಬಿಹಾರ್‌ನ ೯ಜಿಲ್ಲೆಗಳ ಸುಮಾರು ೨೫೦೦೦ ಕೃಷಿ ಆಧಾರಿತ ಕುಟಂಬಗಳಿಗೆ ಇದರ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾದರು.

SWI ಗೋಧಿಕ್ರಾಂತಿಯ ಕಡೆಗೆ ೨೦೦೮-೨೦೦೯ರ ಸಮಯದಲ್ಲಿ PRADANಗೆ ATMAದಿಂದ  ಸಣ್ಣ ಪ್ರಮಾಣದ ಸಹಾಯಧನ ಒದಗಲು ಆರಂಭವಾಯಿತು. BRLPS ನ ಸಹಕಾರದೊಂದಿಗೆ ೨೭೮ ರೈತರನ್ನು ಕೂಡಿಕೊಂಡು ಗಯಾ ಮತ್ತು ನಳಂದಾದಲ್ಲಿ ಎಸ್‌ಆರ್‌ಐ ಸಿದ್ಧಾಂತವನ್ನು ಗೋಧಿ ಬೆಳೆಗೆ ಅಳವಡಿಸಿಕೊಂಡೆವು. ಭತ್ತದ ಬೆಳೆಯಿಂದ ಸ್ಪಷ್ಟ ಫಲಿತಾಂಶ ನೋಡಿದ್ದರಿAದ ಇದನ್ನು ಗೋಧಿ ಬೆಳೆಗೆ ಅಳವಡಿಸಿಕೊಳ್ಳುವುದರ ಬಗ್ಗೆ ಹಿಂಜರಿಕೆಯಿರಲಿಲ್ಲ. ಇದರಲ್ಲಿಕಡಿಮೆ ಬಿತ್ತನೆ ಬೀಜದ ಅವಶ್ಯಕತೆ ಮತ್ತು ಅಧಿಕ ಇಳುವರಿ ದೊರೆಯುವುದರಿಂದ ರೈತರಿಗೆ ಇದನ್ನು ಅಳವಡಿಸಿಕೊಳ್ಳಲು ಪ್ರೇರೇಪಣೆ ದೊರೆಯಿತು. ಬಿತ್ತನೆ ಸಮಯದಲ್ಲಿ ಹೆಚ್ಚುವರಿಯಾಗಿ ಕೂಲಿಕಾರ್ಮಿಕರ ಅವಶ್ಯಕತೆಯಿದ್ದರೂ ಇದಕ್ಕೆ ಹೆದರದೆ ರ‍್ಯತರು ಈ ಕ್ರಾಂತಿಯನ್ನು ತಮ್ಮಹೊಲಗಳಲ್ಲಿ ಪ್ರಯತ್ನಿಸಿದರು. ಮತ್ತೊಮ್ಮೆ ರೈತರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ನ ಪ್ರತಿನಿಧಿಗಳು, ಮತ್ತು ಶ್ರೀ ಟಿ ವಿಜಯ್‌ಕುಮಾರ್ – ನವದೆಹಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ನಿರ್ದೇಶಕರು ತಮ್ಮ ರಾಜ್ಯದ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಅವರು ಃಖಐPS ನಿಂದ ಉತ್ತೇಜಿತವಾದ ಸ್ವ-ಸಹಾಯ ಸಂಘಕ್ಕೆ ಸೇರಿದ ರೈತ ಮಹಿಳೆಯೊಂದಿಗೆ ಸಮಾಲೋಚನೆ ನಡೆಸಿದರು. ಅವರು ಸ್ಥಳೀಯ ರೈತರಿಂದ ಎಸ್‌ಆರ್‌ಐ ಭತ್ತದ ಕ್ರಾಂತಿ ಮತ್ತು ಎಸ್‌ಆರ್‌ಐ ಗೋಧಿ ಕ್ರಾಂತಿ ಬಗೆಗಿನ ಕೆಲವು ಕುತೂಹಲಕಾರಿ ಅನುಭವಗಳನ್ನು ಆಲಿಸಿದರು. ಮತ್ತು ಹೊಲಗಳಲ್ಲಿ ಹೆಚ್ಚು ಇಳುವರಿಯನ್ನು ಕಂಡರು. ೨೦೦೯-೧೦ರ ಕೊನೆಯಲ್ಲಿ ಸುಮಾರು ೧೫೦೦೦ ಹೊಲಗಳು ಈ
ಪದ್ಧತಿಯನ್ನು ಅಳವಡಿಸಿಕೊಂಡಿದ್ದವು.

ಇತರ ಕ್ರಮಗಳು
೨೦೦೮-೦೯ರಲ್ಲಿ PRADAN, ಟಾಟಾ ಟ್ರಸ್ಟ್ನ ಸಹಯೋಗದೊಂದಿಗೆ ಡೈವರ್ಶನ್ ಬೇಸ್ಡ್ ಇರಿಗೇಷನ್ (DBI) ಪದ್ಧತಿಯನ್ನು ಅಭಿವೃದ್ಧಿಗೊಳಿಸಿತು. ಈ ಯೋಜನೆಯ ಅಂಗವಾಗಿ ಗಯಾ ಜಿಲ್ಲೆಯಲ್ಲಿ ಎಸ್‌ಆರ್‌ಐ ಹೊಲಗಳಲ್ಲಿ ಬದನೇಕಾಯಿ, ಟೊಮ್ಯಾಟೋ, ಹಾಗಲಕಾಯಿ ಮತ್ತು ಮೆಣಸು ಮುಂತಾದ ತರಕಾರಿಗಳನ್ನು ಬೆಳೆಯಲಾಯಿತು. ಇದು ಭಾರತದಾದ್ಯಂತ ಎಲ್ಲಾ ಸಂಶೋಧಕರ ಗಮನ ಸೆಳೆಯಿತು. ಇದನ್ನು ವೀಕ್ಷಿಸಲು ಹೈದ್ರಾಬಾದ್‌ನ ನ್ಯಾಷನಲ್ ಇನ್ಸಿ ್ಟಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್‌ನ ವಿಜ್ಞಾನಿಗಳು ಮತ್ತು ಫಿಲಿಫೈನ್ಸ್ನ IRRIನ ವಿಜ್ಞಾನಿಗಳು ಆಗಮಿಸಿದರು. ಎಸ್‌ಆರ್‌ಐ ಮತ್ತು ಡಿ ಬಿ ಐ ನಿಂದಾಗುವ ಪ್ರಯೋಜನಗಳನ್ನು ಗಮನಿಸಿದ ಗಯಾದ ಆಖಆಂನ
ನಿರ್ದೇಶಕರು ತಮ್ಮ ಇಲಾಖೆಯ ಮೂಲಕ ಇಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು.

೨೦೦೯-೧೦ರಲ್ಲಿ ATMA ಉತ್ತಮ ಇಳುವರಿ ಬೀಜಗಳನ್ನು ಸ್ವೀಕರಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು PRADAN ಗೆ ಆಹ್ವಾನ ನೀಡಿತು. ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳನ್ನು ಮತ್ತು ಅಧಿಕಾರಿಗಳನ್ನು ಎಸ್‌ಆರ್‌ಐ ಹೊಲಗಳಿಗೆ ಭೇಟಿ ನೀಡಲು ಆಹ್ವಾನ ನೀಡಲಾಯಿತು. ಇದರ ಫಲಿತಾಂಶವಾಗಿ ಎಲ್ಲಾ ಪ್ರತಿನಿಧಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶವಾಯಿತು (ಉದಾ: ವ್ಹೀಟ್ ರಿಸರ್ಚ್ ಇನ್ಸ್ಟಿಟ್ಯೂಟ್  ಮತ್ತು ಭರತ್‌ಪುರ್-ರಾಜಸ್ತಾನ್‌ನ ಡೈ- ರೆಕ್ಟರ್ ಆಫ್ ರಿಪ್ರೆಸ್ಡ್ ಮಸ್ಟರ್ಡ್ ರಿಸರ್ಚ್ ಇನ್ಸ್ಟಿಟ್ಯೂಟ್ ). SRI ರೇಪ್‌ಸೀಡ್ ಪದ್ಧತಿಯು ಸ್ಥಳಿಯ ರಾಜ್ಯಸರ್ಕಾರವನ್ನು ಉತ್ತೇಜಿಸಿತು ಮತ್ತು PRADANಗೆ ಗಯಾದ ೧೧ ಬ್ಲಾಕ್‌ಗಳಲ್ಲಿ ಮಹಿಳಾ ಫಾರ್ಮ್ ಸ್ಕೂಲ್‌ಗಳನ್ನು ನಡೆಸಲು ಸಹಕಾರ ನೀಡಿತು.
೨೦೧೨ರಲ್ಲಿ ನಾವು ರೂಟ್ ಇಂಟೆನ್ಸಿಫಿಕೇಶನ್ ಪದ್ದತಿಯಲ್ಲಿ ಗೆಣಸು ಬೆಳೆಯಲು ಮಾರ್ಗದರ್ಶನ ನೀಡಿದೆವು. ಎಸ್‌ಆರ್‌ಐ ಪದ್ಧತಿಯಡಿಯಲ್ಲಿ ಈ ಬೆಳೆಯ ಇಳುವರಿ
ಪ್ರೋತ್ಸಾಹದಾಯಕವಾಗಿತ್ತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದನ್ನು ಬೆಳೆಯಲು ಮುಂದಾದರು.

ವಿವಿಧರೀತಿಯ ಬೆಳೆಗಳನ್ನು ಬೆಳೆಯುತ್ತಾ ನಮಗೆ ಸವಿವರವಾಗಿ ಎಸ್‌ಆರ್‌ಐ ನ ಮೂಲತತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಎಂದು ಅರ್ಥೈಸಲ್ಪಟ್ಟಿತು. ಸಾಮಾನ್ಯವಾಗಿ ಎಸ್‌ಆರ್‌ಐ – ಶ್ರೀ ಪದವನ್ನು ಹೆಚ್ಚಿನ ಗೌರವ ವ್ಯಕ್ತಪಡಿಸುವುದಕ್ಕಾಗಿ ಬಳಸಲಾಗುತ್ತದೆ. ಇದು ಗ್ರಾಮಸ್ಥರ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಶೀಘ್ರದಲ್ಲೇ ‘ಶ್ರೀ ವಿಧಿ’ಯು ಬಿಹಾರ್‌ನ ಗ್ರಾಮ ಸಮುದಾಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸರ್ವೇಸಾಮಾನ್ಯ ಪದವಾಗಿ ಬಳಕೆ- ಯಾಗತೊಡಗಿತು.

ಪ್ರಮುಖ ಅಂಶಗಳು
೨೦೦೮-೦೯ರಲ್ಲಿ ಪಾಟ್ನಾದಲ್ಲಿ ರಾಜ್ಯಮಟ್ಟದ ಎಸ್‌ಆರ್‌ಐ- ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವನ್ನು ಬಿಹಾರದ ಆಗಿನ ಕೃಷಿ ಸಚಿವೆ ಡಾ.ಶ್ರೀಮತಿ ರೇಣು ಕುಮಾರಿ ಕುಸ್ವಾಹ್ ಉದ್ಘಾಟಿಸಿದ್ದರು. ಅವರು ರೈತರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಎಸ್‌ಆರ್‌ಐ ಪ್ರಯೋಗ ಕುರಿತ ಅನುಭವಗಳನ್ನು ತಿಳಿದುಕೊಳ್ಳಲು ಕಾತುರರಾಗಿದ್ದರು.

೨೦೦೯ರ ಆರಂಭದ ತಿಂಗಳುಗಳಲ್ಲಿ ಬಿಹಾರ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ರಾಜ್ಯದಲ್ಲಿನ ರೈತರನ್ನು ಕಿಸಾನ್ ಮಹಾಪಂಚಾಯತ್‌ಗೆ ಆಹ್ವಾನಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ನಿತೀಶ್ ಕುಮಾರ್ ಮಾನ್ಯ ಮುಖ್ಯಮಂತ್ರಿಗಳು, ಮಂತ್ರಿ ಮಂಡಲದ ಸದಸ್ಯರು, ಇತರ ಉನ್ನತ ಅಧಿಕಾರಿಗಳು ಮತ್ತು ೨೫೦೦ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಆಹ್ವಾನಿತರಲ್ಲಿ ಪ್ರಮುಖವಾಗಿ ಗಯಾದ ಶ್ರೀಮತಿ ಭಾರತಿ ದೇವಿ (೧೮.೧ಟನ್/ಕಟಾವು ಇಳುವರಿ ಗಳಿಸಿದವರು) ಯವರಿಗೆ ಕಾರ್ಯಕ್ರಮದ ಆಯೋಜಕರು ತಮ್ಮ ಅನುಭವಗಳನ್ನು ಎರಡು ನಿಮಿಷಗಳಲ್ಲಿ ಹಂಚಿಕೊಳ್ಳುವoತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಆ ಗ್ರಾಮೀಣ ಮಹಿಳೆಯ ಮಾತುಗಳನ್ನು ಕೇಳಲು ಕಾತುರರಾಗಿದ್ದರು. ಮತ್ತು ಅವರು ಆಯೋಜಕರಿಗೆ ಇನ್ನೂ ಹೆಚ್ಚಿನ ಸಮಯಾವಕಾಶ ನೀಡುವಂತೆ ತಿಳಿಸಿದರು. ಭಾರತಿ ದೇವಿಯವರು ಸುಮಾರು ಅರ್ಧಗಂಟೆಗಳ ಕಾಲ ಸಭಿಕರೆಲ್ಲರಿಗೂ ಮನದಟ್ಟಾಗುವಂತೆ ತಮ್ಮ ಅನುಭವಗಳನ್ನು ವಿವರಿಸಿದರು.

ಅಕ್ಟೋಬರ್ ೨೦೦೯ರಲ್ಲಿ ಃಖಐPS ಮಹಿಳಾ ಸ್ವ-ಸಹಾಯಸಂಘಗಳ ಜೊತೆಗೂಡಿ ಇನ್ನೊಂದು ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಸಮ್ಮೇಳನದಲ್ಲಿ ಒಂದು ಎಸ್‌ಆರ್‌ಐ ಸ್ಟಾಲ್‌ನ್ನು ತೆರೆಯಲಾಗಿತ್ತು ಮತ್ತು ಮುಖ್ಯಮಂತ್ರಿಗಳಿಗೆ ಆಮoತ್ರಣ ನೀಡಲಾಗಿತ್ತು. ಅವರು ಕಾರ್ಯಕ್ರಮದ ಉದ್ಘಾಟನೆಗೆ ಮುಂಚಿತವಾಗಿಯೇ ಸ್ಟಾಲ್‌ಗಳಿಗೆ ಭೇಟಿ ನೀಡಿದ್ದರು. ಮತ್ತು ಅಲ್ಲಿದ್ದ ರೈತರೊಡನೆ ಚರ್ಚೆ ನಡೆಸಿದರು. ಸ್ವ-ಸಹಾಯ ಸಂಘಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು, ‘ಇಸ್ ಸೆ ಖಾದ್ಯ ಸಮಸ್ಯಾ ಕ ಹಲ್ ಹಿ ನಿಕಲ್ ಆಯೇಗ’ ‘ಅಂದರೆ, ಇದರಿಂದಾಗಿ ಬಿಹಾರದ ಆಹಾರ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಅಧಿಕಪ್ರಮಾಣದ ಬಿತ್ತನೆ
೨೦೧೦-೧೧ರಲ್ಲಿ, ಮುಖ್ಯಮಂತ್ರಿಗಳು, ಕೃಷಿ ಸಚಿವೆ ಶ್ರೀಮತಿ ರೇಣು ಕುಮಾರಿ ಕುಸವಾಹ್‌ರೊಂದಿಗೆ ಗಯಾಕ್ಕೆ ಭೇಟಿ ನೀಡಿದರು. ಶೇಖ್‌ವಾರದ ಹೊಲಗಳಿಗೆ ಅವರ ಭೇಟಿ ಮತ್ತು ಎಲ್ಲಾ ರೈತರೊಂದಿಗಿನ ಸಮಾಲೋಚನೆ ಇತ್ಯಾದಿಗಳಿಂದಾಗಿ ಪ್ರಾಧಿಕಾರಗಳಿಗೆ (ಅಗ್ರಿಕಲ್ಚರ್ ಪ್ರೊಡಕ್ಷನ್ ಕಮಿಷನರ್) ಎಸ್‌ಆರ್‌ಐನ ಬಗ್ಗೆ ಹೆಚ್ಚಿನ ನಂಬಿಕೆ ಬರುವಂತಯಾಯಿತು. ಮತ್ತು ರಾಜ್ಯ ಸರ್ಕಾರದ ನಿರ್ಧಾರದ ಪ್ರಕಾರ ಹೆಚ್ಚಿನ ಬಿತ್ತನೆಗಾಗಿ ರಾಜ್ಯಾದ್ಯಂತ ಕನಿಷ್ಠ ಪ್ರತಿ ಜಿಲ್ಲೆಯಲ್ಲಿ ಐದು ರೈತರಿಗೆ ಹಣಕಾಸು ನೆರವಿನೊಂದಿಗೆ ಪ್ರೋತ್ಸಾಹ ನೀಡಲಾಯಿತು. ಸರ್ಕಾರವು ವಿವಿಧ ವಿಭಾಗಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನು ನಡೆಸಲು PRADANಗೆ ನಿಮಂತ್ರಣ ನೀಡಿತು.
ನಾವು ಗ್ರಾಮೀಣ ಮಹಿಳೆಯರಿಗೆ ಸಹಕಾರಿಯಾಗಿ, ರೈತರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಿದೆವು. ೨೦೦೯-೧೦ರಲ್ಲಿ ಅತಿವೃಷ್ಟಿಯ ಅನುಭವವಾಗಿದ್ದರೂ ನಮ್ಮ ಕೆಲಸದಲ್ಲಿ ಉತ್ಸಾಹ ಕಡಿಮೆಯಾಗಿರಲಿಲ್ಲ.

ಇಲ್ಲಿ ಇನ್ನೊಂದು ಪ್ರೋತ್ಸಾಹದಾಯಕ ಅಂಶವೆoದರೆ, ರಾಜ್ಯಸರ್ಕಾರವು ೨೦೧೧ನ್ನು ‘ಎಸ್‌ಆರ್‌ಐ ವರ್ಷ’ಎಂದು ಘೋಷಿಸಿದ್ದು, ಮತ್ತು ಈ ಪದ್ಧತಿಯ ಅಳವಡಿಕೆ ಮತ್ತು
ಲಾಭಗಳನ್ನು ಒಟ್ಟಾರೆಯಾಗಿ ‘ಶ್ರೀ ಕ್ರಾಂತಿ’ ಎಂದು ಕರೆದಿದ್ದು.

ಈ ಕಾರ್ಯಕ್ರಮದ ಆಚರಣೆಗಾಗಿ ವಿವಿಧ ಸರ್ಕಾರಿ ಏಜೆನ್ಸಿಗಳು, ಅಗ್ರಿಕಲ್ಚರ್ ಟ್ರೈನಿಂಗ್ ಅಂಡ್ ಮ್ಯಾನೇಜ್ಮೆಂಟ್ ಏಜೆನ್ಸಿಯ ಸಹಕಾರದೊಂದಿಗೆ ಮುದ್ರಿತ ಸಲಕರಣೆಗಳನ್ನು ಅಭಿವೃದ್ಧಿಪಡಿಸಿತು. ೨೦೧೧ಜನವರಿಯಲ್ಲಿ ಮುಖ್ಯಮಂತ್ರಿಗಳು ಪಾಟ್ನಾದ ಎಸ್. ಕೆ. ಮೆಮೋರಿಯಲ್ ಹಾಲ್‌ನಲ್ಲಿ ವಿಶೇಷ ಅಧಿವೇಶನದಲ್ಲಿ ಎಸ್‌ಆರ್‌ಐ ಕ್ರಾಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮುಂದಿನ ವರ್ಷಗಳಲ್ಲಿ ೩೫೦೦೦೦ಹೆಕ್ಟೇರ್ ಹೊಲಗಳಲ್ಲಿ ಎಸ್‌ಆರ್‌ಐ ಭತ್ತ ಬೆಳೆಯುವ ಗುರಿಯನ್ನು ತಮ್ಮ ಸರ್ಕಾರ ಹೊಂದಿದೆ ಎಂದು ತಮ್ಮ ಆಶಯವನ್ನು ತೋಡಿಕೊಂಡರು. ಡಾ. ಆರ್.ಕೆ.ಸೊಹಾನ್, ಬಿಹಾರ್ ಅಗ್ರಿಕಲ್ಚರಲ್ ಮ್ಯಾನೇಜ್‌ಮೆಂಟ್ ಎಕ್ಸ್ಟೆನ್ಷನ್ ಮತ್ತು ಟ್ರೈನಿಂಗ್ ಇನ್ಸ್ಟಿಟ್ಯೂಟ್ (BAMETI)ನ ನಿರ್ದೇಶಕರು ತರಬೇತಿ ಕಾರ್ಯಾಗಾರಗಳ ಸರಣಿಯನ್ನು ಬಿಹಾರ್‌ನ ಎಲ್ಲಾ ವಿಭಾಗಗಳಲ್ಲಿ ಮತ್ತು ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪತ್ರಿಕಾ ಮಾಧ್ಯಮಗಳು ಮತ್ತು ದೃಶ್ಯಮಾಧ್ಯಮಗಳು ಬಿತ್ತನೆಯ ಬಗೆಗಿನ ವಿವರಗಳನ್ನು ಮತ್ತು ಫಲಿತಾಂಶವನ್ನು ವಿವರಿಸುವುದರ ಮೂಲಕ ಸಹಕಾರ ನೀಡಿದವು. ಜಯಜೀತ್‌ಕುಮಾರ್, ಭಾರತಿ ದೇವಿ ಮತ್ತು ಸುನಿತಾ ದೇವಿ ಎಂಬ ರೈತರು ಪಟ್ನಾದ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮೀಣ ಮಹಿಳೆಯರ ತಂಡದೊoದಿಗೆ ತಮ್ಮ ಅನುಭವಗಳನ್ನು ಹಂಚಿಕೊoಡರು.

2011-12ರ ಅವಧಿಯಲ್ಲಿ ಸರ್ಕಾರಿ ಅಂಕಿ-ಅAಶಗಳ ಪ್ರಕಾರ ೨೬೦೦೦ ಕುಟುಂಬಗಳನ್ನು ಒಳಗೊಂಡ ಸುಮಾರು ೩೩೫೦೦೦ ಹೆಕ್ಟೇರ್‌ನಷ್ಟು ಹೊಲಗಳಲ್ಲಿ ಎಸ್‌ಆರ್‌ಐನ್ನು ಅಳವಡಿಸಿಕೊಳ್ಳಲಾಗಿತ್ತು. ಬಿಹಾರ್‌ನ ಒಟ್ಟಾರೆ ಭತ್ತದ ಉತ್ಪಾದನೆ ೪.೬ ಮಿಲಿಯನ್ ಟನ್‌ನಿಂದ ೭.೨ಮಿಲಿಯನ್ ಟನ್‌ಗೆ ಏರಿಕೆಯಾಯಿತು. ಈ ಏರಿ- ಕೆಯ ಪ್ರಮಾಣದಲ್ಲಿ ಎಸ್‌ಆರ್‌ಐ ಅಳವಡಿಸಿಕೊಂಡಿರುವ ಪಾಲು ಹೆಚ್ಚಿನದಾಗಿತ್ತು. ನಲಂದಾ ಜಿಲ್ಲೆಯ ದರ್ವೇಸ್‌ಪುರ ಗ್ರಾಮದ ಒಬ್ಬರೈತ ೨೨.೪ಟನ್/ಹೆಕ್ಟೇರ್‌ನಷ್ಟು ದಾಖಲೆಯ ಇಳುವರಿ ಗಳಿಸುವ ಮೂಲಕ ೨೦೧೩ ಜನವರಿ ೧೫ರಂದು ಭಾರತದ ರಾಷ್ಟçಪತಿಗಳಿಂದ ವಿಶೇಷವಾದ `ಕೃಷಿ ಕರ್ಮನ್’ ಪ್ರಶಸ್ತಿ ಪಡೆದುಕೊಂಡರು.
ಬಿಹಾರದ ರಾಜ್ಯ ಸರ್ಕಾರದ ಕೃಷಿ ಸಚಿವರಿಗೂ ಪ್ರಶಸ್ತಿಯನ್ನು ನೀಡಲಾಯಿತು. ಬಿಹಾರದಲ್ಲಿ ನಡೆಯುತ್ತಿರುವ ಈ ಕ್ರಾಂತಿಯನ್ನು ನಾವು ಪ್ರಶಂಸಿಸಲೇಬೇಕು.

Anil Kumar Verma

Preservation and Proliferation of Rural Resources and Nature (PRAN) PRADAN

Road No.6, East Shastri Nagar Sikariya More, Gaya – 823 001 Bihar

E-mail: gaya@pradan.net; anilverma@pradan.net

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೧, ಮಾರ್ಚ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...