ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆ ಆವಿಷ್ಕಾರ, ಹೂಡಿಕೆ ಹಾಗೂ ಸಂಸ್ಥೆಗಳು


ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಎಸ್.ಆರ್.ಐ. ಉತ್ತಮ ಫಲಿತಾಂಶವನ್ನು ನೀಡಿದೆ. ಬಹಳಷ್ಟು ಸಣ್ಣ, ಅತಿ ಸಣ್ಣ ಹಾಗೂ ಬುಡಕಟ್ಟು ರೈತರು ಭಾರತೀಯ ಅಥವಾ ಸಾಂಪ್ರದಾಯಿಕ ಪದ್ಧತಿಯೊಂದಿಗೆ ಎಸ್.ಆರ್.ಐ. ಅನುಸರಿಸಿ ಅಧಿಕ ಇಳುವರಿ ಪಡೆದಿದ್ದಾರೆ. ರೈತರು ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ನಡೆಸುತ್ತಿದ್ದು ಎಸ್.ಆರ್.ಐ. ಅನ್ನು ಭತ್ತದ ಆಚೆಗೂ ವಿಸ್ತರಿಸಿ ಇತರ ಬೆಳೆಗಳಿಗೂ ಅಳವಡಿಸಿಕೊಂಡಿದ್ದಾರೆ. ರೈತರ ಈ ಬಗೆಯ ಆವಿಷ್ಕಾರಗಳನ್ನು ವಿಸ್ತರಿಸಲು ಹೆಚ್ಚಿನ ಹೂಡಿಕೆಯ ಹಾಗೂ ಅದನ್ನು ತೊಡಗಿಸಲು ಸಂಸ್ಥೆಗಳ ಅವಶ್ಯಕತೆ ಇದೆ.


ಭಾರತದಲ್ಲಿ ಎಸ್.ಆರ್.ಐ. ಅಳವಡಿಕೆ ಆರಂಭಗೊoಡು ದಶಕ ಕಳೆದಿದೆ. ಎಸ್.ಆರ್.ಐ. ವಿಸ್ತರಣೆಗೊಂಡ ಬಗೆ, ಅದಕ್ಕೆ ಪೂರಕವಾದ ಅಂಶಗಳು, ನಡೆಸಲಾದ ಪ್ರಯೋಗಗಳು, ಫಲಿತಾಂಶ, ವೈಫಲ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಅದರ ಪ್ರಮಾಣ ಹಿಗ್ಗಿಸಲು ಅನುಸರಿಸಬೇಕಾದ ಮಾರ್ಗಗಳು ಮತ್ತು ಉಂಟಾಗಬಹುದಾದ ತಡೆಗೆ ಕೈಗೊಳ್ಳಬೇಕಾದ ನಿವಾರಣೋಪಾಯಗಳು – ಇತ್ಯಾದಿಗಳ ಅವಲೋಕನ ನಡೆಸಲು ಇದು ಸಕಾಲ. ಎಸ್.ಆರ್.ಐ. ಅನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಬೆಂಬಲ ಕ್ರೋಢೀಕರಿಸುವ ಹಾಗೂ ದೊಡ್ಡ ಮಟ್ಟದ ಯೋಜನಾ ವಲಯಗಳಲ್ಲಿ ಚರ್ಚೆ ನಡೆಸುವ ಅಗತ್ಯವಿದೆ. ಎಸ್.ಆರ್.ಐ. ಸಾಕಷ್ಟು ಮಟ್ಟದಲ್ಲಿ ವಿಸ್ತರಣೆಗೊಂಡಿಲ್ಲ ಎನ್ನುವ ಊಹೆಯೊಂದಿಗೆ ಇದನ್ನು ಆರಂಭಿಸಬೇಕಾಗುತ್ತದೆ. ಬಹುತೇಕ ಎಸ್.ಆರ್.ಐ. ಪ್ರವರ್ತಕರು ಇದೇ ಉಪಾಯವನ್ನು ಅನುಸರಿಸುತ್ತ ಬಂದಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಆರ್.ಐ. ಅನ್ನು ಎಲ್ಲ ಬಗೆಯ ಕೃಷಿ ಪರಿಸರ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದುವ ಒಂದು ತಂತ್ರಜ್ಞಾನದ ಅನ್ವಯವೆಂದು ಭಾವಿಸಬೇಕು. ಅಥವಾ ಅದೊಂದು ಆರು ತತ್ತ÷್ವಗಳಿಗೆ ಸೀಮಿತವಾದ ವ್ಯವಸ್ಥೆಯೆಂಬ ಊಹೆಯೊಂದಿಗೆ ಚರ್ಚೆ ಆರಂಭಿಸಬೇಕು. ಈ ದೃಷ್ಟಿಕೋನವನ್ನು ಬಿ.ಟಿ. ಹತ್ತಿಯ ವ್ಯಾಪ್ತಿ ವಿಸ್ತರಣೆಯಲ್ಲಿ ಬಳಸಲಾಗಿತ್ತು. ಇಂತಹ ಚರ್ಚೆಗಳು ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ನಡೆಯಬೇಕು. ಟೆಲಿಕಾಮ್ ಹೇಗೆ ದೇಶಾದ್ಯಂತ ಹಬ್ಬಿಕೊಂಡಿದೆಯೋ ಅದೇ ಬಗೆಯಲ್ಲಿ ಕೃಷಿ ಇಳುವರಿ ಹೆಚ್ಚಿಸುವ ಉಪಾಯಗಳೂ ಹಬ್ಬಿಕೊಳ್ಳಬೇಕು. ಭಾರತದ ಸಂದರ್ಭದಲ್ಲಿ ಶೌಚಾಲಗಳು ಹಾಗೂ ಶುಚಿತ್ವದ ಬಗ್ಗೆ ತಿಳಿವು ನೀಡುವ ಚಟುವಟಿಕೆಗಳು ಕೂಡ ಇಷ್ಟು ವ್ಯಾಪಕವಾಗಿ ಹಬ್ಬಿದ್ದಿಲ್ಲ!

ನಾವೀಗ ಎಸ್.ಆರ್.ಐ. ಅನ್ನು ಮುಖ್ಯವಾಗಿ ಮೂರು ಸಂಗತಿಗಳಲ್ಲಿ ತೊಡಗಿಸುವ ಅಗತ್ಯವಿದೆ. ಅವು – ಆವಿಷ್ಕಾರ, ಹೂಡಿಕೆ ಮತ್ತು ಸಂಸ್ಥೆಗಳು. (ಮೂರು `ಐ’ಗಳು – ಇನ್ನೊವೇಷನ್, ಇನ್ವೆಸ್ಟ್ಮೆಂಟ್, ಇನ್ಸ್ಟಿಟ್ಯೂಷನ್). ಆವಿಷ್ಕಾರದ ಸ್ವರೂಪ, ಅದಕ್ಕೆ ಪೂರಕವಾಗಿ ಬಂಡವಾಳ ಹೂಡುವಿಕೆ ಮತ್ತು ಈ ಬಂಡವಾಳ ಹೂಡಲು ಆಸಕ್ತ ಹಾಗೂ ಸೂಕ್ತವಾದ ಸಂಸ್ಥೆಗಳ ಸಹಕಾರಗಳ ಕುರಿತು ಹೆಚ್ಚಿನ ಮಟ್ಟದ ಚಿಂತನೆ ನಡೆಸಬೇಕಿದೆ. ಈ ಎಲ್ಲವನ್ನು ನಾವು ಎಸ್.ಆರ್.ಐ. ವಿಸ್ತರಣೆಯ ದೃಷ್ಟಿಯಿಂದ ನೋಡುವಂತೆಯೇ ಸದ್ಯದ `ರಾಜಕೀಯ ಆರ್ಥಿಕತೆಯ ನಿರ್ಲಕ್ಷö್ಯ ಧೋರಣೆ’ಯನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಾಸವಿಯವರು ನಡೆಸಿದ ಕೃಷಿಯ ಕರಾಳ ಮುಖ ತೋರುವ ಇತ್ತೀಚಿನ ಅಧ್ಯಯನವನ್ನು ಅನುಸರಿಸಬಹುದು. ಇಪ್ಪತ್ತೊಂದನೆ ಶತಮಾನದ ಭಾರತದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ಏರಿದೆಯೆನ್ನುವುದನ್ನು ಈ ಸಂದರ್ಭದಲ್ಲಿ ಪರಿಗಣಿಸಬೇಕು.

ಆವಿಷ್ಕಾರಗಳು ಹಾಗೂ ಜನರ ಆಯ್ಕೆ
ವಿಸ್ತರಣಾ ಕಾರ್ಯಯೋಜನೆ ಸಿದ್ಧಪಡಿಸುವಾಗ ಕೆಲವು ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಸಂಬAಧಿತ ಆವಿಷ್ಕಾರಗಳು ರೈತರ ಪರಿಸ್ಥಿತಿಗೆ ಅನುಕೂಲಕರವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ಕನಿಷ್ಠ ಸಹಕಾರ, ಮಾರುಕಟ್ಟೆ ಸಮಸ್ಯೆ, ಹವಾಮಾನ ವೈಪರೀತ್ಯ ಹಾಗೂ ಉತ್ಪಾದನಾ ವೆಚ್ಚದಲ್ಲಿ ಏರಿಕೆ – ಇವುಗಳೆಲ್ಲವನ್ನು ಮೀರಿ ಲಾಭದಾಯಕವಾಗುವಂತೆ ಯೋಜನೆ ರೂಪಿಸಬೇಕಾಗುತ್ತದೆ. ಕೆಲವು ತಂತ್ರಜ್ಞಾನಗಳು ಹವಾಮಾನ ವೈಪರೀತ್ಯ ಇರುವೆಡೆ ಹಾಗೂ ರೈತರು ಪ್ರತಿಕೂಲ ಸನ್ನಿವೇಶ ಎದುರಿಸುತ್ತಿರುವ ಕಡೆಗಳಲ್ಲಿ ಸಾಲ ಬಾಧೆ ಮತ್ತು ಬೆಳೆ ಹಾನಿ ಉಂಟುಮಾಡುತ್ತವೆ. ಆದ್ದರಿಂದ ತಂತ್ರಜ್ಞಾನ ಅಳವಡಿಕೆಗಿಂತ ಹೆಚ್ಚಿನದಾಗಿ ಪರಿಸ್ಥಿತಿಗೆ ಸರಿಹೊಂದುವAಥ ಲಾಭದಾಯಕ ಹಾಗೂ ಸುರಕ್ಷಿತ ಆವಿಷ್ಕಾರಗಳನ್ನು ನಡೆಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಮೊದಲ ಹಸಿರು ಕ್ರಾಂತಿಯ (GR1) ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿದ್ದ ಸರ್ಕಾರೀಪ್ರಾಯೋಜಿತ ಆವಿಷ್ಕಾರವಾದ `ಮಿರಾಕಲ್ ಸೀಡ್’ಗಳನ್ನು ಇಳುವರಿ ಹೆಚ್ಚಳಕ್ಕಾಗಿ ಪ್ರಯೋಗಿಸಲಾಗಿತ್ತು.

ಇತ್ತೀಚಿನ ಎರಡನೇ ಹಸಿರು ಕ್ರಾಂತಿಯ (GR2) ಸಂದರ್ಭದಲ್ಲಿ, ಅದರ ಮುಖ್ಯ ಪಾತ್ರ ವಹಿಸುತ್ತಿರುವವರು ಯಾರು ಅನ್ನುವುದೊಂದೆ ಈವರೆಗೆ ಆಗಿರುವ ಬದಲಾವಣೆ. ರಾಜ್ಯ ಸಂಶೋಧನಾ ಹಾಗೂ ವಿಸ್ತರಣಾ ವ್ಯವಸ್ಥೆಗಳು ಉಖ೧ ಅನ್ನು ಮುನ್ನಡೆಸಿದ್ದವು. ಇದೀಗ ವಿವಿಧ ಸ್ತರಗಳ ಹಾಗೂ ಕ್ಷೇತ್ರಗಳ, ಬಗೆ ಬಗೆ ಆಸಕ್ತಿಯ ಖಾಸಗಿ ವಲಯದ ಜನರು ಉಖ೨ ಅನ್ನು ಮುನ್ನಡೆಸುತ್ತಿದ್ದಾರೆ. ಕಾರ್ಯಸಾಧನೆಯ ವಿಷಯಕ್ಕೆ ಬಂದರೆ, ಭೌಗೋಳಿಕ ಗುಣಲಕ್ಷಣಗಳಿಗೆ ಒತ್ತು ನೀಡುವುದು, ನೀರಾವರಿ ಸೌಲಭ್ಯವಿರುವ ಪ್ರದೇಶಗಳಿಗೆ ಆದ್ಯತೆ, ಹಾಗೂ ರೈತರ ಆವಿಷ್ಕಾರಗಳಿಗೆ ಅವಕಾಶ ನೀಡುವುದು, ಉತ್ಪನ್ನ ಅಥವಾ ಇಳುವರಿಗೆ ಹೆಚ್ಚುವರಿ ಬೆಲೆ ನಿಗದಿ – ಇವೆಲ್ಲವೂ ಉಖ೨ನಲ್ಲಿ ಹಾಗೆಯೇ ಉಳಿದಿದೆ.

ಇನ್ನೊಂದೆಡೆಯಲ್ಲಿ, ಕೃಷಿ ಆವಿಷ್ಕಾರಗಳನ್ನು ಹೇಗೆ ನೋಡಬೇಕು ಎನ್ನುವುದನ್ನು ಎಸ್.ಆರ್.ಐ. ಪರಿಣಾಮಕಾರಿಯಾಗಿ ತೋರಿಸಿಕೊಡುತ್ತಿದೆ. ಹೊಸ ಆವಿಷ್ಕಾರಗಳ ಕುರಿತ ಸಮಕಾಲೀನ ಚರ್ಚೆಗಳಲ್ಲಿ ದೊಡ್ಡ ಪದಗಳನ್ನು ಬಳಸಲಾಗುತ್ತದೆ. ಆದರೆ ಫಲಿತಾಂಶ ಬದಲಿಸುವ ಆವಿಷ್ಕಾರಗಳನ್ನು (ತಂತ್ರಜ್ಞಾನಗಳಲ್ಲ) ನಾವು ಗಜಗಳ ಅಳತೆಯಲ್ಲಾಗಲೀ ಉತ್ಪನ್ನ ಪ್ರಮಾಣದ ಹೆಚ್ಚಳ ಮೂಲಕವಾಗಲೀ ಅಳೆಯಲು ಹೋಗಬಾರದು. ಅದನ್ನು, ಆವಿಷ್ಕಾರವನ್ನು ಅರ್ಥ ಮಾಡಿಸುವ ವಿಶಾಲ ದೃಷ್ಟಿಕೋನದಲ್ಲಿ ತೂಗಿ ನೋಡಬೇಕು.

ಅಷ್ಟಾಗಿಯೂ ಇಳುವರಿಯನ್ನೆ ಯಶಸ್ಸಿನ ಮಾನದಂಡವೆoದು ಪರಿಗಣಿಸುವುದಾದರೆ, ಸುಮಂತ್ ಕುಮಾರ್ ಹಾಗೂ ಬಿಹಾರದ ದರ್ವೇಶ್‌ಪುರ ಹಳ್ಳಿಯ ಇನ್ನಿತರ ರೈತರ ಯಶೋಗಾಥೆಯನ್ನು ಕೇಳಬೇಕು. ಎಸ್.ಆರ್.ಐ. ಇಳುವರಿಯಲ್ಲಿ ವಿಶ್ವದಾಖಲೆ ಬರೆದಿರುವುದು ಯಥೇಚ್ಛ ನೀರಾವರಿ ಪ್ರದೇಶದ, ಹಸಿರುಕ್ರಾಂತಿಗೆ ಪಕ್ಕಾಗಿದ್ದ ಪಂಜಾಬಿನ ಬೆಳೆಕಣಜಗಳಲ್ಲ; ಈ ಸಾಧನೆ ಮಾಡಿರುವುದು ಬೆಳೆ ಉತ್ಪಾದನೆಯಲ್ಲಿ ಅತ್ಯಂತ ಹಿಂದುಳಿದಿರುವ ಕೃಷಿಗಾರಿಕೆಯಲ್ಲಿ ಅತ್ಯಂತ ಸಾಧಾರಣ ಇತಿಹಾಸ ಹೊಂದಿರುವ ಬಿಹಾರ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಆರ್ಥಿಕ ತಜ್ಞ ಡಾ.ಜೋಸೆಫ್ ಸ್ಟಿಗ್ಲಿಟ್ಜ್ ಇತ್ತೀಚೆಗೆ ಬಿಹಾರದ ಒಂದು ಜಿಲ್ಲೆಗೆ ಭೇಟಿ ನೀಡಿ, ಆವಿಷ್ಕಾರಗಳು ಹಾಗೂ ಅವನ್ನು ಜಾರಿಗೆ ತರುವಲ್ಲಿ ಬೆಂಬಲವಾಗಿ ನಿಂತಿರುವ ಸಂಸ್ಥೆಗಳ ಅಧ್ಯಯನ ನಡೆಸಿದರು. ವಿಭಿನ್ನ ಪರಿಸ್ಥಿತಿಗಳಲ್ಲಿ ಎಸ್.ಆರ್.ಐ. ನೀಡಿದ ಅದ್ಭುತ ಫಲಿತಾಂಶವನ್ನು ಹಸಿರು ಕ್ರಾಂತಿ ಅಳವಡಿಕೆಯ ಕೃಷಿಭೂಮಿಯಲ್ಲಿ ಕಾಣಲಾಗದು. ಸಣ್ಣ, ಅತಿ ಸಣ್ಣ ಹಾಗೂ ಬುಡಕಟ್ಟು ರೈತರು ಎಸ್.ಆರ್.ಐ. ತತ್ತ÷್ವಗಳೊಡನೆ ಭಾರತದ ಸಾಂಪ್ರದಾಯಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಪಡೆದಿರುವಷ್ಟು ಅಧಿಕ ಇಳುವರಿಯು GR1ನಲ್ಲಾಗಲೀ GR2ನಲ್ಲಾಗಲೀ ಕಂಡುಬoದಿಲ್ಲ. ಅಕ್ಕಿಯ ಮೇಲೆ ಪ್ರಯೋಗಗಳು ಯಶಸ್ವಿಯಾದ ನಂತರ ಇದೀಗ ಎಸ್.ಆರ್.ಐ. ತತ್ತ÷್ವಗಳನ್ನು ರಾಗಿ, ಗೋಧಿ, ಸಾಸಿವೆ, ಕಬ್ಬು ಮೊದಲಾದ ಇತರ ಬೆಳೆಗಳಿಗೂ ಅಳವಡಿಸಿ ಲಾಭ ಗಳಿಕೆ ಆರಂಭವಾಗಿದೆ. ಬರ, ಪ್ರವಾಹಗಳೇ ಮೊದಲಾದ ಹವಾಮಾನ ವೈಪರೀತ್ಯ ಪರಿಸ್ಥಿತಿಗಳಲ್ಲಿ ಎಸ್.ಆರ್.ಐ. ಪದ್ಧತಿ ಅನ್ವಯಿಸಿದ ಹಾಗೂ ಅನ್ವಯಿಸದ ಬೆಳೆ ಇಳುವರಿ ಪ್ರಮಾಣದ ಅಂತರ ಹೆಚ್ಚುತ್ತಿದೆ. ಈ ಫಲಿತಾಂಶಗಳು ಭಾರತದಾದ್ಯಂತ ಹೆಚ್ಚು ಜನರು ಸಕಾರಾತ್ಮಕ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿವೆ.

ಕೃಷಿ ನೀತಿಗಳು ಕೇವಲ ಇಳುವರಿ ಹಾಗೂ ಉತ್ಪನ್ನ ಆಧಾರಿತ ಫಲಿತಾಂಶದೆಡೆಗೆ ಗಮನ ಕೆಂದ್ರೀಕರಿಸುತ್ತಿವೆ. ಆದರೆ ಇಂದು ಹಸಿರು ಕ್ರಾಂತಿಯ ಕಣ್ಕಟ್ಟಿನಿಂದ ಈಚೆ ಬಂದು ಹೆಚ್ಚು ಸುಭದ್ರ, ಲಾಭದಾಯಕ ಹಾಗೂ ಕೃಷಿ ಪರಿಸರಸ್ನೇಹಿ ಆಧಾರಿತ ಯೋಜನೆಗಳಿಗೆ ಹಚ್ಚಿನ ಮಹತ್ವ ನೀಡಬೇಕಾದ ತುರ್ತಿದೆ. ಈ ಅಗತ್ಯವನ್ನು ಕೃಷಿಕರೇನೋ ಮನಗಂಡಿದ್ದಾರೆ. ಆದರೆ ಕೃಷಿ ಸಂಶೋಧಕರು ಹಾಗೂ ಯೋಜನೆಗಳನ್ನು ರೂಪಿಸುವವರು ಈ ಕುರಿತು ಗಮನ ಹರಿಸದೆ ಇರುವುದು ದುರದೃಷ್ಟಕರ. ಅಷ್ಟೇ ಅಲ್ಲ, ಅವರು ಎಸ್.ಆರ್.ಐ. ಅನ್ನು ಆರು ತತ್ತ÷್ವಗಳಿಗೆ ಮೀಸಲಾಗಿರಿಸಿ, ಅದರ ಕುರಿತು ಪ್ರಶ್ನೆಗಳನ್ನೆತ್ತಿ ಚರ್ಚಿಸುವುದನ್ನೂ ಯೋಜನೆಗಳ ಪುರ‍್ರಚನೆಯನ್ನೂ ತಡೆಯುತ್ತಿರುವುದಲ್ಲದೆ, ಎಸ್.ಆರ್.ಐ. ಅನ್ನು ಸಾಂಪ್ರದಾಯಿಕ ತಂತ್ರಜ್ಞಾನವAದು ಕರೆದು ಅದನ್ನು ದೂರವಿಟ್ಟಿದೆ. ಹಾಗೂ ಅದರ ಬದಲಿಗೆ ಬೆಸ್ಟ್ ಮ್ಯಾನೇಜ್‌ಮೆಂಟ್ ಪ್ರಾಕ್ಟಿಸಸ್ (ಬಿಎಮ್‌ಪಿ) ಅನ್ನು ಪರಿಚಯಿಸಿ, ಆ ಮೂಲಕ ಆವಿಷ್ಕಾರಗಳನ್ನು ಮಿತಗೊಳಿಸುವ, ಹಾಗೂ ಅದರ ಕೊಡುಗೆಗಳನ್ನು ಅರ್ಥಹೀನಗೊಳಿಸುವ ಕೆಲಸ ಮಾಡುತ್ತಿದೆ.
ಸಂಶೋಧನೆ ಹಾಗೂ ಇನ್ನಿತರ ಸಾಂಸ್ಥಿಕ ಕ್ರಿಯೆಗಳಲ್ಲಿ ಬಂಡವಾಳ ತೊಡಗಿಸದೆ ಯಾವ ಆವಿಷ್ಕಾರವೂ ಸಂಪನ್ನಗೊಳ್ಳುವುದಿಲ್ಲ ಹಾಗೂ `ಕ್ರಾಂತಿ’ಯನ್ನು ಸಾಧ್ಯಗೊಳಿಸುವುದಿಲ್ಲ. ಎಸ್.ಆರ್.ಐ. ಹಾಗೂ ಕುಲಾಂತರಿ (ಉಒ) ಬೆಳೆಗಳ ಚರ್ಚೆಯಲ್ಲಿ ಮೊದಲನೆಯದು ಸೂಕ್ತ ಬೆಂಬಲ ಹಾಗೂ ಹೂಡಿಕೆಗಳಿಲ್ಲದೆ ಸೊರಗಿದ್ದರೆ, ಎರಡನೆಯದು ಸರ್ಕಾರ ಹಾಗೂ ನಿರ್ಣಾಯಕ ಸಂಸ್ಥೆಗಳ ಹೂಡಿಕೆಯಿಂದ ಸಾಕಷ್ಟು ಹಬ್ಬುತ್ತಿದೆ. ಹೋಲಿಕೆಯಲ್ಲಿ ಎಸ್.ಆರ್.ಐ.ಗೆ ದೊರೆಯುತ್ತಿರುವುದು ನಗಣ್ಯವೆನಿಸುವಷ್ಟು ಕನಿಷ್ಠ ಬೆಂಬಲ.

ಈ ಅಂಶವನ್ನು ವಿವರಿಸಲು ಎರಡು ನಿದರ್ಶನಗಳನ್ನಿಲ್ಲಿ ಕೊಡಬಹುದು. ಇತ್ತೀಚೆಗೆ ಅಂತಾರಾಷ್ಟಿçÃಯ ಬಹುಸಾಂಸ್ಥಿಕ ಸಭೆಯೊಂದನ್ನು ಏರ್ಪಡಿಸಿದ್ದು, ಭಾರತದ ಪೂರ್ವ ಭಾಗಗಳಲ್ಲಿ ಬೆಳೆ ಇಳುವರಿ ಹಾಗೂ ಜೈವಿಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಭೆಗೆ ಪೂರ್ವಭಾವಿಯಾಗಿ ಯೋಜನೆಗಳನ್ನು ಹಂಚಿಕೊಳ್ಳುವAತೆ ಕೇಳಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರಗಳ ಸಂಶೋಧನಾ ಸಂಸ್ಥೆಗಳು ಹಾಗೂ ಇತರ ಪ್ರಮುಖ ಅಧ್ಯಯನಕಾರರು ಆಹಾರ ಭದ್ರತೆ ಮತ್ತು ಇಳುವರಿ ಹೆಚ್ಚಳಕ್ಕೆ ಎಸ್.ಆರ್.ಐ. ಅತ್ಯಂತ ಸೂಕ್ತ ಉಪಾಯವೆಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಆದರೆ, ಅನಂತರದಲ್ಲಿ ಸ್ಥಳೀಯರ ಚಿಂತನೆಗಳನ್ನು ಕಡೆಗಣಿಸಿದ ಆಯೋಜಕರು ತನ್ನದೇ ಆದ ಪೂರ್ವಯೋಜಿತ ಪ್ಯಾಕೇಜನ್ನೆ ನಿವಾರಣೋಪಾಯವೆಂದು ಮುಂದಿಟ್ಟಿತು.

ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಎಸ್.ಆರ್.ಐ. ಅಳವಡಿಕೆ ಹಾಗೂ ಯಶೋಗಾಥೆಯನ್ನು ಕಂಡಿದ್ದ ಒಬ್ಬರು ಹಿರಿಯ ಸರ್ಕಾರಿ ಅಧಿಕಾರಿ ಎಸ್.ಆರ್.ಐ. ಅನ್ನು ನಾಲ್ಕು ಋತುಮಾನಗಳಲ್ಲಿ ಅನುಷ್ಠಾನಗೊಳಿಸಲು ಹಲವು ಹಂತಗಳ ಯೋಜನೆಯನ್ನು ಸೂಚಿಸಿದರು. ಅದರಂತೆ ಮೊದಲ ಹಂತದ ಅನುಷ್ಠಾನವು ಸಾಲು ಬಿತ್ತನೆಯಿಂದ ಆರಂಭವಾಗುವುದು ಎಂದಿತ್ತು. ಸಣ್ಣ ಹಾಗೂ ಬುಡಕಟ್ಟು ರೈತರು ಇಂಥಾ ಪದ್ಧತಿಗಳಿಗೆ ಬೇಗ ಹೊಂದಿಕೊಳ್ಳುವುದಿಲ್ಲವೆoದೂ ಆದ್ದರಿಂದ ಸಾಲುಬಿತ್ತನೆಯ ಮೂಲಕ ಅಭ್ಯಾಸವನ್ನು ಆರಂಭಿಸುವುದು ಉಚಿತವೆಂದೂ ಅವರು ಅಭಿಪ್ರಾಯ ಪಟ್ಟಿದ್ದರು. ಅವರ ಈ ಅನ್ನಿಸಿಕೆಯು ಸಣ್ಣ ಹಾಗೂ ಬುಡಕಟ್ಟು ರೈತರು ಒಂದೇ ಬಾರಿಗೆ ಹಲವು ಪದ್ಧತಿಗಳನ್ನು ಅನುಸರಿಸಲಾರರು ಎನ್ನುವ ಭಾವನೆಯನ್ನು ಹುಟ್ಟುಹಾಕುತ್ತದೆ. ವಾಸ್ತವದಲ್ಲಿ ಅದು ಹಾಗಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಸಂಪನ್ಮೂಲ ಕೊರತೆಯುಳ್ಳ ಸಣ್ಣ ಹಾಗೂ ಅತಿ ಸಣ್ಣ ರೈತರು ಹೊಸ ಅವಿಷ್ಕಾರಗಳಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಾರೆ ಹಾಗೂ ಸೂಕ್ತ ಸಾಂಸ್ಥಿಕ ಬೆಂಬಲ ದೊರೆತರೆ ವೇಗದ ಪ್ರಗತಿ ಸಾಧಿಸಲು ಉತ್ಸುಕರಾಗಿದ್ದಾರೆ. ಅವರಿಗೆ ಸುಮ್ಮನೆ ತಟ್ಟಿ ಓಡುವ ಅಥವಾ ತರಬೇತಿಯ ನೆವದಲ್ಲಿ ಕಾಣಿಸಿಕೊಂಡು ಮಾಯವಾಗುವ ಯೋಜನೆಗಳಲ್ಲಿ ನಂಬಿಕೆಯಿಲ್ಲ. ಅವರು ಪ್ರಾಯೋಗಿಕವಾಗಿ ಮಾಡಿನೋಡುವ ಸಾಮರ್ಥ್ಯ ಹೊಂದಿದ್ದಾರೆ.

ಎಸ್.ಆರ್.ಐ. ಕುರಿತ ಚಿಂತನೆಯು ಹಲವು ಬದಲಾವಣೆಗಳನ್ನು ಉಂಟುಮಾಡಿದ್ದು, ಭಾರತೀಯ ಸಂಶೋಧಕರು ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದಾರೆ. ಎಸ್.ಆರ್.ಐ. ತತ್ತ÷್ವಗಳ ಕುರಿತ ಹೊಸ ಚಿಂತನೆಗಳು ಹಾಗೂ ಬರಹಗಳು ವಿಶ್ವದ ಗಮನ ಸೆಳೆದಿವೆ. ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆ ಕುರಿತು ಭಾರತೀಯ ಸಂಶೋಧಕರು ಮಂಡಿಸಿರುವ ವಿಚಾರಗಳು ಬೀರಿರುವ ಪರಿಣಾಮ ಎದ್ದು ತೋರುವಂತಿವೆ. ಇದರ ಬಗ್ಗೆ ನಮ್ಮ ಸಂಶೋಧಕರ ಸಂಶೋಧನಾ ಲೇಖನಗಳು ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಅಧ್ಯಯನಕಾರರ ಮನ್ನಣೆಗೆ ಪಾತ್ರವಾಗಿವೆ. ಈ ಎಲ್ಲವೂ ಎಸ್.ಆರ್.ಐ. ಅಳವಡಿಕೆ ಹಾಗೂ ಕುರಿತಂತೆ ಭಾರತೀಯರ ಸಾಮರ್ಥ್ಯವನ್ನು ಸೂಚಿಸುತ್ತಿದ್ದು, ಮುಂಚೂಣಿಯಲ್ಲಿ ನಿಲ್ಲುವ ಸಾಧ್ಯತೆಗಳನ್ನು ತೋರುತ್ತವೆ. ಈ ಆವಿಷ್ಕಾರಗಳನ್ನು ಬಳಸಿಕೊಂಡು ಭಾರತೀಯ ಕೃಷಿಗಾರಿಕೆಯು ಅಭಿವೃದ್ಧಿಗೊಳ್ಳಬೇಕೆ ಹೊರತು ಕುರುಡು ತಂತ್ರಜ್ಞಾನಗಳ ಅಳವಡಿಕೆಯಿಂದಲ್ಲ ಎನ್ನುವುದನ್ನು ಇನ್ನಾದರೂ ಮನದಟ್ಟು ಮಾಡಿಸಬೇಕಿದೆ.

ಈಗ ನಾವು ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆಗೆ ಸಹಕಾರಿಯಾಗುವ ಮೂರನೆ `ಐ’ (ಇನ್ಸ್ಟಿಟ್ಯೂಷನ್) ಕುರಿತು ಕೆಲವು ಚಿಂತನೆಗಳನ್ನು ಹಂಚಿಕೊಳ್ಳುವುದರೊAದಿಗೆ ಇದ್ದನ್ನು ಮುಕ್ತಾಯಗೊಳಿಸಲಿದ್ದೇವೆ. ಇದರಲ್ಲಿ ನಾವು ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಸಬ್‌ಗ್ರೂಪ್‌ನ ಶಿಫಾರಸುಗಳನ್ನು ನಿರೂಪಿಸಲಿದ್ದೆವೆ. ಇದು `ವ್ಯಾಪ್ತಿವಿಸ್ತರಣೆಯ ಹೊಸ ತಂತ್ರಜ್ಞಾನ’ಗಳನ್ನು ಕುರಿತಾಗಿದ್ದು, ದುರದೃಷ್ಟವಶಾತ್ ಅಂತಿಮ ಯೋಜನೆಯಲ್ಲಿ ಅದಕ್ಕೆ ಸಿಗಬೇಕಿದ್ದ ಮನ್ನಣೆ ಸಿಗದೆ ಕಡೆಗಣಿಸಲ್ಪಟ್ಟಿತ್ತು.

ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆಗೆ ನವೀನ ಸಾಂಸ್ಥಿಕ ಸಂರಚನೆ
ದೇಶದಲ್ಲಿ ಎಸ್.ಆರ್.ಐ. ವಿಸ್ತರಣೆಗೆ ಬೇಕಾದ ವಿಶ್ವಸನೀಯ ಕಾರ್ಯಯೋಜನೆಯಾಗಲೀ ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನಾ ವಿಧಾನ ಹಾಗೂ ಸದ್ಯರ ಸಂಖ್ಯೆಯ ಹೆಚ್ಚಳದ ಕಾರಣದಿಂದ ಏಕರೂಪದ ಸಂಹಿತೆಯಾಗಲೀ ಇಲ್ಲ. ವಿವಿಧ ಸರ್ಕಾರಿ ದತ್ತಾಂಶಗಳು ಹಾಗೂ ದೇಶಾದ್ಯಂತ ಇರುವ ಕೊಡುಗೆದಾರರ ಅಂದಾಜು ಲೆಕ್ಕದ ಪ್ರಕಾರ ಭಾರತದಲ್ಲಿ ಸುಮಾರು ಒಂದೂವರೆಯಿAದ ಮೂರು ಮಿಲಿಯನ್ ಸಂಖ್ಯೆಯಷ್ಟು ರೈತರು ಸರಿಸುಮಾರು ಮೂರು ಮಿಲಿಯನ್ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ಎಸ್.ಆರ್.ಐ. ತತ್ತ÷್ವಗಳನ್ನು ಅಳವಡಿಸಿ ಪ್ರಯೋಗ ನಡೆಸಿದ್ದಾರೆ. ಈ ಲೆಕ್ಕಾಚಾರವನ್ನು ಪರಿಗಣಿಸಿದರೆ, ಎಸ್.ಆರ್.ಐ. ಒಂದು ಸಾಧಾರಣ ಆವಿಷ್ಕಾರಕ್ಕಿಂತ ಹೆಚ್ಚಿನದೆಂದು ಧಾರಾಳವಾಗಿ ಹೇಳಬಹುದು.

ಈ ಹಬ್ಬುವಿಕೆ ಸಾಧ್ಯವಾಗಿದ್ದು, ಮೂರು ವಿಭಾಗಗಳಲ್ಲಿ ವಿಂಗಡಿಸಬಹುದಾದ ಸಾಂಸ್ಥಿಕ ವೈವಿಧ್ಯ ಕಾರ್ಯತಂತ್ರದಿAದ. ದೊಡ್ಡ ಮಟ್ಟದ ವಿಸ್ತರಣೆಯು ಸಾಧ್ಯವಾಗಿದ್ದು ಕೃಷಿ ಇಲಾಖೆಯಿಂದ (ವಿಶೇಷವಾಗಿ ತಮಿಳುನಾಡು, ತ್ರಿಪುರ ಹಾಗೂ ಬಿಹಾರಗಳಲ್ಲಿ). ಎರಡನೆಯದಾಗಿ, ದಾನಿಗಳ ಬೆಂಬಲ ಪಡೆದ ನಾಗರಿಕ ಸಮಾಜ ಸಂಸ್ಥೆಗಳಿAದ. ಒಂದಷ್ಟು ರಾಜ್ಯಗಳಲ್ಲಿ ಈ ಸಂಸ್ಥೆಗಳು ಏಕಾಂಗಿ ಪ್ರಯತ್ನದಿಂದ ಎಸ್.ಆರ್.ಐ. ವಿಸ್ತರಣೆಯಲ್ಲಿ ಯಶಸ್ಸು ಪಡೆದಿವೆ. ಸರ್ ದೋರಬ್‌ಜಿ ಟಾಟಾ ಟ್ರಸ್ಟ್ (ಎಸ್.ಡಿ.ಟಿ.ಟಿ.), ದೇಶಪಾಂಡೆ ಫೌಂಡೇಷನ್, ಆಗಾಖಾನ್ ರೂರಲ್ ಸಪೋರ್ಟ್ ಪ್ರಾಜೆಕ್ಟ್ ಇತ್ಯಾದಿ ಸಂಸ್ಥೆಗಳು ಎಸ್.ಆರ್.ಐ. ವಿಸ್ತರಣೆಗೆ ದೇಣಿಗೆ ನೀಡಿ ಬೆಂಬಲಿಸುತ್ತಿವೆ. ಮೂರನೆಯದಾಗಿ ಈ ಕೆಲವು ಸಂಸ್ಥೆಗಳು ಎಸ್.ಆರ್.ಐ. ವಿಸ್ತರಣೆಯಲ್ಲಿ ಭಾಗಿಯಾಗಿವೆ: ನಬಾರ್ಡ್, ರೂರಲ್ ಲೈವ್ಲಿಹುಡ್ ಪ್ರೋಗ್ರಾಮ್ಸ್ (ಬಿಹಾರದಲ್ಲಿ ಜೀವಿಕಾ, ಮಧ್ಯಪ್ರದೇಶದಲ್ಲಿ ಎಮ್‌ಪಿ.ಆರ್.ಎಲ್.ಎಸ್., ಆಂಧ್ರಪ್ರದೇಶದಲ್ಲಿ ಸೊಸೈಟಿ ಫಾರ್ ಎಲಿಮೆಂಟೇಷನ್ ಆಫ್ ರೂರಲ್ ಪವರ್ಟಿ (ಎಸ್.ಇ.ಆರ್.ಪಿ.) ಹಾಗೂ ಒಡಿಶಾದಲ್ಲಿ ಒರಿಸ್ಸಾ ಲೈವ್ಲಿಹುಡ್ ಮಿಷನ್ (ಒ.ಎಲ್.ಎಮ್.), ಅಥವಾ ಖಾಸಗಿ ವಲಯಗಳಾದ ಬೇಸಿಕ್ಸ್, ಅಗ್‌ಸ್ರಿ, ಉಷಾ ಮಾರ್ಟಿನ್ ಇತ್ಯಾದಿ.

ಇತ್ತೀಚಿನ ದಶಕದಲ್ಲಿ ಭಾರತದಲ್ಲಿ ಎಸ್.ಆರ್.ಐ. ವಿಸ್ತರಣೆಯ ಪುನರವಲೋಕನವು ಈ ಕೆಳಗಿನ ಅಂಶಗಳನ್ನು ಸೂಚಿಸುತ್ತದೆ:

 ಇಳುವರಿ ಹೆಚ್ಚಳದಲ್ಲಿನ ವ್ಯತ್ಯಾಸವು ಉತ್ಪನ್ನದಲ್ಲಿ ಪ್ರಗತಿಯಾಗುತ್ತಿರುವುದನ್ನು ಸೂಚಿಸುತ್ತದೆ. ಯಾವುದೇ ನಷ್ಟ ಮಾಡಿಕೊಳ್ಳದೆ ನಡೆಸಿದ ಕೃಷಿಪಾರಿಸರಿಕ ಆವಿಷ್ಕಾರಗಳು ಮೊದಲ ಋತುಮಾನದಲ್ಲಿ ಉತ್ತಮ ಫಲಿತಾಂಶವನ್ನೆ ನೀಡುತ್ತವೆ. ಪಳೆಯುಳಿಕೆ ಇಂಧನ ಆಧಾರಿತ ಕೃಷಿ ಪರಿಕರಗಳನ್ನು ಬಳಸಿ ಮಣ್ಣಿನ ಸತ್ವ ಹೆಚ್ಚಾಗುವಂತೆ ಮಾಡಿರುವುದು ಇದಕ್ಕೆ ಹೆಚ್ಚಿನ ಮೌಲ್ಯ ಉಂಟುಮಾಡುತ್ತವೆ.

 ಈ ಆವಿಷ್ಕಾರಗಳನ್ನು ಸಾಧಾರಣ ಹೂಡಿಕೆಯ ಮೂಲಕ ಅನುಷ್ಠಾನಗೊಳಿಸಬಹುದು. ಆದರೆ ಇದಕ್ಕೆ ವಿಶಿಷ್ಟ ಸಾಂಸ್ಥಿಕ ಕಾರ್ಯತಂತ್ರದ ಅಗತ್ಯವಿದ್ದು, ಸಾಂಪ್ರದಾಯಿಕ ಸಾರ್ವಜನಿಕ ಸಹಕಾರ ಅಥವಾ ಖಾಸಗಿ ವಲಯಗಳ ಹೂಡಿಕೆಗಿಂತ ವಿಭಿನ್ನವಾದ ಸಾಮುದಾಯಿಕ ಮುಂದಾಳುತ್ವದ ಸಂಸ್ಥೆಯು ಇರಬೇಕಾಗುತ್ತದೆ. ಈ ಸಮುದಾಯ ಆಧಾರಿತ ಸಂಸ್ಥೆಗಳು (ಸಿ.ಬಿ.ಓ.) ತಮ್ಮ ಸಂಸ್ಥೆಯ ಮೂಲಕ ಕೃಷಿಪದ್ಧತಿಗಳಲ್ಲಿ ಬದಲಾವಣೆ ತರಲು ಶ್ರಮಿಸುತ್ತವೆ. ಕೃಷಿ ನೀತಿಗಳಿಂದ ಯಾವೆಲ್ಲ ಪರಿಣಾಮಕಾರಿ ಪದ್ಧತಿಗಳಿಗೆ ಸಿಗಬೇಕಾದ ಸೂಕ್ತ ಬೆಂಬಲವಾಗಲೀ ಅನುದಾನವಾಗಲೀ ಸಿಕ್ಕಿರುವುದಿಲ್ಲವೋ ಅವುಗಳನ್ನು ರೈತರ ನಡುವೆ ಹರಡುವ ನಿಟ್ಟಿನಲ್ಲಿ ಅವು ಕೆಲಸ ಮಾಡುತ್ತವೆ.
 ಎಸ್.ಆರ್.ಐ. ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ, ಆವಿಷ್ಕಾರಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಸದ್ಯದ ವಿಸ್ತರಣಾ ವಿಧಾನವು ಒಳಹರಿವಿನ ತಂತ್ರಜ್ಞಾನಕ್ಕೆ ಹೆಚ್ಚಿನ ಗಮನ ನೀಡಿದೆ. ಇದರಿಂದಾಗಿ ರೈತರು ಹೊರಗಿನ ಸಂಸ್ಥೆಗಳ ಮೇಲೆ, ಹೆಚ್ಚು ಅವಲಂಬಿತವಾಗಬೇಕಿದೆ. ಇದರಿಂದ ಹಣದ ಅವಶ್ಯಕತೆ ವಿಪರೀತಗೊಂಡು ಸಾಲಬಾಧೆಗೆ ಕಾರಣವಾಗುತ್ತದೆ. ಎಸ್.ಆರ್.ಐ. ಪದ್ಧತಿಯು ಸುಧಾರಿತ ಜ್ಞಾನ, ಕೌಶಲ್ಯ ಹಾಗೂ ನಿರ್ವಹಣಾ ಕೌಶಲ್ಯಗಳನ್ನು ಆಧರಿಸಿರುವಂಥದ್ದು. ಇದರಲ್ಲಿ ರೈತರು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ತಮ್ಮ ನಿರ್ವಹಣಾ ಕೌಶಲ್ಯ (ಸಕಾಲಿಕ ಕಾರ್ಯ ಕ್ಷಮತೆ, ಕೆಲಸಗಾರರ ಬಳಕೆ, ನೀರು ನಿರ್ವಹಣೆ ಇತ್ಯಾದಿ) ತೋರಿಸಲೆಂದು ನಿರೀಕ್ಷಿಸಲಾಗುತ್ತದೆ. ಅನುಭವದ ಆಧಾರದ ಮೇಲೆ ಹೆಚ್ಚಿನ ಸಂಖ್ಯೆಯ ರೈತರು ವರ್ಷದಲ್ಲಿ ಕೊನೆಯ ಪಕ್ಷ ಮೂರು ಋತುಗಳಲ್ಲಿ ಎಸ್.ಆರ್.ಐ. ತತ್ತ÷್ವಗಳನ್ನು ಅನುಸರಿಸುತ್ತಾರೆ.

 ತಂತ್ರಜ್ಞಾನ ದೃಷ್ಟಿಕೋನ, ಹಾಗೂ ವಿಸ್ತರಣಾ ಪದ್ಧತಿಗಳ ಕುರಿತ ಚಿಂತನೆಯನ್ನು ಬದಲಾಯಿಸುವಲ್ಲಿ ಸಿ.ಎಸ್.ಓ.ಗಳು ಪ್ರಮುಖ ಪಾತ್ರ ವಹಿಸಿವೆ. ಈ ನಿಟ್ಟಿನಲ್ಲಿ ಇವು ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಮತ್ತು ಪಂಚಾಯತ್ ರಾಜ್‌ಗಳೊಂದಿಗೆ ಬೆರೆತು ಕೆಲಸ ಮಾಡುವ ಮೂಲಕ ಎಸ್.ಆರ್.ಐ. ಅನ್ನು ವ್ಯಾಪಕಗೊಳಿಸಲು ಶ್ರಮಿಸಿವೆ. ಹೀಗೆ ಸಿ.ಎಸ್.ಓ.ಗಳು ಸಾಂಪ್ರದಾಯಿಕ ವಿಸ್ತರಣಾ ಪದ್ಧತಿಗಳಲ್ಲದೆ ಬೇರೆ ಬಗೆಯಲ್ಲಿ ಮುಂದುವರೆದು ಪ್ರಗತಿಯನ್ನು ಸಾಧ್ಯವಾಗಿಸಿಕೊಂಡಿವೆ.

 ಹಲವು ರಾಜ್ಯಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಮಹಿಳೆಯರು ಕೃಷಿ ಪದ್ಧತಿಯಲ್ಲಿನ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಆದರೆ ಮಹಿಳೆಯರ ಈ ಪ್ರಾಮುಖ್ಯವನ್ನು ಕೃಷಿ ಇಲಾಖೆಗಳು ಕಡೆಗಣಿಸಿವೆ.

 ಎಸ್.ಆರ್.ಐ. ರೂಢಿಯು ರೈತರಲ್ಲಿ ಹವಾಮಾನ ವೈಪರೀತ್ಯ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯ ತುಂಬುತ್ತದೆ. ಹವಾಮಾನ ಬದಲಾವಣೆಯನ್ನು ಒಗ್ಗಿಸಿಕೊಳ್ಳುವ ಹಾಗೂ ಸಮಸ್ಯೆಗಳನ್ನು ನಿವಾರಿಸುವ ಕ್ಷಮತೆ ನೀಡುತ್ತದೆ.

 ಎಸ್.ಆರ್.ಐ., ಬಹುವಿಧ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವುದಲ್ಲದೆ, ಜೀವವೈವಿಧ್ಯ ಹೆಚ್ಚಳಕ್ಕೂ ಕಾರಣವಾಗುತ್ತದೆ. ಭಾರತೀಯ ವೈವಿಧ್ಯಗಳು ಎಸ್.ಆರ್.ಐ. ನಿರ್ವಹಣೆಗೆ ಉತ್ತಮ ಸ್ಪಂದನೆ ತೋರಿದ್ದು, ಕುಟುಂಬಕ್ಕೆ ಆಹಾರ ಭದ್ರತೆ ಹಾಗೂ ಪೌಷ್ಟಿಕತೆ ಒದಗಿಸುವ ವೈವಿಧ್ಯಗಳಿಗೆ ಹೆಚ್ಚು ಒತ್ತು ಕೊಡುವಂತೆ ಪ್ರೇರೇಪಿಸುತ್ತವೆ. ಇದರಿಂದ ಅಪೌಷ್ಟಿಕತೆಗೆ ತುತ್ತಾಗಿರುವ ಭಾರತದ ಅದೆಷ್ಟೋ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಅವಕಾಶವಾಗುತ್ತದೆ.

 ಎಸ್.ಆರ್.ಐ. ವ್ಯವಹಾರಯೋಗ್ಯವಾಗಿದೆ. ನಾಗರಿಕ ಮುಂದಾಳುತ್ವದ ಎಸ್.ಆರ್.ಐ. ರೈತರ ಆದಾಯವನ್ನು ಉತ್ತಮಪಡಿಸುವ ಹಾಗೂ ಮಣ್ಣಿನ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗುವುದಷ್ಟೇ ಅಲ್ಲ, ಸಕಾರಾತ್ಮಕ ಲಾಭದಾಯಕ ಪಡಿತರವನ್ನೂ ಒದಗಿಸುತ್ತದೆ ಎಂದು ನಬಾರ್ಡ್ ನಿರೂಪಿಸಿದೆ.

 ಕೊನೆಯದಾಗಿ, ಭಾರತವು ಕೃಷಿಪರಿಸರ ಆವಿಷ್ಕಾರಗಳಲ್ಲಿ ವಿಶ್ವದ ಮುಂದಾಳುತ್ವ ವಹಿಸಲು ಸಶಕ್ತವಾಗಿದೆ. ಭಾರತವು ದೊಡ್ಡ ಮಟ್ಟದಲ್ಲಿ ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆ ಸಾಧ್ಯವಾಗಿಸಿರುವುದಲ್ಲದೆ, ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿಯೂ ಸಫಲವಾಗಿದೆ. ಸಾಮುದಾಯಿಕ ಪ್ರಯೋಗಗಳಿಗೆ ವೇದಿಕೆ ಒದಗಿಸುವ ಮೂಲಕ ನಾಗರಿಕ ಸಮಾಜ ಸಂಸ್ಥೆಗಳ ಜೊತೆ ರೈತರನ್ನು ಬೆಸೆದಿದೆ. ಎಸ್.ಆರ್.ಐ. ಅನ್ನು ಇತರ ಬೆಳೆಗಳಿಗೆ ಅಳವಡಿಸಿ ಸಫಲರಾಗಬಹುದು ಎಂಬುದನ್ನೂ ಇದು ತೋರಿಸಿಕೊಟ್ಟಿದೆ.
ಒಟ್ಟಾರೆ ಹೇಳಬೇಕೆಂದರೆ, ಕಾರ್ಯತಂತ್ರ ಅನುಷ್ಠಾನ ಹಾಗೂ ಆವಿಷ್ಕಾರಗಳ ಸಾಫಲ್ಯತೆಗೆ ಸಾಂಸ್ಥಿಕ ಸಹಯೋಗವನ್ನು ಅಭಿನಂದಿಸಬೇಕು. ಎಸ್.ಆರ್.ಐ. ಅನ್ನು ವ್ಯಾಪಕಗೊಳಿಸುವಲ್ಲಿ ಅವು ಅನೇಕ ವಿಧದ ಶ್ರಮ ಹಾಕಿವೆ.

ಕೆಲವು ಹಂತಗಳಲ್ಲಿ ಎಸ್.ಆರ್.ಐ. ಪದ್ಧತಿಯ ಆ ಹಿಂದಿನ ಅನುಭವಗಳು ಹಾಗೂ ಫಲಿತಾಂಶಗಳ ಆಧಾರದ ಮೇಲೆ ಹೊಸ ಪ್ರದೇಶಗಳಲ್ಲಿ ಅದನ್ನು ಪರಿಚಯಿಸಲಾಗಿದೆ. ಈ ಕುರಿತಂತೆ ಅಧ್ಯಯನ ಹಾಗೂ ತಿಳಿವು ಹಂಚಿಕೊಳ್ಳುವ ಪ್ರಕ್ರಿಯೆ ಮತ್ತು ಅನುಷ್ಠಾನಕ್ಕೆ ದೊಡ್ಡ ಮೊತ್ತದ ಹೂಡಿಕೆಯ ಅಗತ್ಯ ಉಂಟಾಗಿದ್ದು, ಅದನ್ನು ಸಂಸ್ಥೆಗಳು ಪೂರೈಸಿವೆ. ಆರಂಭಿಕ ಹಂತದಲ್ಲಿ ಯಾವ ಕೆಲಸಕ್ಕೆ ಎಷ್ಟು ಹಣ ಹೂಡಬೇಕು ಎನ್ನುವುದನ್ನು ಸಾಂಸ್ಥಿಕವಾಗಿ ಅಧ್ಯಯನ ನಡೆಸಿಯೇ ಮುಂದುವರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.), ನಾಗರಿಕ ಸಮಾಜ ಸಂಸ್ಥೆಗಳು ಹಾಗೂ ಆಯ್ದ ಪ್ರದೇಶಗಳ ಪಾಲುದಾರರು ಸಂಶೋಧನೆ ನಡೆಸಿದ್ದರು. ಪ್ರತಿ ಜಿಲ್ಲೆಯಲ್ಲೂ ೩೩೦ರಿಂದ ೬೦೦ ಹೆಕ್ಟೇರ್ ಭೂಪ್ರದೇಶದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಈ ಪ್ರಯೋಗಕ್ಕೆ ನುರಿತ ಎನ್‌ಜಿಓಗಳು ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳು ಕೈಜೋಡಿಸಿದ್ದವು. ಹಾಗೂ ಮುಂದಿನ ಹಂತದ ವಿಸ್ತರಣೆಯಲ್ಲಿ ಸಿ.ಬಿ.ಓ.ಗಳು ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಕೆಲಸ ಮಾಡಿತು. ಇವೆಲ್ಲವೂ ಎಸ್.ಆರ್.ಐ. ವ್ಯಾಪಕಗೊಳ್ಳಲು ಅನುಕೂಲ ಮಾಡಿಕೊಟ್ಟವು.

ಕೇವಲ ಒಂದು ಋತುವಿನಲ್ಲಿ ಒಮ್ಮೆಗೇ ದೊಡ್ಡ ಮಟ್ಟದಲ್ಲಿ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಾಗದ ಮಾತು. ಆದ್ದರಿಂದ ವಿಸ್ತರಣಾ ಕಾರ್ಯತಂತ್ರವು ರೈತರನ್ನು ತಮ್ಮ ಸಹರೈತರೊಂದಿಗೆ ಅವರ ಪ್ರಯೋಗದಲ್ಲಿ ಜೊತೆಯಾಗಿರುವಂತೆ ತೊಡಗಿಸಬೇಕಾಗುತ್ತದೆ. ಸ್ಥಳೀಯ ಸಾಮರ್ಥ್ಯಕ್ಕೆ ತಕ್ಕಂತೆ ಈ ಪ್ರಕ್ರಿಯೆ ಪೂರೈಸಲು ಕನಿಷ್ಠ ಮೂರು ವರ್ಷಗಳವರೆಗಿನ ಅವಧಿ ಅವಶ್ಯವಾಗುತ್ತದೆ.

ಸರಿಯಾದ ನೇತೃತ್ವ ಹಾಗೂ ತಳಮಟ್ಟದಲ್ಲಿ ಕೆಲಸ ಮಾಡಬಲ್ಲ ವ್ಯಕ್ತಿಗಳು ಇಲ್ಲದೆ ಹೋದರೆ ಸಮರ್ಪಕ ಬದಲಾವಣೆ ತರುವುದು ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾಗಿ ರಚಿಸುವ ಸಾಂಸ್ಥಿಕ ವಿನ್ಯಾಸವು ಸರ್ಕಾರೀ ಏಜೆನ್ಸಿ ಅಥವಾ ನಬಾರ್ಡ್ ಅಥವಾ ಸಿಎಸ್‌ಓಗಳಿಂದ ನಿರ್ವಹಿಸಲ್ಪಡುವ ಸ್ಟೇಟ್ ಲೆವೆಲ್ ಆರ್ಗನೈಸೇಷನ್ (ಎಸ್.ಆರ್.ಒ.) ಅನ್ನು ಹೊಂದಿರುತ್ತದೆ. ಮತ್ತು ಕೃಷಿ ಇಲಾಖೆ (ಡಿ.ಒ.ಎ.), ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.), ಸಿವಿಲ್ ಸೊಸೈಟಿ ಆರ್ಗನೈಸೇಷನ್ಸ್ (ಸಿ.ಎಸ್.ಒ.), ನಾನ್‌ಗವರ್ನಮೆಂಟಲ್ ಆರ್ಗನೈಸೇಷನ್ಸ್, ಹಾಗೂ ಕಮ್ಯುನಿಟಿ ಬೇಸ್ಡ್ ಆರ್ಗನೈಸೇಷನ್ಸ್ (ಸಿ.ಬಿ.ಒ.)- ಇವೆಲ್ಲವೂ ಎಸ್.ಆರ್.ಒ.ದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವ ಜವಾಬ್ದಾರಿ ಹೊರುತ್ತವೆ. ಎಸ್.ಆರ್.ಒ., ವಿವಿಧ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಗಳಿoದ ವಿವಿಧ ಸಂಪನ್ಮೂಲಗಳನ್ನು ಪಡೆದು, ಕೃಷಿಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಗತಿಯ ಆಧಾರದ ಮೇಲೆ ಕಾರ್ಯಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸುತ್ತದೆ. ಇದು ಒಂದು ಜ್ಞಾನಕೋಶದಂತೆ, ರಾಜ್ಯಮಟ್ಟದ ಆಹಾರ ಭದ್ರತೆ ಕುರಿತಾದ ಥಿಂಕ್ ಟ್ಯಾಂಕ್‌ನoತೆ ವರ್ತಿಸುತ್ತದೆ. ಎಸ್.ಎ.ಯು., ಸಿ.ಎಸ್.ಒ. ಹಾಗೂ ಇನ್ನಿತರ ಇಲಾಖೆಗಳ ನುರಿತ ತಜ್ಞರನ್ನು ಅದು ಈ ಕಾರ್ಯದಲ್ಲಿ ಬಳಸಿಕೊಳ್ಳುತ್ತದೆ.
ಈ ತರಬೇತಿ ನೀಡಲಿಕ್ಕಾಗಿ ಮಾಸ್ಟರ್ ಟ್ರೇನರ್‌ಗಳ ಒಂದು ತಂಡ ಇರಬೇಕಾಗುತ್ತದೆ. ಯಾವುದೇ ಎನ್.ಜಿ.ಒ./ ಸಿ.ಎಸ್.ಒ./ಡಿ.ಒ.ಎ./ಕೆ.ವಿ.ಕೆ. ಯ ಸದಸ್ಯರನ್ನು ಟ್ರೇನರ್‌ಗಳಾಗಿ ನಿಯೋಜಿಸಬಹುದಾಗಿದೆ. ಈ ಮಾಸ್ಟರ್ ಟ್ರೇನರ್‌ಗಳು ಹಳ್ಳಿಯ ಸಂಪನ್ಮೂಲ ವ್ಯಕ್ತಿಗಳಿಗೆ (ವಿಲೇಜ್ ರಿಸೋರ್ಸ್ ಪರ್ಸನ್ಸ್ – ವಿ.ಆರ್.ಪಿ.) ತರಬೇತಿ ನೀಡುತ್ತಾರೆ. ಮತ್ತು ಇವರು ತಳಮಟ್ಟದ ರೈತರ ಗುಂಪುಗಳು ಅಥವಾ ಸ್ವಸಹಾಯ ಸಂಘಗಳೊoದಿಗೆ ಕೆಲಸ ಮಾಡುತ್ತಾರೆ. ಹೀಗೆ ಅವರು ಪ್ರತಿಯೊಬ್ಬ ರೈತರನ್ನೂ ತಲುಪುವುದು ಸಾಧ್ಯವಾಗುತ್ತದೆ. ಎಸ್.ಆರ್.ಓ.ದ ಈ ಯೋಜನೆ ಹೊಸತೇನಲ್ಲ. ಆದರೆ ಅದನ್ನು ಪ್ರಯೋಗಾತ್ಮಕ ವೇದಿಕೆಗಳಲ್ಲಿ ಬಳಸಿಕೊಳ್ಳುತ್ತಿರುವ ಬಗೆ ಮಾತ್ರ ವಿನೂತನವಾದದ್ದು.

ತರಬೇತುದಾರರ ತಂಡಗಳು ಹಲವು ರಾಜ್ಯಗಳಲ್ಲಿ ಕಮ್ಮಟ, ತರಬೇತಿ ಶಿಬಿರ ಇತ್ಯಾದಿಗಳನ್ನು ಹಮ್ಮಿಕೊಳ್ಳುವ ಮೂಲಕ ಜ್ಞಾನ ಪ್ರಸಾರದಲ್ಲಿ ತೊಡಗಿಕೊಂಡಿವೆ.
ಈ ಮೇಲಿನ ಸಾಂಸ್ಥಿಕ ಸಂರಚನೆಯು ಸಾರ್ವಕಾಲಿಕ ಆದರ್ಶ ವಿನ್ಯಾಸವೇನಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಇದು ಹೊರಾಂಗಣ ಅಧ್ಯಯನ ಹಾಗೂ ಅನುಭವಗಳ ಆಧಾರದ ಮೇಲೆ ರೂಪುಗೊಳಿಸಲಾದ ವಿನ್ಯಾಸವಾಗಿದೆ. ದೇಶಾದ್ಯಂತ ಎಸ್.ಆರ್.ಐ. ಅನ್ನು ವ್ಯಾಪಕಗೊಳಿಸುವ ಜೊತೆಜೊತೆಗೆ ಸದ್ಯದ ಕಾರ್ಯತಂತ್ರಗಳ ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆ ಸೂಕ್ಷö್ಮ ಅಧ್ಯಯನ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಎಸ್.ಆರ್.ಐ. ಕುರಿತು ವಗೆನಿಂಜೆನ್ ಯುನಿವರ್ಸಿಟಿಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆಸಿದ ಪಿಎಚ್‌ಡಿ ಅಧ್ಯಯನದಲ್ಲಿ ವಿವಿಧ ಬಗೆಯ ಎಸ್.ಆರ್.ಐ. ಪದ್ಧತಿಗಳು ಹಾಗೂ ಹಳ್ಳಿಗಳಲ್ಲಿಯೇ ಅವು ಬೇರೆ ಬೇರೆ ವಿಧಾನ ಅನುಸರಿಸುತ್ತಿರುವ ಸಂಗತಿ ಉಲ್ಲೇಖಗೊಂಡಿದೆ. ಸಂಕೀರ್ಣ ಹಾಗೂ ವಿಭಿನ್ನ ವ್ಯವಸ್ಥೆಗಳಲ್ಲಿ ರೈತರು ತೆಗೆದುಕೊಳ್ಳುವ ನಿರ್ಧಾರಗಳನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಯು, ಭವಿಷ್ಯದಲ್ಲಿ ಎಸ್.ಆರ್.ಐ. ಅನ್ನು ದೊಡ್ಡ ಹಾಗೂ ಅಗಾಧ ವ್ಯಾಪ್ತಿಗೆ ಕೊಂಡೊಯ್ಯುವ ಕೆಲಸದಲ್ಲಿ ತೊಡಕಾಗಿ ಪರಿಣಮಿಸಬಹುದು. ಎಸ್.ಆರ್.ಐ. ಸಮುದಾಯಗಳು ಈ ಚಿಂತನೆಯನ್ನು ತಾಂತ್ರಿಕ, ಸಾಮಾಜಿಕ ಹಾಗೂ ಸಾಂಸ್ಥಿಕ ಸ್ತರದಲ್ಲಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಬಗೆಯ ಅಧ್ಯಯನ ನಡೆಸಬೇಕಾಗುತ್ತದೆ. ಇತ್ತೀಚೆಗೆ ಎನ್.ಸಿ.ಎಸ್. ಭಾರತದ ವಿವಿಧ ಪದ್ಧತಿಗಳು ಹಾಗೂ ಎಸ್.ಆರ್.ಐ.ನ ತುಲನಾತ್ಮಕ ಅಧ್ಯಯನ ನಡೆಸಿತು. ಅದರಂತೆ, ಎಸ್.ಆರ್.ಐ. ಕಾರ್ಯನೀತಿಯಲ್ಲಿ ಮತ್ತಷ್ಟು ಹೊಸ ಆಯಾಮಗಳನ್ನು ಒಳಗೊಳಿಸಿಕೊಳ್ಳಬೇಕು, ಸಮುದಾಯ ಆಧಾರಿತ ಸಂಸ್ಥೆಗಳೊoದಿಗೆ ನಾಗರಿಕ ಸಮಾಜ ಹಾಗೂ ಸರ್ಕಾರಗಳ ಸಂಬoಧ ಸ್ವರೂಪದ ಬಗ್ಗೆ ಚರ್ಚೆಗಳಾಗಬೇಕು ಮತ್ತು ಅದಕ್ಕೊಂದು ರೂಪ ಕೊಡಬೇಕು, ಪೌಷ್ಟಿಕ ಸಮಾಜ ಸ್ಥಾಪನೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಆಯ್ಕೆಗಳು ಹಾಗೂ ಕೌಶಲ್ಯ ಹೆಚ್ಚಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ಅಂಶಗಳು ಮುಖ್ಯವಾಗಿ ಕಂಡುಬoದವು.

೨೦೦೪ರ ವೈಜ್ಞಾನಿಕ ವಾಗ್ವಾದಗಳನ್ನೂ ಮೀರಿ ಎಸ್.ಆರ್.ಐ. ವಿವಿಧ ಮಾರ್ಗಗಳಲ್ಲಿ ಹಬ್ಬಿ ಯಶಸ್ಸು ಸಾಧಿಸುತ್ತಿದೆ. ಈ ಒಂದು ದಶಕದಲ್ಲಿ ಅದು ಭತ್ತ ಕೃಷಿಯಲ್ಲಿ ಹೊಸ ಅಧ್ಯಾಯವನ್ನೇ ಬರೆದು, ಹೊಸ ವೈಜ್ಞಾನಿಕ ಸವಾಲುಗಳಿಗೆ ಆಹ್ವಾನ ನೀಡಿದೆ. ಆದರೂ ಇನ್ನೂ ಹೆಚ್ಚು ಸಶಕ್ತ ತಾಂತ್ರಿಕ ಹಾಗೂ ಸಾಮಾಜಿಕ ಆರ್ಥಿಕ ಸಂಗತಿಗಳ ಅರಿವು ವಿಸ್ತರಣೆ ಮತ್ತು ಚರ್ಚೆಗಳು ನಡೆಯಬೇಕಿದೆ. ಹೊಸ ಆವಿಷ್ಕಾರಗಳಿಗೆ ಸೂಕ್ತ ಹೂಡಿಕೆದಾರರು ಹಾಗೂ ಸಂಸ್ಥೆಗಳಿಗೆ ಸೂಕ್ತ ಬಂಡವಾಳ ಒದಗಿಸುವ ಕೆಲಸ ಆಗಬೇಕಿದೆ ಮತ್ತು ಆ ಮೂಲಕ ಹಸಿರು ಕ್ರಾಂತಿಯಿoದ ಪಾರಿಸರಿಕ ಕೃಷಿಯತ್ತ ಬದಲಾವಣೆ ತರಬೇಕಿದೆ. ಇದರೊಂದಿಗೆ ರೈತರ ಆದಾಯ ಹಾಗೂ ಆಯ್ಕೆಗಳ ಸುಧಾರಣೆಯತ್ತಲೂ ಗಮನ ಹರಿಸಬೇಕಿದೆ.

ವಿಜ್ಞಾಪನೆಗಳು
ಅಪ್‌ಸ್ಕೇಲಿಂಗ್ ಇನ್ನೊವೆಟಿವ್ ಟೆಕ್ನಾಲಜೀಸ್ ಉಪ ಗುಂಪಿನ ಸದಸ್ಯರು ಹಾಗೂ ಈ ಲೇಖನದ ಚಿಂತನೆಗೆ ಪೂರಕ ಪರಿಕರಗಳನ್ನೊದಗಿಸಿದ ವಿವಿಧ ಯೋಜನಾ ಸದಸ್ಯರಿಗೆ ಲೇಖಕರು ಕೃತಜ್ಞರಾಗಿರುತ್ತಾರೆ.

ಸಿ.ಶಂಭು ಪ್ರಸಾದ್ ಮತ್ತು ಬಿ.ಸಿ.ಬರಾಹ್


Shambu Prasad

Professor, Rural Management

Xavier Institute of Management,

Bhubaneswar, Orissa

E-mail: shambu@ximb.ac.in; shambuprasad@gmail.com

B C Barah

NABARD, Chair Professor,

Indian Agricultural Research Institute,

New Delhi

E-mail: barah48@yahoo.com


ಆಂಗ್ಲ ಮೂಲ: ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೧, ಮಾರ್ಚ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...