ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ

ರಾಜಸ್ಥಾನದ ಕರ‍್ವಾವಾಲ್ ಪಂಚಾಯ್ತಿ ಭಾಗದ ರೈತರು ಸಜ್ಜೆಯನ್ನು ಆಧರಿಸಿದ ಬೆಳೆವ್ಯವಸ್ಥೆ ಅನುಸರಿಸುವುದರಿಂದ ನೀರಿಲ್ಲದೆ ಒಣಗುವ ಹತ್ತಿ, ಈರುಳ್ಳಿ ಮತ್ತು ಗೋಧಿ ಬೆಳೆಗಳಿಂದ ಮುಕ್ತಿ ಹೊಂದಬಹುದು ಎನ್ನುವುದನ್ನು ಕಂಡುಕೊAಡರು. ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಿದ್ದರಿಂದ ಅವರಿಗೆ ಆಹಾರ ಮತ್ತು ಮೇವು ಎರಡೂ ಸಿಗುವಂತಾಯಿತು. ಇದರೊಂದಿಗೆ ಸಜ್ಜೆಯನ್ನು ಕೇಂದ್ರವಾಗಿಟ್ಟುಕೊAಡ ತಮ್ಮ ಸಾಂಪ್ರದಾಯಿಕ ಸಂಸ್ಕೃತಿಯೊoದಿಗೆ ಈ ರೈತ ಕುಟುಂಬಗಳು ಮತ್ತೆ ಸಂಬAಧ ಬೆಸೆಯುವಂತಾಯಿತು.

ಕರ‍್ವಾವಾಲ್ ಪಂಚಾಯ್ತಿ ಅಡಿಯಲ್ಲಿ ಕರ‍್ವಾವಾಲ್, ಕರ‍್ವಾಡಿ ಮತ್ತು ಪಿಲಧಾಬ ಹಳ್ಳಿಗಳು ಬರುತ್ತವೆ. ಇವು ರಾಜಸ್ಥಾನದ ಈಶಾನ್ಯ ಭಾಗದಲ್ಲಿವೆ. ಈ ಪಂಚಾಯ್ತಿಯ ಪೂರ್ವಕ್ಕೆ ಬೆಟ್ಟಗಳ ಶ್ರೇಣಿ, ಪಶ್ಚಿಮದಲ್ಲಿ ಸ್ಥಳೀಯವಾಗಿ ‘ಸುಖ್ರಿ’ ಎಂದು ಕರೆಯುವ ನದಿಯಿದೆ. ಇವು ಈ ಪ್ರದೇಶಕ್ಕೆ ನೈಸರ್ಗಿಕ ಗಡಿಗಳಾಗಿವೆ. ಪೂರ್ವದಿಂದ ಪಶ್ಚಿಮದವರೆಗೂ ಈ ಭೂಪ್ರದೇಶವು ಕಂದರಗಳು, ಇಳಿಜಾರು ಪ್ರದೇಶಗಳಿಂದ ಕೂಡಿದೆ. ಇವುಗಳ ನಡುವೆಯೇ ಬಹುಭಾಗದ ಭೂಮಿಯನ್ನು ಕೃಷಿಗಾಗಿ ಸಮತಟ್ಟುಗೊಳಿಸಲಾಗಿದೆ. ಬೆಟ್ಟಗಳ ತಪ್ಪಲಲ್ಲಿ ದೇವಬನ (ದೇವರಕಾಡು) ಸಮುದಾಯದವರ ಸಂರಕ್ಷಿತ ಅರಣ್ಯವು ಸ್ವಲ್ಪ ಭಾಗವನ್ನು ಆವರಿಸಿಕೊಂಡಿದೆ. ಈ ಭಾಗದ ಜನ ಕೃಷಿ ಮತ್ತು ಪಶುಸಂಗೋಪನೆಯನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ರೈತರು ತಮ್ಮ ಸುಮಾರು ೩೦% ಆದಾಯವನ್ನು ಪಶುಸಂಗೋಪನೆ ಹಾಗೂ ಜಾನುವಾರು ಆಧಾರಿತ ಚಟುವಟಿಕೆಗಳಿಂದಲೇ ಗಳಿಸುತ್ತಾರೆ.

ಪಂಚಾಯ್ತಿಯಲ್ಲಿ ಮಿಶ್ರಬೆಳೆ ಪದ್ಧತಿಯು ದೊಡ್ಡ ಮಟ್ಟದ ಕೃಷಿವ್ಯವಸ್ಥೆಗೆ ದಾರಿಮಾಡಿಕೊಟ್ಟಿದೆ. ಕಣಿವೆ ಪ್ರದೇಶಗಳು ಹಾಗೂ ಬೆಟ್ಟದ ತಪ್ಪಲಲ್ಲಿ ಕೃಷಿ ಮಾಡಲಾಗುತ್ತದೆ. ಇದರಿಂದ ಸಿಗುವ ಆದಾಯ ಜೀವನಾಧಾರಕ್ಕೆ ಅಗತ್ಯವಾದ ಕನಿಷ್ಠ ಆದಾಯಕ್ಕಿಂತ ಕೆಳಮಟ್ಟದಲ್ಲಿದೆ. ಒಣಭೂಮಿಯ ಬೇಸಾಯ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಪ್ರತಿ ಕುಟಂಬದ ಬಳಿಯಿರುವ ಜಮೀನು ೦.೪ ಎಕರೆಯಿಂದ ೨.೫ ಎಕರೆಗಳಷ್ಟು ಮಾತ್ರ. ಖಾರಿಫ್ ಬೆಳೆಗಳು ಸಜ್ಜೆ, ಮೆಕ್ಕೆಜೋಳ, ಹತ್ತಿ, ಜೋಳ; ಎಳ್ಳು; ಹೆಸರು; ಕಡಲೆ; ಗೋರಿಕಾಯಿಗಳನ್ನು ಒಳಗೊಂಡಿರುತ್ತದೆ. ರಾಬಿ ಬೆಳೆಗಳು ಈರುಳ್ಳಿ, ಗೋಧಿ, ಸಾಸಿವೆ, ಕಾಳು ಮತ್ತು ಬಾರ್ಲಿಯನ್ನು ಒಳಗೊಂಡಿರುತ್ತದೆ. ತರಕಾರಿಗಳನ್ನು ಬೆಳೆಯುತ್ತಾರೆ. ಆದರೆ ಹೆಚ್ಚಾಗಿ ಮನೆಯ ಹಿತ್ತಿಲಲ್ಲಿ
ಬೆಳೆಯುತ್ತಾರೆ. ಬಹುತೇಕ ಭೂಮಿಯಲ್ಲಿ ಎರಡು ಬೆಳೆಗಳನ್ನು ಬೆಳೆಯಲಾಗುತ್ತದೆ. ಕೊಳವೆಬಾವಿಯ ಸೌಕರ್ಯ ಇರುವೆಡೆಗಳಲ್ಲಿ ಮಾತ್ರ ಬೇಸಿಗೆಯಲ್ಲಿ ಮೂರನೆಯ ಬೆಳೆಯನ್ನು ಬೆಳೆಯಲಾಗುತ್ತದೆ.

ಸಾಂಪ್ರದಾಯಿಕ ತಳಿಯ ಬಗೆಗಳಿಂದ ಹೈಬ್ರೀಡ್ ತಳಿಗಳೆಡೆಗೆ ಬರಲು ಎರಡು ಮುಖ್ಯ ಕಾರಣಗಳೆಂದರೆ : ಮಳೆಯ ಕೊರತೆಯ ನಡುವೆಯೇ ಬೇಗ ಫಲ ನೀಡುವಿಕೆ ಮತ್ತು ಹೆಚ್ಚಿನ ಇಳುವರಿ. ಕೃಷಿಯು ಬಹುತೇಕ ಯಾಂತ್ರೀಕೃತವಾಗಿದೆ. ಭೂಮಿಗೆ ನೀರುಣಿಸಲು ಆಳವಾದ ಕೊಳವೆಬಾವಿಗಳಿಂದ ನೀರೆತ್ತಲಾಗುತ್ತದೆ. ಬೆಳೆಗಳು ಹೆಚ್ಚು ನೀರನ್ನು ಬೇಡುತ್ತವೆ. ಅದರಲ್ಲೂ ರಾಬಿ ಬೆಳೆಗಳಿಗೆ ನೀರಿನ ಅವಶ್ಯಕತೆ ಹೆಚ್ಚು. ಸಣ್ಣ ಭೂಮಿಯನ್ನು ಹೊಂದಿರುವ ಕೆಲವು ಕುಟುಂಬಗಳು ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸುತ್ತಿವೆ.

ಸಿರಿಧಾನ್ಯಗಳ ಪುನಶ್ಚೇತನ
೨೦೧೧-೧೨ರಲ್ಲಿ ಏಖಂPAಗಿIS (ಕೃಷಿ ಏವಂ ಪರಿಸ್ಥಿತಿಕಿ ವಿಕಾಸ ಸಂಸ್ಥಾನ್) ಕರ‍್ವಾವಾಲ ಪಂಚಾಯ್ತಿಯಲ್ಲಿ ಸಿರಿಧಾನ್ಯಗಳನ್ನು ಬೆಳೆವ ಭೂಮಿ ಕಡಿಮೆಯಾಗುತ್ತಿರಲು ಕಾರಣಗಳೇನು ಎನ್ನುವುದನ್ನು ತಿಳಿಯಲು ಅಧ್ಯಯನವೊಂದನ್ನು ನಡೆಸಿತು. ಅಧ್ಯಯನದಲ್ಲಿ ಕಳೆದ ೧೦ ವರ್ಷಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಭೂಮಿಯಲ್ಲಿ ಶೇ.೨೫% ಭಾಗ ಕಡಿಮೆಯಾಗಿದೆ. ವಾಣಿಜ್ಯಬೆಳೆಗಳಾದ ಹತ್ತಿ ಮತ್ತು ಈರುಳ್ಳಿ; ಸಿರಿಧಾನ್ಯಗಳಿಗೆ ಸೂಕ್ತ ಬೆಲೆ ಸಿಗದಿರುವುದು; ಸರ್ಕಾರಿ ಗೋದಾಮು ಸೌಲಭ್ಯಗಳ ಕೊರತೆ; ಸಜ್ಜೆಯನ್ನು ರೇಷನ್‌ಅಂಗಡಿಗಳಲ್ಲಿ ಅಥವ ಬಾಲವಾಡಿಗಳಲ್ಲಿ ವಿತರಿಸದಿರುವುದು, ಸಜ್ಜೆಯ ಹುಲ್ಲನ್ನು ಸರ್ಕಾರಿ ಮೇವು ಬ್ಯಾಂಕುಗಳಲ್ಲಿ ಸ್ವೀಕರಿಸದಿರುವುದು, ವಿಮಾ ಕಂಪನಿಗಳು ಈ ಬೆಳೆಗೆ ವಿಮೆಯನ್ನು ಒದಗಿಸಲು ಹಿಂಜರಿಯುವುದು ಈ ಕಾರಣಗಳಿಂದ ಇವುಗಳನ್ನು ಬೆಳೆಯುತ್ತಿಲ್ಲ ಎಂದು ರೈತರು ಹೇಳುತ್ತಾರೆ.

ಪಂಚಾಯತ್ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಕಳೆದ ನಾಲ್ಕು ದಶಕಗಳಿಂದ ಇರುವುದನ್ನು ಏಖಂPAಗಿIS ಅಧ್ಯಯನವು ಗುರುತಿಸಿದೆ. ಈ ವ್ಯವಸ್ಥೆಯ ಮೂಲಕ ಕೇವಲ ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ಪೂರೈಸಲಾಗುತ್ತದೆ. ಈ ಮೂರು ವಸ್ತುಗಳನ್ನು ಸ್ಥಳೀಯವಾಗಿ ಬೆಳೆಯುವುದಿಲ್ಲ. ಇವುಗಳನ್ನು ಹೊರಗಿನಿಂದ ತರಿಸಲಾಗುತ್ತದೆ. ಸ್ಥಳೀಯವಾಗಿ ಬೆಳೆಯುವ ಸಜ್ಜೆಗೆ ಗ್ರಾಹಕರಿಲ್ಲ. ಇದರಿಂದಾಗಿ ಆಹಾರ ಪದ್ಧತಿಗಳಲ್ಲಿ ಬದಲಾವಣೆಯಾಗಿ ಹೊರಗಿನ ವಸ್ತುಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. (ನೋಡಿ ಕೋಷ್ಟಕ ೧)

ಕುಂಠಿತಗೊAಡಿರುವ ಸಿರಿಧಾನ್ಯಗಳ ಕೃಷಿಯ ಸಮಸ್ಯೆಯನ್ನು ನಿವಾರಿಸಿ ಸಿರಿಧಾನ್ಯಗಳ ಕೃಷಿಯನ್ನು ಪುನಶ್ಚೇತನಗೊಳಿಸಲು ಏಖಂPAಗಿIS ರೈತರನ್ನೊಳಗೊಂಡ ಕ್ರಮಗಳನ್ನು ಕರ‍್ವಾವಾಲ್ ಪಂಚಾಯ್ತಿ ಅಡಿಯಲ್ಲಿ ಕೈಗೊಂಡಿತು.

ರೈತರೊAದಿಗೆ ಹಲವು ಸಭೆಗಳನ್ನು ಆಯೋಜಿಸಿ ಸಜ್ಜೆ ಕೃಷಿಯ ಮಹತ್ವವನ್ನು ಚರ್ಚಿಸಲಾಯಿತು. ಸುಮಾರು ಎರಡು ದಶಕಗಳಿಂದ ಕರ‍್ವಾವಾಲ್ ರೈತರು ಹಿಂದೆ ಸಜ್ಜೆಯನ್ನು ಬೆಳೆಯುತ್ತಿದ್ದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ಈರುಳ್ಳಿಯನ್ನು ಬೆಳೆಯಲಾರಂಭಿಸಿದ್ದಾರೆ. ಚರ್ಚೆಯ ಸಮಯದಲ್ಲಿ ಕರ‍್ವಾವಾಲ್‌ನ ಹಿರಿಯ ರೈತರಾದ ಧನುರಾಂ ಪ್ರಜಾಪತ್, ದಾಸರಥ ಸಿಂಗ್, ಧನ್‌ಕೋರಿ ದೇವಿ, ಸಂತೋ ದೇವಿ, ನನ್ಯಾರಾಂ ಜಾಧವ್, ಗಂಗಾ ರಾಂ ಜಾಧವ್, ರಘುವೀರ್ ಮತ್ತಿತರು ಸಜ್ಜೆಯ ಈ ಕೆಳಕಂಡ ಉಪಯೋಗಗಳನ್ನು ಕುರಿತು ಹೇಳಿದರು : ಸಜ್ಜೆಯನ್ನು ಬೆಟ್ಟದ ತಪ್ಪಲಲ್ಲಿ, ಮರಭೂಮಿಯಲ್ಲಿ, ಸಮತಟ್ಟಿಲ್ಲದ ಪ್ರದೇಶಗಳಲ್ಲಿ, ಮಣ್ಣು ಫಲವತ್ತಾಗಿಲ್ಲದ ಕಡೆಗಳಲ್ಲಿ ಅತಿ ಕಡಿಮೆ ಮತ್ತು ಅನಿರ್ಧಿಷ್ಟ ಮಳೆಯಂತಹ ಪರಿಸ್ಥಿತಿಗಳಲ್ಲೂ (ರಾಜಸ್ಥಾನದಲ್ಲಾಗುವಂತೆ) ಬೆಳೆಯಬಹುದು. ಏಕೆಂದರೆ ಇದು ಬರವನ್ನು ತಾಳಿಕೊಳ್ಳುವ ಬೆಳೆ. ಈ ಬೆಳೆಗೆ ರಾಸಾಯನಿಕ ಗೊಬ್ಬರಗಳಾಗಲಿ, ಕೀಟನಾಶಕಗಳಾಗಲಿ, ಹೈಬ್ರೀಡ್ ಬೀಜ ಇತ್ಯಾದಿಗಳ ಅವಶ್ಯಕತೆಯಿಲ್ಲ. ಇದನ್ನು ಮಿಶ್ರಬೆಳೆ ಪದ್ಧತಿಯಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಜೊತೆಯಲ್ಲೂ ಬೆಳೆಯಬಹುದು. ಇದು ಹೆಚ್ಚು ಪೌಷ್ಟಿಕತೆಯನ್ನು ಹೊಂದಿದ್ದು ರುಚಿಯಾಗಿದೆ. ಇದು ಚಳಿಗಾಲದಲ್ಲಿ ಅಗತ್ಯವಾದ ಶಾಖ, ಶಕ್ತಿ ಮತ್ತು ಸಾಮರ್ಥ್ಯಗಳನ್ನು ಒದಗಿಸುತ್ತದೆ. ಕಡಿಮೆ ಬೆಲೆಗೆ ಸಿಗುವುದರಿಂದ ಹಳ್ಳಿಯ ಬಡವರು ಕೂಡ ಇದನ್ನು ಕೊಳ್ಳಬಹುದು. ಸಜ್ಜೆ ಜಾನುವಾರುಗಳಿಗೆ ಒಳ್ಳೆಯ ಮೇವನ್ನು ಒದಗಿಸುತ್ತದೆ (ಹಸಿ ಹುಲ್ಲು ಹಾಗೂ ಒಣ ಹುಲ್ಲು – ಕಾಡ್ಬಿ). ಸಜ್ಜೆಯನ್ನು ಜಾನುವಾರಗಳ ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸುತ್ತಾರೆ. ಸಜ್ಜೆ ಸ್ಥಳೀಯ ಸಂಸ್ಕೃತಿಯ ಭಾಗ (ನೋಡಿ ಬಾಕ್ಸ್ ೧).

ಕರ‍್ವಾವಾಲ ಹಳ್ಳಿಯ ರೈತರು ತಮ್ಮ ತಂದೆತಾಯಿಗಳು ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದನ್ನು ನೆನಪಿಸಿಕೊಳ್ಳಲು ಆರಂಭಿಸಿದರು – ಸಜ್ಜೆಯನ್ನು ದ್ವಿದಳ ಧಾನ್ಯಗಳೊಂದಿಗೆ (ಉದಾ : ಉದ್ದು ಮತ್ತು ಹೆಸರು) ಮತ್ತು ಎಣ್ಣೆ ಕಾಳುಗಳೊಂದಿಗೆ (ಉದಾ: ಎಳ್ಳು), ತಿನ್ಜಾ (ಮೂರು ಕಾಳುಗಳು – ಬಾರ್ಲಿ, ಕಡಲೆ, ಗೋಧಿ), ಗೌಚಾನಿ (ಬಾರ್ಲಿ, ಗೋಧಿ), ಬೇಜಾಡ್ (ಬಾರ್ಲಿ, ಕಡಲೆ), ೭ ಧಾನ್ಯಗಳು – ಸಜ್ಜೆ, ಮೆಕ್ಕೆಜೋಳ, sಸಾಸಿವೆ, ಗೋಧಿ, ಜೋಳ, ತೊಗರಿ ಮತ್ತು ಬಾರ್ಲಿ. ಆದ್ದರಿಂದ ರೈತರು ಸಾಂಪ್ರದಾಯಿಕ ಸಜ್ಜೆ ಮತ್ತು ಸಿರಿಧಾನ್ಯಗಳ ಮಿಶ್ರಬೆಳೆ ಪದ್ಧತಿ ಜೈವಿಕವೈವಿಧ್ಯತೆಯನ್ನು ಒಳಗೊಂಡಿದೆೆ ಎಂದು ಕಂಡುಕೊAಡರು.

ಬಾಕ್ಸ್ ೧ : ಸ್ಥಳೀಯ ಸಂಸ್ಕೃತಿಗಳಲ್ಲಿ ಸಜ್ಜೆಯ ಹಲವು ಉಪಯೋಗಗಳು

ರಾಜಸ್ಥಾನದಲ್ಲಿ ‘ಗೋವರ್ಧನ’ ಹಬ್ಬದ ಸಂಜೆ (ದೀಪಾವಳಿಯ ಎರಡನೆಯ ದಿನ) “ಅನ್ನಾಕುಟ್” ಆಚರಿಸಲಾಗುತ್ತದೆ. ಅಂದು ಇಡೀ ಸಮುದಾಯ ಒಟ್ಟಾಗಿ “ಖಡಿಬಾಜ್ರಾ” ಎನ್ನುವ ಸಜ್ಜೆಯ ವಿಶೇಷ ಖಾದ್ಯವನ್ನು ಮಾಡಿ ಸವಿಯುತ್ತಾರೆ. “ಮಕರ ಸಂಕ್ರಾAತಿ”ಯAದು ಸಜ್ಜೆಯನ್ನು ನೀಡುವ ಸಂಪ್ರದಾಯವಿದೆ. “ಮಕರ ಸಂಕ್ರಾAತಿ”ಯAದು ಎಳ್ಳನ್ನು ಮಿಶ್ರಮಾಡಿ ಚಪಾತಿಗಳನ್ನು ಮಾಡುವುದು ವಿಶೇಷ/ಶ್ರೇಷ್ಠ/ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಮಹಾಶಿವರಾತ್ರಿಯಂದು ಚೋಲೆ ಕೆ ಲಡ್ಡು (ಕಿರುಧಾನ್ಯಗಳು) ಮಾಡುತ್ತಾರೆ. “ಬಾದ್ಪುವ” ಅಂದರೆ ಹತ್ತು ಧಾನ್ಯಗಳಾದ ಸಜ್ಜೆ, ಮೆಕ್ಕೆ ಜೋಳ, ಜೋಳ, ಕಡಲೆ, ಎಳ್ಳು, ಅಕ್ಕಿ, ಗೋಧಿ, ಬಾರ್ಲಿ, ಅಲಸಂದೆ, ಹೆಸರುಬೇಳೆ ಇವುಗಳನ್ನು ಮಡಿಕೆಯಲ್ಲಿ ತುಂಬಿ ದಸರಾ ಹಬ್ಬದಲ್ಲಿ ಪೂಜೆಗಾಗಿ ಬಳಸುತ್ತಾರೆ. ಶುಭ ಸಂದರ್ಭಗಳಲ್ಲಿ ಕಲಶವನ್ನು ಇಟ್ಟು “ಕಲಶ ಪೂಜೆ” ಮಾಡುವಾಗ ಅದರ ಕೆಳಗೆ ಸಜ್ಜೆಯ ಕಾಳುಗಳನ್ನು ಹಾಕುತ್ತಾರೆ.

ಮದುವೆಯ ಮರುದಿನ ವಧುವರರು ಪರಸ್ಪರ ಮೇಲೆ ಸಜ್ಜೆಯ ಬೀಜಗಳನ್ನು ಎರಚಿಕೊಳ್ಳುವ “ಕಂಗಾ ಖೇಲನ” ಎನ್ನುವ ಸಂಪ್ರದಾಯವಿದೆ. ಮತ್ತೊಂದು ಸಂಪ್ರದಾಯ “ದುಂದ್”. ಮನೆಯಲ್ಲಿ ಮಗು ಹುಟ್ಟಿದಾಗ ಆ ವರ್ಷ ಹೋಳಿ ಹಬ್ಬದಂದು ಸಜ್ಜೆಯ ಪಾಯಸ ಮಾಡಿ ಅಕ್ಕಪಕ್ಕದವರಿಗೆ ಹಂಚುತ್ತಾರೆ.

ಹಕ್ಕಿಗಳಿಗೆ ಸೂಕ್ತ ಆವಾಸಸ್ಥಾನವಾಗಿಸುವ ಸಲುವಾಗಿ ಅವುಗಳಿಗೆ ಪ್ರತಿದಿನ ಸಜ್ಜೆಯಿಂದ ಮಾಡಿದ ತಿನಿಸನ್ನು ಉಣಿಸುವ “ಚುಗಾ ಡಾಲ್ನಾ”ೆ ಎನ್ನುವ ಸಂಪ್ರದಾಯವಿದೆ. ತೋಪುಗಳಲ್ಲಿ ಮತ್ತು ದೇವಾಲಯದ ಆವರಣದಲ್ಲಿ ಇದನ್ನು ಕಾಣಬಹುದು. ಅದೇ ರೀತಿ ಇರುವೆಗಳಿಗೆ ಸಿರಿಧಾನ್ಯಗಳನ್ನು ಉಣಿಸುವ “ಚೀತ್ವಾಲ್” ಎನ್ನುವ ಸಂಪ್ರದಾಯವಿದೆ.

ರೈತರಿಗೆ ಈ ಪದ್ಧತಿಯ ಪ್ರಾಮುಖ್ಯತೆ ಅರಿವಾಗುತ್ತಿದ್ದಂತೆ ಏಖಂPAಗಿIS ಮಾಡಿದ ಮೊದಲ ಕೆಲಸವೆಂದರೆ : ೧) ಸಾಂಪ್ರದಾಯಿಕ ಮಿಶ್ರಬೆಳೆ ಪದ್ಧತಿಗಳನ್ನು ಗುರುತಿಸಿದರು; ೨) ಸಜ್ಜೆಯೊಂದಿಗೆ ಮಿಶ್ರಬೆಳೆ ಕೃಷಿಯನ್ನು ಮಾಡಲು ಆಸಕ್ತವಾಗಿರುವ ರೈತರನ್ನು ಗುರುತಿಸಿದರು ಅಥವ ಸಾಂಪ್ರದಾಯಿಕ ಕೃಷಿ ವಿಧಾನಗಳಾದ ಮಿಶ್ರಸಿರಿಧಾನ್ಯ ಆಧಾರಿತ ಬೆಳೆ ಪದ್ಧತಿ, ಎರೆಹುಳಗೊಬ್ಬ ಮತ್ತು ಜೈವಿಕ ಗೊಬ್ಬರ ಇತ್ಯಾದಿಗಳನ್ನು ಅನುಸರಿಸಲು ಶ್ರಮಿಸುತ್ತಿರುವ ರೈತರನ್ನು ಗುರುತಿಸಿದರು.

ರೈತರ ರೈತರ ನಡುವೆ ಮತ್ತು ಸಮುದಾಯ ಸಮುದಾಯಗಳ ನಡುವೆ ವಿನಿಮಯ ಸಾಧ್ಯವಾಗಿಸುವ ಸಲುವಾಗಿ ಪರಸ್ಪರ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ದಂತ ರಾಮಗರ್‌ನ ಸುಂಡ ರಾಮ್ ವರ್ಮಾ ಎನ್ನುವ ವಿದ್ಯಾವಂತ ರೈತರೊಂದಿಗೆ ಇದೇ ಕಾರಣಕ್ಕೆ ಭೇಟಿಯನ್ನು ಆಯೋಜಿಸಲಾಯಿತು. ಈತ ಹೊಸ ವಿಧಾನಗಳನ್ನು ಮತ್ತು ಬರ, ಹಿಮಪಾತ, ಕೀಟ ಮತ್ತು ರೋಗ ಇವುಗಳನ್ನು ತಾಳಿಕೊಳ್ಳಬಲ್ಲ ಬೆಳೆಗಳ ವಿವಿಧ ಬಗೆಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದಾರೆ.

ಏಖಂPAಗಿIS ರೈತರನ್ನು ಸಜ್ಜೆಯ ಸಾಂಪ್ರದಾಯಿಕ ಬೀಜಗಳನ್ನು ಮತ್ತು ಸಜ್ಜೆಯಾಧಾರಿತ ಬೆಳೆ ವ್ಯವಸ್ಥೆಯನ್ನು ಮರಳಿ ತರಲು ಪ್ರೋತ್ಸಾಹಿಸಿತು. ಹಳ್ಳಿಗರು ಬಹುತೇಕ ಸಾಂಪ್ರದಾಯಿಕ ಬೀಜಗಳನ್ನು ಕಳೆದುಕೊಂಡುಬಿಟ್ಟಿದ್ದರು. ಏಖಂPAಗಿIS ಸ್ಥಳೀಯ ಸಜ್ಜೆ ಮತ್ತು ಜೋಳದ ಬೀಜಗಳನ್ನು ಸಂಗ್ರಹಿಸಲು, ವಿನಿಮಯ ಮಾಡಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಅನುಕೂಲಗಳನ್ನು ಮಾಡಿಕೊಟ್ಟಿತು.

ಸಾಂಪ್ರದಾಯಿಕ ಸಜ್ಜೆಯ ಬೀಜವನ್ನು ಪಡೆದ ನಂತರ ಏಳು ಧಾನ್ಯಗಳ ಮಿಶ್ರಬೆಳೆ ಪದ್ಧತಿ ವಿಧಾನದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಯಿತು (ಏಳು ಕಾಳುಗಳು – ಸಜ್ಜೆ, ಮೆಕ್ಕೆಜೋಳ, ಸಾಸಿವೆ, ಗೋಧಿ, ಜೋಳ, ತೊಗರಿಬೇಳೆ, ಬಾರ್ಲಿ).

ಹಳ್ಳಿಗಳಲ್ಲಿ ಮಹಿಳಾ ಮಂಡಲಿ ಎನ್ನುವ ಮಹಿಳೆಯರ ಗುಂಪುಗಳನ್ನು ರಚಿಸಲಾಯಿತು. ಈ ಗುಂಪು ಪ್ರತಿ ತಿಂಗಳು ಸಭೆ ಸೇರುವುದಲ್ಲದೆ ಉಳಿತಾಯವನ್ನು ಕೂಡ ಮಾಡುತ್ತಿದೆ. ಈ ಗುಂಪಿನ ಸದಸ್ಯರು ಪ್ರತಿಯೊಂದಕ್ಕೂ ಲೆಕ್ಕಪತ್ರಗಳನ್ನು ಇಟ್ಟಿದ್ದು ಆರ್ಥಿಕ ಚಟುವಟಿಕಗಳನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಸದಸ್ಯರನ್ನು ಕೂಡ ವಿನಿಮಯ ಭೇಟಿಗೆ ಕರೆದೊಯ್ದಾಗ ಅವರು ಹಲವು ವಿಧದ ಬೀಜಗಳನ್ನು ನೋಡಿದರು. ಸಾಂಪ್ರದಾಯಿಕ ಬೀಜಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಬೀಜ ಬ್ಯಾಂಕುಗಳನ್ನು ತೆರೆಯಲಾಯಿತು. ಮಹಿಳಾ ಮಂಡಳಿಗಳು ಬೀಜವನ್ನು ಸಂಗ್ರಹಿಸಿದ್ದಲ್ಲದೆ ಅವುಗಳನ್ನೇ ಗುಂಪಿನ ಸದಸ್ಯರಿಗೆ ಮತ್ತು ಹೊರಗಿನವರಿಗೆ ನೀಡಲಾರಂಭಿಸಿದವು. ಬೀಜವನ್ನು ತೆಗೆದುಕೊಂಡ ಪ್ರತಿಯೊಬ್ಬ ಸದಸ್ಯರು ತಾವು ತೆಗೆದುಕೊಂಡಷ್ಟು ಬೀಜಗಳೊಂದಿಗೆ ಇನ್ನೂ ಸ್ವಲ್ಪ ಬೀಜಗಳನ್ನು ಸೇರಿಸಿ ಬ್ಯಾಂಕಿಗೆ ಹಿಂತಿರುಗಿಸುತ್ತಾರೆ. ಇದರಿಂದ ಬ್ಯಾಂಕಲ್ಲಿನ ಬೀಜಗಳು ದ್ವಿಗುಣಗೊಳ್ಳುತ್ತವೆ. ಏಖಂPAಗಿIS ಈ ಗುಂಪುಗಳಿಗೆ ಬೀಜಗಳನ್ನು ಯಾವುದೇ ರೀತಿಯ ಕೀಟಗಳಿಂದ ಹಾನಿಗೊಳಗಾಗದೆ ಸುರಕ್ಷಿತವಾಗಿ ಇಟ್ಟುಕೊಳ್ಳಲು ನೆರವಾಗುವಂತೆ ಸ್ಟೀಲ್ ಪೆಟ್ಟಿಗೆಗಳನ್ನು ಒದಗಿಸಿದೆ. ಬೀಜ ಬ್ಯಾಂಕಿನ ಕಾರಣದಿಂದ ಮಹಿಳೆಯರು ಸಾಂಪ್ರದಾಯಿಕ ಬೀಜಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದಲ್ಲದೆ, ಹೈಬ್ರೀಡ್ ಬೀಜಗಳ ಮೇಲೆ ಅವಲಂಭಿತರಾಗುವುದು ತಗ್ಗಿದೆ. ಇದರಿಂದ ದುಬಾರಿ ಹೈಬ್ರೀಡ್ ಬೀಜಗಳಿಗಾಗಿ ಮಾಡುತ್ತಿದ್ದ ವೆಚ್ಚ ಕೂಡ ಕಡಿಮೆಯಾಗಿದೆ.

ನೀರು ಸಂಗ್ರಹಣೆ ಮತ್ತು ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಯ ಕುರಿತು ಕೆಲವು ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಕೆರೆ, ಬಾವಿಗಳ ಹೂಳೆತ್ತುವುದು, ಅವುಗಳ ಆಳವನ್ನು ಹೆಚ್ಚಿಸುವುದು ಹಾಗೂ ನೀರನ್ನು ಅಲ್ಲಿ ಸಂಗ್ರಹಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಜಾನುವಾರುಗಳಿಗೆ ಹಾಗೂ ಮನೆಬಳಕೆಗೆ ನೀರು ಸಿಗುವಂತೆ ಮಾಡುವ ಮೂಲಕ ಪರಿಸ್ಥಿತಿಗಳನ್ನು ಸುಧಾರಿಸುವ ಕುರಿತು ಪ್ರಾತ್ಯಕ್ಷಿಕೆಯಲ್ಲಿ ತೋರಿಸಲಾಯಿತು.

ಸಜ್ಜೆಯೊಂದಿಗಿನ ಮಿಶ್ರಬೆಳೆ ಪದ್ಧತಿಯಿಂದಾಗಿ ಕರ‍್ವಾವಾಲ್ ಹಳ್ಳಿಯ ೧೩೦೦ ಎಮ್ಮೆಗಳು, ೭೦೦೦ ಮೇಕೆಗಳು, ೫೦ ಹಸುಗಳು, ೩೦೦ ಕುರಿಗಳು ಮತ್ತು ೫೦ ಕುದುರೆಗಳಿಗೆ ಮೇವಿನ ಭದ್ರತೆ ಸಿಕ್ಕಂತಾಗಿದೆ.

ದೇಶದ ಅತಿದೊಡ್ಡ ಸಂಪರ್ಕಜಾಲ ಒIಓI (ಒiಟಟeಣ ಓeಣತಿoಡಿಞ oಜಿ Iಟಿಜiಚಿ)ಯ ಸದಸ್ಯನಾಗಿ ಸಿರಿಧಾನ್ಯಗಳಿಗೆ ಅನುಕೂಲವಾಗುವಂತಹ ನೀತಿಯನ್ನು ರೂಪಿಸಲು ಅದರ ಪರವಾಗಿ ಲಾಬಿ ಮತ್ತು ವಕಾಲತ್ತು ವಹಿಸಿ ಶ್ರಮಿಸುತ್ತಿದೆ. ಸಿರಿಧಾನ್ಯಗಳ ಈ ಪ್ರಚಾರಾಂದೋಲನದಲ್ಲಿ ನಾವು ಹಲವಾರು ವಿಜ್ಞಾನಿಗಳು, ವೈದ್ಯರು, ರೈತ ಸಂಘಟನೆಗಳು ಮತ್ತು ಗ್ರಾಹಕ ಸಂಘಟನೆಗಳನ್ನು ಜೊತೆಗೂಡಿಸಿಕೊಂಡಿದ್ದೇವೆ. ಹಲವು ಗುಂಪುಗಳು ಮತ್ತು ರಾಜಸ್ಥಾನದಿಂದ ಸಿರಿಧಾನ್ಯ ಪ್ರಚಾರಾಂದೋಲನ ಬೆಂಬಲಿಸಿದ ೯೨ ಪತ್ರÀಗಳನ್ನು (ಎಂಪಿ, ಸರಪಂಚ, ವೈದ್ಯರು, ವಿಜ್ಞಾನಿಗಳು, ಪಂಚರು, ಶೈಕ್ಷಣಿಕತಜ್ಞರು ಇತ್ಯಾದಿ) ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಕಳುಹಿಸಿರುವುದಲ್ಲದೆ ಮಾಧ್ಯಮಗಳಿಗೆ ಕೂಡ ಇದನ್ನು ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ಗ್ರಾಮೀಣ ಭಾಗದಲ್ಲಿನ ಪಶುಸಂಗೋಪನ ಸಮುದಾಯಗಳು “ಅರಣ್ಯದ ಉಪ ಉತ್ಪನ್ನಗಳು – ಜಾನುವಾರು – ಕೃಷಿ” ಇವುಗಳನ್ನು ಆಧರಿಸಿ ಬದುಕುತ್ತಿರುತ್ತಾರೆ. ಅವರು ಸುಸ್ಥಿರ ಬದುಕು ನಡೆಸಲು ನೆರವಾಗಲು ಒIಓಔಖ (ಒiಟಟeಣ ಓeಣತಿoಡಿಞ oಜಿ ಖಚಿರಿಚಿsಣhಚಿಟಿ) ಎನ್ನುವ ಗುಂಪನ್ನು ರಚಿಸಲಾಗಿದೆ. ಸುಸ್ಥಿರ ಕೃಷಿ, ಸಾಂಪ್ರದಾಯಿಕ ಮಿಶ್ರ ಬೆಳೆ ಪದ್ಧತಿ, ಸಾಂಪ್ರದಾಯಿಕ ಬೀಜಗಳು ಅದರಲ್ಲೂ ಸಾಸಿವೆ, ಕಾಳುಗಳು, ತೊಗರಿ ಮತ್ತು ಸಜ್ಜೆ ಇವುಗಳನ್ನು ಕುರಿತು ಏಖಂPAಗಿIS ಪ್ರಚಾರ ನಡೆಸುವುದನ್ನು ಮುಂದುವರೆಸಿದೆ. ನಮ್ಮ ಸಂಪರ್ಕಜಾಲದ ಮೂಲಕ ನಾವು ಸರ್ಕಾರಕ್ಕೆ ಸ್ಥಳೀಯ ಸಜ್ಜೆ ಮತ್ತು ಇನ್ನಿತರ ಬೆಳೆಗಳ ಬೀಜಗಳನ್ನು ತನ್ನ ಕೃಷಿ ಸಂಸ್ಥೆಗಳ ಮೂಲಕ ವಿತರಿಸುವಂತೆ; ಸರ್ಕಾರದ ಮೇವು ಬ್ಯಾಂಕುಗಳಲ್ಲಿ ಬಾಜ್ರಾ ಕಿ ಕುಟ್ಟಿ/ಕಬಾಡಿಯನ್ನು ಸ್ವೀಕರಿಸಿ ಬರದ ಸಮಯದಲ್ಲಿ ಅವುಗಳನ್ನು ಪೂರೈಸುವಂತೆ, ಪಡಿತರ ಚೀಟಿ ಅಂಗಡಿಗಳಲ್ಲಿ ಸಜ್ಜೆಯನ್ನು ವಿತರಿಸುವಂತೆ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳಲ್ಲಿ ಸಜ್ಜೆಯನ್ನು ಸೇರಿಸಿಕೊಳ್ಳುವಂತೆ, ಗ್ರಾಮಗಳ ಮಟ್ಟದಲ್ಲಿ ಸಮುದಾಯಗಳೇ ನಿರ್ವಹಿಸುವಂತಹ ಗೋದಾಮುಗಳನ್ನು ನಿರ್ಮಿಸುವಂತೆ ಒತ್ತಾಯಿಸಿದ್ದೇವೆ.

ಪ್ರಮುಖ ಫಲಿತಾಂಶಗಳು

ಸಾAಪ್ರದಾಯಿಕ ಸಿರಿಧಾನ್ಯಗಳನ್ನಾಧರಿಸಿದ ಮಿಶ್ರಬೆಳೆಯ ಪದ್ಧತಿಯನ್ನು ಕರ‍್ವಾವಾಲ್ ಪಂಚಾಯ್ತಿ ಹಾಗೂ ಸುತ್ತಲಿನ ಹಳ್ಳಿಗಳಲ್ಲೂ ಕೂಡ ರೈತರು ಅಳವಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಕರ‍್ವಾವಾಲ್ ಮತ್ತು ಸುತ್ತಲ ೧೪ ಹಳ್ಳಿಗಳಲ್ಲಿ ರೈತರು ಸ್ಥಳೀಯ ಬೀಜಗಳೊಂದಿಗೆ ಸಜ್ಜೆಯೊಂದಿಗೆ ಮಿಶ್ರಬೆಳೆಯನ್ನು ಅತಿಕಡಿಮೆ ಹೊರಪರಿಕರ ಬಳಕೆಯೊಂದಿಗೆ ಬೆಳೆಯುತ್ತಿರುವುದು ಇದಕ್ಕೆ ಸಾಕ್ಷಿ. ಇಂದು ಸುಮಾರು ೧೭೭ ರೈತರು ಸ್ಥಳೀಯ ಬೀಜ ವೈವಿಧ್ಯದೊಂದಿಗೆ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸುಸ್ಥಿರ ಕೃಷಿ ಪದ್ಧತಿಯನ್ನು ರೈತರು ಒಪ್ಪಿ ಅಳವಡಿಸಿಕೊಂಡಿದ್ದರಿAದ ಉತ್ಪಾದನೆಯಲ್ಲಿ ಹಾಗೂ ಕೃಷಿ ಸುಸ್ಥಿರತೆಯಲ್ಲೂ ಸುಧಾರಣೆ ಕಂಡಿದೆ.

ಕರ‍್ವಾವಾಲ್ ಹಳ್ಳಿಯಲ್ಲಿ ಸಜ್ಜೆಯೊಂದಿಗೆ ಮಿಶ್ರಬೆಳೆ ಪದ್ಧತಿಯಿಂದಾಗಿ ೧೩೦೦ ಎಮ್ಮೆಗಳು, ೭೦೦೦ ಮೇಕೆಗಳು, ೫೦ ಹಸುಗಳು, ೩೦೦ ಕುರಿಗಳು ಮತ್ತು ೫೦ ಕುದುರೆಗಳಿಗೆ ಮೇವಿನ ಭದ್ರತೆ ಸಿಕ್ಕಂತಾಗಿದೆ.

ಹಳ್ಳಿಗರಲ್ಲಿ ಸ್ಥಳೀಯ ಬೀಜ ಸಂರಕ್ಷಣೆಯ ಕುರಿತು ಅರಿವು ಹೆಚ್ಚಾಗಿದೆ. ಸ್ಥಳೀಯ ಬೀಜ ಸಂರಕ್ಷಣೆ ಕುರಿತು ಪರಿಣಾಮಕಾರಿ ಸಂಪನ್ಮೂಲ ಹಾಗೂ ಸಂವಹನವಾಗಿ “ದೇವಬನಿ ರೆ ಬಾತ್” ಎನ್ನುವ ತ್ರೆöÊಮಾಸಿಕ ಸುದ್ದಿಪತ್ರದಲ್ಲಿ ೭ ಸಂಚಿಕೆಗಳನ್ನು ತರಲಾಗಿದೆ. ಸ್ವಸಹಾಯ ಸಂಘಗಳ ಮೂಲಕ “ಬೀಜ ಬ್ಯಾಂಕು”ಗಳಲ್ಲಿ ಸಾಂಪ್ರದಾಯಿಕ ಬೀಜಗಳನ್ನು ಉಳಿತಾಯ ಮಾಡುವ ಪರಿಕಲ್ಪನೆಯು ೪ ಪಂಚಾಯ್ತಿಗಳಲ್ಲಿ/ಹಳ್ಳಿಗಳಲ್ಲಿ – ಕಾಲಿಖೋಲ್, ಬಂಧೆ ಕಾ ಬಾಸ್, ಕಾಗ್ಪುರ್ ಮತ್ತು ಭಕ್ತಪುರಗಳಲ್ಲಿ ಹರಡಿದೆ. ಸುಮಾರು ೨೦ ಹಳ್ಳಿಗಳಲ್ಲಿನ ರೈತರ ನಡುವೆ ಸಂಪರ್ಕಜಾಲ ಬೆಸೆಯಲಾಗಿದೆ. ಆ ಮೂಲಕ ಬೀಜಗಳ ವಿನಿಮಯಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಒiಟಟeಣ ಓeಣತಿoಡಿಞ oಜಿ ಖಚಿರಿಚಿsಣhಚಿಟಿ (ಒIಓಔಖ) ಸ್ವತಃ ಹಾಗೂ ಇನ್ನಿತರ ದೊಡ್ಡ ಸಂಪರ್ಕಜಾಲಗಳಾದ ಒIಓIಯಂತಹವುಗಳೊAದಿಗೆ ಸೇರಿ ಸ್ಥಳೀಯ ಸರ್ಕಾರದ ಇಲಾಖೆ, ರಾಜಕಾರಣಿಗಳು, ಎನ್‌ಜಿಒಗಳು ಮತ್ತು ನೀತಿರೂಪಕರೊಂದಿಗೆ ಸದಾ ಸಂವಾದ ನಡೆಸುತ್ತಲಿದೆ. ಈ ಶ್ರಮವು ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸುವಲ್ಲಿ ತನ್ನ ಕೊಡುಗೆ ನೀಡಿದೆ. ಇದೇ ರೀತಿಯ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಈಗ ಸಜ್ಜೆಯನ್ನು ಬೆಳೆಯುವ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಸಹಕಾರ ನೀಡಲು ಮುಂದಾಗಿದೆ.

Aman Singh and Pratibha Sisodia

Krishi Avam Paristhitiki Vikas Sansthan (KRAPAVIS)

KRAPAVIS Training Centre

Prachin Bhurasidh, P.O. Kala Kua

Alwar – 301001, Rajasthan, India

E-mail: krapavis_oran@rediffmail.com

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೪ , ಡಿಸಂಬರ್ ೨೦೧೭

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...