2024 ರ ವೇಳೆಗೆ ತೋಟಗಳನ್ನು ‘ಡೀಸೆಲ್ ಮುಕ್ತ’ ಮಾಡಲು ಮೈಕ್ರೋ ಸೋಲಾರ್ ಪಂಪ್ಗಳ ಬಳಕೆ ಹೆಚ್ಚಿಸಿ


ಕೃಷಿ ಪಂಪ್ಗಳನ್ನು ಹೊಂದಿರುವ ಬಹುತೇಕ ಮೂರನೇ ಎರಡರಷ್ಟು ರೈತರು ಇನ್ನೂ ಡೀಸೆಲ್/ಸೀಮೆಎಣ್ಣೆ ಪಂಪ್ಗಳನ್ನು ಅವಲಂಬಿಸಿದ್ದಾರೆ.


ಈ ವರ್ಷದ ಆರಂಭದಲ್ಲಿ, ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ನವೀಕರಿಸಬಹುದಾದ ಇಂಧನಕ್ಕೆ (RE) ಬದಲಾಯಿಸುವ ಮೂಲಕ 2024 ರ ವೇಳೆಗೆ ಕೃಷಿ ಕ್ಷೇತ್ರವನ್ನು ಡೀಸೆಲ್ ಮುಕ್ತವಾಗಿಸುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸಿತು. ಈ ಪ್ರಕಟಣೆಯು 2070ರ ವೇಳೆಗೆ ಇದನ್ನು ಸಾಧಿಸುವ ಭಾರತದ ಬದ್ಧತೆಗೆ ಅನುಗುಣವಾಗಿದೆ. ಜೊತೆಗೆ, ಇದು ಇದು ಕಚ್ಚಾ ತೈಲದ ಮೇಲಿನ ಭಾರತದ ಆಮದು ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ. ಈ ವೆಚ್ಚವು ದ್ವಿಗುಣಗೊಂಡಿದ್ದು 2021-22 ರ ಆರ್ಥಿಕ ವರ್ಷದಲ್ಲಿ USD 119 ಶತಕೋಟಿಯಾಗಿದೆ.

ಭಾರತದಲ್ಲಿ ಸಾರಿಗೆಯ ನಂತರ, ಕೃಷಿ ಕ್ಷೇತ್ರದಲ್ಲಿ ಅತಿಹೆಚ್ಚು ಬಳಕೆಯಾಗುತ್ತದೆ. ಭಾರತದಲ್ಲಿನ 30 ಮಿಲಿಯನ್ ಸಾಂಪ್ರದಾಯಿಕ ಕೃಷಿ ಪಂಪ್‌ಗಳಲ್ಲಿ, ಹತ್ತು ಮಿಲಿಯನ್ ಪಂಪ್‌ಗಳು ಡೀಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ನೀರಾವರಿಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ‘ಡೀಸೆಲ್ ಮುಕ್ತ’ ತೋಟಗಳನ್ನು ಮಾಡಲು ನಿರ್ಣಯಿಸಲಾಗಿದೆ.

ಕೇವಲ 380,000 ಘಟಕಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸೌರಪಂಪ್‌ಗಳ ನಿಯೋಜನೆಯು ಸೀಮಿತವಾಗಿದೆ.

ಇದಲ್ಲದೆ, ಅಸ್ತಿತ್ವದಲ್ಲಿರುವ ಹೆಚ್ಚಿನ ನಿಯೋಜನೆಗಳು ಹೆಚ್ಚಿನ ಸಾಮರ್ಥ್ಯ (2 ಅಶ್ವಶಕ್ತಿ (hp) ಮತ್ತು ಹೆಚ್ಚಿನದು). ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳು ಒಂದು ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರುವ ಕೇವಲ 32 ಪ್ರತಿಶತ ರೈತರ ನೀರಾವರಿ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತವೆ. ಸಾಮಾನ್ಯವಾಗಿ 1 ಎಚ್‌ಪಿಗಿಂತ ಕಡಿಮೆ ಗಾತ್ರದ ಮೈಕ್ರೋ ಸೋಲಾರ್ ಪಂಪ್‌ಗಳು ಒಂದು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ 68 ಪ್ರತಿಶತ ಅತಿಸಣ್ಣ ರೈತರ ನೀರಾವರಿ ಅಗತ್ಯಗಳನ್ನು ಪೂರೈಸಬಲ್ಲವು. ಆದರೆ ಈಗಿರುವ ಯೋಜನೆಗಳು ಮೈಕ್ರೋ ಸೋಲಾರ್‌ ಪಂಪ್‌ಗಳ ಕಡೆ ಗಮನನೀಡಿಲ್ಲ.

ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್‌ ವಾಟರ್ (CEEW) ವರದಿಯ ಪ್ರಕಾರ ನೀರಾವರಿ ಬೇಡಿಕೆಯನ್ನು ಪೂರೈಸುವ ಮೈಕ್ರೋ ಸೋಲಾರ್ ಪಂಪ್‌ಗಳು ರೂ. 48,000 ಕೋಟಿ ಮಾರುಕಟ್ಟೆ ಅವಕಾಶವನ್ನು ಹೊಂದಿವೆ. ಪಶುಸಂಗೋಪನಾ ವಲಯದಲ್ಲಿ ರೂ. 10,000 ಕೋಟಿಯ ಹೆಚ್ಚುವರಿ ಅವಕಾಶವಿದೆ. ಜಾನುವಾರುಗಳಿಗೆ ನೀರು ಒದಗಿಸಲು ಈ ಪಂಪ್‌ಗಳು ನೆರವು ನೀಡುತ್ತದೆ.

ಸಣ್ಣ ರೈತರು ಮೈಕ್ರೋ ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು

9 ಮಿಲಿಯನ್‌ಗಿಂತಲೂ ಹೆಚ್ಚು ಮೈಕ್ರೋ ಸೋಲಾರ್ ಪಂಪ್‌ಗಳನ್ನು ಭಾರತದಾದ್ಯಂತ ನಿಯೋಜಿಸಬಹುದು. ಇದು ಅನೇಕ ಅತಿಸಣ್ಣ ರೈತರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಅರಿತುಕೊಂಡು ಐದು ಮುಖ್ಯ ಕ್ಷೇತ್ರಗಳ ಮೇಲೆ ಗಮನಕೇಂದ್ರೀಕರಿಸಲಾಗಿದೆ.

ಮೊದಲಿಗೆ ಆಸಕ್ತಿ ಹುಟ್ಟಿಸಲು ಯೋಜನೆಗಳಲ್ಲಿ ಮೈಕ್ರೋ ಸೋಲಾರ್ಪಂಪ್ಗಳನ್ನು ಒಳಗೊಳ್ಳುವುದು ಸಬ್ಸಿಡಿ ಯೋಜನೆಗಳಿಂದ ಮೈಕ್ರೋ ಸೋಲಾರ್‌ ಪಂಪ್‌ಗಳನ್ನು ಹೊರಗಿಡಲಾಗಿದೆ. ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳಿಗೆ ಹೆಚ್ಚಿನ ಸಬ್ಬಿಡಿ (60-90 ಪ್ರತಿಶತ ಸಬ್ಸಿಡಿ) ನೀಡಲಾಗುತ್ತಿದೆ. ಇದರಿಂದ ಇವುಗಳ ನಡುವೆ ತಾರತಮ್ಯ ಹೆಚ್ಚುತ್ತದೆ. ಅತಿ ಸಣ್ಣ ರೈತರು ಸೇರಿದಂತೆ ಬಹುತೇಕ ರೈತರು ತಮಗೆ ಅಗತ್ಯವಿಲ್ಲದಿದ್ದರೂ ಹೆಚ್ಚಿನ ಸಾಮರ್ಥ್ಯದ ಪಂಪ್ ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಆದ್ದರಿಂದ, ರಾಷ್ಟ್ರೀಯ ಮತ್ತು ರಾಜ್ಯ ಎರಡರಲ್ಲೂ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಮೈಕ್ರೋ ಸೋಲಾರ್ ಪಂಪ್‌ಗಳನ್ನು ಒಳಗೊಳ್ಳಬೇಕು. ರೈತರ ಅಗತ್ಯಗಳಿಗೆ ಅನುಗುಣವಾಗಿ ಪಂಪ್‌ಗಳನ್ನು ಶಿಫಾರಸು ಮಾಡಬೇಕು.

ಎರಡನೆಯದು, ಹೊಸತನ್ನು ಉತ್ತೇಜಿಸಲು ಪಂಪ್ಕಾರ್ಯಕ್ಷಮತೆಯ ಮಾನದಂಡಗಳನ್ನು ಪರಿಷ್ಕರಿಸಿ  ಪ್ರಸ್ತುತ, ಮೈಕ್ರೋ ಪಂಪ್‌ಗಳ ವರ್ಗಕ್ಕೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) 250 W ಮತ್ತು 500 W ಪಂಪ್‌ಗಳಿಗೆ ಮಾತ್ರ ಕಾರ್ಯಕ್ಷಮತೆಯ ಮಾನದಂಡಗಳನ್ನು ನೀಡಿದೆ. ನಿರ್ದಿಷ್ಟ ಗಾತ್ರ-ಆಧಾರಿತ ಕಾರ್ಯಕ್ಷಮತೆ ಮಾನದಂಡಗಳ ಬದಲಿಗೆ, MNRE ಪ್ರತಿ ವ್ಯಾಟ್ ಆಧಾರದ ಮೇಲೆ ಕಾರ್ಯಕ್ಷಮತೆಯ ಮಾನದಂಡಗಳನ್ನು ಪರಿಗಣಿಸಬೇಕು.  ಇದು ಸರ್ಕಾರದ ಬೆಂಬಲವನ್ನು ಪಡೆಯಬಹುದಾದ ವಿವಿಧ ಸಾಮರ್ಥ್ಯಗಳ ಪಂಪ್‌ಗಳನ್ನು ವಿನ್ಯಾಸಗೊಳಿಸಲು ನವೋದ್ಯಮಿಗಳಿಗೆ ಅವಕಾಶ ನೀಡುತ್ತದೆ.

ಮೂರನೆಯದಾಗಿ, ಇನ್ಪುಟ್ ಆಧಾರಿತ ಟೆಂಡರ್ಗೆ ಬದಲಿಗೆ ಔಟ್ಪುಟ್ ಟೆಂಡರಿಂಗನ್ನು ಆಧರಿಸುವುದು. ಸೋಲಾರ್ ಪಂಪ್‌ಗಳಿಗೆ ಚಾಲ್ತಿಯಲ್ಲಿರುವ ಟೆಂಡರ್ ಮಾಡುವ ವಿಧಾನಗಳು ಅವುಗಳ ಔಟ್‌ಪುಟ್‌ಗಿಂತ ಪಂಪ್‌ಗಳ ಇನ್‌ಪುಟ್ (hp) ಸಾಮರ್ಥ್ಯವನ್ನು ಆಧರಿಸಿವೆ. ಉದಾಹರಣೆಗೆ, ಮೈಕ್ರೋ ಸೋಲಾರ್ ಪಂಪ್‌ಗಳ ಟೆಂಡರ್ ಅನ್ನು 500W ಪಂಪ್‌ಗಳಿಗೆ ಸೀಮಿತಗೊಳಿಸಿದರೆ, ಕಡಿಮೆ ಸಾಮರ್ಥ್ಯದ ಆದರೆ 500W ಗೆ ಸಮಾನವಾದ ಔಟ್‌ಪುಟ್ ಹೊಂದಿರುವ ಹೆಚ್ಚು ಪರಿಣಾಮಕಾರಿ ಪಂಪ್ ಅನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ರಾಷ್ಟ್ರೀಯ ಮತ್ತು ರಾಜ್ಯ ಏಜೆನ್ಸಿಗಳು ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ಬೆಂಬಲಿಸಲು ನೀರಿನ ಔಟ್‌ಪುಟ್‌ ಆಧಾರಿತ ಟೆಂಡರ್ ವಿಧಾನವನ್ನು ಅಳವಡಿಸಿಕೊಳ್ಳಬೇಕು.

ನಾಲ್ಕನೆಯದಾಗಿ, ಪಾಲುದಾರರ ವಿಶ್ವಾಸವನ್ನು ಹೆಚ್ಚಿಸಲು ಬೆಂಬಲ ನೀಡಿ. ಮೈಕ್ರೋ ಸೋಲಾರ್ ಪಂಪ್‌ಗಳ ವಿರಳ ಬಳಕೆಗೆ ಪ್ರಮುಖ ಕಾರಣ ಬಳಕೆದಾರರು, ಹಣಕಾಸುದಾರರು ಮತ್ತು ರಾಜ್ಯ ಅಧಿಕಾರಿಗಳಲ್ಲಿ ಅದರ ಸಾಮರ್ಥ್ಯದ ಬಗೆಗಿನ ಅರಿವಿನ ಕೊರತೆ. ದೇಶದಲ್ಲಿ ಪ್ರತಿ ಜಿಲ್ಲೆಯಲ್ಲಿ ಆದ್ಯತೆಯ ಮೇರೆಗೆ 1,000 ಮೈಕ್ರೋ ಪಂಪ್‌ಗಳನ್ನು ಬೆಂಬಲಿಸಲು ಕೇಂದ್ರ ಸಚಿವಾಲಯವು ರಾಜ್ಯ ನೋಡಲ್ ಏಜೆನ್ಸಿಗಳು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ಕೆಲಸ ಮಾಡಬೇಕು.

ಕಡೆಯದಾಗಿ, ಬಳಕೆದಾರರಿಗೆ ಹಣಕಾಸಿನ ನೆರವನ್ನು ಉತ್ತಮಗೊಳಿಸಿ. PM KUSUM ಯೋಜನೆಯು ಇಲ್ಲಿಯವರೆಗೆ ಭಾರತದಲ್ಲಿ ಸೌರ ಪಂಪ್‌ಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಿದೆ. ಸುಮಾರು 100 ಮಿಲಿಯನ್ ಸಣ್ಣ ಹಿಡುವಳಿಗಳಿವೆ. ಸಬ್ಸಿಡಿಗಳ ಮೂಲಕ ಎಲ್ಲರಿಗೂ ಸೌರ ಪಂಪ್‌ಗಳನ್ನು ಒದಗಿಸುವುದು ಕಷ್ಟ. ಈ ಪಂಪ್‌ಗಳ ಬಹುಪಾಲು ವೆಚ್ಚವು ರೂ. 30,000 – 60,000 ನಡುವೆ ಇರುತ್ತದೆ. ಈ ಪಂಪ್‌ಗಳ ಅಳವಡಿಕೆಗೆ ಹಣಕಾಸಿನ ಲಭ್ಯತೆಯು ನಿರ್ಣಾಯಕವಾಗಿದೆ. ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD) ನಂತಹ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಮೂಲಕ, MNRE ಮೈಕ್ರೋ ಸೋಲಾರ್ ಪಂಪ್‌ಗಳಿಗೆ ಹಣಕಾಸು ಒದಗಿಸಲು ಹಣಕಾಸು ಸಂಸ್ಥೆಗಳಿಗೆ ನೆರವನ್ನು ನೀಡಬೇಕು.

ಇದಲ್ಲದೆ, NABARD ನಂತಹ ಸಂಸ್ಥೆಗಳು ಪ್ರಾದೇಶಿಕ ಬ್ಯಾಂಕುಗಳು ಮೈಕ್ರೋ ಸೋಲಾರ್ ಪಂಪ್‌ಗಳಿಗೆ ನೆರವು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಆ ಮೂಲಕ ತಂತ್ರಜ್ಞಾನದ ಬಗೆಗಿನ ವಿಶ್ವಾಸವನ್ನು ಸುಧಾರಿಸುತ್ತದೆ.

ಕಡೆಯದಾಗಿ, ಸಣ್ಣ ರೈತರಿಂದ ಮೈಕ್ರೋ ಸೋಲಾರ್ ಪಂಪ್‌ಗಳ ಅಳವಡಿಕೆಯಿಂದ ಹಲವು ಪ್ರಯೋಜನಗಳನ್ನು ಹೊಂದಬಹುದು: ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು, ಹಾನಿಕಾರಕ ವಸ್ತುಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಬೆಳೆ ಚಕ್ರಗಳನ್ನು ಹೆಚ್ಚಿಸುವುದು, ರೈತರ ನಿವ್ವಳ ಆದಾಯವನ್ನು ಹೆಚ್ಚಿಸುವುದು ಮತ್ತು ಆದ್ದರಿಂದ ಅತ್ಯಂತ ದುರ್ಬಲ ರೈತರ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು.

ಸಬ್ಸಿಡಿಗಳನ್ನು ನೀಡದಿರುವುದು, ಕಾರ್ಯಕ್ಷಮತೆಯ ಮಾನದಂಡಗಳು ಸರಿಯಿಲ್ಲದಿರುವುದು ಮತ್ತು ಅಸಮರ್ಥ ಟೆಂಡರ್ ಪ್ರಕ್ರಿಯೆಗಳಂತಹ ಸವಾಲುಗಳು ಮೈಕ್ರೋ ಸೋಲಾರ್ ಪಂಪ್‌ಗಳ ದೊಡ್ಡ ಪ್ರಮಾಣದ ಅಳವಡಿಕೆಗೆ ಅಡ್ಡಿಯಾಗುತ್ತವೆ. ಆದ್ದರಿಂದ, ಮೈಕ್ರೋ ಸೋಲಾರ್ ಪಂಪ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಲು ಹಣಕಾಸು, ಉದ್ದೇಶಿತ ನೀತಿ, ಜಾಗೃತಿ ಮೂಡಿಸುವುದು ಮತ್ತು ತಾಂತ್ರಿಕ ಹೊಸತನ್ನು ಒಪ್ಪಿಕೊಳ್ಳುವುದನ್ನು ಬೆಂಬಲಿಸಲು ಸಂಘಟಿತ ಪ್ರಯತ್ನದ ಅಗತ್ಯವಿದೆ. ಇದು ಭಾರತವು 2024 ರ ವೇಳೆಗೆ ಡೀಸೆಲ್ ಮುಕ್ತ ತೋಟಗಳನ್ನು ಹೊಂದಬೇಕೆಂಬ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಹಾಗೂ 2070 ರ ವೇಳೆಗೆ ಸಂಪೂರ್ಣವಾಗಿ ಇದನ್ನು ಸಾಧಿಸಲು ಕೊಡುಗೆ ನೀಡುತ್ತದೆ.

ಟಿಪ್ಪಣಿಗಳು

h t t p s://www.koanadvisory.com/wp-content/ uploads/2019/06/Micro-SWP-Koan-Advisory-Final-Report.pdf

 https://www.reuters.com/business/energy/indiahopes-replace-diesel-with-green-energy-its-farmsby-2024-2022-02-11/

 https://economictimes.indiatimes.com/industry/energy/oil-gas/indias-oil-import-bill-doubles-to-usd-119-bn-infy22/articleshow/91049349.cms?from=mdr

 https://www.deccanherald.com/national/centre-targetsto-end-diesel-use-in-farms-by-2024-1080509.html

 h t t p s : / / m n r e . g o v . i n / i m g / d o c u m e n t s /uploads/8065c8f7b9614c5ab2e8a7e30dfc29d5.pdf

 https://loksabhaph.nic.in/Questions/QResult15.aspx?qref=41907&lsno=17

 http://agcensus.dacnet.nic.in/DatabaseHome.aspx

 https://pmkusum.mnre.gov.in/landing.html

 ಶೇಖ್ ವಾಸೆ ಖಾಲಿದ್


Shaikh Wase Khalid

Programme Associate

Council on Energy, Environment and Water

ISID Campus, 4, Vasant Kunj Institutional Area

New Delhi – 110070, India

Email id: wase.khalid@ceew.in

ಗಮನಿಸಿ: ಲೇಖನವು ಮೂಲತಃ ಇಲ್ಲಿ ಪ್ರಕಟಗೊಂಡಿದೆ in https://www.ceew.in/blogs/how-can-india-scale-solar-pumpirrigation- and-make agriculture-sector-diesel-freeby- 2024

 ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೪ ; ಡಿಸಂಬರ್ ೨೦‌೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...